ವಿಷಯಕ್ಕೆ ಹೋಗು

ವೋಲ್ವೋ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇದು ವೋಲ್ವೋ ಗ್ರೂಪ್‌ - ಎಬಿ ವೋಲ್ವೋ ಬಗೆಗಿನ ಲೇಖನ; ವೋಲ್ವೋ ಕಾರುಗಳು ಎನ್ನುವುದು ವೋಲ್ವೋ ಟ್ರೇಡ್‌ಮಾರ್ಕ್‌ಅನ್ನು ಬಳಸಿಕೊಂಡು ಪ್ಯಾಸೆಂಜರ್‌ ವಾಹನಗಳನ್ನು ತಯಾರಿಸುವ, ಫೋರ್ಡ್‌ ಮೋಟಾರ್‌ ಕಂಪನಿಯ ಒಡೆತನದಲ್ಲಿದ್ದು ಈಗ ಜೇಜಿಯಾಂಗ್‌ ಗೀಲಿ ಹೋಲ್ಡಿಂಗ್‌ ಗ್ರೂಪ್‌ಗೆ ಮಾರಾಟವಾಗಿರುವ ಸಂಸ್ಥೆ.

ಎಬಿ ವೋಲ್ವೋ
ಸಂಸ್ಥೆಯ ಪ್ರಕಾರಸಾರ್ವಜನಿಕ ವ್ಯಾಪಾರ Aktiebolag (OMXVOLV B)
ಸ್ಥಾಪನೆ1927 by SKF
ಮುಖ್ಯ ಕಾರ್ಯಾಲಯಗೋಥೆನ್ಬರ್ಗ್, ಸ್ವೀಡನ್
ವ್ಯಾಪ್ತಿ ಪ್ರದೇಶವಿಶ್ವಾದ್ಯಂತ
ಪ್ರಮುಖ ವ್ಯಕ್ತಿ(ಗಳು)ಲೂಯಿಸ್ ಸ್ಕ್ವೀಟ್ಜರ್ (CEO) (Chairman), Leif Johansson (President and CEO)
ಉದ್ಯಮವಾಣಿಜ್ಯ ವಾಹನಗಳು
ಉತ್ಪನ್ನವೋಲ್ವೋ ಟ್ರಕ್ಗಳು, ವೋಲ್ವೋ ಬಸ್ಸುಗಳು, ವೋಲ್ವೋ ನಿರ್ಮಾಣ ಉಪಕರಣಗಳು, ವೋಲ್ವೋ ಪೆಂಟಾ - ಸಾಗರ ಮತ್ತು ಕೈಗಾರಿಕಾ ಶಕ್ತಿ ವ್ಯವಸ್ಥೆಗಳು, ವೋಲ್ವೋ ವೈಮಾನಿಕ ಘಟಕಗಳು, ಹಣಕಾಸು ಸೇವೆಗಳು
ಆದಾಯSEK 218,361 million (2009)[]
ಆದಾಯ(ಕರ/ತೆರಿಗೆಗೆ ಮುನ್ನ)decrease (SEK 17,013 million) (2009)[]
ನಿವ್ವಳ ಆದಾಯdecrease (SEK 14,718 million) (2009)[]
ಒಟ್ಟು ಆಸ್ತಿSEK 332.3 billion (2009)[]
ಒಟ್ಟು ಪಾಲು ಬಂಡವಾಳSEK 67.03 billion (2009)[]
ಉದ್ಯೋಗಿಗಳು90,210 (2009)[]
ಉಪಸಂಸ್ಥೆಗಳುಮ್ಯಾಕ್ ಟ್ರಕ್ಸ್, ರೆನಾಲ್ಟ್ ಟ್ರಕ್ಸ್, ಯುಡಿ ಟ್ರಕ್ಸ್, ವೋಲ್ವೋ ನಿರ್ಮಾಣ ಸಲಕರಣೆ, ವೋಲ್ವೋ ಬಸ್ಸುಗಳು, ವೋಲ್ವೋ ಟ್ರಕ್ಗಳು
ಜಾಲತಾಣwww.volvogroup.com

ಎಬಿ ವೋಲ್ವೋ ಎನ್ನುವುದು ಸ್ವೀಡನ್‌ ದೇಶದ, ಟ್ರಕ್‌, ಬಸ್ಸು ಮತ್ತು ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಒಳಗೊಂಡಂತೆ ವಾಣಿಜ್ಯ ವಾಹನಗಳನ್ನು ತಯಾರು ಮಾಡುವ ಸಂಸ್ಥೆ. 1999ರವರೆಗೆ ಅದು ಕಾರುಗಳನ್ನೂ ಉತ್ಪನ್ನ ಮಾಡುತ್ತಿದ್ದವು. ವೋಲ್ವೋ ಜಲ ಮತ್ತು ಔದ್ಯೋಗಿಕ ಡ್ರೈವ್‌ ವ್ಯವಸ್ಥೆಗಳು ಮತ್ತು ಅಂತರಿಕ್ಷಯಾನ ಭಾಗಗಳನ್ನು ಸರಬರಾಜು ಮಾಡುತ್ತದೆ ಮತ್ತು ಹಣಕಾಸು ಸೇವೆಗಳನ್ನೂ ನೀಡುತ್ತದೆ. 1915ರಲ್ಲಿಯೇ ಎಬಿ ಎಸ್‌ಕೆಎಫ್‌‌ನ ಉಪಸಂಸ್ಥೆಯಾಗಿ ವೋಲ್ವೋ ಪ್ರಾರಂಭವಾಗಿದ್ದರೂ ಸಹ, ಸ್ವೀಡನ್‌ನ ಈ ಬಾಲ್‌ ಬ್ರೇರಿಂಗ್‌ ಮತ್ತು ಆಟೋ ಉತ್ಪಾದಕ ಸಂಸ್ಥೆಯು 14 ಏಪ್ರಿಲ್‌ 1927ರಂದು ತನ್ನ ಸ್ಥಾಪನೆಯಾಯಿತು ಎನ್ನುತ್ತದೆ. ಮೊದಲ ಕಾರು, ವೋಲ್ವೋ ÖV 4 ಸರಣಿಯು ಹಿಸಿಂಗೆನ್‌, ಗೊಟೆನ್‌ಬರ್ಗ್‌ನಲ್ಲಿದ್ದ ಕಾರ್ಖಾನೆಯಿಂದ ಹೊರಉರುಳಿತು.[]

ವೋಲ್ವೋ ಎಂದರೆ ಲ್ಯಾಟಿನ್‌ ಭಾಷೆಯಲ್ಲಿ "ನಾನು ಉರುಳುತ್ತೇನೆ" ಎಂದು, "ವೋಲ್ವೀರ್‌‍" ಪದದಿಂದ ಬಂದಿದೆ. ವೋಲ್ವೋ ಎಂಬ ಹೆಸರನ್ನು, ಬಾಲ್‌ ಬೇರಿಂಗ್‌ನ ವಿಶೇಷ ಸರಣಿಗೆ ಟ್ರೇಡ್‌ಮಾರ್ಕ್‌ ಆಗಿ ಬಳಸಿಕೊಳ್ಳುವುದಕ್ಕಾಗಿ ಎಸ್‌ಕೆಎಫ್‌ ಎಬಿಯೊಳಗೇ ಒಂದು ಬೇರೆ ಕಂಪನಿಯೆಂದು ಮೇ 1911ರಲ್ಲಿ ನೋಂದಣಿ ಮಾಡಲಾಯಿತು. ಆದರೆ, ಈ ಯೋಜನೆಯನ್ನು ಸ್ವಲ್ಪ ಕಾಲದ ಮಟ್ಟಿಗೆ ಮಾತ್ರ ಬಳಸಿಕೊಳ್ಳಲಾಯಿತು, ನಂತರ ಎಸ್‌ಕೆಎಫ್‌ ತನ್ನ ಎಲ್ಲಾ ಬೇರಿಂಗ್‌ ಉತ್ಪನ್ನಗಳಿಗೆ "ಎಸ್‌ಕೆಎಫ್‌"ಅನ್ನೇ ಟ್ರೇಡ್‌ಮಾರ್ಕ್‌ ಆಗಿ ಬಳಸಲು ನಿರ್ಧರಿಸಿತು.

1924ರಲ್ಲಿ ಎಸ್‌ಕೆ‌ಎಫ್‌ನ ಮಾರಾಟ ನಿರ್ವಾಹಕರಾದ ಅಸ್ಸಾರ್‌ ಗೇಬ್ರಿಯಲ್‌ಸನ್‌ ಮತ್ತು ಇಂಜಿನಿಯರರಾದ ಗುಸ್ತವ್‌ ಲಾರ್ಸನ್‌ ಎಂಬ ಇಬ್ಬರು ಸಂಸ್ಥಾಪಕರು ಒಂದು ಸ್ವೀಡನ್‌ ಕಾರನ್ನು ತಯಾರಿಸಲು ನಿರ್ಧರಿಸಿದರು. ಸ್ವೀಡನ್‌ ದೇಶದ ಒರಟು ರಸ್ತೆಗಳ ಮತ್ತು ಶೀತಲ ಹವಾಮಾನದ rigorಗಳನ್ನು ತಡೆದುಕೊಳ್ಳುವಂತಹ ಕಾರುಗಳನ್ನು ನಿರ್ಮಿಸಬೇಕೆಂಬುದು ಅವರ ಧ್ಯೇಯವಾಗಿತ್ತು. ಆಗಿನಿಂದಲೂ ಇದು ವೋಲ್ವೋ ಉತ್ಪನ್ನಗಳ ಉಪಾಧಿಯೇ ಆಗಿದೆ.[]

10ನೇ ಆಗಸ್ಟ್‌ 1926ರವರೆಗೂ ಎಬಿ ವೋಲ್ವೋ ಕಂಪನಿಯಲ್ಲಿ ಯಾವ ಚಟುವಟಿಕೆಯೂ ಇರಲಿಲ್ಲ. ಹತ್ತು ಪ್ರೋಟೋಟೈಪ್‌ಗಳ ಉತ್ಪಾದನೆಯೂ ಸೇರಿದಂತೆ ಒಂದು ವರ್ಷದ ತಯಾರಿಯ ನಂತರ ಎಸ್‌ಕೆಎಫ್‌ ಗ್ರೂಪ್‌ನ ಒಳಗೆ ಕಾರು-ಉತ್ಪಾದನಾ ವ್ಯವಹಾರವನ್ನು ನಡೆಸಲು ಇದನ್ನು ಸಿದ್ಧಮಾಡಲಾಯಿತು. ಸ್ಟಾಕ್‌ಹೋಮ್‌ ಷೇರುಪೇಟೆಯಲ್ಲಿ ಎಬಿ ವೋಲ್ವೋಅನ್ನು 1935ರಲ್ಲಿ ಪರಿಚಯಿಸಲಾಯಿತು ಮತ್ತು ಕಂಪನಿಯಲ್ಲಿನ ಎಲ್ಲ ಷೇರುಗಳನ್ನು ಮಾರಾಟ ಮಾಡಲು ಎಸ್‌ಕೆಎಫ್‌ ನಿರ್ಧರಿಸಿತು. ಜೂನ್‌ 2007ರಲ್ಲಿ ನ್ಯಾಸ್‌ಡ್ಯಾಕ್‌ನ ಪಟ್ಟಿಯಿಂದ ವೋಲ್ವೋಅನ್ನು ತೆಗೆದುಹಾಕಲಾಯಿತು, ಆದರೆ ಸ್ಟಾಕ್‌ಹೋಮ್‌ ಷೇರುಪೇಟೆಯಲ್ಲಿ ಈಗಲೂ ಇದೆ.[]

1999ರಲ್ಲಿ, ವೋಲ್ವೋ ತನ್ನ ವೋಲ್ವೋ ಕಾರುಗಳು ವಿಭಾಗವನ್ನು ಫೋರ್ಡ್‌ ಸಂಸ್ಥೆಗೆ 6.45 ಬಿಲಿಯನ್‌ ಡಾಲರುಗಳಿಗೆ ಮಾರಾಟ ಮಾಡಿತು. ವೋಲ್ವೋ ಟ್ರೇಡ್‌ ಮಾರ್ಕ್‌ಅನ್ನು ಈಗ ವೋಲ್ವೋ ಎಬಿ ತನ್ನ ಭಾರೀ ವಾಹನಗಳಿಗೆ ಬಳಸಿಕೊಳ್ಳುತ್ತದೆ ಮತ್ತು ಫೋರ್ಡ್‌ನ ಒಂದು ವಿಭಾಗ ಕಾರುಗಳಿಗೆ ಬಳಸಿಕೊಳ್ಳುತದೆ. 2008ರಲ್ಲಿ, ಫೋರ್ಡ್‌ ವೋಲ್ವೋ ಕಾರುಗಳ ಮೇಲಿನ ತನ್ನ ’ಬಡ್ಡಿ’ಯನ್ನು ಮಾರಾಟ ಮಾಡಲು ನಿರ್ಧರಿಸಿತು; ಫೋರ್ಡ್‌ ಮೋಟಾರ್‌ ಕಂಪನಿಯು ಚೈನೀಸ್‌ ಮೋಟಾರ್‌ ಮಾನುಫ್ಯಾಕ್ಚರರ್‌ ಸಂಸ್ಥೆಯ ಮಾತೃ ಸಂಸ್ಥೆಯಾದ ಗೀಲಿ ಆಟೊಮೊಬೈಲ್‌ ಕಂಪನಿಗೆ 1.8 ಬಿಲಿಯನ್‌ ಡಾಲರ್‌ಗಳಿಗೆ ಬ್ರ್ಯಾಂಡ್‌ಅನ್ನು ಮಾರಾಟ ಮಾಡಲು ನಿರ್ಧರಿಸಿತು. 2010ರ ಮೂರನೆ ತ್ರೈಮಾಸಿಕದಲ್ಲಿ ಈ ವ್ಯವಹಾರವು ಪೂರ್ಣವಾಗುತ್ತದೆಂದು ಭಾವಿಸಲಾಗಿತ್ತು.[]

ಇತಿಹಾಸ

[ಬದಲಾಯಿಸಿ]

ವೋಲ್ವೋ ಗ್ರೂಪ್ 1927 ರಲ್ಲಿ ಮೊದಲ ವೋಲ್ವೋ ಕಾರು ಗುಟೆನ್‌ಬರ್ಗ್‌ನ ಕಾರ್ಖಾನೆಯಿಂದ ತಯಾರುಗೊಂಡು ಹೊರಗೆ ಬರುವುದರೊಂದಿಗೆ ಪ್ರಾರಂಭಗೊಂಡಿತು.[] ಆ ವರ್ಷದಲ್ಲಿ ಕೇವಲ 280 ಕಾರುಗಳನ್ನು ನಿರ್ಮಿಸಲಾಯಿತು.[] ಮೊದಲ ಟ್ರಕ್‌ "ಸಿರೀಸ್‌ 1," ದಿಢೀರ್‌ ಯಶಸ್ಸಿನಂತೆ ಜನವರಿ 1928ರಲ್ಲಿ ಪ್ರಾರಂಭವಾಯಿತು ಮತ್ತು ಹೊರದೇಶಗಳಲ್ಲಿಯೂ ಗಮನ ಸೆಳೆಯಿತು.[] 1930ರಲ್ಲಿ, ವೋಲ್ವೋ 639 ಕಾರುಗಳನ್ನು ಮಾರಾಟಮಾಡಿತು,[] ಮತ್ತು ಶೀಘ್ರದಲ್ಲೇ ಯೂರೋಪಿಗೆ ಟ್ರಕ್‌ಗಳನ್ನು ರಫ್ತು ಮಾಡುವುದು ಪ್ರಾರಂಭವಾಯಿತು; ಎರಡನೇ ಮಹಾಯುದ್ಧದ ನಂತರದವರೆಗೂ ಸ್ವೀಡನ್‌ನ ಹೊರಗೆ ಕಾರುಗಳು ಅಷ್ಟು ಪ್ರಸಿದ್ಧಿಗೆ ಬರಲಿಲ್ಲ.[]

ಜಲ ಇಂಜಿನ್‌ಗಳು ಈ ಗ್ರೂಪ್‌ಗೆ ಟ್ರಕ್‌ಗಳಷ್ಟೇ ಹಳೆಯವು. 1907ರಲ್ಲಿ ಸ್ಥಾಪನೆಯಾದ ಪೆಂಟಾವರ್ಕನ್‌ಅನ್ನು 1935ರಲ್ಲಿ ವಶಪಡಿಸಿಕೊಳ್ಳಲಾಯಿತು. ಆದಾಗ್ಯೂ 1929ರಷ್ಟು ಮೊದಲೇ ಯು-21 ಔಟ್‌ಬೋರ್ಡ್‌ ಎಂಜಿನ್‌ಅನ್ನು ಪರಿಚಯಿಸಲಾಯಿತು. 1962ರವರೆಗೂ ಉತ್ಪಾದನೆ ಮಾಡುವುದು ಮುಂದುವರೆಯಿತು.

ಬಿ1 ಎಂಬ ಮೊದಲ ಬಸ್ಸನ್ನು 1934ರಲ್ಲಿ ಪ್ರಾರಂಭಿಸಲಾಯಿತು, ಮತ್ತು 1940ರಲ್ಲಿ ಬೆಳೆಯುತ್ತಿರುವ ಉತ್ಪನ್ನಗಳ ಶ್ರೇಣಿಗೆ ವಿಮಾನ ಎಂಜಿನ್‌ಗಳನ್ನೂ ಸೇರಿಸಲಾಯಿತು.

ಜನವರಿ 28, 1999ರಂದು ವೋಲ್ವೋ ಗ್ರೂಪ್‌ ತನ್ನ ವ್ಯಾಪಾರ ಕ್ಷೇತ್ರವನ್ನು ವೋಲ್ವೋ ಕಾರ್‌ ಕಾರ್ಪೋರೇಷನ್‌‍ಅನ್ನು ಫೋರ್ಡ್‌ ಮೊಟಾರ್‌ ಕಂಪನಿಗೆ, 6.45 ಬಿಲಿಯನ್‌ ಯುಎಸ್‌ ಡಾಲರ್‌ಗಳಿಗೆ ಮಾರಾಟ ಮಾಡಿತು, ಇದರಿಂದ ಪರಿಣಮಿಸಿದ ಗ್ರೂಪ್‌ ಬಹುಮಟ್ಟಿಗೆ ಕಮರ್ಷಿಯಲ್‌ ವಾಹನಗಳ ಮೇಲೆ ಗಮನ ಹರಿಸಿತು. ಜನವರಿ 2, 2001ರಂದು ರೆನಾಲ್ಟ್‌ ವೆಹಿಕ್ಯೂಲ್ಸ್‌ ಇಂಡಸ್‌ಟ್ರಿಯೆಲ್ಸ್‌ಅನ್ನು (ಇದು ಮ್ಯಾಕ್‌ ಟ್ರಕ್ಸ್‌ಅನ್ನು ಒಳಗೊಂಡಿತ್ತು ಆದರೆ 0}ಐರಿಸ್‌ಬಸ್‌ನ ರೆನಾಲ್ಟ್‌ ಷೇರುಗಳನ್ನು ಒಳಗೊಂಡಿರಲಿಲ್ಲ) ವೋಲ್ವೋಗೆ ಮಾರಾಟ ಮಾಡಲಾಯಿತು. ವೋಲ್ವೋ ಅದಕ್ಕೆ 2002ರಲ್ಲಿ ರೆನಾಲ್ಟ್‌ ಟ್ರಕ್ಸ್‌ ಎಂದು ಹೆಸರು ನೀಡಿತು. ಪರಿಣಾಮವಾಗಿ, ಮಾಜಿ ಮಾತೃ ಸಂಸ್ಥೆ ರೆನಾಲ್ಟ್‌ ಕಂಪೆನಿಯು 20% (ಷೇರು ಮತ್ತು ಮತದಾನ ಹಕ್ಕುಗಳಲ್ಲಿ) ಷೇರುಗಳನ್ನು ಹೊಂದುವುದರ ಮೂಲಕ ಎಬಿ ವೋಲ್ವೋದ ಅತಿದೊಡ್ಡ ಷೇರುದಾರ ಸಂಸ್ಥೆಯಾಯಿತು.

ಕಳೆದ ಹತ್ತು ವರ್ಷಗಳಲ್ಲಿ ಕಂಪನಿಯು ಉತ್ಪಾದಕ ಘಟಕಗಳನ್ನು ಮಾರಾಟ ಮಾಡಲು ಆರ್ಥಿಕ ಪರಿಹಾರಗಳನ್ನು ಕೊಡುವುದೇ ಮೊದಲಾದ ಸೇವೆಗಳ ಮೂಲಕ ಸೇವಾ ವಲಯದಲ್ಲಿ ಕ್ಷಿಪ್ರ ಬೆಳವಣಿಗೆಯನ್ನು ಕಂಡಿದೆ. 2006ರಲ್ಲಿ, ಎಬಿ ವೋಲ್ವೋ ಕಂಪನಿಯು ನಿಸ್ಸಾನ್‌ ಮೋಟಾರ್‌ ಕಂ. ಲಿ.ನಿಂದ, ಜಪಾನಿನ ಟ್ರಕ್‌ ಉತ್ಪಾದಕ ಕಂಪನಿಯಾದ ಯುಡಿ ಟ್ರಕ್ಸ್‌ನ (ಹಿಂದೆ ನಿಸ್ಸಾನ್‌ ಡೀಸಲ್‌) 13% ಷೇರುಗಳನ್ನು ಕೊಂಡು ಪ್ರಮುಖ ಷೇರುದಾರ ಸಂಸ್ಥೆಯಾಯಿತು. 2007ರಲ್ಲಿ ವೋಲ್ವೋ ಗ್ರೂಪ್‌ ನಿಸ್ಸಾನ್‌ ಡೀಸಲ್‌ನ ಸಂಪೂರ್ಣ ಒಡೆತನವನ್ನು ಪಡೆದುಕೊಂಡು ಏಷಿಯಾ ಪೆಸಿಫಿಕ್‌ ಮಾರುಕಟ್ಟೆಯಲ್ಲಿ ತನ್ನ ವಿಸ್ತರಣೆಯನ್ನು ಬೆಳೆಸಿತು.[][]

ವ್ಯಾಪಾರಿ ಕ್ಷೇತ್ರಗಳು

[ಬದಲಾಯಿಸಿ]

ವೋಲ್ವೋ ಗ್ರೂಪ್‌ನ ವ್ಯವಹಾರಗಳನ್ನು ಅನೇಕ ಕಂಪನಿಗಳಲ್ಲಿ ನಡೆಸಲಾಗುತ್ತದೆ - ಅವುಗಳಲ್ಲಿ ಇವು ಉಪಸಂಸ್ಥೆಗಳು:

  • ವೋಲ್ವೋ ಟ್ರಕ್‌ಗಳು (ಪ್ರಾದೇಶಿಕ ಸಾಗಣೆಗಳಿಗಾಗಿ ಮಧ್ಯಮಗಾತ್ರದ-ಡ್ಯೂಟಿ ಟ್ರಕ್‌ಗಳು ಮತ್ತು ದೂರದ ಸಾಗಣೆಗಳಿಗಾಗಿ ಭಾರೀ-ಡ್ಯೂಟಿ ಟ್ರಕ್‌ಗಳು, ಹಾಗೆಯೇ ಕಟ್ಟಡ ನಿರ್ಮಾಣ ವಿಭಾಗಕ್ಕೆ ಭಾರೀ-ಡ್ಯೂಟಿ ಟ್ರಕ್‌ಗಳು)
  • ಮ್ಯಾಕ್‌ ಟ್ರಕ್‌ಗಳು (ಹತ್ತಿರದ ಹಂಚಿಕೆಗಳಿಗಾಗಿ ಹಗುರ-ಡ್ಯೂಟಿ ಟ್ರಕ್‌ಗಳು ಮತ್ತು ದೂರದ ಸಾಗಣೆಗಾಗಿ ಭಾರಿ ಡ್ಯೂಟಿ ಟ್ರಕ್‌ಗಳು)
  • ರೆನಾಲ್ಟ್‌ ಟ್ರಕ್‌ಗಳು (ಪ್ರಾದೇಶಿಕ ಸಾಗಣೆಗಾಗಿ ಭಾರಿ-ಡ್ಯೂಟಿ ಟ್ರಕ್‌ಗಳು ಮತ್ತು ಕಟ್ಟಡ ನಿರ್ಮಾಣ ವಿಭಾಗಕ್ಕೆ ಭಾರೀ-ಡ್ಯೂಟಿ ಟ್ರಕ್‌ಗಳು)
  • ಯುಡಿ ಟ್ರಕ್‌ಗಳು (ಮಧ್ಯಮಗಾತ್ರದ-ಡ್ಯೂಟಿ ಟ್ರಕ್‌ಗಳು)
  • ವೋಲ್ವೋ ಕಟ್ತಡನಿರ್ಮಾಣ ಸಾಮಗ್ರಿ (ಕಟ್ಟಡ ನಿರ್ಮಾಣ ಯಂತ್ರಗಳು) (ಈ ಮುಂಚೆ ವೋಲ್ವೋ ಬಿಎಮ್, ಎಬಿ ಬೊಲಿಂಡರ್‌-ಮಂಕ್‌ಟೆಲ್‌ಅನ್ನೂ ನೋಡಿ)
  • ವೋಲ್ವೋ ಬಸ್‌ಗಳು (ಪೂರ್ಣ ಬಸ್‌ಗಳು ಮತ್ತು ನಗರ ಸಂಚಾರ, ಲೈನ್‌ ಸಂಚಾರ ಮತ್ತು ಪ್ರವಾಸಿ ಸಂಚಾರಕ್ಕಾಗಿ ಬಸ್‌ ಚಾಸಿಸ್‌ಗಳು)
  • ವೊಲ್ವೋ ಪೆಂಟಾ (ಲೀಷರ್‌ ದೋಣಿಗಳಿಗೆ ಜಲ ಎಂಜಿನ್‌ ವ್ಯವಸ್ಥೆಗಳು ಮತ್ತು

ಔದ್ಯೋಗಿಕ ಉಪಯೋಗಿಗಳಿಗಾಗಿ ಕಮರ್ಷಿಯಲ್‌ ಹಡಗು, ಡೀಸಲ್‌ ಎಂಜಿನ್‌ಗಳು ಮತ್ತು ಡ್ರೈವ್‌ ವ್ಯವಸ್ಥೆಗಳು)

  • ವೋಲ್ವೋ ಏರೋ (ವಿಮಾನಗಳು ಮತ್ತು ರಾಕೆಟ್‌ ಎಂಜಿನ್‌ಗಳಿಗಾಗಿ ಅತ್ಯುತ್ತಮ ತಂತ್ರಜ್ಞಾನದ ಭಾಗಗಳು ಹಾಗೆಯೇ ವಿಮಾನ ಉದ್ಯಮಕ್ಕೆ ಸೇವೆಗಳು)
  • ವೊಲ್ವೋ ಆರ್ಥಿಕ ಸೇವೆಗಳು (ಗ್ರಾಹಕರಿಗೆ ಸಾಲಗಳು, ಅಂತರ-ಗ್ರೂಪ್‌ ಬ್ಯಾಂಕಿಂಗ್‌, ರಿಯಲ್ ಎಸ್ಟೇಟ್ ನಿರ್ವಹಣೆಯಾಗಿ)
  • ವಿಇ ಕಮರ್ಷಿಯಲ್ ವೆಹಿಕಲ್ಸ್ (ಐಶರ್) ಲಿಮಿಟೆಡ್, ಭಾರತ (VECV), ವೋಲ್ವೋ ಮತ್ತು ಐಶರ್ ಮೋಟರ್ಸ್ ಲಿಮಿಟೆಡ್ ನಡುವಿನ ಜಂಟಿ ಉದ್ಯಮದಲ್ಲಿ ವೋಲ್ವೋ 45.6% ಶೇರನ್ನು ಹೊಂದಿದೆ (ಟ್ರಕ್ಗಳು ಮತ್ತು ಬಸ್ಸುಗಳು)

ವೊಲ್ವೋ ಗ್ರೂಪ್‌ ರೆನಾಲ್ಟ್‌ ಟ್ರಕ್ಸ್‌ ಮತ್ತು ಮ್ಯಾಕ್‌ ಟ್ರಕ್ಸ್‌ ಕಂಪನಿಗಳನ್ನು 2001ರಂದು ಕೊಂಡಿದ್ದರಿಂದ, ವಿಶಾಲವಾದ ಉತ್ಪನ್ನಗಳನ್ನು ಒಳಗೊಂಡ ಯೂರೋಪಿನ ಅತಿದೊಡ್ಡ ಮತ್ತು ವಿಶ್ವದ ಎರಡನೇ ಅತಿದೊಡ್ಡ ಭಾರಿ ಟ್ರಕ್‌ಗಳ ಉತ್ಪಾದಕ ಕಂಪನಿಯು ಸೃಷ್ಟಿಯಾದಂತಾಯಿತು. ಮ್ಯಾಕ್‌ ಉತ್ತರ ಅಮೆರಿಕಾದಲ್ಲಿ ಅತ್ಯಂತ ಪ್ರಸಿದ್ಧ ಟ್ರಕ್‌ ಬ್ರ್ಯಾಂಡ್‌ ಆದರೆ ರೆನಾಲ್ಟ್‌ ಟ್ರಕ್ಸ್‌ ದಕ್ಷಿಣ ಯೂರೋಪ್‌ನಲ್ಲಿ ವಿಶೇಷ ಸ್ಥಾನವನ್ನು ಪಡೆದಿದೆ.[ಸೂಕ್ತ ಉಲ್ಲೇಖನ ಬೇಕು] ಜಪಾನಿನ ಯುಡಿ ಟ್ರಕ್ಸ್‌ ಹಗುರ, ಮಧ್ಯಮ ಮತ್ತು ಭಾರೀ ವಾಹನಗಳನ್ನು ಹಾಗೆಯೇ ಬಸ್ಸುಗಳು ಮತ್ತು ಬಸ್ಸು ಚಾಸಿಸ್‌, ಎಂಜಿನ್‌ಗಳು, ವಾಹನ ಭಾಗಗಳು ಮತ್ತು ವಿಶೇಷೋದ್ದೇಶ ವಾಹನಗಳನ್ನು ಮಾರಾಟ ಮಾಡುತ್ತದೆ.

ವೋಲ್ವೋ ಬಸ್‌ ಕಾರ್ಪೋರೇಷನ್‌ ಒಡೆತನದ ಪ್ರಿವೋಸ್ಟ್‌ ಕಾರ್‌ ಉತ್ತರ ಅಮೆರಿಕಾದಲ್ಲಿ ಪ್ರೀಮಿಯಮ್‌ ಪ್ರವಾಸಿ ಕೋಚ್‌ಗಳ ಮತ್ತು ಉನ್ನತ ಮಟ್ಟದ ಮೊಟಾರ್‌ಹೋಮ್ಸ್‌ ಮತ್ತು ವಿಶಿಷ್ಟತೆಯ ರೂಪುಕೊಡುವ ಬಸ್‌ ಶೆಲ್‌ಗಳ ಅತಿ ದೊಡ್ಡ ಉತ್ಪಾದಕರು. ಪ್ರಿವೋಸ್ಟ್‌ನ ಭಾಗವಾದ ನೋವಾ ಬಸ್‌ ಕಂಪನಿಯು ಉತ್ತರ ಅಮೆರಿಕಾದ ನಗರ ಟ್ರ್ಯಾನ್ಸಿಟ್‌ ಬಸ್ಸುಗಳ ವಿನ್ಯಾಸ, ಉತ್ಪಾದನೆ ಮತ್ತು ಮಾರಾಟದಲ್ಲಿ ಅಗ್ರಪಂಕ್ತಿಯಲ್ಲಿದೆ.

ಇವುಗಳಲ್ಲದೇ ಗ್ರೂಪ್‌ ಅನೇಕ ವ್ಯಾಪಾರ ಘಟಕಗಳನ್ನು ಹೊಂದಿವೆ:

  • ವೋಲ್ವೋ ಭಾಗಗಳು (ಬಿಡಿ ಭಾಗಗಳು, ವೋಲ್ವೋ ಗ್ರೂಪ್ ಕಂಪನಿಗಳಲ್ಲಿಯೇ ಮಾರಾಟದ ನಂತರದ ಬೆಂಬಲ ಸೇವೆಯನ್ನು ನಿರ್ವಹಿಸುವಿಕೆ)
  • ವೊಲ್ವೋ ಮಾಹಿತಿ ತಂತ್ರಜ್ಞಾನ (ಮಾಹಿತಿ ತಂತ್ರಜ್ಞಾನ ಸೇವೆಗಳು, ವೋಲ್ವೋ ಗ್ರೂಪ್‌ನ ಕಂಪನಿಗಳಿಗೆ ಹೊಸ ತಂತ್ರಜ್ಞಾನ ಮತ್ತು ವ್ಯಾಪಾರ ಪರಿಹಾರಗಳನ್ನು ಅಭಿವೃದ್ಧಿಪಡಿಸಿವುದು)
  • ವೋಲ್ವೋ ಪವರ್‌ಟ್ರೇನ್‌ (ವೋಲ್ವೋ ಗ್ರೂಪ್‌ನ ಡೀಸೆಲ್‌ ಎಂಜಿನ್‌, ಟ್ರಾನ್ಸ್‌ಮಿಷನ್‌ಗಳು ಮತ್ತು ಆಕ್ಸಲ್‌ಗಳ ಅಭಿವೃದ್ಧಿಯ ಜವಾಬ್ದಾರಿ)
  • ವೋಲ್ವೋ 3ಪಿ (ಉತ್ಪನ್ನ ಯೋಜನೆ, ಉತ್ಪನ್ನ ಅಭಿವೃದ್ಧಿ, ಮತ್ತು ವೋಲ್ವೋ ಗ್ರೂಪ್‌ನ ಎಲ್ಲ ಟ್ರಕ್‌ ವ್ಯವಹಾರಗಳಿಗೆ ಕೊಂಡುಕೊಳ್ಳುವ ಜವಾಬ್ದಾರಿ)
  • ವೋಲ್ವೋ ಲಾಗಿಸ್ಟಿಕ್ಸ್‌ (ವಿಶ್ವಾದ್ಯಂತ ಲೋಹದ ಮತ್ತು ಗಾಳಿ-ಸಂಬಂಧಿತ ಕಾರ್ಖಾನೆಗಳಿಗೆ logistic ಪರಿಹಾರಗಳನ್ನು ಯೋಜಿಸುತ್ತದೆ ಮತ್ತು ಒದಗಿಸುತ್ತದೆ)
  • ವೋಲ್ವೋ ತಂತ್ರಜ್ಞಾನ ವರ್ಗಾವಣೆ (ವೋಲ್ವೋ ಗ್ರೂಪ್‌ನ ಕಂಪನಿಗಳಿಗೆ ಪ್ರಸ್ತುತವಾದ ಹೊಸ ವ್ಯವಹಾರಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಅವುಗಳನ್ನು ಬೆಂಬಲಿಸುವುದು)
  • ವೋಲ್ವೋ ವ್ಯಾಪಾರ ಸೇವೆಗಳು (ವೋಲ್ವೋ ಗ್ರೂಪ್‌ನ ಕಂಪನಿಗಳ ಆರ್ಥಿಕ ಆಡಳಿತಕ್ಕೆ ಕಡಿಮೆ ಖರ್ಚಿನ ಮತ್ತು ಉತೃಕ್ಷ್ಟ ಗುಣಮಟ್ಟದ ಸೇವೆಗಳನ್ನು ನಿರ್ವಹಿಸುವುದು)
  • ವೋಲ್ವೋ ಖಜಾನೆ (ವೋಲ್ವೋದ ಹಣಕಾಸು ನಿರ್ವಹಣೆ)
  • ವೋಲ್ವೋ ಈವೆಂಟ್‌ ನಿರ್ವಹಣೆ, ಇದು ವೋಲ್ವೋ ಓಷನ್‌ ರೇಸ್‌ ಸೇರಿದಂತೆ ಪ್ರಾಯೋಜಿತ ಚಟುವಟಿಕೆಗಳನ್ನು ಸಮನ್ವಯ ಮಾಡುತ್ತದೆ.

ಮುಂಚೆ ವೋಲ್ವೋ ಗ್ರೂಪ್‌ ಈ ವ್ಯಾಪಾರಗಳ ಉಪಸಂಸ್ಥೆಗಳನ್ನೂ ಹೊಂದಿದ್ದವು:

1981ರಿಂದ 1997ರವರೆಗೆ ವೋಲ್ವೋ ಗ್ರೂಪ್‌ ಅನೇಕ ಸಹಕಾರಿ ಕಂಪನಿಗಳನ್ನು ಒಳಗೊಂಡಿತ್ತು, ಅವು ತಾವೇ ಕಾರ್ಪೋರೇಟ್‌ ಗ್ರೂಪ್‌ಗಳಾಗಿದ್ದವು:

ಟ್ರೇಡ್‌ಮಾರ್ಕ್‌

[ಬದಲಾಯಿಸಿ]
ವೊಲ್ವೊ ಲೊಗೊ
ವೋಲ್ವೋ ಟ್ರೇಡ್‌ಮಾರ್ಕ್

ವೋಲ್ವೋ ಟ್ರೇಡ್‌ಮಾರ್ಕ್ ಹೋಲ್ಡಿಂಗ್ ಎಬಿಯ ಮಾಲೀಕತ್ವವನ್ನು ಸಮಾನವಾಗಿ ಎಬಿ ವೋಲ್ವೋ ಮತ್ತು ವೋಲ್ವೋ ಕಾರ್ ಕಾರ್ಪೋರೇಶನ್ ಹಂಚಿಕೊಂಡಿವೆ.[೧೦]

ಕಂಪನಿಯ ಪ್ರಮುಖ ಚಟುವಟಿಕೆ ಎಂದರೆ ವೋಲ್ವೋ ಟ್ರೇಡ್‌ಮಾರ್ಕ್‌ಗಳನ್ನು (ವೋಲ್ವೋ , ವೋಲ್ವೋ ಪರಿಕರ ಗುರುತುಗಳು (ಗ್ರಿಲ್‌ ತುಂಡು ಮತ್ತು ಕಬ್ಬಿಣದ ಗುರುತು) ವೋಲ್ವೋ ಕ್ಷೇತ್ರ ಮತ್ತು ವೋಲ್ವೋ ಪೆಂಟಾ ) ಅವುಗಳ ಮಾಲೀಕರ ಪರವಾಗಿ ಖರೀದಿಸುವುದು, ದುರಸ್ತಿ ಮಾಡುವುದು, ಸಂರಕ್ಷಿಸುವುದು ಮತ್ತು ಜೋಪಾನಮಾಡುವುದು ಮತ್ತು ಆ ಹಕ್ಕುಗಳ ಪರವಾನಗಿಯನ್ನು ಮಾಲೀಕರಿಗೆ ಒದಗಿಸುವುದು. ದಿನನಿತ್ಯದ ಕಾರ್ಯಗಳನ್ನು ಟ್ರೇಡ್‌ಮಾರ್ಕ್‌ ನೋಂದಾವಣೆಗಳ ವಿಶ್ವ ಖಾತೆಯ ಮೇಲೆ ಕೇಂದ್ರೀಕರಿಸಲಾಗುತ್ತದೆ ಮತ್ತು ವೋಲ್ವೋ ಟ್ರೇಡ್‌ಮಾರ್ಕ್‌ಗಳ ನೋಂದಾವಣೆ ರಕ್ಷಣೆಯನ್ನು ಸಾಕಷ್ಟು ವಿಸ್ತರಿಸುವುದು.

ಅಕ್ರಮ ನೋಂದಾವಣೆಯ ವಿರುದ್ಧ ಮತ್ತು (ನಕಲು ಮಾಡುವುದೂ ಒಳಗೊಂಡಂತೆ) ವೋಲ್ವೋನ ಅಥವಾ ವೋಲ್ವೋ ಟ್ರೇಡ್‌ಮಾರ್ಕ್‌ಅನ್ನು ಹೋಲುವ ಟ್ರೇಡ್‌ಮಾರ್ಕ್‌ಗಳನ್ನು ಬಳಸುವುದರ ವಿರುದ್ಧ ವಿಶ್ವದಾದ್ಯಂತ ಕ್ರಮ ಕೈಗೊಳ್ಳುವುದು ಕೂಡ ಒಂದು ಪ್ರಮುಖ ವ್ಯವಹಾರ.[೧೧]

ವೋಲ್ವೋ ಬ್ರ್ಯಾಂಡ್‌

[ಬದಲಾಯಿಸಿ]

ಬ್ರ್ಯಾಂಡ್‌ನ[೧೨] ಅಭಿವೃದ್ಧಿ ತಂತ್ರಗಳು ಹಿಂದೆ ವಿಟ್‌ಬ್ರೆಡ್‌ ಅರೌಂಡ್‌ ದ ವರ್ಲ್ಡ್‌ ಎಂದು ಪ್ರಸಿದ್ಧವಾಗಿದ್ದ sailing race ವೋಲ್ವೋ ಓಷನ್‌ ರೇಸ್‌[೧] ಅನ್ನು ಒಳಗೊಂಡಿದೆ. ವೋಲ್ವೋ ಮಾಸ್ಟರ್ಸ್‌ ಮತ್ತು ವೋಲ್ವೋ ಚೈನಾ ಓಪನ್‌ ಮೊದಲಾದ ಪ್ರಮುಖ ಚ್ಯಾಂಪಿಯನ್‌ಶಿಪ್‌ಗಳನ್ನೊಳಗೊಂಡಂತೆ ಪ್ರಪಂಚದಾದ್ಯಂತ ಗಾಲ್ಫ್‌ ಟೂರ್ನಮೆಂಟ್‌ಗಳನ್ನು ಪ್ರಾಯೋಜಿಸುವ ಮೂಲಕ ತನ್ನ ಶ್ರೀಮಂತ ಚಿತ್ರಣವನ್ನು ತೋರಿಸಿಕೊಳ್ಳಲು ಬಯಸುತ್ತದೆ.

ವೊಲ್ವೊ ಯುಡಿ ಬಸ್ - ಬೆಂಗಳೂರು ನಗರ ಸಾರಿಗೆ ಬಸ್(ಬೆಂಮಸಾಸಂ)
ವೊಲ್ವೊ ಯುಡಿ ಬಸ್ - ಬೆಂಗಳೂರು ನಗರ ಸಾರಿಗೆ ಬಸ್

2001–2002ರಲ್ಲಿ ವಿಶ್ವದ ಪ್ರಮುಖ ದೋಣಿ ಪಂದ್ಯ ವೋಲ್ವೋ ಓಷನ್‌ ರೇಸ್‌ವನ್ನು ಮೊಟ್ಟಮೊದಲ ಬಾರಿಗೆ ಪ್ರಾಯೋಜಿಸಿತು. ವೋಲ್ವೋ ಐಎಸ್‌ಎಎಫ್‌ಗೆ ದೀರ್ಘಕಾಲದ ಬದ್ಧತೆ ಸಹಾ ಇತ್ತು ಮತ್ತು 1997ರಿಂದಲೂ ವೋಲ್ವೋ/ಐಎಸ್‌ಎಫ್‌ ವಿಶ್ವ ಯುವ ದೋಣಿ ಚ್ಯಾಂಪಿಯನ್‌ಶಿಪ್‌ನಲ್ಲಿ ಕೂಡ ಪಾಲ್ಗೊಳ್ಳುತ್ತಿದ್ದಾರೆ.

ಬೇಸಿಗೆಯ ಸಮಯದಲ್ಲಿ ಈಸ್ಟ್‌ಹ್ಯಾಂಪ್‌ಟನ್‌ ನಗರದಲ್ಲಿ ವೊಲ್ವೊ ಅನೇಕ ಪೋಲೊ ಪಂದ್ಯಗಳನ್ನು ಪ್ರಾಯೋಜಿಸುತ್ತದೆ. ಸೌದಿ-ಅರೇಬಿಯಾದ ರಾಜನು ತನ್ನ ಅತ್ಯುತ್ತಮ ಕುದುರೆಗಳೊಂದಿಗೆ ಈ ಪಂದ್ಯಗಳಲ್ಲಿ ಪಾಲ್ಗೊಳ್ಳುತ್ತಾನೆ.

ಷೋ ಜಂಪಿಂಗ್‌ ವಿಶ್ವ ಕಪ್‌ ಪಂದ್ಯವು 1979ರಲ್ಲಿ ಪ್ರಾರಂಭವಾದಾಗಿನಿಂದ 1999ರವರೆಗೆ ವೋಲ್ವೋ ಗ್ರೂಪ್‌ ಆ ಪಂದ್ಯಗಳನ್ನು ಪ್ರಾಯೋಜಿಸಿತು. ಕಂಪನಿಯು ಸಂಸ್ಕೃತಿಯನ್ನು ಕೂಡ ಪ್ರಾಯೋಜಿಸುತ್ತದೆ, ಉದಾಹರಣೆಗೆ ಗೋಟೆನ್ಬರ್ಗ್ ಒಪೆರಾ[೧೩] ಮತ್ತು ಗೊಠೆನ್‌ಬರ್ಗ್‌ ಸಿಂಫೋನಿ ಆರ್ಕೆಸ್ಟ್ರಾ.[೧೪][೧೫][೧೬]

ಇದನ್ನೂ ನೋಡಿ

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]
  1. ೧.೦ ೧.೧ ೧.೨ ೧.೩ ೧.೪ ೧.೫ "Annual Report 2009" (PDF). Volvo. Archived from the original (PDF) on 2012-02-19. Retrieved 2010-04-03.
  2. "Volvo's founders : Volvo Group - Global". Volvo.com. 1927-04-14. Archived from the original on 2009-05-22. Retrieved 2009-06-12.
  3. ೩.೦ ೩.೧ "Historic time-line : Volvo Group - Global". Volvo.com. Archived from the original on 2009-05-30. Retrieved 2009-06-12.
  4. "ನಾಸ್ಡಾಕ್‌ದಿಂದ ತೆಗೆದು ಹಾಕಲು ಎಬಿ ವೋಲ್ವೋ ಅರ್ಜಿ ಹಾಕಿದೆ - Forbes.com". Archived from the original on 2007-10-16. Retrieved 2010-07-08.
  5. Clark, Andrew (2009-10-28). "Ford set to offload Volvo to Chinese carmaker Zhejiang Geely | Business | guardian.co.uk". London: Guardian. Retrieved 2009-12-04.
  6. "ವೋಲ್ವೋ 80 ವರ್ಷಗಳು". Archived from the original on 2009-10-22. Retrieved 2010-07-08.
  7. ೭.೦ ೭.೧ ೭.೨ ಜಾರ್ಜ್ಗಾನೊ, ಜಿ. ಎನ್. ಕಾರ್ಸ್: ಅರ್ಲಿ ಆ‍ಯ್‌೦ಡ್ ವಿಂಟೇಜ್, 1886–1930 . (ಲಂಡನ್: ಗ್ರಾಂಜ್-ಯುನಿವರ್ಸೆಲ್, 1985)
  8. "Volvo 80 years : Volvo Group - Global". Volvo.com. Archived from the original on 2009-05-04. Retrieved 2009-06-12.
  9. "Volvo Annual Report 1999". .volvo.com. Archived from the original on 2011-07-17. Retrieved 2009-06-12.
  10. "ವೋಲ್ವೋ ವಾರ್ಷಿಕ ವರದಿ 1999". Archived from the original on 2012-03-16. Retrieved 2010-07-08.
  11. "ವೋಲ್ವೋ ಬ್ರ್ಯಾಂಡ್ ಹೆಸರು, ವೋಲ್ವೋ ವಾರ್ಷಿಕ ವರದಿ 1999". Archived from the original on 2011-07-17. Retrieved 2010-07-08.
  12. "ವೋಲ್ವೋ ಬ್ರ್ಯಾಂಡ್". Archived from the original on 2008-08-04. Retrieved 2010-07-08.
  13. "GöteborgsOperan". Opera.se. 2009-06-02. Retrieved 2009-06-12.
  14. "Göteborgs Symfoniker" (in (Swedish)). Gso.se. Retrieved 2009-06-12.{{cite web}}: CS1 maint: unrecognized language (link)
  15. "Sponsorships : Volvo Group - Global". Volvo.com. Archived from the original on 2008-07-23. Retrieved 2009-06-12.
  16. "ವೋಲ್ವೋ ಪ್ರಾಯೋಜಕತ್ವಗಳು". Archived from the original on 2008-07-23. Retrieved 2010-07-08.


ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಟೆಂಪ್ಲೇಟು:Portal

"https://kn.wikipedia.org/w/index.php?title=ವೋಲ್ವೋ&oldid=1116485" ಇಂದ ಪಡೆಯಲ್ಪಟ್ಟಿದೆ