ಸಂತ ಅಂತೋಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂತ ಅಂತೋಣಿ ಅಥವಾ ಪಡುಅದ ಸಂತ ಆಂಥೊನಿ ಅಥವಾ ಲಿಸ್ಬನ್ನಿನ ಸಂತ ಆಂಥೊನಿ ಪೋರ್ಚುಗಲ್ ದೇಶದ ಲಿಸ್ಬನ್ ಪಟ್ಟಣದಲ್ಲಿ ಆಗಸ್ಟ್ ೧೫, ೧೧೯೫ರಲ್ಲಿ ಜನಿಸಿದರು. ಅಂತೋಣಿಯವರ ಮೂಲ ಹೆಸರು ಫರ್ಡಿನಾಂಡ್. ತಂದೆ ಮಾರ್ಟಿನ್ ಥೀಬಿಯೊರವರು ಆ ಪಟ್ಟಣದ ಉನ್ನತಾಧಿಕಾರಿಯಾಗಿದ್ದರು. ಚಿಕ್ಕವಯಸ್ಸಿನಲ್ಲೇ ಫರ್ಡಿನಾಂಡ್ ಅವರು ಲಿಸ್ಬನ್ನಿನ ಸಂತ ವಿನ್ಚೆಂಸಿ ಕಾನ್ವೆಂಟ್ ಸೇರಿ ಸಂನ್ಯಾಸಿಯಾದರು. ಅಲ್ಲಿದ್ದಾಗ ಪದೇ ಪದೇ ಸ್ನೇಹಿತರೂ ಬಂಧುಗಳೂ ಭೇಟಿ ನೀಡುತ್ತಿದ್ದುರಿಂದ ಬೇಸತ್ತ ಅವರು ಮೇಲಧಿಕಾರಿಗಳ ಅನುಮತಿ ಪಡೆದು ದೂರದ ಕೊಯಿಂಬ್ರ ಎಂಬ ಊರಿನ ಪವಿತ್ರ ಶಿಲುಬೆ ಕಾನ್ವೆಂಟ್ ಸೇರಿ ತಮ್ಮ ಹೆಸರನ್ನು ಅಂತೋಣಿ ಎಂದು ಬದಲಾಯಿಸಿಕೊಂಡರು. ಅಲ್ಲಿಂದ ಅವರನ್ನು ಯಾತ್ರೆಗಾಗಿ ಮೊರೊಕ್ಕೊಗೆ ಕಳಿಸಲಾಯಿತು ಅಲ್ಲಿ ಅವರು ಫ್ರಾನ್ಸಿಸ್ಕನ್ ಸಂಸ್ಥೆಗೆ ಸೇರಿದರು.

ಅಂತೋಣಿಯವರು ಉತ್ತಮ ವಾಗ್ಮಿಯೂ ಚತುರ ಪ್ರತಿಭೆಯೂ ಆಗಿದ್ದರು. ಮೀನುಗಳೂ ಅವರ ಭಾವಪೂರ್ಣ ಮಾತುಗಳನ್ನು ಆಸಕ್ತಿಯಿಂದ ಆಲಿಸುತ್ತಿದ್ದುದಾಗಿ ದಂತಕಥೆಯಿದೆ. ಒಂದು ರಾತ್ರಿ ಸರಿಹೊತ್ತಿನಲ್ಲಿ ಸಹಪಾಠಿಯೊಬ್ಬರು ಅಂತೋಣಿಯವರ ಕೊಠಡಿಯಿಂದ ಅಪೂರ್ವ ಬೆಳಕು ಹೊಮ್ಮುತ್ತಿರುವುದನ್ನು ಗಮನಿಸಿ ಬಾಗಿಲ ಕಂಡಿಯಿಂದ ಇಣುಕಿ ನೋಡಿದಾಗ ಅಂತೋಣಿಯವರು ಕೈಯಲ್ಲಿ ಹಿಡಿದು ಓದುತ್ತಿದ್ದ ಜಪದ ಪುಸ್ತಕದ ಮೇಲೆ ಬಾಲಕ ಯೇಸು ಕುಳಿತು ತೊದಲು ನುಡಿಗಳಾಡುತ್ತಿದ್ದರಂತೆ. ಹಾಗಾಗಿ ಸಂತ ಅಂತೋಣಿಯವರ ಸ್ವರೂಪಗಳನ್ನು ಆ ರೀತಿಯಾಗಿಯೇ ಚಿತ್ರಿಸುವುದು ವಾಡಿಕೆಯಾಗಿದೆ. ಅಂತೋಣಿಯವರು ೧೨೩೧ನೇ ಜೂನ್ ೧೩ರಂದು ಪಾದ್ವ ಎಂಬಲ್ಲಿ ತೀರಿಕೊಂಡರು. ನಂತರ ೧೨೩೨ನೇ ಮೇ ೩೦ರಂದು ಪೋಪ್ ಗ್ರೆಗರಿ-೯ ರವರು ಅವರನ್ನು ಸಂತ ಪದವಿಗೇರಿಸಿದರು. ಸಂತ ಅಂತೋಣಿ ಅವರು ಅನೇಕ ಪವಾಡಗಳನ್ನು ಮಾಡಿದ್ದರು. ಅವರನ್ನು ಪವಾಡಗಳ ಪುರುಷರೆಂದೂ ಕರೆಯುತ್ತಾರೆ. ಒಮ್ಮೆ ಅಂತೋಣಿಯವರು ಧರ್ಮ ಪ್ರಚಾರಕ್ಕೆ ಊರಿಗೆ ಹೋಗಿದ್ದರು. ಆದರೆ ಅವರ ಪ್ರವಚನ ಕೇಳಲು ಯಾರೊಬ್ಬರೂ ಬರಲಿಲ್ಲ. ಅಂತೋಣಿಯವರು ಹತ್ತಿರವಿರುವ ಕೊಳವೊಂದರ ಬಳಿ ಹೋಗಿ ಪ್ರವಚನ ಶುರು ಮಾಡಿದರು. ಏನಾಶ್ಚರ್ಯ !! ಕೊಳದಲ್ಲಿರುವ ಮೀನುಗಳೆಲ್ಲ ಮೇಲೆ ಬಂದು ಅವರ ಪ್ರವಚನ ಕೇಳಲಾರಂಭಿಸಿದವು. ಇದನ್ನು ಕಂಡು ಜನರೆಲ್ಲ ದಂಗಾಗಿ ಹೋದರು ಮತ್ತೆ ಅವರ ಪ್ರವಚನಗಳನ್ನು ಕೇಳಿ ಧನ್ಯರಾದರು. ಮಗದೊಮ್ಎ ಕಮ್ಯುನಿಸ್ಟ್ ರಾಷ್ಟ್ರವಾಗಿರುವ ರಷ್ಯಾದ ಹಳ್ಳಿಗೆ ಹೋಗಿದ್ದರು.ಅವರ ಪ್ರವಚನಗಳನ್ನು ಕೇಳಲು ಅಪಾರ ಜನಸ್ತೋಮ ಸೇರಿತ್ತು. ಪ್ರವಚನದ ಕೊನೆಯಲ್ಲಿ ಸಂತ ಅಂತೋಣಿ ಯವರು ಪರಮ ಪವಿತ್ರ ಪ್ರಸಾದವನ್ನು (holy commiaounve) ಕೊಡಲು ಶುರುಮಾಡಿದರು ಆಗ ಜನ ಅಂತೋಣಿಯವರ ಅಪಹಾಸ್ಯ ಮಾಡಲಾರಂಭಿಸಿದರು. ಆಗ ಅಲ್ಲೆ ಇರುವ ಕತ್ತೆಯೊಂದು ಪರಮ ಪವಿತ್ರ ಪ್ರಸಾದದ ಪ್ರಭು ಯೇಸುವನ್ನು ತನ್ನ ಮೊಣಕಾಲೂರಿ ಆರಾಧಿಸತೊಡಗಿತು. ಇದನ್ನು ಕಂಡು ಜನರೆಲ್ಲಾ 'ಕತ್ತೆ ಯೇ ಪರಮ ಪವಿತ್ರ ಪ್ರಸಾದವನ್ನು ಆರಾಧಿಸಬೇಕಾದರೆ ಮನುಜರಾದ ನಾವು ಅಪಹಾಸ್ಯ ಮಾಡುತ್ಯಿದ್ದೆವಲ್ಲಾ‌,' ಎಂದು ಕೊಂಡು ಪರಮ ಪವಿತ್ರ ಪ್ರಸಾದವನ್ನು ಸೇವಿಸಿ ಯೇಸುವಿನ ಕ್ರಪೆಗೆ ಪಾತ್ರರಾದರು.