ಶಶಿ ದೇಶಪಾಂಡೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಶಿ ದೇಶಪಾಂಡೆ ಖ್ಯಾತ ಭಾರತೀಯ ಆಂಗ್ಲಭಾಷಾ ಲೇಖಕರು. ಇವರು ಕನ್ನಡದ ಸುಪ್ರಸಿದ್ಧ ಸಾಹಿತಿ ಹಾಗು ನಾಟಕಕಾರರಾದ ಶ್ರೀರಂಗರ ಎರಡನೆಯ ಮಗಳು. ಇವರು ಹುಟ್ಟಿದ್ದು ಧಾರವಾಡದಲ್ಲಿ. ವಿದ್ಯಾಭ್ಯಾಸ ಧಾರವಾಡ, ಮುಂಬಯಿ ಹಾಗು ಬೆಂಗಳೂರುಗಳಲ್ಲಿ ನಡೆಯಿತು.[೧][೨]

ಶಿಕ್ಷಣ[ಬದಲಾಯಿಸಿ]

ಶಶಿ ದೇಶಪಾಂಡೆಯವರು ಅರ್ಥಶಾಸ್ತ್ರ ಹಾಗೂ ಕಾನೂನಿನಲ್ಲಿ ಪದವಿ ಪಡೆದಿದ್ದಾರೆ. ಕಾನೂನು ಪರೀಕ್ಷೆಯಲ್ಲಿ ಅವರಿಗೆ ಸುವರ್ಣಪದಕ ಲಭಿಸಿದೆ. ತಮ್ಮ ಮದುವೆಯ ನಂತರ, ಮುಂಬಯಿಯಲ್ಲಿ ವಾಸಿಸುತ್ತಿದ್ದಾಗ ಅವರು ಭಾರತೀಯ ವಿದ್ಯಾಭವನದಲ್ಲಿ ಪತ್ರಿಕೋದ್ಯಮದಲ್ಲಿ ಕೋರ್ಸ್ ಮಾಡಿದರು ಹಾಗು “ Onlooker ” ಎನ್ನುವ ಆಂಗ್ಲ ನಿಯತಕಾಲಿಕದಲ್ಲಿ ಪತ್ರಿಕೋದ್ಯಮಿಯಾಗಿ ಕೆಲಸ ಮಾಡಿದರು.ಶಶಿ ದೇಶ್ಪಾಂಡ್ ಈಗ ಬೆಂಗಳೂರಿನಲ್ಲಿ ತನ್ನ ರೋಗಶಾಸ್ತ್ರಜ್ಞ ಪತಿಯೊಂದಿಗೆ ವಾಸಿಸುತ್ತಿದ್ದಾನೆ ಇಂಗ್ಲಿಷ್ನಲ್ಲಿ ಅತ್ಯಂತ ಸಮಕಾಲೀನ ಭಾರತೀಯ ಮಹಿಳಾ ಬರಹಗಾರರಲ್ಲಿ ಒಬ್ಬರೆಂದು ಅವರು ಪರಿಗಣಿಸಲ್ಪಟ್ಟಿದ್ದಾಳೆ.ಅವರ ಕಾದಂಬರಿಗಳೆಂದರೆ ದಿ ಡಾರ್ಕ್ ಹೋಲ್ಡ್ಸ್ ನೋ ಟೆರೋರ್ಸ್ (1980); ಇಫ್ ಐ ಡೈ ಟುಡೇ,; ಕಮ್ ಅಪ್ ಅಂಡ್ ಬಿ ಡೆಡ್ (1983); ರೂಟ್ಸ್ ಮತ್ತು ಷಾಡೋಸ್ (1986); ಅದು ದೀರ್ಘ ಸೈಲೆನ್ಸ್ (1987); ದಿ ಬೈಂಡಿಂಗ್ ವೈನ್ (1993); ಎ ಮ್ಯಾಟರ್ ಆಫ್ ಟೈಮ್ (1996) ಮತ್ತು ಸ್ಮಾಲ್ ರೆಮಿಡೀಸ್ (2000). ಶಶಿ ದೇಶ್ಪಾಂಡೆ ನಾಲ್ಕು ಸಂಪುಟಗಳ ಸಣ್ಣ ಕಥೆಗಳನ್ನು ಬರೆದಿದ್ದಾರೆ, ಅಂದರೆ, ದಿ ಲೆಗಸಿ(1978); ದ ಮಿರಾಕಲ್ (1986); ಇದು ಡಾರ್ಕ್ (1986), ಮತ್ತು ಇದು ನೈಟ್ಟೇಲ್ (1986), ಮತ್ತು ಮಕ್ಕಳಿಗೆ ಪುಸ್ತಕಗಳು.[೩]

ಸಾಹಿತ್ಯರಚನೆ[ಬದಲಾಯಿಸಿ]

ಅವರು 1978 ರಲ್ಲಿ ತಮ್ಮ ಕಿರು ಸಂಗ್ರಹಗಳ ಮೊದಲ ಸಂಗ್ರಹವನ್ನು ಪ್ರಕಟಿಸಿದರು ಮತ್ತು 1980 ರಲ್ಲಿ ಅವರ ಮೊದಲ ಕಾದಂಬರಿ 'ದ ಡಾರ್ಕ್ ಹೋಲ್ಡ್ಸ್ ನೋ ಟೆರರ್' ಅನ್ನು ಪ್ರಕಟಿಸಿದರು.ಆಕೆ 1990 ರಲ್ಲಿ ದ್ಯಾಟ್ ಲಾಂಗ್ ಸೈಲೆನ್ಸ್ ಮತ್ತು 2009 ರಲ್ಲಿ ಪದ್ಮಶ್ರೀ ಪ್ರಶಸ್ತಿಗಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು. ಅವರ ಕಾದಂಬರಿ ಷಾಡೋ ಪ್ಲೇಯನ್ನು ದಿ ಹಿಂದೂ ಲಿಟರರಿ ಪ್ರೈಜ್ಗಾಗಿ 2014 ರಲ್ಲಿ ಆಯ್ಕೆ ಮಾಡಲಾಯಿತು.ಶಶಿ ದೇಶ್ಪಾಂಡ್ ನಾಲ್ಕು ಮಕ್ಕಳ ಪುಸ್ತಕಗಳನ್ನು ಬರೆದಿದ್ದಾರೆ, ಹಲವು ಕಿರುಕಥೆಗಳು, ಮತ್ತು ಒಂಬತ್ತು ಕಾದಂಬರಿಗಳು, ಹಲವಾರು ಗ್ರಹಿಕೆಯ ಪ್ರಬಂಧಗಳು, ಈಗ ಬರವಣಿಗೆಯಿಂದ ಮಾರ್ಜಿನ್ ಮತ್ತು ಇತರೆ ಎಸ್ಸೇಸ್ ಎಂಬ ಪರಿಮಾಣದಲ್ಲಿ ಲಭ್ಯವಿದೆ.ಅಕ್ಟೋಬರ್ 9, 2015 ರಂದು ಅವರು ಸಾಹಿತ್ಯ ಅಕಾಡೆಮಿಯ ಸಾಮಾನ್ಯ ಮಂಡಳಿಯ ಸ್ಥಾನದಿಂದ ರಾಜೀನಾಮೆ ನೀಡಿದರು ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಹಿಂದಿರುಗಿಸಿದರು. ಶಶಿ ದೇಶಪಾಂಡೆಯವರ ಪ್ರಥಮ ಸಣ್ಣ ಕತೆ ೧೯೭೦ರಲ್ಲಿ ಪ್ರಕಟವಾಯಿತು. ೧೯೭೮ರಲ್ಲಿ ಅವರ ಸಣ್ಣ ಕತೆಗಳ ಮೊದಲ ಸಂಕಲನ “The Legacy ” ಪ್ರಕಟವಾಯಿತು. ಅವರ ಮೊದಲ ಕಾದಂಬರಿ “ The Dark holds no terror ” ೧೯೮೦ರಲ್ಲಿ ಪ್ರಕಟವಾಯಿತು. ಈ ಕಾದಂಬರಿಯನ್ನು ಡಾ: ಕಮಲಾ ಹೆಮ್ಮಿಗೆಯವರು ಕನ್ನಡದಲ್ಲಿ ಅನುವಾದಿಸಿದ್ದಾರೆ. ಜೂನ್ ೧೯೯೯ರಲ್ಲಿ ದಿ ಫೆಮಿನಿಸ್ಟ್ ಪ್ರೆಸ್ ಆಫ್ ನ್ಯೂಯಾರ್ಕ್ ಸಂಸ್ಥೆಯು ಇವರ ಕಾದಂಬರಿ "ಎ ಮ್ಯಾಟರ್ ಆಫ್ ಟೈಮ್" ಅನ್ನು ಪ್ರಕಟಗೊಳಿಸಿತು. ಇದು ಅಮೆರಿಕೆಯಲ್ಲಿ ಪ್ರಕಟವಾದ ಇವರ ಮೊದಲ ಕೃತಿ. ಇವರ ಕಾದಂಬರಿ "ದ ಲಾಂಗ್ ಸೈಲೆನ್ಸ್"ಗೆ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಲಭಿಸಿದೆ. ೧೯೯೯ರಲ್ಲಿ ಪೆಂಗ್ವಿನ್ ಇಂಡಿಯಾ ಪ್ರಕಟ ಮಾಡಿದ "ಲವ್ಡ್ ಇಂಡಿಯನ್ ಸ್ಟೋರೀಸ್” ಕಥಾ ಸಂಕಲನದಲ್ಲಿ ಇವರ ಕತೆಗಳಿವೆ. ಇವರ ಮತ್ತೊಂದು ಕಾದಂಬರಿ “ ಸ್ಮಾಲ್ ರೆಮೆಡಿಸ್ ” ೨೦೦೦ದಲ್ಲಿ ಪ್ರಕಟವಾಯಿತು.[೪]

ಕೃತಿಗಳು[ಬದಲಾಯಿಸಿ]

ಕಥಾಸಂಕಲನ[ಬದಲಾಯಿಸಿ]

 • ದಿ ಸ್ಟೋನ್ ವುಮನ್
 • ದಿ ಇಂಟ್ರುಸಿಯೋನ್ ಅಂಡ್ ಇತರ ಸ್ಟೋರೀಸ್
 • ಇಟ್ ವಾಸ್ ದಿ ನೈಟಿಂಗೇಲ್
 • ದಿ ಮಿರಾಕಲ್
 • ಇಟ್ ವಾಸ್ ಡಾರ್ಕ್
 • ದಿ ಲೆಗಸಿ[೫]

ಕಾದಂಬರಿ[ಬದಲಾಯಿಸಿ]

 • ಸ್ಮಾಲ್ ರೆಮೆಡಿಸ್
 • ಆ ಮ್ಯಾಟರ್ ಆ ಟೈಮ್ (ಇಟಾಲಿಯನ್ ಭಾಷೆಗೆ ಅನುವಾದಗೊಂಡಿದೆ).
 • ದಿ ಬೈಂಡಿಂಗ್ ವೀಣೆ
 • ಥಟ್ ಲಾಂಗ್ ಸೈಲೆನ್ಸ್(ತಮಿಳು, ಮಲಯಾಳಮ್, ಮರಾಠಿ, ಉರ್ದು, ಡ್ಯಾನಿಶ್, ಡಚ್, ಫಿನ್ನಿಶ್ ಹಾಗು ಜರ್ಮನ್ ಭಾಷೆಗಳಿಗೆ ಅನುವಾದಗೊಂಡಿದೆ).
 • ರೂಟ್ಸ್ ಅಂಡ್ ಷಾಡೋಸ್

(ಕನ್ನಡ ಭಾಷೆಗೆ ಅನುವಾದವಾಗಿದೆ),

 • ಇಫ್ ಐ ಡೈ ಟುಡೇ
 • ಕಮ್ ಅಪ್ ಅಂಡ್ ಬಿ ಡೆಡ್
 • ದಿ ಡಾರ್ಕ್ ಹೋಲ್ಡ್ಸ್
 • ನೋ ತೇರ್ರೋರ್ಸ್ (ಕನ್ನಡ, ಇಟಾಲಿಯನ್, ಜರ್ಮನ್ ಹಾಗು ರಶಿಯನ್ ಭಾಷೆಗಳಿಗೆ ಅನುವಾದಗೊಂಡಿದೆ)

ಇತರ ಸಾಹಿತಿಗಳ ಜೊತೆಗೆ ಸಂಕಲನ[ಬದಲಾಯಿಸಿ]

 • ಬೆಸ್ಟ್ ಲವ್ಡ್ ಇಂಡಿಯನ್ ಸ್ಟೋರೀಸ್
 • ದಿ ಇನ್ನರ್ ಕೋರ್ಟಿಯರ್ಡ್
 • ಫ್ರಾಉಎಂ ಇನ್ ಇಂಡೀನ್

ಮಕ್ಕಳ ಸಾಹಿತ್ಯ[ಬದಲಾಯಿಸಿ]

 • ದಿ ನಾರಾಯನ್ಪುರ್ ಇನ್ಸಿಡೆಂಟ್ (ಜರ್ಮನ್ ಭಾಷೆಗೆ ಅನುವಾದವಾಗಿದೆ).
 • ಹಿಡನ್ ಟ್ರೆಷರ್
 • ದಿ ಓನ್ಲಿ ವಿಟ್ನೆಸ್
 • ಆ ಸಮ್ಮರ್ ಅಡ್ವೆಂಚರ್

ಕೌಟಂಬಿಕ ಜೀವನ[ಬದಲಾಯಿಸಿ]

ಶಶಿ ದೇಶಪಾಂಡೆಯವರ ಪತಿ ಪೆಥಾಲಾಜಿಸ್ಟ್ ಇದ್ದು, ದಂಪತಿಗಳು ಬೆಂಗಳೂರಿನಲ್ಲಿ ವಾಸಿಸುತ್ತಾರೆ.

ನೋಡಿ[ಬದಲಾಯಿಸಿ]

ಶಶಿ ದೇಶಪಾಂಡೆ-ಲೇಖನ:"ಸ್ವತಂತ್ರ ಮನೋಭಾವ ರೂಪಿಸಿದ ಅಪ್ಪ":[[೧]]

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

 1. SAWNET: Bookshelf: Shashi Deshpande
 2. http://pib.nic.in/release/release.asp?relid=46983
 3. "Here's the shortlist". The Hindu. October 5, 2014. Retrieved December 24, 2014.
 4. The Hindu, October 9, 2015 After Sashi Deshpande steps down, Akademi explains its silence
 5. Joseph, Margaret Paul. Jasmine on a String: A survey of Women in India Writing Fiction in English