ಸದಸ್ಯ:ಅನುಷ.ಆನಂದ/sandbox

ವಿಕಿಪೀಡಿಯ ಇಂದ
Jump to navigation Jump to search

ಸ್ವ ಪರಿಚಯ[ಬದಲಾಯಿಸಿ]

ನನ್ನ ಹೆಸರು ಅನುಷ.ಎ,ನಾನು ಹುಟ್ಟಿದ್ದು ಎಪ್ರಿಲ್೧೦,೧೯೯೭ರಲ್ಲಿ ಮಂಗಳೂರಿನಲ್ಲಿ.ನಾನು ಕಳೆದ ೧೮ ವರ್ಷಗಳಿಂದ ಪಣಂಬೂರಿನಲ್ಲಿ ವಾಸಿಸುತ್ತಿದ್ಡೇನೆ.ನನ್ನ ತಂದೆ ಆನಂದ.ಎ ಮತ್ತು ತಾಯಿ ಸುಜಾತ ಇವರು ಕಾಸರಗೋಡಿನಲ್ಲಿ ತಮ್ಮ ಬಾಲ್ಯವನ್ನು ಕಳೆದಿರುವರು.ನನ್ನ ತಂದೆ ಎನ್.ಎಮ್.ಪಿ.ಟಿಯ ನೌಕರರಾಗಿದ್ದಾರೆ.೩೫ವರ್ಷಗಳಿಂದ ಕೆಲಸ ಮಾಡುತ್ತಿರುವರು.ನನಗೆ ತಂದೆ ಹಾಗು ತಾಯಿ ಮೇಲೆ ಬಹಳ ಪ್ರೀತಿ.ಅವರು ಯಾವತ್ತು ನಾನು ಕೇಳಿದ್ದನ್ನು ನಿಷೇಧಿಸಿದವರಲ್ಲ,ತಾಯಿ ನನ್ನ ಗೆಳತಿಯಂತೆ ಅವಳಲ್ಲಿ ಯಾವುದನ್ನು ಬಚ್ಚಿಡುವುದಿಲ್ಲ. ನನ್ನ ತಂದೆಗೆ ಕ್ರೀಡೆಯೆಂದರೆ ತುಂಬ ಇಷ್ಟ ಮೊದಲು ಹಾಕಿ,ಫುಟ್ಬಾಲ್,ಕ್ರಿಕೇಟ್, ಕಬಡ್ಡಿ ಆಡುತ್ತಿದ್ದರು,ಹಾಗು ಎಲ್ಲಾ ಕ್ರಿಕೆಟ್ ಮ್ಯಾಚನ್ನು ತಪ್ಪದೆ ವೀಕ್ಷಿಸುತ್ತಾರೆ. ನನಗೆ ಒಬ್ಬ ಅಣ್ಣ ಇದ್ದಾರೆ, ಮನೋಜ್ ಎಂದು. ಅವರು ಬಹಳ ಜಾಣ.ಬಿ.ಸಿ.ಎ ಮುಗಿಸಿದ್ದಾರೆ.ಅವರಿಗೆ ಗಣಕಯಂತ್ರದ ಬಗ್ಗೆ ಬಹಳಷ್ಟು ಮಾಹಿತಿ ತಿಳಿದಿದೆ,ಇಂಗ್ಲಿಷ್ ಲೇಖನಗಳನ್ನು ಬರೆಯುತ್ತಾರೆ. ನನ್ನ ಊರಾದ ಪಣಂಬೂರಿನ ಬಗ್ಗೆ ತಿಳಿಸುವೆನು, ಮೊದಲಾಗಿ ಪಣಂಬೂರು ಎಂಬ ಹೆಸರು ಹೇಗೆ ಬಂತು?ನಮ್ಮ ಕಾರವಳಿಯ ಭಾಷೆಯಾದ ತುಳುವಿನಲ್ಲಿ ಪಣ ಎಂದರೆ-ಹಣ, ಊರು- ಹಳ್ಳಿ.ಇಲ್ಲಿ ನಂದನೇಶ್ವರ ದೇವಸ್ಥಾನವಿದೆ, ವಿಷ್ಣು ಮೂರ್ತಿ ದೇವಸ್ಥಾನ,ಜನರಿಗೆ ಬಹಳ ಆಕರ್ಷಕ ಕೇಂದ್ರವಾದದ್ದು "ಪಣಂಬೂರು ಬೀಚ್", ಇದರ ಬಳಿಯೇ ಎಮ್.ಸಿ.ಎಫ಼್ ಕಾರ್ಖಾನೆ ಇದೆ. ನವ ಮಂಗಳೂರು ಬಂದರು ಭಾರತದಲ್ಲಿ ಒಂಬತ್ತನೇ ಅತ್ಯಂತ ದೊಡ್ಡ ಬಂದರು ಆಗಿದೆ.ಇದನ್ನು ಉದ್ಘಾಟಿಸಿದವರು ನಮ್ಮ ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರು ಸುಮಾರು ೧೯೭೪ರಲ್ಲಿ.ಲೋಹ,ಕಾಫಿ,ಗೇರುಬೀಜ,ಎಲ್ ಪಿ ಜಿ,ಟಿಂಬರ್ ಲಾಗ್ಸ್,ಕಾರ್ಗೋ,ಅಮೋನಿಯ,ರಸ ಗೊಬ್ಬರ,ಪೆಟ್ರೊಲಿಯಮ್ ಉತ್ಪನ್ನಗಳು ಇಲ್ಲಿಂದ ರಫ್ತುಗೊಳ್ಳುತ್ತಿವೆ. ನಾನು ಕಲಿತ್ತದ್ದು ಎನ್.ಎಮ್.ಪಿ.ಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ.ನನಗೆ ಬಹಳ ಪ್ರೋತ್ಸಾಹ ನೀಡಿದ ಶಾಲೆ.ನಾನು ಮೂರನೆ ತರಗತಿಯಲ್ಲಿ ಇದ್ದಾಗ ತಿರುವನಂತಪುರದಲ್ಲಿ ನಡೆದಂತಹ ರಾಷ್ತ್ರಮಟ್ಟದ ಬುಲ್-ಬುಲ್ ಶಿಬಿರದಲ್ಲಿ ೫ ದಿನಗಳ ಕಾಲ ಭಾಗವಹಿಸಿದ್ದೇನೆ,ಹಾಗು ಇನ್ನಿತರ ತುಂಬ ಕಡೆ ಹೋಗಿದ್ದೇನೆ.ನಮ್ಮ ಶಾಲೆಯಲ್ಲಿ ಪ್ರತಿಭಾಕಾರಂಜಿ ಇರುತ್ತಿದ್ದಾಗ ಕ್ರಮೇಣ ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ.ಹಾಡುವುದು,ಹಾಡುಗಳನ್ನು ಕೇಳುವುದು, ಪುಸ್ತಕ ಓದುವುದು,ಅಡುಗೆ ಮಾಡುವುದು ಇವು ನನ್ನ ಹವ್ಯಾಸಗಳು.ಹಾಡುಗಳಲ್ಲಿ ಭಜನೆ ಮಾಡುವುದು ತುಂಬ ಇಷ್ಟ,ದಾಸರ ಹಾಡುಗಳು, ಹಿಂದಿ ಹಾಡುಗಳು, ಎಸ್ ಪಿ ಬಾಲಸುಬ್ರಹಮಣ್ಯ,ಯೆಸುದಾಸ್,ಸೋನು ನಿಗಂ,ಇತ್ಯಾದಿ ಇವರ ಹಾಡುಗಳು,ಇಂಗ್ಲಿಷ್ ಹಾಡುಗಳು.ಪುಸ್ತಕಗಳಲ್ಲಿ- ಇಂಗ್ಲಿಷ್ ನೋವೆಲ್ಸ್,ಕನ್ನಡ ಪತ್ರಿಕೆ,ಇತ್ಯಾದಿ. ನಾನು ಗೋವಿಂದದಾಸ ಕಾಲೇಜಿನಲ್ಲಿ ಪಿಯುಸಿ ಕಲಿತದ್ದು.ವಿಜ್ಞಾನವನ್ನು ಆಯ್ಕೆಮಾಡಿಕೊಂಡಿರುವೆ ಅದರಲ್ಲಿ ಭೌತಶಾಸ್ತ್ರ,ರಸಾಯನಶಾಸ್ತ್ರ,ಗಣಿತ,ಅಂಕಿಅಂಶಗಳು ಕಲಿತೆನು. ಪ್ರಸ್ತುತವಾಗಿ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನಲ್ಲಿ ಬಿ.ಎಸ್ಸಿ ಕಲಿಯುತ್ತಿದ್ದೇನೆ,ಮುಂದೆ ಎಮ್.ಎಸ್ಸಿ ಮಾಡಿ ಐ.ಎ.ಎಸ್ ಆಫಿಸರ್ ಆಗಬೇಕೆಂಬ ಗುರಿ ಇಟ್ಟಿದ್ದೇನೆ.

ನೈಸರ್ಗಿಕ ಸಂಪನ್ಮೂಲಗಳು[ಬದಲಾಯಿಸಿ]

ನೈಸರ್ಗಿಕ ಸಂಪನ್ಮೂಲಗಳು ಜನರು ಪ್ರತಿನಿತ್ಯ ಪ್ರಕೃತಿಯಿಂದ ಬಳಸುವಂತದ್ದು. ಇದು ಮನುಷ್ಯ ನಿರ್ಮಿಸಿದ್ದು ಅಲ್ಲ ಆದರೆ ಪ್ರಕೃತಿಯಲ್ಲಿ ಕಂಡು ಬರುವ ವಿಶೇಷ ಗುಣಗಳು ಇವು.ಉದಾಹರಣೆ-ಗಾಳಿ, ನೀರು, ಮರ,ಕಬ್ಬಿಣ,ಕಲ್ಲಿದ್ದಲು ಇತ್ಯಾದಿ. ಇದರಲ್ಲಿ ಎರಡು ವಿಭಾಗಗಳಿವೆ

 1. ನವೀಕರಿಸಬಹುದಾದ ಸಂಪನ್ಮೂಲಗಳು
 2. ಅನವೀಕರಿಸಬಹುದಾದ ಸಂಪನ್ಮೂಲಗಳು

ನವೀಕರಿಸಬಹುದಾದ ಸಂಪನ್ಮೂಲಗಳು[ಬದಲಾಯಿಸಿ]

ನವೀಕರಿಸಬಹುದಾದ ಸಂಪನ್ಮೂಲಗಳನ್ನು ನಾವು ಬಹಳಷ್ಟು ಸಾರಿ ಬಳಸಬಹುದು. ಇದರ ಕೊರತೆ ನಮಗೆ ಕಾಣಿಸುವುದಿಲ್ಲ. ಉದಾಹರಣೆ; ಮಣ್ಣು, ಸೂರ್ಯನ ಬೆಳಕು,ನೀರು,ಆಮ್ಲಜನಕ ಇತ್ಯಾದಿ.

ಅನವೀಕರಿಸಬಹುದಾದ ಸಂಪನ್ಮೂಲಗಳು[ಬದಲಾಯಿಸಿ]

ಅನವೀಕರಿಸಬಹುದಾದ ಸಂಪನ್ಮೂಲಗಳು ನಾವು ಬಳಕೆ ಮಾಡಿದ್ದಷ್ಟು ಕಡಿಮೆಯಾಗುತ್ತ ಹೋಗುತ್ತದೆ. ಇದನ್ನು ಉಪಯೋಗಮಾಡುವುದರಿಂದ ಭವಿಷ್ಯತ್ ಕಾಲದಲ್ಲಿ ಸಿಗುವುದು ಕಷ್ಟವಾಗಬಹುದು. ಉದಾಹರಣೆ;ಪಳೆಯುಳಿಕೆ ಇಂಧನಗಳು. ಇಂಧನಗಳಂದ ನಮ್ಮ ಪರಿಸರವು ಮಲಿನಗೊಳ್ಳುತ್ತಿದೆ ಹಾಗು ಇದು ಬಹಳಷ್ಟು ದುಬಾರಿಯಾಗಿದೆ, ನವೀಕರಿಸಬಹುದಾದ ಸಂಪನ್ಮೂಲಗಳು ಬಹಳ ಸ್ವಚ್ಛವಾದದ್ದು ಇಂದಿನ ಹೊಸ ತಂತ್ರಜ್ಞಾನದಲ್ಲಿ ಇವುಗಳನ್ನು ಬಳಸಿ ಇನ್ನಷ್ಟು ಆವಿಷ್ಕಾರಗಳು ನಡೆಯುತ್ತಿದೆ ಹಾಗು ಅಭಿವೃದ್ದಿಗೊಳ್ಳುತ್ತಿದೆ.

ಲಾವರಸ[ಬದಲಾಯಿಸಿ]

ಲಾವ ಎಂಬ ಪದವು ಇಟಾಲಿಯನ್ ಪದ 'ಲಾವೊ' ಎಂಬ ಪದದಿಂದ ಬಂದಿದೆ. ಇದರರ್ಥ ತೋಳೆ ಮತ್ತು ಕರಗಿದ ಪದಾರ್ಥಗಳು ಮೌಂಟ್ ಎಟನ್ ಮತ್ತು ಮೌಂಟ್ ವೈಸ್ಟಿಯಸ್ ಇಳಿಜಾರಿನಲ್ಲಿ ಜಾರುವುದರಿಂದ ಈ ಹೆಸರು ಬಂದಿರಬಹುದು.ಲಾವ ಎಂಬ ಪದವು ಸಾಮಾನ್ಯ ಪದವಾಗಿದ್ದು ಭೂ ಮೇಲ್ಮೈಯಲ್ಲಿರುವ ಕರಗಿರುವ ಶಿಲಾ ಪಾಕವಾಗಿದೆ. ಇದು ಸಾಮಾನ್ಯವಾಗಿ ಜ್ವಾಲಮುಖಿ ಉಂಟಾದಾಗ ಸುಮಾರು ೮೫೦ಡಿಗ್ರಿ. ಸೆ ನಿಂದ ೧,೨೫೦ಡಿಗ್ರಿ.ಸೆ ಉಷ್ಣತೆಯಲ್ಲಿ ಉಕ್ಕುವ ಶಿಲಾ ಪಾಕವಾಗಿದೆ. ಲಾವದಲ್ಲಿ ಸಾಮಾನ್ಯವಾಗಿ ಕೆಲವು ಸ್ಪಟಿಕಗಳು ದ್ರವ ರೂಪದಲ್ಲಿ ತೇಲುತ್ತಿರುತ್ತವೆ. ಲಾವರಸವು ಶೀಘ್ರವಾಗಿ ಘನೀಭವಿಸಿದಾಗ ಗಾಜನ್ನು ಹೋಲುವಂತಹ ನುಣುಪಾದ ಕಾರ್ಗಲ್ಲಿನ ಶಿಲೆ ನಿರ್ಮಾಣವಾಗುವುದು. ಲಾವರಸ ಬಹಳ ನಿಧಾನವಾಗಿ ಘನಿಭವಿಸಿ ಅದರೊಳಗಿನ ವಿವಿಧ ಖನಿಜಗಳ ಹರಳುಗಳು ಪೂರ್ಣವಾಗಿ ವೃದ್ಧಿಯಾಗುವ ವಿಧಾನವನ್ನು ಸ್ಪಟಕೀಕರಣ ಎನ್ನುವರು. ಉದಾಹರಣೆ ಹವಾಯಿ ದ್ವೀಪದ ಕೊಳಗಳು, ಸುಮಾತ್ರಾ ಥಿಸುವುಯಸ್ ದ ಇಟಲಿಯ ಬೆಟ್ಟಗಳು ಮುಂತಾದುವು. ಜ್ವಾಲಾಮುಖಿ ಪರ್ವತಗಳು ಕೆಲವೇ ಮೀಟರ್ ನಿಂದ ಸಾವಿರಾರು ಮೀಟರ್ ಎತ್ತರದವರೆಗೂ ಇರಬಹುದು.ಕೆಲವೊಂದು ಜ್ವಾಲಾಮುಖಿ ಪರ್ವತಗಳು ಆಗೊಮ್ಮೆ ಈಗೊಮ್ಮೆ ಸ್ಫೋಟಗೊಂಡು ಮತ್ತೆ ನಿಷ್ರೀಯವಾದರೆ ಮತ್ತೆ ಕೆಲವು ಸಂಪೂರ್ಣ ನಿಷ್ರಿಯವಾಗಿವೆ. ಜ್ವಾಲಾಮುಖಿಗಳಿಗೂ, ಭೂಕಂಪಗಳಿಗೂ ನಿಕಟ ಸಂಭಂಧವಿದೆ.

ಲಾವರಸದ ರಚನೆ[ಬದಲಾಯಿಸಿ]

ಲಾವರಸದ ರಚನೆ ಬಹಳ ವಿಸ್ತಾರವಾಗಿದ್ದು ಸಿಲಿಕಾ ಬಹಳ ಪ್ರಮಾಣದಲ್ಲಿದ್ದು,ಮ್ಯಾಗ್ನೇಷಿಯಂ ಮತ್ತು ಕಬ್ಬಿಣ ಪ್ರಮಾಣವು ಉತ್ತಮವಾಗಿದ್ದು ಕಂದು ಬಣ್ಣದ ಅಗ್ನಿ ಶಿಲೆಗಳು ಕ್ಷಾರ ಮತ್ತು ಅಗ್ನಿಶಿಲೆಗಳು ಒಳಗೊಂಡಿರುತ್ತವೆ. ಕೆಲವೊಂದು ಲಾವರಸವು ತುಂಬಾ ಕಡಿಮೆ ವ್ಯಾಪ್ತಿಯನ್ನು ಹೊಂದಿದ್ದು ಉದಾಹರಣೆಗೆ ಹವಾಯಿ ದ್ವೀಪಗಳಲ್ಲಿರುವ ಅಗ್ನಿಶಿಲೆಗಳು ಹೆಚ್ಚು ವ್ಯಾಪ್ತಿಯನ್ನೊಳಗೊಂಡಿದ್ದು ಕಿಟ್ಟ ಮತ್ತು ಕೈಗೆ ಮೊದಲಾದುವುಗಳಿಗೆ ಅಂಟಿದ ಕಲೆಯನ್ನು ತೊಳೆಯಲು ಬಳಸುವ ಮೃದುವಾದ ಲಾವರಸದಿಂದುಟಾದ ಕಲ್ಲು ರಚನೆಯಿರುತ್ತದೆ.ಹೆಚ್ಚಿನ ಲಾವರಸವು ಅಗ್ನಿಶಿಲೆಗಳನ್ನೊಳಗೊಂಡಿದ್ದು ಹೆಚ್ಚು ಉಷ್ಣವನ್ನು ಹೊಂದಿರುತ್ತದ್ದೆ.ಕೆಲವೊಂದು ಕಾಲ ಈ ಅಗ್ನಿಶಿಲೆಗಳು ತೆಳುವಾಗಿ ಪ್ರವಹಿಸಿ ಸಾಕಷ್ಟು ದೂರದವರೆಗೆ ಹರಿಯುವವು. ಇವು ಸಾಮಾನ್ಯವಾಗಿ ನುಣುಪಾದ ಮೇಲ್ಮೈಯನ್ನು ಹೊಂದಿರುತ್ತದೆ. ಅಂತರಾಗ್ನಿ ಮತ್ತು ಬಹಿಸ್ಸರಣ ಶಿಲೆಗಳಲ್ಲಿ ಮೂಲ ಶಿಲಾವಸ್ತು ಒಂದೇ ಆಗಿರುತ್ತದೆ.ಅಂತರಾಳದಲ್ಲಿ ನಿರ್ಮಿತಗೊಂಡರೆ ಹರಳು ಶಿಲೆ(ಗ್ರಾನೈಟ್) ಎನ್ನುವರು.ಬಹಿಸ್ಸರಣ ನಮೂನೆಯಲ್ಲಿ ಕರಿಹರಳು(ರೈಯೊಲೈಟ್) ಶಿಲೆ ಎನ್ನುವರು.

ಶಿಲೆಗಳ ನಿರ್ಮಾಣ[ಬದಲಾಯಿಸಿ]

ಶಿಲೆಗಳ ಬಣ್ಣ,ರೂಪ,ಆಕಾರಗಳನ್ನು ನೋಡಿದಾಗ ಶಿಲೆಗಳ ವೈವಿಧ್ಯತೆಯ ಬಗ್ಗೆ ನಮಗೆ ಆಗಾಧವಾದ ಕುತೂಹಲತೆ ಹುಟ್ಟುವುದು. ಶಿಲೆಗಳ ನಿರ್ಮಾಣದ ಪ್ರಕಾರಗಳು ಹೀಗಿವೆ:

  ಅಗ್ನಿ ಶಿಲೆ
  ಪದರು ಶಿಲೆ
  ರೂಪಾಂತರ ಶಿಲೆ

ಅಗ್ನಿ ಶಿಲೆ[ಬದಲಾಯಿಸಿ]

ಭೂಕವಚದ ಮೇಲೆ ಪ್ರಪ್ರಥಮವಾಗಿ ನಿರ್ಮಾಣವಾದ ಶಿಲೆಗಳೆಂದು ಹೇಳಬಹುದು. ಭೂಮಿಯ ಕವಚದ ಒಳ ಭಾಗದಲ್ಲಿ ಶಾಖವು ಯಥೇಚ್ಛವಾಗಿದ್ದು ಶಿಲಾರಸವು ದ್ರವಪಿಷ್ಟದಂತಹ ಒಂದು ಮಿಶ್ರಣ ರೂಪದಲ್ಲಿರುತ್ತದೆ.ಇದನ್ನು ಮಾಗ್ಮಾ ಎಂದು ಕರೆಯುವರು. ಇಲ್ಲಿಂದ ಹೊರಬಿದ್ದ ಶಿಲಾರಸವು ಕ್ರಮೇಣ ಶಾಖವನ್ನು ಕಳೆದುಕೊಂಡು ಘನೀಭವಿಸಿ ಶಿಲೆಗಳಾಗುತ್ತವೆ. ಜ್ವಾಲಮುಖಿಯಿಂದ ಅಥವಾ ಭೂಮಿಯ ಆಳವಾದ ಬಿರುಕುಗಳ ಮುಖಾಂತರ ಲಾವ ಹೊರ ಬೀಳುತ್ತದೆ. ನಂತರ ತಂಪಾಗಿ ಘನೀಭವಿಸಿ ಶಿಲೆಯಾಗುವುದು. ಅಗ್ನಿಪರ್ವತ ಶಿಲೆ

ಶಿಲಾರಸವು ಭೂಮಿಯನ್ನು ಸೀಳಿಯಾಗಲಿ,ಜ್ವಾಲಮುಖಿ ಕುಣಿ ಮುಖಾಂತರವಾಲಿಹೊರಬರುವುದು. ಈ ಶಿಲಾರಸವು ಲಾವಾ ಪ್ರವಾಹವಾಗಿ ಹರಿಯುವುದು. ಶಿಲಾರಸ ಗಟ್ಟಿಯಾಗಿದ್ದಲ್ಲಿ ಪ್ರವಾಹವು ಬಹಳ ದೂರದವರೆಹೆ ಹೋಗಲಾರದು. ತೆಳ್ಳಗಿನ ದ್ರವವು ಹೊರ ಬರುವ ಸಂಧರ್ಭದಲ್ಲಿ ಈ ಪ್ರವಾಹಗಳ ಮೇಲ್ಭಾಗವು ತುಂಡಾದವು ಇರಬಹುದು. ಇನ್ನು ಕೆಲವು ನುಣುಪಾದ ಅಲೆಗಳ ರೂಪದಲ್ಲಿರಬಹುದು.

ಈಥೈಲ್ ಆಲ್ಕೋಹಾಲ್[ಬದಲಾಯಿಸಿ]

ಈಥೈಲ್ ಆಲ್ಕೋಹಾಲನ್ನು ಆಲ್ಕೊಹಾಲ್ಯುಕ್ತ ಪಾನೀಯಗಳಲ್ಲಿ ನಾವು ಕಾಣಬಹುದು, ಸಕ್ಕರೆಯ ಹುದುಗುವಿಕೆಯಿಂದ ಇದರ ನಿರ್ಮಾಣವಾಗುತ್ತದೆ.ಇದು ಬಣ್ಣರಹಿತ ಹಾಗು ಆವಿಯಾಗುವ ದ್ರವ್ಯ.ಇದರ ಕಡಿಮೆ ಕರಗುವ ಬಿಂದುವಿನ ಶಕ್ತಿಯ ಕಾರಣ ಇದನ್ನು ಪಾದರಸ ಥರ್ಮಾಮೀಟರಲ್ಲಿ ಬಳಸುತ್ತಾರೆ. ರಚನಾ ಸೂತ್ರ ಹೀಗಿದೆ ಎರಡು ಕಾರ್ಬನ್ ಪರಮಾಣು ಏಕೈಕ ಬಾಂಡ್ ಗೆ ಲಗತ್ತಿಸಲಾಗಿದ ಹಾಗು OH ಇದರ ಕ್ರಿಯಾತ್ಮಕ ಗುಂಪು.ಇದನ್ನು ಮೊದಲನೆಯದಾಗಿ ಜಸ್ಟಸ್ ಲೈಬಿಗ್ ೧೮೩೪ರಲ್ಲಿ ಈಥೈಲ್ ಎಂಬ ಹೆಸರಿಟ್ಟರು.

ಉಪಯೋಗಗಳು[ಬದಲಾಯಿಸಿ]

 1. ಇದನ್ನು ನಂಜುನಿರೋಧಕ ಔಷಧಿ,ಕೈ ಸ್ವಚ್ಛಗೊಳಿಸುವ ಪದಾರ್ಥಗಳಲ್ಲಿ ಮಿಶ್ರಿಸುತ್ತಾರೆ.
 2. ಇದು ಮೆಥನಾಲ್ ವಿಷಪ್ರಾಶನಕ್ಕೆ ಪ್ರತ್ಯೌಷಧ.
 3. ಇದು ಔಷಧೀಯ ದ್ರಾವಕ.
 4. ಎಂಜಿನ್ ಇಂಧನಳಲ್ಲಿ ಮತ್ತು ರಾಕೆಟ್ ಇಂಧನಗಳಲ್ಲಿ ಬಳಸುತ್ತಾರೆ.
 5. ಇಂಧನ ಕೋಶಗಳಲ್ಲಿ ಬಳಸುತ್ತಾರೆ.

ಪ್ರತಿಕೂಲ ಪರಿಣಾಮಗಳು[ಬದಲಾಯಿಸಿ]

 1. ಸಮತೋಲನ ನಷ್ಟ:ವ್ಯಕ್ತಿಯು ಮದ್ಯಪಾನವನ್ನು ಸೇವಿಸಿದಾಗ ಅದು ಮೆದುಳಿನಲ್ಲಿ ಸಂಕೇತಗಳನ್ನು ಕಳಿಸುವ ಸಾಮರ್ಥ್ಯವನ್ನು ಕಡಿಮೆಮಾಡುತ್ತದೆ ಇದರಿಂದಾಗಿ ದೇಹದ ನಿಯಂತ್ರಣ ಶಕ್ತಿ , ಯೋಚನ ಶಕ್ತಿ ಕಡಿಮೆಯಾಗುತ್ತದೆ.
 2. ಜಠರಗರುಳಿನ ಕಾಯಿಲೆಗಳು:ಆಲ್ಕೊಹಾಲ್ ಗ್ಯಾಸ್ಟ್ರಿಕ್ ರಸ ಉತ್ಪಾದನೆಯನ್ನು ಪ್ರಚೋದಿಸುತ್ತದೆ,ಮದ್ಯಪಾನವನ್ನು ಬರೀ ಹೊಟ್ಟೆಯಲ್ಲಿ ಸೇವಿಸಬಾರದು, ಸೇವಿಸಿದರೆ ಆಂತರಿಕ ರಕ್ತಸ್ರಾವ ಉಂಟಾಗುತ್ತದೆ.
 3. ಅಲ್ಪಾವಧಿಯ ವಿಷಕಾರಿ ಅಲರ್ಜಿ ತರಹದ ಪ್ರತಿಕ್ರಿಯೆಗಳು:ಎಥನಾಲ್- ಹೊಂದಿರುವ ಪಾನೀಯಗಳ ಚರ್ಮದ ಉಗುಳುವಿಕೆ ಕಾರಣವಾಗಬಹುದು.
 4. ಕ್ಯಾನ್ಸರ್:ಕ್ಯಾನ್ಸರ್ಕಾರಕ ಗುಣವಿದೆ.

ಮದ್ಯಪಾನವನ್ನು ಅತಿಯಾಗಿ ಸೇವಿಸುವುದರಿಂದ ಮೆದುಳಿನ ಮತ್ತು ಇತರ ಅಂಗಗಳ ಶಾಶ್ವತ ಹಾನಿಯನ್ನು ಮಾಡುತ್ತದೆ ಇದರ ದುರಾಸಕ್ತಿ ಒಳ್ಳೆಯದಲ್ಲ.ಆದರೆ ಕುಡಿತ ತ್ಯಜಿಸಿದರೆ ಅದರಲ್ಲಿ ಆಗುವ ಆತಂಕಗಳು ಸ್ವನಿಯಂತ್ರಿತ ಅಪಸಾಮಾನ್ಯ , ರೋಗಗ್ರಸ್ತವಾಗುವಿಕೆಗಳು, ಮತ್ತು ಭ್ರಮೆಗಳು ಕಾರಣವಾಗಬಹುದು.

ಭೌತಿಕ ಗುಣಗಳು[ಬದಲಾಯಿಸಿ]

 1. ಇದು ಬಣ್ಣರಹಿತವಾದ ದ್ರವ್ಯ ,ಇದು ಹೊಗೆರಹಿತ,ಸಾಮಾನ್ಯ ಬೆಳಕಿನಲ್ಲಿ ಯಾವಾಗಲೂ ಗೋಚರಿಸುವುದಿಲ್ಲ.ಎಥನಾಲ್ ನೀರಿಗಿಂತ ಸ್ವಲ್ಪ ಹೆಚ್ಚಾಗಿ ವಕ್ರೀಕಾರಕ.
 2. ಎಥನಾಲ್ ಒಂದು ಬಹುಮುಖ ದ್ರಾವಕ,ನೀರು ಮತ್ತು ಅನೇಕ ಜೈವಿಕ ದ್ರಾವಕಗಳು ಜೊತೆ ಮಿಶ್ರಣವಾಗುತ್ತದೆ.ಸುಮಾರು ೨೬ ° C ಗೆ ಬಿಸಿ ಬೆಂಕಿ ಹಿಡಿಯುತ್ತದೆ.
 3. ಎಥನಾಲಿನ ಹೈಡ್ರಾಕ್ಸಿಲ್ ಗುಂಪು ಜಲಜನಕ ಬಾಂಡ್ ನಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ.
 4. ಎಥನಾಲಿನ್ನು ಸ್ವಲ್ಪವಾದರು ನೀರಿನಲ್ಲಿ ಮಿಶ್ರಿತವಾದರೆ ನೀರಿನ ಮೇಲ್ಮೈ ಒತ್ತಡವನ್ನು ಕಡಿಮೆ ಮಾಡುತ್ತದೆ.
 5. ಇದು ೧೧೭.೩°Cರಲ್ಲಿ ಕರಗುತ್ತದೆ, ೭೮.೫°Cರಲ್ಲಿ ಕುದಿಯುತ್ತದೆ.
  1. ಹರಿವಂಶ್‌ ರಾಯ್ ಬಚ್ಚನ್##

ವಯಕ್ತಿಕ ಜೀವನ ಮತ್ತು ಶಿಕ್ಷಣ

ಅಲಹಾಬಾದಿನ ಸಂಯುಕ್ತ ಪ್ರಾಂತ್ಯಗಳ (ಈಗಿನ ಉತ್ತರ ಪ್ರದೇಶ) ಹತ್ತಿರದ ಯುಪಿಯ ಪ್ರತಾಪ್‌ಗರ್‌ ಜಿಲ್ಲೆಯ ಬಾಬುಪಟ್ಟಿ (ರಾನಿಗಂಜ್‌) ಎಂಬ ಹಳ್ಳಿಯಲ್ಲಿ ಕಾಯಸ್ಥ ಕುಟುಂಬದಲ್ಲಿ ಜನಿಸಿದರು. ಅವರ ಪ್ರತಾಪ್ ನಾರಾಯಣ್‌ ಶ್ರಿವಾಸ್ತವ್‌ ಮತ್ತು ಸರಸ್ವತಿ ದೇವಿಯವರ ಮೊದಲ ಮಗನಾಗಿದ್ದರು. ಅವರನ್ನು ಬಚ್ಚನ್ (ಅರ್ಥ 'ಮಕ್ಕಳ ರೀತಿಯ") ಎಂದು ಮನೆಯಲ್ಲಿ ಕರೆಯುತ್ತಿದ್ದರು. ಅವರ ಶಾಲಾ ಜೀವನ ಮುನ್ಸಿಪಲ್ ಶಾಲೆಯಲ್ಲಾಯಿತು ಮತ್ತು ನಂತರದಲ್ಲಿ ಕುಟುಂಬದ ಸಾಂಪ್ರದಾಯದಿಂದಾಗಿ ಕಾಯಸ್ಥ ಪಠಶಾಲಾದಲ್ಲಿ (कायस्थ पाठशाला) ಉರ್ದುವನ್ನು ತನ್ನ ಕಾನೂನು ಜೀವನದ ಪ್ರಾರಂಭವಾಗಿ ಕಲಿತರು. ನಂತರ ಅವರು ಅಲಹಾಬಾದ್ ವಿದ್ಯಾಲಯ‌‍ ಮತ್ತು ಬನಾರಸ್ ಹಿಂದೂ ವಿದ್ಯಾಲಯ‌ದಲ್ಲಿ ತಮ್ಮ ಶಿಕ್ಷಣವನ್ನು ಮುಂದುವರೆಸಿದರು. ಆ ಸಮಯದಲ್ಲಿ ಅವರು ಸ್ವಾತಂತ್ರ್ಯ ಚಳುವಳಿಯ ಪ್ರಭಾವಕ್ಕೊಳಗಾದರು, ನಂತರ ಮಹಾತ್ಮಾ ಗಾಂಧಿ‌ಯವರ ನೇತೃತ್ವದಲ್ಲಿ ಚಳುವಳಿಯಲ್ಲಿ ಭಾಗವಹಿಸಿದರು.

ಅವರು ಅನುಸರಿಸಬೇಕಾದ ಮಾರ್ಗವಿದಲ್ಲವೆಂದು ಅರಿವಾಗಿ ವಿದ್ಯಾಲಯಕ್ಕೆ ಮರಳಿದರು. 1941ರಿಂದ 1952ರ ವರೆಗೆ ಅಲಹಾಬಾದ್ ವಿದ್ಯಾಲಯ‌ದ ಇಂಗ್ಲಿಷ್ ವಿಭಾಗದಲ್ಲಿ ಬೋಧಿಸುತ್ತಿದ್ದರು ಮತ್ತು ನಂತರದ ಎರಡು ವರ್ಷ ಕೇಂಬ್ರಿಡ್ಜ್ ವಿದ್ಯಾಲಯದಲ್ಲಿ ಡಬ್ಲುಬಿ ಯೇಟ್ಸ್‌ ಮೇಲಿನ ಡಾಕ್ಟೋರಲ್ ಪ್ರಬಂಧರಚನೆಯಲ್ಲಿ ಕಾರ್ಯಪ್ರವೃತ್ತರಾದರು. ಅದರ ನಂತರ ಶ್ರೀವಾಸ್ತವದ ಬದಲಿಗೆ ‘ಬಚ್ಚನ್’ನ್ನು ಕೊನೆಯ ಹೆಸರಾಗಿ ಬಳಸತೊಡಗಿದರು. ಹರಿವಂಶ್‌ ರಾಯ್‌ರ ಪ್ರಬಂಧಕ್ಕೆ ಕೆಂಬ್ರಿಡ್ಜ್‌ನಲ್ಲಿ ಪಿಹೆಚ್‌ಡಿ ದೊರೆಯಿತು. ಅವರು ಕೆಂಬ್ರಿಡ್ಜ್‌ನಲ್ಲಿ ಇಂಗ್ಲಿಷ್ ಸಾಹಿತ್ಯಕ್ಕಾಗಿ ಪಿಹೆಚ್‌ಡಿ ಪಡೆದವರಲ್ಲಿ ಎರಡನೇಯವರಾದರು. ಭಾರತಕ್ಕೆ ಮರಳಿದ ನಂತರ ಅಲಹಾಬಾದಿನ ಆಲ್‌ ಇಂಡಿಯಾ ರೇಡಿಯೋನಲ್ಲಿ ಸೇವೆ ಸಲ್ಲಿಸಿದರು.

1926ರಲ್ಲಿ, 19ನೇ ವಯಸ್ಸಿನಲ್ಲಿ ಬಚ್ಚನ್‌ ತನ್ನ ಮೊದಲ ಹೆಂಡತಿಯಾದ 14 ವಯಸ್ಸಿನ ಶ್ಯಾಮರನ್ನು ಮದುವೆಯಾದರು. ಅವರು ಹತ್ತು ವರ್ಷಗಳ ನಂತರ 1936ರಲ್ಲಿ ಹಲವು ಸಮಯದ ಕ್ಷಯದಿಂದ 24ನೇ ವಯಸ್ಸಿನಲ್ಲಿ ಸಾವನ್ನಪ್ಪಿದರು. ಬಚ್ಚನ್‌ ಮತ್ತೆ ಸಿಖ್‌ರಾದ ತೇಜಿ ಸೂರಿಯವರನ್ನು 1941ರಲ್ಲಿ ಮದುವೆಯಾದರು. ಅವರ ಇಬ್ಬರು ಮಕ್ಕಳೆಂದರೆ ಅಮಿತಾಬ್ ಮತ್ತು ಅಜಿತಾಬ್‌.

1955ರಲ್ಲಿ, ಹರಿವಂಶ್‌ ರಾಯ್ ದೆಹಲಿಗೆ ತೆರಳಿ ವಿಶೇಷಾಧಿಕಾರದ ಮೇರೆಗೆ ವಿದೇಶಾಂಗ ಸಚಿವಾಲಯದಲ್ಲಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದರು, ಹಿಂದಿಯನ್ನು ಅಧಿಕೃತ ಭಾಷೆಯನ್ನಾಗಿ ಮಾಡುವುದರಲ್ಲಿ ಇವರೂ ಶ್ರಮಿಸಿದರು. ಅವರ ಪ್ರಮುಖ ಬರಹಗಳ ಭಾಷಾಂತದ ಮೂಲಕ ಹಿಂದಿಯನ್ನು ಶ್ರೀಮಂತಗೊಳಿಸಿದರು. ಕವಿಯಾಗಿ ಮಧುಶಾಲಾ (ಆಲ್ಕೊಹಾಲಿನ ಪಾನೀಯಗಳ ಮಾರಾಟ ಕೇಂದ್ರ) ಕವನದ ಮೂಲಕ ಪ್ರಖ್ಯಾತರಾದರು. ಉಮರ್ ಖಯಾಮ್‌ರ ರುಬಿಯಾತ್‌ನ ನಂತರದಲ್ಲಿ ಅವರು ಶೇಕ್ಸ್‌ಪಿಯರ್‌ನ ಮ್ಯಾಕ್‌ಬೆತ್ ಮತ್ತು ಒಥೆಲೊ ಮತ್ತು ಭಗವತ್ ಗೀತೆಯ ಹಿಂದಿ ಭಾಷಾಂತರದಿಂದ ಅವಿಸ್ಮರಣೀಯರಾಗಿದ್ದಾರೆ. ನವೆಂಬರ್‌ 1984ರಲ್ಲಿ ಅವರು ಇಂದಿರಾಗಾಂಧಿಯ ಹತ್ಯೆಯ ಮೇಲಿನ ಕೊನೆಯ ಕವನವಾದ ‘ಏಕ್ ನವೆಂಬರ್1984’ನ್ನು ರಚಿಸಿದರು.

ಹರಿವಂಶ್‌ ರಾಯ್ ಭಾರತೀಯ ರಾಜ್ಯಸಭೆಗೆ 1966ರಲ್ಲಿ ನಾಮಾಂಕಿತರಾದರು ಮತ್ತು ಮೂರು ವರ್ಷಗಳ ನಂತರ ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ಸ್ವೀಕರಿಸಿದರು. 1976ರಲ್ಲಿ ಅವರ ಹಿಂದಿ ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ ಪದ್ಮ ಭೂಷಣ ಪ್ರಶಸ್ತಿಯನ್ನು ಪಡೆದರು. ಅವರು ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆಗಾಗಿ ಸರಸ್ವತಿ ಸಮ್ಮಾನ್, ಸೋವಿಯತ್‌ಲ್ಯಾಂಡ್‌ ನೆಹರೂ ಪ್ರಶಸ್ತಿ ಮತ್ತು ಆಫ್ರೊ-ಏಷ್ಯನ್ ಸಮ್ಮೇಳನದಲ್ಲಿ ಲೋಟಸ್ ಪ್ರಶಸ್ತಿಗಳನ್ನು ಪಡೆದರು. ತಮ್ಮನ್ನು ಪರಿಚಯಿಸಿಕೊಳ್ಳುವಾಗ ಈ ರೀತಿಯಾಗಿ ಹೇಳುತಿದ್ದರು: ಮಿಟ್ಟಿ ಕಾ ತನ್, ಮಸ್ತಿ ಕಾ ಮನ್, ಕ್ಷಣ್-ಭರ್ ಜೀವನ್- ಮೇರಾ ಪರಿಚಯ್. (ಮಣ್ಣಿನ ದೇಹ, ಆಟದ ಮನಸ್ಸು, ಕ್ಷಣದ ಜೀವನ - ಅದು ನಾನು).

ಬಚ್ಚನ್‌ ಜನವರಿ 18, 2003ರಂದು ತಮ್ಮ 95ನೇ ವಯಸ್ಸಿನಲ್ಲಿ ಉಸಿರಾಟದ ತೋಂದರೆಯಿಂದಾಗಿ ಕೊನೆಯುಸಿರೆಳೆದರು.[೨] ಅವರ ಹೆಂಡತಿ ತೇಜಿ ಬಚ್ಚನ್‌ 2007ರಲ್ಲಿ ತಮ್ಮ 93ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ವೃತ್ತಿಜೀವನ ಬೋಧನಾ ವೃತ್ತಿ

1941ರಿಂದ 1952 ವರೆಗೆ ಅಲಹಾಬಾದ್ ವಿದ್ಯಾಲಯ‌ದಲ್ಲಿ ಇಂಗ್ಲೀಷನ್ನು ಬೋಧಿಸಿದರು ಮತ್ತು ಎರೆಡು ವರ್ಷಗಳ ಕಾಲ ಕೇಂಬ್ರಿಡ್ಜ್‌ ವಿದ್ಯಾಲಯದ ಸೈಂಟ್‌ ಕ್ಯಾಥರಿನ್ಸ್ ಕಾಲೇಜಿನಲ್ಲಿ ಕಳೆದರು. ಅಲ್ಲಿ ಪ್ರಖ್ಯಾತ ಇಂಗ್ಲಿಷ್ ಸಾಹಿತ್ಯದ ಪ್ರಾಧ್ಯಾಪಕ, ಥಮಸ್‌ ರೈಸ್ ಹೆನ್‌ರೊಂದಿಗೆ ಅಭ್ಯಸಿಸಿದರು ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಐರಿಷ್ ಕವಿ ಡಬ್ಲುಬಿ ಯೇಟ್ಸ್‌ ಮತ್ತು ಯಕ್ಷಿಣಿವಿದ್ಯೆಯ ಮೇಲಿನ ಸಂಶೋಧನೆಗಾಗಿ ಡಕ್ಟರೇಟ್‌ ಪಡೆದರು. ಅಲ್ಲಿ ಅವರು 'ಶ್ರಿವಾಸ್ತವ ಎನ್ನುವ ಕೊನೆಯ ಹೆಸರಿನ ಬದಲಿಗೆ ಬಚ್ಚನ್‌‌ ನನ್ನು ಬಳಸತೊಡಗಿದರು. ಅವರು ಕೇಂಬ್ರಿಡ್ಜ್‌ ವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯಕ್ಕಾಗಿ ಪಿಹೆಚ್‌ಡಿ ಪಡೆದವರಲ್ಲಿ ಎರಡನೇಯವರಾದರು.

ಭಾರತಕ್ಕೆ ಮರಳಿದ ನಂತರ ಚಿಂತಿಸಿ ನಂತರದಲ್ಲಿ ಆಲ್‌ ಇಂಡಿಯಾ ರೇಡಿಯೋ, ಮುಂಬಯಿಯಲ್ಲಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದರು. 1955ರಲ್ಲಿ ದೆಹಲಿಗೆ ತೆರಳಿ ಭಾರತ ಸರ್ಕಾರದ ವಿದೇಶಾಂಗ ಸಚಿವಾಲಯದಲ್ಲಿ ಕಾರ್ಯನಿರ್ವಹಿಸಿದರು, ಅಲ್ಲಿ ಹಿಂದಿಯನ್ನು ಅಧಿಕೃತ ಭಾಷೆಯನ್ನಾಗಿ ಮಾಡುವುದರಲ್ಲಿ ಇವರೂ ಶ್ರಮಿಸಿದರು.

ತಮ್ಮನ್ನು ಪರಿಚಯಿಸಿಕೊಳ್ಳುವಾಗ ಈ ರೀತಿಯಾಗಿ ಹೇಳುತಿದ್ದರು: “ Mitti ka tan, masti ka man, kshan-bhar jivan– mera parichay. (मिट्टी का तन, मस्ती का मन, क्षण भर जीवन, मेरा परिचय) ”

(ಮಣ್ಣಿನ ದೇಹ, ಆಟದ ಮನಸ್ಸು, ಕ್ಷಣದ ಜೀವನ - ಅದು ನಾನು). ಪ್ರಶಸ್ತಿಗಳು ಮತ್ತು ಗೌರವಗಳು

ಬಚ್ಚನ್‌ ಭಾರತದ ಸಂಸತ್ತಿನ ಮೇಲ್ಮನೆಯಾದ ರಾಜ್ಯ ಸಭೆಗೆ 1966ರಲ್ಲಿ ನಾಮಾಂಕಿತಗೊಂಡರು ಮತ್ತು 1969ರಲ್ಲಿ ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ಪಡೆದರು. 1976ರಲ್ಲಿ ಅವರ ಹಿಂದಿ ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ ಪದ್ಮ ಭೂಷಣ ಮತ್ತು ಸರಸ್ವತಿ ಸಮ್ಮಾನ್ ಪ್ರಶಸ್ತಿಯನ್ನು ಪಡೆದರು. 1994ರಲ್ಲಿ, ಉತ್ತರ ಪ್ರದೇಶ ಸರ್ಕಾರ "ಯಶ್ ಭಾರತಿ" ಸನ್ಮಾನ ನೀಡಿ ಗೌರವಿಸಿತು. [೧] ಸೋವಿಯತ್ ಲ್ಯಾಂಡ್ ನೆಹ್ರು ಪ್ರಶಸ್ತಿ ಮತ್ತು ಆಫ್ರೊ-ಏಷ್ಯನ್ ಸಮ್ಮೇಳನದಲ್ಲಿ ಲೋಟಸ್ ಪ್ರಶಸ್ತಿಗಳನ್ನು ಪಡೆದರು.

2003ರಲ್ಲಿ, ಭಾರತವು ಅಂಚೆ ಚೀಟಿಯನ್ನು ಅವರ ಸ್ಮರಣಿಕೆಗಾಗಿ ಬಿಡುಗಡೆ ಮಾಡಲಾಯಿತು.