ಶಾಹಿದ್ ಕಪೂರ್

ವಿಕಿಪೀಡಿಯ ಇಂದ
Jump to navigation Jump to search
ಶಾಹಿದ್ ಕಪೂರ್
An upper body shot of Shahid Kapoor, looking away from the camera
ಶಾಹಿದ್ ಕಪೂರ್
ಜನನ (1981-02-25) 25 February 1981 (age 38)[೧]
Other namesಶಾಹಿದ್ ಕಪೂರ್
ಶಾಹಿದ್ ಕಟ್ಟಾರ್
ವೃತ್ತಿನಟ
Years active2003 ರಿಂದ
ಸಂಗಾತಿ(ಗಳು)ಮೀರಾ ರಾಜ್ಪುತ್ (m. 2015)
ಮಕ್ಕಳು
Parent(s)ಪಂಕಜ್ ಕಪೂರ್
ನಿಲೀಮ ಆಜೀಮ್
Relativesಕಪೂರ್ ಕುಟುಂಬ ಇಶಾನ್ ಕಟ್ಟರ್ [೨]
ಪ್ರಶಸ್ತಿಗಳುಪ್ರಶಸ್ತಿ ಪಟ್ಟಿ

ಶಾಹಿದ್ ಕಪೂರ್ ಒಬ್ಬ ಹಿಂದಿ ಚಲನಚಿತ್ರ ನಟ. ಅವರು ೨೫ ಫೆಬ್ರವರಿ ೧೯೮೧ ರಂದು ಜನಿಸಿದರು.[೩] ಅತ್ಯಂತ ಆಕರ್ಷಕ ಹಾಗೂ ಖ್ಯಾತ ವ್ಯಕ್ತಿಗಳಲ್ಲಿ ಒಬ್ಬರೆಂದು ಮಾಧ್ಯಮದಲ್ಲಿ ಉಲ್ಲೇಖಿಸಲ್ಪಟ್ಟಿರುವ ಇವರು ಏರಿಳಿತದ ವೃತ್ತಿಜೀವನದ ಹೊರತಾಗಿಯೂ ತನ್ನ ಜನಪ್ರಿಯತೆಯನ್ನು ನಿರ್ವಹಿಸಿದ್ದಾರೆ. ಪ್ರಣಯ ಪಾತ್ರಗಳಲ್ಲಿ ಅಭಿನಯಿಸಲು ಆರಂಭದಲ್ಲಿ ಗುರುತಿಸಲ್ಪಟ್ಟ ಇವರು ನಂತರ ಸಾಹಸಮಯ ಚಿತ್ರಗಳಲ್ಲಿ ಅಭಿನಯಿಸಲು ಪ್ರಾರಂಬಿಸಿದರು. ಅವರು ಮೂರು ಫಿಲ್ಮ್ಫೇರ್ ಪ್ರಶಸ್ತಿಗಳನ್ನು ಒಳಗೊಂಡಂತೆ ಇತರ ಹಲವಾರು ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ.

ನಟರಾದ ಪಂಕಜ್ ಕಪೂರ್ ಮತ್ತು ನೀಲಿಮಾ ಆಜೀಮ್ ಅವರ ಮಗ, ಶಾಹಿದ್ ಕಪೂರ್ ನವದೆಹಲಿಯಲ್ಲಿ ಜನಿಸಿದರು. ಅವರು ಮೂರು ವರ್ಷದವನಾಗಿದ್ದಾಗ ಅವರ ಹೆತ್ತವರು ಬೇರ್ಪಟ್ಟರು.[೪] ಹೀಗೆ ಅವರು ತನ್ನ ತಾಯಿಯ ಮಡಿಲಿಗೆ ಸೇರಿದರು. 10 ವರ್ಷದವರಾಗಿದ್ದಾಗ ಅವರು ಮುಂಬೈಗೆ ತೆರಳಿದರು, ಅಲ್ಲಿ ಅವರು ಶಿಮಾಕ್ ರವರ ನೃತ್ಯ ಅಕಾಡೆಮಿಯಲ್ಲಿ ಸೇರಿದರು.[೫] ಕಪೂರ್ 1990 ರ ಹಲವು ಚಲನಚಿತ್ರಗಳಲ್ಲಿ ಹಿನ್ನಲೆ ನೃತ್ಯಗಾರನಾಗಿ ಕಾಣಿಸಿಕೊಂಡರು ಮತ್ತು ನಂತರ ಸಂಗೀತ ವೀಡಿಯೊಗಳು ಮತ್ತು ದೂರದರ್ಶನ ಜಾಹೀರಾತುಗಳಲ್ಲಿ ಕಾಣಿಸಿಕೊಂಡರು. ಅವರು 2003 ರಲ್ಲಿ ಪ್ರಣಯ ಹಾಸ್ಯ ಚಿತ್ರ ಇಷ್ಕ್ ವಿಷ್ಕ್ನಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದರು.[೬] ಈ ಚಿತ್ರಕ್ಕೆ ಫಿಲ್ಮ್ಫೇರ್ ಅತ್ಯುತ್ತಮ ಪುರುಷ ನಟ ಪ್ರಶಸ್ತಿಯನ್ನು ಗೆದ್ದರು. ಸೂರಜ್ ಬರ್ಜಾತ್ಯ ಅವರ ಅತಿ ಹೆಚ್ಚು ಆದಾಯಗಳಿಸಿದ ವಿವಾಹ್ (2006) ನಲ್ಲಿ ನಟಿಸಿದ ಮೊದಲು ಅನೇಕ ವಾಣಿಜ್ಯ ವೈಫಲ್ಯ ಕಂಡ ಚಲನಚಿತ್ರದಲ್ಲಿ ನಟಿಸಿದರು.

ಇಮ್ತಿಯಾಜ್ ಅಲಿಯವರ ರೊಮ್ಯಾಂಟಿಕ್ ಕಾಮಿಡಿ ಸಿನೆಮ ಜಾಬ್ ವಿ ಮೆಟ್ (2007) ಮತ್ತು ವಿಶಾಲ್ ಭಾರ್ದ್ವಾಜ್ ಅವರ ಕಮಿನಿ (2009) ಚಿತ್ರಕ್ಕೆ ಶಾಹಿದ್ ಕಪೂರ್ ರವರ ಅತ್ಯುತ್ತಮ ನಟನೆಗಾಗಿ ಫಿಲ್ಮ್ಫೇರ್ ಪ್ರಶಸ್ತಿಗೆ ನಾಮನಿರ್ದೇಶನಗಳನ್ನು ಪಡೆದರು. ತದನಂತರ ಅವರು ವಾಣಿಜ್ಯಿಕವಾಗಿ ಯಶಸ್ವಿಯಾದ ಆಕ್ಷನ್ ಚಿತ್ರ ಆರ್. ರಾಜ್ ಕುಮಾರ್ (2013) ಚಿತ್ರದಲ್ಲಿ ನಟಿಸಿದರು. ಭರದ್ವಾಜ್ರರವರ ಹೈದರ್ (2014)[೭] ಚಿತ್ರದಲ್ಲಿ ಹ್ಯಾಮ್ಲೆಟ್ ಪಾತ್ರಕ್ಕೆ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದರು ಹಾಗೂ ಮಾದಕ ವ್ಯಸನಿಯಾಗಿ ನಟಿಸಿದ ಉಡ್ತಾ ಪಂಜಾಬ್ (2016) ಚಿತ್ರದಲ್ಲಿ ಅದ್ಬುತ ಪಾತ್ರ ನಿಭಾಯಿಸಿದರು.[೮]ಹೈದರ್ ಚಿತ್ರಕ್ಕೆ ಅತ್ಯುತ್ತಮ ನಟನಿಗಾಗಿ ಫಿಲ್ಮ್ಫೇರ್ ಪ್ರಶಸ್ತಿಯನ್ನು ಹಾಗೂ ಉಡ್ತಾ ಪಂಜಾಬ್ ಚಿತ್ರದಲ್ಲಿ ಅತ್ಯುತ್ತಮ ನಟನಿಗಾಗಿ ಫಿಲ್ಮ್ಫೇರ್ ಕ್ರಿಟಿಕ್ಸ್ ಪ್ರಶಸ್ತಿಯನ್ನು ಪಡೆದರು.[೯] ಅವರು ೨೦೧೮ರಲ್ಲಿ ಪದ್ಮಾವತ್ ಚಲನಚಿತ್ರದಲ್ಲಿ ನಟಿಸಿ ಅತ್ಯಾಧಿಕ ಗಳಿಕೆಯನ್ನು ಗಳಿಸಿದರು. ಇದರಲ್ಲಿ ಅವರು ರಾವಲ್ ರತನ್ ಸಿಂಗ್ ಪಾತ್ರವಹಿಸಿದರು.[೧೦]

ಆರಂಭಿಕ ಜೀವನ[ಬದಲಾಯಿಸಿ]

ಶಾಹಿದ್ ಕಪೂರ್ ೨೫ ಫೆಬ್ರವರಿ ೧೯೮೧ರಲ್ಲಿ ನವದೆಹಲಿಯಲ್ಲಿ ನಟ ಪಂಕಜ್ ಕಪೂರ್ ಹಾಗೂ ನಟಿ-ನೃತ್ಯಗಾರ್ತಿ ನಿಲಿಮ ಆಜ್ಮಿ ಅವರಿಗೆ ಜನಿಸಿದರು. ಕಪೂರ್ ದೆಹಲಿಯ ಜ್ಞಾನಭಾರತಿ ಶಾಲೆ ಮತ್ತು ಮುಂಬೈನಲ್ಲಿ ರಾಜಹನ್ಸ್ ವಿದ್ಯಾಲಯದಲ್ಲಿ ಶಿಕ್ಷಣ ಪಡೆದರು.[೧೧] ನಂತರ ಮುಂಬೈಯ ಮಿಥಿಬಾಯ್ ಕಾಲೇಜಿನಲ್ಲಿ ಮೂರು ವರ್ಷಗಳ ಕಾಲ ಶಿಕ್ಷಣ ಪಡೆದರು.[೧೨]

ವೈಯಕ್ತಿಕ ಜೀವನ[ಬದಲಾಯಿಸಿ]

ಜುಲೈ ೭, ೨೦೧೫ ರಂದು ತನ್ನಕ್ಕಿಂತ ೧೩ ವರ್ಷ ಚಿಕ್ಕವಳಾದ ಮೀರಾ ರಾಜ್ಪುತ್ ರವರನ್ನು ಮದುವೆಯಾದರು.[೧೩] ೨೬ ಆಗಸ್ಟ್ ೨೦೧೬ ರಲ್ಲಿ ಮಿಶ ಎಂಬ ಮಗಳು ಹುಟ್ಟಿದಳು.

ಪುರಸ್ಕಾರಗಳು[ಬದಲಾಯಿಸಿ]

ಶಾಹಿದ್ ಕಪೂರ್ ಮೂರು ಫಿಲ್ಮ್ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ.

 • ಅತ್ಯುತ್ತಮ ಪಾದಾರ್ಪಣಾ ನಟ - ಇಷ್ಕ್ ವಿಷ್ಕ್ನ(೨೦೦೩)[೧೪]
 • ಅತ್ಯುತ್ತಮ ನಟ - ಹೈದರ್(೨೦೧೪)[೧೫]
 • ಅತ್ಯುತ್ತಮ ನಟನಿಗಾಗಿ ಫಿಲ್ಮ್ಫೇರ್ ಕ್ರಿಟಿಕ್ಸ್ ಪ್ರಶಸ್ತಿ - ಉಡ್ತಾ ಪಂಜಾಬ್(೨೦೧೬)[೧೬]

ಜಬ್ ವಿ ಮೆಟ್(2007), ಕಮಿನಿ(2009) ಮತ್ತು ಉತಾ ಪಂಜಾಬ್(2016) ಚಲನಚಿತ್ರಕ್ಕೆ ಇವರು ಅತ್ಯುತ್ತಮ ನಟ ಪ್ರಶಸ್ತಿಗೆ ಮೂರು ಸಲ ನಾಮನಿರ್ದೇಶನವನ್ನು ಪಡೆದಿದ್ದಾರೆ.[೧೭]

ಉಲ್ಲೇಖಗಳು[ಬದಲಾಯಿಸಿ]

 1. http://movies.ndtv.com/photos/happy-birthday-shahid-kapoor-simply-shaandaar-35-21544#photo-273077
 2. https://timesofindia.indiatimes.com/entertainment/bollywood/news-interviews/Ishaans-not-a-KapurRajesh-Khattar/articleshow/2581560.cms?referral=PM
 3. http://movies.ndtv.com/photos/happy-birthday-shahid-kapoor-simply-shaandaar-35-21544#photo-273077
 4. https://m.dailyhunt.in/news/india/english/bollywoodshaadis-epaper-bshadi/2+marriages+1+divorce+and+yet+together+they+form+a+happy+family+pankaj+kapur+s+marriage+story-newsid-79394082
 5. https://www.hindustantimes.com/entertainment/come-dance-with-me-shahid-kapoor/story-szO1PIkaVIECXXtULdvD2J.html
 6. http://www.tribuneindia.com/2003/20030518/spectrum/main5.htm
 7. http://timesofindia.indiatimes.com/entertainment/hindi/bollywood/news/60th-Britannia-Filmfare-Awards-2014-Complete-list-of-winners/articleshow/46080277.cms
 8. https://timesofindia.indiatimes.com/entertainment/hindi/bollywood/news/62nd-filmfare-awards-2017-winners-list/articleshow/56541241.cms
 9. http://timesofindia.indiatimes.com/entertainment/hindi/bollywood/news/60th-Britannia-Filmfare-Awards-2014-Complete-list-of-winners/articleshow/46080277.cms
 10. https://timesofindia.indiatimes.com/entertainment/hindi/bollywood/photo-features/bollywood-celebs-and-their-interesting-statements/Padmaavat-Shahid-Kapoor-says-he-would-have-played-Ranveer-Singhs-Khilji-differently/photostory/62751746.cms
 11. http://www.tribuneindia.com/2003/20030518/spectrum/main5.htm
 12. http://www.rediff.com/movies/slide-show/slide-show-1-just-how-educated-are-bollywood-stars/20120112.htm#7
 13. http://indianexpress.com/article/entertainment/bollywood/shahid-kapoor-ties-the-knot-with-mira-rajput/
 14. https://www.thenational.ae/arts-culture/trophy-time-at-filmfare-awards-1.116741
 15. http://timesofindia.indiatimes.com/entertainment/hindi/bollywood/news/60th-Britannia-Filmfare-Awards-2014-Complete-list-of-winners/articleshow/46080277.cms
 16. https://timesofindia.indiatimes.com/entertainment/hindi/bollywood/news/62nd-filmfare-awards-2017-winners-list/articleshow/56541241.cms
 17. https://www.filmfare.com/news/nominations-for-the-62nd-jio-filmfare-awards-17987.html