ಶ್ಯಾಮಲಾ ಮಾಧವ
ಶ್ಯಾಮಲಾ ಮಾಧವ | |
---|---|
ಜನನ | ೧೯೪೯,ಜೂನ್, ೨೯ ಕೊಡಿಯಾಲಗುತ್ತು, ಮಂಗಳೂರು |
ವೃತ್ತಿ(ಗಳು) | ಲೇಖಕಿ, ಪ್ರಮುಖವಾಗಿ ಅನುವಾದಕಿ, ಅಂಕಣಕಾರ್ತಿ |
ಶ್ಯಾಮಲಾ ಮಾಧವ,[೧] ಒಬ್ಬ ಭಾಷಾಂತರಕಾರರು. ‘ಗಾನ್ ವಿತ್ ದ ವಿಂಡ್’ (Gone with the wind),[೨] ಮತ್ತು ‘ಫ್ರಾಂಕಿನ್ ಸ್ಟೈನ್’ (Frankenstein ), ಗಳಂತಹ ಸುಪ್ರಸಿದ್ಧ ವಿಶ್ವದ ಅತ್ಯಂತ ಹೆಚ್ಚುಮಾರಾಟಗಳಿಸಿ ಹಾಲಿವುಡ್ ಚಲನಚಿತ್ರಕ್ಕೆ ಅಳವಡಿಸಲಾದ ಇಂಗ್ಲಿಷ್ ಕಾದಂಬರಿಗಳನ್ನು, ಸಶಕ್ತವಾಗಿ ಕನ್ನಡಭಾಷೆಗೆ ಅನುವಾದಿಸಿದ್ದಾರೆ. ಇವರ ಚೊಚ್ಚಲ ಕೃತಿ, 'ಆ ಲೋಕ'. [೩][೪]
ಜೀವನ
[ಬದಲಾಯಿಸಿ]ಶ್ಯಾಮಲಾ,[೫] 'ನಾರಾಯಣ.ಯು', ಮತ್ತು 'ವಸಂತಿ' ದಂಪತಿಗಳ ಪ್ರೇಮದ ಮಗಳಾಗಿ, ೧೯೪೯ ರ ಜೂನ್, ೨೯ ರಂದು,ಮಂಗಳೂರಿನ ಹತ್ತಿರದ ಕೊಡಿಯಾಲಗುತ್ತು ಪ್ರದೇಶದ ಮನೆಯಲ್ಲಿ ಜನಿಸಿದರು. ತಂದೆಯವರು, ಸೋಮೇಶ್ವರ ಉಚ್ಚಿಲದ 'ಶಾಲಾ ಕರೆಸ್ಪಾಂಡೆಂಟ್' ಆಗಿ ಶೈಕ್ಷಣಿಕ ಕ್ಷೇತ್ರ ಮತ್ತು ಸಹಕಾರಿ ಕ್ಷೇತ್ರದಲ್ಲಿ ದುಡಿದರು. ಮಿತಮಾತಿನ, ಸತ್ಯನಿಷ್ಠರಾದ, ಸುವಿಚಾರ-ಸದಾಚಾರಗಳ ತಾಯಿ, ನಗರದ 'ಬೆಸೆಂಟ್ ಶಾಲೆ'ಯಲ್ಲಿ ಪಿ.ಟಿ.ಹಾಗೂ ಗೈಡಿಂಗ್ ಶಿಕ್ಷಕಿಯಾಗಿ ಶಿಸ್ತು, ಸೇವೆ,ಮತ್ತು ದಕ್ಷತೆಗೆ ಹೆಸರಾದವರು. ಶ್ಯಾಮಲಾ,'ಬೆಸೆಂಟ್ ರಾಷ್ಟ್ರೀಯ ಪಾಠಶಾಲೆ'ಯಲ್ಲಿ ಪ್ರಾಥಮಿಕ, ಮಾಧ್ಯಮಿಕ ವಿದ್ಯಾಭ್ಯಾಸದ ನಂತರ, ನಗರದ 'ಸೇಂಟ್ ಆಗ್ನಿಸ್ ಪ್ರೌಢಶಾಲೆ'ಯಲ್ಲಿ ಹಾಗೂ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮುಂದುವರೆಸಿ, ವಿಜ್ಞಾದದ ಪದವಿಯನ್ನು ಗಳಿಸಿದರು. ಬಾಲ್ಯದಲ್ಲೇ ಮನೆಯ ಪರಿಸರದಲ್ಲಿ ದೊರೆತ ಕನ್ನಡ ಇಂಗ್ಲೀಷ್ ಭಾಷಾ ಸಾಹಿತ್ಯ ಪ್ರೀತಿ, ಶ್ಯಾಮಲಾರ ಮುಂದಿನ ಜೀವನದುದ್ದಕ್ಕೂ ಜೊತೆಯಲ್ಲಿ ಬಂತು.[೬] ಶ್ಯಾಮಲಾರ ಅಣ್ಣ, ಮೋಹನ್ ಎನ್ ಜಿ. ದಕ್ಷಿಣ ಕನ್ನಡ ಜಿಲ್ಲಾ ಸ್ಕೌಟ್ಸ್ ಕಮಿಷನರ್ . ಪಿಲಿಕುಳದಲ್ಲಿ ಸಕ್ರಿಯ ಸದಸ್ಯ. ಗಾಂಧಿ ಪ್ರತಿಷ್ಥಾನ , ರೆಡ್ ಕ್ರಾಸ್ ಸಂಸ್ಥೆಗಳಲ್ಲಿ , ಸ್ವಾಮಿ ದಯಾನಂದ ಸರಸ್ವತಿ ಆಶ್ರಮದಲ್ಲಿ ವ್ಯಸ್ತ . ಎಮಿನೆಂಟ್ ಅಲೋಶಿಯನ್ ಅವಾರ್ಡ್ ಸಮ್ಮಾನಿತ. ಸಮಾಜ ಸೇವಾಸಕ್ತ.
ಮನೆಯ ಸಾಹಿತ್ಯಿಕ ಪರಿಸರ
[ಬದಲಾಯಿಸಿ]ಮನೆಯ ಪರಿಸರದಲ್ಲಿ ತಂದೆಯವರು ತಮ್ಮ ಪುಸ್ತಕ ಸಂಗ್ರಹಾಲಯದಲ್ಲಿ ಸಂಗ್ರಹಿಸಿಟ್ಟ ಪುಸ್ತಕಗಳಿಂದ ಶ್ಯಾಮಲರಿಗೆ ಓದುವ ಹವ್ಯಾಸ, ರಕ್ತಗತವಾಗಿ ಬಂಡ ಕಾಣಿಕೆಯಾಗಿತ್ತು. ಶಿವರಾಮ ಕಾರಂತ, ನಿರಂಜನ, ಬಸವರಾಜ ಕತ್ತೀಮನಿ, ಅ.ನ್.ಕೃ ,ತ.ರಾ.ಸು , ವ್ಯಾಸರಾಯ ಬಲ್ಲಾಳರ ಕ್ರಿತಿಗಳು ಬಾಲ್ಯದಲ್ಲೇ ಮನೆಯಲ್ಲೇ ಪ್ರಾಪ್ತವಾಯ್ತು. ರಾಜನ್ ಅಯ್ಯರ್ರ ನೃತ್ಯ ಕಲಾ ಶಿಕ್ಷಣ, ಶ್ರೀನಿವಾಸ ಉಡುಪರ ಸಂಗೀತ, ಪಿ.ಕೆ. ನಾರಾಯಣನ್ ರ, ಕನ್ನಡ ಸಾಹಿತ್ಯ ಪುಸ್ತಕ ಛಂದಸ್ಸು, ಶಾಲಾ ಲೈಬ್ರೆರಿ, ಲೈಟ್ ಹೌಸ್ ಹಿಲ್ ಲೈಬ್ರೆರಿ, ಕಾರ್ನಾಡ ಸದಾಶಿವರಾವ್ ಲೈಬ್ರೆರಿ, ಗಳ ಭೇಟಿ, ಪ್ರತಿದಿನವೂ ನಡೆಯುತ್ತಿತ್ತು. ಸಾಹಿತಿಗಳಾದ ಕಾರಂತ, ನಿರಂಜನ, ಅನಕೃ ತರಾಸು, ಕಟ್ಟಿಮನಿ, ಕೊರಟೆ, ಪುರಾಣಿಕ, ಪುರುಷೋತ್ತಮಾನ ಸಾಹಸ, ಸಚಿತ್ರ ರಾಮಾಯಣ, ಮಹಾಭಾರತ, ಚಂದಮಾಮ ಪುಸ್ತಕಗಳು ಅವರ ಸಾಹಿತ್ಯ ಅಭಿವ್ಯಕ್ತಿಗೆ ಸಾಧನಗಳಾದವು. ಮೊದಲು ಮುದಕೊಟ್ಟಿದ್ದು, ಚಿಕ್ಕ ಅನುವಾದಗಳು :
- ಮುರುಕು ಬಂದೂಕು,
- ಮಾರ್ಟಿನ್ ನ ಸಾಹಸ ಕಥೆಗಳು,
ದೊಡ್ಡ ಅನುವಾದಗಳು
[ಬದಲಾಯಿಸಿ]- ಅಲಿ ಒಶೈ, 'ಅಲೆಯೋಸಗೆ' ಪಾರ್ಟಿಷನ್ ಸಂಬಂಧಿಸಿದ ತಮಿಳು ಕೃತಿಯ ಅನುವಾದ.
- ಟ್ಯಾಗೋರ್ ಮತ್ತು ಶರತ್ ಚಂದ್ರ ಚಟರ್ಜಿಯವರ ಅನುವಾದಗಳು.
- ಕಮಲ ನೆಹರುರವರ 'ವಿತ್ ನೋ ರಿಗ್ರೆಟ್ಸ್', ನ ಕನ್ನಡ ಅನುವಾದ, 'ನೆನಪು ಕಹಿಯಲ್ಲ', ಎಂಬ ಸಿದ್ಧವ್ವನಹಳ್ಳಿ ಕೃಷ್ಣಶರ್ಮರ ಕನ್ನಡ ಅನುವಾದ, ಕೆ.ಎಮ್.ಮುನ್ಷಿಯವರ 'ಕೃಷ್ಣಾವತಾರ'ದ ಕನ್ನಡಾನುವಾದ ಅವರಿಗೆ ಪ್ರಿಯವಾಯಿತು.
ಮುಂಬಯಿಗೆಪಾದಾರ್ಪಣೆ
[ಬದಲಾಯಿಸಿ]'ಶ್ಯಾಮಲಾರವರು', ಮುಂಬಯಿನ ರೆಮಾಂಡ್ಸ್ ಕಂಪೆನಿಯ (Raymonds Co Ltd) ಸೋದರ ಸಂಸ್ಥೆ, 'ಅತುಲ್ ಸ್ಪಿನರ್ಸ್ ಕಂಪೆನಿ'(Atul Spinners Ltd;)' ಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ, 'ಮಾಧವ್ ಉಚ್ಚಿಲ್' ರನ್ನು ವಿವಾಹವಾಗಿ, ಮುಂಬಯಿನಗರಕ್ಕೆ ಬಂದು, ವಾಸ್ತವ್ಯಹೂಡಿದರು. ಆಗ ಶ್ಯಾಮಲಾ ೧೫ ವರ್ಷದ ಹರೆಯದ ತರುಣಿ. ಮಾಧವ್, ಕಾರ್ಯ ನಿಷ್ಥೆಗೆ ಹೆಸರಾದವರು. ತಮ್ಮಿಬ್ಬರ ಮದುವೆಗೆಂದು ಒಂದು ವಾರ ರಜೆ ಪಡೆದದ್ದನ್ನು ಬಿಟ್ಟರೆ, ಮತ್ತೆಂದೂ ಒಂದು ದಿನವೂ ವಾರದ ರಜಾ ದಿನವೂ ಇಲ್ಲದೆ 'ಕಾಯಕವೇ ಕೈಲಾಸ' ಎನ್ನುವ ಅನ್ವರ್ಥನಾಮಿಗಳು. ಯಾವಾಗಲು ಚಟುವಟಿಕೆಯಿಂದ ಕಾರ್ಯಾಸಕ್ತರಾಗಿರುವ ವ್ಯಕ್ತಿ. ಮಾಧವ್, ಅವರ ಬಾಸ್ 'ಕೈಥಾನ್' ರಿಂದ ಸಮ್ಮಾನಿತರಾದರು. ಮಾಧವರು, ಪತ್ನಿಯ ಅದಮ್ಯ ಸಾಹಿತ್ಯಾಸಕ್ತಿಯನ್ನು ಮನಗಂಡು ತಕ್ಷಣವೇ, ಮೈಸೂರ್ ಅಸೋಸಿಯೇಷನ್, ಮುಂಬಯಿ, ಕರ್ನಾಟಕ ಸಂಘ, ಮುಂಬಯಿ, ಮತ್ತು ಮುಂಬಯಿ ಕನ್ನಡ ಸಂಘ, ಮುಂಬಯಿ ಸಂಘಗಳಲ್ಲಿ ಸದಸ್ಯತ್ವವನ್ನು ಕೊಡಿಸಿದರು. ಈ ಸಂಸ್ಥೆಗಳಲ್ಲಿದ್ದ ಅಪರೂಪದ ಪುಸ್ತಕಗಳು ಮತ್ತು ಆಕರ ಗ್ರಂಥಗಳು,ಶ್ಯಾಮಲರ ಸಂಶೋಧನೆಯಲ್ಲಿ ಬಹಳ ಸಹಾಯಕವಾಯಿತು. ಈ ದಂಪತಿಗಳಿಗೆ ೩ ಜನ ಗಂಡು ಮಕ್ಕಳು : ೧. ತುಷಾರ್,೨. ಪ್ರಜ್ವಲ್, ಮತ್ತು ೩. ಹರ್ಷವರ್ಧನ್,ಎಂದು. ೧೯೭೧ ರಲ್ಲಿ, ಮುಂಬಯಿಗೆ ಬಂದಮೇಲೂ ಅಜ್ಜಿಯವರ ಬಗ್ಗೆ ಇದ್ದ ಅಪಾರ ಒಲವಿನಿಂದ ಅವರ ಸ್ಮೃತಿಗಳನ್ನು 'ಅಮೃತವರ್ಷಿಣಿ' ಪತ್ರಿಕೆಯಲ್ಲಿ ಪ್ರಕಟಿಸಿದರು. ಕನ್ನಡದಲ್ಲಿ ಕಥೆಗಳು, ಫೀಚರ್ಸ್, ಪರ್ಯಟನ ಕಥನಗಳು, ಮುಂಬಯಿನ ಮತ್ತು ಒಳನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕ್ರಮವಾಗಿ ಪ್ರಕಟಗೊಳ್ಳಲಾರಂಬಿಸಿದವು. ತಂದೆಯವರ ಬಳಿಕ ಶ್ಯಾಮಲರ ಸಾಹಿತ್ಯಿಕ ಕಾರ್ಯಗಳಲ್ಲಿ ಪ್ರೋತ್ಸಾಹದ ನೆರವು ದೊರೆತದ್ದು : ನಿರಂಜನ, ಯಶವಂತ ಚಿತ್ತಾಲ, ಕೆ.ಟಿ.ಗಟ್ಟಿ, ರಹಮತ್ ತರೀಕೆರೆ, ಭುವನೇಶ್ವರಿ ಹೆಗಡೆ, ಮತ್ತು ಯುವ ಸಾಹಿತಿ, ನೇಮಿಚಂದ್ರ (ಲೇಖಕಿ), ಮೊದಲಾದವರಿಂದ.
ಪ್ರಕಟಿತ ಅನುವಾದಿತ ಕೃತಿಗಳು
[ಬದಲಾಯಿಸಿ]- ದೂರದರ್ಶನದಲ್ಲಿ ಧಾರಾವಾಹಿಯಾಗಿ ಮನಸೆಳೆದ 'ಫರ್ಮಾನ್' ಪ್ರಸಾರಮುಗಿದಾಗ ಮೂಲಕೃತಿ 'ಆಲಂಪನಾ' ಪುಸ್ತಕವನ್ನಾರಿಸಿ ಪಡೆದರು. ಆ ಉತ್ಕೃಷ್ಟ ಉರ್ದೂ ಕೃತಿಯ ಸಾಹಿತ್ಯಕೃತಿಯ ಹಿಂದಿ ಭಾಷಾನುವಾದ ಸೊಗಸು ಶ್ರೇಷ್ಠತೆಗೆ ಮಾರುಹೋಗಿ ಕನ್ನಡಕ್ಕೆ ಅನುವಾದಿಸಿ ಕೃತಿ, 'ಆಲಂಪನಾ' ಭಾಗೀರಥಿ ಪ್ರಕಾಶನದಿಂದ ೧೯೯೪ ರಲ್ಲಿ ಪ್ರಕಟಿತಗೊಂಡಿತು.
- ಆಲಂಪನಾ ಕೃತಿಯ ಯಶಸ್ಸಿನ ಬೆನ್ನಲ್ಲೇ ಅತ್ಯಂತ ಪ್ರಿಯವಾಗಿ ಹೃದಯದಲ್ಲಿ ಅಚೊತ್ತಿಕೊಂಡ ಆಂಗ್ಲ ಸಾಹಿತ್ಯ ಕೃತಿ ಅಮೆರಿಕನ್ ಸಾಹಿತಿ ಮಾರ್ಗರೆಟ್ ಮಿಚೆಲ್ ಳ, 'ಗಾನ್ ವಿತ್ ದ ವಿಂಡ್', ವಿಶ್ವಸಾಹಿತ್ಯ ಕೃತಿಯ ಕನ್ನಡಾನುವಾದಕ್ಕೆ ತೊಡಗಿ ವರ್ಷದಲ್ಲೇ ಪೂರೈಸಿದ ಕನ್ನಡಾನುವಾದವು ಸುದೀರ್ಘವೆಂಬ ಕಾರಣದಿಂದ ಒಳಗುಳಿದು ೧೦ ವರ್ಷಗಳ ಬಳಿಕ ೨೦೦೪ ರಲ್ಲಿ ಅಂಕಿತಪ್ರಕಾಶನಾಲಯದಿಂದ ಬೆಳಕುಕಂಡಿತು.
- ೨೦೦೪ ರಲ್ಲಿ ಅನುವಾದಿತ ನಿವೃತ್ತ ಪೋಲಿಸ್ ಅಧಿಕಾರಿ 'ರಾಮಣ್ಣ ರೈ' ರವರ ಮೈ ಡೇಸ್ ಇನ್ ಪೊಲಿಸ್, ಕೃತಿಯ ಅನುವಾದ. 'ಪೋಲಿಸ್ ಡೈರಿ' ೨೦೦೫ ರಲ್ಲಿ ಸುಧಾವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಿತವಾಗುತ್ತಾ ಜನಪ್ರಿಯವಾಗಿತ್ತು.
- ಮತ್ತೊಬ್ಬ ಆಂಗ್ಲ ಲೇಖಕಿ ಮೇರಿ ಶೆಲ್ಲಿಯ [೭] ವಿಶ್ವಸಾಹಿತ್ಯ ಕೃತಿ 'ಫ್ರಾಂಕೆನ್ಸ್ಟೈನ್' ಕಾದಂಬರಿ ಕನ್ನಡ ಅನುವಾದ ವರ್ಷ ೨೦೦೭ ರಲ್ಲಿ ಅಂಕಿತ ಪ್ರಕಾಶನದಿಂದ ಬೆಳಕುಕಂಡು ವಿದ್ವತ್ ವಲಯದಲ್ಲಿ ಮನ್ನಣೆ ಪಡೆದಿದೆ.
- ಕಲ್ಕತ್ತಾದ ಕೃತಿ ಪ್ರಕಾಶನಕ್ಕಾಗಿ ಅನುವಾದಿತ ತುಳಸಿ ವೇಣುಗೋಪಾಲರ 'ಹೊಂಚು' ಕಥೆಯ ಇಂಗ್ಲೀಷ್ ಅನುವಾದ ’ಕಥಾ’ಸಂಚಯದಲ್ಲಿ ೨೦೧೧ ರಲ್ಲಿ ಪ್ರಕಟಿತವಾಯಿತು.
- ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕಾಗಿ ಮರಾಠಿಯಿಂದ ಅನುವಾದಿಸಿಕೊಟ್ಟ ಅಂಬೇಡ್ಕರ್ ಬರಹಗಳು, ಮತ್ತು ಭಾಷಾ ಪ್ರಾಧಿಕಾರದಿಂದ ಪ್ರಕಾಶಿತಗೊಂಡಿವೆ.
- ಎಂ.ಆರ್.ಫೌಂಡೇಶನ್ ಅನುವಾದಿಸಿಕೊಟ್ಟ ಎಂ.ಆರ್.ಪೈ ಆನ್ ಅನ್ ಕಾಮನ್ ಕಾಮನ್ ಮ್ಯಾನ್ ಕೃತಿ ಅನುವಾದ ಅಸಮಾನ್ಯ ಶ್ರೀ ಸಾಮಾನ್ಯ ಎಂ.ಆರ್.ಪೈ ಕೃತಿ ೨೦೧೩ ರಲ್ಲಿ ಐ.ಬಿ.ಎಚ್. ಪ್ರಕಾಶನ ಸಂಸ್ಥೆಯಿಂದ ಬೆಳಕುಕಂಡಿತು.
- 'ಸ್ಪಾರೊ ಸಂಸ್ಥೆ'ಗಾಗಿ 'ಸ್ಪೀಚ್ ಅಂಡ್ ಪಿಕ್ಚರ್ ಆರ್ಚೀವ್ಸ್ ಆನ್ ರಿಸರ್ಚ್ ಆನ್ ವಿಮೆನ್,’ ಮಾಡಿಕೊಟ್ಟ ಬಿ.ಟಿ.ಲಲಿತ ನಾಯಕರ ಎರಡು ಸಣ್ಣ ಕಥೆಗಳ ಇಂಗ್ಲೀಷ್ ಅನುವಾದ ಸಂಸ್ಥೆಯ ಆರ್ಕೈವ್ಸ್ ಸೇರಿದೆ.
- ಕಾಂತಾವರ ಕನ್ನಡ ಸಂಘ, 'ನಾಳೆಗೆ ನಮಸ್ಕಾರ ಮಾಲಿಕೆ'ಗೆ ರಾಮಚಂದ್ರ ಉಚ್ಚಿಲರಬಗ್ಗೆ ಪುಸ್ತಕ ರಚಿಸಿದ್ದಾರೆ.
ಅರುಂಧತಿ ರಾಯ್ ವಿರಚಿತ , ಬುಕರ್ ಪ್ರಶಸ್ತಿ ವಿಜೇತ 'ದ ಗಾಡ್ ಆಫ್ ಸ್ಮಾಲ್ ಥಿಂಗ್ಸ್' ಕೃತಿಯ ಕನ್ನಡಾನುವಾದ ಪ್ರಕಟನೆಗೆ ಕಾದಿದೆ.
ಬರವಣಿಗೆಯ ಹಾದಿಯಲ್ಲಿ
[ಬದಲಾಯಿಸಿ]- ಆಂಗ್ಲ ಲೇಖಕಿ ಎಮ್.ಎಮ್.ಕೆ.ವಿರಚಿತ ಬೃಹತ್ಕೃತಿ ಫಾರ್ ಪೆವಿಲಿಯನ್ಸ್,[೮] ಅನುವಾದ ಕಾರ್ಯಸಾಗಿದೆ. ಅಂಕಿತ ಪುಸ್ತಕದಿಂದ ಬೆಳಗು ಕಂಡು ವಿದ್ವತ್ ವಲಯದಲ್ಲಿ ಮನ್ನಣೆ ಪಡೆಯಿತು.
- ಕುವೆಂಪು ಭಾರತಿ ಪ್ರಾಧಿಕಾರಕ್ಕಾಗಿ ಅನುವಾದಿಸಿದ ಆಂಗ್ಲ ಲೇಖಕ, 'ವಿಲ್ ಡ್ಯುರಾಂಟ್' ನ 'ಸ್ಟೋರಿ ಆಫ್ ಸಿವಿಲಿಸೇಷನ್', ಕೃತಿಯ ಅನುವಾದದ ಭಾಗಗಳನ್ನೊಳಗೊಂಡ ಸಂಪೂರ್ಣ ಬೃಹತ್ ಕೃತಿ,ಪ್ರಾಧಿಕಾರದಿಂದ ೨೦೧೧-೧೨ ರಲ್ಲಿ ಪ್ರಕಟವಾಗಿತ್ತು.
ಸೃಜನ ಬಳಗದಲ್ಲಿ
[ಬದಲಾಯಿಸಿ]ಸೃಜನ ಬಳಗದ ಅಧ್ಯಕ್ಷೆ, ೨ ವರ್ಷ,ಕಮ್ಮಟಗಳನ್ನು ಪುಸ್ತಕ ಬಿಡುಗಡೆಕಾರ್ಯಕ್ರಮಗಳನ್ನು ಬೆಂಗಳೂರಿನ ಅವೆನ್ಯೂ ಅಕಾಡೇಮಿಯ ವತಿಯಿಂದ ಜೊತೆ ಆಯೋಜಿಸಿದ್ದರು. ೧೯೯೪ ರಲ್ಲಿ, 'ರಫಿಯ ಮಂಝುರುಲ್ ಅಮೀನ್', ವಿರಚಿತ ಭಾಗಿರಥಿ ಪ್ರಕಾಶನ. ಶ್ಯಾಮಲಾ, 'ಮ್ಯಾಂಗಲೂರಿಯನ್ ಡಾಟ್.ಕಾಂ ಪತ್ರಿಕೆ'ಯ ಓದುಗರು.
ಹೊಸ ಪುಸ್ತಕದ ಬಿಡುಗಡೆ
[ಬದಲಾಯಿಸಿ]ಮೈಸೂರ್ ಅಸೋಸಿಯೇಷನ್ ಮುಂಬಯಿನ ಸಭಾಗೃಹದಲ್ಲಿ ಸೃಜನಾ ಕನ್ನಡ ಲೇಖಕಿಯರ ಬಳಗದವರು ೧೬, ಡಿಸೆಂಬರ್,೨೦೧೬ ರಂದು, ಹಮ್ಮಿಕೊಂಡಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಶ್ಯಾಮಲಾ ಮಾಧವರ ಪುಸ್ತಕ ಬಿಡುಗಡೆಯಾಯಿತು. [೯], [೧೦]
ಸೌಂಡ್ ಅಂಡ್ ಪಿಚ್ಚರ್ ಆರ್ಕೈವ್ ನಲ್ಲಿ (SPARROW)
[ಬದಲಾಯಿಸಿ]'ಸೌಂಡ್ ಅಂಡ್ ಪಿಚ್ಚರ್ ಆರ್ಕೈವ್'(SPARROW)ನಲ್ಲಿ, ಮಹಿಳೆಯರ ಜೀವನದ ಬಗ್ಗೆ ನಡೆಸಿದ ಸಂಶೋಧನಾ ಕಾರ್ಯಗಳ ಅನುವಾದವನ್ನು ಮಾಡುವ ಕಾರ್ಯದಲ್ಲಿ ಸಕ್ರಿಯರಾಗಿದ್ದರು. ಮುಂಬಯಿವಾಣಿ, ನಿತ್ಯವಾಣಿ ದಿನಪತ್ರಿಕೆ ವಿಶೇಷ ಸಂಚಿಕೆಗಳಲ್ಲಿ ಸಂಪಾದಕ ಮಂಡಳಿಯಲ್ಲಿ ಅನುವಾದ ಕಾರ್ಯವನ್ನು ನಿರ್ವಹಿಸಿದರು. ಮುಂಬಯಿನ ಕನ್ನಡ ಕಥೆ, 'ಪುಕಾರ್', ಸಂಶೋಧನ ಪತ್ರಿಕೆಯನ್ನು ಪ್ರಸ್ತುತಪಡಿಸಿದರು.
ಮಂಗಳೂರು ಆಕಾಶವಾಣಿಯ ಸಂದರ್ಶನದಲ್ಲಿ
[ಬದಲಾಯಿಸಿ]ಆಕಾಶವಾಣಿಯ, 'ಮಾತಿನತೋರಣ ಮಾಲೆ'ಯಲ್ಲಿ 'ವಾರದ ಅತಿಥಿ'ಯಾಗಿ ಶ್ಯಾಮಲಾ ಮಾಧವರ ಸಂದರ್ಶನ ನಡೆಯಿತು. [೧೧]
ಪ್ರಶಸ್ತಿಗಳು
[ಬದಲಾಯಿಸಿ]- ಪ್ರಖ್ಯಾತ ಹಾಲಿವುಡ್ ಚಲನಚಿತ್ರ ಕ್ಕೆ ಪ್ರೇರಣೆಯಾದ 'ಗಾನ್ ವಿತ್ ದ ವಿಂಡ್', ಅನುವಾದಕೃತಿಗೆ ಕರ್ನಾಟಕ ಲೇಖಕಿಯರ ಸಂಘದಿಂದ ಅತ್ಯುತ್ತಮ ಅನುವಾದವೆಂದು ೨೦೦೫ ರ ಎಚ್.ವಿ.ಸಾವಿತ್ರಮ್ಮ ದತ್ತಿ ನಿಧಿ ಪ್ರಶಸ್ತಿ, [೧೨]
- 'ಗಾನ್ ವಿತ್ ದ ವಿಂಡ್' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ೨೦೦೪ ರ ಅತ್ಯುತ್ತಮ ಅನುವಾದ ಪುಸ್ತಕ ಬಹುಮಾನ,
- ಅನುವಾದಕೃತಿ ಆಲಂಪನ ಕೇಂದ್ರ ಸಾಹಿತ್ಯ ಅಕಾಡೆಮಿ ಅತ್ಯುತ್ತಮ ಅನುವಾದಿತ ಕೃತಿಗೆ ಕೊನೆಯ ಸುತ್ತಿನ ಸ್ಪರ್ಧೆಗಾಗಿ ಸತತ ೨ ವರ್ಷ ಆಹ್ವಾನಿತವಾಗಿತ್ತು.
- ಅನುವಾದಿತ ಕೃತಿ,'ಫ್ರಾಂಕೆನ್ ಸ್ಟೈನ್’ ಅನುವಾದ ಸಾಹಿತ್ಯ ಅಕಾಡೆಮಿಯಿಂದ ಅತ್ಯುತ್ತಮ ಅನುವಾದಕೃತಿಗಾಗಿ ಕೊನೆಯ ಸುತ್ತಿನ ಪ್ರಶಸ್ತಿಗಾಗಿ ಬಹುಮಾನ
- ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಿಂದ ೨೦೧೦ ರಲ್ಲಿ ಗೌರವ ಪುರಸ್ಕಾರ,
- ಹುಟ್ಟೂರು ಸಾಂಸ್ಕೃತಿಕ ವೇದಿಕೆಯಿಂದ೨೦೧೦ ರಲ್ಲಿ ಗೌರವ ಪುರಸ್ಕಾರ
- ಆಲಂಪನಾ ಪ್ರಕಟವಾದ ಬೆನ್ನಲ್ಲೇ ವೈ.ಎಂ.ಬಿ.ಎ,ಸಂಸ್ಥೆಯಿಂದ ಗೌರವ ಪುರಸ್ಕಾರ,
- ಕಲ್ಕತ್ತಾದ ಕೃತಿ ಪ್ರಕಾಶನಕ್ಕಾಗಿ ಅನುವಾದಿತ ತುಳಸಿ ವೇಣುಗೋಪಾಲರ 'ಹೊಂಚು' ಕಥೆಯ ಇಂಗ್ಲೀಷ್ ಅನುವಾದ ’ಕಥಾ’ಸಂಚಯದಲ್ಲಿ ೨೦೧೧ ರಲ್ಲಿ ಪ್ರಕಟಿತ,
- ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕಾಗಿ ಮರಾಠಿಯಿಂದ ಅನುವಾದಿಸಿಕೊಟ್ಟ ಅಂಬೇಡ್ಕರ್ ಬರಹಗಳು, ಭಾಷಾ ಪ್ರಾಧಿಕಾರದಿಂದ ಪ್ರಕಾಶಿತ,
- ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ವತಿಯಿಂದ ಪ್ರಶಸ್ತಿ ಪ್ರದಾನ,[೧೩] ಮೈಸೂರಿನಲ್ಲಿ (೨೦೧೫) [೧೪]
- ಮುಂಬಯಿನ ಮೈಸೂರು ಅಸೋಸಿಯೇಷನ್ ಸಭಾಂಗಣದಲ್ಲಿ ಶ್ಯಾಮಲಾ ಮಾಧವರ ಅನುವಾದ ಕೃತಿಯನ್ನು ಸುಪ್ರೀಮ್ ಕೋರ್ಟ್ ನ ಮಾಜಿ ನಿವೃತ್ತ ನ್ಯಾಯಾಧೀಶ, ಬಿ.ಎನ್.ಶ್ರೀಕೃಷ್ಣರವರು ಬಿಡುಗಡೆಮಾಡಿದರು.[೧೫]
- [೧೬] ಅವಧಿ ಸಂಸ್ಥೆ ಆಯೋಜಿಸಿದ್ದ, ಶ್ಯಾಮಲಾ ಮಾಧವರ ಕೃತಿ,'ನಾಳೆ ಇನ್ನೂ ಕಾದಿದೆ', ಬಿಡುಗಡೆಯ ಕಾರ್ಯಕ್ರಮದಲ್ಲಿ ಡಾ.ಬಿ.ಎ.ವಿವೇಕ್ ರೈ, ಜಯಲಕ್ಷ್ಮಿ ಪಾಟೀಲ್, ಮತ್ತು ಎನ್.ದಾಮೋದರ್ ಶೆಟ್ಟಿಯವರು ಕೃತಿಯ ಬಗ್ಗೆ ಮಾತಾಡಿದರು. ೨೮, ಮಾರ್ಚ್, ೨೦೨೧, ಡೈಲಿಹಂಟ್][೧೭] [೧]
ಉಲ್ಲೇಖಗಳು
[ಬದಲಾಯಿಸಿ]- ↑ 30 Mar 2015, Canara news, By : Rons Bantwal, ಶ್ಯಾಮಲಾ ಮಾಧವ-ಪರಿಚಯ
- ↑ English Wikipedia,'Margaret_Mitchell'
- ↑ 'ವಾರ್ತಾ ಭಾರತಿ,' ಜನವರಿ-೧೨-೨೦೧೧, ಅಂಕಣ - ಮುಂಬಯಿ ಮೇರಿ ಜಾನ್, ವಾಸ್ತವವಾದಿ ನೆಲೆಯ ಆಪ್ತ ಕಥಾಲೋಕ: ವಾಸ್ತವವಾದಿ ನೆಲೆಯ ಆಪ್ತ ಕಥಾಲೋಕ ಶ್ಯಾಮಲಾ ಮಾಧವ್‌ರ ಚೊಚ್ಚಲ ಕೃತಿ ‘ಆ ಲೋಕ’
- ↑ "Pustaka Digital media, Shyamala Madhav and her books,". Archived from the original on 2015-03-21. Retrieved 2015-03-19.
- ↑ canaranews.com, 30 Mar 2015, Rons Bantwal; ಶ್ಯಾಮಲಾ ಮಾಧವ - ಪರಿಚಯ
- ↑ "ಮಂಗಳೂರು-My Home City: Down Memory Lane.By Shyamala Madhav, Mumbai (Published Date: August 2, 2014)". Archived from the original on ಆಗಸ್ಟ್ 21, 2014. Retrieved ಮಾರ್ಚ್ 19, 2015.
- ↑ "The European Graduate School, Graduate & Postgraduate Studies, MARY SHELLEY - BIOGRAPHY". Archived from the original on 2015-03-18. Retrieved 2015-03-19.
- ↑ is a Philippine drama anthology series broadcast on ABS-CBN every Saturday evening and is hosted by Margaret Mitchell, English Wikipedia, Maalaala Mo Kaya
- ↑ Dec,17,2016,ಸುದ್ದಿ-೯, ಭಾಷಾಂತರ ಮಹಾ ಸಂಕಟದ ಕಾಯಕವಾಗಿದೆ: ಜಸ್ಟಿಸ್ ಶ್ರೀಕೃಷ್ಣ
- ↑ "Mumbai: Srajana Balaga releases three works by different authors Rons Bantwal, ಡೈಜಿ ವರ್ಲ್ಡ್.ಕಾಂ.೧೯,ಡಿಸೆಂಬರ್,೨೦೧೬". Archived from the original on 2016-12-20. Retrieved 2016-12-21.
- ↑ , 'ಮಾತಿನತೋರಣ ಮಾಲೆ'ಯಲ್ಲಿ ವಾರದ ಅತಿಥಿ'ಯಾಗಿ ಶ್ಯಾಮಲಾ ಮಾಧವರ ಸಂದರ್ಶನ-ಸಂದರ್ಶಕರು : ಬಿ.ಎನ್. ಶರಭೇಂದ್ರಸ್ವಾಮಿ
- ↑ "ವರ್ಷ ೨೦೦೫ ರಲ್ಲಿ 'ಕರ್ನಾಟಕದ ಲೇಖಕಿಯರ ಸಂಘದಿಂದ ಪ್ರತಿಷ್ಠಿತ, ಎಚ್.ವಿ.ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ' ದೊರೆತಿದೆ". Archived from the original on 2016-03-05. Retrieved 2015-03-20.
- ↑ "ಕರ್ನಾಟಕ ಮಲ್ಲ, ೪,ಮಾರ್ಚ್,೨೦೧೫,ಮುಂಬಯಿಯ,ಶ್ರೀಮತಿ.ಶ್ಯಾಮಲಾ ಮಾಧವರಿಗೆ, 'ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿ',". Archived from the original on 2016-06-30. Retrieved 2015-04-03.
- ↑ 'ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪ್ರಶಸ್ತಿ ಪ್ರದಾನ' ೩೦, ಸೋಮವಾರ, ಮಾರ್ಚ್, ೨೦೧೫ ರಂದು,ಮೈಸೂರಿನಲ್ಲಿ. ವರದಿ :ಪ್ರಜಾವಾಣಿ, ೩೧, ಮಾರ್ಚ್,೨೦೧೫
- ↑ Canara news, Book-Release and Analysis by Srujana Group Mumbai, 17 Dec 2016, By : Rons Bantwal
- ↑ 'ಸಾಮರಸ್ಯದ ಬದುಕು ಕಟ್ಟಿಕೊಟ್ಟ ಕೃತಿ' 'ನಾಳೆ ಇನ್ನೂ ಕಾದಿದೆ'
- ↑ https://avadhimag.in/ಶ್ಯಾಮಲಾ-ಮಾಧವ-ಕೃತಿ-ಅಂತರಂಗ/
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- ನ್ಯೂಸ್ ಕನ್ನಡ.ಡಾ.ಕಾಂ, 'ಕರ್ನಾಟಕ ಸಂಘದಲ್ಲಿ ಸಾಹಿತ್ಯ ಚಿಂತನ,ಕೃತಿ ಬಿಡುಗಡೆ', 30-06-2014, ವರದಿ :ಈಶ್ವರ ಎಂ.ಎಲ್,ಚಿತ್ರ: ದಿನೇಶ್ ಕುಲಾಲ್ Archived 2014-07-14 ವೇಬ್ಯಾಕ್ ಮೆಷಿನ್ ನಲ್ಲಿ.
- ಅತ್ರಿ ಬುಕ್.ಡಾಟ್.ಕಾಂ. ಅಮೃತಗೀತ,೨೬,ಸೆಪ್ಟೆಂಬರ್, ೨೦೧೪,'ಅಮೃತ ಸೋಮೇಶ್ವರರ ಎಂಬತ್ತನೇ ಜನ್ಮದಿನದ ಅಭಿನಂದನಾ ಸಮಾರಂಭಕ್ಕೆ, ವಿಶೇಷವಾಗಿ ಬರೆದ ಚಿತ್ರ ಲೇಖನ': 'ಶ್ಯಾಮಲಾ ಮಾಧವ' Archived 2016-03-04 ವೇಬ್ಯಾಕ್ ಮೆಷಿನ್ ನಲ್ಲಿ.
- canaranews.com, Rons Bantwal ಸೃಜನಾ ಮುಂಬಯಿ-ಅಧ್ಯಯನ, ಅನ್ವೇಷಣೆ, ಸಂಶೋಧನೆಯ ಕಥನ ಪರ್ವ, ೧೪,ಮಾರ್ಚ್,೨೦೧೫
- ವಿಜಯ ಕರ್ನಾಟಕ, Mar 31, 2015, 'ಜಾಗತೀಕರಣದಿಂದ ಅನುವಾದವೂ ಕಲುಷಿತ': ಪ್ರೊ. ರಾಜೇಂದ್ರ ಚೆನ್ನಿ
- ಅತ್ರಿ ಬುಕ್ ಸೆಂಟರ್,೦೪,ಅಕ್ಟೋಬರ್, ೨೦೧೬,"ಗಂಗಾನಿವಾಸದ ದಿನಗಳು",ಶ್ಯಾಮಲಾ ಮಾಧವ,ಆತ್ಮಕಥಾನಕ,ಧಾರಾವಾಹಿ-ಅದ್ಯಾಯ-೧೦[ಶಾಶ್ವತವಾಗಿ ಮಡಿದ ಕೊಂಡಿ]
- Articles with hCards
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ನವೆಂಬರ್ 2022
- Articles with invalid date parameter in template
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮುಂಬಯಿ ಕನ್ನಡಿಗರು
- ಲೇಖಕಿಯರು
- ಅನುವಾದಕರು