ಸಂತ ಫಿಲೋಮಿನಾ ಐಟಿಐ
ಪರಿಚಯ
[ಬದಲಾಯಿಸಿ]ಉದ್ಯೋಗಾವಕಾಶವನ್ನು ಕಲ್ಪಿಸುವ ದೃಷ್ಟಿಕೋನದಿಂದಲೇ ಸ್ಥಾಪಿತವಾದ ಈ ಸಂಸ್ಥೆಯು ಮೈಸೂರಿನ ಸಂತ ಫಿಲೋಮಿನಾ ಚರ್ಚ್ ನಿಂದ ಕೆಲವೇ ಮಾರುಗಳ ದೂರದಲ್ಲಿದೆ. ಮೈಸೂರಿನ ಬೆಂಗಳೂರು ನೀಲಗಿರಿ ರಸ್ತೆಯಲ್ಲಿ ಬೆಂಗಳೂರಿಗೆ ಹೋಗುವ ಮಾರ್ಗದ ಎಡ ಪಕ್ಕದಲ್ಲಿ ಗುಡ್ ಶೆಪರ್ಡ್ ಕಾನ್ವೆಂಟ್ ಇದ್ದು ಅದರ ಪಕ್ಕದಲ್ಲೇ ಈ ಐಟಿಐ ಇದೆ. ಐಟಿಐನ ಎದುರು ವೆಸ್ಲಿ ಚರ್ಚ್ ಗೆ ಸೇರಿದ ಮಸಣವೊಂದಿದೆ, ಅದರ ಪಕ್ಕದಲ್ಲಿ ಸಂತ ಫಿಲೋಮಿನ ಪ್ರೌಢಶಾಲೆಯೂ ಇದೆ. ಪ್ರೌಢಶಾಲೆಯ ಎದುರಲ್ಲಿರುವ ಸಂತ ಫಿಲೋಮಿನ ವಸತಿಗ್ರಹವು ಐಟಿಐನ ಮತ್ತೊಂದು ಪಕ್ಕದಲ್ಲಿ ಇದೆ.
ಐಟಿಐ ಸ್ಥಾಪನೆಯಲ್ಲಿ ಶ್ರೀ ಕೆ.ಜೆ.ಜಾರ್ಜ್ ರವರ ಪಾತ್ರ
[ಬದಲಾಯಿಸಿ]೧೯೮೨ ರಲ್ಲಿ ಸ್ಥಾಪಿತವಾದ ಈ ಸಂಸ್ಥೆಗೆ ಮೂಲ ಕಾರಣಕರ್ತರು ಶ್ರೀ ಕೆ.ಜೆ.ಜಾರ್ಜ್. ಅಂದಿನ ಸಂತ ಫಿಲೋಮಿನಮ್ಮನವರ ದೇವಾಲಯದ ಪ್ರಧಾನ ಗುರುಗಳಾದ ಸ್ವಾಮಿ ಗ್ರೆಗೊರಿಯುಸ್ ಮಾಡಪಿಳ್ಳಿಯವರು ಸಂತ ಫಿಲೋಮಿನಮ್ಮನವರ ದೇವಾಲಯಕ್ಕೆ ಸೇರಿದ ಅನಾಥ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಹೊಸ ಕಟ್ಟಡವೊಂದನ್ನು ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದರು. ಅದೇ ಸಂದರ್ಭದಲ್ಲಿ ಮೈಸೂರು ಮತ್ತು ಅದರ ಸುತ್ತಮುತ್ತಲಿನ ಪ್ರದೇಶವನ್ನು ಕೈಗಾರಿಕಾ ಪ್ರದೇಶವನ್ನಾಗಿ ಅಭಿವೃದ್ಧಿ ಪಡಿಸುವ ಯೋಜನೆಯನ್ನು ಸರಕಾರ ಹಾಕಿಕೊಡಿತ್ತು. ಇದನ್ನು ಮನಗಂಡ ಫಾದರ್ ಗ್ರೆಗೊರಿಯುಸ್ ರವರು ಅನಾಥ ಮಕ್ಕಳ ಮುಂದಿನ ಭವಿಷ್ಯವನ್ನು ಮನದಲ್ಲಿರಿಸಿಕೊಂಡು, ಅವರಿಗೆ ತರಬೇತಿಯನ್ನು ನೀಡಲು ಕಾರ್ಯಾಗಾರವೊಂದನ್ನು ಸ್ಥಾಪಿಸಿದರೆ ಹೇಗೆ ಎಂದಾಲೋಚಿಸಿ, ಹೊಸ ಕಟ್ಟಡದೊಂದಿಗೆ, ಕೆಲವು ಯಂತ್ರಗಳನ್ನು ಖರೀದಿಸಲು ಹಾಲೆಂಡಿನ ಸಂಸ್ಥೆಯೊಂದಿಗೆ ಸಂಪರ್ಕಿಸಿದರು. ಅವರ ಯೋಜನೆಗೆ ಅಸ್ತು ಎಂದ ಹಾಲೆಂಡ್ ಸಹಾಯ ಹಸ್ತ ನೀಡಲು ಮುಂದಾಯಿತು. ಆಗ ಧುತ್ತನೆ ಎದುರಾದದ್ದು ಕಾರ್ಯಾಗಾರದ ಉಸ್ತುವಾರಿಯನ್ನು ನೊಡಿಕೊಳ್ಳುವುದು ಯಾರೆಂಬುದು. ಈ ಪ್ರಶ್ನೆಯನ್ನು ಪೂಜ್ಯ ಗುರುಗಳು ತಮ್ಮ ಆಪ್ತರೂ, ಸಹಾಯಕರೂ ಹಾಗೂ ಸಂತ ಫಿಲೋಮಿನ ವಸತಿಗ್ರಹದ ವಾರ್ಡನ್ ಆದ ಸ್ವಾಮಿ ಡಾ.ದಯಾನಂದ ಪ್ರಭುರವರ ಮುಂದಿರಿಸಿದಾಗ ಅವರು ಸೂಚಿಸಿದ ಹೆಸರು ಕೆ.ಜೆ.ಜಾರ್ಜ್. ಶ್ರೀಯುತರು ಆಗ ಕೆ.ಜಿ.ಎಫ್.ನ ಬಿಇಎಂಎಲ್ ಕಾರ್ಖಾನೆಯ ಉದ್ಯೋಗಿಯಾಗಿದ್ದರು.ಅವರಿಬ್ಬರ ಕೋರಿಕೆಗೆ ಮಣಿದು ಬಿಇಎಂಎಲ್ ಉದ್ಯೋಗವನ್ನು ತೊರೆದ ಕೆ.ಜೆ.ಜಾರ್ಜ್ ರವರು ಮೈಸೂರಿಗೆ ಆಗಮಿಸಿ ಸ್ವಾಮಿ ಗ್ರೆಗೊರಿಯುಸ್ ಅವರಿಂದ ಸಂತ ಫಿಲೊಮಿನಾ ಕಾರ್ಯಾಗಾರದ ಸಂಪೂರ್ಣ ಉಸ್ತುವಾರಿಯನ್ನು ವಹಿಸಿಕೊಂಡರು. ಮುಂದೆ ಶ್ರೀಯುತರು ಅದನ್ನು ಕಾರ್ಯಾಗಾರವನ್ನಾಗಿ ಉಳಿಸಿ ತರಬೇತಿಯನ್ನು ನೀಡಿದರೆ ತರಬೇತಿ ಪಡೆದವರಿಗೆ ಭವಿಷ್ಯವಿರುವುದಿಲ್ಲವೆಂದು ಯೋಚಿಸಿ, ಕೇಂದ್ರ ಸರಕಾರದ ಸಂಯೋಜನೆಯಡಿಯಲ್ಲಿ ಉದ್ಯೋಗಕ್ಕಾಗಿ ತರಬೇತಿಯನ್ನು ನೀಡುವ ಸಂಸ್ಥೆಯನ್ನಾಗಿ ಮಾಡೋಣವೆಂದು ನಿರ್ಧರಿಸಿದರು, ಇದಕ್ಕಾಗಿ ಪೂಜ್ಯರ ಅನುಮತಿಯನ್ನು ಪಡೆದು ಅದನ್ನು 'ಸಂತ ಫಿಲೋಮಿನಾ ಕೈಗಾರಿಕಾ ತರಬೇತಿ ಸಂಸ್ಥೆ'ಯನ್ನಾಗಿ ಪರಿವರ್ತಿಸಿ ಬೆಳೆಸಿದ ಕೀರ್ತಿ ಕೆ.ಜೆ.ಜಾರ್ಜ್ ರವರದು.
==ಲಭ್ಯವಿರುವ ವೃತ್ತಿಗಳು==
ನಂತರ ಸಂಸ್ಥೆಯ ಕಟ್ಟಡಗಳನ್ನು ನವೀಕರಿಸಿ ಮೊದಲು ೪ ವೃತ್ತಿಗಳನ್ನು ಪರಿಚಯಿಸಿದರು. ಅವುಗಳು FITTER, TURNER, WELDER ಮತ್ತು DRAFTSMAN MECHANIC(ಕಾರಣಾಂತರದಿಂದ ಕೊನೆಯ ವೃತ್ತಿಯನ್ನು ಕೈ ಬಿಡಲಾಗಿದೆ). ಪ್ರಸ್ತುತ ಹೈಸ್ಕೂಲ್ ನಪಾಸಾದ ಮತ್ತು ತೇರ್ಗಡೆ ಹೊಂದಿದವರಿಗಾಗಿ ಭಿನ್ನ ಭಿನ್ನ ವೃತ್ತಿಗಳನ್ನು ಸಂಸ್ಥೆಯಲ್ಲಿ ಪ್ರಾರಂಭಿಸಲಾಯಿತು. ಪ್ರಸ್ತುತ FITTER, TURNER, WELDER, ELECTRONIC MECHANIC ಮತ್ತು ELECTRICIAN ವೃತ್ತಿಗಳು ಸಂಸ್ಥೆಯಲ್ಲಿ ತರಬೇತಿಗಾಗಿ ಲಭ್ಯವಿವೆ. ವೆಲ್ಡರ್ ವೃತ್ತಿಗೆ ಎಸ್.ಎಸ್.ಎಲ್.ಸಿ. ನಪಾಸಾದ ಅಭ್ಯರ್ಥಿಗಳು ಸೇರಬಹುದಾಗಿದೆ. ಈ ಎಲ್ಲ ವೃತ್ತಿಗಳಲ್ಲೂ ಮಹಿಳೆಯರ ತರಬೇತಿಗೆ ಅವಕಾಶವಿರುತ್ತದೆ.
ಸಂಯೋಜನೆ ಮತ್ತು ಅನುದಾನ
[ಬದಲಾಯಿಸಿ]ಸಂಸ್ಥೆಯು ಕೇಂದ್ರ ಸರಕಾರದ ಉದ್ಯೋಗ ಮತ್ತು ತರಬೇತಿಯ ಮಹಾನಿರ್ದೇಶನಾಲಯದಿಂದ ಸಂಯೋಜನೆಗೊಳಪಟ್ಟಿದೆಯಲ್ಲದೇ ರಾಜ್ಯ ಸರಕಾರದ ವೇತನಾನುದಾನವೂ ಅದಕ್ಕೆ ಪ್ರಾಪ್ತವಾಗಿದೆ.
ಉದ್ಯೋಗಾವಕಾಶ
[ಬದಲಾಯಿಸಿ]ಸಂಸ್ಥೆಯಲ್ಲಿ ಯಶಸ್ವಿಯಾಗಿ ತರಬೇತಿಯನ್ನು ಮಾಡಿ ಮುಗಿಸಿದ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶವನ್ನೂ ಕಲ್ಪಿಸಿಕೊಡಲಾಗುತ್ತಿದೆ.