ಆಂಧ್ರ ಮತ್ತು ತೆಲಂಗಾಣ ವಿಧಾನ ಸಭೆ ಚುನಾವಣೆಗಳು ೨೦೧೪

ವಿಕಿಪೀಡಿಯ ಇಂದ
Jump to navigation Jump to search
ಆಂಧ್ರ ಪ್ರದೇಶ ಭಾರತದಲ್ಲಿ (ವಿವಾದಿತ- ವಿಭಜನೆಗೆ ಮೊದಲು)

ಆಂಧ್ರದ ಪುನರ್ಸಂಘಟನೆ[ಬದಲಾಯಿಸಿ]

ಆಂಧ್ರ ಪ್ರದೇಶ ರಾಜ್ಯದಲ್ಲಿ ತೆಲಂಗಾಣ ಪ್ರದೇಶವನ್ನು ಬಿಳಿ ಬಣ್ಣದಲ್ಲಿ ಗುರುತಿಸಲಾಗಿದೆ
 • ದಿ. ಜೂನ್ ೨, ೨೦೧೪,ರಂದು ಆಂಧ್ರ ಪ್ರದೇಶ ರಾಜ್ಯವು ಎರಡು ಭಾಗವಾಗಿ ಒಡೆದು, ಎರಡು ರಾಜ್ಯವಾಯಿತು. ಅವು ತೆಲಣಗಾಣ ಮತ್ತು ಸೀಮಾಂಧ್ರ (ಆಂಧ್ರ).[೧] ದೇಶದ 29ನೇ ರಾಜ್ಯವಾಗಿ ತೆಲಂಗಾಣ ಉದಯವಾಗಿದ್ದು, ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ ಕಲ್ವಕುಂಟ್ಲ ಚಂದ್ರಶೇಖರ ರಾವ್‌ ಅಧಿಕಾರ ಸ್ವೀಕರಿಸಿದರು[೨]ಹಿಂದಿನ ಆಂಧ್ರದ 294 ಸದಸ್ಯರುಳ್ಳ ವಿಧಾನಸಭೆಯು ವಿಭಜಿತವಾದ ನಂತರ ಹೊಸದಾಗಿ ಉದಯವಾದ ತೆಲಂಗಾಣದಲ್ಲ ೧೧೯ ಶಾಸಕರಿದ್ದಾರೆ. ಹಿಂದಿನ ಆಂಧ್ರದ ೪೨ ಲೋಕಸಭಾ ಕ್ಷೇತ್ರಗಳ ಪೈಕಿ ೧೭ ಕ್ಷೇತ್ರಗಳು ತೆಲಂಗಾಣ ವ್ಯಾಪ್ತಿಯಲ್ಲಿವೆ. 2014 ಹದಿನಾಲ್ಕನೆಯ ವಿಧಾನಸಭೆಯಲ್ಲಿ ನರ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿದ್ದು ಉಳಿದ ಒಟ್ಟು.175 ಶಾಸನ ಸಭಾಸದಸ್ಯರಿದ್ದಾರೆ.
 • ಆಂಧ್ರಪ್ರದೇಶ ವಿಧಾನಸಭೆಗೆ ಆಯ್ಕೆಯಾದ ಶಾಸಕರ ಸಾರಾಂಶ: 2014 ಆಂಧ್ರ ಪ್ರದೇಶ ಚುನಾವಣೆ:: ತೆಲುಗು ದೇಶಂ ಪಕ್ಷ (ಟಿಡಿಪಿ) 103;ವೈಎಸ್ಆರ್ ಕಾಂಗ್ರೆಸ್ ಪಕ್ಷ (ವೈಎಸ್ಆರ್ಸಿಪಿ) 66;ಭಾರತೀಯ ಜನತಾ ಪಕ್ಷ (ಬಿಜೆಪಿ) 4;ಸ್ವತಂತ್ರರು (ಭಾರತ) 1;ನವಡಾಯಂ ಪಾರ್ಟಿ (ಎನ್ಪಿಸಿ) 1;ಒಟ್ಟು 175.
 • ತೆಲಂಗಾಣ ವಿಧಾನಸಭೆಗೆ ಆಯ್ಕೆಯಾದ ಶಾಸಕರ ಸಾರಾಂಶ:;ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) 63;ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) 21;ತೆಲುಗು ದೇಶಂ ಪಕ್ಷ (ಟಿಡಿಪಿ) 15;ಅಖಿಲ ಭಾರತ ಮಜ್ಲಿಸ್ ಇ ಇತೇಹದುಲ್ ಮುಸಲ್ಮಿನ್ (AIMIM) 7;ಭಾರತೀಯ ಜನತಾ ಪಕ್ಷ (ಬಿಜೆಪಿ) 5;ವೈಎಸ್ಆರ್ ಕಾಂಗ್ರೆಸ್ ಪಕ್ಷ (ವೈಎಸ್ಆರ್ಸಿಪಿ) 3;ಬಹುಜನ ಸಮಾಜ ಪಕ್ಷ (ಬಿಎಸ್ಪಿ) 2;ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) 1;ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್) (ಸಿಪಿಎಂ) 1ಸ್ವತಂತ್ರರು (ಭಾರತ) 1;ಒಟ್ಟು 119.ತೆಲಂಗಾಣ ಹೊಸ ರಾಜ್ಯದಲ್ಲಿ ಕೆ. ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ ಗೆದ್ದು, ಕೆ. ಚಂದ್ರಶೇಖರ್ ರಾವ್ ಅವರೇ ಮುಖ್ಯಮಂತ್ರಿಯಾಗಿದ್ದಾರೆ.[೩]

ಹಿನ್ನೆಲೆ[ಬದಲಾಯಿಸಿ]

ದಿ.3 ಅಕ್ಟೋಬರ್ 2013 ರಂದು, ಭಾರತದ ಕೇಂದ್ರ ಸಚಿವ ಸಂಪುಟವು ಹೊಸ ರಾಜ್ಯ ತೆಲಂಗಾಣ ರಚನೆಗೆ ಅನುಮೋದನೆ ನೀಡಿತು. 2014 ರ ಜೂನ್ 2 ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಆಂಧ್ರಪ್ರದೇಶದಿಂದ ತೆಲಂಗಾಣ ವಿಭಜನೆಯನ್ನು ಕ್ರಮಬದ್ಧಗೊಳಿಸಿದ ಗೆಜೆಟ್ ಅಧಿಸೂಚನೆ ಹೊರಡಿಸಿದರು. [೪]

ಚುನಾವಣೆ[ಬದಲಾಯಿಸಿ]

 • ಚುನಾವಣೆ 7 ನೇ ಮತ್ತು 8 ನೇ ಹಂತದ 2014 ಸಾರ್ವತ್ರಿಕ ಚುನಾವಣೆಯ ಜೊತೆಗೆ ಎರಡು ಹಂತಗಳಲ್ಲಿ ನಡೆಯಿತು, ಇದು ಏಪ್ರಿಲ್ 30 ರಂದು ತೆಲಂಗಾಣದಲ್ಲಿ ಮತ್ತು ಮೇ 7 ರಂದು ಆಂಧ್ರ ಪ್ರದೇಶದ ಉಳಿದ ಭಾಗದಲ್ಲಿ ನಡೆಯಿತು.[೫]

ಆಂದ್ರ ಪ್ರದೇಶ ಮತ್ತು ತೆಲಂಗಾಣ ವಿಧಾನಸಭೆ[ಬದಲಾಯಿಸಿ]

 • ಆಂಧ್ರ ಪ್ರದೇಶ ಚುನಾವಣೆ -2014
 • ಶ್ರೀ ನಾರಾ ಚಂದ್ರಬಾಬು ನಾಯಿಡು -ಮಾನ್ಯ ಮುಖ್ಯ ಮಂತ್ರಿ.
 • ತೆಲುಗು ದೇಶಂ ಪಕ್ಷ (ಟಿಡಿಪಿ) 101;ವೈಎಸ್ಆರ್ ಕಾಂಗ್ರೆಸ್ ಪಕ್ಷ (ವೈಎಸ್ಆರ್ಸಿಪಿ) 66;ಭಾರತೀಯ ಜನತಾ ಪಕ್ಷ (ಬಿಜೆಪಿ) 4;ಸ್ವತಂತ್ರರು (ಭಾರತ) 1;ನವಡಾಯಂ ಪಾರ್ಟಿ (ಎನ್ಪಿಸಿ) 1;ಒಟ್ಟು 175.

ಆಂಧ್ರದ ಲೋಕಸಭೆ ಚುನಾವಣೆ ೨೦೧೪[ಬದಲಾಯಿಸಿ]

ವಿಭಜನೆ ಪೂರ್ವ ಆಂಧ್ರದ ಲೋಕಸಭಾ ಸದಸ್ಯರು

ಪಕ್ಷ ಸ್ಥಾನ
ಕಾಂಗ್ರೆಸ್/INC 2
ತೆಲಗುದೇಶಂ ಪಾರ್ಟಿ(TDP) 16
ವೈ.ಎಸ್.ಆರ್. ಕಾಂಗ್ರೆಸ್ YSR Congress 9
ಟಿ.ಆರ್. ಎಸ್.(TRS) 11
ಬಿ.ಜೆ.ಪಿ.(BJP) 3
ಆಲ್ ಇಂಡಿಯಾ ಮುಸ್ಲಿಮ್,ಎಮ್.(AIMIM ) 1
ಎಲ್.ಎಸ್.ಪಿ.(LSP) 0
(ಸಿ.ಪಿ.ಐ.(CPI) 0
ಸಿ.ಪಿ.ಐ.-ಎಂ.(CPI-M) 0
ಆಮ್ ಆದ್ಮಿ ಪಾರ್ಟಿ(AAP) 0
ಒಟ್ಟು 42
ಹೊಸ ಆಂಧ್ರಪ್ರದೇಶ:
ವಿಭಜಿತ ಆಂಧ್ರ -25 ಲೋಕಸಭೆ
ತೆಲಗುದೇಶಂ ಪಾರ್ಟಿ 15
ವೈಎಸ್‍ಆರ್ ಚಿಪಿ 3
ಬಿಜೆಪಿ 2
ಖಾಲಿ (5)
ತೆಲಂಗಾಣ ಲೋಕಸಭೆ ಸ್ಥಾನಗಳು
ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿ. ಆರ್ ಎಸ್) 11
ಕಾಂಗ್ರೆಸ್ 4
ಇತರೆ 2
ಒಟ್ಟು 17

[೬]

ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

 1. ದಿ. ಜೂನ್ ೨, ೨೦೧೪, ೧೧.೧೦AM IST (ವಿಜಯ ಕರ್ನಾಟಕ)
 2. "India's 29th state Telangana is born, K Chandrashekar Rao to be its 1st CM". ibnlive.in.com/news. 2014-06-02. Retrieved 2015-03-23.
 3. http://eci.nic.in/eci_main/StatisticalReports/AE2014/Stat-Report-Andhra-Pradesh2014.pdf
 4. Home Ministry, Govt. of India. Archived from the original on 4 October 2013. Retrieved 23 December 2014.
 5. "ECI-ElectionSchedule".
 6. ಭಾರತದ ಚುನಾವಣಾ ಆಯೋಗ.