ಸದಸ್ಯ:ಸಹೃದಯ ಎಂ ಸಿ/ನನ್ನ ಪ್ರಯೋಗಪುಟ೧
ಮಂಗೇರಿರ ಚಿನ್ನಪ್ಪ ಮುತ್ತಣ್ಣ
[ಬದಲಾಯಿಸಿ]ಮೇಜರ್ ಮಂಗೇರಿರ ಚಿನ್ನಪ್ಪ ಮುತ್ತಣ್ಣ ರವರು ಭಾರತದ ಯುದ್ಧ ವೀರರಾಗಿ ಮೆರೆದವರು.
ಆರಂಭಿಕ ಜೀವನ
[ಬದಲಾಯಿಸಿ]ಮಂಗೇರಿರ ಚಿನ್ನಪ್ಪ ಮುತ್ತಣ್ಣ ಅವರು ಕೊಡಗು ಜಿಲ್ಲೆಯ ಭಾಗಮಂಡಲ ಸಮೀಪದ ಚೆಟ್ಟಿಮನಿ ಗ್ರಾಮದಲ್ಲಿ ೨೧ ಏಪ್ರಿಲ್ ೧೯೬೪ ರಂದು ಜನಿಸಿದರು.
ಸೇನಾ ಸೇವೆ
[ಬದಲಾಯಿಸಿ]ಇವರು ಅಕ್ಟೋಬರ್ ೧೯೮೪ ರಲ್ಲಿ OTA, ಚೆನೈಗೆ ಸೇರಿದರು ಮತ್ತು ೨೪ ಅಕ್ಟೋಬರ್ ೧೯೮೫ ರಂದು ೫ನೇ ಬೆಟಾಲಿಯನ್ ಸಿಖ್ ಲಘುಪದಾತಿ ದಳಕ್ಕೆ ನಿಯೋಜಿಸಲ್ಪಟ್ಟರು. ಅವರು ೫ ಸಿಖ್ ಲಘು ಪದಾತಿ - Hq 1 ಸೆಕ್ಟರ್ ರಾಷ್ಟ್ರೀಯ ರೈಫಲ್ಸ್ಗೆ ಸೇವೆ ಸಲ್ಲಿಸಿದರು. ಅವರು ೧೨ ಜನವರಿ ೨೦೦೦ ರಂದು ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ನಲ್ಲಿ ಲಷ್ಕರ್-ಎ-ತೊಯ್ಬಾದ (ಎಲ್ಇಟಿ) ಭಯೋತ್ಪಾದಕರೊಂದಿಗೆ ಹೋರಾಡುತ್ತಿರುವಾಗ ೩೬ ವರ್ಷ ವಯಸ್ಸಿನಲ್ಲಿ ನಿಧನರಾದರು.
ಮರಣೋತ್ತರ ಗೌರವ
[ಬದಲಾಯಿಸಿ]ಅವರಿಗೆ ಮರಣೋತ್ತರವಾಗಿ ಶೌರ್ಯ ಚಕ್ರದೊಂದಿಗೆ ಗೌರವಿಸಲಾಯಿತು. ಅವರ ಸ್ಮರಣಾರ್ಥ ಮಡಿಕೇರಿ ನಗರ ಪಾಲಿಕೆ (CMC) ಮುಂಭಾಗದಲ್ಲಿ ಹುತಾತ್ಮರ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು ಮತ್ತು ಟೌನ್ ಹಾಲ್ ಮುಂಭಾಗದ ಪುರಸಭೆಯ ವೃತ್ತಕ್ಕೆ ಅವರ ಹೆಸರನನು ೯ ಡಿಸೆಂಬರ್ ೨೦೧೦ ರಂದು ಗುರುವಾರ ನಾಮಕರಣ ಮಾಡಲಾಯಿತು. ಗ್ರಾನೈಟ್ ಕಲ್ಲಿನಿಂದ ಮಾಡಿದ ಪ್ರತಿಮೆಯನ್ನು ರೂ.೮ ಲಕ್ಷ ವೆಚ್ಚದಲ್ಲಿ ಸೋಮವಾರಪೇಟೆಯ ಬೀಟಿಕಟ್ಟೆಯ ಶಿಲ್ಪಿ ಮಂಜುನಾಥ ಆಚಾರ್ಯ ಅವರಿಂದ ಕೆತ್ತನೆ ಮಾಡಲಾಯಿತು. ಆನಂತರದಲ್ಲಿ, ಯೋಧನನ್ನು ನೇಮಿಸಿದ ಅನಂತನಾಗ್ ಜಿಲ್ಲಾ ಕೇಂದ್ರದ ೧ ಸೆಕ್ಟರ್ ಆರ್ಆರ್ ಅಡಿಯಲ್ಲಿ ನಿರ್ವಹಿಸಲಾಗುತ್ತಿದ್ದ ಪ್ರೌಢಶಾಲೆಯನ್ನು ಮುತ್ತಣ್ಣ ಆರ್ಮಿ ಸದ್ಭಾವನಾ ಶಾಲೆ ಎಂದು ಹೆಸರಿಸಲಾಯಿತು.