ಶೈತ್ಯಗೋಪುರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸ್ವಾಭಾವಿಕ ಮಾರುತಚಲನ ಕ್ಲಿನ್ನ ತಂಪಾಗಿಸುವ ಹೈಪರ್ಬೋಲಿಕ್ ಗೋಪುರಗಳು ಡಿಡ್ ಕಾಟ್ ಪವರ್ ಸ್ಟೇಷನ್, ಯುಕೆಯಲ್ಲಿ.
ಯಂತ್ರದಿಂದ ರಚಿಸಲ್ಪಟ್ಟ-ಮಾರುತಚಲನ ಶೈತ್ಯಗೋಪುರ

ಶೈತ್ಯಗೋಪುರಗಳು ಶಾಖವನ್ನು ತೆಗೆಯು ಉಪಕರಣಗಳಾಗಿದದು ಸಂಸ್ಕರಣ ತ್ಯಾಜ್ಯ ಶಾಖವನ್ನು ವಾತಾವರಣಕ್ಕೆ ವರ್ಗಾಯಿಸಲು ಉಪಯೋಗಿಸಲ್ಪಡುತ್ತವೆ. ಶೈತ್ಯಗೋಪುರಗಳು ನೀರಿನ ಆವಿಯಾಗುವಿಕೆಯ ಮೂಲಕ ಸಂಸ್ಕರಣ ಶಾಖವನ್ನು ತೆಗೆದು ಕಾರ್ಯಗತ ದ್ರವವನ್ನು ವೆಟ್-ಬಲ್ಬ್ ಹವಾ ತಾಪಮಾನದ ಮಟ್ಟಕ್ಕೆ ತಂಪಾಗಿಸಬಹುದು ಅಥವಾ ವಾಯುವನ್ನೇ ಆಧರಿಸಿ ಕಾರ್ಯಗತ ದ್ರವವನ್ನು ಡ್ರೈ-ಬಲ್ಬ್ ಹವಾ ತಾಪಮಾನದ ಮಟ್ಟಕ್ಕೆ ತಂಪಾಗಿಸಬಹುದು. ಸಾಮಾನ್ಯ ಅನ್ವಯಗಳಲ್ಲಿ ತೈಲ ಸಂಸ್ಕರಣ ಕೈಗಾರಿಕೆಗಳಲ್ಲಿ, ರಾಸಾಯನಿಕ ಕಾರ್ಖಾನೆಗಳಲ್ಲಿ, ಶಕ್ತಿ ಉತ್ಪಾದನ ಕೇಂದ್ರಗಳಲ್ಲಿ ಮತ್ತು ಕಟ್ಟಡಗಳಲ್ಲಿ ಪರಿಭ್ರಮಿಸುವ ನೀರನ್ನು ತಂಪಾಗಿಸುವಿಕೆಯೂ ಸೇರಿದೆ. ಈ ಗೋಪುರಗಳು ವಿವಿಧ ಅಳತೆಗಳುಳ್ಳವಾಗಿದ್ದು ಚಿಕ್ಕ ಛಾವಣಿ ಹೊದೆಸಿದ ವಿಭಾಗಗಳಿಂದ ಬೃಹತ್ತಾದ ಹೈಪರ್ಬೋಲಾ ಆಕಾರದ ನಿರ್ಮಾಣ(ಚಿತ್ರ 1ರಲ್ಲಿ ತೋರಿಸಿದಂತೆ)ವರೆಗೆ ನಿರ್ಮಿತವಾಗುತ್ತವೆ; ಬೃಹದಾಕಾರಗಳು 200 ಮೀಟರ್ ಎತ್ತರ ಮತ್ತು 100 ಮೀಟರ್ ಸುತ್ತಳತೆಯವರೆಗೂ ಇರುತ್ತವೆ, ಅಥವಾ ಆಯತಾಕಾರವಾಗಿದ್ದಲ್ಲಿ (ಚಿತ್ರ 2ರಲ್ಲಿ ತೋರಿಸಿದಂತೆ) 40 ಮೀಟರ್ ಗಿಂತಲೂ ಎತ್ತರ ಮತ್ತು 80 ಮೀಟರ್ ಗಿಂತಲೂ ಉದ್ದ ಇರುತ್ತವೆ. ಚಿಕ್ಕ ಗೋಪುರಗಳು ಸಾಮಾನ್ಯವಾಗಿ ಕಾರ್ಖಾನೆಗಳಲ್ಲಿ ನಿರ್ಮಿಸಲ್ಪಡುತ್ತವೆ, ದೊಡ್ಡದನ್ನು ಸ್ಥಳದಲ್ಲೇ ನಿರ್ಮಿಸಲಾಗುತ್ತದೆ. ಇವುಗಳು ಸಾಮಾನ್ಯವಾಗಿ ಅಣುಸ್ಥಾವರಗಳಿಗೆ ಸಂಬಂಧಿತವೆಂದು ಜನಜನಿತವಾಗಿದೆ.

ಹೈಪರ್ಬೋಲಾ ಆಕಾರದ ಶೈತ್ಯಗೋಪುರವೊಂದನ್ನು ಪ್ರೆಡೆರಿಕ್ ವಾನ್ ಐಟರ್ಸನ್ ಮತ್ತು ಜೆರಾರ್ಡ್ ಕೈಪರ್ಸ್ 1918ರಲ್ಲಿ ಸ್ಪಷ್ಟ ಸನದಾಗಿಸಿಕೊಂಡಿದ್ದಾರೆ.[೧]

ಬಳಕೆಯ ಆಧಾರದ ಮೇಲೆ ವರ್ಗೀಕರಣ[ಬದಲಾಯಿಸಿ]

ದ ಮಿಸ್ಟರಿ ಆಫ್ ಕೂಲಿಂಗ್ ಟವರ್ಸ್ ಅನ್ ಫೋಲ್ಡೆಡ್ ಎಂಬ, ರಾಂಟಾಯ್ಲ್, ರೋಜೆಲ್ಲಿಟೋ ಮತ್ತು ಸ್ಟ್ರಾಂಗ್ ಫೋಲ್ಡ್, ಏಪ್ರಿಲ್ ರು ಬರೆದ ಪುಸ್ತದಲ್ಲಿ ಸೂಚಿಸಿದಂತೆ ಶೈತ್ಯಗೋಪುರಗಳನ್ನು ಬಳಕೆಯ ಆಧಾರದ ಮೇರೆಗೆ ಸಾಮಾನ್ಯವಾಗಿ HVAC (ಹವಾ ನಿಯಂತ್ರಣ) ಅಥವಾ ಕೈಗಾರಿಕಾ ಉದ್ಯೋಗಗಳೆಂದು ವಿಂಗಡಿಸಬಹುದು.

ಹೆಚ್ ವಿ ಎ ಸಿ[ಬದಲಾಯಿಸಿ]

ಹೆಚ್ ವಿ ಎ ಸಿ ಶೈತ್ಯಗೋಪುರವು ಶೈತ್ಯಕಾರಕ(ಚಿಲ್ಲರ್) ಎಂಬ ಶಾಖವನ್ನ ಅವಗಣಿಸುವ ಉಪವಿಭಾಗವಾಗಿದೆ. ಜಲಶೀತಲಗೊಂಡ ಶೈತ್ಯಕಾರಕಗಳು ಸಾಮಾನ್ಯವಾಗಿ ವಾಯು-ಶೀತಲಿತ ಶೈತ್ಯಕಾರಕಗಳಿಗಿಂತಲೂ, ಶಾಖ ತಿರಸ್ಕರಣೆಯು ನೀರಿನ ಬುರುಜುಗಳಲ್ಲಿ ಕ್ಲಿನ್ನ-ಬಲ್ಬ್ ತಾಪಮಾನಕ್ಕೆ ಸಮನಾಗಿ ಅಥವಾ ಅದರ ಆಸುಪಾಸಿನಲ್ಲಿ ಹೆಚ್ಚು ಶಕ್ತಿಕ್ಷಮವಾಗಿರುತ್ತವೆ. ವಾಯು-ಶೀತಲಿತ ಶೈತ್ಯಕಾರಕಗಳು ಶಾಖವನ್ನು ಒಣ-ಬಲ್ಬ್ ತಾಪಮಾನದಲ್ಲಿ ತಿರಸ್ಕರಿಸಬೇಕು, ಹೀಗಾಗಿ ಕಡಿಮೆ ಮಟ್ಟದ ಸರಾಸರಿ ವಿರುದ್ಧ-ಕಾರ್ನಟ್ ಆವರ್ತನ ಪರಿಣಾಮಕಾರಕ ಗುಣವನ್ನು ಹೊಂದಿರುತ್ತವೆ. ಬೃಹತ್ ಕಚೇರಿಗಳ ಕಟ್ಟಡಗಳು, ಆಸ್ಪತ್ರೆಗಳು, ಮತ್ತು ಶಾಲೆಗಳು ಸಾಮಾನ್ಯವಾಗಿ ಒಂದು ಅಥವಾ ಹೆಚ್ಚು ಶೈತ್ಯಗೋಪುರಗಳನ್ನು ತಮ್ಮ ಹವಾ ನಿಯಂತ್ರಣ ವ್ಯವಸ್ಥೆಯ ಅಂಗವಾಗಿ ಹೊಂದಿರುತ್ತವೆ. ಸಾಮಾನ್ಯವಾಗಿ, ಕೈಗಾರಿಕಾ ಶೈತ್ಯಗೋಪುರಗಳು ಹೆಚ್ ವಿ ಎ ಸಿ ಗೋಪುರಗಳಿಗಿಂತಲೂ ಬಹಳವೇ ದೊಡ್ಡದಾಗಿರುತ್ತವೆ.ರುತ್ತವೆ.ರುತ್ತವೆ.ರುತ್ತವೆ.ರುತ್ತವೆ.ರುತ್ತವೆ.ರುತ್ತವೆ.ರುತ್ತವೆ.ರುತ್ತವೆ.ರುತ್ತವೆ.ರುತ್ತವೆ.ರುತ್ತವೆ.ರುತ್ತವೆ.ರುತ್ತವೆ.ರುತ್ತವೆ.ರುತ್ತವೆ.ರುತ್ತವೆ.ರುತ್ತವೆ.ರುತ್ತವೆ.ರುತ್ತವೆ.ರುತ್ತವೆ.

ಹೆಚ್ ವಿ ಎ ಸಿ ಶೀತಲಗೊಳ್ಳುವ ಗೋಪುರದ ಬಳಕೆಯು ತಂಪಾಗುವ ಗೋಪುರದೊಂದಿಗೆ, ಜಲದಿಂದ ತಂಪಾದ ಚಿಲ್ಲರ್ ಅಥವಾ ಜಲದಿಂದ ತಂಪಾದ ಕಂಡೆನ್ಸರ್ ಅನ್ನು, ಜೊತೆಯಾಗಿಸುತ್ತದೆ ಒಂದು ಟನ್ ಹವಾನಿಯಂತ್ರಣವೆಂದರೆ 12,000 Btu/hour (3517 W)ಗಳ ಕಡಿತ. ಶೈತ್ಯಗೋಪುರದ ಭಾಗದಲ್ಲಿ, ವಾಸ್ತವವಾಗಿ, ಚಿಲ್ಲರ್ ನ ಕಂಪ್ರೆಸರ್ ಅನ್ನು ಚಾಲನೆಗೊಳಿಸಲು ಬೇಕಾದ ಶಾಖ-ಸಮವಾದ ಚೈತನ್ಯ ಒದಗಿಸುವ ಸಲುವಾಗಿ, ಇದಕ್ಕೆ ಸಮನಾದ ಟನ್ ಪ್ರಮಾಣವಾದ ಸುಮಾರು 15,000 Btu/hour (4396 W) ಅನ್ನು ತಿರಸ್ಕರಿಸುತ್ತದೆ. ಈ ಸಮನಾದ ಟನ್ ನಿಮಿಷಕ್ಕೆ ಮೂರು ಯು.ಎಸ್. ಗ್ಯಾಲನ್ ನೀರನ್ನು 10 °F (5.56 °C)ತಂಪಾಗಿಸುವಾಗ ತ್ಯಜಿಸಲ್ಪಡುವ ಶಾಖದ ಪ್ರಮಾಣಭವೆಂದೂ, ಈ ಪ್ರಮಾಣವು 15,000 Btu/hourಗೆ ಸಮವೆಂದೂ, ಅಥವಾ ಚಿಲ್ಲರ್ ಕೋಎಫಿಷಿಯೆಂಟ್ ಆಫ್ ಪರ್ಫಾರ್ಮೆನ್ಸ್ [ಶೈತ್ಯಕಾರಕದ ಕಾರ್ಯಕ್ಷಮತೆಯ ಗುಣಕಾರಿ](COP) 4.೦ ಎಂದೂ ವಿವರಿಸಲಾಗಿದೆ. ಈ COPಯು ಚೈತನ್ಯ ಗುಣಾಕಾರಿ ಪರಿಮಾಣ (EER) 13.65ಕ್ಕೆ ಸಮವಾಗಿರುತ್ತದೆ.

ಕೈಗಾರಿಕಾ ಶೈತ್ಯಗೋಪುರಗಳು[ಬದಲಾಯಿಸಿ]

ಕೈಗಾರಿಕಾ ಶೈತ್ಯಗೋಪುರಗಳನ್ನು ವಿವಿಧ ಮೂಲಗಳಾದ ಯಂತ್ರಗಳು ಅಥವಾ ಬಿಸಿಯಾದ ಸಂಸ್ಕರಣ ವಸ್ತಗಳಿಂದ ಶಾಖವನ್ನು ತೆಗೆಯಲು ಬಳಸಬಹುದು. ಕೈಗಾರಿಕೆಗಳಲ್ಲಿನ ಬೃಹತ್ ಶೈತ್ಯಗೋಪುರಗಳ ಮೂಲ ಉಪಯೋಗವು ಶಕ್ತಿ ಉತ್ಪನ್ನ ಕೇಂದ್ರಗಳು, ಪೆಟ್ರೋಲಿಯಮ್ ಸಂಸ್ಕರಣ ಕೈಗಾರಿಕೆಗಳು, ಪೆಟ್ರೋಕೆಮಿಕಲ್ ಕಾರ್ಖಾನೆಗಳು, ನೈಸರ್ಗಿಕ ಅನಿಲ ಸಂಸ್ಕರಣ ಸ್ಥಾನಗಳು, ಆಹಾರ ಸಂಸ್ಕರಣ ಕೈಗಾರಿಕೆಗಳು, ಪಾರ್ಶ್ವ-ವಿದ್ಯುತ್ ವಾಹಕಗಳ ಉದ್ದಿಮೆಗಳು, ಮತ್ತು ಇತರ ಕೈಗಾರಿಕಾ ವ್ಯವಸ್ಥೆಗಳಲ್ಲಿ ಆವರ್ತನಗೊಳ್ಳುತ್ತಿರುವ ತಂಪಾಗಿಸುವ ನೀರಿನ ವ್ಯವಸ್ಥೆಯಿಂದ ಶಾಖವನ್ನು ಹೊರತೆಗೆಯುವುದೇ ಆಗಿರುತ್ತದೆ.[೨] ಶೈತ್ಯಗೋಪುರವನ್ನು ಹೊಂದಿರುವ ಒಂದು ಲಾಕ್ಷಣಿಕ 700 MW ಕಲ್ಲಿದ್ದಲು-ಇಂಧನದ ಶಕ್ತಿ ಉತ್ಪಾದನ ಕೈಗಾರಿಕೆಯಲ್ಲಿನ ನೀರಿನ ಆವರ್ತನವೇಗವು ಗಂಟೆಗೆ 71,600 ಕ್ಯುಬಿಕ್ ಮೀಟರ್(315,000 ಯು.ಎಸ್. ಗ್ಯಾಲನ್ ಗಳು ಪ್ರತಿ ನಿಮಿಷ)[೩] ಮತ್ತು ಆವರ್ತನಗೊಳ್ಳುವ ಸರಬರಾಜಾದ ನೀರಿನ ಮಟ್ಟ-ಕಾಪಾಡುವ ಗತಿಯು ಸುಮಾರು 5 ಪ್ರತಿಶತವಿರುತ್ತದೆ (ಎಂದರೆ 3,600 ಕ್ಯುಬಿಕ್ ಮೀಟರ್ ಪ್ರತಿ ಗಂಟೆ).

ಅದೇ ಕೈಗಾರಿಕೆಗೆ ಶೈತ್ಯಗೋಪುರವಿರದಿದ್ದರೆ ಮತ್ತು ಒಮ್ಮೆ ಮಾತ್ರ ಹರಿದುಹೋಗುವ ತಂಪಾಗಿಸುವ ನೀರು ಉಪಯೋಗಿಸಿದ್ದರೆ, ಅದಕ್ಕೆ ಸುಮಾರು ಪ್ರತಿ ಗಂಟೆಗೆ ಒಂದು ಲಕ್ಷ ಕ್ಯುಬಿಕ್ ಮೀಟರ್[೪] ನಷ್ಟು ನೀರು ಬೇಕಾಗುತ್ತಿತ್ತು ಮತ್ತು ಆ ಮೊತ್ತದ ನೀರನ್ನು ಸರಬರಾಜು ಮಾಡಿದ ಸಮುದ್ರ, ಕೆರೆ ಅಥವಾ ನದಿಗಳಿಗೆ ಒಂದೇ ಸಮನೆ ಹಿಂತಿರುಗಿಸಿ ಮತ್ತೆ ಅಲ್ಲಿಂದ ಕಾರ್ಖಾನೆಗೆ ಮರುಸರಬರಾಜು ಮಾಡಬೇಕಾಗುತ್ತಿತ್ತು. ಅಲ್ಲದೆ, ಬೃಹತ್ ಪ್ರಮಾಣದಲ್ಲಿ ಬಿಸಿನೀರನ್ನು ನದಿಗಳಿಗೆ ಅಥವಾ ಕೆರೆಗಳಿಗೆ ಬಿಟ್ಟರೆ ಆ ಜಲಧಿಗಳ ತಾಪಮಾನವು ಪರಿಸರದ ವ್ಯವಸ್ಥೆಗೆ ಹೊಂದದ ಮಟ್ಟಕ್ಕೆ ಏರಬಹುದು. ಏರಿದ ನೀರಿನ ಉಷ್ಣತೆಯು ಮೀನು ಮತ್ತು ಇತರ ಜಲಚರಗಳನ್ನು ಕೊಲ್ಲಬಹುದು. (ನೋಡಿ ಥರ್ಮಲ್ ಪಲ್ಯೂಷನ್ . ಶೈತ್ಯಗೋಪುರವು ಶಾಖವನ್ನು ವಾತಾವರಣಕ್ಕೆ ತಲುಪಿಸುವುದರಿಂದ ಗಾಳಿಯಿಂದ ಹರಡುವಿಕೆಯು ಶಾಖವನ್ನು ನೀರು ಜಲಧಿಯ ಮೂಲಕ ಹರಡಲು ಶಕ್ಯವಾಗುವುದಕ್ಕಿಂತಲೂ ಹೆಚ್ಚಿನ ಪ್ರದೇಶಕ್ಕೆ ಶಾಖವನ್ನು ಹರಡುತ್ತದೆ. ಕೆಲವು ತೀರ ಪ್ರದೇಶದಲ್ಲಿ ರುವ ಕಲ್ಲಿದ್ದಲು-ಉರಿಯಿಂದ ನಡೆಯುವ ಕೈಗಾರಿಕೆಗಳು ಮತ್ತು ಅಣು ಸ್ಥಾವರಗಳು ಒಮ್ಮೆ ಹರಿದು ಹೋಗುವ ಸಮುದ್ರದ ನೀರನ್ನು ಉಪಯೋಗಿಸುತ್ತವೆ. ಆದರೆ ಅಲ್ಲಯೂ ತೀರದಾಚೆಗೆ ಬಿಡುವ ನೀರನ್ನು ಹೊರಗೆಡವುವ ಪ್ರಕ್ರಿಯೆಯು ಗಮನೀಯ ನಿರ್ಮಾಂವಿನ್ಯಾಸವನ್ನು, ವಾತಾವರಣದ ತೊಂದರೆಗಳನ್ನು ತಪ್ಪಿಸಲೆಂದು, ಎಚ್ಚರಿಕೆಯಿಂದ ಕೈಗೊಳ್ಳಬೇಕಾಗುತ್ತದೆ.

ಪೆಟ್ರೋಲಿಯಮ್ ಸಂಸ್ಕರಣ ಕೇಂದ್ರಗಳು ಸಹ ಬೃಹತ್ ಶೈತ್ಯಗೋಪುರ ವ್ಯವಸ್ಥೆಗಳನ್ನು ಹೊಂದಿರುತ್ತವೆ. ಪ್ರತಿದಿನಕ್ಕೆ 40,000 ಮೆಟ್ರಿಕ್ ಟನ್ (ದಿನಕ್ಕೆ 300,000 ಬ್ಯಾರಲ್ ಗಳು)ಗಳಷ್ಟು ಕಚ್ಚಾ ತೈಲವನ್ನು ಸಂಸ್ಕರಿಸುವ ಬೃಹತ್ ತೈಲಸಂಸ್ಕರಣಾ ಕೇಂದ್ರವು ತನ್ನ ಶೈತ್ಯಗೋಪುರಗಳ ಮೂಲಕ ಸುಮಾರು 80,000 ಕ್ಯುಬಿಕ್ ಮೀಟರ್ ಗಳಷ್ಟು ನೀರನ್ನು ಪ್ರತಿ ಗಂಟೆ ಬಳಸುತ್ತದೆ.

ಜಗದ ಅತಿ ಎತ್ತರದ ಶೈತ್ಯಗೋಪುರವು 200 ಮೀಟರ್ ಎತ್ತರದ ನೀಡೆರ್ ಆಸ್ಸೆಮ್ ಪವರ್ ಸ್ಟೇಷನ್ ನ ಗೋಪುರವಾಗಿದೆ.

ಶಾಖ ವರ್ಗಾವಣ ವಿಧಿಗಳು[ಬದಲಾಯಿಸಿ]

HVAC ಅನ್ವಯಿಕೆಗಳಲ್ಲಿ ಬಳಸುವ ಯಂತ್ರಾಧಾರಿತ ಮಾರುತಚಲನ ಅಡ್ಡಹರಿವು ಶೈತ್ಯಗೋಪುರ

ಶಾಖ ವರ್ಗಾವಣೆ ಮಾಡುವ ಸೂತ್ರಕ್ಕೆ ಅನುಗುಣವಾಗಿ, ಪ್ರಧಾನವಾದ ವಿಧಗಳೆಂದರೆ:

 • ಕ್ಲಿನ್ನ ಶೈತ್ಯಗೋಪುರಗಳು ಅಥವಾ ಸರಳವಾಗಿ ಶೈತ್ಯಗೋಪುರಗಳು ಆವಿಯಾಗುವಿಕೆಯ ಗುಣವನ್ನಾಧರಿಸಿ ಕಾರ್ಯವೆಸಗುತ್ತವೆ. ಕಾರ್ಯನಿರತ ದ್ರವ ಮತ್ತು ಆವಿಯಾದ ದ್ರವ(ಸಾಮಾನ್ಯವಾಗಿ H2O)ಎರಡೂ ಒಂದೇ ವಿಧದ್ದಾಗಿರುತ್ತವೆ.
 • ಒಣ ಶೈತ್ಯಕಾರಕಗಳು ಕಾನ್ವೆಕ್ಟಿವ್ ಶಾಖ ವರ್ಗಾವಣೆಯನ್ನು ಬಳಸಿಕೊಂಡು, ಶಾಖ ವಿನಿಮಯಕಾರಕಗಳಲ್ಲಾಗುವಂತೆ, ಕಾರ್ಯನಿರತ ದ್ರವ ಮತ್ತು ಹವೆಯಲ್ಲಿನ ಗಾಳಿಯನ್ನು ಒಂದು ಕ್ಷೇತ್ರದ ಮೂಲಕ ಬೇರ್ಪಡಿಸಿ ಶಾಖ ವರ್ಗಾವಣೆಯನ್ನು ಕಾರ್ಯಗತಗೊಳಿಸುತ್ತವೆ. ಇವು ಆವಿಯಾಗುವಿಕೆಯನ್ನು ಬಳಸುವುದಿಲ್ಲ.
 • ದ್ರವ ಶೈತ್ಯಕಾರಕಗಳು ಮೇಲ್ಕಂಡ ವಿಧಗಳ ಕಸಿಯಾಗಿದ್ದು, ಬಳಸುತ್ತಿರುವ ದ್ರವವು ಕೊಳವೆಗಳ ರಾಶಿಗಳ ಮೂಲಕ ಹಾದುಬಂದಾಗ, ಆ ಕೊಳವೆಗಳ ಮೇಲೆ ಒಳ್ಳೆಯ ನೀರನ್ನು ಸಿಂಪಡಿಸಿ ಮತ್ತು ಬೀಸಣಿಗೆ ಪ್ರಚೋದಿತ ಗಾಳಿಯನ್ನು ಬೀಸಿ ಶೀತಲಗೊಳಿಸುವ ಕ್ರಮವಾಗಿದೆ. ತತ್ಪರಿಣಾಮವಾಗಿ ಉಂಟಾದ ಶಾಖ ವರ್ಗಾವಣ ಕ್ರಿಯೆಯು ಕ್ಲಿನ್ನ ಶೈತ್ಯಗೋಪುರಗಳ ಕ್ರಿಯಾತ್ಮಕತೆಯ ಮಟ್ಟಕ್ಕೆ ಹತ್ತಿರವಾಗಿರುತ್ತದೆ ಹಾಗೂ ವಾತಾವರಣಕ್ಕೆ ಬಹಿರಂಗಪಡಿಸಿದಾಗ ಆಗುವ ಪರಿಣಾಮಗಳಿಂದ ರಕ್ಷಿಸುವ ೊಣ ಶೈತ್ಯಕಾರಕಗಳು ಒಡ್ಡುವ ಅನುಕೂಲಗಳ ಲಾಭವೂ ದೊರೆತಂತಾಗುತ್ತದೆ.

ಕ್ಲಿನ್ನ ಶೈತ್ಯಗೋಪುರಗಳಲ್ಲಿ, ಬೆಚ್ಚಗಿನ ನೀರನ್ನು,ಸಾದೃಶವಾಗಿ ಒಣಹವೆಯಿದ್ದಾಗ, ಸುತ್ತಲಿನ ವ್ಯಾಪಕವಾಗಿರುವ ವಾಯು-ಒಣ-ಬಲ್ಬ್ ತಾಪಮಾನಕ್ಕಿಂತಲೂ ಹೆಚ್ಚು ತಣ್ಣಗಾಗಿಸಬಹುದು(ನೋಡಿ: ಡ್ಯೂ ಪಾಯಿಂಟ್ ಮತ್ತು ಸೈಕ್ರೋಮೆಟ್ರಿಕ್ಸ್). ವ್ಯಾಪ್ತ ಗಾಳಿಯನ್ನು ಹರಿಯುವ ನೀರಿನ್ನು ದಾಟಿಸಿ ಕೊಂಡೊಯ್ಯುತ್ತಿದ್ದಂತೆಯೇ ಆವಿಯಾಗುತ್ತದೆ. ಆವಿಯಾಗುವಿಕೆಯು ವಾಯುವು ಪೂರ್ಣಕ್ಲಿನ್ನ ಸ್ಥಿತಿಯಲ್ಲಿದ್ದಾಗ ಫಲಿಸುತ್ತದೆ, ನೀರಿನ ತಾಪಮಾನವನ್ನು ಕ್ಲಿನ್ನ ಬಲ್ಬ್ ವಾಯು ತಾಪಮಾನಕ್ಕಿಂತಲೂ ಕೆಳಗೆ ತಗ್ಗಿಸುತ್ತದೆ ಹಾಗೂ ಈ ತಾಪಮಾನವು ವ್ಯಾಪ್ತ ಒಣ ಬಲ್ಬ್ ವಾಯು ತಾಪಮಾನಕ್ಕಿಂತಲೂ ಕಡಿಮೆಯಿರುತ್ತದೆ; ವ್ಯಾಪ್ತ ವಾಯುವಿನ ತೇವಾಂಶದ ಆಧಾರದ ಮೇರೆಗೆ ಈ ತಾಪಮಾನ ವ್ಯತ್ಯಾಸವು ನಿರ್ಧರಿತವಾಗುತ್ತದೆ.

ಉತ್ತಮ ಗುಣಮಟ್ಟವನ್ನು (ಹೆಚ್ಚು ಶೀತಲತೆ) ಹೊಂದಲು ಫಿಲ್ ಎಂಬ ಒಂದು ಮಾಧ್ಯಮವನ್ನು ಉಪಯೋಗಿಸುವುದರ ಮೂಲಕ ಗಾಳಿ ಮತ್ತು ಜಲಗಳ ಚಲನೆಯ ನಡುವಣ ಕ್ಷೇತ್ರವಿಸ್ತೀರ್ಣವನ್ನು ಹೆಚ್ಚಿಸಲಾಗುತ್ತದೆ. ಸ್ಪ್ಲ್ಯಾಶ್ ಫಿಲ್ ವಿಧಾನದಲ್ಲಿ ನೀರಿನ ಹರಿವಿಗೆ ಅಡ್ಡಿಮಾಡಲು ಒಂದು ವಸ್ತುವನ್ನು ಇರಿಸಿ, ನೀರು ಚಿಮ್ಮವಂತೆ ಮಾಡಲಾಗುತ್ತದೆ. ಫಿಲ್ಮ್ ಫಿಲ್ ವಿಧಾನದಲ್ಲಿ ವಸ್ತುಗಳ ತೆಳುವಾದ ಹಾಳೆಗಳ ಮೇಲೆ ನೀರನ್ನು ಹರಿಬಿಡಲಾಗುತ್ತದೆ. ಎರಡೂ ವಿಧಾನಗಳು ಕ್ಷೇತ್ರವನ್ನು ಹೆಚ್ಚು ವಿಸ್ತರಿಸುತ್ತವೆ.

ಗಾಳಿ ಬೀಸುವಿಕೆಯನ್ನು ಉಂಟುಮಾಡುವ ವಿಧಾನಗಳು[ಬದಲಾಯಿಸಿ]

ಒತ್ತಡಭರಿತ ಮಾರುತಚಲನ ಶೈತ್ಯಗೋಪುರ

ಗಾಳಿಯನ್ನು ಗೋಪುರದ ಮೂಲಕ ಸೆಳೆದುಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ, ಮೂರು ವಿಧವಾದ ಶೈತ್ಯಗೋಪುರಗಳಿವೆ:

 • ಸ್ವಾಭಾವಿಕ ವಾಯುಚಲನೆ, ಇದು ಪ್ಲವನಶೀಲತೆಯನ್ನು ಒಂದು ಎತ್ತರದ ಚಿಮಣಿಯ ಮೂಲಕ ಪಡೆಯುತ್ತದೆ. ಬೆಚ್ಚನೆಯ, ತೇವಭರಿತ ಗಾಳಿಯು, ಹೊರಗಿನ ಒಣ, ಹೆಚ್ಚು ತಣ್ಣನೆಯ ಗಾಳಿಗಿಂತಲೂ ಸಾಂದ್ರತೆಯಲ್ಲಿರುವ ವ್ಯತ್ಯಾಸದ ಕಾರಣ, ಸ್ವಾಭಾವಿಕವಾಗಿ ಮೇಲಕ್ಕೇರುತ್ತದೆ. ಬೆಚ್ಚನೆಯ, ತೇವಭರಿತ ಗಾಳಿಯು ಒಣ ಗಾಳಿಗಿಂತಲೂ, ದತ್ತ ಒತ್ತಡದಲ್ಲಿ, ಕಡಿಮೆ ಸಾಂದ್ರತೆ ಹೊಂದಿರುತ್ತದೆ. ಈ ತೇವಭರಿತ ಗಾಳಿಯ ಪ್ಲವನಶೀಲತೆಯು ಗೋಪುರದ ಮೂಲಕ ಗಾಳಿಯ ಅಲೆಯನ್ನು ಉತ್ಪಾದಿಸುತ್ತದೆ.
 • ಯಂತ್ರಚಾಲಿತ ವಾಯುಚಲನ , ಇದು ಗೋಪುರದಿಂದ ಗಾಳಿಯನ್ನು ತಳ್ಳಲು ಅಥವಾ ಎಳೆಯಲು ಶಕ್ತಿ ಚಾಲಿತ ಫ್ಯಾನ್ ಮೋಟಾರ್ ಗಳನ್ನು ಬಳಸುತ್ತದೆ.
  • ಇಂಡ್ಯೂಸ್ಡ್ ಡ್ರಾಫ್ಟ್ :(ಪ್ರೇರಿತ ಮಾರುತಚಲನ)ಒಂದು ಫ್ಯಾನ್ ಅನ್ನು ನಿರ್ಗಮನ ತುದಿಯಲ್ಲಿ ಹೊಂದಿದ್ದು ತನ್ಮೂಲಕ ಗೋಪುರದ ಮೂಲಕ ಗಾಳಿಯನ್ನು ಎಳೆಯುವ ಯಂತ್ರೋತ್ಪಾದಿತ ಮಾರುತ ಗೋಪುರವಿದು. ಈ ಫ್ಯಾನ್ ಬಿಸಿಯಾದ ತೇವಭರಿತ ಗಾಳಿಯನ್ನು ಹೊರಚೆಲ್ಲುವ ತುದಿಯಿಂದ ಪ್ರೇರಣೆಗೊಳಿಸುತ್ತದೆ . ಈ ವಿಧಿವಿಧಾನವು ಆಗಮನದಲ್ಲಿ ಕಡಿಮೆ ಮತ್ತು ನಿರ್ಗಮನದಲ್ಲಿ ಹೆಚ್ಚಿನ ಗಾಳಿಯ ವೇಗವನ್ನು ಹೊಂದಿದ್ದು, ಪುನರಾವರ್ತನೆ ಗೊಳ್ಳುವ ಸಾಧ್ಯತೆಯು ಕಡಿಮೆಯಾಗುವುದು ಹಾಗೂ ಉಚ್ಛಾಟಿತ ಗಾಳಿಯು ಗಾಳಿಯನ್ನು ಎಳೆದುಕೊಳ್ಳುವ ಸ್ಥಳಕ್ಕೆ ಮತ್ತೆ ಬಂದುಸೇರುವುದು. ಈ ಫ್ಯಾನ್/ಫಿನ್ ಕ್ರಮವು ಡ್ರಾ-ಥ್ರೂ ಎಂದೂ ಕರೆಯಲ್ಪಡುತ್ತದೆ.(ಚಿತ್ರಗಳು 2. 3ನ್ನು ನೋಡಿ)
  • ಗಿಡುಕಲ್ಪಟ್ಟ ಮಾರುತ : ಯಂತ್ರಚಾಲಿತ ಮಾರುತ ಗೋಪುರವೊಂದು ಒಳಹರಿವಿನ ಸ್ಥಳದಲ್ಲಿ ಊದುವ ರೀತಿಯ ಫ್ಯಾನ್ ಅನ್ನು ಹೊಂದಿರುತ್ತದೆ. ಆ ಫ್ಯಾನ್ ಗಾಳಿಯನ್ನು ಗೋಪುರದ ಒಳಕ್ಕೆ ತಳ್ಳು ತ್ತದೆ, ಹಾಗಾಗಿ ಒಳಹರಿವಲ್ಲಿ ತೀವ್ರವಾದ ಮತ್ತು ಹೊರಹರಿವಲ್ಲಿ ಮಂದವಾದ ಗಾಳಿಯ ರಭಸಗಳು ಉಂಟಾಗುತ್ತವೆ. ಕೆಳಸ್ತರದ ಹೊರಹರಿವಿನ ವೇಗವು ಮರು ಆವರ್ತನೆಗೆ ಹೆಚ್ಚು ಅವಕಾಶ ನೀಡುತ್ತದೆ. ಗಾಳಿಯ ಒಳಹರಿವಿನ ಜಾಗದಲ್ಲಿ ಫ್ಯಾನ್ ಇರುವುದರಿಂದ, ಆ ಫ್ಯಾನ್, ಮಂಜುಗಟ್ಟುವ ಸ್ಥಿತಿಗಳಿಗೆ ಒಡ್ಡಲ್ಪಡುವುದರಿಂದ, ಹೆಚ್ಚು ತೊಂದರೆಗಳಿಗೆ ಒಳಪಡಬಹುದು. ಮತ್ತೊಂದು ತೊಂದರೆಯೆಂದರೆ ಬಲವಂತವಾಗಿ ಗಾಳಿಯನ್ನು ತಳ್ಳುವಂತಹ ವಿನ್ಯಾಸವು, ಸ್ವಾಭಾವಿಕವಾಗಿ, ಪ್ರೇರಿತ ಮಾರುತದ ವಿನ್ಯಾಸಕ್ಕಿಂತಲೂ ಹೆಚ್ಚು ಮೋಟಾರ್ ಅಶ್ವಶಕ್ತಿಯನ್ನು ಹೊಂದಿರಬೇಕಾಗುತ್ತದೆ. ಈ ಗಿಡುಕಲ್ಪಟ್ಟ ಮಾರುತದ ಲಾಭಾಂಶವೆಂದರೆ ಇದು ಉನ್ನತ ಸ್ಥಾಯಿಕ ಒತ್ತಡಗಳಲ್ಲಿ ಕಾರ್ಯವೆಸಗಲು ಸಮರ್ಥವಾಗಿದೆ. ಇವುಗಳನ್ನು ಚಿಕ್ಕ ಜಾಗಗಳಲ್ಲಿ ಸ್ಥಾಪಿಸಬಹುದು ಮತ್ತು ಕೆಲವೆಡೆ ಒಳಾಂಗಣ ಪರಿಸ್ಥಿತಿಗಳಲ್ಲೂ ಸ್ಥಾಪನಯೋಗ್ಯವಾಗಿರುತ್ತವೆ. ಈ ಫ್ಯಾನ್/ಫಿಲ್ ಜ್ಯಾಮಿತಿಯು ಬ್ಲೋ-ಥ್ರೂ ಎಂದು ಸಹ ಕರೆಯಲಾಗುತ್ತದೆ.(ಚಿತ್ರ 4 ನೋಡಿ)
 • ಫ್ಯಾನ್ ಬೆಂಬಲಿತ ನೈಸರ್ಗಿಕ ಮಾರುತವು ಒಂದು ಕಸಿಯ ಮಾದರಿಯದ್ದಾಗಿದ್ದು ಸ್ವಾಭಾವಿಕ ಮಾರುತದಂತೆಯೇ ಕಂಡುಬಂದರೂ, ಗಾಳಿಯ ಚಲನೆಯು ಒಂದು ಫ್ಯಾನ್ ನಿಂದ ಸಹಾಯವನ್ನು ಪಡೆಯುತ್ತದೆ.

ಹೈಪರ್ಬೋಲಾಯ್ಡ್ (ಆಥವಾ ಹೈಪರ್ಬೋಲಿಕ್) ಶೈತ್ಯಗೋಪುರಗಳು (ಚಿತ್ರ 1) ಎಲ್ಲಾ ಸ್ವಾಭಾವಿಕ-ಮಾರುತ ಶೈತ್ಯೀಕರಣ ಗೋಪುರಗಳಿಗೆ ಸಾಮಾನ್ಯವಾದ ವಿನ್ಯಾಸವಾಗಿ ರೂಪಗೊಂಡಿರುವುದರ ಕಾರಣವೇನೆಂದರೆ ಅದು ರಚನಾತ್ಮಕವಾಗಿ ದೃಢವಾಗಿರುತ್ತದೆ ಮತ್ತು ಉಪಯೋಗಿಸುವ ವಸ್ತುಗಳು ಬಹಳ ಕಡಿಮೆ ಇರುತ್ತವೆ. ಹೈಪರ್ಬೋಲಾದ ಆಕಾರವು ವಾಯುವಿನ ಪೀನ ಊರ್ಧ್ವಚಲನೆಯನ್ನು ಕ್ಷಿಪ್ರಗೊಳಿಸುತ್ತದೆ ಮತ್ತು ತನ್ಮೂಲಕ ತಂಪಾಗಿಸುವ ಕ್ಷಮತೆಯನ್ನು ಉತ್ತಮಗೊಳಿಸುತ್ತದೆ. ಅವುಗಳು ನ್ಯೂಕ್ಲಿಯರ್ ಶಕ್ತಿ ಸ್ಥಾವರಗಳೊಂದಿಗೆ ಜನಪ್ರಿಯವಾಗಿ ಗುರುತಿಸಲ್ಪಟ್ಟಿವೆ. ಆದಾಗ್ಯೂ, ಈ ಗುರುತಿಸುವಿಕೆಯು ಹಾದಿತಪ್ಪಿಸುವಂತಹುದಾಗಿದೆ, ಏಕೆಂದರೆ ಅದೇ ರೀತಿಯ ಶೈತ್ಯಗೋಪುರಗಳನ್ನು ಆಗಾಗ್ಗೆ ಕಲ್ಲಿದ್ದಲು-ಇಂಭನಭರಿತ ಪವರ್ ಪ್ಲಾಂಟ್ ಗಳಲ್ಲೂ ಬಳಸುತ್ತಾರೆ. ಅಂತೆಯೇ, ಸಕಲ ನ್ಯೂಕ್ಲಿಯರ್ ಪವರ್ ಪ್ಲಾಂಟ್ ಗಳಲ್ಲೂ ಶೈತ್ಯಗೋಪುರಗಳಿವೆಯೆಂದೇನಲ್ಲ; ಬದಲಿಗೆ ಅವು ಶಾಖ ವಿನಿಮಯಕಾರಕಗಳಾಗಿ ಕೆರೆ, ನದಿ ಅಥವಾ ಸಾಗರದ ನೀರನ್ನು ಬಳಸುತ್ತವೆ.

ಗಾಳಿಯಿಂದ ನೀರಿಗೆ ಹರಿಯುವುದರ ಆಧಾರದ ಮೇಲೆ ವರ್ಗೀಕರಣ[ಬದಲಾಯಿಸಿ]

ಅಡ್ಡಹರಿವು[ಬದಲಾಯಿಸಿ]

ಅಡ್ಡಹರಿವು ಎಂಬ ವಿನ್ಯಾಸದಲ್ಲಿ ಗಾಳಿಯ ಹರಿವನ್ನು ನೀರಿನ ಹರಿವಿಗೆ ಲಂಬವಾದ ದಿಕ್ಕಿನಲ್ಲಿ ನಿರ್ದೇಶಿಸಲಾಗುತ್ತದೆ(ಕೆಳಗಿನ ಚಿತ್ರವನ್ನು ನೋಡಿ). ಗಾಳಿಯ ಹರಿವು ಶೈತ್ಯಗೋಪುರದ ಒಂದು ಅಥವಾ ಹೆಚ್ಚಿನ ಲಂಬದ್ವಾರಗಳಿಂದ ಒಳನುಗ್ಗಿ ಫಿಲ್ ವಸ್ತುವಿನ ಸಂಪರ್ಕಕ್ಕೆ ಬರುತ್ತದೆ. ನೀರು (ಗಾಳಿಗೆ ಲಂಬಕೋನದಲ್ಲಿ)ಗುರುತ್ವಾಕರ್ಷಣೆಯ ಮೂಲಕ ಫಿಲ್ ಮೂಲಕ ಹರಿದುಬರುತ್ತದೆ. ಗಾಳಿಯು ಫಿಲ್ ಮೂಲಕ ಸುಳಿಯುತ್ತಲೇ ಇರುತ್ತದೆ ಮತ್ತು ಹೀಗೆ ನೀರನ್ನು ಹಾಯ್ದು ಒಂದು ತೆರೆದಿರುವ ತುಂಬುಪ್ರದೇಶಕ್ಕೆ ಹಾಯುತ್ತದೆ. ಒಂದು ವಿತರಣೆ ಅಥವಾ ಆಳ ಇರುವ ಮತ್ತು ತಳದಲ್ಲಿ ರಂಧ್ರಗಳಿರುವ ಅಥವಾ ಸೂಸುಬಾಯಿಗಳು ಇರುವ ಒಂದು ತಟ್ಟೆಯುಳ್ಳ ಬಿಸಿನೀರಿನ ಬೇಸಿನ್ ಅನ್ನು ಅಡ್ಡಹರಿವಿನ ಗೋಪುರಗಳಲ್ಲಿ ಉಪಯೋಗಿಸಲಾಗುತ್ತದೆ. ಗುರುತ್ವಾಕರ್ಷಣೆಯು ನೀರನ್ನು ಸೂಸುಬಾಯಿಗಳ ಮೂಲಕ ಫಿಲ್ ವಸ್ತುವಿನಾದ್ಯಂತ ಏಕಪ್ರಕಾರವಾಗಿ ವಿತರಿಸುತ್ತದೆ.

ವಿರುದ್ಧಹರಿವು[ಬದಲಾಯಿಸಿ]

ವಿರುದ್ಧಹರಿವಿನ ವಿನ್ಯಾಸದಲ್ಲಿ ಗಾಳಿಯ ಓಟವು ನೀರಿನ ಹರಿವಿಗೆ ತದ್ವಿರುದ್ಧವಾಗಿರುತ್ತದೆ.(ಕೆಳಗಿನ ಚಿತ್ರವನ್ನು ನೋಡಿ). ಗಾಳಿಯ ಹರಿವು ಮೊದಲು ಒಂದು ತೆರವಾದ ಜಾಗದಲ್ಲಿ, ಫಿಲ್ ಮಾಧ್ಯಮದ ಕೆಳಗೆ ಸುಳಿಯುತ್ತದೆ ಹಾಗೂ ನಂತರ ಲಂಬವಾಗಿ ಮೇಲಕ್ಕೆಳೆಯಲ್ಪಡುತ್ತದೆ. ನೀರನ್ನು ಒತ್ತಡಭರಿತ ಸೂಸುಬಾಯಿಗಳ ಮೂಲಕ ಸಿಂಪಡಿಸಲಾಗುತ್ತದೆ ಮತ್ತು ಜಲವು ಫಿಲ್ ನ ಮೂಲಕ ಕೆಳಗೆ ಹರಿದು ಗಾಳಿಯ ವಿರುದ್ಧ ದಿಕ್ಕಿನಲ್ಲಿ ಸಾಗುತ್ತದೆ.

ಎರಡೂ ವಿಧಗಳಿಗೆ ಸಾಮ್ಯವಾದ ವಿನ್ಯಾಸಗಳು:

 • ಗಾಳಿಯ ಮತ್ತು ನೀರಿನ ಹರಿವುಗಳ ಪರಸ್ಪರಕ್ರಿಯೆಯು ನೀರಿನ ಭಾಗಶಃ ಸಮಗೊಳ್ಳುವಿಕೆ ಮತ್ತು ಆವಿಯಾಗುವಿಕೆಗೆ ಅವಕಾಶ ನೀಡುತ್ತವೆ.
 • ಗಾಳಿಯು, ನೀರಿನ ಆವಿಯಿಂದಾವೃತಗೊಂಡಿದ್ದು, ತಂಪಾಗಿಸುವ ನೀರಿನಿಂದ ಹೊರಹಾಕಲ್ಪಡುತ್ತದೆ.
 • ಒಂದು ಸಂಗ್ರಹ ಅಥವಾ ತಣ್ಣೀರಿನ ಬೇಸಿನ್ ಅನ್ನು, ಗಾಳಿಯೊಡನೆ ಪರಸ್ಪರ ಪ್ರಕ್ರಿಯೆಯಾದನಂತರ, ನೀರನ್ನು ಹಿಡಿದಿಡಲು ಉಪಯೋಗಿಸಲಾಗುತ್ತದೆ.

ಅಡ್ಡಹರಿವು ಮತ್ತು ವಿರುದ್ಧ ಹರಿವುಗಳ ವಿನ್ಯಾಸಗಳೆರಡೂ ನೈಸರ್ಗಿಕ ಮಾರುತದ ಮತ್ತು ಯಂತ್ರಚಾಲಿತ ಮಾರುತದ ಶೈತ್ಯಗೋಪುರಗಳಲ್ಲಿ ಬಳಸಬಹುದಾಗಿವೆ.

ಹೊಗೆನಳಿಗೆ ಅನಿಲ ಬಣವೆಯಾಗಿ ಶೈತ್ಯಗೋಪುರ[ಬದಲಾಯಿಸಿ]

ಪವರ್ ಸ್ಟೇಷನ್ ಸ್ಟಾಡಿಂಜರ್ ಗ್ರಾಸ್ ಕೋಟ್ ಝೆನ್ ಬರ್ಗ್ ಮತ್ತು ಪವರ್ ಸ್ಟೇಷನ್ ರಾಸ್ಟಾಕ್ ನಂತಹ ಕೆಲವು ಆಧುನಿಕ ಶಕ್ತಿ ಸ್ಥಾವರಗಳಲ್ಲಿ, ಹೊಗೆನಳಿಗೆ ಅನಿಲ ಸಂಸ್ಕರಣ ಸೌಲಭ್ಯಗಳಿದ್ದು, ಶೈತ್ಯಗೋಪುರವನ್ನು ಹೊಗೆನಳಿಗೆ ಬಣವೆಯಾಗಿ (ಕೈಗಾರಿಕಾ ಚಿಮಣಿಯಾಗಿ) ಉಪಯೋಗಿಸಲಾಗುತ್ತದೆ. ಹೊಗೆನಳಿಗೆ ಅನಿಲ ಸಂಸ್ಕರಣ ಇಲ್ಲದಿರುವ ಕಡೆಗಳಲ್ಲಿ ತುಕ್ಕು ಹಿಡಿಯುವ ಸಾಧ್ಯತೆಗಳಿರುತ್ತವೆ.

ಶೈತ್ಯಗೋಪುರದ ತಳ, ಸುರಿಯುತ್ತಿರುವ ನೀರಿನೊಂದಿಗೆ.

ಕ್ಲಿನ್ನ ಶೀತಲೀಕರಣ ಗೋಪುರದ ವಸ್ತು ಸಮತೋಲನ[ಬದಲಾಯಿಸಿ]

ಪ್ರಮಾಣಮಟ್ಟದಲ್ಲಿ, ಕ್ಲಿನ್ನ, ಆವಿಯಾಗತಕ್ಕ ಶೈತ್ಯಗೋಪುರ ಕ್ರಮದಲ್ಲಿ ಅದರ ಸುತ್ತಲೂ ಉಳಿಯುವ ವಸ್ತುಗಳ ಮೊತ್ತವು ಕಾರ್ಯವಿಧಿಯ ಬದಲಾಗಬಹುದಾದ ಮೇಕ್-ಅಪ್ ಹರಿವಿನ ವೇಗ, ಆವಿಯಾಗುವಿಕೆ ಮತ್ತು ವಾಯುಮಾನ ನಷ್ಟಗಳನ್ನಾಧರಿಸಿದ್ದು, ಡ್ರಾ-ಆಫ್ ಗತಿ ಮತ್ತು ಸಾಂದ್ರತೆಯ ಆವರ್ತನಗಳ ಮೇಲೂ ಅವಲಂಬಿತವಾಗಿರುತ್ತದೆ:[೫]

M = ಮೇಕ್-ಅಪ್ ನೀರು m³/h ಗಳಲ್ಲಿ
C = ಆವರ್ತನನಿರತ ನೀರು m³/hನಲ್ಲಿ
D = ಹೊರಸೆಳೆಯುವ ನೀರು m³/hನಲ್ಲಿ
E = ಆವಿಯಾದ ನೀರು m³/hನಲ್ಲಿ
W = ವಾಯುಮಾನದಲ್ಲಿ ನೀರಿನ ನಷ್ಟ m³/hನಲ್ಲಿ
X = ಸಾಂದ್ರತೆ ppmwನಲ್ಲಿ (ಯಾವುದೇ ಸಂಪೂರ್ಣವಾಗಿ ಕರಗುವ ಲವಣಗಳದು … ಸಾಮಾನ್ಯವಾಗಿ ಕ್ಲೋರೈಡ್ ಗಳು)
XM = ಮೇಕ್-ಅಪ್ ನೀರಿನಲ್ಲಿ ಕ್ಲೋರೈಡ್ ಗಳ ಸಾಂದ್ರತೆ (M), ppmwನಲ್ಲಿ
XC ಆವರ್ತನಗೊಳ್ಳುತ್ತಿರುವ ನೀರಿನಲ್ಲಿ ಕ್ಲೋರೈಡ್ ಗಳ ಸಾಂದ್ರತೆ (C),ppmwನಲ್ಲಿ
ಆವರ್ತನಗಳು = ಆವರ್ತನಗಳ ಸಾಂದ್ರತೆಗಳು = XC / XM(ಅಳತೆಯಿಲ್ಲದ್ದು)
ppmw = ಮಿಲಿಯನ್ ಗೆ ಇಷ್ಟು ಭಾಗ, ತೂಕದ ಆಧಾರದ ಮೇರೆಗೆ

ಮೇಲ್ಕಂಡ ನಕ್ಷೆಯಲ್ಲಿ, ಒಂದು ಕೈಗಾರಿಕಾ ವ್ಯವಸ್ಥೆಯಲ್ಲಿ ಗೋಪುರದ ಬೇಸಿನ್ ನಿಂದ ಪಂಪ್ ಮಾಡಲ್ಪಟ್ಟ ನೀರು ಸಂಸ್ಕರಣ ಶೈತ್ಯಕಾರಕಗಳ ಮತ್ತು ಕಂಡೆನ್ಸರ್ ಗಳ ಮಾರ್ಗವಾಗಿ ಬಂದಿರುವುದು. ಬಿಸಿಯಾದ ಮತ್ತು ತತ್ಕಾರಣ ತಂಪು ಅಥವಾ ಘನೀಕರಣ ಮಾಡಬೇಕಾದ ಸಂಸ್ಕರಣ ಕಾಲುವೆಗಳಿಂದ ಹೊಮ್ಮಿದ ಶಾಖವನ್ನು ತಂಪಾದ ನೀರು ಹೀರುತ್ತದೆ ಮತ್ತು ಹೀಗೆ ಹೀರಲ್ಪಟ್ಟ ಶಾಖವು ಆವರ್ತಿತ ಜಲವನ್ನು ಬಿಸಿಯಾಗಿಸುತ್ತದೆ(C). ಬಿಸಿನೀರು ಶೈತ್ಯಗೋಪುರದ ಮೇಲ್ತುದಿಗೆ ಮರಳುತ್ತದೆ ಮತ್ತು, ಗೋಪುರದ ಒಳಗೆ, ಫಿಲ್ ಮಾಧ್ಯಮದ ಮೇಲೆ ನಿಧಾನವಾಗಿ ಹರಿದು ಕೆಳಬರುತ್ತದೆ. ಅದು ಕೆಳಹರಿದಂತೆ, ಸ್ವಾಭಾವಿಕ ಮಾರುತಚಲನ ಅಥವಾ ಗೋಪುರದೊಳಗಿನ ದೊಡ್ಡ ಫ್ಯಾನ್ ಗಳ ಒತ್ತಡದ ಮಾರುತಚಲನದ, ಗೋಪುರದೊಳಗೆ ವ್ಯಾಪ್ತವಾದ, ಊರ್ಧ್ವಮುಖಿ ಗಾಳಿಯೊಡನೆ ಸಂಪರ್ಕಕ್ಕೆ ಬರುತ್ತದೆ ಈ ಸಂಪರ್ಕವು, ವಾಯುಮಾನದ (W) ಕಾರಣ ಒಂದು ಸಣ್ಣ ಪ್ರಮಾಣದ ನೀರಿನ ನಷ್ಟವನ್ನುಂಟುಮಾಡುತ್ತದೆ ಮತ್ತು ಕೊಂಚ ನೀರು (E) ಆವಿಯಾಗುತ್ತದೆ. ನೀರನ್ನು ಆವಿಮಾಡಲು ಬೇಕಾದ ಶಾಖವು ನೀರಿನಿಂದಲೇ ಉತ್ಪತ್ತಿಯಾಗುತ್ತದೆ, ಇದು ನಂತರ ನೀರನ್ನು ತನ್ನ ಮೊದಲ ಬೇಸಿನ್ ನೀರಿನ ಸ್ಥಿತಿಗೆ ಒಯ್ಯುತ್ತದೆ ಮತ್ತು ಆಗ ನೀರು ಮರು ಆವರ್ತನಗೊಳ್ಳಲು ಸಿದ್ಧವಾಗುತ್ತದೆ. ಆವಿಯಾದ ನೀರು ತನ್ನಲ್ಲಿ ಕರಗಿದ್ದ ಲವಣಗಳನ್ನು, ಆವಿಯಾಗದ ಹೆಚ್ಚಿನಂಶ ನೀರಿನಲ್ಲಿ ಹಿಂದೆ ಬಿಟ್ಟು, ಆವರ್ತನವಾಗುತ್ತಿರುವ ನೀರಿನಲ್ಲಿನ ಲವಣ ಸಾಂದ್ರತೆಯನ್ನು ತನ್ಮೂಲಕ ಹೆಚ್ಚಿಸುತ್ತದೆ. ನೀರಿನಲ್ಲಿನ ಲವಣ ಸಾಂದ್ರತೆಯು ಬಹಳ ಹೆಚ್ಚಾಗದಂತಿರಲು ನೀರಿನ ಕೊಂಚ ಅಂಶವನ್ನು ಹೊರಹಾಕುವುದಕ್ಕಾಗಿ ಹೊರಸೆಳೆಯಲಾಗುತ್ತದೆ(D). ಹೊಸ ನೀರಿನ ಮೇಕ್ ಅಪ್(M)(ಸರಿತೂಗಿಸುವಿಕೆ)ಅನ್ನು ಆವಿಯಾಗಿ, ವಾಯುಮಾನದಿಂದ ಮತ್ತು ಹೊರತೆಗೆಯಲ್ಪಟ್ಟುದರಿಂದ ನಷ್ಟವಾದ ನೀರಿನ ಪ್ರಮಾಣವನ್ನು ಸರಿದೂಗಿಸಲು ಗೋಪುರದ ಬೇಸಿನ್ ಗೆ ಸರಬರಾಜು ಮಾಡಲಾಗುತ್ತದೆ

ಪೂರ್ಣ ವ್ಯವಸ್ಥೆಯ ಸುತ್ತಲೂ ಇರುವ ನೀರಿನ ಸಮತೋಲನವು:

M = E + D + W

ಆವಿಯಾದ ನೀರಿನಲ್ಲಿ (E) ಯಾವುದೇ ಲವಣಗಳು ಇರುವುದಿಲ್ಲವಾದ್ದರಿಂದ, ಈ ವ್ಯವಸ್ಥೆಯ ಪರಿಧಿಯ ಕ್ಲೋರೈಡ್ ಸಮತೋಲನವು:

M (XM) = D (XC) + W (XC) = XC (D + W)

ಮತ್ತು, ಆದ್ದರಿಂದ:

XC / XM = ಸಾಂದ್ರತೆಯ ಆವರ್ತನಗಳು = M ÷ (D + W) = M ÷ (M – E) = 1 + [E ÷ (D + W)]

ಶೈತ್ಯಗೋಪುರಗಳ ಸುತ್ತಣ ಸರಳೀಕೃತ ಶಾಖ ಸಮತೋಲನವು:

E = C · ΔT · cp ÷ HV
ಇದರಲ್ಲಿ  
HV = ನೀರಿನ ಆವಿಯಾಗುವಿಕೆಯ ಸುಪ್ತ ಶಾಖ = ca. 2260 kJ / kg
ΔT = ಗೋಪುರದ ಮೇಲಿನಿಂದ ಗೋಪುರದ ಕೆಳಭಾಗದಲ್ಲಿನ ನೀರಿನ ಶಾಖದ ವ್ಯತ್ಯಾಸ, °Cನಲ್ಲಿ
cp = ನೀರಿನ ಸಾಪೇಕ್ಷ ಶಾಖ = ca. 4.184 kJ / (kg°C)

ಬೃಹತ್ ಪ್ರಮಾಣದ ಕೈಗಾರಿಕಾ ಶೈತ್ಯಗೋಪುರಗಳಿಂದ ವಾಯುಮಾನ(ಗಾಳಿಯಿಂದ ಸೆಳೆಯಲ್ಪಟ್ಟ ನೀರಿನ ಅಂಶ)(ಅಥವಾ ಮಾರುತಚಲನ) ನಷ್ಟವು(W), ತಯಾರಿಕೆಯ ಮಾಹಿತಿಯು ಲಭ್ಯವಾಗದಿದ್ದಲ್ಲಿ, ಈ ರೀತಿ ಇರಬಹುದೆಂದು ಅಂದಾಜಿಸಬಹುದು:

W = ಸ್ವಾಭಾವಿಕ ಶೈತ್ಯಗೋಪುರಕ್ಕೆ, ಮಾರುತಚಲನ ಎಲಿಮಿನೇಟರ್ ಗಳು ಇಲ್ಲದಂತಹ ಸಂದರ್ಭಗಳಲ್ಲಿ C ಯ 0.3 ರಿಂದ 1.0 ಪ್ರತಿಶತ
W = ಪ್ರೇರಿತ ವಾಯುಚಲನ ಶೈತ್ಯಗೋಪುರಕ್ಕೆ, ಮಾರುತಚಲನ ಎಲಿಮಿನೇಟರ್ ಗಳು ಇಲ್ಲದಂತಹ ಸಂದರ್ಭಗಳಲ್ಲಿ C ಯ 0.3 ರಿಂದ 1.0 ಪ್ರತಿಶತ
W = ಶೈತ್ಯಗೋಪುರಗಳು ವಾಯುಮಾನ ಮಾರುತಚಲನ ಎಲಿಮಿನೇಟರ್ ಅನ್ನು ಹೊಂದಿದ್ದರೆ, C ಯ ಸುಮಾರು 0.005 ಪ್ರತಿಶತ(ಅಥವಾ ಇನ್ನೂ ಕಡಿಮೆ)

ಸಾಂದ್ರತೆಯ ಅವರ್ತನೆಗಳು ಮರುಆವರ್ತನಗೊಳ್ಳುವ ತಂಪಾಗಿಸುವ ನೀರಿನಲ್ಲಿ ಶೇಖರವಾಗುವ ಕರಗಿದ ಮಿನರಲ್ ಗಳನ್ನು ಸೂಚಿಸುತ್ತದೆ. ಡ್ರಾ-ಆಫ್(ಬ್ಲೋಡೌನ್) ಅನ್ನು ಪ್ರಧಾನವಾಗಿ ಈ ಮಿನರಲ್ ಗಳ ಶೇಖರಣೆಯನ್ನು ಹತ್ತಿಕ್ಕಲು ಬಳಸಲಾಗುತ್ತದೆ.

ಸರಿದೂಗಿಸಬೇಕಾದ (ಮೇಕಪ್) ನೀರಿನ ರಾಸಾಯನಿಕತೆಯು, ಕರಗಿದ ಮಿನರಲ್ ಗಳ ಸಾಂದ್ರತೆಯೂ ಸೇರಿದಂತೆ, ಬಹಳ ವ್ಯತ್ಯಾಸಗಳಿಗೆ ಒಳಗಾಗಬಹುದು. ಕರಗಿದ ಮಿನರಲ್ ಗಳು ಕಡಿಮೆ ಪ್ರಮಾಣದಲ್ಲಿರುವಂತಹ ನೆಲಮಟ್ಟದಲ್ಲಿ ದೊರೆಯುವಂತಹ ಸರಿದೂಗಿಸಬೇಕಾದ ನೀರು(ಕೆರೆಮ ನದಿಗಳು, ಇತ್ಯಾದಿಗಳದು) ಲೋಹಗಳಿಗೆ ಉಗ್ರವಾಗಿರುವ ಲಕ್ಷಣಗಳಿರುತ್ತವೆ(ತುಕ್ಕು ಉಂಟುಮಾಡುತ್ತವೆ). ಸರಿದೂಗಿಸುವ ನೀರು ಭೂಮಿಯ ನೀರಿನ ತಾಣಗಳಿಂದ (ಬಾವಿಗಳಿಂದ) ತೆಗೆದುಕೊಂಡಲ್ಲಿ ಅದರಲ್ಲಿ ಹೆಚ್ಚಿನ ಮಿನರಲ್ ಗಳಿರುತ್ತವೆ ಮತ್ತು ಸ್ಕೇಲಿಂಗ್(ಮಿನರಲ್ ಗಳ ಶೇಖರಣೆ) ಉಂಟಾಗುವ ಸಾಧ್ಯತೆಯಿರುತ್ತದೆ. ಆವರ್ತನದ ಮೂಲಕ ನೀರಿನಲ್ಲಿರುವ ಮಿನರಲ್ ಗಳನ್ನು ಹೆಚ್ಚಿಸುವುದರಿಂದ ನೀರು ಕೊಳವೆಗಳತ್ತ ಕಡಿಮೆ ಉಗ್ರತೆ ಹೊಂದಬಹುದು, ಆದರೆ ಹೆಚ್ಚಿನ ಮಿನರಲ್ ಗಳು ಸ್ಕೇಲಿಂಗ್ ತೊಂದರೆಯನ್ನು ತಂದೊಡ್ಡಬಹುದು.

ಸಾಂದ್ರತೆಯ ಆವರ್ತನಗಳು ಹೆಚ್ಚಿದಂತೆ ನೀರು ತನ್ನಲ್ಲಿನ ಖನಿಜಗಳನ್ನು ಹಿಡಿದಿಡಲು ಅಶಕ್ತವಾಗಬಹುದು. ಖನಿಜಗಳ ಕರಗುವಿಕೆಯ ಗುಣವು ಮೀರಲ್ಪಟ್ಟಾಗ ಅವುಗಳು ಘನ ಖನಿಜಗಳಾಗಿ ಘನೀಕೃತವಾಗಿ ಗೋಪುರವನ್ನು ಹೊಲಸಾಗಿಸಬಹುದು ಮತ್ತು ಶಾಖ ವರ್ಗಾವಣೆಯಲ್ಲಿ ಶೈತ್ಯಗೋಪುರದಲ್ಲಿ ಅಥವಾ ಶಾಖ ವರ್ಗಕಾರಕಗಳಲ್ಲಿ ತೊಡಕನ್ನುಂಟುಮಾಡಬಹುದು. ಮರು ಆವರ್ತನಗೊಳ್ಳುವ ನೀರಿನ, ಕೊಳವೆಗಳ ಮತ್ತು ಶಾಖ ವರ್ಗಾಯಿಸುವ ಪ್ರದೇಶಗಳ ತಾಪಮಾನಗಳು ಒಂದು ವೇಳೆ, ಮತ್ತು ಎಲ್ಲಿ, ಖನಿಜಗಳು ಮರು ಆವರ್ತನಗೊಳ್ಳುವ ನೀರಿನಿಂದ ಘನೀಕೃತಗೊಳ್ಳಬಹುದೆಂದು ತೀರ್ಮಾನಿಸುತ್ತವೆ. ಹಲವಾರು ಬಾರಿ ವೃತ್ತಿನಿರತ ನೀರು ಸಂಸ್ಕರಣ ಸಲಹೆಗಾರರು ಸರಿದೂಗಿಸಬಹುದಾದ ನೀರನ್ನು ಗಣನೆ ಮಾಡಿ ಮತ್ತು ಶೈತ್ಯಗೋಪುರದ ಕಾರ್ಯವೆಸಗುವ ಸ್ಥಿತಿಗಳನ್ನು ಪರಿಶೀಲಿಸಿ, ಸಾಂದ್ರತೆಯ ಆವರ್ತನಗಳಿಗೆ ಸೂಕ್ತವಾದ ಮಟ್ಟವನ್ನು ಸೂಚಿಸುತ್ತಾರೆ. ನೀರು ಸಂಸ್ಕರಣ ರಸಾಯನಗಳ ಬಳಕೆ, ಪೂರ್ವಸಂಸ್ಕರಣಗಳಾದ ನೀರನ್ನು ಮೆದುಗೊಳಿಸುವಿಕೆ,pH ಸರಿಹೊಂದಿಸುವಿಕೆ ಮತ್ತು ಇತರ ವಿಧಿಗಳು ಸಾಂದ್ರತೆಯ ಹೊಂದಬಲ್ಲ ಮಟ್ಟದ ಮೇಲೆ ಪರಿಣಾಮ ಬೀರಬಹುದು.

ಸುಮಾರು ಎಲ್ಲಾ ಶೈತ್ಯಗೋಪುರಗಳಲ್ಲೂ ಸಾಂದ್ರತೆಯ ಆವರ್ತನಗಳ ಮಟ್ಟ 3ರಿಂದ 7 ಆಗಿರುತ್ತದೆ.. ಯುನೈಟೆಡ್ ಸ್ಟೇಟ್ಸ್ ನಲ್ಲಿ ಪ್ರಮುಖವಾದ ನೀರು ಸರಬರಾಜು ಬಾವಿಯ ನೀರಾಗಿದ್ದು, ಕರಗಿರುವ ಘನವಸ್ತುಗಳ ಪ್ರಮಾಣವು ಗಮನಾರ್ಹವಾಗಿರುತ್ತದೆ. ಆದರೆ, ನೀರಿನ ಸರಬರಾಜಿನಲ್ಲಿ ಬೃಹತ್ತಾದುದರಲ್ಲೊಂದಾದ ನ್ಯೂ ಯಾರ್ಕ್ ನಗರದಲ್ಲಿ ಖನಿಜಗಳು ಬಹಳ ಕಡಿಮೆ ಇರುವ ಭೂಮಟ್ಟದ ನೀರಿನ ಸರಬರಜು ಇದ್ದು, ಅಲ್ಲಿನ ಶೈತ್ಯಗೋಪುರಗಳು ಹಲವಾರು ಬಾರಿ ಸಾಂದ್ರತೆ 7ರವರೆಗೂ ಅಥವಾ ಇನ್ನೂ ಹೆಚ್ಚಿನವರೆಗೂ ಸಾಂದ್ರತೆಯ ಆವರ್ತನಗಳನ್ನು ಹೊಂದಲು ಅನುಮತಿಸಲಾಗಿದೆ.

ಬೃಹತ್ ಕೈಗಾರಿಕಾ ಶೈತ್ಯಗೋಪುರಗಳ ವ್ಯವಸ್ಥೆಯಲ್ಲಿ ಸ್ಕೇಲಿಂಗ್ ಮತ್ತು ಹೊಲಸಾಗುವಿಕೆಯನ್ನು ಕನಿಷ್ಟವಾಗಿಸಲು ಸಂಸ್ಕರಣ ಮತ್ತು ತಂಪಾದ ನೀರಿನ ಅವರ್ತನಗಳಷ್ಟೇ ಅಲ್ಲದೆ, ನೀರನ್ನು ಶೋಧಿಸಬೇಕು ಮತ್ತು ಬಯೋಸೈಡ್ ಹಾಗೂ ಆಲ್ಗೇಸೈಡ್ ಗಳನ್ನು ಸೇರಿಸುವುದರ ಮೂಲಕ ನೀರಿನ ನಿರಂತರ ಹರಿವಿಗೆ ಅಡ್ಡಿಯಾಗಬಹುದಾದ ಬೆಳವಣಿಗೆಗಳನ್ನು ತಪ್ಪಿಸಬಹುದು.[೫] ಪೂರ್ಣಗೊಂಡ ಕುಣಿಕೆ ಆವಿಯಾಗುವಿಕೆಯ ಗೋಪುರಗಳಿಗೆ ತುಕ್ಕು ನಿವಾರಕಗಳನ್ನು ಬಳಸಬೇಕಾಗಬಹುದು, ಆದರೆ ಸ್ಥಳೀಯ ಪರಿಸರ ನಿಯಮಾವಳಿಗಳನ್ನು ಎಚ್ಚರಿಕೆಯಿಂದ ಅನುಸರಿಸುವುದು ಅವಶ್ಯ; ಏಕೆಂದರೆ ಕೆಲವು ನಿವಾರಕಗಳು ಕ್ರೋಮಾಟೆಲ್ ಗಳನ್ನು ಬಳಸುತ್ತವೆ.

ಸೈಕ್ರೋಮೆಟ್ರಿಕ್ ಪಟ್ಟಿಯು ನಿರ್ಧರಿಸುವಂತೆ, ಗಾಳಿಯು ತನ್ನಲ್ಲಿ ಹೀರಿಕೊಳ್ಳಬಲ್ಲ ಹಾಗೂ ಹಿಡಿದಿಟ್ಟುಕೊಳ್ಳಬಲ್ಲ ನೀರಿನ ಆವಿಯ ಮೊತ್ತದ ಮೇಲೆಯೇ, ವ್ಯಾಪ್ತ ಸ್ಥಿತಿಗಳ ಆಧಾರದ ಮೇಲೆ,ಯಾವುದೇ ಗೋಪುರದ ಕಾರ್ಯಕ್ಷಮತೆಯು ಅವಲಂಬಿತವಾಗುತ್ತದೆ.

ಶೈತ್ಯಗೋಪುರಗಳು ಮತ್ತು ಲೀಜಿಯೊನೇಯ್ರ್ಸ್ ಖಾಯಿಲೆ[ಬದಲಾಯಿಸಿ]

ನ್ಯೂಕ್ಲಿಯರ್ ಪವರ್ ಪ್ಲಾಂಟ್ ಒಂದರ ಶೈತ್ಯಗೋಪುರ ಮತ್ತು ಹೊರಹೋಗುವ ನೀರು

ಬಯೋಸೈಡ್ ಗಳನ್ನು ಶೈತ್ಯಗೋಪುರಗಳಲ್ಲಿ ಬಳಸಲು ಮತ್ತೊಂದು ಬಹು ಮುಖ್ಯವಾದ ಕಾರಣವೆಂದರೆ ಲೀಜಿಯೋನೆಲ್ಲಾಸಿಸ್ ಅಥವಾ ಲೀಜಿಯೋನೇಯ್ರ್ಸ್ ಖಾಯಿಲೆ ಯನ್ನು, ಅದರಲ್ಲೂ ಪ್ರಮುಖವಾಗಿ ನ್ಯೂಮೋಫಿಲಾ ರೋಗವನ್ನು, ಉಂಟುಮಾಡುವ ಪ್ರಭೇದವನ್ನೂ ಒಳಗೊಂಡಂತಹ ಲೀಜಿಯೋನೆಲ್ಲಾ ದ ಬೆಳವಣಿಗೆ.[೬] ವಿವಿಧ ಲೀಜಿಯೋನೆಲ್ಲಾ ಪ್ರಬೇಧಗಳು ಲೀಜಿಯೋನೇಯ್ರ್ಸ್ ಖಾಯಿಲೆ ಯನ್ನು ಮನುಷ್ಯರಲ್ಲಿ ಹರಡುತ್ತದೆ ಮತ್ತು ಈ ಖಾಯಿಲೆಯು ಹರಡುವುದು ಏರೋಸಾಲ್ ಗಳಿಗೆ ಒಡ್ಡಿಕೊಂಡಾಗ - ಬ್ಯಾಕ್ಟೀರಿಯಾಗಳನ್ನು ಹೊಂದಿರುವಂತಹ ಇಬ್ಬನಿಯ ಕಣಗಳನ್ನು ಉಸಿರಿನ ಮೂಲಕ ಎಳೆದುಕೊಂಡಾಗ. ಲೀಜಿಯೋನೆಲ್ಲಾ ದ ಸಾಮಾನ್ಯ ಮೂಲಗಳೆಂದರೆ ಬಹಿರಂಗವಾದ ಮರು ಆವರ್ತನಗೊಳ್ಳುವ ಆವಿಯಾಗತಕ್ಕುದನ್ನಾಧರಿಸಿದ ಶೈತ್ಯಕಾರಕ ನೀರಿನ ಪದ್ಧತಿಗಳಲ್ಲಿ ಬಳಸುವ ಶೈತ್ಯಗೋಪುರಗಳು, ಗೃಹಗಳ ಬಿಸಿನೀರಿನ ವ್ಯವಸ್ಥೆ, ಕಾರಂಜಿಗಳು ಮತ್ತು ಅಂತಹವೇ ಸಾರ್ವಜನಿಕ ನೀರು ಸರಬರಾಜಿನ ವ್ಯವಸ್ಥೆಗೆ ಪಸರಿಸುವಂತಹವು. ನೈಸರ್ಗಿಕ ಮೂಲಗಳೆಂದರೆ ಹೊಸನೀರಿನ ಕೆರೆಗಳು ಹಾಗೂ ಕುಂಟೆಗಳು.

ಪಾಸ್-ಡಿ-ಕಲಾಯಿಸ್ ಎಂಬ ಫ್ರಾನ್ಸ್ ನ ಭಾಗದಲ್ಲಿರುವ ಪೆಟ್ರೋಕೆಮಿಕಲ್ ಕೈಗಾರಿಕೆಯೊಂದರ ಒಂದು ದೊಡ್ಡ ಕಲುಷಿತ ಶೈತ್ಯಗೋಪುರದಿಂದ 6 ಕಿಲೋಮೀಟರ್ ಗಳವರೆಗೆ ಗಾಳಿಯಿಂದಲೂ ಲೀಜಿಯೋನೆಲ್ಲಾ ವು ಹರಡಿರುವುದನ್ನು ಫ್ರೆಂಚ್ ಸಂಶೋಧಕರು ಪತ್ತೆ ಹಚ್ಚಿದರು. ಆ ಖಾಯಿಲೆಯ ಸೋಂಕಿನಿಂದ 86 ಜನರ ಪೈಕಿ 21 ಜನರು ಅಸುನೀಗಿದರು ಎಂಬುದು ಪ್ರಯೋಗಾಲಯ-ದೃಢೀಕೃತವಾಯಿತು.[೭]

ಮಾರುತಚಲನ(ಅಥವಾ ವಾಯುಮಾನ)ವು ಶೈತ್ಯಗೋಪುರಗಳಿಂದ ಹೊರಬಿಡಲಾಗುವ ಸಂಸ್ಕರಣ ಹರಿವಿನ ನೀರಿನಕಣಗಳನ್ನು ಡ್ರಿಫ್ಟ್ ಅಥವಾ ವಿಂಡೇಜ್ ಎಂದು ಕರೆಯುತ್ತಾರೆ. ಡ್ರಿಫ್ಟ್ ನ ಗತಿಯನ್ನು ಲಾಕ್ಷಣಿಕವಾಗಿ ಆವರ್ತನ ಹರಿವಿನ ಗತಿಯ 0.001%-0.005%ರಷ್ಟಕ್ಕೆ ಹಿಡಿದಿಡಲೆಂದು ಡ್ರಿಫ್ಟ್ ಎಲಿಮಿನೇಟರ್ ಗಳನ್ನು ಬಳಸಲಾಗುತ್ತದೆ. ಒಂದು ಡ್ರಿಫ್ಟ್ ಎಲಿಮಿನೇಟರ್ ಸಾಮಾನ್ಯವಾಗಿ ಗಾಳಿಯ ಹರಿವಿಗೆ ಅನೇಕ ದಿಕ್ಕುಗಳ ಬದಲಾವಣೆ ನೀಡುತ್ತಲೇ ನೀರಿನ ಕಣಗಳು ಹೊರಹೊಮ್ಮವುದನ್ನು ತಪ್ಪಿಸುತ್ತದೆ. ಚೆನ್ನಾಗಿ ವಿನ್ಯಾಸಗೊಂಡ ಮತ್ತು ಸೂಕ್ತವಾಗಿ ಅಳವಡಿಸಲ್ಪಟ್ಟ ಡ್ರಿಫ್ಟ್ ಎಲಿಮಿನೇಟರ್ ನೀರಿನ ನಷ್ಟವನ್ನು ಬಹಳಷ್ಟು ಕಡಿಮೆ ಮಾಡುವುದು ಮತ್ತು ಲೀಜಿಯೋನೆಲ್ಲಾ ಅಥವಾ ರಾಸಾಯನಿಕಗಳಿಗೆ ತುತ್ತಾಗುವುದನ್ನೂ ಕಡಿಮೆ ಮಾಡಬಹುದು.

ಹಲವಾರು ಸರ್ಕಾರಿ ಏಜೆನ್ಸಿಗಳು, ಶೈತ್ಯಗೋಪುರ ತಯಾರಕರು ಮತ್ತು ಕೈಗಾರಿಕಾ ವಹಿವಾಟು ಸಂಸ್ಥೆಗಳು ಶೈತ್ಯಗೋಪುರಗಳಲ್ಲಿ ಲೀಜಿಯೋನೆಲ್ಲಾ ದ ಬೆಳವಣಿಗೆಯನ್ನು ಕುಂಠಿತಗೊಳಿಸಲು, ತಪ್ಪಿಸಲು ಅಥವಾ ಹತೋಟಿಯಲ್ಲಿಡಲು(ಉದಾಹರಣೆಗೆ ನಿಯೋಸೆನ್ಸ್ Archived 2008-07-06 ವೇಬ್ಯಾಕ್ ಮೆಷಿನ್ ನಲ್ಲಿ. ಗಳು, FS ಸೆನ್ಸರ್ ಗಳನ್ನು ಬಳಸಿ)ಸಂರಕ್ಷಣಾ ಮಾರ್ಗದರ್ಶಿಗಳನ್ನು ಮತ್ತು ವಿನ್ಯಾಸಗಳನ್ನು ನಿರ್ಮಿಸಿದ್ದಾರೆ) ಈ ಕೆಳಗೆ ಆ ಮಾರ್ಗದರ್ಶಿಯ ಆಕರಗಳ ಪಟ್ಟಿಯನ್ನು ನೀಡಲಾಗಿದೆ:

 • Centers for Disease Control and Prevention PDF (1.35 MB)ಶೈತ್ಯಗೋಪುರಗಳನ್ನು ಸ್ವಚ್ಛಗೊಳಿಸಲು ಅನುಸರಿಸಬೇಕಾದ ವಿಧಿ ಮತ್ತು ತತ್ಸಂಬಂದಿತ ಸಲಕರಣೆಗಳು(249 ಪುಟಗಳಲ್ಲಿ ಪುಟ 239 ಮತ್ತು ಪುಟ 240)
 • Cooling Technology Institute PDF (240 KB) - ಲೀಜಿಯೋನೆಲ್ಲಾ ಹತೋಟಿಗೆ ತರಲು ಅತ್ಯುತ್ತಮ ವಿಧಿವಿಧಾನಗಳು, ಜುಲೈ, 2006
 • Association of Water Technologies PDF (964 KB) - ಲೀಜಿಯೋನೆಲ್ಲಾ 2003
 • California Energy Commission PDF (194 KB) - ಶಕ್ತಿಸ್ಥಾವರಗಳಲ್ಲಿ ಕ್ಲಿನ್ನ ಮತ್ತು ಕಸಿ ಶೀತಲಿತ ಗೋಪುರಗಳ ಜಲಶೈತ್ಯಕರಣ ವ್ಯವಸ್ಥಾ ಕಾರ್ಯಕ್ರಮಗಳ ದಿಕ್ಸೂಚಿಗಳು
 • SPX Cooling Technologies PDF (119 KB) - ಶೈತ್ಯಗೋಪುರಗಳ ಸಂರಕ್ಷಣ ಕ್ರಮಗಳು
 • SPX Cooling Technologies PDF (789 KB) - ASHRAE ಮಾರ್ಗದರ್ಶಿ 12-2000 - ಲೀಜಿಯೋನೆಲ್ಲೋಸಿಸ್ ನ ಅಪಾಯಗಳನ್ನು ತಗ್ಗಿಸುವಿಕೆ
 • SPX Cooling Technologies PDF (83.1 KB) - ಶೈತ್ಯಗೋಪುರ ಪರೀಕ್ಷಣೆಗೆ ಸೂಚನೆಗಳು (ವಿಶೇಷತಃ 7 ಪುಟಗಳಲ್ಲಿ 3ನೆಯದು)
 • Tower Tech Modular Cooling Towers PDF (109 KB) - ಲೀಜಿಯೋನೆಲ್ಲಾ ಹತೋಟಿ
 • GE Infrastructure Water & Process Technologies Betz Dearborn PDF (195 KB) - ತೆರೆದ ಮರುಆವರ್ತನ ತಂಪಾಗಿಸುವ ನೀರಿನ ಕ್ರಮದಲ್ಲಿ ಲೀಜಿಯೋನೆಲ್ಲಾ ಸಂಬಂಧಿತ ಅಪಾಯಗಳನ್ನು ಕಡಿಮೆಗೊಳಿಸುವ ಸಲುವಾಗಿ ರಾಸಾಯನಿಕ ನೀರು ಸಂಸ್ಕರಣ ಸಲಹೆಗಳು

ಶೈತ್ಯಗೋಪುರಗಳ ಮಂಜು[ಬದಲಾಯಿಸಿ]

ಕೆಲವು ವ್ಯಾಪ್ತ ಪರಿಸ್ಥಿತಿಗಳಲ್ಲಿ, ಶೈತ್ಯಗೋಪುರದ ತ್ಯಾಜ್ಯದಿಂದ ನೀರಿನ ಆವಿಯ ಪ್ಲೂಮ್ ಗಳು(ಮಂಜು) ಮೇಲಕ್ಕೆ ಹಬ್ಬುತ್ತಿರುವುದನ್ನು ಕಾಣಬಹುದು,(ಚಿತ್ತ 1 ನೋಡಿ) ಹಾಗೂ ಇದನ್ನು ಬೆಂಕಿಯ ಪರಿಣಾಮವಾಗಿ ಏಳುತ್ತಿರುವ ಹೊಗೆಯೆಂದು ಭಾವಿಸುವ ಸಾಧ್ಯತೆಯಿದೆ. ಹೊರಗಿನ ಗಾಳಿಯು ಸಾಂದ್ರತೆಯ ಅಥವಾ ಅದರ ಹತ್ತಿರದ ಮಟ್ಟದಲ್ಲಿದ್ದರೆ, ಮತ್ತು ಗೋಪುರವು ಮತ್ತಷ್ಟು ನೀರನ್ನು ಅದಕ್ಕೆ ಸೇರಿಸಿದರೆ, ಸಾಂದ್ರ ಗಾಳಿಯು ದ್ರವೀಕೃತ ನೀರಿ ಕಣಗಳೊಡನೆ ಹೊರಹಾಕಲ್ಪಡಬಹುದು - ಇದನ್ನೇ ಮಂಜು ಎಂದು ಪರಿಗಣಿಸಲಾಗುವುದು. ಈ ಸಂದರ್ಭಗಳು ಸಾಮಾನ್ಯವಾಗಿ ತಣ್ಣನೆಯ, ತೇವಾಂಶಭರಿತ ದಿನಗಳಲ್ಲಿ ಗೋಚರಿಸುತ್ತವೆ, ಆದರೆಹಲವಾರು ಹವೆಗಳಲ್ಲಿ ಇದು ಬಹಳ ಅಪರೂಪ.

ಮಂಜುಗಟ್ಟುವ ನೀರಿನಲ್ಲಿ ಶೈತ್ಯಗೋಪುರಗಳ ಕಾರ್ಯವಿಧಿ[ಬದಲಾಯಿಸಿ]

ದೋಷಭರಿತವಾದ ಶೈತ್ಯಗೋಪುರಗಳು ಬಹಳ ಥಂಡಿಯ ವಾತಾವರಣಗಳಲ್ಲಿ ಹಿಮಗಟ್ಟಬಹುದು. ಲಾಕ್ಷಣಿಕವಾಗಿ, ಹಿಮಗಟ್ಟುವಿಕೆಯು ಶೀತಕಾರಕ ಗೋಪುರಗಳ ಮೂಲೆಗಳಲ್ಲಿ, ಕಡಿಮೆಯಾದ ಅಥವಾ ಗೈರಾದ ಶಾಖದ ಹೊರೆಯು ಆರಂಭವಾಗುವುದು ಹೆಚ್ಚಿದ ಹಿಮಗಟ್ಟುವಿಕೆಯ ಸ್ಥಿತಿಯಿಂದ ಹೆಚ್ಚು ಪ್ರಮಾಣದ ಮಂಜುಗಡ್ಡೆಗಳ ಸೃಷ್ಟಿಯಾಗಬಹುದು, ಹೀಗಾದರೆ ಕಟ್ಟಡದ ಮೇಲಿನ ಭಾರವು ಮತ್ತಷ್ಟು ಹೆಚ್ಚುತ್ತದೆ. ಚಳಿಗಾಲದಲ್ಲಿ ಕೆಲವು ಶೈತ್ಯಗೋಪುರಗಳು ನಿರಂತರವಾಗಿ ಕಾರ್ಯವೆಸಗಿ 40 °F (4 °C)ನೀರು ಗೋಪುರದಿಂದ ಹೊರಹೊಮ್ಮುತ್ತದೆ. ಬೇಸಿನ್ ಹೀಟರ್ ಗಳು, ಗೋಪುರ ಡ್ರೈನ್ ಡೌನ್ ಮತ್ತು ಇತರ ಘನೀಕರಣ ಸಂರಕ್ಷಣ ವಿಧಿಗಳನ್ನು ಥಂಡಿ ವಾತಾವರಣಗಳಲ್ಲಿ ಆಗಾಗ್ಗೆ ಬಳಸಲಾಗುತ್ತದೆ.

 • ಗೋಪುರಗಳನ್ನು ಯಾರೂ ಇಲ್ಲದಿರುವಾಗ ಕಾರ್ಯಗತಗೊಳಿಸಬಾರದು.
 • ಶಾಖದ ಹೊರೆಯಿಲ್ಲದೆ ಗೋಪುರಗಳನ್ನು ಕಾರ್ಯಗತಗೊಳಿಸಬಾರದು. ಇದು ಬೇಸಿನ್ ಶಾಖಕಾರಕಗಳು ಮತ್ತು ಉಷ್ಣತೆಯ ಜಾಡನ್ನು ಹೊಂದಿರಬಹುದು. ಬೇಸಿನ್ ಶಾಖೋತ್ಪಾದಕಗಳು ಗೋಪುರದಲ್ಲಿನ ನೀರಿನ ತಾಪಮಾನವನ್ನು ಒಂದು ಒಪ್ಪತಕ್ಕ ಮಟ್ಟದಲ್ಲಿ ರಕ್ಷಿಸುತ್ತವೆ ಹೀಟ್ ಟ್ರೇಸ್ (ಉಷ್ಣತಾ ಜಾಡು) ಒಂದು ನಿರೋಧಕ ವಸ್ತುವಾಗಿದ್ದು, ಘನೀಭೂತವಾಗುವುದನ್ನು ತಪ್ಪಿಸಲು ಥಂಡಿ ಹವೆಗಳಲ್ಲಿ ನೀರಿನ ಕೊಳವೆಗಳ ಉದ್ದಕ್ಕೂ ಜೋಡಿಸಲಾಗಿರುತ್ತದೆ.
 • ವಿನ್ಯಾಸ ಮಾಡಿದ ರೀತಿಯಲ್ಲೇ ಫಿಲ್ ಮೇಲೆ ನೀರು ಹರಿಯುವ ವೇಗವನ್ನು ಸಂರಕ್ಷಿಸಿ.
 • ಗಾಳಿಯ ಹರಿವನ್ನು ನೀರಿನ ತಾಪಮಾನವು ಗಡ್ಡೆಗಟ್ಟುವ ಮಟ್ಟಕ್ಕಿಂತಲೂ ಹೆಚ್ಚಾಗಿರುವ ರೀತಿಯಲ್ಲಿಡುವಂತೆ ನಿರ್ವಹಿಸಿ.[೮]

ಶೈತ್ಯಗೋಪುರ ಉದ್ಯಮದಲ್ಲಿ ಸಾಮಾನ್ಯವಾಗಿ ಉಪಯೋಗಿಸುವ ಕೆಲವು ಪದಗಳು[ಬದಲಾಯಿಸಿ]

 • ಡ್ರಿಫ್ಟ್ - ಹೊರಹೋಗುವ ಗಾಳಿಯ ಜೊತೆಗೆ ಶೈತ್ಯಗೋಪುರದಿಂದ ಒಯ್ಯಲ್ಪಡುವ ನೀರಿನ ಕಣಗಳು. ಡ್ರಿಫ್ಟ್ ಬಿಂದುಗಳು ಒಳಹರಿಯುವ ನೀರಿನಲ್ಲಿರುವ ಕಲ್ಮಷಗಳ ಸಾಂದ್ರತೆಯನ್ನೇ ಹೊಂದಿರುತ್ತವೆ. ಮಾರುತದ ವೇಗವು ಗತಿನಿಯಂತ್ರಕದಂತಹ ಎಲಿಮಿನೇಟರ್ಸ್ ಎಂಬ ವಸ್ತುಗಳನ್ನು ಉಪಯೋಗಿಸುವುದರಿಂದ ಲಾಕ್ಷಣಿಕವಾಗಿ ಕಡಿಮೆಯಾಗುತ್ತದೆ; ಗೋಪುರದ ಫಿಲ್ ಮತ್ತು ಸಿಂಪಡನಾ ವಿಭಾಗಗಳಿಂದ ಹೊರಬಂದ ಗಾಳಿಯು ಎಲಿಮಿನೇಟರ್ ಗಳ ಮೂಲಕ ಸಾಗಲೇಬೇಕು.
 • ಬ್ಲೋ-ಔಟ್ : ಶೈತ್ಯಗೋಪುರದಿಂದ , ಸಾಮಾನ್ಯವಾಗಿ, ಗಾಳಿಯ ಒಳಹರಿವಿನ ದ್ವಾರಗಳಲ್ಲಿ, ಗಾಳಿಯ ರಭಸದಿಂದ ಹೊರತೂರಲ್ಪಟ್ಟ, ನೀರಿನ ಕಣಗಳನ್ನು ಬ್ಲೋ-ಔಟ್ ಎನ್ನುತ್ತಾರೆ. ಮಾರುತವು ಇಲ್ಲದಿರುವಾಗಲೂ, ಸ್ಪ್ಲ್ಯಾಷಿಂಗ್ (ಎರಚುವಿಕೆ) ಮತ್ತು ಮಿಸ್ಟಿಂಗ್ (ಇಬ್ಬನಿ)ಗಳಿಂದ ನೀರಿನ ನಷ್ಟವಾಗಬಹುದು, ಗಾಳಿತೆರೆಗಳು, ಕೊಳವೆಗಳು, ಎರಚುವಿಕೆಯನ್ನು ಬದಿಗೊತ್ತಿಸುವಂತಹ ಸಾಧನಗಳು ಮತ್ತು ನೀರಿನ ದಿಕ್ಕನ್ನು ಬದಲಾಯಿಸುವ ಸಾಧನಗಳನ್ನು ಯುಪಯೋಗಿಸುವುದರ ಮೂಲಕ ಈ ನಷ್ಟವನ್ನು ಕಡಿಮೆ ಮಾಡಬಹುದು.
 • ಫ್ಲೂಮ್ - ಶೈತ್ಯಗೋಪುರವನ್ನು ಬಿಟ್ಟು ಸಾಗುವ ಸಾಂದ್ರ ಹೊರಹೊಮ್ಮುವ ಗಾಳಿಯು ಝರಿ. ವ್ಯಕ್ತಿಯ ಸಾಂದ್ರಗೊಂಡ ನಿಶ್ವಾಸವು ಥಂಡಿಯ ದಿನದಲ್ಲಿ ಮಂಜಿನಂತಾಗುವಂತೆ, ನೀರಿನ ಆವಿಯು ವ್ಯಾಪ್ತವಾದ ತಣ್ಣನೆಯ ಗಾಳಿಯ ಸಂಪರ್ಕಕ್ಕೆ ಬರುವುದರ ಮೂಲಕ ಘನೀಕೃತವಾದಾ ಪ್ಲೂಮ್ ಕಾಣಬರುತ್ತದೆ. ಕೆಲವು ಸಂದರ್ಭಗಳಲ್ಲಿ, ಶೈತ್ಯಗೋಪುರದ ಪ್ಲೂಮ್ ಇಬ್ಬನೀಕರಣ ಅಥವಾ ಮಂಜುಗೆಡ್ಡೆಯಾಗಿಯೋ ಸುತ್ತಮುತ್ತಣ ಪರಿಸರಕ್ಕೆ ಹಾನಿಯೊದಗಿಸಬಹುದು. ಗಾಳಿಯ ಹೊಡೆತಕ್ಕೆ ಚಲಿಸುವ ಸಣ್ಣ ಪ್ರತಿಶತ ನೀರಿನ ಹನಿಗಳು ಅಥವಾ ಒಳಹರಿವಿನಿಂದ ಹೊರಚಿಮ್ಮಲ್ಪಟ್ಟ ನೀರಿನ ಹೊರತಾಗಿ, ತಂಪಾಗಿಸುವ ಪ್ರಕ್ರಿಯೆಯಲ್ಲಿ ಆವಿಯಾದ ನೀರು"ಶುದ್ಧ"ವಾಗಿರುವುದನ್ನು ಗಮನಿಸಿ.
 • ಬ್ಲೋ-ಡೌನ್ - ನೀರಿನಲ್ಲಿ ಕರಗಿರುವ ಘನವಸ್ತುಗಳ ಪ್ರಮಾಣವನ್ನು ನಿರ್ವಹಿಸಲು ಮತ್ತು ಇತರ ಕಲ್ಮಷಗಳನ್ನು ಒಂದು ಸಹಿಸಬಹುದಾದ ಮಟ್ಟದಲ್ಲಿ ಇರಿಸಲು ಹೊರತೆಗೆಯಲ್ಪಡುವ ಆವರ್ತನಗೊಳ್ಳುತ್ತಿರುವ ನೀರಿನ ಹರಹಿನ ಪ್ರಮಾಣವನ್ನು ಬ್ಲೋ-ದೌನ್ ಎನ್ನುತ್ತಾರೆ. ಹೆಚ್ಚಿನ TDS (ಟೋಟಲ್ ಡಿಸಾಲ್ವ್ಡ್ ಸಾಲಡ್ಸ್ - ಮೊತ್ತವಾಗಿ ಕರಗಿದ ಘನವಸ್ತುಗಳು) ಸಾಂದ್ರತೆಯು ಒಂದು ದ್ರವದಲ್ಲಿದ್ದರೆ ಅದು ಹೆಚ್ಚಿನ ಶೈತ್ಯಗೋಪುರ ಕಾರ್ಯಕ್ಷಮತೆಯನ್ನು ಫಲಿತಾಂಶವಾಗಿ ನೀಡುತ್ತದೆಂಬುದು ಗಮನಿಸಬೇಕಾದ ಅಂಶ. ಆದರೆ TDS ಸಾಂದ್ರತೆಯು ಹೆಚ್ಚಿದಷ್ಟೂ, ಲವಣಗಳು ಘನೀಕರಣಗೊಳ್ಳುವಿಕೆ(ಸ್ಕೇಲಿಂಗ್೦, ಜೈವಿಕ ಬೆಳವಣಿಗೆಗಳು ಮತ್ತು ತುಕ್ಕು ಕೂಡಾ ಹೆಚ್ಚುತ್ತದೆ.
 • ಲೀಚಿಂಗ್ : ಮರದಲ್ಲಿ ರಚಿಸಿರುವ ಶೈತ್ಯಗೋಪುರದಲ್ಲಿ ಮರದ ಮೂಲಕ ಸಾಗುವ ನೀರಿನ ತೊಳೆಯುವಂತಹ ಕ್ರಿಯೆಯು ಮರವನ್ನು ಸಂರಕ್ಷಿಸುವ ರಾಸಾಯನಿಕಗಳನ್ನು ತೊಳೆದುಹಾಕಿ ನಷ್ಟವೆಸಗುತ್ತದೆ.
 • ಸದ್ದು : ಶಬ್ದ ಶಕ್ತಿಯು ಶೈತ್ಯಗೋಪುರದಿಂದ ಹೊಮ್ಮುತ್ತದೆ ಮತ್ತು ನಿಗದಿತ ದೂರ ಮತ್ತು ದಿಕ್ಕಿನಲ್ಲಿ ಕೇಳಿಸುತ್ತದೆ(ದಾಖಲಿಸಲ್ಪಡುತ್ತದೆ). ಸದ್ದು ಧುಮ್ಮಿಕ್ಕುವ ನೀರಿನ ಒತ್ತಡದಿಂದ ಉಂಟಾಗುತ್ತದೆ, ಫ್ಯಾನ್ ಗಾಳಿಗಳ ಮೂಲಕ, ಫ್ಯಾನ್ ರೆಕ್ಕೆ ಗಳು ಕಟ್ಟಡದಲ್ಲಿ ಚಲಿಸುವುದರ ಮೂಲಕ, ಮತ್ತು ಮೋಟಾರ್ ಗಳು, ಗೇರ್ ಬಾಕ್ಸ್ ಗಳು ಅಥವಾ ಚಾಲನ ಬೆಲ್ಟ್ ಗಳ ಚಲನೆಯ ಮೂಲಕ ಸದ್ದು ಹೊಮ್ಮುತ್ತದೆ.
 • ಅಪ್ರೋಚ್ - ತಣ್ಣಗಾದ ನೀರಿನ ತಾಪಮಾನ ಮತ್ತು ಒಳಹೊಕ್ಕುವ ಗಾಳಿಯ ಕ್ಲಿನ್ನ ಬಲ್ಬ್ ತಾಪಮಾನ(twb)ಗಳ ವ್ಯತ್ಯಾಸದ ಮೊತ್ತವೇ ಅಪ್ರೋಚ್. ಶೈತ್ಯಗೋಪುರಗಳು ಆವಿಯ ಮೂಲಕ ತಣ್ಣಗಾಗಿಸುವ ಸಿದ್ಧಾಂತವನ್ನು ಹೊಂದಿರುವುದರಿಂದ, ಶೈತ್ಯಗೋಪುರದ ಗರಿಷ್ಠ ತಂಪಾಗಿಸುವ ಕ್ಷಮತೆಯು ಗಾಳಿಯ ಕ್ಲಿನ್ನ ಬಲ್ಬ್ ತಾಪಮಾನದ ಮೇಲೆ ಅವಲಂಬಿತವಾಗಿರುತ್ತದೆ. ಕ್ಲಿನ್ನ ಬಲ್ಬ್ ತಾಪಮಾನವು ಒಂದು ವಿಧವಾದ ತಾಪಮಾನದ ಅಳತೆಯಾಗಿದ್ದು ಇದು ಒಂದು ವ್ಯವಸ್ಥೆಯ ಭೌತಿಕ ಗುಣಗಳನ್ನು ಒಂದು ಅನಿಲ ಮತ್ತು ಒಂದು ಆವಿಯ ಮಿಶರ್ಣದ ಮೂಲಕ, ಸಾಮಾನ್ಯವಾಗಿ ಗಾಳಿ ಮತ್ತು ನೀರಿನ ಆವಿಯ ಮೂಲಕ, ಬಿಂಬಿಸುತ್ತದೆ.
 • ರೇಂಜ್ - ನೀರಿನ ಒಳಹರಿವು ಮತ್ತು ನೀರಿನ ಹೊರಹರಿವಿನ ಮಧ್ಯದಲ್ಲಿನ ತಾಪಮಾನದ ವ್ಯತ್ಯಾಸವನ್ನು ರೇಂಜ್ ಎಂದು ಕರೆಯುತ್ತಾರೆ.
 • ಫಿಲ್ - ಗೋಪುರದಲ್ಲಿ, ಸಂಪರ್ಕ ಪ್ರದೇಶವನ್ನು ಹೆಚ್ಚಿಸುವ ಸಲುವಾಗಿ ಮತ್ತು ಗಾಳಿ ಮತ್ತು ನೀರಿನ ನಡುವಣ ಸಂಪರ್ಕದ ಸಮಯವನ್ನು ಹೆಚ್ಚಿಸಲಿಕ್ಕಾಗಿ ಫಿಲ್ ಗಳನ್ನು ಜೋಡಿಸಲಾಗುತ್ತದೆ. ಹೀಗಾಗಿ ಅವು ಹೆಚ್ಚಿನ ಶಾಖ ವರ್ಗಾವಣೆಯನ್ನು ನೀಡುತ್ತವೆ. ಗೋಪುರದ ಕಾರ್ಯಕ್ಷಮತೆಯು ಇದನ್ನೂ ಸಹ ಅವಲಂಬಿಸಿರುತ್ತದೆ. ಎರಡು ವಿಧವಾದ ಫಿಲ್ ಗಳನ್ನು ಬಳಸಬಹುದಾಗಿದೆ:
  • ಫಿಲ್ಮ್(ಹಾಳೆ) ಮಾದರಿಯ ಫಿಲ್ (ನೀರು ಸಣ್ಣ ಹಾಳೆಯಂತೆ ಹರಡುವಂತೆ ಮಾಡುತ್ತದೆ)
  • ಸ್ಪ್ಲ್ಯಾಷ್(ಎರಚುವಿಕೆ) ಮಾದರಿಯ ಫಿಲ್ (ನೀರನ್ನು ಪಲ್ಲಟಗೊಳಿಸುತ್ತದೆ ಮತ್ತು ಅದರ ಲಂಬ ಪ್ರಗತಿಗೆ ತಡೆಯೊಡ್ಡುತ್ತದೆ)

ಬೆಂಕಿ ಆಕಸ್ಮಿಕಗಳು[ಬದಲಾಯಿಸಿ]

ಅಗ್ನಿಯನ್ನು ಆಕರ್ಷಿಸುವ ವಸ್ತುಗಳಿಂದ ಇಡೀ ಅಥವಾ ಭಾಗಶಃ ನಿರ್ಮಿಸಲ್ಪಟ್ಟ ಶೈತ್ಯಗೋಪುರಗಳು ಒಳಂಗಣದಲ್ಲಿ ಬೆಂಕಿ ಹತ್ತುವುದನ್ನು ಪ್ರೇರಿಸುತ್ತವೆ. ಇದರಿಂದ ಾಗುವ ನಷ್ಟವು ಬಹಳ ಉಗ್ರವಾಗಿರುತ್ತದೆ ಮತ್ತು ಇಡೀ ಸೆಲ್ ಅಥವಾ ಗೋಪುರ ರಚನೆಯನ್ನೇ ಪುನಃ ರಚಿಸೇಕಾದ ಪ್ರಸಂಗ ಒದಗಬಹುದು. ಈ ಕಾರಣಕ್ಕಾಗಿ ಕೆಲವು ನಿಯಮಾವಳಿಗಳು ಮತ್ತು ಗುಣಮಟ್ಟಗಳು[೯] ಉರಿಯುವಂತಹ ವಸ್ತುಗಳುಳ್ಳ ಶೈತ್ಯಗೋಪುರಗಳು ಸ್ವಯಂಚಾಲಿತ ಅಗ್ನಿ ಸಿಂಪಡಣ ವ್ಯವಸ್ಥೆಯನ್ನು ಹೊಂದಿರಬೇಕೆಂದು ಸಾರಿಸವು. ಗೋಪುರಗಳ ಒಳಗೇ ಸಂರಕ್ಷಣಾ ಸಮಯದಲ್ಲಿ, ಗೋಪುರವು ಕಾರ್ಯನಿರತವಾಗಿಲ್ಲದಿದ್ದಾಗ (ಸಂರಕ್ಷಣೆ ಅಥವಾ ನಿರ್ಮಾಣ ಕಾರ್ಯಗಳ ಸಮಯದಲ್ಲಿ) ಮತ್ತು ಗೋಪುರವು ಕಾರ್ಯನಿರತವಾಗಿದ್ದಾಗಲೂ, ವಿಶೇಷತಃ ಇಂಡ್ಯೂಸ್ಡ್ ಡ್ರಾಫ್ಟ್ ಮಾದರಿಯಲ್ಲಿ ಸಾದೃಶವಾಗಿ ಒಣ ಪ್ರದೇಶಗಳನ್ನು ಗೋಪುರಗಳ ಒಳಭಾಗದಲ್ಲಿ ಹೊಂದಿರುತ್ತವಾದ್ದರಿಂದ, ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಇರುತ್ತದೆ.[೧೦]

ಸ್ಥಿರತೆ[ಬದಲಾಯಿಸಿ]

ಫೆರಿಬ್ರಿಡ್ಜ್ ಶಕ್ತಿ ಸ್ಥಾವರ

ಬೃಹತ್ ನಿರ್ಮಾಣಗಳಾದ್ದರಿಂದ ಇವುಗಳು ಗಾಳಿಯ ಹೊಡೆತಕ್ಕೆ ಜಖಂ ಆಗುವ ಸಾಧ್ಯತೆಗಳಿರುತ್ತವೆ ಮತ್ತು ಹಲವಾರು ಅದ್ಭುತವಾದ ಅಪಯಶಗಳು/ಅವಘಡಗಳು ಹಿಂದೆ ನಡೆದಿವೆ. ಫೆರಿಬ್ರಿಡ್ಜ್ ಪವರ್ ಸ್ಟೇಷನ್ ನಲ್ಲಿ, ನವೆಂಬರ್ 1, 1965ರಂದು ಆ ಸ್ಟೇಷನ್ ಒಂದು ಬೃಹತ್ ನಿರ್ಮಾಣ ದೋಷದ ತಾಣವಾಗಿ, ಗಂಟೆಗೆ 85 ಮೈಲಿ ವೇಗದ ಗಾಳಿಯ ಹೊಡೆತವನ್ನು ತಾಳಲಾರದೆ ಅಲ್ಲಿದ್ದಂತಹ ಗೋಪುರಗಳಲ್ಲಿ ಮೂರು ಶೈತ್ಯಗೋಪುರಗಳು ಕುಸಿದುಬಿದ್ದವು. ಆ ಕಟ್ಟಡಗಳು ಹೆಚ್ಚಿನ ಗಾಳಿಯ ವೇಗಗಳನ್ನು ತಡೆಯುವಂತೆಯೇ ನಿರ್ಮಿತವಾಗಿದ್ದರೂ, ಶೈತ್ಯಗೋಪುರಗಳ ಆಕಾರವು ಪಶ್ಚಿಮದಿಂದ ಬೀಸಿದ ಗಾಳಿಯು ಗೋಪುರಗಳೊಳಗೆ ಲಾಳಿಕೆಯೊಳಗೆ ನುಗ್ಗುವಂತೆ ನುಗ್ಗಲು ಅನುವು ಮಾಡಿಕೊಟ್ಟ ಪರಿಣಾಮವಾಗಿ, ಸುಳಿಯು ಉಂಟಾಯಿತು. ಮೂಲತಃ ಎಂಟು ಗೋಪುರಗಳಿದ್ದು, ಅದರಲ್ಲಿ ಮೂರು ಶೈತ್ಯಗೋಪುರಗಳು ನಾಶಗೊಂಡವು ಮತ್ತು ಉಳಿದ ಐದು ಬಹಳವಾಗಿ ಜಖಂ ಆದವು. ಆ ಎಂಟೂ ಶೈತ್ಯಗೋಪುರಗಳು ಮತ್ತೆ ನಿರ್ಮಿತವಾದವು ಮತ್ತು ಆ ಗೋಪುರಗಳು ಯಾವುದೇ ರೀತಿಯ ಪ್ರತಿಕೂಲ ವಾತಾವರಣವನ್ನು ತಡೆದುಕೊಳ್ಳುವ ರೀತಿಯಲ್ಲಿ ದೃಢಗೊಳಿಸಲಾಯಿತು. ನಿರ್ಮಾಣದಲ್ಲಿ ಉತ್ತಮಗೊಂಡ ರಚನಾ ಆಧಾರಗಳನ್ನು ಒಳಗೊಳ್ಳುವಂತೆ ನಿಯಮಾವಳಿಗಳನ್ನು ಬದಲಾಯಿಸಲಾಯಿತು ಮತ್ತು ಗೋಪುರದ ನಿರ್ಮಾಣ ಮತ್ತು ಆಕಾರದ ಬಗ್ಗೆ ಪರಿಶೀಲನೆ ಮಾಡಲು ಮಾರುತ ಸುರಂಗ ಪರೀಕ್ಷೆಗಳನ್ನು ಪರಿಚಯಿಸಲಾಯಿತು.

ಇವನ್ನೂ ಗಮನಿಸಿ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

 1. ಯುಕೆ ಪೇಟೆಂಟ್ ಸಂಖ್ಯೆ 108,863
 2. U.S. Environmental Protection Agency (EPA). (1997). Profile of the Fossil Fuel Electric Power Generation Industry (Report). Washington, D.C. Archived from the original on 2011-04-05. https://web.archive.org/web/20110405122613/http://www.epa.gov/compliance/resources/publications/assistance/sectors/notebooks/fossil.html. ದಸ್ತಾವೇಜು ಸಂಖ್ಯೆ EPA/310-R-97-007. p. 79.
 3. {0/{1}}ಕೂಲಿಂಗ್ ಸಿಸ್ಟಮ್ ರೆಟ್ರೋಫಿಟ್ ಕಾಸ್ಟ್ಸ್ ತಂಪಾಗಿಸುವ ಜಲ ಸ್ವೀಕರಣ ತಂತ್ರಜ್ಞಾನ ಕುರಿತು EPA ಕಾರ್ಯಾಗಾರ, ಜಾನ್ ಮಾಲ್ ಬೆಟ್ಸ್ಕ್, ಮಾಲ್ ಬೆಟ್ಸ್ಕ್ ಕಂಸಲ್ಟಿಂಗ್, ಮೇ 2003
 4. ಥಾಮಸ್ ಜೆ. ಫೀಲೀ, III, ಲಿಂಡ್ಸೇ ಗ್ರೀನ್, ಜೇಮ್ಸ್ ಟಿ,ಮರ್ಫಿ, ಜೆಫ್ರಿ ಹಾಫ್ ಮನ್ ಮತ್ತು ಬಾರ್ಬರಾ ಎ. ಕಾರ್ನೀ (2005). "ಡಿಪಾರ್ಟ್ ಮೆಂಟ್ ಆಫ್ ಎನರ್ಜಿ/ಆಫೀಸ್ ಆಫ್ ಫಾಸಿಲ್ ಎನರ್ಜೀಸ್ ಪವರ್ ಪ್ಲಾಂಟ್ ವಾಟರ್ ಮ್ಯಾನೇಜ್ ಮೆಂಟ್ R&D ಪ್ರೋಗ್ರಾಂ." Archived 2007-09-27 ವೇಬ್ಯಾಕ್ ಮೆಷಿನ್ ನಲ್ಲಿ. ಯು.ಎಸ್. ಶಕ್ತಿ ಉತ್ಪಾದನಾ ಇಲಾಖೆ, ಜುಲೈ 2005.
 5. ೫.೦ ೫.೧ Beychok, Milton R. (1967). Aqueous Wastes from Petroleum and Petrochemical Plants (1st Edition ed.). John Wiley and Sons. LCCN 67019834. {{cite book}}: |edition= has extra text (help)(ಹಲವಾರು ವಿಶ್ವವಿದ್ಯಾಲಯಗಳ ಗ್ರಂಥಾಲಯಗಳಲ್ಲಿ ಲಭ್ಯವಿದೆ)
 6. Ryan K.J.; Ray C.G. (editors) (2004). Sherris Medical Microbiology (4th Edition ed.). McGraw Hill. ISBN 0-8385-8529-9. {{cite book}}: |author= has generic name (help); |edition= has extra text (help)CS1 maint: multiple names: authors list (link)
 7. ಏರ್ ಬೋರ್ನ್ ಲೀಜಿಯೋನೆಲ್ಲಾ ಮೇ ಟ್ರಾವಲ್ ಸೆವೆರಲ್ ಕಿಲೋಮೀಟರ್ಸ್(ತಲುಪಲು ಬಿಟ್ಟಿ ನೋಂದಾವಣಿಯ ಅಗತ್ಯವಿದೆ) Archived 2008-09-22 ವೇಬ್ಯಾಕ್ ಮೆಷಿನ್ ನಲ್ಲಿ.
 8. SPX Cooling Technologies: Operating Cooling Towers in Freezing Weather PDF (1.45 MB)
 9. ನ್ಯಾಷನಲ್ ಫೈರ್ ಪ್ರೊಟೆಕ್ಷನ್ ಅಸೋಸಿಯೇಷನ್ (NFPA). NFPA 214, ಸ್ಟ್ಯಾಂಡರ್ಡ್ ಆನ್ ವಾಟರ್-ಕೂಲಿಂಗ್ ಟವರ್ಸ್ Archived 2010-06-17 ವೇಬ್ಯಾಕ್ ಮೆಷಿನ್ ನಲ್ಲಿ..
 10. NFPA 214, ಸ್ಟ್ಯಾಂಡರ್ಡ್ ಆನ್ ವಾಟರ್-ಕೂಲಿಂಗ್ ಟವರ್ಸ್. Archived 2010-06-17 ವೇಬ್ಯಾಕ್ ಮೆಷಿನ್ ನಲ್ಲಿ. ವಿಭಾಗ A1.1

ಬಾಹ್ಯ ಕೊಂಡಿಗಳು[ಬದಲಾಯಿಸಿ]