ಜಿಲ್ಲಾ ಪರಿಷತ್ತು( ಭಾರತ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

 

ಜಿಲ್ಲಾ ಪಂಚಾಯತ್ ಅಥವಾ ಜಿಲ್ಲಾ ಅಭಿವೃದ್ಧಿ ಮಂಡಳಿ ಅಥವಾ ಮಂಡಲ ಪರಿಷತ್ ಅಥವಾ ಜಿಲ್ಲಾ ಪಂಚಾಯತ್ ಪಂಚಾಯತ್ ರಾಜ್ ವ್ಯವಸ್ಥೆಯ ಮೂರನೇ ಹಂತವಾಗಿದೆ ಮತ್ತು ಎಲ್ಲಾ ರಾಜ್ಯಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತದೆ. [೧] ಜಿಲ್ಲಾ ಪರಿಷತ್ತು ಚುನಾಯಿತ ಸಂಸ್ಥೆಯಾಗಿದೆ. ಬ್ಲಾಕ್ ಪಂಚಾಯತ್‌ನ ಬ್ಲಾಕ್ ಪ್ರಮುಖರು ಜಿಲ್ಲಾ ಪರಿಷತ್ತಿನಲ್ಲೂ ಪ್ರತಿನಿಧಿಸುತ್ತಾರೆ. ರಾಜ್ಯ ವಿಧಾನಮಂಡಲದ ಸದಸ್ಯರು ಮತ್ತು ಭಾರತದ ಸಂಸತ್ತಿನ ಸದಸ್ಯರು ಜಿಲ್ಲಾ ಪರಿಷತ್ತಿನ ಸದಸ್ಯರಾಗಿದ್ದಾರೆ. ಜಿಲ್ಲಾ ಪರಿಷತ್ತು ಪಂಚಾಯತ್ ರಾಜ್ ವ್ಯವಸ್ಥೆಯ ಉನ್ನತ ಶ್ರೇಣಿಯಾಗಿದೆ ಮತ್ತು ರಾಜ್ಯ ಸರ್ಕಾರ ಮತ್ತು ಗ್ರಾಮ ಮಟ್ಟದ ಗ್ರಾಮ ಪಂಚಾಯತ್ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ.

ಜಿಲ್ಲಾ ಪರಿಷತ್ತು ಎಂಬುದು ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಪಂಚಾಯತ್ ಆಗಿದ್ದು, ಗ್ರಾಮ ಪಂಚಾಯತ್‌ವು ಗ್ರಾಮೀಣ ಮಟ್ಟದ ಪಂಚಾಯತ್ ರಾಜ್ ಸಂಸ್ಥೆಗಳ ಮೂಲ ಘಟಕವಾಗಿದೆ.

೭೩ ನೇ ತಿದ್ದುಪಡಿಯು ಸರ್ಕಾರಗಳ ಕುರಿತಾಗಿದ್ದು ಇವುಗಳನ್ನು ಪಂಚಾಯತ್ ರಾಜ್ ಸಂಸ್ಥೆಗಳು ಎಂದೂ ಕರೆಯಲಾಗುತ್ತದೆ. [೧]

  • ಜಿಲ್ಲಾ ಮಟ್ಟದಲ್ಲಿ ಪಂಚಾಯತ್
  • ಮಧ್ಯಂತರ ಮಟ್ಟದಲ್ಲಿ ಪಂಚಾಯತ್
  • ಮೂಲ ಮಟ್ಟದಲ್ಲಿ ಪಂಚಾಯತ್

ಸಂಯೋಜನೆ[ಬದಲಾಯಿಸಿ]

ಭಾರತದ ಆಡಳಿತ ರಚನೆ

ಜಿಲ್ಲೆಯ ಎಲ್ಲಾ ಪಂಚಾಯತ್ ಸಮಿತಿಗಳ ಅಧ್ಯಕ್ಷರು ಜಿಲ್ಲಾ ಪರಿಷತ್ತಿನ ಪದನಿಮಿತ್ತ ಸದಸ್ಯರಾಗಿರುತ್ತಾರೆ ಮತ್ತು ಈ ಪರಿಷತ್ತಿನ ಮೇಲ್ವಿಚಾರಣೆಯನ್ನು ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ನಿರ್ವಹಿಸುತ್ತಾರೆ. ಜಿಲ್ಲಾ ಮಟ್ಟದಲ್ಲಿ ಸಾಮಾನ್ಯ ಆಡಳಿತ ಇಲಾಖೆಯ ಉಪ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯು ಜಿಲ್ಲಾ ಪರಿಷತ್ತಿನ ಪದನಿಮಿತ್ತ ಕಾರ್ಯದರ್ಶಿಯಾಗಿರುತ್ತಾರೆ.

ಐಎ‌ಎಸ್ ಅಧಿಕಾರಿ ಅಥವಾ ಹಿರಿಯ ರಾಜ್ಯ ಸೇವಾ ಅಧಿಕಾರಿಯಾಗಿರುವ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯು ಜಿಲ್ಲಾ ಪರಿಷತ್ತಿನ ಆಡಳಿತಾತ್ಮಕ ವ್ಯವಸ್ಥೆಯ ಮುಖ್ಯಸ್ಥರಾಗಿರುತ್ತಾರೆ. ಅವನು/ ಅವಳು ಪರಿಷತ್ತಿನ ವಿಭಾಗಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ. ಜಿಲ್ಲಾ ಮತ್ತು ಬ್ಲಾಕ್ ಮಟ್ಟದ ಅಧಿಕಾರಿಗಳಲ್ಲಿ ಉಪ- ಸಿಇಒಗಳು ಮತ್ತು ಇತರ ಅಧಿಕಾರಿಗಳು ಸಹಾಯ ಮಾಡುತ್ತಾರೆ.

ಆಡಳಿತ ರಚನೆ[ಬದಲಾಯಿಸಿ]

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿ‌ಇಒ) , ಇವರು ಐಎ‌ಎಸ್ ಅಥವಾ ರಾಜ್ಯ ಆಡಳಿತ ಸೇವಾ ಕೇಡರ್ ಅಡಿಯಲ್ಲಿ ನಾಗರಿಕ ಸೇವಕರಾಗಿರುತ್ತರೆ. ಅಲ್ಲದೆ ಇವರು ಜಿಲ್ಲಾ ಪರಿಷತ್ತಿನ ಆಡಳಿತ ಯಂತ್ರದ ಮುಖ್ಯಸ್ಥರಾಗಿರುತ್ತಾರೆ. [೨] ಹಾಗೆಯೇ ಇವರು ಸರ್ಕಾರದಿಂದ ನಾಮನಿರ್ದೇಶನಗೊಂಡಿರುತ್ತಾರೆ. ಕೆಲವು ರಾಜ್ಯಗಳಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿದ್ದೂ, ಪರಿಷತ್ತಿನ ವಿಭಾಗಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ಅದರ ಅಭಿವೃದ್ಧಿಯ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಾರೆ.

ಕಾರ್ಯ[ಬದಲಾಯಿಸಿ]

  1. ಜಿಲ್ಲಾ ಪರಿಷತ್ತು ಒಂದು ಅಧಿಕೃತ ಸಂಸ್ಥೆಯಾಗಿದ್ದು, ಸಣ್ಣ ನೀರಾವರಿ ಕೆಲಸಗಳು, ವೃತ್ತಿಪರ ಮತ್ತು ಕೈಗಾರಿಕಾ ಶಾಲೆಗಳು, ಗ್ರಾಮ ಕೈಗಾರಿಕೆಗಳು, ನೈರ್ಮಲ್ಯ ಮತ್ತು ಸಾರ್ವಜನಿಕ ಆರೋಗ್ಯದಂತಹ ಎಲ್ಲಾ ಅಭಿವೃದ್ಧಿ ಚಟುವಟಿಕೆಗಳಲ್ಲಿ ಪಂಚಾಯತ್‌ಗಳ ಚಟುವಟಿಕೆಗಳನ್ನು ಸಂಘಟಿಸುತ್ತದೆ.[೩]
  2. ಇದು ತನ್ನ ಮೇಲ್ವಿಚಾರಣೆಯಲ್ಲಿರುವ ಗ್ರಾಮ ಪಂಚಾಯತ್‌ ಮತ್ತು ಪಂಚಾಯತ್ ಸಮಿತಿಗಳಿಗೆ ಮತ್ತು ಅದರಲ್ಲಿ ವಾಸಿಸುವ ಗ್ರಾಮೀಣ ಜನಸಂಖ್ಯೆಯ ಅಗತ್ಯತೆಗಳಿಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಕುರಿತು ರಾಜ್ಯ ಸರ್ಕಾರಕ್ಕೆ ಸಲಹೆ ನೀಡುತ್ತದೆ.
  3. ಇದು ಪಂಚಾಯತ್‌ಗಳ ಕೆಲಸವನ್ನೂ ನೋಡಿಕೊಳ್ಳುತ್ತದೆ ಮತ್ತು ಅಸ್ಸಾಂ, ಬಿಹಾರ ಮತ್ತು ಪಂಜಾಬ್‌ನಂತಹ ಕೆಲವು ರಾಜ್ಯಗಳಲ್ಲಿನ ಪಂಚಾಯತ್ ಸಮಿತಿಗಳ ಬಜೆಟ್ ಅಂದಾಜುಗಳನ್ನು ಸಹ ಪರಿಶೀಲಿಸುತ್ತದೆ.
  4. ಇದು ಹೆಚ್ಚಾಗಿ ವಿವಿಧ ಸ್ಥಾಯಿ ಸಮಿತಿಗಳ ಮೂಲಕ ಕಾರ್ಯನಿರ್ವಹಿಸುತ್ತದೆ ಮತ್ತು ತನ್ನ ವ್ಯಾಪ್ತಿಯ ಗ್ರಾಮಗಳ ಸಾಮಾನ್ಯ ಕಾರ್ಯಕ್ರಮಗಳನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಸಂಯೋಜಿಸುತ್ತದೆ.

ಆದಾಯದ ಮೂಲಗಳು[ಬದಲಾಯಿಸಿ]

  1. ನೀರು, ತೀರ್ಥಯಾತ್ರೆ, ಮಾರುಕಟ್ಟೆ ಇತ್ಯಾದಿಗಳ ಮೇಲಿನ ತೆರಿಗೆಗಳು.
  2. ಪರಿಷತ್ತಿಗೆ ನಿಯೋಜಿಸಲಾದ ಕಾಮಗಾರಿಗಳು ಮತ್ತು ಯೋಜನೆಗಳಿಗೆ ಭೂಕಂದಾಯ ಮತ್ತು ಹಣಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರದಿಂದ ನಿಗದಿತ ಅನುದಾನ.
  3. ಜಿಲ್ಲಾ ಪರಿಷತ್ತು ಸರ್ಕಾರದ ಅನುಮೋದನೆಯೊಂದಿಗೆ ಪಂಚಾಯತ್‌ಗಳಿಂದ ಸ್ವಲ್ಪ ಹಣವನ್ನು ಸಂಗ್ರಹಿಸಬಹುದು.

ಸಹ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]