ಶ್ರೀಮತಿ (ಚಲನಚಿತ್ರ)
ಗೋಚರ
ಶ್ರೀಮತಿ | |
---|---|
ನಿರ್ದೇಶನ | ರವಿ ಕುಮಾರ್ |
ನಿರ್ಮಾಪಕ | ಶಂಕರ್ ಗೌಡ |
ಚಿತ್ರಕಥೆ | ರವಿ ಕುಮಾರ್ |
ಪಾತ್ರವರ್ಗ | |
ಸಂಗೀತ | ಘಂಟಾಡಿ ಕೃಷ್ಣ |
ಛಾಯಾಗ್ರಹಣ | ರಾಜೇಶ್ ರಾಮನಾಥ್ |
ಸಂಕಲನ | ಜಾನಿ ಲಾಲ್ |
ಸ್ಟುಡಿಯೋ | ಶಂಕರ್ ಪ್ರೊಡಕ್ಷನ್ಸ್ |
ಬಿಡುಗಡೆಯಾಗಿದ್ದು | 8 ಜುಲೈ 2011 |
ಅವಧಿ | 135 ನಿಮಿಷಗಳು |
ದೇಶ | ಭಾರತ |
ಭಾಷೆ | ಕನ್ನಡ |
ಶ್ರೀಮತಿಯು ರವಿ ಕುಮಾರ್ ನಿರ್ದೇಶಿಸಿದ 2011 ರ ಕನ್ನಡ ಪ್ರಣಯ ಚಲನಚಿತ್ರವಾಗಿದೆ ಮತ್ತು 2004 ರ ಬಾಲಿವುಡ್ ಚಲನಚಿತ್ರ ಐತ್ರಾಜ್‌ನ ರಿಮೇಕ್ ಆಗಿದ್ದು, ಆ ಚಿತ್ರವಾದರೋ ಡಿಸ್‍ಕ್ಲೋಶರ್ ಚಲನಚಿತ್ರವನ್ನು ಸಡಿಲವಾಗಿ ಆಧರಿಸಿದೆ. ಚಿತ್ರದಲ್ಲಿ ಉಪೇಂದ್ರ, ಪ್ರಿಯಾಂಕಾ ತ್ರಿವೇದಿ ಮತ್ತು ಸೆಲಿನಾ ಜೇಟ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ, ಜೊತೆಗೆ ಪ್ರೇಮ್ ಚೋಪ್ರಾ, ಸಯಾಜಿ ಶಿಂಧೆ ಮತ್ತು ರೇಖಾ ದಾಸ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಇದನ್ನು ಶಂಕರೇಗೌಡ ನಿರ್ಮಿಸಿದ್ದಾರೆ , ಘಂಟಾಡಿ ಕೃಷ್ಣ ಅವರ ಮೂಲ ತು ಚಲನಚಿತ್ರ ಸಂಗೀತವನ್ನು ಒಳಗೊಂಡಿದೆ. [೧] ಚಿತ್ರವನ್ನು XYZ ಶೀರ್ಷಿಕೆಯಡಿ ತೆಲುಗಿಗೆ ಡಬ್ ಮಾಡಲಾಯಿತು.
ಪಾತ್ರವರ್ಗ
[ಬದಲಾಯಿಸಿ]- ರಾಜಕುಮಾರ್ ಪಾತ್ರದಲ್ಲಿ ಉಪೇಂದ್ರ
- ಪ್ರಿಯಾ ಪಾತ್ರದಲ್ಲಿ ಪ್ರಿಯಾಂಕ ಉಪೇಂದ್ರ
- ಸೋನಿಯಾ ರಾಯ್ ಪಾತ್ರದಲ್ಲಿ ಸೆಲಿನಾ ಜೇಟ್ಲಿ
- ರಾಯ್ ಪಾತ್ರದಲ್ಲಿ ಪ್ರೇಮ್ ಚೋಪ್ರಾ
- ಸಯಾಜಿ ಶಿಂಧೆ
- ರೇಖಾ ದಾಸ್
- ರಾಜೇಶ್ ನಟರಂಗ
ಧ್ವನಿಮುದ್ರಿಕೆ
[ಬದಲಾಯಿಸಿ]ಎಲ್ಲ ಹಾಡುಗಳು ವಿ. ಮನೋಹರ್, ಕವಿರಾಜ್, ನರೇಂದ್ರ ಪ್ರಸಾದ್, ಶಿವನಂಜೇಗೌಡ ಅವರಿಂದ ರಚಿತ
ಹಾಡುಗಳ ಪಟ್ಟಿ | |||
---|---|---|---|
ಸಂ. | ಹಾಡು | ಹಾಡುಗಾರರು | ಸಮಯ |
1. | "ಝುಂ ಝುಂ ಮೈಯೆಲ್ಲ" | ಬದ್ರಿ, ಶಮಿತಾ ಮಲ್ನಾಡ್ | |
2. | "ಸಂಜೆ ಮುಸ್ಸಂಜೆ" | ಚೈತ್ರಾ ಎಚ್.ಜಿ., ಜೋಯೆಲ್ | |
3. | "ಪ್ರೀತ್ಸೇ ಪ್ರೀತ್ಸೇ" | ರಾಜೇಶ್ ಕೃಷ್ಣನ್, ನಂದಿತಾ | |
4. | "ಲವ್ ಲವ್" | ಹೇಮಂತ್ ಕುಮಾರ್, ಸ್ನೇಹಾ ರವೀಂದ್ರ | |
5. | "ವಿರಹ ನೂರುತರಹ" | ಚೈತ್ರಾ ಎಚ್.ಜಿ. |
ಬಾಕ್ಸ್ ಆಫೀಸ್ ಗಳಿಕೆ
[ಬದಲಾಯಿಸಿ]ಶ್ರೀಮತಿ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸರಾಸರಿಗಿಂತ ಕಡಿಮೆ ಗಳಿಸಿತು. [೨]
ಉಲ್ಲೇಖಗಳು
[ಬದಲಾಯಿಸಿ]- ↑ "Upendra-Celina's Shrimathi releasing on 8th July". July 2011. Archived from the original on 2012-10-22. Retrieved 2022-03-19.
- ↑ "Upendra: Working with P Vasu was a thrilling experience".