ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Larren menezes/ನನ್ನ ಪ್ರಯೋಗಪುಟ04

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹರ್ಮನ್ ಪ್ರೀತ್ ಕೌರ್ ಭಾರತ ಮಹಿಳ ಕ್ರಿಕೆಟಿಗರು.ಇವರು, ೧೯೮೯ ಮಾರ್ಚ್ ೮ರಂದು. ಅವರು ತಂಡದಲ್ಲಿ ಆಲ್ರೌಂಡರ್ ಆಗಿ ಸ್ತಾನ ಪಡೆದಿದ್ದಾರೆ.ಅವರು, ಭಾರತೀಯ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದಿಂದ, ೨೦೧೭ರಲ್ಲಿ ಅರ್ಜುನ ಪ್ರಶಸ್ತಿಯನ್ನು ಪಡೆದಿದ್ದಾರೆ.[]

WBBL02 ಸಮಯದಲ್ಲಿ ಸಿಡ್ನಿ ಥಂಡರ್ಗಾಗಿ ಕೌರ್ ಬ್ಯಾಟಿಂಗ್

ಬಾಲ್ಯ

[ಬದಲಾಯಿಸಿ]

ಹರ್ಮನ್ ಪ್ರೀತ್ ಕೌರ್ರವರು ಪಂಜಾಬಿನ ಮೊಗದಲ್ಲಿ ಹುಟ್ಟಿದರು. ಅವರ ತಂದೆ, ಹರ್ಮಂದರ್ ಸಿಂಗ್ ಭುಲ್ಲರ್ರವರು, ವಾಲಿಬಾಲ್ ಮತ್ತು ಬ್ಯಾಸ್ಕೆಟ್ಬಾಲ್ ಆಟಗಾರರಾಗಿದ್ದರು.ಸತ್ವಿಂದರ್ ಕೌರ್, ಇವರು ಹರ್ಮನ್ ಪ್ರೀತ್ರವರ ತಾಯಿ. ಅವರ ಹೆತ್ತವರು ಸಿಖ್ಖರು. ಹೆಮ್ಜೀತ್ರವರು, ಹರ್ಮನ್ ಪ್ರೀತ್ರವರ ತಂಗಿ. ಅವರು, ಇಂಗ್ಲಿಷ್ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ಸಹಾಯಕ ಪ್ರಾಧ್ಯಾಪಕರಾಗಿ ಗುರು ನಾನಕ್ ಕಾಲೇಜ್, ಮೊಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಹರ್ಮನ್ ಪ್ರೀತ್ರವರು, ಜಿಯಾನ್ ಜ್ಯೋತಿ ಸ್ಕೂಲ್ ಅಕಾಡೆಮಿಯಲ್ಲಿ ಸೇರ್ಪಡೆಗೊಂಡ ನಂತರ ಅವರು ಕ್ರಿಕೆಟ್ ಆಡುವುದನ್ನು ಪ್ರಾರಂಭಿಸಿದರು.ಇದು, ಅವರ ಮನೆಯಿಂದ ೩೦ ಕಿಲೋ ಮೀಟರ್ ದೂರದಲ್ಲಿತ್ತು. ಕಾಮಲ್ಡಿಶ್ ಸಿಂಗ್ ಸೋಧಿರವರು, ಹರ್ಮನ್ ಪ್ರೀತ್ ಅವರ ಕೋಚ್ ಆಗಿದ್ದರು. ಹರ್ಮನ್ ತನ್ನ ವೃತ್ತಿ ಜೀವನದ ರಚನೆಯ ದಿನಗಳಲ್ಲಿ ಪುರುಷರೊಂದಿಗೆ ಆಡುತಿದ್ದರು.[] ಅವರು ೨೦೧೪ರಲ್ಲಿ ಮುಂಬಯಲ್ಲಿ, ರೈಲ್ವೆಗೆ ಕೆಲಸ ಮಾಡಲು ಪ್ರಾರಂಭಿಸಿದರು.

ವೃತ್ತಿ ಜೀವನ

[ಬದಲಾಯಿಸಿ]

೨೦೦೯ರ ಮಹಿಳಾ ಕ್ರಿಕೆಟ್ ವಿಶ್ವಕಪ್ನಲ್ಲಿ ಪಾಕಿಸ್ತಾನ್ ಮಹಿಳಾ ತಂಡದ ವಿರುದ್ಧ, ತಮ್ಮ ೨೦ನೇ ವಯಸ್ಸಿಗೆ ಏಕದಿನ ಕ್ರಿಕೆಟಿಗೆ ಪಾದರ್ಪಣೆ ಮಾಡಿದರು.[]. ಈ ಪಂದ್ಯ ಓವಲ್ ಮೈದಾನದಲ್ಲಿ ನಡೆಯಿತು. ಈ ಪಂದ್ಯದಲ್ಲಿ, ಅವರು ೪ ಓವರ್ಗಳನ್ನು ಬೌಲ್ ಮಾಡಿ ೧೦ ಓಟಗಳನ್ನು ನೀಡಿದರು, ಮತ್ತು ಅಮಿತಾ ಶ್ರಾಮ ಹಾಗೂ ಆರ್ಮಾನ್ ಖಾನ್ ಅವರ ಕ್ಯಾಚ್ ಪಡೆದು ಗಮನ ಸೆಳೆದರು. ೨೦೦೯ರಲ್ಲಿ, ಐಸಿಸಿ ಮಹಿಳಾ ವಿಶ್ವ-ಟ್ವೆಂಟಿ-೨೦ಯಲ್ಲಿ ಇಂಗ್ಲೆಂಡ್ ಮಹಿಳಾ ತಂಡದ ಎದುರು ಟೌನ್ಟನ, ಕೌಂಟಿ ಮೈದಾನದಲ್ಲಿ ಪಾದಾರ್ಪಣೆ ಮಾಡಿದರು.ಈ ಪಂದ್ಯದಲ್ಲಿ ಅವರು ೭ ಎಸೆತಗಳಲ್ಲಿ ೮ ರನ್ ಗಳಿಸಿದರು. ೨೦೧೦ರಲ್ಲಿ ಮುಂಬೈನಲ್ಲಿ ನಡೆದ ಟ್ವೆಂಟಿ -೨೦ ಪಂದ್ಯವೊಂದರಲ್ಲಿ ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧ ೩೩ ರನ್ ಗಳಿಸಿದ ನಂತರವೇ ಅವರಿಗೆ ಬಿರುಸಿನ ಆಟ ಆಡಲು ಇದ್ದ ಸಾಮರ್ತ್ಯ ಬೆಳಕಿಗೆ ಬಂದಿತು. ೨೦೧೨ರ ಮಹಿಳಾ ಏಷ್ಯಾ ಕಪ್ ಟ್ವೆಂಟಿ-೨೦ ಫೈನಲ್ಗೆ ಭಾರತದ ಮಹಿಳಾ ತಂಡದ ನಾಯಕರಾಗಿ ಅವರು ಆಯ್ಕೆಗೊಂದಡರು. ಫೈನಲ್ ಪಂದ್ಯಕ್ಕೆ ನಾಯಕಿ ಮಿಥಾಲಿ ರಾಜ್ ಮತ್ತು ಉಪ-ನಾಯಕಿ ಜುಲಾನ್ ಗೋಸ್ವಾಮಿ ಗಾಯಗಳಿಂದಾಗಿ ಹೊರಗುಳಿದರು. ನಾಯಕಿರಯಾಗಿ ಅವರು ಪಾಕಿಸ್ತಾನದ ಮಹಿಳಾ ತಂಡದ ವಿರುದ್ಧ ಪ್ರಥಮ ಪಂದ್ಯವನ್ನು ಆಡಿ, ಪಾಕಿಸ್ತಾನ ತಂಡವನ್ನು ೮೧ ರನ್ಗಳಿಂದ ಸೋಲಿಸಿ ಏಷ್ಯಾ ಕಪ್ ಗೆದ್ದರು. ಮಾರ್ಚ್ ೨೦೧೩ರಲ್ಲಿ, ಬಾಂಗ್ಲಾದೇಶ ಮಹಿಳಾ ಕ್ರಿಕೆಟ್ ತಂಡ ಭಾರತ ಪ್ರವಾಸ ಕೈಗೊಂಡಾಗ ಭಾರತ ಮಹಿಳಾ ಏಕದಿನ ತಂಡದ ನಾಯಕರಾಗಿದ್ದರು. ಸರಣಿಯಲ್ಲಿ, ಕೌರ್ ತನ್ನ ಎರಡನೇ ಏಕದಿನ ಶತಕವನ್ನು ಗಳಿಸಿದರು. ಕೌರ್ ಸರಣಿಯಲ್ಲಿ ೯೭.೫೦ ಸರಾಸರಿಯಲ್ಲಿ ೧೯೫ ರನ್ನುಗೊಳಿಸಿದರು. ಇದರಲ್ಲಿ, ಒಂದು ಅರ್ಧಶತಕವನ್ನು ಮತ್ತು ೨ ವಿಕೆಟ್ಗಳೊಂದಿಗೆ ಮುಗಿಸಿದರು. ನವೆಂಬರ್ ೨೦೧೫ರಲ್ಲಿ ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡ ಮೈಸೂರುನ ಗಂಗೊಥ್ರಿ ಗ್ಲೇಡ್ಸ್ ಕ್ರಿಕೆಟ್ ಮೈದಾನದಲ್ಲಿ ಆಡಿದ ಟೆಸ್ಟ್ ಪಂದ್ಯವೊಂದರಲ್ಲಿ ಅವರು ೯ ವಿಕೆಟ್ಗಳನ್ನು ಪಡೆದರು ಮತ್ತು ಭಾರತವನ್ನು ಇನ್ನಿಂಗ್ಸ್ ಮತ್ತು ೩೪ ರನ್ಗಳಿಂದ ಗೆಲ್ಲಲು ನೆರವಾದರು.

ಜನವರಿ ೨೦೧೬ರಲ್ಲಿ ಅವರು ಆಸ್ಟ್ರೇಲಿಯಾದಲ್ಲಿ ಸರಣಿಯನ್ನು ಗೆಲ್ಲಲು ಭಾರತಕ್ಕೆ ನೆರವಾದರು ಮತ್ತು ಟ್ವೆಂಟಿ-೨೦ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತದ ಅತ್ಯುನ್ನತ ಚೇಸ್ನಲ್ಲಿ ೩೦-ಬಾಲ್ಗಳಲ್ಲಿ ೪೬ ರನ್ಗಳನ್ನು ಗಳಿಸಿದರು. ೨೦೧೬ರ ಐಸಿಸಿ ಮಹಿಳಾ ವಿಶ್ವ ಟ್ವೆಂಟಿ-೨೦ಯಲ್ಲಿ ಅವರು ತಮ್ಮ ಉತ್ತಮ ಪ್ರದರ್ಶನವನ್ನು ಮುಂದುವರಿಸಿದರು, ಅಲ್ಲಿ ಅವರು ೮೯ ರನ್ಗಳನ್ನು ಗಳಿಸಿದರು ಮತ್ತು ನಾಲ್ಕು ಪಂದ್ಯಗಳಲ್ಲಿ ಏಳು ವಿಕೆಟ್ಗಳನ್ನು ಪಡೆದರು. ಜೂನ್ ೨೦೧೬ರಲ್ಲಿ, ಅವರು ವಿದೇಶಿ ಟ್ವೆಂಟಿ-೨೦ ಫ್ರ್ಯಾಂಚೈಸ್ನಿಂದ ಸಹಿ ಹಾಕಿದ ಭಾರತದ ಮೊದಲ ಕ್ರಿಕೆಟಿಗರಾದರು. ಅವರು, ಬಿಗ್-ಬ್ಯಾಶ್ ಲೀಗಿನ ಸಿಡ್ನಿ ಥಂಡರ್ಸ್ ತಂಡದ ಪರ ಆಡಿದರು []. ಮಹಿಳಾ ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲಿ ಭಾರತಕ್ಕೆ ಅತ್ಯಧಿಕ ವೈಯಕ್ತಿಕ ಸ್ಕೋರ್ ದಾಖಲೆಯನ್ನು ಕೌರ್ ಹೊಂದಿದ್ದಾರೆ. ಅವರು, ೨೦೧೭ರ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದದ ೧೭೧ ರನ್ ಮಾಡಿದರು. ೨೦೧೭ರ ಮಹಿಳಾ ಕ್ರಿಕೆಟ್ ವಿಶ್ವಕಪ್ ಫೈನಲ್ ತಲುಪಿದ ಭಾರತ ತಂಡದ ಸದಸ್ಯರಾಗಿದ್ದರು. [] ಡಿಸೆಂಬರ್ ೨೦೧೭ರಲ್ಲಿ, ವರ್ಷದ ಐಸಿಸಿ ಮಹಿಳಾ ಟ್ವೆಂಟಿ-೨೦ ತಂಡದ ಆಟಗಾರರಲ್ಲಿ ಒಬ್ಬರಾಗಿದ್ದಾರೆ.

ಪ್ರಮುಖ ತಂಡಗಳು

[ಬದಲಾಯಿಸಿ]
  • ಭಾರತ ಮಹಿಳಾ ಕ್ರಿಕೆಟ್ ತಂಡ
  • ಸಿಡ್ನಿ ಥಂಡರ್
  • ಲೀಸೆಸ್ಟರ್ಷೈರ್ ಮಹಿಳಾ ಕ್ರಿಕೆಟ್ ತಂಡ

ಉಲ್ಲೇಖ

[ಬದಲಾಯಿಸಿ]
  1. http://www.financialexpress.com/sports/national-sports-awards-centre-unveils-list-cricket-sensation-harmanpreet-kaur-to-receive-arjuna-award/819083/
  2. https://timesofindia.indiatimes.com/sports/cricket/icc-womens-world-cup-2017/playing-with-men-helped-me-develop-six-hitting-skill-harmanpreet-kaur/articleshow/59774224.cm
  3. https://cricketarchive.com/Archive/Players/313/313875/313875.html
  4. http://www.espncricinfo.com/story/_/id/19651150/aggression-my-genes
  5. http://indianexpress.com/article/sports/cricket/icc-womens-world-cup-back-home-moga-star-harmanpreet-kaur-gets-mega-welcome-4774978/