ಶೇಖ್ ಮುಜೀಬುರ್ ರಹಮಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶೇಖ್ ಮುಜೀಬುರ್ ರಹಮಾನ್
শেখ মুজিবুর রহমান

ಬಾಂಗ್ಲಾದೇಶದ ಅಧ್ಯಕ್ಷ
ಅಧಿಕಾರ ಅವಧಿ
೧೧ ಎಪ್ರಿಲ್ ೧೯೭೧ – ೧೨ ಜನವರಿ ೧೯೭೨
ಪ್ರಧಾನ ಮಂತ್ರಿ ತಾಜುದ್ದೀನ್ ಆಹಮ್ಮದ್
ಪೂರ್ವಾಧಿಕಾರಿ ಹುದ್ದೆಯ ಸ್ಥಾಪನೆ
ಉತ್ತರಾಧಿಕಾರಿ ಸಯ್ಯದ್ ನಜರುಲ್ ಇಸ್ಲಾಂ (ಹಂಗಾಮಿ)
ಅಧಿಕಾರ ಅವಧಿ
25 ಜನವರಿ 1975 – 15 ಆಗಸ್ಟ್ 1975
ಪ್ರಧಾನ ಮಂತ್ರಿ ಮುಹಮ್ಮದ್ ಮನ್ಸೂರ್ ಅಲಿ
ಪೂರ್ವಾಧಿಕಾರಿ ಮೊಹಮ್ಮದ್ ಮೊಹಮ್ಮದುಲ್ಲಾ
ಉತ್ತರಾಧಿಕಾರಿ ಖೊಂಡಕೇರ್ ಮುಷ್ತಾಖ್ ಅಹಮದ್

ಬಾಂಗ್ಲಾದೇಶದ ಪ್ರಧಾನಮಂತ್ರಿ
ಅಧಿಕಾರ ಅವಧಿ
12 ಜನವರಿ 1972 – 24 ಜನವರಿ 1975
ರಾಷ್ಟ್ರಪತಿ ಅಬು ಸಯೀದ್ ಚೌಧರಿ
ಮೊಹಮ್ಮದ್ ಮೊಹಮ್ಮದುಲ್ಲಾ
ಪೂರ್ವಾಧಿಕಾರಿ ತಾಜುದ್ದೀನ್ ಅಹಮದ್
ಉತ್ತರಾಧಿಕಾರಿ ಮುಹಮ್ಮದ್ ಮನ್ಸೂರ್ ಅಲಿ
ವೈಯಕ್ತಿಕ ಮಾಹಿತಿ
ಜನನ (೧೯೨೦-೦೩-೧೭)೧೭ ಮಾರ್ಚ್ ೧೯೨೦
ತುಂಗಿಪಾರಾ, ಬ್ರಿಟಿಷ್ ಭಾರತ (ಇಂದಿನ ಬಾಂಗ್ಲಾದೇಶ)
ಮರಣ August 15, 1975(1975-08-15) (aged 55)
ಢಾಕಾ, ಬಾಂಗ್ಲಾದೇಶ
ರಾಷ್ಟ್ರೀಯತೆ British Indian (1920-1947)
ಪಾಕಿಸ್ತಾನ (1947-1971)
Bangladeshi (1971-1975 death)
ರಾಜಕೀಯ ಪಕ್ಷ Bangladesh Krishak Sramik Awami League (1975)
ಇತರೆ ರಾಜಕೀಯ
ಸಂಲಗ್ನತೆಗಳು
All-India Muslim League (Before 1949)
Awami League (1949–1975)
ಅಭ್ಯಸಿಸಿದ ವಿದ್ಯಾಪೀಠ Maulana Azad College
University of Dhaka
ಧರ್ಮ ಇಸ್ಲಾಂ

ಶೇಖ್ ಮುಜೀಬುರ್ ರಹಮಾನ್ (ಮಾರ್ಚ್ ೧೭,೧೯೨೦ –ಆಗಸ್ಟ್ ೧೫,೧೯೭೫) ಬಾಂಗ್ಲಾದೇಶ ದ ಸ್ಥಾಪಕ ಮತ್ತು ಪ್ರಥಮಪ್ರಧಾನ ಮಂತ್ರಿ ಮತ್ತು ಅಧ್ಯಕ್ಷ.

ಷೇಕರು 1920ರಲ್ಲಿ ಢಾಕಾನಗರಕ್ಕೆ ನೈಋತ್ಯದಲ್ಲಿ 97 ಕಿಮೀ ದೂರವಿರುವ ತುಂಗಿಪಾರಾ ಎಂಬಲ್ಲಿ ಜನಿಸಿದರು. ಕಲ್ಕತ್ತದ ಇಸ್ಲಾಮಿಯಾ ಕಾಲೇಜಿನಲ್ಲಿ ಪದವೀಧರರಾಗಿ ಮುಂದೆ ಸ್ವಲ್ಪಕಾಲ ಢಾಕಾವಿಶ್ವವಿದ್ಯಾಲದಲ್ಲಿ ನ್ಯಾಯಶಾಸ್ತ್ರ ಅಭ್ಯಾಸಮಾಡಿದರು. ಪೂರ್ವಪಾಕಿಸ್ತಾನವೆಂದು 1947ರಲ್ಲಿ ರೂಪುಗೊಂಡ ಈ ಪ್ರದೇಶಕ್ಕೆ ಸ್ವಾಯತ್ತತೆಬೇಕೆಂದು ಮುಜೀಬುರ್ ರಹಮಾನರ ಮುಂದಾಳತ್ವದ ಅವಾಮಿ ಲೀಗ್ ಹೋರಾಟ ಪ್ರಾರಂಭಿಸಿತು. 1970ರಲ್ಲಿ ಈ ಚಳವಳಿ ತೀವ್ರವಾಗಿ ಷೇಕರು ಪಶ್ಚಿಮ ಪಾಕಿಸ್ತಾನದ ನಾಯಕರೊಡನೆ ಮಾತುಕತೆಗೆ ಹೋದಾಗ ಅಲ್ಲಿ ಅವರನ್ನು ಬಂಧನದಲ್ಲಿ ಇಡಲಾಯಿತು. 1971 ರಲ್ಲಿ ಈ ಚಳವಳಿ ಉಗ್ರವಾಗಿ ಪಶ್ಚಿಮ ಮತ್ತು ಪೂರ್ವಪಾಕಿಸ್ತಾನಗಳ ನಡುವೆ ಯುದ್ಧನಡೆದು ಭಾರತದ ಉದಾರ ಸಹಾಯದಿಂದ ಪೂರ್ವ ಪಾಕಿಸ್ತಾನ ಸ್ವತಂತ್ರವಾಗಿ 1971ರ ಡಿಸೆಂಬರ್ 16ರಂದು ಬಾಂಗ್ಲಾದೇಶದ ಉದಯವಾಯಿತು. ಬಿಡುಗಡೆಯಾಗಿ ಬಂದ ರೆಹಮಾನರು 1972, ಜನವರಿಯಲ್ಲಿ ಪ್ರಥಮ ಪ್ರಧಾನ ಮಂತ್ರಿಯಾದರು. 1975ರಲ್ಲಿ ಅಧ್ಯಕ್ಷೀಯ ಮಾದರಿಯ ಸರ್ಕಾರದ ಸಂವಿಧಾನವನ್ನು ಜಾರಿಗೆ ತಂದು 1975. ಜನವರಿ 26ರಂದು ಪೇಕರು ತಾವೇ ಅಧ್ಯಕ್ಷರಾದರು. ಇವರ ಅಧ್ಯಕ್ಷತೆಯ ಬಾಂಗ್ಲಾದೇಶ ಕೃಷಿಕ್ ಶ್ರಮಿಕ ಅವಾಮಿಲೀಗ್ ಪಕ್ಷವನ್ನು ಬಿಟ್ಟು ಉಳಿದೆಲ್ಲ ರಾಜಕೀಯ ಪಕ್ಷಗಳನ್ನು ಬಹಿಷ್ಕರಿಸಲಾಯಿತು. ಅದರೆ 1975 ಆಗಸ್ಟ್ 15ರಂದು ಸೇನಾಕ್ರಾಂತಿ ನಡೆದು ಬಾಂಗ್ಲಾದೇಶದ ಅಧ್ಯಕ್ಷ ಷೇಕ್ ಮುಜೀಬುರ್ ರಹಮಾನ್ ಮತ್ತು ಅವರ ಕುಟುಂಬದ ಕೆಲವರನ್ನೂ ಒಳಗೊಂಡು ಜೊತೆಗೆ ಪ್ರಧಾನಿ ಮೊಹಮದ್ ಮನ್ಸೂರ್ ಸಮೇತ ಎಲ್ಲರನ್ನೂ ಕೊಲೆಮಾಡಲಾಯಿತು. ಷೇಕರು ಸಮರ್ಥ ರಾಜಕೀಯ ಮುತ್ಸದ್ಧಿಯಾಗಿ ಬಾಂಗ್ಲಾದೇಶವನ್ನು ಅಸ್ತಿತ್ವಕ್ಕೆ ತಂದು ಅದರ ಅಭಿವೃದ್ಧಿಗೆ ಕಾರಣರಾದರು. ವಿಶ್ವಸಂಸ್ಥೆಯಲ್ಲಿ 1974 ಸೆಪ್ಟೆಂಬರ್ 17 ರಂದು ಸದಸ್ಯತ್ವ ಪಡೆಯುವ ಮೂಲಕ ಬಾಂಗ್ಲಾದೇಶಕ್ಕೆ ಗೌರವಗಳಿಸಿಕೊಟ್ಟರು.

ಹೊರಗಿನ ಕೊಂಡಿಗಳು[ಬದಲಾಯಿಸಿ]