ಸತ್ಯ ಮೇವ ಜಯತೇ

ವಿಕಿಪೀಡಿಯ ಇಂದ
Jump to navigation Jump to search
ಟಿ.ವಿ. ಧಾರಾವಾಹಿ ಸತ್ಯಮೇವ ಜಯತೇ ಬಗ್ಗೆ ಮಾಹಿತಿಗೆ ಈ ಲೇಖನ ನೋಡಿ.

"ಸತ್ಯಮೇವ ಜಯತೇ" ( सत्यमेव जयते; ಅಂದರೆ ಸತ್ಯವೊಂದೇ ಸದಾ ಗೆಲ್ಲುತ್ತದೆ ) ಇದು ಪ್ರಾಚೀನ ಭಾರತೀಯ ಗ್ರಂಥ ಮುಂಡಕ ಉಪನಿಷತ್ತಿನಲ್ಲಿನ ಒಂದು ಮಂತ್ರ .[೧]. ಭಾರತ ದೇಶವು ಸ್ವಾತಂತ್ರ್ಯ ಪಡೆದಾಗ, ಇದನ್ನು ಭಾರತದ ರಾಷ್ಟ್ರೀಯ ಧ್ಯೇಯ ವಾಕ್ಯವನ್ನಾಗಿ ಅಳವಡಿಸಿಕೊಂಡಿತು. [೨]. ರಾಷ್ಟ್ರೀಯ ಲಾಂಛನದ ತಳಭಾಗದಲ್ಲಿ ದೇವನಾಗರಿ ಲಿಪಿಯಲ್ಲಿ ಇದನ್ನು ಕೆತ್ತಲಾಗಿದೆ. ಲಾಂಛನ ಮತ್ತು "ಸತ್ಯಮೇವ ಜಯತೇ" ಪದಗಳನ್ನು ಎಲ್ಲಾ ಭಾರತೀಯ ನಾಣ್ಯ ಮತ್ತು ನಗದು ನೋಟುಗಳಲ್ಲಿ ಅಚ್ಚು ಮಾಡಲಾಗುತ್ತದೆ. ಭಾರತದ ಉತ್ತರ ಪ್ರದೇಶ ರಾಜ್ಯದ ವಾರಣಾಸಿ ಸಮೀಪದ ಸಾರಾನಾಥದಲ್ಲಿ ಕ್ರಿ.ಪೂ. ೨೫೦ ರ ಸುಮಾರಿನಲ್ಲಿ ನಿಲ್ಲಿಸಲಾದ ಅಶೋಕ ಸ್ತಂಭದಲ್ಲಿರುವ ಸಿಂಹಲಾಂಛನದ ರೂಪಾಂತರ ಈ ವಾಕ್ಯವಾಗಿದೆ.

ಮೂಲ[ಬದಲಾಯಿಸಿ]

ಈ ಧ್ಯೇಯವಾಕ್ಯದ ಮೂಲವು ಮಂಡೂಕ ಉಪನಿಷತ್ತಿನ ಪ್ರಸಿದ್ಧ ಮಂತ್ರ 3.1.6 ಆಗಿದೆ. ಆ ಮಂತ್ರದ ಲಿಪ್ಯಂತರ ಈ ಕೆಳಗಿನಂತೆ ಇದೆ.

ಸತ್ಯಮೇವ ಜಯತೆ ನಾನೃತಂ
ಸತ್ಯೇನ ಪಂಥಾ ವಿತತೋ ದೇವಯಾನಃ
ಯೇನಾಕ್ರಮಂತಿ ಋಷಯೋ ಹ್ಯಾಪ್ತಕಾಮಾ
ಯತ್ರ ತತ್ ಸತ್ಯಸ್ಯ ಪರಮಂ ನಿಧಾನಂ
[೩]

ದೇವನಾಗರಿ ಲಿಪಿಯಲ್ಲಿ

सत्यमेव जयते नानृतं
सत्येन पन्था विततो देवयानः ।
येनाक्रमन्त्यृषयो ह्याप्तकामा
यत्र तत् सत्यस्य परमं निधानम् ॥६॥

ಕನ್ನಡದಲ್ಲಿ ಅರ್ಥ

ಸತ್ಯ ಮಾತ್ರ ಗೆಲ್ಲುವುದು ಸುಳ್ಳುತನ ಅಲ್ಲ
ಯಾವುದರ ಮೂಲಕ ಆಸೆಗಳನ್ನು ಸಂಪೂರ್ಣವಾಗಿ ಗೆದ್ದ ಋಷಿಗಳು ನಡೆದು
ಸತ್ಯದ ಪರಮ ನಿಧಿಯನ್ನು ಹೊಂದುವರೋ
ಆ ದೈವಿಕ ಪಥವು ಸತ್ಯದ ಮೂಲಕವೇ ಸಾಗುವುದು
ಸತ್ಯದಲ್ಲಿ ಪರಮಾತ್ಮನ ನಿಧಿ ವಾಸಿಸುತ್ತದೆ.[೪]

ಈ ಘೋಷಣಾ ವಾಕ್ಯವನ್ನು ೧೯೧೮ ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಪಂಡಿತ್ ಮದನ ಮೋಹನ ಮಾಳವೀಯರು ಜನಪ್ರಿಯಗೊಳಿಸಿದರು .[೫]

ಉಲ್ಲೇಖಗಳು[ಬದಲಾಯಿಸಿ]

  1. "Hindus laud Mick Jagger for singing in Sanskrit - Times Of India". Timesofindia.indiatimes.com. 2011-08-12. Retrieved 2012-05-23.
  2. Department related parliamentary standing committee on home affairs (2005-08-25). "One hundred and sixteenth report on the state emblem of India (Prohibition of improper use) Bill, 2004". New Delhi: Rajya Sabha Secretariat, New Delhi: 6.11.1. Retrieved 2008-09-26. Cite journal requires |journal= (help)
  3. Sanskrit Documents. "muṇḍakopaniṣat" (PDF).
  4. Swami Krishnananda. "The Mundaka Upanishad:Third Mundaka, First Khanda".
  5. nic.in/indiaculture /pdf /Final%20Minutes_MMM-26july,%202011.pdf "Minutes of the first meeting of the National Committee for Commemoration of 150th Birth Anniversary of Mahamana Pandit Madan Mohan Malaviya 26 July 2011 at 6.00 pm - 7, Race Course Road, New Delhi" Check |url= value (help) (PDF).