ವಿಷಯಕ್ಕೆ ಹೋಗು

ಶೇನ್ ವ್ಯಾಟ್ಸನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Shane Watson
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
Shane Robert Watson
ಅಡ್ಡಹೆಸರುWatto, Danger man
ಎತ್ತರ1.83 m (6 ft 0 in)
ಬ್ಯಾಟಿಂಗ್Right-hand
ಬೌಲಿಂಗ್Right-arm fast-medium
ಪಾತ್ರAll-rounder (Opening batsmen)
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಟೆಸ್ಟ್ ಚೊಚ್ಚಲ (ಕ್ಯಾಪ್ 391)2 January 2005 v Pakistan
ಕೊನೆಯ ಟೆಸ್ಟ್17 November 2011 v South Africa
ಅಂ. ಏಕದಿನ​ ಚೊಚ್ಚಲ (ಕ್ಯಾಪ್ 148)24 March 2002 v South Africa
ಕೊನೆಯ ಅಂ. ಏಕದಿನ​4 March 2012 v Sri Lanka
ಅಂ. ಏಕದಿನ​ ಅಂಗಿ ನಂ.33
ಟಿ೨೦ಐ ಚೊಚ್ಚಲ (ಕ್ಯಾಪ್ 19)24 February 2006 v South Africa
ಕೊನೆಯ ಟಿ೨೦ಐ8 August 2011 lastT20Iyear = 2012 v Sri Lanka
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
2001–2004Tasmania
2004–2009Queensland
2005Hampshire
2008–Rajasthan Royals
2009–New South Wales
2011–Sydney Sixers
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ಟೆಸ್ಟ್ ODI FC List A
ಪಂದ್ಯಗಳು ೩೨ ೧೪೪ ೧೦೦ ೨೦೫
ಗಳಿಸಿದ ರನ್ಗಳು ೨,೧೩೫ ೪,೨೮೮ ೭,೧೮೬ ೬,೦೫೫
ಬ್ಯಾಟಿಂಗ್ ಸರಾಸರಿ ೩೮.೧೨ ೪೨.೫೦ ೪೫.೧೯ ೪೦.೦೯
೧೦೦/೫೦ ೨/೧೬ ೬/೨೫ ೧೭/೪೦ ೮/೩೬
ಉನ್ನತ ಸ್ಕೋರ್ ೧೨೬ ೧೮೫* ೨೦೩* ೧೮೫*
ಎಸೆತಗಳು ೩,೧೬೪ ೫,೦೩೬ ೯,೩೮೯ ೬,೯೨೨
ವಿಕೆಟ್‌ಗಳು ೫೬ ೧೩೮ ೧೮೯ ೧೮೦
ಬೌಲಿಂಗ್ ಸರಾಸರಿ ೨೮.೦೧ ೨೯.೫೫ ೨೭.೩೭ ೩೧.೯೯
ಐದು ವಿಕೆಟ್ ಗಳಿಕೆ
ಹತ್ತು ವಿಕೆಟ್ ಗಳಿಕೆ
ಉನ್ನತ ಬೌಲಿಂಗ್ ೬/೩೩ ೪/೩೬ ೭/೬೯ ೪/೩೬
ಹಿಡಿತಗಳು/ ಸ್ಟಂಪಿಂಗ್‌ ೨೪/– ೪೭/– ೮೧/– ೬೬/–
ಮೂಲ: Cricinfo, 22 November 2011




ಶೇನ್ ರಾಬರ್ಟ್ ವ್ಯಾಟ್ಸನ್ (ಇಪ್ಸ್ವಿಚ್ , ಕ್ವೀನ್ಸ್ ಲ್ಯಾಂಡ್ ನಲ್ಲಿ 17 ಜೂನ್ 1981ರಲ್ಲಿ ಜನನ)ಆಸ್ಟ್ರೇಲಿಯಾದ ಒಬ್ಬ ಕ್ರಿಕೆಟ್ ಆಟಗಾರ. ಈತ ಒಬ್ಬ ಬಲಗೈ ಬ್ಯಾಟ್ಸ್ ಮನ್ ಹಾಗು ಬಲಗೈ ಮಧ್ಯಮ ವೇಗಿ ಬೌಲರ್ ಆಗಿದ್ದಾರೆ. ಈತ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಒಬ್ಬ ಮೊದಲ ಬ್ಯಾಟ್ಸ್ ಮನ್ ಆಗಿ ಆಡುತ್ತಾರಾದರೂ, ಸ್ವದೇಶದಲ್ಲಿ ಈ ಕ್ರಮಾಂಕವನ್ನು ಅನುಸರಿಸುವುದಿಲ್ಲ.

ಈತ 2002ರಲ್ಲಿ ಆಸ್ಟ್ರೇಲಿಯನ್ ಕ್ರಿಕೆಟ್ ತಂಡದ ಪರವಾಗಿ ಮೊದಲ ಪ್ರದರ್ಶನವನ್ನು ನೀಡುವುದರ ಜೊತೆಗೆ, ತಮ್ಮ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನು ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ. ಏಕದಿನ ತಂಡದಲ್ಲಿ ಒಬ್ಬ ಖಾಯಂ ಸದಸ್ಯನಾದ ನಂತರ, ವ್ಯಾಟ್ಸನ್ ಆಸ್ಟ್ರೇಲಿಯಾ ತಂಡದ ಪರವಾಗಿ ಕೆಲವು ಟೆಸ್ಟ್ ಪಂದ್ಯಗಳನ್ನು ಆಡಿದ್ದಾನೆ. ಈತ ಪಾಕಿಸ್ತಾನದ ವಿರುದ್ಧ ತಮ್ಮ ಚೊಚ್ಚಲ ಪಂದ್ಯವನ್ನು ಸಿಡ್ನಿ ಕ್ರಿಕೆಟ್ ಗ್ರೌಂಡ್ ನಲ್ಲಿ ಜನವರಿ 2005ರಲ್ಲಿ ಆಡಿದರು. ಆಸ್ಟ್ರೇಲಿಯಾ ತಂಡದ ಟೆಸ್ಟ್ ಆಲ್ ರೌಂಡರ್ ಎಂದು ಖ್ಯಾತನಾದರೂ, ಟೆಸ್ಟ್ ತಂಡದಲ್ಲಿ ತನ್ನ ಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಗಾಯಗಳು ಸತತವಾಗಿ ಅವರಿಗೆ ಅಡ್ಡಿಯನ್ನುಂಟುಮಾಡಿದವು. ಆದಾಗ್ಯೂ, 2009ರ ಉತ್ತಾರರ್ಧದಿಂದ, ವ್ಯಾಟ್ಸನ್, ಸಿಮೊನ್ ಕಟಿಚ್ ಜೊತೆಗೂಡಿ ಆಸ್ಟ್ರೇಲಿಯನ್ ಟೆಸ್ಟ್ ನ ಆರಂಭಿಕ ಬ್ಯಾಟ್ಸ್ ಮನ್ ಆಗಿ ಆಡುತ್ತಿದ್ದಾನೆ. ವ್ಯಾಟ್ಸನ್ ಗೆ 2010ರ [[ಅಲನ್ ಬಾರ್ಡರ್ ಪದಕ|ಅಲನ್ ಬಾರ್ಡರ್ ಪದಕ[[]]]] ನೀಡಿ ಗೌರವಿಸಲಾಗಿದೆ.

ವ್ಯಾಟ್ಸನ್ ಪತ್ನಿ ಲೀ ಫಾಕ್ಸ್ ಸ್ಪೋರ್ಟ್ಸ್ ಆಸ್ಟ್ರೇಲಿಯದ ನಿರೂಪಕಿಯಾಗಿದ್ದಾರೆ.[] ಈತ ಮಾಡೆಲಿಂಗ್ ಗಾಗಿ ಹಲವಾರು ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ, ಉದಾಹರಣೆಗೆ 2009& 2010ರ []ಮೆನ್ ಆಫ್ ಕ್ರಿಕೆಟ್ ಕ್ಯಾಲೆಂಡರಿನಲ್ಲಿ ಹಾಗು ಆಲ್ಫಾ ಮ್ಯಾಗಜಿನ್ನಲ್ಲಿ ಕಾಣಿಸಿಕೊಂಡಿದ್ದಾರೆ.

ವೃತ್ತಿ ಜೀವನ

[ಬದಲಾಯಿಸಿ]

ಆರಂಭಿಕ ವೃತ್ತಿಜೀವನ

[ಬದಲಾಯಿಸಿ]

ವ್ಯಾಟ್ಸನ್ ತಮ್ಮ ಮೊದಲ ದರ್ಜೆ ಕ್ರಿಕೆಟ್ ವೃತ್ತಿಜೀವನವನ್ನು, ತಮ್ಮ ತವರೂರು ಕ್ವೀನ್ಸ್ ಲ್ಯಾಂಡ್ ನ್ನು ತೊರೆದ ನಂತರ, ತಾಸ್ಮೆನಿಯನ್ ಟೈಗರ್ಸ್ ತಂಡದ ಪರವಾಗಿ ಆಡುವುದರೊಂದಿಗೆ ಆರಂಭಿಸಿದ, ಆದರೆ ತನ್ನ ಅಂತಾರಾಷ್ಟ್ರೀಯ ವೃತ್ತಿಜೀವನದ ಆರಂಭದಲ್ಲಿ ತನ್ನ ತವರೂರಿನ ತಂಡವಾದ ಕ್ವೀನ್ಸ್ ಲ್ಯಾಂಡ್ ಬುಲ್ಲ್ಸ್ ಪರ ಆಡಲು ಹಿಂದಿರುಗಿದರು. ಈತ ಇಂಗ್ಲಿಷ್ ಕೌಂಟಿ ಚ್ಯಾಂಪಿಯನ್ ಶಿಪ್ನಲ್ಲಿ ಹ್ಯಾಂಪ್ ಶೈರ್ ತಂಡದ ಪರವಾಗಿಯೂ ಸಹ ಆಡಿದರು. ಈತ ಟೆರ್ರಿ ಆಲ್ಡರ್ ಮನ್ ರನ್ನು ತನ್ನ ಆಪ್ತ ಸಲಹೆಗಾರರಲ್ಲಿ ಒಬ್ಬರೆಂದು ಪರಿಗಣಿಸುತ್ತಾರೆ.

ಅಂತರರಾಷ್ಟ್ರೀಯ ವೃತ್ತಿಜೀವನ

[ಬದಲಾಯಿಸಿ]

ವ್ಯಾಟ್ಸನ್ ಆಸ್ಟ್ರೇಲಿಯನ್ ತಂಡಕ್ಕೆ ಮೊದಲ ಬಾರಿಗೆ 2002ರಲ್ಲಿ ಆಯ್ಕೆಯಾದರು, ತಾಸ್ಮೇನಿಯ ತಂಡದ ಪರವಾಗಿ ಪುರ ಕಪ್ ನ ಅತ್ಯಧಿಕ ವಿಕೆಟ್ ಗಳಿಸಿದವರ ಕೋಷ್ಟಕದಲ್ಲಿ ಅಗ್ರಸ್ಥಾನ ಪಡೆಯುವುದರ ಜೊತೆಗೆ ತಮ್ಮ ದೃಢವಾದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಪ್ರದರ್ಶನದ ನಂತರ ಟೆಸ್ಟ್ ತಂಡದೊಂದಿಗೆ ದಕ್ಷಿಣ ಆಫ್ರಿಕಾದ ಪ್ರವಾಸಕ್ಕೆ ಆಯ್ಕೆಯಾದರು. ಅಂದಿನ ಆಸ್ಟ್ರೇಲಿಯಾ ತಂಡದ ನಾಯಕನಾಗಿದ್ದ ಸ್ಟೀವ್ ವಾ, ವ್ಯಾಟ್ಸನ್ 1950ರಲ್ಲಿ ತಂಡದ ಪರವಾಗಿ ಆಡುತ್ತಿದ್ದ ಕೀಥ್ ಮಿಲ್ಲರ್ ಹಾಗು ಅಲನ್ ಡೇವಿಡ್ ಸನ್ ರ ನಂತರ ಬಹುಶಃ ಆಸ್ಟ್ರೇಲಿಯಾದ ಮೊದಲ ಪ್ರಾಮಾಣಿಕ ಆಲ್ ರೌಂಡರ್ಆಗಬಹುದೆಂದು ಘೋಷಿಸಿದರು. ವ್ಯಾಟ್ಸನ್, ಆಸ್ಟ್ರೇಲಿಯಾ ತಂಡಕ್ಕೆ ಆಯ್ಕೆಯಾಗಿದ್ದರ ಬಗ್ಗೆ ತಮ್ಮ ಸಂತಸವನ್ನು ವಾ ಜೊತೆಗೆ ಹಂಚಿಕೊಂಡರು, ಅವರು ವಾ ರನ್ನು ತಮ್ಮ ಅಚ್ಚುಮೆಚ್ಚಿನ ವ್ಯಕ್ತಿಯೆಂದು ಉಲ್ಲೇಖಿಸಿದರು. ತಮ್ಮ ಪ್ರವಾಸದ ಚೊಚ್ಚಲ ಪಂದ್ಯದಲ್ಲಿ ವ್ಯಾಟ್ಸನ್ ಔಟಾಗದೆ ಶತಕವನ್ನು ಬಾರಿಸಿದರು, ಆದರೆ ಇವರು ಟೆಸ್ಟ್ ಪಂದ್ಯಾವಳಿಗಳಲ್ಲಿ ಭಾಗವಹಿಸಲಿಲ್ಲ, ಏಕೆಂದರೆ ಆಯ್ಕೆ ಸಮಿತಿಯು, ಆಸ್ಟ್ರೇಲಿಯನ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 3–0 ಅಂಕಗಳಿಂದ ಜಯ ಸಾಧಿಸಿದ್ದ XI ತಂಡವನ್ನೇ ಉಳಿಸಿಕೊಳ್ಳಲು ನಿರ್ಧರಿಸಿತು. ಪ್ರವಾಸದಲ್ಲಿ ವ್ಯಾಟ್ಸನ್ ತಮ್ಮ ODI ಚೊಚ್ಚಲ ಪದ್ಯವನ್ನು ಆಡಲಿಲ್ಲ, ಇದಕ್ಕೆ ವ್ಯತಿರಿಕ್ತವಾಗಿ ವಾ ರ ಸ್ಥಾನವನ್ನು ಆಕ್ರಮಿಸಿಕೊಂಡರು. ಇದಕ್ಕೆ ಪೂರ್ವಭಾವಿಯಾಗಿ ನಡೆದ ಆಸ್ಟ್ರೇಲಿಯನ್ ಸಮ್ಮರ್ ನ ODI ಅಂತಿಮ ಪಂದ್ಯದಲ್ಲಿ ತಂಡದ ನೀರಸ ಪ್ರದರ್ಶನದಿಂದಾಗಿ ವಾ ರನ್ನು ತಂಡದಿಂದ ಕೈಬಿಡಲಾಯಿತು. ವ್ಯಾಟ್ಸನ್, 2003ರ ಆರಂಭದಲ್ಲಿ ಮೂರು ಬಾರಿ ಬೆನ್ನೆಲುಬಿನ ತೀವ್ರತರವಾದ ಮುರಿತಕ್ಕೆ ಒಳಪಡುವ ತನಕವೂ ODI ತಂಡದ ಒಬ್ಬ ಸದಸ್ಯನಾಗಿದ್ದರು. ಅವರ ಬೆನ್ನಿನ ಗಂಭೀರ ಗಾಯದ ಪರಿಣಾಮ 2003ರ ವಿಶ್ವ ಕಪ್ ಕ್ರಿಕೆಟ್ ನಲ್ಲಿ ಆಡುವುದರಿಂದ ವಂಚಿತರಾದರು. ಅವರ ಬದಲಿಗೆ ಕ್ವೀನ್ ಲ್ಯಾಂಡ್ ನ ತಂಡದ ಅವರ ಸಹ ಆಟಗಾರ ಆಂಡ್ರ್ಯೂ ಸೈಮಂಡ್ಸ್ ಗೆ ತಂಡದಲ್ಲಿ ಸ್ಥಾನ ನೀಡಲಾಯಿತು. ಈತ ಈ ಕ್ರೀಡಾ ಪಂದ್ಯಾವಳಿಗಳಲ್ಲಿ 143* ಹಾಗು 91*ನ್ನು ಗಳಿಸುವುದರೊಂದಿಗೆ ಆಲ್ ರೌಂಡರ್ ಆಗಿ ತಂಡದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡರು.

ವಾಸಿಯಾಗದ ಗಾಯಗಳು ವ್ಯಾಟ್ಸನ್ ರನ್ನು 2003-04ರ ಆಸ್ಟ್ರೇಲಿಯನ್ ಸರಣಿಯ ತನಕವೂ ತಂಡದ ಪರ ಆಡದಂತೆ ಮಾಡಿತು, ಜೊತೆಗೆ ಅವರು ಗಾಯದಿಂದ ಮತ್ತೆ ಚೇತರಿಸಿಕೊಳ್ಳುವವರೆಗೂ ಒಬ್ಬ ಬ್ಯಾಟ್ಸ್ ಮನ್ ಆಗಿ ಸರಣಿಯಲ್ಲಿ ಭಾಗವಹಿಸುತ್ತಿದ್ದರು, ಅವರ ಗಾಯವು ಗುಣವಾಗುವವರೆಗೂ ಬ್ಯಾಟಿಂಗ್ ಕಡೆ ತಮ್ಮ ಗಮನಹರಿಸಿದ್ದರಿಂದ ಅವರ ಬ್ಯಾಟಿಂಗ್ ಕೌಶಲಗಳು ಸುಧಾರಿಸಲು ಅವಕಾಶವಾಯಿತು. ಈ ಅವಧಿಯಲ್ಲಿ, ತಮ್ಮ ಕ್ಲಬ್ ಲಿಂಡಿಸ್ ಫಾರ್ನೆ ಪರ ಔಟಾಗದೆ 300*ರನ್ನುಗಳನ್ನು ಗಳಿಸಿದರು.

ವ್ಯಾಟ್ಸನ್ 2004-05ರ ಸರಣಿಯಲ್ಲಿ ನಿಯಮಿತವಾಗಿ ODI ಪಂದ್ಯಗಳಲ್ಲಿ ಒಬ್ಬ ಬೌಲಿಂಗ್ ಆಲ್ ರೌಂಡರ್ ಆಗಿ ಆಡುವುದರ ಮೂಲಕ ತಂಡಕ್ಕೆ ಹಿಂದಿರುಗಿದರು. ಅವರು ಪಾಕಿಸ್ತಾನದ ವಿರುದ್ಧ ಮೂರನೇ ಟೆಸ್ಟ್ ಪಂದ್ಯದಲ್ಲಿ ಐದನೇ ಬೌಲರ್ ಆಗಿ ಆಡುವುದರ ಮೂಲಕ ಆಸ್ಟ್ರೇಲಿಯಾ ತಂಡದ ಇಬ್ಬರು ಸ್ಪಿನ್ನರ್ ಗಳು ಹಾಗು ಮೂವರು ಪೇಸ್ ಬೌಲರ್ ಗಳು ಸಿಡ್ನಿ ಕ್ರಿಕೆಟ್ ಗ್ರೌಂಡ್ ನ ಒಣ ಪಿಚ್ ನಲ್ಲಿ ಆಡಲು ಅವಕಾಶ ಮಾಡಿಕೊಟ್ಟರು.

ಕಳೆದ 2005ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ಐದು ಬೌಲರ್ ಗಳ ಕಾರ್ಯನೀತಿಯನ್ನು ಅನುಸರಿಸಿ ಆಶಸ್ ನಲ್ಲಿ ಗೆಲುವು ಸಾಧಿಸಿದಾಗ, ಆಸ್ಟ್ರೇಲಿಯಾ ಇದಕ್ಕೆ ಪ್ರತಿಕ್ರಿಯೆಯಾಗಿ ವ್ಯಾಟ್ಸನ್ ರನ್ನು ಐದನೇ ಕ್ರಮಾಂಕದ ಬೌಲರ್ ಹಾಗು ಆಲ್ ರೌಂಡರ್ ಆಗಿ ಎಲ್ಲ ಟೆಸ್ಟ್ ಪಂದ್ಯಗಳಲ್ಲಿ ಆಡಲು ಅವಕಾಶ ನೀಡಿತು. ಇಂಗ್ಲೆಂಡ್ ತಂಡ ಪರ ಪ್ರಮುಖ ಪಾತ್ರ ವಹಿಸಿದ್ದ ಆಂಡ್ರ್ಯೂ ಫ್ಲಿಂಟ್ ಆಫ್ ರನ್ನು ಮೀರಿಸಲು ವ್ಯಾಟ್ಸನ್ ಉದ್ದೇಶಿಸಿದ್ದರು. ವ್ಯಾಟ್ಸನ್ ICC ವರ್ಲ್ಡ್ XIವಿರುದ್ಧ ಪ್ರಮುಖ ಪಾತ್ರ ನಿರ್ವಹಿಸಿದರು, ಆದರೆ ವೆಸ್ಟ್ ಇಂಡಿಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಡಲು ಆಯ್ಕೆಯಾಗಿದ್ದ ಇವರು, ಬಾಲು ಮೈದಾನದಿಂದ ಆಚೆ ಹೋಗದಂತೆ ತಡೆಯಲು ವೇಗವಾಗಿ ಹಾರಿದ ಪರಿಣಾಮ ತಮ್ಮ ಭುಜದ ಸ್ಥಾನ ಪಲ್ಲಟಕ್ಕೆ ಒಳಗಾದರು. ವ್ಯಾಟ್ಸನ್ ರ ಬದಲಿಗೆ ಮತ್ತೊಮ್ಮೆ ಸೈಮಂಡ್ಸ್ ಆಯ್ಕೆಯಾದರು ಜೊತೆಗೆ ಬೇಸಿಗೆಯ ಇತರ ಸರಣಿಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸುವಲ್ಲಿ ಅಸಮರ್ಥರಾದರು.

ಕಳೆದ 2006ರಲ್ಲಿ ದಕ್ಷಿಣ ಆಫ್ರಿಕಾದ ಪ್ರವಾಸದಲ್ಲಿ ಏಕ ದಿನ ತಂಡಕ್ಕೆ ವಾಪಸು ಕರೆಸಿಕೊಳ್ಳಲಾಯಿತು ಆದರೆ ಆಲ್ ರೌಂಡರ್ [[]]ಆಂಡ್ರ್ಯೂ ಸೈಮಂಡ್ಸ್{/0, ತಮಗಾದ ಗಾಯದಿಂದ ಚೇತರಿಸಿಕೊಂಡು ಮತ್ತೆ ತಂಡಕ್ಕೆ ಹಿಂದಿರುಗಿದಾಗ ಇವರನ್ನು ತಂಡದಿಂದ ಕೈಬಿಡಲಾಯಿತು. ವ್ಯಾಟ್ಸನ್ ಗಾಯದಿಂದ ಬಳಲುವ ಸಂದರ್ಭದಲ್ಲಿ ಟೆಸ್ಟ್ ತಂಡದಲ್ಲಿ ಸ್ಥಾನವನ್ನು ಗಳಿಸುವ ಮೂಲಕ ತಂಡದಲ್ಲಿ ಸ್ಥಾಪಿತವಾಗಲು ಉದ್ದೇಶಿಸಿದ್ದರು, ಜೊತೆಗೆ ಆಂಡ್ರ್ಯೂ ಸೈಮಂಡ್ಸ್ ಇವರ ಬದಲಿ ಆಟಗಾರನಾಗಿ ತಂಡದಲ್ಲಿ ಸ್ಥಾನ ಗಳಿಸಿದರು.

ವ್ಯಾಟ್ಸನ್ ರನ್ನು ಈ ಮುಂಚೆ ಅವರ ತುಲನಾತ್ಮಕ ನೀರಸ ಬೌಲಿಂಗ್ ಮಾರ್ಗ ಹಾಗು ಬಾಲನ್ನು ಎಸೆಯುವ ಅವರ ಅಸಮರ್ಥತೆಯನ್ನು ಟೀಕಿಸಲಾಗಿತ್ತು, ಇದು ಅವರ ಅಧಿಕ ಬೌಲಿಂಗ್ ಸರಾಸರಿಯಲ್ಲಿ ಬಿಂಬಿತವಾಗಿದೆ. ಅವರ ತಾಸ್ಮೆನಿಯನ್ ತಂಡದ ಸಹ ಆಟಗಾರ ಹಾಗು ಮುಂದೆ ಆಸ್ಟ್ರೇಲಿಯನ್ ತಂಡದ ಆಯ್ಕೆ ಸಮಿತಿಯ ಸದಸ್ಯನಾಗಿದ್ದ ಜೇಮಿ ಕಾಕ್ಸ್, ವ್ಯಾಟ್ಸನ್ ರನ್ನು ಒಬ್ಬ ಬೌಲಿಂಗ್ ಆಲ್ ರೌಂಡರ್ ಆಗಿ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಅವರ ಪ್ರಕಾರ, ಒಂದು ಇನ್ನಿಂಗ್ಸ್ ನ ಉತ್ತಾರಾರ್ಧದಲ್ಲಿ ಒಬ್ಬ ಬೌಲರ್ ಆಗಿ ಪವರ್ ಹಿಟ್ಟಿಂಗ್ ಗೆ ಅವರನ್ನು ಬಳಸಿಕೊಳ್ಳುವ ಬದಲು ಅವರನ್ನು ಸಾಂಪ್ರದಾಯಿಕ ಬ್ಯಾಟ್ಸ್ ಮನ್ ಹಾಗು ಅರೆಕಾಲಿಕ ಬೌಲರನ್ನಾಗಿ ಪರಿಗಣಿಸುವುದು ತಂಡಕ್ಕೆ ಲಾಭದಾಯಕವಾಗಬಹುದು ಎಂಬ ಅಭಿಪ್ರಾಯ ಹೊಂದಿದ್ದರು.

ವ್ಯಾಟ್ಸನ್ 2006ರ ICC ಚ್ಯಾಂಪಿಯನ್ಸ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ತಂಡದ ಪರ ಒಬ್ಬ ಆರಂಭಿಕ ಬ್ಯಾಟ್ಸ್ ಮನ್ ಆಗಿ, ಸಿಮೊನ್ ಕಟಿಚ್ ರ ಬದಲಿಗೆ ವಿಕೆಟ್ ಕೀಪರ್ ಆಡಂ ಗಿಲ್ಕ್ರಿಸ್ಟ್ ಜೊತೆಗೂಡಿ ಪಂದ್ಯದಲ್ಲಿ ಆಡಿದಾಗ ಈ ಅಭಿಪ್ರಾಯಕ್ಕೆ ಮನ್ನಣೆ ದೊರೆಯಿತು. ಪಂದ್ಯದಲ್ಲಿ ಬೌಲಿಂಗ್ ಹಾಗು ಬ್ಯಾಟಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿದರು, ಜೊತೆಗೆ ಆಸ್ಟ್ರೇಲಿಯಾ ತಂಡವು ಚ್ಯಾಂಪಿಯನ್ಸ್ ಟ್ರೋಫಿಯಲ್ಲಿ ಮೊದಲ ಬಾರಿಗೆ ಜಯ ಗಳಿಸಿತು. ಕ್ರೀಡಾ ವಿಮರ್ಶಕರು ಹಾಗು ನಾಯಕ ರಿಕಿ ಪಾಂಟಿಂಗ್ ಅವರ ಉತ್ತಮ ಸ್ಟ್ರೈಕ್ ರೇಟು, ನೇರ ಹೊಡೆತ ಹಾಗು ಅವರ ಬೌಲಿಂಗ್ ಸಾಮರ್ಥ್ಯದಿಂದಾಗಿ ಕಟಿಚ್ ರ ಬದಲಿಗೆ ಆಯ್ಕೆಯಾಗಲು ಕಾರಣಗಳೆಂದು ಉಲ್ಲೇಖಿಸಿದರು. ವೆಸ್ಟ್ ಇಂಡಿಸ್ ಹಾಗು ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲರಾದ ನಂತರ, ವ್ಯಾಟ್ಸನ್, ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಪರ 50 ರನ್ನುಗಳನ್ನು ಗಳಿಸಿದರು, ಇದರಿಂದಾಗಿ ತಂಡವು ಸೆಮಿ ಫೈನಲ್ಸ್ ಹಂತ ತಲುಪಲು ಯಶಸ್ವಿಯಾಯಿತು. ಜೊತೆಗೆ ದಕ್ಷಿಣ ಆಫ್ರಿಕಾದಲ್ಲಿ ನಡೆದ 2009ರ ಚಾಂಪಿಯನ್ಸ್ ಟ್ರೋಫಿಯಲ್ಲಿ, ವ್ಯಾಟ್ಸನ್ ಮತ್ತೊಮ್ಮೆ ತಂಡದಲ್ಲಿ ಪ್ರಮುಖ ಪಾತ್ರ ವಹಿಸುವುದರ ಜೊತೆಗೆ ಸೆಮಿ ಫೈನಲ್ ಹಾಗು ಫೈನಲ್ ಪಂದ್ಯಗಳಲ್ಲಿ ಇಂಗ್ಲೆಂಡ್ ಹಾಗು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಕ್ರಮವಾಗಿ ಶತಕಗಳನ್ನು ಬಾರಿಸಿದರು. ಇದು ಆಸ್ಟ್ರೇಲಿಯಾ ತಂಡಕ್ಕೆ ತಮ್ಮ ಪಟ್ಟವನ್ನು ಉಳಿಸಿಕೊಳ್ಳುವಲ್ಲಿ ಸಹಾಯವಾಯಿತು.

2006-07ರಲ್ಲಿ ಇಂಗ್ಲೆಂಡ್ ವಿರುದ್ಧದ ಆಶಸ್ ಸರಣಿಯಲ್ಲಿ ವ್ಯಾಟ್ಸನ್ ಆರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಬಹುದೆಂದು ಪಾಂಟಿಂಗ್ ಸೂಚಿಸಿದರು, ಜೊತೆಗೆ ತಂಡಕ್ಕೆ ಇವರನ್ನು ಸೇರ್ಪಡೆಗೊಳಿಸಲಾಯಿತು. ಆದಾಗ್ಯೂ, ಮೊದಲ ಟೆಸ್ಟ್ ಗೆ ಒಂದು ವಾರ ಮುಂಚೆ ಸ್ವದೇಶದಲ್ಲಿ ನಡೆದ ಏಕ ದಿನ ಪಂದ್ಯದಲ್ಲಿ ಮಂಡಿ ಸ್ನಾಯುಗಳ ನಿಷ್ಕ್ರಿಯತೆ ಕಾಣಿಸಿ, ಜೊತೆಗೆ ತಂಡದಿಂದ ಹೊರಬಿದ್ದರು, ಇದರಿಂದಾಗಿ ಅವರು ಮೊದಲ ಮೂರು ಟೆಸ್ಟ್ ಪಂದ್ಯಗಳಲ್ಲಿ ಆಡಲಿಲ್ಲ. ವ್ಯಾಟ್ಸನ್ ರ ಬದಲಿಗೆ ಮೈಕಲ್ ಕ್ಲಾರ್ಕ್ ನ್ನು ತಂಡಕ್ಕೆ ಆಯ್ಕೆ ಮಾಡಲಾಯಿತು, ಜೊತೆಗೆ ಇವರು ಅರ್ಧ-ಶತಕ, ಹಾಗು ಒಂದು ಶತಕವನ್ನು ಬಾರಿಸುವುದರ ಮೂಲಕ ತಂಡದಲ್ಲಿ ಕ್ಲರ್ಕ್ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು.

ವ್ಯಾಟ್ಸನ್ ಬಾಕ್ಸಿಂಗ್ ಡೇ ದಿನ ಹಾಗು ಮೇಲ್ಬಾರ್ನ್ ನ MCGಯಲ್ಲಿ ನಡೆದ ನಾಲ್ಕನೇ ಟೆಸ್ಟ್ ನಲ್ಲಿ ಆಡಲು ಸಮರ್ಥರಾಗಿರುವರೆಂದು ಪರಿಗಣಿಸಲಾಯಿತು, ಅಲ್ಲದೆ ಡೇಮಿಯನ್ ಮಾರ್ಟಿನ್ ರ ಆಕಸ್ಮಿಕ ನಿವೃತ್ತಿ ಘೋಷಣೆಯ ಕಾರಣದಿಂದಾಗಿ, ತಂಡದಲ್ಲಿ ವ್ಯಾಟ್ಸನ್ ರ ಆಯ್ಕೆ ಬಹುತೇಕ ಖಚಿತವಾಯಿತು. ಆದಾಗ್ಯೂ, ಕ್ವೀನ್ಸ್ ಲ್ಯಾಂಡ್ ಪರ ಪಂದ್ಯದಲ್ಲಿ ಉಂಟಾದ ಮತ್ತೊಂದು ಗಾಯವು ಉಳಿದ ಆಶಸ್ ಸರಣಿಯಿಂದ ವ್ಯಾಟ್ಸನ್ ಹೊರಗುಳಿಯುವಂತೆ ಮಾಡಿತು. ಅಂತಿಮವಾಗಿ ವ್ಯಾಟ್ಸನ್ ODI ತಂಡಕ್ಕೆ ಫೆಬ್ರವರಿಯಲ್ಲಿ ಮರಳುವುದರ ಜೊತೆಗೆ, ಕ್ಯಾಮೆರೋನ್ ವೈಟ್ ರ ಸ್ಥಾನ ಆಕ್ರಮಿಸುವುದರ ಜೊತೆಗೆ ಆಲ್ ರೌಂಡರ್ ಸ್ಥಾನವನ್ನು ಗಳಿಸಿಕೊಂಡರು, ಆದಾಗ್ಯೂ, 2007ರ ಕ್ರಿಕೆಟ್ ವರ್ಲ್ಡ್ ಕಪ್ನ ಸಂದರ್ಭದಲ್ಲಿ ಮತ್ತೊಮ್ಮೆ ಗಾಯದಿಂದ ಬಳಲುವುದರ ಜೊತೆಗೆ ಸೂಪರ್ 8ರ ಹಲವು ಪಂದ್ಯಗಳಲ್ಲಿ ಆಡುವುದರಿಂದ ವಂಚಿತರಾದರು. ಇದಕ್ಕೆ ಮುಂಚೆ ಅವರು ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ 32 ಬಾಲ್ ಗಳಲ್ಲಿ 65 ರನ್ ಗಳನ್ನೂ ಗಳಿಸುವುದರೊಂದಿಗೆ ಉತ್ತಮ ಪ್ರದರ್ಶನ ನೀಡಿದ್ದರು. 2007ರ ICC ವರ್ಲ್ಡ್ ಟ್ವೆಂಟಿ20ಮೊದಲ ಪಂದ್ಯಗಳಲ್ಲಿ ಮತ್ತೊಮ್ಮೆ ವ್ಯಾಟ್ಸನ್ ಗಾಯದಿಂದ ಬಳಲುವುದರ ಜೊತೆಗೆ ಮಂಡಿರಜ್ಜಿನ (ಸ್ನಾಯು)ಉಳುಕಿನಿಂದಾಗಿ ಪಂದ್ಯಾವಳಿಯ ಹಲವು ಪಂದ್ಯಗಳನ್ನು ಆಡಲಿಲ್ಲ.

ಅವರು ನಂತರ 2007-08ರ ಆಸ್ಟ್ರೇಲಿಯನ್ ಸರಿಣಿಯಿಂದಲೂ ಹೊರಗುಳಿದರು.

ಶಿಸ್ತಿನ ಉಲ್ಲಂಘನೆಯ ಕಾರಣದಿಂದಾಗಿ ಆಸ್ಟ್ರೇಲಿಯನ್ ತಂಡದಿಂದ ಸೈಮಂಡ್ಸ್ ರನ್ನು ಕೈಬಿಟ್ಟಾಗ, ವ್ಯಾಟ್ಸನ್ 2008ರ ಭಾರತದ ಪ್ರವಾಸದಲ್ಲಿ ಆಲ್ ರೌಂಡರ್ ಸ್ಥಾನವನ್ನು ಗಳಿಸಿಕೊಂಡು ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ದಿಲ್ಲಿಯಲ್ಲಿ ನಡೆದ ಮೂರನೇ ಟೆಸ್ಟ್ ಸಂದರ್ಭದಲ್ಲಿ, ಅವರು ಭಾರತ ತಂಡದ ಆರಂಭಿಕ ಆಟಗಾರ ಗೌತಮ್ ಗಂಭೀರ್ಅವರನ್ನು ಸತತವಾಗಿ ಎದುರಿಸಿದರು. ಇವರು ದ್ವಿಶತಕ ಬಾರಿಸುವುದರ ಜೊತೆಗೆ ವ್ಯಾಟ್ಸನ್ ರ ಬೌಲಿಂಗ್ ನಲ್ಲಿ ಮಿಡ್ ವಿಕೆಟ್ ನಲ್ಲಿ ಸಿಕ್ಸರ್ ಬಾರಿಸುವುದರ ಮೂಲಕ ಶತಕವನ್ನು ಬಾರಿಸಿದರು. ಇನ್ನಿಂಗ್ಸ್ ಅವಧಿಯಲ್ಲಿ, ಗಂಭೀರ್ ರನ್ನಿಗಾಗಿ ಓಡುವಾಗ ವ್ಯಾಟ್ಸನ್ ರನ್ನು ಮೊಣಕೈಯಿಂದ ತಳ್ಳಿದರು, ಜೊತೆಗೆ ಈ ಘಟನೆಯು ಉದ್ದೇಶಪೂರ್ವಕವಾಗಿರಲಿಲ್ಲವೆಂದು ಮಾಧ್ಯಮಕ್ಕೆ ಹೇಳಿಕೆ ನೀಡುವುದರ ಜೊತೆಗೆ ತಮ್ಮನ್ನು ಔಟ್ ಮಾಡುವ ಸಾಮಥ್ಯ ವ್ಯಾಟ್ಸನ್ ರಿಗೆ ಇಲ್ಲವೆಂದು ಘೋಷಿಸುತ್ತಾರೆ. ಇವರು ನಂತರ ತಪ್ಪಿತಸ್ಥರೆಂದು ಪರಿಗಣಿಸಲಾಯಿತು ಜೊತೆಗೆ ಒಂದು ಪಂದ್ಯಕ್ಕೆ ನಿಷೇಧವನ್ನು ಹೇರಲಾಯಿತು.

ಆಸ್ಟ್ರೇಲಿಯಾಕ್ಕೆ ಮರಳಿದ ನಂತರ, ಸೈಮಂಡ್ಸ್ ರನ್ನು ಟೆಸ್ಟ್ ತಂಡಕ್ಕೆ ಮತ್ತೆ ಕರೆಸಿಕೊಳ್ಳಲಾಯಿತು ಜೊತೆಗೆ ಈ ಇಬ್ಬರು ಆಲ್ ರೌಂಡರ್ ಗಳು ಬ್ರಿಸ್ಬೇನ್ ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ಆಡಿದರು. ಹಸಿರಾಗಿದ್ದ ಪಿಚ್, ಮಳೆಯಿಂದ ನೆಲದ ಮೇಲೆ ಉಂಟಾಗಿದ್ದ ತೇವವು ಸೀಮರ್ (ಪುಟಿಯುವ ಬಾಲ್ ಗಳ ಹಾಕುವವರು) ಗಳಿಗೆ ಲಾಭದಾಯಕವೆಂದು ಪರಿಗಣಿಸಲಾಗಿತ್ತು, ಸ್ಪಿನ್ನರ್ ಜೇಸನ್ ಕ್ರೇಜ ಈ ಇಬ್ಬರು ಸೀಮ್ ಬೌಲಿಂಗ್ ಆಲ್ ರೌಂಡರ್ ಗಳಿಗೆ ಹೊಂದಿಕೊಳ್ಳಲು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತು. ಪಂದ್ಯದ ನಂತರ, ಆಸ್ಟ್ರೇಲಿಯಾ ತಂಡವು ಜಯಗಳಿಸಿದ ಪಂದ್ಯದ ನಂತರ, ವ್ಯಾಟ್ಸನ್ ರನ್ನು ತಂಡದಿಂದ ಕೈಬಿಡಲಾಯಿತು ಏಕೆಂದರೆ ಇವರ ಬದಲಿಗೆ ನಥಾನ್ ಹೌರಿಟ್ಜ್ ರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳುವುದರ ಜೊತೆಗೆ ಸೈಮಂಡ್ಸ್ ರನ್ನು ತಾಣದಲ್ಲಿ ಉಳಿಸಿಕೊಲ್ಲಲಾಯಿತು. ಸೈಮಂಡ್ಸ್ ನೀರಸ ಪ್ರದರ್ಶನ ನೀಡುವುದನ್ನು ಮುಂದುವರೆಸಿದರು, ಜೊತೆಗೆ ಅವರ ಬದಲಿಗೆ ವ್ಯಾಟ್ಸನ್ ರನ್ನು ತಂಡಕ್ಕೆ ಸೇರಿಸಿಕೊಳ್ಳುವಂತೆ ಮನವಿಗಳು ಬಂದವು, ಆದರೆ ಇಬ್ಬರು ಆಟಗಾರರು ವರ್ಷಾಂತ್ಯದಲ್ಲಿ ಗಾಯಕ್ಕೆ ತುತ್ತಾದರು, ವ್ಯಾಟ್ಸನ್ ಅಸ್ಥಿಭಂಗಕ್ಕೆ ಒಳಗಾದರು. ವ್ಯಾಟ್ಸನ್, UAEನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ODI ಸರಣಿಯಲ್ಲಿ ಶತಕವನ್ನು ಬಾರಿಸುವುದರೊಂದಿಗೆ ಅಂತಾರಾಷ್ಟ್ರೀಯ ಪಂದ್ಯಕ್ಕೆ ಮತ್ತೆ ಮರಳಿದರು.

ಅವರು 30 ಜುಲೈ 2009ರಲ್ಲಿ ಎಡ್ಗ್ ಬಾಸ್ಟನ್ ನಲ್ಲಿ ನಡೆದ ಮೂರನೇ ಆಶಸ್ ಟೆಸ್ಟ್ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯನ್ ಟೆಸ್ಟ್ ತಂಡದ ಪರ ಆಡಿದರು. ಇವರು ಫಾರಂ ಕಳೆದುಕೊಂಡಿದ್ದ ಆರಂಭಿಕ ಬ್ಯಾಟ್ಸ್ ಮನ್ ಫಿಲಿಪ್ ಹಗ್ಹೆಸ್ ಸ್ಥಾನವನ್ನು ಆಕ್ರಮಿಸಿಕೊಂಡರು. ಮಳೆಯಿಂದ ಅರ್ಧಕ್ಕೆ ನಿಂತ ಪಂದ್ಯದಲ್ಲಿ ಅವರು 62 ಹಾಗು 53 ರನ್ನುಗಳನ್ನು ಸಿಮೊನ್ ಕಟಿಚ್ ರ ಜೊತೆಗೂಡಿ ಕಲೆ ಹಾಕಿದರು.[] ಅವರು ಡಿಸೆಂಬರ್ 2009ರಲ್ಲಿ ಅಡಿಲೈಡ್ ನಲ್ಲಿ ನಡೆದ ಎರಡನೇ ಟೆಸ್ಟ್ ನಲ್ಲಿ ವೆಸ್ಟ್ ಇಂಡಿಸ್ ವಿರುದ್ಧದ ಪಂದ್ಯದಲ್ಲಿ 96 ರನ್ನುಗಳನ್ನು ಗಳಿಸುವುದರ ಜೊತೆಗೆ ತಮ್ಮ ಎರಡನೇ ಅತ್ಯಧಿಕ ಟೆಸ್ಟ್ ಸ್ಕೋರ್ ನ್ನು ಗಳಿಸಿದರು. ಅವರು ಹಾಗು ಕಟಿಚ್ ಸೇರಿ ಜೊತೆಯಾಟದಲ್ಲಿ ಶತಕ ಗಳಿಸುವುದರ ಉದ್ದೇಶ ಗೋಡೆ ಮೇಲಿನ ದೀಪದಂತೆ ಕೊನೆ ಅಂಚಿಗೆ ತಂದು ನಿಲ್ಲಿಸಿತು.ಜೊತೆಗೆ ಶೇನ್ ವ್ಯಾಟ್ಸನ್ 96 ರನ್ನುಗಳಿಗೆ ಔಟಾದರು, ಶತಕವನ್ನು ಬಾರಿಸುವ ಪ್ರಯತ್ನದಲ್ಲಿ ಮರು ದಿವಸ ಬೆಳಿಗ್ಗೆ ಎದುರಿಸಿದ ಮೊದಲ ಬಾಲಿನಲ್ಲೇ ಔಟಾದರು.ಶತಕಕ್ಕಾಗಿ ಮುಂಜಾನೆಯ ಬೌಂಡರಿ ಹೊಡೆತಕ್ಕಾಗಿ ಕಾಯಬೇಕಾಗಿತ್ತು. ಮೂರನೇ ಟೆಸ್ಟ್ ನಲ್ಲಿ, ಕಟಿಚ್ ರ ಜೊತೆಗೂಡಿ ಮತ್ತೊಂದು ಶತಕ ಬಾರಿಸುವುದರ ಜೊತೆಗೆ ವೈಯಕ್ತಿಕ 89 ರನ್ನುಗಳನ್ನು ಗಳಿಸಿದರು. ಎರಡನೇ ಇನ್ನಿಂಗ್ಸ್ ನಲ್ಲಿ, ಎದುರಾಳಿ ತಂಡದ ನಾಯಕ ಕ್ರಿಸ್ ಗೇಯ್ಲ್ ರನ್ನು ಔಟು ಮಾಡುವುದರ ಜೊತೆಗೆ ಅವರ ಸಮ್ಮುಖದಲ್ಲಿ ನೇರವಾಗಿ ಔಟು ಮಾಡಿದಕ್ಕೆ ಸಂತಸದೊಂದಿಗೆ ಕಿರುಚಿದರು. ಇದರ ಪರಿಣಾಮವಾಗಿ ಮ್ಯಾಚ್ ರೆಫರಿ ಇವರ ಮೇಲೆ ದಂಡವನ್ನು ಹೇರಿದರು, ಜೊತೆಗೆ ಆಸ್ಟ್ರೇಲಿಯಾದ ಜನತೆಯಿಂದ ಗಮನಾರ್ಹವಾದ ಟೀಕೆಗೆ ಒಳಗಾದರು.

ಪಾಕಿಸ್ತಾನದ ವಿರುದ್ಧದ ಮೊದಲ ಟೆಸ್ಟ್ ನಲ್ಲಿ, ಬಾಕ್ಸಿಂಗ್ ದಿನದಂದು(ಯುರೊಪಿನ ಹಲವೆಡೆ ಸಾರ್ವತ್ರಿಕ ರಜೆ ದಿನ ಡಿಸೆಂಬರ್ 26) 93 ರನ್ನುಗಳನ್ನು ಗಳಿಸುವುದರ ಜೊತೆಗೆ ಕಟಿಚ್ ಜೊತೆಗೂಡಿ ಹಲವು ಪಂದ್ಯಗಳಲ್ಲಿ ಮೂರು ಶತಕಗಳನ್ನು ಬಾರಿಸಿದರು, ಆದರೆ ಕಟಿಚ್ ಜೊತೆಗೆ ಉಂಟಾದ ಗಲಿಬಿಲಿಯಲ್ಲಿ ರನ್ ಔಟ್ ಆದರು. ಇದರಲ್ಲಿ ಇಬ್ಬರು ಆಟಗಾರರು ಒಂದೇ ಬದಿಗೆ ಓಡಿದಾಗ ವ್ಯಾಟ್ಸನ್ ಔಟಾದರು. ಪರಿಣಾಮವಾಗಿ ತಮ್ಮ ಚೊಚ್ಚಲ ಟೆಸ್ಟ್ ಶತಕದಿಂದ ವಂಚಿತರಾದರು. ನಾಲ್ಕನೇ ದಿನದಂದು, ವ್ಯಾಟ್ಸನ್ ಅಂತಿಮವಾಗಿ ತಮ್ಮ ಮೊದಲ ಟೆಸ್ಟ್ ಶತಕ ಗಳಿಸಿದರು. ಮಧ್ಯಾಹ್ನದ ವಿರಾಮದ ಹೊತ್ತಿಗೆ ಔಟಾಗದೆ 98 ರನ್ನುಗಳನ್ನು ಗಳಿಸಿದರು ಜೊತೆಗೆ ವಿರಾಮದ ಅವಧಿಯನ್ನು ಒಳಗೊಂಡಂತೆ 106 ನಿಮಿಷಗಳಲ್ಲಿ 90 ರನ್ ಗಳಲ್ಲೇ ಉಳಿದಿದ್ದರು. ವಿರಾಮದ ನಂತರ 99 ರನ್ನುಗಳನ್ನು ಗಳಿಸುವಲ್ಲಿ ಸಫಲರಾದರು, ಜೊತೆಗೆ ಅಷ್ಟೇ ರನ್ನುಗಳನ್ನು ಗಳಿಸುವಲ್ಲಿ ಸಮರ್ಥರಾದ ಇವರು ಕೇವಲ ಡಾಟ್ ಬಾಲ್ ಗಳನ್ನು ಎದುರಿಸಿದರು. ತಮ್ಮ ಚೊಚ್ಚಲ ಶತಕವನ್ನು ಒಂದು ಕುತೂಹಲಕಾರಿ ಶೈಲಿಯಲ್ಲಿ ಗಳಿಸಿದರು, ಅಬ್ದುರ್ ರೌಫ್ ರೆಡೆಗೆ ಜೋರಾಗಿ ಬೀಸಿದ ಬಾಲನ್ನು ಕ್ಯಾಚ್ ಹಿಡಿಯುವಾಗ ಅಬ್ದುರ್ ಕೆಳಕ್ಕೆ ಹಾಕಿದರು. ಬಾಲ್ ಕೈಯಿಂದ ಜಾರಿ ಹೋಯಿತು ಜೊತೆಗೆ ಇದರಿಂದಾಗಿ ವ್ಯಾಟ್ಸನ್ ರಿಗೆ ಶತಕಕ್ಕೆ ಬೇಕಾಗಿದ್ದ ಒಂದು ರನ್ನನ್ನು ಓಡಿ ಗಳಿಸುವಲ್ಲಿ ಸಾಕಷ್ಟು ಸಮಯ ದೊರೆತಂತಾಯಿತು. ಅವರು 293 ನಿಮಿಷಗಳಲ್ಲಿ ಎದುರಿಸಿದ 183 ಬಾಲ್ ಗಳಲ್ಲಿ ಒಂಬತ್ತು ಬೌಂಡರಿ ಗಳು ಹಾಗು ಒಂದು ಸಿಕ್ಸರಿನೊಂದಿಗೆ ಶತಕದ ಭಾಜನರಾದರು. ನಾಯಕ ಪಾಂಟಿಂಗ್ ಡಿಕ್ಲೇರ್ ಮಾಡಿಕೊಂಡಾಗ, ಅವರು ನಾಟ್ ಔಟ್ ಆಗಿ ಉಳಿದು, 120 ರನ್ನುಗಳನ್ನು ಗಳಿಸಿದರು. ಆಸ್ಟ್ರೇಲಿಯಾ ಟೆಸ್ಟ್ ನಲ್ಲಿ ಜಯಗಳಿಸಲು ಕಾರಣರಾದ ವ್ಯಾಟ್ಸನ್ ರಿಗೆ ಡಿಸೆಂಬರ್ 30ರಂದು ಪಂದ್ಯ ಪುರುಷೋತ್ತಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.

CGಯ ಎರಡನೇ ಟೆಸ್ಟ್ ನ ಎರಡನೇ ಇನ್ನಿಂಗ್ಸ್ ನಲ್ಲಿ, ವ್ಯಾಟ್ಸನ್ ಮತ್ತೊಂದು ಶತಕದಿಂದ ವಂಚಿತರಾದರಲ್ಲದೆ 97 ರನ್ನುಗಳಿಗೆ ಔಟಾದರು. ಟೆಸ್ಟ್ ಪಂದ್ಯಾವಳಿಯ ಸಂದರ್ಭದಲ್ಲಿ, ಆಸ್ಟ್ರೇಲಿಯನ್ ಕ್ರಿಕೆಟ್ ಟೀಮ್ ಅಸೋಸಿಯೇಶನ್, ವ್ಯಾಟ್ಸನ್ ರಿಗೆ ಆಸ್ಟ್ರೇಲಿಯಾದ ವರ್ಷದ ಕ್ರಿಕೆಟಿಗ ಎಂಬ ಪ್ರಶಸ್ತಿ ನೀಡಿ ಗೌರವಿಸಿತು.[]

ಟೆಸ್ಟ್ ಶತಕಗಳು

[ಬದಲಾಯಿಸಿ]
ಶೇನ್ ವ್ಯಾಟ್ಸನ್ ರ ಟೆಸ್ಟ್ ಪಂದ್ಯಾವಳಿಯ ಶತಕಗಳು
ರನ್ನುಗಳು ಪಂದ್ಯ ವಿರುದ್ಧ ನಗರ/ರಾಷ್ಟ್ರ ಸ್ಥಳ ವರ್ಷ
1 120* 6  ಪಾಕಿಸ್ತಾನ ಮೆಲ್ಬಾರ್ನ್, ಆಸ್ಟ್ರೇಲಿಯಾ ಮೆಲ್ಬಾರ್ನ್ ಕ್ರಿಕೆಟ್ ಗ್ರೌಂಡ್ 2009

2010ರ ಅಲನ್ ಬಾರ್ಡರ್ ಪದಕಪ್ರಧಾನ ಸಮಾರಂಭದ ರಾತ್ರಿ, ವರ್ಷದ ಏಕದಿನ ಪಂದ್ಯದ ವಿಜೇತ ಪ್ರಶಸ್ತಿಯನ್ನು ಗಳಿಸಿದರು, ವರ್ಷದ ಟೆಸ್ಟ್ ಪಂದ್ಯಾವಳಿಯ ಆಟಗಾರನಾಗಿ ಎರಡನೇ ಸ್ಥಾನವನ್ನು ಗಳಿಸುವುದರ ಜೊತೆಗೆ ಅಲನ್ ಬಾರ್ಡರ್ ಪದಕವನ್ನು ತಮ್ಮದಾಗಿಸಿಕೊಂಡರು.

ಇಂಡಿಯನ್ ಪ್ರೀಮಿಯರ್ ಲೀಗ್

[ಬದಲಾಯಿಸಿ]

ವ್ಯಾಟ್ಸನ್ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಾರೆ. US $125000 ಹಣಕ್ಕೆ ಒಪ್ಪಂದ ಮಾಡಿಕೊಂಡು, ಬ್ಯಾಟಿಂಗ್ ಹಾಗು ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿ, ನಾಲ್ಕು ಅರ್ಧ ಶತಕಗಳೊಂದಿಗೆ ತಮ್ಮ ತಂಡವನ್ನು ಮೂರು ಪಂದ್ಯಗಳಲ್ಲಿ ಗೆಲ್ಲುವಂತೆ ಮಾಡಿದರು. ಅವರು 17 ವಿಕೆಟ್ ಗಳನ್ನೂ ಸಹ ಗಳಿಸಿದರು, ತಮ್ಮ ಮೊದಲ ಹನ್ನೆರಡು ಪಂದ್ಯಗಳಲ್ಲಿ ನಾಲ್ಕು ಬಾರಿ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಗಳಿಸುವುದರ ಜೊತೆಗೆ ಸರಣಿ ಪುರುಷೋತ್ತಮ ಪ್ರಶಸ್ತಿಯನ್ನೂ ಸಹ ಗಳಿಸಿದರು.[]

ಅವರ IPL ಪ್ರದರ್ಶನದ ನಂತರ, ಆಸ್ಟ್ರೇಲಿಯಾ ಪರ ವೆಸ್ಟ್ ಇಂಡಿಸ್ ಪ್ರವಾಸ ಕ್ಕೆ ವ್ಯಾಟ್ಸನ್ ರನ್ನು ಮ್ಯಾಥ್ಯೂ ಹೇಡನ್ ರ ಬದಲಿಗೆ ಆಯ್ಕೆ ಮಾಡಲಾಯಿತು, ಮ್ಯಾಥ್ಯೂ ಹೇಡನ್ IPL ಸರಣಿಯ ಅವಧಿಯಲ್ಲಿ ಗಾಯಗೊಂಡಿದ್ದರು.[] ಈ ಸರಣಿಯಲ್ಲಿ ವ್ಯಾಟ್ಸನ್ ODIನ ಒಬ್ಬ ಆರಂಭಿಕ ಬ್ಯಾಟ್ಸ್ ಮನ್ ಆಗಿ ಸ್ಥಾಪಿತಗೊಂಡರು.

ವ್ಯಾಟ್ಸನ್, ರಾಷ್ಟ್ರದೆಡೆಗಿನ ತಮ್ಮ ಕರ್ತವ್ಯ ಹಾಗು ಗಾಯದ ಕಾರಣದಿಂದಾಗಿ IPLನ ಎರಡನೇ ಸರಣಿಯಲ್ಲಿ ಆಡುವುದರಿಂದ ವಂಚಿತಗೊಂಡರು, ಅಲ್ಲದೇ ರಾಜಸ್ಥಾನ್ ರಾಯಲ್ಸ್ ತಂಡವು ಅರ್ಹತಾ ಸುತ್ತಿನ ಪಂದ್ಯದಲ್ಲಿ ಅಗ್ರ ನಾಲ್ಕನೇ ಸ್ಥಾನವನ್ನು ಗಳಿಸುವಲ್ಲಿ ವಿಫಲವಾಯಿತು.

ಆಕರಗಳು

[ಬದಲಾಯಿಸಿ]
  1. Casamento, Jo. "Sport's golden couple tie knot in unassuming style". Sydney Morning Herald. Retrieved 2010-05-30.
  2. "The return of the sizzling 3 mobile Men of Cricket calendar!". Woman's Day. Archived from the original on 2010-02-22. Retrieved 2009-12-30.
  3. "Scorecard: England v Australia, 3rd Test at Edgbaston, 30 July–3 August 2009". Cricinfo. Retrieved 2009-08-01.
  4. ವ್ಯಾಟ್ಸನ್ ರನ್ನು ಆಸ್ಟ್ರೇಲಿಯಾದ ಅತ್ಯುತ್ತಮ ಆಟಗಾರನೆಂದು ಮಾಧ್ಯಮಗಳು ವರದಿ ಮಾಡಿವೆ, ದಿ ರೋರ್, 11 ಜನವರಿ 2010ರಲ್ಲಿ ಮರುಸಂಪಾದಿಸಲಾಗಿದೆ
  5. Sangakkara, Kumar. "Five Finds". Cricinfo Magazine. Crincinfo. Retrieved 2009-07-27.
  6. "Watson called to fill Hayden's one-day shoes". Cricinfo. Retrieved 2009-07-27.


ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಟೆಂಪ್ಲೇಟು:NSW Blues Cricket Team