ಶಾಹಿ ಪನೀರ್
ಗೋಚರ
ಶಾಹಿ ಪನೀರ್ ಭಾರತೀಯ ಉಪಖಂಡಕ್ಕೆ ಸ್ಥಳೀಯವಾದ ಪನೀರ್‌ನ ಒಂದು ತಯಾರಿಕೆಯಾಗಿದೆ. ಇದು ಕೆನೆ, ಟೊಮೇಟೊಗಳು ಮತ್ತು ಭಾರತೀಯ ಸಂಬಾರ ಪದಾರ್ಥಗಳ ಗಟ್ಟಿಯಾದ ಗ್ರೇವಿಯನ್ನು ಹೊಂದಿರುತ್ತದೆ.[೧]
ಮುಘಲಾಯ್ ಪಾಕಶೈಲಿಯ (ಹಾಗಾಗಿ "ಶಾಹಿ" ಎಂಬ ಪದ ಬಂದಿದೆ, ಮುಘಲ್ ಭಾರತದಲ್ಲಿನ ಅರಸರ ಬಿರುದಾದ ಶೆಹೆನ್‍ಶಾಹ್‍ವನ್ನು ಸೂಚಿಸುತ್ತದೆ) ಕೆನೆಯುಳ್ಳ ಖಾದ್ಯಗಳೊಂದಿಗೆ ಹುಟ್ಟಿಕೊಂಡ ಈ ಖಾದ್ಯವನ್ನು ಟೊಮೇಟೊಗಳು, ಈರುಳ್ಳಿ, ರುಬ್ಬಿದ ಗೋಡಂಬಿ, ತುಪ್ಪ ಮತ್ತು ಕೆನೆಯನ್ನು ಕರಿ ಆಗಿ ಎಮಲ್ಸೀಕರಿಸಿ ತಯಾರಿಸಲಾಗುತ್ತದೆ. ಜೊತೆಗೆ ಪನೀರ್ ಚೌಕಗಳು ಮತ್ತು ವಿವಿಧ ಸಂಬಾರ ಪದಾರ್ಥಗಳನ್ನು ಸೇರಿಸಲಾಗುತ್ತದೆ.[೨]
ಇದನ್ನು ಮುಖ್ಯವಾಗಿ ರೋಟಿ ಅಥವಾ ನಾನ್‍ನಂತಹ ಸಾಂಪ್ರದಾಯಿಕ ಭಾರತೀಯ ಚಪ್ಪಟೆ ಬ್ರೆಡ್‍ಗಳು, ಅನ್ನ ಮತ್ತು ಬ್ರೆಡ್‍ನೊಂದಿಗೆ ತಿನ್ನಲಾಗುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ "Shahi Paneer: The taste of North India". Archived from the original on 2020-11-28. Retrieved 2020-07-04.
- ↑ "Shahi Paneer Recipe".