ಸದಸ್ಯ:1820182rolisha/ನನ್ನ ಪ್ರಯೋಗಪುಟ
ರೊಲಿಶ | |
---|---|
ಜನನ | ಡಿಸೆಂಬರ್ 8,1999 |
ವಿದ್ಯಾಭ್ಯಾಸ | ಬಿ.ಬಿ.ಎ, ಕ್ರೈಸ್ಟ್ ಯೂನಿವರ್ಸಿಟಿ |
ವೃತ್ತಿ | ವಿದ್ಯಾರ್ಥಿ |
ಪೋಷಕ(ರು) | ತಂದೆ_ರಾಜು, ತಾಯಿ_ರೊಸ್ಅಮ್ಮ |
ಪರಿಚಯ
[ಬದಲಾಯಿಸಿ]ನನ್ನ ಹೆಸರು ರೊಲಿಶ. ನಾನು ಹುಟ್ಟಿದ ನಾಡು ಬೆಂಗಳೂರು. ಡಿಸೆಂಬರ್ 8 ರಂದು ನಾನ್ನು ಜೆನಿಸಿದೆ. ನನ್ನ ತಂದೆ ರಾಜು, ತಾಯಿ ರೊಸ್ಅಮ್ಮ ಹಾಗು ಅಣ್ಣ ರೋಷನ್.ನನ್ನ ತಂದೆ ಎಲ್ ಅಂಡ್ ಟಿ ಕಂಪನಿಯಲ್ಲಿ ತಂತ್ರಜ್ಞಾನಾಗಿ ಕೆಲಸ ಮಾಡುತ್ತಾರೆ ಹಾಗೂ ನನ್ನ ತಾಯಿ ಯಲಹಂಕ ಸರ್ಕಾರಿ ಆಸ್ಪತ್ರೆಯ ನರ್ಸ್. ನನ್ನ ಅಣ್ಣ ಇಂಜಿನಿಯರಿಂಗ್ ಓದುತ್ತಿದ್ದಾನೆ, ಅವನು ನನಗಿಂತ ಆರು ವರ್ಷ ದೊಡ್ಡವರು.
ಬಾಲ್ಯ
[ಬದಲಾಯಿಸಿ]ನನ್ನ ಪೀಳಿಗೆ ತುಂಬಾ ವಿಶೇಷವಾದದ್ದು ಏಕೆಂದರೆ ನಮಗೆ ತಪ್ಪಿಹೋದ ವಿಷಯಗಳಿಗಿಂತ, ನಮಗೆ ಸಿಗುತ್ತಿರುವ ಹಾಗೂ ಸಿಗಲಿರುವ ವಿಷಯಗಳು ತುಂಬಾ ಹೆಚ್ಚಾಗಿದೆ. ಏಕೆಂದರೆ ನಮ್ಮ ಪೀಳಿಗೆ ಬಹಳ ಬದಲಾವಣೆಗಳನ್ನು ಕಂಡಿದೆ ಹಾಗೂ ಕಾಣಲಿದೆ. ಉದಾಹರಣೆಗೆ ನಾವು ಟಿವಿ ನೋಡುತ್ತಾ ಬೆಳೆದೆವು, ಈ ಅವಕಾಶ ನಮ್ಮ ಹಿಂದಿನ ಪೀಳಿಗೆಗೆ ಅಷ್ಟು ಸುಲಭವಾಗಿ ಸಿಗಲು ಸಾಧ್ಯವಾಗುತ್ತಿರಲಿಲ್ಲ. ಹೀಗಿರುವಲ್ಲಿ ನಾಗರಿಕತೆಯ ಅಭಿವೃದ್ಧಿಯ ಜೊತೆಗೆ ಜನರ ಬದುಕಿನ ಮೇಲೆಯೂ ಪ್ರಭಾವ ಬೀರತೊಡಗಿತು. ನನ್ನ ತಂದೆ ತಾಯಿ ಇಬ್ಬರು ಕೆಲಸಕ್ಕೆ ಹೋಗುತ್ತಿದ್ದರಿಂದ, ನನ್ನ ಬಾಲ್ಯವನ್ನು ನಾನು ಟಿವಿ ನೋಡುತ್ತಾ ಹಾಗೂ ಡೇ ಕೇರ್ ನಲ್ಲಿ ಕಳೆದೆನು. ಕೆಲಸದ ಒತ್ತಡದಿಂದ ನನ್ನ ತಾಯಿಗೆ ನನ್ನೊಂದಿಗ, ಇದು ನನ್ನ ತುಂಟಾಟಗಳನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ.
ವಿದ್ಯಾಭ್ಯಾಸ
[ಬದಲಾಯಿಸಿ]ನನ್ನ ಶಾಲಾ ವಿದ್ಯಾಭ್ಯಾಸವನ್ನು ಕ್ರೈಸ್ಟ್ ಸ್ಕೂಲ್ ಹಾಗೂ ಶೇಷಾದ್ರಿಪುರಂ ಸ್ಕೂಲಿನಲ್ಲಿ ಓದಿದ್ದೇನೆ,ಕಾಲೇಜು ವಿದ್ಯಾಭ್ಯಾಸವನ್ನು ಕ್ಲೂನಿ ಕಾನ್ವೆಂಟ್ ನಲ್ಲಿ ಮಾಡಿದೆ. ನಾನು ಇವಾಗ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿ.ಬಿ.ಎ ಕೋರ್ಸ್ ಓದುತ್ತಿದ್ದೇನೆ.
ಹವ್ಯಾಸಗಳು
[ಬದಲಾಯಿಸಿ]ನನಗೆ ಇಷ್ಟವಾದ ಹವ್ಯಾಸಗಳು ಚಿತ್ರ ಬರೆಯುವುದು, ಪುಸ್ತಕ ಓದುವುದು, ಹಾಡು ಕೇಳುವುದು ಹಾಗೂ ಗಿಡಗಳನ್ನು ಬೆಳೆಸುವುದು. ನನಗೆ ಕಲೆ ಮತ್ತು ಸಂಗೀತದಲ್ಲಿ ತುಂಬಾ ಆಸಕ್ತಿ ಇದೆ. ನನಗೆ ಗಿಡಗಳಲ್ಲಿ ಅತ್ಯಂತ ಇಷ್ಟವಾದ ಗಿಡ ಕಳ್ಳಿ ಅಥವಾ ಕ್ಯಾಕ್ಟಸ್, ನಾನು ಇದನ್ನು ನನ್ನ ಮನೆಯ ಕೊಠಡಿಯಲ್ಲಿ ಬೆಳೆಯುತ್ತೇನೆ. ನನಗೆ ಕ್ಯಾಕ್ಟಸ್ ತುಂಬಾ ಇಷ್ಟವಾಗಳು ಕಾರಣ ಅದರ ದೀರ್ಘಾವಧಿ ಇತರೆ ಗಿಡಗಳಿಂದ ಹೆಚ್ಚು ಹಾಗ ವಾಯುವನ್ನು ಶುದ್ಧ ಪಡಿಸುವ ಗುಣಗಳು ಈ ಗಿಡಗಳಿಗೆ ಇದೆ. ನಾನು ನನ್ನ ಕ್ಯಾಕ್ಟಸ್ ಗಿಡವನ್ನ ನನ್ನ ಸ್ನೇಹಿತನಾಗಿ ಕಾಣುತ್ತೇನೆ, ಹಾಗೂ ನನ್ನ ಕಷ್ಟ ಸುಖಗಳನ್ನು ಅದರೊಂದಿಗೆ ಹಂಚಿಕೊಳ್ಳುತ್ತೇನೆ. ನನಗೆ ತುಂಬಾ ಇಷ್ಟವಾದ ಗಾಯಕಿಯರು ಶ್ರೇಯಾ ಘೋಷಾಲ್ ಮತ್ತು ಅರಿಯಾನ ಗ್ರಾಂಡ್. ನನಗೆ ಫ್ಯಾಂಟಸಿ, ಸಾಹಿತ್ಯಯ ಹಾಗೂ ವಿಜ್ಞಾನದ ಪುಸ್ತಕಗಳು ಓದಲು ಇಷ್ಟಪಡುತ್ತೇನೆ. ನಿನಗೆ ಪುಸ್ತಕ ಓದುವುದು ಇಷ್ಟವಾಗಲು ಕಾರಣ ಅದನ್ನು ಓದಿ ಮುಗಿಸಿದ ಬಳಿಕ ಅದರ ಕತೆಯನ್ನು ನನ್ನ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತೇನೆ, ಅವರು ಇದನ್ನು ತುಂಬಾ ಕಾತುರಿಯಿಂದ ಕೇಳುತ್ತಾರೆ, ಇದು ನನಗೆ ಇನ್ನು ಅಧಿಕ ಪುಸ್ತಕಗಳನ್ನು ಓದಲು ಉತ್ಸಾಹ ತುಂಬುತ್ತದೆ.
ಗುರಿಗಳು
[ಬದಲಾಯಿಸಿ]ನಾನು ನನ್ನ ಬಿ.ಬಿ.ಎ ವಿದ್ಯಾಭ್ಯಾಸ ಮಾಡಿದ ನಂತರ ಜಪಾನಿಗೆ ಹೋಗಬೇಕೆಂದಿದ್ದೇನೆ. ಇದೇ ನನ್ನ ದೊಡ್ಡ ಕನಸು. ನನಗೆ ಜಪಾನಿಗೆ ಸಂಬಂಧಿಸಿದ ಎಲ್ಲಾ ವಿಷಯಗಳು ನನ್ನನ್ನು ತುಂಬ ಆಶ್ಚರ್ಯಗೊಳಿಸುತ್ತದೆ. ಅಲ್ಲಿ ಸಾಮಾನ್ಯವಾಗಿ ಕಾಣಲು ಸಿಗುವ ಚೆರ್ರಿ ಬ್ಲಾಸಮ್, ಅಲ್ಲಿನ ನಾಗರಿಕರು ಪರಸ್ಪರರ ಕಡೆಗೆ ಸಹಿಷ್ಣುರಾಗಿರುವುದು, ಅವರು ಸಾಮಾಜಿಕವಾಗಿ ವರ್ತಿಸು ವಿಧ, ಅವರು ಅವರ ಕೆಲಸಕ್ಕೆ ಕೊಡುವ ಆಸಕ್ತಿ, ಅಲ್ಲಿನ ದೇವಾಲಯಗಳ ವಾಸ್ತುಶಿಲ್ಪ, ಸಂಸ್ಕೃತಿ, ಅವರ ಭಾಷೆ, ಉಡುಗೆ-ತೊಡುಗೆ ಎಲ್ಲವೂ ವಿಭಿನ್ನ ಹಾಗೂ ಕುತೂಹಲಕಾರಿ. ನನ್ನು ಜಪಾನೀಸ್ ಕಲಿತು, ಜಪಾನ್ ದೇಶಕ್ಕೆ ಹೋಗಿ ಅವರ ಸಂಸ್ಕೃತಿಯನ್ನು ಅರಿತುಕೊಳ್ಳುವುದೇ ನನ್ನ ಮಹತ್ವಾಕಾಂಕ್ಷೆ.ಈ ಗುರಿಯನ್ನು ಸಾಧಿಸಿದ ನಂತರ, ನಾನು ನನ್ನ ದೇಶಕ್ಕೆ ಸೇವೆ ಸಲ್ಲಿಸಲು ಬಯಸುತ್ತೇನೆ.ಕರ್ನಾಟಕದಲ್ಲಿ ಒಂದು ಲಾಭೋದ್ದೇಶವಿಲ್ಲದ ಸಂಸ್ಥೆಯನ್ನು ಪ್ರಾರಂಭಿಸಿ, ಬಡ ಮಕ್ಕಳಿಗೆ ಆರೋಗ್ಯಕೆ ವೈದ್ಯಕೀಯ ಸೌಲಭ್ಯ ಹಾಗೂ ಅವರ ಅಭಿವೃದ್ಧಿಗೆ ವಿದ್ಯಾಭ್ಯಾಸದ ವ್ಯವಸ್ಥೆಯನ್ನು ಮಾಡಲು ಬಯಸುತೆನೆ ಹಾಗೆಯೆ ಮನುಷ್ಯರ ಸಾಗಾಣಿಕೆ( ಹ್ಯೂಮನ್ ಟ್ರಾಫಿಕಿಂಗ್) ಸಂಪೂರ್ಣವಾಗಿ ತಡೆಗಟ್ಟಿ , ನಮ್ಮ ದೇಶದ ಎಲ್ಲಾ ಜನರು ಸುರಕ್ಷಿತ ರಾಗಿ ಬದುಕುವ ಹಾಗೆ ಮಾಡಬೇಕು ಇಂದು ನನ್ನ ಆಕಾಂಕ್ಷೆ.