ಶಿವಮೊಗ್ಗ ಸುಬ್ಬಣ್ಣ
ಶಿವಮೊಗ್ಗ ಸುಬ್ಬಣ್ಣ - ಕನ್ನಡದ ಸುಗಮ ಸಂಗೀತ ಕ್ಷೇತ್ರದ ಹಿರಿಯ ಗಾಯಕರಲ್ಲಿ ಒಬ್ಬರಾಗಿದ್ದಾರೆ.ಸುಬ್ಬಣ್ಣ ಅವರ ನಿಜ ನಾಮಧೇಯ "ಜಿ.ಸುಬ್ರಹ್ಮಣ್ಯಂ "..
ಬಾಲ್ಯ
[ಬದಲಾಯಿಸಿ]ಶ್ರೀ ಗಣೇಶ್ ರಾವ್ ಹಾಗೂ ರಂಗನಾಯಕಮ್ಮನವರ ಪುತ್ರನಾಗಿ, ಶಿವಮೊಗ್ಗ ಜಿಲ್ಲೆಯ ನಗರ ಗ್ರಾಮದಲ್ಲಿ ೧೯೩೮ರಲ್ಲಿ ಜನಿಸಿದ ಸುಬ್ಬಣ್ಣ, ಮನೆಯಲ್ಲಿ ಪ್ರತಿದಿನ ಪೂಜೆ, ಪುರಸ್ಕಾರ, ವೇದ ಮಂತ್ರಗಳ ಝೇಂಕಾರ ಕೇಳಿ ಬೆಳೆದವರು. ಇವರ ತಾತ ಶಾಮಣ್ಣನವರು ಸಂಗೀತದಲ್ಲಿ ಘನ ವಿದ್ವಾಂಸರು.
ಕುಟುಂಬ
[ಬದಲಾಯಿಸಿ]ಪುತ್ರ ಶ್ರೀರಂಗ, ಸೊಸೆ ಅರ್ಚನಾ_ಉಡುಪ
ವೃತ್ತಿ
[ಬದಲಾಯಿಸಿ]ತಮ್ಮ ತಾತ ಶಾಮಣ್ಣ ಅವರ ಬಳಿಯಲ್ಲಿಯೇ ತಮ್ಮ ಪ್ರಾಥಮಿಕ ಸಂಗೀತಾಭ್ಯಾಸ ಕಲಿತ ಸುಬ್ಬಣ್ಣ, ಕರ್ನಾಟಕದ ಕೋಗಿಲೆ ಬಿ.ಕೆ. ಸುಮಿತ್ರಾ ಜೊತೆ ಸೇರಿ ಕೆಲವು ವರ್ಷಗಳ ಕಾಲ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿದರು. ನಂತರ ತಮ್ಮ ವ್ಯಾಸಂಗದ ಕಡೆ ಗಮನ ಹರಿಸಿದ ಸುಬ್ಬಣ್ಣ ಬಿ.ಎ.,ಬಿ.ಕಾಂ.,ಎಲ್.ಎಲ್.ಬಿ.,ಪದವೀದರರು.ವಕೀಲರಾಗಿ ವೃತ್ತಿ ಬದುಕು ಆರಂಭಿಸಿದರು.
ಇವರು ಬಳಿಕ ನೋಟರಿಯಾಗಿ ನೇಮಕಗೊಂಡರು. ಸಮಯ ದೊರೆತಾಗ, ಸಾಂಸ್ಕೃತಿಕ ವೇದಿಕೆಗಳಲ್ಲಿ ಹಾಡುವುದನ್ನೂ ಮುಂದುವರೆಸಿದರು.
ಸುಬ್ಬಣ್ಣ ೧೯೬೩ರಲ್ಲಿ ಆಕಾಶವಾಣಿಯ ಗಾಯಕರಾಗಿ ಆಯ್ಕೆಯಾದರು. ಚಂದ್ರಶೇಖರ ಕಂಬಾರರ ‘ಕರಿಮಾಯಿ’ ಮೂಲಕ.
೧೯೭೮ರಲ್ಲಿ ಕಾಡು_ಕುದುರೆ ಚಿತ್ರದ 'ಕಾಡುಕುದುರೆ ಓಡಿ ಬಂದಿತ್ತಾ' ಹಾಡಿಗಾಗಿ ಅತ್ಯುತ್ತಮ ಹಿನ್ನೆಲೆ ಗಾಯಕ- ರಜತ ಕಮಲ ರಾಷ್ಟ್ರಪ್ರಶಸ್ತಿ ಪಡೆದರು.
ಆಕಾಶವಾಣಿ ಎಂ.ಎಸ್.ಐ.ಎಲ್. ಪ್ರಾಯೋಜಕತ್ವದಲ್ಲಿ ಪ್ರಸಾರ ಮಾಡಿದ ಜನಪ್ರಿಯ ಕಾರ‍್ಯಕ್ರಮದಲ್ಲಿ ‘ಕೋಡಗನ ಕೋಳಿ ನುಂಗಿತ್ತಾ..’, ‘ಅಳಬೇಡಾ ತಂಗಿ ಅಳಬೇಡ...’ ‘ಬಿದ್ದೀಯಬ್ಬೇ ಮುದುಕಿ..’ ಮೊದಲಾದ ಶಿಶುನಾಳ ಷರೀಫರ ಗೀತೆಗಳನ್ನು ಹಾಡಿದ ಸುಬ್ಬಣ್ಣ ಮನೆ ಮಾತಾದರು.
ಸಮ್ಮಾನ
[ಬದಲಾಯಿಸಿ]- ರಜತ ಕಮಲ, ಅತ್ಯುತ್ತಮ ಹಿನ್ನೆಲೆ ಗಾಯಕ, ೧೯೭೮[೧] [೨]
- ಸಂತ ಶಿಶುನಾಳ ಶರೀಫ್ ಪ್ರಶಸ್ತಿ
- ರಾಜ್ಯೋತ್ಸವ ಪ್ರಶಸ್ತಿ
- ನಾಡೋಜ, ಹಂಪಿ ಕನ್ನಡ ವಿಶ್ವವಿದ್ಯಾಲಯ [೩] [೪]
- ಕರ್ನಾಟಕ ಸಂಗೀತ ಅಕಾಡಮಿಯ ಕರ್ನಾಟಕ ಕಲಾ ತಿಲಕ ಪ್ರಶಸ್ತಿ
ನಿಧನ
[ಬದಲಾಯಿಸಿ]ಸುಬ್ಬಣ್ಣ [೫] ಬೆಂಗಳೂರಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ೨೦೨೨ರ ಆಗಸ್ಟ್ ೧೧ರಂದು ಕೊನೆಯುಸಿರೆಳೆದರು. [೬]
ಉಲ್ಲೇಖಗಳು
[ಬದಲಾಯಿಸಿ]- ↑
- ↑ http://dff.nic.in/images/Documents/91_26thNfacatalogue.pdf
- ↑ http://www.kannadauniversity.org/kannada/wp-content/uploads/2022/06/Nadoja%20Award%20List%202022.pdf
- ↑ https://web.archive.org/web/20121105080150/http://www.hindu.com/2008/02/24/stories/2008022452350300.htm
- ↑ [೧]
- ↑ https://web.archive.org/web/20220814202537/https://hindustannewshub.com/india-news/national-award-winning-kannada-singer-shivamogga-subbanna-dies-of-heart-attack/