ಶಕ್ತಿಕಾಂತ ದಾಸ್
ಶಕ್ತಿಕಾಂತ ದಾಸ್ | |
[[Image:|160px|ಶಕ್ತಿಕಾಂತ ದಾಸ್]]
| |
ರಾಷ್ಟ್ರಪತಿ | ರಾಮನಾಥ ಕೋವಿಂದ |
---|---|
ಪೂರ್ವಾಧಿಕಾರಿ | ಊರ್ಜಿತ್ ಪಟೇಲ್ |
ಜನನ | ಭುವನೇಶ್ವರ, ಒಡಿಶಾ, ಭಾರತ | ೨೬ ಫೆಬ್ರವರಿ ೧೯೫೭
ವೃತ್ತಿ | ಭಾರತೀಯ ಸರ್ಕಾರ ನೌಕರ ಪ್ರಸ್ತುತ: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ |
ಶಕ್ತಿಕಾಂತ ದಾಸ್ (ಜನನ ೨೬ ಫೆಬ್ರವರಿ ೧೯೫೭ ) ನಿವೃತ್ತ 1980 ಬ್ಯಾಚ್ ಇಂಡಿಯನ್ ಅಡ್ಮಿನಿಸ್ಟ್ರೇಟಿವ್ ಸರ್ವಿಸ್ (ಐಎಎಸ್) ತಮಿಳುನಾಡು ಕೇಡರ್ ಅಧಿಕಾರಿ. ಪ್ರಸ್ತುತ ಭಾರತೀಯ ರಿಸರ್ವ್ ಬ್ಯಾಂಕ್ ನ (ಆರ್‌ಬಿಐ) 25 ನೇ ಗವರ್ನರ್ ಆಗಿ ಸೇವೆ ಸಲ್ಲಿಸುತ್ತಿರುವ ಅವರು ಈ ಹಿಂದೆ ಹದಿನೈದನೇ ಹಣಕಾಸು ಆಯೋಗ ಮತ್ತು ಭಾರತದ ಶೆರ್ಪಾ ಜಿ 20 ಯ ಸದಸ್ಯರಾಗಿದ್ದರು.
ಐಎಎಸ್ ಅಧಿಕಾರಿಯಾಗಿ ವೃತ್ತಿಜೀವನದ ಅವಧಿಯಲ್ಲಿ, ದಾಸ್ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ, ಕಂದಾಯ ಕಾರ್ಯದರ್ಶಿ, ರಸಗೊಬ್ಬರಗಳ ಕಾರ್ಯದರ್ಶಿ ಸೇರಿದಂತೆ ಭಾರತೀಯ ಮತ್ತು ತಮಿಳುನಾಡು ಸರ್ಕಾರಗಳಿಗೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು.
ಆರಂಭಿಕ ಜೀವನ ಮತ್ತು ಶಿಕ್ಷಣ
[ಬದಲಾಯಿಸಿ]ಭುವನೇಶ್ವರದಲ್ಲಿ ಜನಿಸಿದ ಅವರು,[೧] ಅಲ್ಲಿನ ಡೆಮಾಂಸ್ಟ್ರೇಶನ್ ಮಲ್ಟಿಪರ್ಪಸ್ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದ ನಂತರ ಇತಿಹಾಸ ವಿಷಯದಲ್ಲಿ ಸ್ನಾತಕ ( ಬಿಎ ) ಮತ್ತು ಸ್ನಾತಕೋತ್ತರ ಪದವಿಗಳನ್ನು ( ಎಮ್ಎ) ದೆಹಲಿ ವಿಶ್ವವಿದ್ಯಾಲಯದ ಸೇಂಟ್ ಸ್ಟೀಫನ್ಸ್ ಕಾಲೇಜಿನಿಂದ ಪಡೆದರು .[೨]
ಐಎಎಸ್ ಅಧಿಕಾರಿಯಾಗಿ
[ಬದಲಾಯಿಸಿ]ಪ್ರಧಾನ ಕಾರ್ಯದರ್ಶಿ ( ಕೈಗಾರಿಕೆಗಳು ), ವಿಶೇಷ ಆಯುಕ್ತರು ( ಕಂದಾಯ ), ಕಾರ್ಯದರ್ಶಿ (ಕಂದಾಯ), ಕಾರ್ಯದರ್ಶಿ ( ವಾಣಿಜ್ಯ ತೆರಿಗೆಗಳು ), ತಮಿಳುನಾಡು ರಾಜ್ಯದ ಯೋಜನಾ ನಿರ್ದೇಶಕರಂತೆ ದಾಸ್ ಭಾರತ ಸರ್ಕಾರ ಮತ್ತು ತಮಿಳುನಾಡು ಸರ್ಕಾರಕ್ಕೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. ಏಡ್ಸ್ ಕಂಟ್ರೋಲ್ ಸೊಸೈಟಿ ಮತ್ತು ತಮಿಳುನಾಡು ಸರ್ಕಾರದಲ್ಲಿ ದಿಂಡಿಗಲ್ ಮತ್ತು ಕಾಂಚೀಪುರಂ ಜಿಲ್ಲೆಗಳ ಜಿಲ್ಲಾಧಿಕಾರಿ ಮತ್ತು ಸಂಗ್ರಾಹಕರಾಗಿ ;[೧][೨] ಮತ್ತು ಕೇಂದ್ರ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿ, ಕೇಂದ್ರ ಕಂದಾಯ ಕಾರ್ಯದರ್ಶಿಯಾಗಿ, ಕೇಂದ್ರ ರಸಗೊಬ್ಬರಗಳ ಕಾರ್ಯದರ್ಶಿಯಾಗಿ, ಭಾರತೀಯ ಸರ್ಕಾರದ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯಲ್ಲಿ ವಿಶೇಷ ಕಾರ್ಯದರ್ಶಿಯಾಗಿ ಮತ್ತು ಹಣಕಾಸು ಸಚಿವಾಲಯದ ಖರ್ಚು ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿ .
ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್
[ಬದಲಾಯಿಸಿ]ಹಿಂದಿನ ಗವರ್ನರ್ ಆಗಿದ್ದ ಊರ್ಜಿತ್ ಪಟೇಲ್ ರಾಜೀನಾಮೆ ನೀಡಿದ ಬಳಿಕ ಈ ಮೂರು ಅವಧಿಗೆ ದಾಸ್ ಅವರನ್ನು ೧೧ ಡಿಸೆಂಬರ್ ೨೦೧೮ ಎಸಿಸಿ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ನೇಮಿಸಿತು.[೩][೪][೫]
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ Siddharta; Gupta, Surojit (12 December 2018). "Shaktikanta Das: A budget veteran comes to Mint Street". ದಿ ಟೈಮ್ಸ್ ಆಫ್ ಇಂಡಿಯಾ. ನವ ದೆಹಲಿ: Bennett, Coleman & Co. Ltd. OCLC 23379369. Retrieved 12 December 2018.
- ↑ ೨.೦ ೨.೧ "Shaktikanta Das – Executive Record Sheet". Department of Personnel and Training, Ministry of Personnel, Public Grievances and Pensions, ಭಾರತ ಸರ್ಕಾರ. Retrieved 16 December 2018.
- ↑ Prasad, Gireesh Chandra; Ghosh, Shayan; Gopakumar, Gopika (11 December 2018). "Shaktikanta Das, who oversaw demonetization, is new RBI governor". Livemint. ನವ ದೆಹಲಿ/ಮುಂಬೈ: Vivek Khanna. Retrieved 12 December 2018.
- ↑ "Shaktikanta Das Is New RBI Governor". BloombergQuint. BQ Desk. 11 December 2018. Retrieved 11 December 2018.
{{cite web}}
: CS1 maint: others (link) - ↑ "Shaktikanta Das: The man behind GST, note ban now heads RBI". The Economic Times. ET Online. The Times Group. 11 December 2018. OCLC 61311680. Retrieved 11 December 2018.
{{cite news}}
: CS1 maint: others (link)