ಶ್ವೇತಾ ಚೆಂಗಪ್ಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಶ್ವೇತಾ ಚೆಂಗಪ್ಪ ಕಿರುತೆರೆಯ ಅಭಿನೇತ್ರಿ, ನಿರೂಪಕಿ. ಈಗಾಗಲೇ ಅನೇಕ ಕಾರ್ಯಕ್ರಮಗಳ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಶ್ವೇತಾ ಗಳಿಸಿದ್ದಾರೆ. ಅರುಂಧತಿ ಧಾರಾವಾಹಿ, ಯಾರಿಗುಂಟು ಯಾರಿಗಿಲ್ಲ ರಿಯಾಲಿಟಿ ಶೋ, ತಂಗಿಗಾಗಿ ಚಲನಚಿತ್ರಗಳ ಮೂಲಕ ನಾಡಿನ ಮನೆಮಾತಾಗಿರುವ ಮುದ್ದುಮುಖದ ಗೃಹಿಣಿ. ಮೌಂಟ್ ಕಾರ್ಮೆಲ್ ಕಾಲೇಜಲ್ಲಿ ಓದಿರುವ ಶ್ವೇತಾ ಹತ್ತನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯನ್ನು ಸೇರಿದ್ದರು. ಪ್ರಸ್ತುತ ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್ ಕಾರ್ಯಕ್ರಮದಲ್ಲಿ, ಕಾರ್ಯಕ್ರಮದ ನಿರೂಪಕಿಯಾಗಿದ್ದಾರೆ

ಜನನ, ಬಾಲ್ಯ ಹಾಗೂ ಪುಟ್ಟತೆರೆಗೆ ಪಾದಾರ್ಪಣೆ[ಬದಲಾಯಿಸಿ]

 • ತಂದೆಯವರ ಹೆಸರು, ಚೆಂಗಪ್ಪ, ಕೊಡಗು ಜಿಲ್ಲೆಯ, 'ಸೋಮವಾರಪೇಟೆ' ಯ ಬಳಿಯ ಗ್ರಾಮದವರು, ತಾಯಿಯವರ ಹೆಸರು,ತಾರಾ. ಶ್ವೇತ ಹಾಗೂ ಅವರ ತಮ್ಮ 'ಸಾಗರ್,' ಬೆಂಗಳೂರಿನಲ್ಲೇ ಹುಟ್ಟಿದವರು. ಬೆಂಗಳೂರಿನಲ್ಲಿ ತಂದೆಯವರ ಉದ್ದಿಮೆಯಿದೆ. ಶ್ವೇತಾ ಚೆಂಗಪ್ಪ 'ಬಿಕಾಂ,' ಓದುತ್ತೋದುತ್ತಾ ಅಭಿನಯದಲ್ಲೂ ಪಾಲ್ಗೊಂಡು ಬೆಳೆದರು.
 • ಕಾಲೇಜ್‍ನಲ್ಲಿ ಓದುವ ಸಮಯದಲ್ಲೇ 'ಆಫರ್ಸ್' ಬರುತ್ತಿತ್ತು. 'ಆಡಿಶನ್' ತೆಗೆದುಕೊಳ್ಳಲು ನಿರ್ದೇಶಕರು ಹುಡುಕುತ್ತಾ ಬಂದರು. 'ಸುಮತಿ'ಪಾತ್ರಕ್ಕೆ ಒಬ್ಬ ನಟಿಯ ಅವಶ್ಯಕತೆ ಅವರಿಗಿತ್ತು. ಅಳು, ನಗು, ಪರೀಕ್ಷೆಗಳ ನಂತರ, 'ಒಂದೂವರೆ ಪುಟದ ಡಯಲಾಗ್' ಹೇಳಲು ಹೇಳಿದರು. ಸುಮತಿ ಆ ಟೆಸ್ಟ್ ಲ್ಲಿ ಸುಲಭವಾಗಿ ಆಯ್ಕೆಯಾದರು. ಎಲ್ಲದರಲ್ಲೂ 'ಟೈಟಲ್ ರೋಲ್' ನಲ್ಲಿ ಅಭಿನಯಿಸಿ, ಹೆಸರು ಮಾಡಿರುವ 'ಶ್ವೇತಾ ಚೆಂಗಪ್ಪ,' ಮೂಲತಃ ಕೊಡಗಿನವರು.

'ಪುನರ್ಜನ್ಮ', 'ಒಂದು ದೊಡ್ಡ ಸವಾಲಿನ ಧಾರಾವಾಹಿಯಾಗಿತ್ತು'[ಬದಲಾಯಿಸಿ]

 • ಪುನರ್ಜನ್ಮ ಚಿತ್ರದಲ್ಲಿ ಹಿಂದಿನ ಜನ್ಮದ ನೆನಪನ್ನು ತರಿಸುವ ವಿಭಿನ್ನವಾದ ಕಥಾವಸ್ತುವನ್ನು ಕೊಟ್ಟಿದ್ದರು. ಹಿಂದಿನ ಜನ್ಮದ ಅರುಂಧತಿ, ಈ ಜನ್ಮದ 'ಅರುಂಧತಿ' ಹಾಗೂ ದೇವರು, ೩ ತರಹದ ಪಾತ್ರಾಭಿನಯ. ಆ ಸವಾಲನ್ನು ಯಶಸ್ವಿಯಾಗಿ ನಿಭಾಯಿಸಿದರು.ಸುಮತಿ ಧಾರಾವಾಹಿ ೫೦೦ ಕಂತುಗಳ ಪ್ರಸಾರವಾಯಿತು. ಕಾದಂಬರಿ ೬ ವರ್ಷ ನಡೆಯಿತು. ಸುಕನ್ಯ ಒಂದು ಸಾವಿರ ಸಂಚಿಕೆ ದಾಟಿದೆ.
 • ಅರುಂಧತಿ, ೭೦ ಕಂತುಗಳು. ಟೆಲಿವಿಷನ್ ರಸಿಕರು, ಶ್ವೇತಾರವರ 'ಅಭಿನಯ ಕೌಶಲ್ಯ'ವನ್ನು ಗುರುತಿಸಿದ್ದಾರೆ. ೨೦೦೩ ರಿಂದ ೨೦೧೦ ರ ವರೆಗಿನ ಪಯಣ ಕೊಟ್ಟಿರುವ ಮುದ, ದೊಡ್ಡ ತೆರೆಗಿಂತ ಹೆಚ್ಚಾಗಿದೆ. 'ಅರುಂಧತಿ' ಧಾರಾವಾಹಿಯಲ್ಲಿ ಶ್ವೇತಾ ಅರುಂಧತಿ-ನಂದಿನಿ ದ್ವಿಪಾತ್ರದಲ್ಲಿ ಅಮೋಘವಾಗಿ ನಟಿಸಿ ವೀಕ್ಷಕರ ಮನಸೆಳೆದಿದ್ದಾರೆ.
 • ಸುಮಾರು 2010ರಲ್ಲಿ ಆರಂಭಗೊಂಡ ಈ ಧಾರಾವಾಹಿಯು ಮೂರನೆಯ ವರ್ಷಕ್ಕೆ ಕಾಲಿಟ್ಟು ಮುನ್ನಡೆಯುತ್ತಲಿದೆ. ಕಿರುತೆರೆ'ಯೆಂದು ಸ್ಪರ್ಧೆ ಕಡಿಮೆಯಿಲ್ಲ. ಶ್ವೇತಾ ಚೆಂಗಪ್ಪ ಮತ್ತು ಸೃಜನ್ ಲೋಕೇಶ ನಿರೂಪಣೆಯ ಮಜಾ ಟಾಕೀಸ್, ಕನ್ನಡದ ಮಟ್ಟಿಗೆ ಹೊಸ ರೀತಿಯ ಟಾಕ್ ಷೋ.

ನಟಿಸಿರುವ ಧಾರಾವಾಹಿಗಳು[ಬದಲಾಯಿಸಿ]

'ಶ್ವೇತಾ ಚೆಂಗಪ್ಪ', ನಟಿಸಿರುವ 'ಟೆಲಿವಿಷನ್ ಧಾರಾವಾಹಿಗಳು' ಕರ್ನಾಟಕ ಮನೆ-ಮನೆಗಳಲ್ಲಿ ಪ್ರಸಿದ್ಧವಾಗಿವೆ. ೨೦೦೩ ರಲ್ಲಿ ಆರಂಭವಾದ ಮೊದಲ ಧಾರಾವಾಹಿ

 1. ಸುಮತಿ', ನಂತರ
 2. 'ಕಾದಂಬರಿ', ಕೊನೆಗೆ,
 3. 'ಸುಕನ್ಯ',
 4. ಪುನರ್ಜನ್ಮ
 5. ಅರುಂಧತಿ
 6. ಗೆಜ್ಜೆನಾದ
 7. ಬಾ ನನ್ನ ಸಂಗೀತ

ಮೊದಲಾದುವು.