ಭುವನೇಶ್ವರಿ ಹೆಗಡೆ

ವಿಕಿಪೀಡಿಯ ಇಂದ
Jump to navigation Jump to search
ಭುವನೇಶ್ವರಿ ಹೆಗಡೆ

ಭುವನೇಶ್ವರಿ ಹೆಗಡೆ ಕನ್ನಡ ಸಾಹಿತ್ಯದ ಹಾಸ್ಯಲೋಕದಲ್ಲಿ ಪ್ರಮುಖವಾದ ಹೆಸರು.೦೬-೦೫-೧೯೫೬ರಲ್ಲಿ ಜನಿಸಿದ ಭುವನೇಶ್ವರಿ ಹೆಗಡೆ, ಉತ್ತರ ಕನ್ನಡ ಜಿಲ್ಲೆ ಕತ್ರಗಾಲ ಗ್ರಾಮದವರು. ಇವರ ತಂದೆ ಶ್ರೀ ಗಣಪತಿ ಹೆಗಡೆ ಕತ್ರಗಾಲ, ತಾಯಿ ಗೌರಮ್ಮ. ತಮ್ಮ ಪದವಿ ವಿದ್ಯಾಭ್ಯಾಸವನ್ನು ಶಿರ್ಸಿಯ ಎಮ್.ಇ.ಎಸ್ ಕಾಲೇಜಿನಲ್ಲಿ ಪೂರೈಸಿ ಕನರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಪಡೆದವರು. ಪತಿ ಶ್ರೀ ಶಂಭುಹೆಗಡೆ ಹಾಗು ಮಗಳು ಆಭಾ. ಇವರ ೫೦೦ಕ್ಕೂ ಮಿಕ್ಕ ಹಾಸ್ಯ ಪ್ರಬಂಧ ರಚನೆ ಕನ್ನಡದ ಎಲ್ಲ ಪ್ರಮುಖ ಪತ್ರಿಕೆ,ನಿಯತಕಾಲಿಕೆಗಳಲ್ಲಿ ಪ್ರಕಟಿತವಾಗಿವೆ.

ಪ್ರಸ್ತುತ ವಿಶ್ವವಿದ್ಯಾನಿಲಯ ಕಾಲೇಜು,ಮಂಗಳೂರು ಇಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕಿಯಾಗಿದ್ದಾರೆ.

ಕೃತಿಗಳು[ಬದಲಾಯಿಸಿ]

ಕೃತಿಗಳು ದೊರೆತ ಪುರಸ್ಕಾರಗಳ
ಮುಗುಳು (೧೯೮೬,೧೯೯೬) ಧಾರವಾಡ ವಿದ್ಯಾವರ್ಧಕ ಸ೦ಘದ ರತ್ನಮ್ಮ ಹೆಗ್ಗಡೆ ಪ್ರಶಸ್ತಿ.
ಕನ್ನಡ ಸಾಹಿತ್ಯ ಪರಿಷತ್ ಅ೦ತರಾಷ್ಟ್ರೀಯ ಮಹಿಳಾ ವರ್ಷ ಪ್ರಶಸ್ತಿ -೧೯೮೬.
ನಕ್ಕು ಹಗುರಾಗಿ (೧೯೮೮,೧೯೯೬) ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ - ೧೯೮೮
ಪಡುಕೋಣೆ ರಮಾನ೦ದ ಪ್ರಶಸ್ತಿ
ಎಂಥದು ಮಾರಾಯ್ರೆ(೧೯೯೬,೧೯೯೯) ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ - ೧೯೯೭
ಅತ್ತಿಮಬ್ಬೆ ಪ್ರತಿಷ್ಠಾನ ಬಹುಮಾನ - ೧೯೯೭
ಬನಹಟ್ಟಿ ಪುಸ್ತಕ ಬಹುಮಾನ - ೧೯೯೭
ಪುತ್ತೂರಿನ ಉಗ್ರಾಣ ಪ್ರಶಸ್ತಿ - ೧೯೯೮
ವಲಲ ಪ್ರತಾಪ (೧೯೯೭) ೬೬ನೇ ಅಖಿಲ ಭಾರತ ಕನ್ನಡ ಸಾಹಿತ್ಯಸಮ್ಮೇಳನ ಪುರಸ್ಕ್ರತ ಕೃತಿ
ಹಾಸಭಾಸ (೨೦೦೦) ಅತ್ತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ
ದ.ಕ.ಜಿಲ್ಲಾ ಸಾಹಿತ್ಯ ಸಮ್ಮೇಳನ ಪುರಸ್ಕಾರ
ಕನ್ನಡ ಸಾಹಿತ್ಯ ಪರಿಷತ್ ಕು೦.ಬಾ.ಸ. ಬಹುಮಾನ
ಮೃಗಯಾ ವಿನೋದ (೨೦೦೧, ೨೦೦೮) ಉತ್ತರ ಕರ್ನಾಟಕ ಲೇಖಕಿಯರ ಸಂಘ ಹಾಗೂ ಇನ್ಪೋಸಿಸ್ ಫೌ೦ಡೇಶನ್ನಿನ ಡಾ.ಸುಧಾಮೂರ್ತಿ ಪ್ರಶಸ್ತಿ -೨೦೦೭
ಬೆಟ್ಟದ ಭಾಗೀರಥಿ (೨೦೦೪) ಕನ್ನಡ ಸಾಹಿತ್ಯ ಪರಿಷತ್ತಿನ ಕುವೆ೦ಪು ಸ್ಮ್ರತಿ ಮಾಲಿಕೆಯಡಿ ಪ್ರಕಟಿತ
ಮಾತಾಡಲು ಮಾತೇ ಬೇಕೆ? (೨೦೦೬) ಬ೦ಟ್ವಾಳ ಅಕ್ಷರ ಪ್ರತಿಷ್ಠಾನದ ಅಕ್ಷರ ಶ್ರೀ ರಾಜ್ಯ ಪ್ರಶಸ್ತಿ
ಪುಟ್ಟಿಯ ಪಟ್ಟೆ ಹುಲಿ (೨೦೦೬) ಮೈಸೂರಿನ ರ೦ಗಾಯಣ ಹಾಗೂ ಸ್ವೀಡನ್ನಿನ ಐ.ಟಿ ಶಿಬಿರದಲ್ಲಿ ಪ್ರಕಟಿತ ಮಕ್ಕಳ ನಾಟಕ
ಕೈಗುಣ ಬಾಯ್ಗುಣ (೨೦೦೬) ಉದಯವಾಣಿ, ವಾರ್ತಾಭಾರತಿ ಪತ್ರಿಕೋಶ ಅಂಕಣಗಳ ಸಂಕಲನ
ಬೆಸ್ಟ್ ಆಫ್ ಭು.ಹೆ (೨೦೦೮) ‘ಅಂಕಿತ ಪುಸ್ತಕ’ ಪ್ರಕಟಿತ

ರೇಡಿಯೋ ನಗೆ ನಾಟಕಗಳು[ಬದಲಾಯಿಸಿ]

ನಗೆ ನಾಟಕಗಳು ಆಕಾಶವಾಣಿ ಕೇಂದ್ರ ದಿನಾಂಕ
ಸೂರು ಸಿಕ್ಕದಲ್ಲಾ ಬೆಂಗಳೂರು ಆಕಾಶವಾಣಿ. ೦೫/೯/೧೯೯೪
ಕಛೇರಿ ವೈಭವಂ ಮಂಗಳೂರು ಆಕಾಶವಾಣಿ. ೧೧/೩/೧೯೯೯
ವಸಂತ ವ್ಯಾಧಿ ಮಂಗಳೂರು ಆಕಾಶವಾಣಿ. ೧೩/೨/೨೦೦೧
ಕಾವ್ಯಕೋಲಾಹಲ ಮಂಗಳೂರು ಆಕಾಶವಾಣಿ. ೦೬/೧೨/೨೦೦೫

ಪಠ್ಯ ಪುಸ್ತಕಗಳಲ್ಲಿನ ಪ್ರಬ೦ಧಗಳು[ಬದಲಾಯಿಸಿ]

ಇ೦ಗ್ಲೀಷ್ ಮಾಧ್ಯಮ ಆರನೇ ತರಗತಿ ‘ಸಭಾಕ೦ಪನ’ ಪಾಠ ಕನ್ನಡ ಪಠ್ಯದಲ್ಲಿ
ಪ್ರಥಮ ಪಿಯುಸಿ ಕನ್ನಡ ಪಠ್ಯ ‘ಮೂಢ ನ೦ಬಿಕೆಗಳ’ ಬೀಡಿನಲ್ಲಿ ಪ್ರಬಂಧ
ಹಂಪಿ ವಿಶ್ವವಿದ್ಯಾನಿಲಯ ಪಿ.ಯು.ಸಿ ಅರ್ಥಶಾಸ್ತ್ರ ಪಠ್ಯ
ಧಾರವಾಡ ಕರ್ನಾಟಕ ವಿಶ್ವವಿದ್ಯಾನಿಲಯದ ತೃತೀಯ ಪದವಿ ಕನ್ನಡ ಪಠ್ಯದಲ್ಲ ‘ಸುಲಭದಲ್ಲಿ ಸಜ್ಜನರಾಗಲಾರಿರಿ’ ಪ್ರಬಂಧ
ಕುವೆಂಪು ವಿಶ್ವವಿದ್ಯಾಲಯದ ದ್ವಿತೀಯ ಸೆಮಿಸ್ಟರ್ ಕನ್ನಡ ಪಠ್ಯದಲ್ಲಿ ‘ನಕ್ಕು ಹಗುರಾಗಿ’ ಪ್ರಬ೦ಧ
ಕನ್ನಡ ಸಾಹಿತ್ಯ ಪರಿಷತ್ ಪಠ್ಯದಲ್ಲಿ ‘ಏಕಾಂತ ಸುಖ’ ಪ್ರಬಂಧ

ವಿಶೇಷ ಸಂಕಲನಗಳಲ್ಲಿನ ಲೇಖನಗಳು[ಬದಲಾಯಿಸಿ]

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಶತಮಾನದ ಲಲಿತ ಪ್ರಬಂಧಗಳು ‘ಬೈಯಲು ಕಲಿಯಿರಿ’ ಲಲಿತ ಪ್ರಬ೦ಧ
ಅಕಾಡೆಮಿಯ ಸಾಲುದೀಪಗಳು ಸಂಪುಟ ‘ಟಿ.ಸುನ೦ದಮ್ಮ ಕುರಿತ ಲೇಖನ’
ಹಂಪಿ ಕನ್ನಡ ವಿಶ್ವವಿದ್ಯಾಲಯ ಸುವರ್ಣ ಸಾಹಿತ್ಯ ಸಂಸ್ಕೃತಿ ಪಥ ಕನ್ನಡ ಲಲಿತ ಪ್ರಬ೦ಧಗಳು -ಸಮೀಕ್ಷೆ
ಅಕಾಡೆಮಿಯ ವಾರ್ಷಿಕ ಪ್ರಬ೦ಧ ಸಂಕಲನಗಳು ಹಾಸ್ಯ ಪ್ರಬ೦ಧಗಳ ವಾರ್ಷಿಕ ಆಯ್ಕೆ
ಕ.ಸಾ.ಪ ಪ್ರಕಟಣೆ ಪ್ರಸಾರ ಹಾಸ್ಯ (ಬಾನುಲಿ ಹಾಸ್ಯ ಸಂಕಲನ) ಅತ್ತೆಗೊ೦ದು ಕಾಲ ಆಕಾಶವಾಣಿ ಭಾಷಣ
ಅಮೆರಿಕಾದ ನ್ಯೂಜೆರ್ಸಿಯ ಕನ್ನಡ ಸಾಹಿತ್ಯರಂಗದ ನಗೆ ಗನ್ನಡ೦ಗೆಲ್ಗೆ ಗ್ರಂಥ ಅಧುನಿಕ ಕನ್ನಡ ಸಾಹಿತ್ಯದಲ್ಲಿ ಹಾಸ್ಯ - ಅ.ರಾ.ಸೆ.ಕುರಿತ ಲೇಖನ

ಸಮ್ಮೇಳನ / ಸನ್ಮಾನ / ಸಮಾರ೦ಭ / ಪ್ರಬ೦ಧ ಮ೦ಡನೆ[ಬದಲಾಯಿಸಿ]

 • ನವದೆಹಲಿಯ ಆಥರ್ಸ್ ಗಿಲ್ಡ್ ಆಫ್ ಇ೦ಡಿಯಾ ಮೀಟ್
 • ತಂಜಾವೂರಿನ ಚತುರ್ದ್ರಾವಿಡ ಭಾಷಾ ಸಮ್ಮೇಳನ
 • ನೈ ಕನ್ನಡ ಸಂಘ
 • ಗೋವಾ ಕರ್ನಾಟಕ ಸಂಘ
 • ಬಿಜಾಪುರ, ಗುಲ್ಬರ್ಗಾ, ಮೈಸೂರು, ಹಾಸನ, ಮೂಡಿಗೆರೆ, ಕುದುರೆಮುಖ ಚಿಕ್ಕಮಗಳೂರು ಭದ್ರಾವತಿ, ಶಿವಮೊಗ್ಗ ಶೃಂಗೇರಿ, ಹೊಸನಗರ, ಮೂಡಬಿದ್ರಿ, ತುಮಕೂರು, ಬೆಂಗಳೂರು, ಹಾನಗಾಲ್ಲ್, ಜೋಗ, ಸಿರಸಿ,ಧಾರವಾಡ, ಪುತ್ತೂರು, ಸುಳ್ಯ, ಉಡುಪಿ, ಮಣಿಪಾಲ, ಕಾಂತಾವರ, ಕುಂದಾಪುರ, ಮಂಜೇಶ್ವರ, ಕಾಸರಗೋಡು, ಬಂಟ್ವಾಳಗಳ ವಿವಿಧ ಸಂಘ ಸ೦ಸ್ಥೆಗಳಲ್ಲಿ ಉಪನ್ಯಾಸ ಪ್ರಬಂಧ.

ಅಂಕಣ-ಬರಹಗಳು[ಬದಲಾಯಿಸಿ]

ಪತ್ರಿಕೆ ಅಂಕಣ
ಲಂಕೇಶ್ ಪತ್ರಿಕೆ ಮಂಗಳೂರು ಮುಗುಳ್ನಗೆ
ವಾರ್ತಾಭಾರತಿ ನಗೆಮೊಗೆ
ಉದಯವಾಣಿ ಲಘುಬಗೆ
ಕರ್ಮವೀರ ಎ೦ತದು ಮಾರಾಯ್ರೇ
ಪ್ರಜಾವಾಣಿ ಪಡು ಪಡುಸಾಲೆ

ವಿಶೇಷ ಸಾಧನೆ[ಬದಲಾಯಿಸಿ]

 • ಅಂತರಾಷ್ಟ್ರೀಯ ಸಾಧನಾಶೀಲ ಮಹಿಳೆಯರ ಕುರಿತಾದ ಪುಸ್ತಕ ರೆಫ಼ರೆನ್ಸ್ ಏಷ್ಯಾದಲ್ಲಿ ಹೆಸರು ಸೇರ್ಪಡೆಯಾಗಿದೆ.

ಸಾಹಿತ್ಯ ಸಮ್ಮೇಳನಗಳಲ್ಲಿ ಅತಿಥಿ /ಸ೦ಪನ್ಮೂಲ ವ್ಯಕ್ತಿ[ಬದಲಾಯಿಸಿ]

ಸಮಾರಂಭ ದಿನಾಂಕ
ಕರ್ನಾಟಕ ಲೇಖಕಿಯರ ದಶಮಾನೋತ್ಸವ ಬೆಂಗಳೂರು ೨೪/೦೩/೧೯೮೯
ದ.ಕ.ಜಿಲ್ಲಾ ಸಾಹಿತ್ಯ ಸಮ್ಮೇಳನ ಪುತ್ತೂರ ೦೯/೦೨/೧೯೯೨
ಧರ್ಮಸ್ಥಳ ಸಾಹಿತ್ಯ ಸಮ್ಮೇಳನ ಧರ್ಮಸ್ಥಳ ೨೩/೧೧/೧೯೯೨
ಮಂಗಳೂರು ತಾಲೂಕು ಸಾಹಿತ್ಯ ಸಮ್ಮೇಳನ ಸುರತ್ಕಲ್ ೦೬/೦೨/೧೯೯೪
ದಸರಾ ಸಾಹಿತ್ಯೋತ್ಸವ ಮೂಡಬಿದಿರೆ ೨೫/೦೯/೧೯೯೫
ಬೆಳ್ತಂಗಡಿ ತಾಲೂಕು ಸಾಹಿತ್ಯ ಸಮ್ಮೇಳನ ಮಂಡತ್ಯಾರು ೧೯/೦೧/೧೯೯೭
ಕುಂದಾಪುರ ತಾಲೂಕು ಸಾಹಿತ್ಯ ಸಮ್ಮೇಳನ ಹಟ್ಟಿಯ೦ಗಡಿ ೦೧/೦೩/೧೯೯೭
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಗಳೂರು ೧೩/೧೨/೧೯೯೭
ಸುಳ್ಯ ತಾಲೂಕು ಸಾಹಿತ್ಯ ಸಮ್ಮೇಳನ ಐವರ್ನಾಡು ೦೧/೦೩/೧೯೯೮
ಕರ್ನಾಟಕ ಲೇಖಕಿಯರ ಸ೦ಘ ಬೆಂಗಳೂರು ೨೯/೦೩/೧೯೯೯
ದ.ಕ.ಜಿಲ್ಲಾ ಸಾಹಿತ್ಯ ಸಮ್ಮೇಳನ ಮೊಡ೦ಕಾಪು ೦೩/೦೪/೨೦೦೦
ಕಾರ್ಕಳ ತಾಲೂಕು ಸಾಹಿತ್ಯ ಸಮ್ಮೇಳನ ನಲ್ಲೂರು ೧೯/೧೧/೨೦೦೦
ಶಿವಮೊಗ್ಗ ಕರ್ನಾಟಕ ಸ೦ಘ ಶಿವಮೊಗ್ಗ ೧೫/೦೪/೨೦೦೨
ಲೇಖಕಿಯರ ಸಮ್ಮೇಳನ ಬೆಂಗಳೂರು ೧೩/೦೭/೨೦೦೩
ವಿಟ್ಲ ತಾ ಸಾಹಿತ್ಯ ಸಮ್ಮೇಳನ ಒಡಿಯೂರು ೦೫/೧೦/೨೦೦೩
ಶರಣ ಸಾಹಿತ್ಯ ಸಮ್ಮೇಳನ ಆನ೦ದಪುರ ೨೩/೧೧/೨೦೦೩
ಕರಾವಳಿ ಸಾಹಿತ್ಯ ಸಮ್ಮೇಳನ ಮಂಗಳೂರು ೩೦/೧೧/೨೦೦೩
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮೂಡಬಿದ್ರೆ ೨೦/೧೨/೨೦೦೩
ಮಕ್ಕಳ ಸಾಹಿತ್ಯ ಸಮ್ಮೇಳನ ಮ೦ಜೇಶ್ವರ ೧೪/೦೮/೨೦೦೪
ಮಕ್ಕಳ ಸಾಹಿತ್ಯ ಸಮ್ಮೇಳನ ಪುನರೂರು ೧೧/೦೯/೨೦೦೪
ಚುಟುಕು ಸಮ್ಮೇಳನ ಮಣಿಪಾಲ ೨೪/೧೦/೨೦೦೪
ರಂಗಾಯಣ ನಾಟಕ ರಚನಾ ಶಿಬಿರ ಮೈಸೂರು ೨೦/೦೨/೨೦೦೫
ಬಹುಭಾಷಾ ಕವಿ ಸಮ್ಮೇಳನ ಭದ್ರಾವತಿ ೨೧/೦೧/೨೦೦೬
ಉ.ಕ.ಜಿಲ್ಲಾ ಮಹಿಳಾ ಸಾ.ಸಮ್ಮೇಳನ ಕುಮುಟಾ ೨೧/೦೫/೨೦೦೬
ಆಳ್ವಾಸ್ ನುಡಿಸಿರಿ, ಮೂಡಬಿದಿರೆ ೩೦/೧೧/೨೦೦೭
ಸುಳ್ಯ ತಾಲ್ಲೂಕು ಸಾಹಿತ್ಯ ಸಮ್ಮೇಳನ ಬೆಳ್ಳಾರೆ ೦೫/೦೧/೨೦೦೮

}

ಮುನ್ನುಡಿ ಬರೆದ ಕೃತಿಗಳು[ಬದಲಾಯಿಸಿ]

 • ಹೆಂಡತಿ ಮತ್ತು ವೆಹಿಕಲ್ - ತುರುವೇಕೆರೆ ಪ್ರಸಾದ್
 • ಕಲ್ಲಮ್ಮನ ಕ೦ಪೌ೦ಡ್ - ಶರಣಗೌಡ ಎರಡೆತ್ತಿನ
 • ವಿಧುರನ ಒಸಗೆ - ಹಾಲಾಡಿ ಮಾರುತಿರಾವ್
 • ಜಾಜಿಗಿಡದ ಗುಬ್ಬಿಗಳು - ಜಯಾ ಯಾಜಿ
 • ಆಸೆಗಿಷ್ಟು ಬಣ್ಣ ಹಚ್ಚಿ - ಡಾ||ಮೀರಾ ಎಸ್
 • ಹತ್ತೆಸಳು - ಕೊಡಗಿನ ಗೌರಮ್ಮ ಪ್ರಶಸ್ತಿ ವಿಜೇತ ಕಥಾ ಸಂಕಲನ
 • ಅನುಕೂಲಕ್ಕೆ೦ದು ಅವತಾರ - ಮಲ್ಲಿಕಾರ್ಜುನ ಹುಲಗೆ ಬಾಳಿ
 • ನಾನೂ ನನ್ನವಳೂ - ಪ್ರಕಾಶ್ ಪಯಣಿಗ
 • ಕಾಣ್ಕೆ - ತೇಜಸ್ವಿನಿ ಹೆಗಡೆ
 • ಅರೆಬೊಕ್ಕ ತಲೆಯವರು - ಎಚ್.ಎಸ್.ನವೀನ್ಕುಮಾರ್
 • ಚುಟುಕು ಸಂಕಲನ - ಗಣೇಶ್ ಪ್ರಸಾದ್ ಜಿ