ವಿಷಯಕ್ಕೆ ಹೋಗು

ಸತ್ಯವತಿ ರಾಥೋಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸತ್ಯವತಿ ರಾಥೋಡ್
೨೦೧೯ರ ಸಾಕ್ಷಿ ಟಿವಿಯ ಸಂದರ್ಶನದಲ್ಲಿ ಸತ್ಯವತಿ ರಾಥೋಡರು

ಪರಿಶಿಷ್ಟ ಪಂಗಡಗಳ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು
ಹಾಲಿ
ಅಧಿಕಾರ ಸ್ವೀಕಾರ 
೮ ಸೆಪ್ಟಂಬರ್ ೨೦೧೯
ಪೂರ್ವಾಧಿಕಾರಿ ಅಜ್ಮೀರಾ ಅಬ್ದುಲ್ಲಾ
ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್

ತೆಲಂಗಾಣ ವಿಧಾನ ಪರಿಷತ್ ಸದಸ್ಯರು
ಹಾಲಿ
ಅಧಿಕಾರ ಸ್ವೀಕಾರ 
೧೨ ಮಾರ್ಚ್ ೨೦೧೯
ಮತಕ್ಷೇತ್ರ ರಾಜ್ಯ ವಿಧಾನಪರಿಷತ್ತು

ಆಂಧ್ರಪ್ರದೇಶ ವಿಧಾನಸಭಾ ಸದಸ್ಯರು
ಅಧಿಕಾರ ಅವಧಿ
೨೦೦೯ – ೨೦೧೪
ಮತಕ್ಷೇತ್ರ ಡೊರ್ನಾಕಲ್ ವಿಧಾನಸಭಾ ಕ್ಷೇತ್ರ (ಪರಿಶಿಷ್ಟ ಪಂಗಡ)
ವೈಯಕ್ತಿಕ ಮಾಹಿತಿ
ಜನನ (1969-10-31) ೩೧ ಅಕ್ಟೋಬರ್ ೧೯೬೯ (ವಯಸ್ಸು ೫೫)
ಗುಂಡ್ರಾತಿಮಡುಗು
ರಾಜಕೀಯ ಪಕ್ಷ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷ
ಇತರೆ ರಾಜಕೀಯ
ಸಂಲಗ್ನತೆಗಳು
ತೆಲುಗು ದೇಶಂ ಪಕ್ಷ (೧೯೮೯–೨೦೧೪)
ಸಂಗಾತಿ(ಗಳು) ಗೋವಿಂದ ರಾಥೋಡ್
ಮಕ್ಕಳು
ವಾಸಸ್ಥಾನ ಹೈದರಾಬಾದ್

ಸತ್ಯವತಿ ರಾಥೋಡ್ (ಜನನ ೩೧ ಅಕ್ಟೋಬರ್ ೧೯೬೯) ಒಬ್ಬ ಭಾರತೀಯ ರಾಜಕಾರಣಿಯಾಗಿದ್ದು, ೨೦೧೯ ರಿಂದ ತೆಲಂಗಾಣದ ಬುಡಕಟ್ಟು ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.[] ಇವರು ತೆಲಂಗಾಣದಲ್ಲಿ ಸಚಿವೆಯಾಗಿ ಸೇವೆ ಸಲ್ಲಿಸಿದ ಮೊದಲ ಬುಡಕಟ್ಟು ಮಹಿಳೆ ಎನಿಸಿದ್ದಾರೆ. ಅವರು ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದಿಂದ ವಿಧಾನ ಪರಿಷತ್ತಿನ ಸದಸ್ಯರಾಗಿದ್ದಾರೆ . ರಾಥೋಡ್ ಅವರು ಈ ಹಿಂದೆ ತೆಲುಗು ದೇಶಂ ಪಕ್ಷದಿಂದ ೨೦೦೯ ರಲ್ಲಿ ಆಂಧ್ರ ಪ್ರದೇಶ ವಿಧಾನಸಭೆಯಲ್ಲಿ ಡೋರ್ನಕಲ್ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ಆರಂಭಿಕ ಮತ್ತು ವೈಯಕ್ತಿಕ ಜೀವನ

[ಬದಲಾಯಿಸಿ]

ಸತ್ಯವತಿ ರಾಥೋಡ್ ಅವರು ೧ ಅಕ್ಟೋಬರ್ ೧೯೬೯ ರಂದು ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯ ಕುರವಿ ಮಂಡಲದ ಪೆದ್ದ ತಾಂಡಾ ಕುಗ್ರಾಮದಲ್ಲಿ (ಆ ಸಮಯದಲ್ಲಿ ಆಂಧ್ರಪ್ರದೇಶದ ಭಾಗವಾಗಿತ್ತು) ಜನಿಸಿದರು. ಐದು ಒಡಹುಟ್ಟಿದವರಲ್ಲಿ ಇವರು ಕಿರಿಯರಾಗಿದ್ದಾರೆ, ಇವರ ಪೋಷಕರು ಲಿಂಗ್ಯಾ ನಾಯ್ಕ್ ಮತ್ತು ದಾಸ್ಮಿ ಬಾಯಿ. [] []

೮ನೇ ತರಗತಿಯ ನಂತರ ಸತ್ಯವತಿ ರಾಥೋಡ್ ಶಾಲೆಯನ್ನು ತೊರೆದು ಗೋವಿಂದ್ ರಾಥೋಡ್ ಅವರನ್ನು ವಿವಾಹವಾದರು. [] ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. [] ಜುಲೈ ೨೦೦೯ ರಲ್ಲಿ ರಸ್ತೆ ಅಪಘಾತದಲ್ಲಿ ಗೋವಿಂದ ರಾಥೋಡ್ ನಿಧನರಾದರು []

ನಂತರ ಸತ್ಯವತಿಯವರು ಮುಕ್ತ ವಿಶ್ವವಿದ್ಯಾಲಯವೊಂದರಿಂದ ಪದವಿ ಪಡೆದರು. []

ವೃತ್ತಿ ಜೀವನ

[ಬದಲಾಯಿಸಿ]

ಸತ್ಯವತಿಯವರು ತನ್ನ ರಾಜಕೀಯ ಜೀವನವನ್ನು ೧೯೮೯ ರಲ್ಲಿ ಪ್ರಾರಂಭಿಸಿದರು. ಅವರು ತೆಲುಗು ದೇಶಂ ಪಕ್ಷಕ್ಕೆ ಸೇರಿದರು ಮತ್ತು ಅದೇ ವರ್ಷ ಡೋರ್ನಕಲ್ ಕ್ಷೇತ್ರದಿಂದ ಸ್ಪರ್ಧಿಸಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿ ರೆಡ್ಯಾ ನಾಯ್ಕ ಅವರ ವಿರುದ್ಧ ಸೋತರು. ೧೯೯೫ ರಲ್ಲಿ ಗುಂಡ್ರಾತಿಮಡುಗು ಪಂಚಾಯಿತಿಯ ಅಧ್ಯಕ್ಷರಾಗಿ ಆಯ್ಕೆಯಾದರು. ನಂತರ ೨೦೦೬ ರಲ್ಲಿ, ಅವರು ನರಸಿಂಹುಲಪೇಟೆಯ ಜಿಲ್ಲಾ ಪರಿಷತ್ತು ಚುನಾವಣೆಯಲ್ಲಿ ವಿಜೇತರಾದರು. []

೨೦೦೯ ರ ಆಂಧ್ರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ರಾಥೋಡರು ಡೋರ್ನಕಲ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. [] ಮಾರ್ಚ್ ೨೦೧೪ ರಲ್ಲಿ, ಅವರು ತೆಲುಗು ದೇಶಂ ಪಕ್ಷವನ್ನು ತೊರೆದರು ತೆಲಂಗಾಣ ರಾಷ್ಟ್ರ ಸಮಿತಿಗೆ ಪಕ್ಷಕ್ಕೆ ಸೇರಿದರು. [] ಅವರು ಆಂಧ್ರ ಮತ್ತು ತೆಲಂಗಾಣ ವಿಧಾನ ಸಭೆ ಚುನಾವಣೆಗಳು ೨೦೧೪ ರಲ್ಲಿ ಅದೇ ಸ್ಥಾನದಿಂದ ಮತ್ತೆ ಸ್ಪರ್ಧಿಸಿದರು, ಮತ್ತೆ ಕಾಂಗ್ರೆಸ್‌ನ ರೆಡ್ಯಾ ನಾಯ್ಕರ ವಿರುದ್ಧ ಸೋತರು. [] ೨೦೧೮ ರ ವಿಧಾನಸಭಾ ಚುನಾವಣೆಯಲ್ಲಿ ಅವರು ಸ್ಪರ್ಧಿಸಲಿಲ್ಲ. []

ಮಾರ್ಚ್ ೨೦೧೯ ರಲ್ಲಿ, ಅವರು ತೆಲಂಗಾಣ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದರು. [] ಸೆಪ್ಟೆಂಬರ್ ೨೦೧೯ ರಲ್ಲಿ, ರಾಥೋಡ್ ಅವರು ಕೆ. ಚಂದ್ರಶೇಖರ ರಾವ್ ಅವರ ಎರಡನೇ ಕ್ಯಾಬಿನೆಟ್ನಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. [೧೦] ಅವರು ತೆಲಂಗಾಣದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ ಪರಿಶಿಷ್ಟ ಪಂಗಡದ ಮೊದಲ ಮಹಿಳೆಯಾಗಿದ್ದಾರೆ. []

ಉಲ್ಲೇಖಗಳು

[ಬದಲಾಯಿಸಿ]
  1. "Telangana State Portal Council of Ministers (Present)". Government of Telangana. Retrieved 8 ಮಾರ್ಚ್ 2021.
  2. "Telangana CM Chandrasekhar Rao to present Budget in Assembly". The New Indian Express. 3 ಸೆಪ್ಟೆಂಬರ್ 2019. Retrieved 8 ಮಾರ್ಚ್ 2021.
  3. Mahender, Adepu (9 ಸೆಪ್ಟೆಂಬರ್ 2019). "A dropout who scripted her destiny". The Hans India. Retrieved 8 ಮಾರ್ಚ್ 2021.
  4. ೪.೦ ೪.೧ ೪.೨ ೪.೩ ೪.೪ Mahender, Adepu (9 ಸೆಪ್ಟೆಂಬರ್ 2019). "A dropout who scripted her destiny". The Hans India. Retrieved 8 ಮಾರ್ಚ್ 2021.Mahender, Adepu (9 September 2019). "A dropout who scripted her destiny". The Hans India. Retrieved 8 March 2021.
  5. "Dornakal MLA's husband dies in bike 'accident'". The New Indian Express. 21 ಜುಲೈ 2009. Retrieved 8 ಮಾರ್ಚ್ 2021.
  6. ೬.೦ ೬.೧ "Dornakal (ST) Assembly constituency profile". Telangana Today. 6 ಅಕ್ಟೋಬರ್ 2018. Retrieved 8 ಮಾರ್ಚ್ 2021.
  7. "Telangana: KCR rejects merger with the Congress". Deccan Chronicle. 4 ಮಾರ್ಚ್ 2014. Retrieved 8 ಮಾರ್ಚ್ 2021.
  8. "TRS nominates 4 candidates for upcoming MLC polls, offers one seat to AIMIM". The News Minute. 23 ಫೆಬ್ರವರಿ 2019. Retrieved 9 ಮಾರ್ಚ್ 2019.
  9. "Telangana Home Minister among 5 elected to Council". Outlook India. 12 ಮಾರ್ಚ್ 2019. Retrieved 8 ಮಾರ್ಚ್ 2021.
  10. Apparasu, Srinivasa Rao (8 ಸೆಪ್ಟೆಂಬರ್ 2019). "KCR expands cabinet with 6 ministers; re-inducts son KTR, nephew Harish Rao". Hindustan Times. Retrieved 8 ಮಾರ್ಚ್ 2021.


ಬಾಹ್ಯ ಕೊಂಡಿಗಳು

[ಬದಲಾಯಿಸಿ]