ಶಾಂಘೈ ವಿಮಾನಯಾನ
ಶಾಂಘೈ ವಿಮಾನಯಾನ ಶಾಂಗೈ, ಚೀನಾ ಸಂಸ್ಥೆಯ ಕೇಂದ್ರ ಕಾರ್ಯಾಲಯವನ್ನು ಹೊಂದಿರುವ ಒಂದು ಚೀನಾ ವಿಮಾನಯಾನ ಸಂಸ್ತೆ ಆಗಿದೆ. ಇದು ಚೀನಾ ಈಸ್ಟರ್ನ್ ಏರ್ಲೈನ್ಸ್ನ ಒಂದು ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ಆಗಿದೆ, ಆದರೆ ತನ್ನ ಕಾರ್ಯಾಚರಣೆಗಳನ್ನು ತನ್ನ ವಿಶಿಷ್ಟವಾದ ಬ್ರ್ಯಾಂಡ್ ಮತ್ತು ವಿಶಿಷ್ಟ ಸೇವೆಯನ್ನು ಉಳಿಸಿಕೊಳ್ಳುವುದರಲ್ಲಿ ಇದು ವಿಲೀನದ ನಂತರವು ಪ್ರತ್ಯೇಕವಾಗಿ ಉಳಿಯುತ್ತದೆ.
ಷಾಂಘೈ ಏರ್ಲೈನ್ಸ್ ದೇಶೀಯ ಮತ್ತು ಅಂತಾರಾಷ್ಟ್ರೀಯ ಸೇವೆಯನ್ನು ಒದಗಿಸುತ್ತದೆ. ಇದರ ಲೋಗೋ ಒಂದು ಕೆಂಪು ಉದ್ದದ ರೆಖೆಯ ಮೇಲೆ ಮೇಲೆ ಬಿಳಿ ಹಾರುತ್ತಿರುವ ಬಾತುಕೋಳಿ ಆಗಿದೆ. ಇದರ ಬೇಸ್ ಶಾಂಘೈ ಪುದೊಂಗ್ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಶಾಂಘೈ ಹೊನ್ಗ್ಕಿಅಒ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇವೆ.
ವಿಮಾನಯಾನ ಅದರ ಮಾತೃ ಸಂಸ್ಥೆ ಚೀನಾ ಈಸ್ಟರ್ನ್ ಏರ್ಲೈನ್ಸ್ ಜೊತೆ ಸ್ಕೈ ಟೀಮ್ ವಿಮಾನಯಾನ ಸಂಸ್ಥೆಗಳ ಮೈತ್ರಿಕೂಟದ ಅಂಗ ಸದಸ್ಯತ್ವ ಪಡೆದಿದೆ. [೧]
ಇತಿಹಾಸ ಮತ್ತು ಅಭಿವೃದ್ಧಿ
[ಬದಲಾಯಿಸಿ]ಷಾಂಘೈ ಏರ್ಲೈನ್ಸ್ 1985 ರಲ್ಲಿ ಸ್ಥಾಪಿಸಲಾಯಿತು ಇದು ಶಾಂಘಾಯ್ ನಗರ ಸರ್ಕಾರವು ಮತ್ತು ಶಾಂಘೈ ಸ್ಥಳೀಯ ಉದ್ಯಮಗಳು ಹಣ ಬಹುಆಯಾಮದ ಹೂಡಿಕೆಯ ಚೀನಾದ ಮೊದಲ ವಾಣಿಜ್ಯ ವಿಮಾನಯಾನ ಸಂಸ್ಥೆಯಾಗಿದೆ. ವಿಮಾನಯಾನ ಆರಂಭದಲ್ಲಿ ದೇಶೀಯ ವಿಮಾನಗಳನ್ನು ಮಾತ್ರ ಸೀಮಿತವಾಗಿಸಿಕೊಂಡಿತ್ತು. ಆದರೆ 1997 ರಿಂದ ಅಂತಾರಾಷ್ಟ್ರೀಯ ಸೇವೆಗಳ ಕಾರ್ಯಾಚರಣೆ ಆರಂಭವಾಯಿತು. [೨]
2002 ರ ಅಂತ್ಯದಲ್ಲಿ, ಷಾಂಘೈ ಏರ್ಲೈನ್ಸ್ ವಿಮಾನಯಾನ ಶಾಂಘೈ ಷೇರು ವಿನಿಮಯ ಮಾರುಕಟ್ಟೆಯಲ್ಲಿ, ಪಟ್ಟಿ ಮಾಡಲ್ಪಟ್ಟಿತು. ಇದನ್ನು ವಿಮಾನ ಸಂಸ್ಥೆಯು ಯಶಸ್ವಿಯಾಗಿ ಅದರ ವಿಸ್ತರಣೆಯ ಇಂಧನವಾಗಿ ಬಳಸಿಕೊಂಡು 2006 ರಲ್ಲಿ ಏರ್ಲೈನ್ ಸರಕು ಸಾಗಾಣೆಯ ಅಂಗಸಂಸ್ಥೆಯನ್ನು ಸ್ಥಾಪಿಸಲಾಯಿತು. [೩]
ಡಿಸೆಂಬರ್ 12, 2007 ರಂದು, ಷಾಂಘೈ ಏರ್ಲೈನ್ಸ್ ಅಧಿಕೃತವಾಗಿ ಸ್ಟಾರ್ ಅಲಯನ್ಸ್ ನ 19ನೆ ಸದಸ್ಯರಾಗಿ ಸ್ವಾಗತಿಸಿದರು ಮತ್ತು ಇದು ಶಾಂಘೈ ಮಾರುಕಟ್ಟೆಯಲ್ಲಿ ಮೈತ್ರಿ ಉಪಸ್ಥಿತಿ ಭದ್ರಪಡಿಸಿತು . ಜೂನ್ 11, 2009 ರಂದು, ಷಾಂಘೈ ಏರ್ಲೈನ್ಸ್ ಜೊತೆ ಚೀನಾ ಈಸ್ಟರ್ನ್ ಏರ್ಲೈನ್ಸ್ ವಿಲೀನವಾಗುತ್ತದೆ ಎಂದು ಪ್ರಕಟಿಸಲಾಯಿತು. ಎರಡು ವಿಮಾನಯಾನ ಸಂಸ್ಥೆಗಳ ವಿಲೀನದಿಂದ ಎರಡು ಶಾಂಘೈ ಮೂಲದ ವಿಮಾನಯಾನದ ನಡುವೆ ಹೆಚ್ಚುವರಿ ಸ್ಪರ್ಧೆಯನ್ನು ಕಡಿಮೆ ಮಾಡುವುದಾಗಿತ್ತು, ಮತ್ತು ಅವುಗಳನ್ನು ದೇಶೀಯ ಪ್ರತಿಸ್ಪರ್ಧಿ ಏರ್ ಚೀನಾ ಮತ್ತು ಚೀನಾ ಸದರ್ನ್ ಏರ್ಲೈನ್ಸ್ ಜೊತೆ ಹೆಚ್ಚು ಪರಿಣಾಮಕಾರಿಯಾಗಿ ಸ್ಪರ್ಧಿಸಲು ನಿರೀಕ್ಷಿಸಲಾಗಿತ್ತು. ಇದು ಶಾಂಘಾಯ್ ಸ್ಥಾನಮಾನವನ್ನು ಅಂತಾರಾಷ್ಟ್ರೀಯ ವಿಮಾನಯಾನ ಕೇಂದ್ರವಾಗಿ ಕ್ರೋಢೀಕರಿಸುವುದು ಸಹ ಧ್ಯೇಯವಾಗಿತ್ತು. [೪]
ಫೆಬ್ರವರಿ 2010 ರಲ್ಲಿ, ವಿಲೀನ ಪೂರ್ಣಗೊಂಡಿತು. ಷಾಂಘೈ ಏರ್ಲೈನ್ಸ್ ಶಾಂಘಾಯ್ ಸ್ಟಾಕ್ ಎಕ್ಸ್ಚೇಂಜ್ ಪಟ್ಟಿಯಿಂದ ಮತ್ತು ಚೀನಾ ಈಸ್ಟರ್ನ್ ಏರ್ಲೈನ್ಸ್ ನ ಒಂದು ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ಆಯಿತು. ಹೊಸ ಸಂಯೋಜಿತ ವಿಮಾನಯಾನ ಶಾಂಘೈ ಮಾರುಕಟ್ಟೆ ಪಾಲನ್ನು ಅರ್ಧದಷ್ಟು ಎಂದು ನಿರೀಕ್ಷಿಸಲಾಗಿದೆ.[೫]
ಚೀನಾ ಈಸ್ಟರ್ನ್ ಏರ್ಲೈನ್ಸ್ ವಿಲೀನ ಪರಿಣಾಮವಾಗಿ, ಶಾಂಘೈ ಏರ್ಲೈನ್ಸ್ ತನ್ನ ಸದಸ್ಯತ್ವ ಅಂತ್ಯಗೊಳಿಸಲು ಸ್ಟಾರ್ ಅಲೈಯನ್ಸ್ ಜೊತೆ ಒಪ್ಪಂದ ಮಾಡಿಕೊಂಡಿತು. 1 ನವೆಂಬರ್ 2010 ರಂದು ಏರ್ಲೈನ್ ಅಧಿಕೃತವಾಗಿ ಸ್ಟಾರ್ ಅಲೈಯನ್ಸ್ ಬಿಟ್ಟು ತನ್ನ ಮಾತೃ ಸಂಸ್ಥೆ ಸ್ಕೈ ಟೀಮ್ ಸೇರಲು ಇಚ್ಛೆಯನ್ನು ಪ್ರಕಟಿಸಿತು.[೬]
ಕಾರ್ಪೊರೇಟ್ ವ್ಯವಹಾರಗಳು
[ಬದಲಾಯಿಸಿ]ವಿಲೀನದ ಮೊದಲು ಇದು ಜಿನ್ಗ್ಯನ್ ಜಿಲ್ಲೆಯಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿತ್ತು .
ಗಮ್ಯಸ್ಥಾನಗಳು
[ಬದಲಾಯಿಸಿ]ಷಾಂಘೈ ಏರ್ಲೈನ್ಸ್ ಕಂಪೆನಿಯು ತನ್ನ ಮೂಲ ಸಂಸ್ಥೆ ಚೀನಾ ಈಸ್ಟರ್ನ್ ಏರ್ಲೈನ್ಸ್ ಜೊತೆ ಗಣನೀಯ ದೇಶೀಯ ಜಾಲವನ್ನು ಹಂಚಿಕೊಂಡ ಒಂದು ಒಪ್ಪೊಂದವನ್ನು ಹೊಂದಿದೆ. ವಿಮಾನಯಾನ 60 ಕ್ಕೂ ಹೆಚ್ಚು ಚೀನಾ ಪ್ರಧಾನ ಭೂಮಿ ಮತ್ತು ವಿದೇಶಗಳಲ್ಲಿ ದೊಡ್ಡ ಮತ್ತು ಮಧ್ಯಮ ಗಾತ್ರದ ನಗರಗಳಿಗೆ ಪ್ರವೇಶವನ್ನು ನೀಡುತ್ತದೆ, 140 ಕ್ಕೂ ದೇಶೀಯ ಮತ್ತು ಅಂತಾರಾಷ್ಟ್ರೀಯ ಸ್ಥಳಗಳಿಗೆ ಸೇವೆಸಲ್ಲಿಸುತ್ತದೆ. ಇದರ ಅಂತಾರಾಷ್ಟ್ರೀಯ ವಿಮಾನಗಳ ಗಮನ ಹಾಂಕಾಂಗ್, ಮಕಾವು, ತೈವಾನ್, ಜಪಾನ್, ದಕ್ಷಿಣ ಕೊರಿಯಾ, ಸಿಂಗಾಪುರ್ ಮತ್ತು ಥೈಲ್ಯಾಂಡ್ ಮೇಲೆ ಇದೆ.ಷಾಂಘೈ ಏರ್ಲೈನ್ಸ್ ಶಾಂಘೈ ನಿಂದ ಮೆಲ್ಬೋರ್ನ್ ಏರ್ಪೋರ್ಟ್, ಆಸ್ಟ್ರೇಲಿಯಗೂ ಸಹ ಸೇವೆಗಳನ್ನು ಚೀನಾ ಪೂರ್ವ ಏರ್ಲೈನ್ಸ್ ಪರವಾಗಿ ತನ್ನ ಸ್ವಂತ ವಿಮಾನ ಮತ್ತು ಸಿಬ್ಬಂದಿ ಬಳಸಿಕೊಂಡು ಕಾರ್ಯನಿರ್ವಹಿಸುತ್ತದೆ.
ಸಂಕೇತ ಹಂಚಿಕೆಯ ಒಪ್ಪಂದಗಳು
[ಬದಲಾಯಿಸಿ]ಶಾಂಘೈ ಏರ್ಲೈನ್ಸ್ ಸ್ಕೈ ಟೀಮ್ ಸದಸ್ಯತ್ವದ ಜೊತೆಗೆ ಈ ಮುಂದಿನ ಏರ್ಲೈನ್ಸ್ಗಳ ಜೊತೆ ಸಂಕೇತ ಹಂಚಿಕೆಯ ಒಪ್ಪಂದಗಳನ್ನು ಹೊಂದಿದೆ:
[ಬದಲಾಯಿಸಿ]- ಚೀನಾ ಯುನೈಟೆಡ್ ಏರ್ಲೈನ್ಸ್
- ಕೋರಿಯನ್ ಏರ್ (ಸ್ಕೈ ಟೀಮ್)
- ಸಿಚುವಾನ್ ಏರ್ಲೈನ್ಸ್
ಘಟನೆಗಳು ಮತ್ತು ಅಪಘಾತಗಳು
[ಬದಲಾಯಿಸಿ]ಶಾಂಘೈ ಏರ್ಲೈನ್ಸ್ ಕಂಪೆನಿಯು ತನ್ನ ಚೆನ್ನಾಗಿ ಗುರುತಿಸಬಹುದಾದ ವಿಮಾನದ ಕಾರ್ಯಾಚರಣೆ ಗುಣಮಟ್ಟ ಖಾತ್ರಿ ವಿಧಾನ (FOQA) ಕಾರ್ಯಕ್ರಮದ ಕೊಡುಗೆ ಇಂದ ಶೂನ್ಯ ಅಪಘಾತಗಳು, ಸಾವು ಅಥವಾ ತನ್ನ ವಿಮಾನದ ಹಾನಿ ಇತಿಹಾಸದಲ್ಲೇ ಇಲ್ಲದಂತಾಗಿಸಿದೆ, ಮತ್ತು ಇದರ ಫಲವಾಗಿ ಶಾಂಘೈ ಏರ್ಲೈನ್ಸ್ ಏಷ್ಯಾದ ಅತ್ಯಂತ ಸುರಕ್ಷಿತ ವಿಮಾನಯಾನ ಎಂಬ ಹೆಸರನ್ನು ಉಂಟುಮಾಡಿದೆ.
ಉಲ್ಲೇಖಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "Shanghai Airlines to leave Star Alliance; China Southern expects improved profits: China Share Wrap". centreforaviation. Archived from the original on ಆಗಸ್ಟ್ 14, 2011. Retrieved Aug 22, 2016.
- ↑ "History Of Shanghai Air Airlines". cleartrip.com. Archived from the original on ಜುಲೈ 22, 2015. Retrieved Aug 22, 2016.
- ↑ "About Shanghai Air". shanghai-air.com. Archived from the original on ಜುಲೈ 5, 2010. Retrieved Aug 22, 2016.
- ↑ "China Eastern Airlines announces detailed merger plan with Shanghai Airlines_English_Xinhua". Retrieved Aug 22, 2016.
- ↑ Reed Business Information Limited. "Shanghai Airlines to delist from stock exchange". Retrieved Aug 22, 2016.
{{cite web}}
:|author=
has generic name (help) - ↑ "Shanghai to end Star Alliance membership". Retrieved Aug 22, 2016.