ಶಾಹಿ ಪನೀರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶಾಹಿ ಪನೀರ್ (ಎಡಕ್ಕೆ) ಮತ್ತು ಬಟರ್ ನಾನ್ (ಬಲಭಾಗದಲ್ಲಿ)

ಶಾಹಿ ಪನೀರ್ ಭಾರತೀಯ ಉಪಖಂಡಕ್ಕೆ ಸ್ಥಳೀಯವಾದ ಪನೀರ್‌ನ ಒಂದು ತಯಾರಿಕೆಯಾಗಿದೆ. ಇದು ಕೆನೆ, ಟೊಮೇಟೊಗಳು ಮತ್ತು ಭಾರತೀಯ ಸಂಬಾರ ಪದಾರ್ಥಗಳ ಗಟ್ಟಿಯಾದ ಗ್ರೇವಿಯನ್ನು ಹೊಂದಿರುತ್ತದೆ.[೧]

ಮುಘಲಾಯ್ ಪಾಕಶೈಲಿಯ (ಹಾಗಾಗಿ "ಶಾಹಿ" ಎಂಬ ಪದ ಬಂದಿದೆ, ಮುಘಲ್ ಭಾರತದಲ್ಲಿನ ಅರಸರ ಬಿರುದಾದ ಶೆಹೆನ್‍ಶಾಹ್‍ವನ್ನು ಸೂಚಿಸುತ್ತದೆ) ಕೆನೆಯುಳ್ಳ ಖಾದ್ಯಗಳೊಂದಿಗೆ ಹುಟ್ಟಿಕೊಂಡ ಈ ಖಾದ್ಯವನ್ನು ಟೊಮೇಟೊಗಳು, ಈರುಳ್ಳಿ, ರುಬ್ಬಿದ ಗೋಡಂಬಿ, ತುಪ್ಪ ಮತ್ತು ಕೆನೆಯನ್ನು ಕರಿ ಆಗಿ ಎಮಲ್ಸೀಕರಿಸಿ ತಯಾರಿಸಲಾಗುತ್ತದೆ. ಜೊತೆಗೆ ಪನೀರ್ ಚೌಕಗಳು ಮತ್ತು ವಿವಿಧ ಸಂಬಾರ ಪದಾರ್ಥಗಳನ್ನು ಸೇರಿಸಲಾಗುತ್ತದೆ.[೨]

ಇದನ್ನು ಮುಖ್ಯವಾಗಿ ರೋಟಿ ಅಥವಾ ನಾನ್‍ನಂತಹ ಸಾಂಪ್ರದಾಯಿಕ ಭಾರತೀಯ ಚಪ್ಪಟೆ ಬ್ರೆಡ್‍ಗಳು, ಅನ್ನ ಮತ್ತು ಬ್ರೆಡ್‍ನೊಂದಿಗೆ ತಿನ್ನಲಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. "Shahi Paneer: The taste of North India". Archived from the original on 2020-11-28. Retrieved 2020-07-04.
  2. "Shahi Paneer Recipe".[ಶಾಶ್ವತವಾಗಿ ಮಡಿದ ಕೊಂಡಿ]