ವಿಷಯಕ್ಕೆ ಹೋಗು

"ಆಂಗ್ಲ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕ್ರೆಡೆನ್ಸ್
(Removing link(s) to "United Kingdom": unwanted links. (TW))
(ಕ್ರೆಡೆನ್ಸ್)
ಡೇನರ ಆಕ್ರಮಣದ ಅನಂತರ ಇಂಗ್ಲೆಂಡಿನಲ್ಲಿ ಸಂಭವಿಸಿದ ಅತಿದೊಡ್ಡ ಘಟನೆಯೆಂದರೆ 1066ರಲ್ಲಿ ಫ್ರಾನ್ಸಿನ ನಾರ್ಮಂಡಿ ಪ್ರಾಂತ್ಯದ ವಿಲಿಯಂ ಆ ದೇಶಕ್ಕೆ ಮುತ್ತಿಗೆ ಹಾಕಿ ಗೆದ್ದು ಫ್ರೆಂಚ್ ಆಡಳಿತವನ್ನು ಸ್ಥಾಪಿಸಿದ್ದು. ನಾರ್ಮಂಡಿ ಪ್ರಾಂತ್ಯದವರೂ ಆ್ಯಂಗ್ಲೊ-ಸ್ಯಾಕ್ಸನರು, ಡೇನರು ಮೊದಲಾದವರ ಹಾಗೆಯೇ ಉತ್ತರದಿಂದ ಬಂದವರೇ. ಆದರೆ ಇಂಗ್ಲೆಂಡಿಗೆ ಬಂದ ಔತ್ತರೇಯರಂತಲ್ಲದೆ ಅವರು ತಾವು ಗೆದ್ದ ದೇಶದ ಜನರ ಭಾಷೆಯನ್ನೂ ಜೀವನಕ್ರಮವನ್ನೂ ಸ್ವೀಕರಿಸಿದ್ದವರು. ತತ್ಫಲವಾಗಿ ಅವರು ಆಡುತ್ತಿದ್ದ ಭಾಷೆಯೂ ಫ್ರೆಂಚ್ ಭಾಷೆಯೇ-ಅದರ ಅಶುದ್ಧವಾದ ಒಂದು ರೂಪ. ವಿಲಿಯಂ ಇಂಗ್ಲೆಂಡಿನ ಅಧಿಪತಿಯಾದಾಗ ಅವನೊಡನೆ ಈ ನಾರ್ಮನ್ ಫ್ರೆಂಚ್ ಜನರ ಮತ್ತು ಅವರ ಭಾಷೆಯ ಪ್ರಾಬಲ್ಯ ಅಲ್ಲಿ ಆರಂಭವಾಗಿ ಸುಮಾರು ನಾಲ್ಕು ಶತಮಾನಗಳ ಕಾಲ ಮುಂದುವರಿಯಿತು. ಇದರಿಂದ ಇಂಗ್ಲಿಷಿನಲ್ಲಿ ಕ್ರಾಂತಿಕಾರಕವಾದ ಬದಲಾವಣೆಗಳಾದುವು. ಇಂಗ್ಲಿಷ್ ವ್ಯಾಕರಣ ನಿಯಮಗಳು ಸಡಿಲಗೊಂಡು ಸುಲಭವಾದವು. ಉದಾಹರಣೆಗೆ, ಲಿಂಗಭೇದಗಳು ಸ್ತ್ರೀ, ಪುರುಷ, ನಪುಂಸಕ ಎಂದು ಮೂರೇ ಆದುದಲ್ಲದೆ ಪದಗಳಿಗೆ ಲಿಂಗಭೇದಗಳನ್ನು ಆರೋಪಿಸುವ ಪದ್ಧತಿಯಿಲ್ಲದಂತಾಯಿತು. ವಾಕ್ಯದಲ್ಲಿ ಪದಗಳ ವಿನ್ಯಾಸ ಸರಳವಾಯಿತು. ವಿಭಕ್ತಿ ಪ್ರತ್ಯಯಗಳ ಪ್ರಯೋಗ ಕ್ರಮೇಣ ಕಡಿಮೆಯಾಗಿ ಕೊನೆಗೆ ನಿಂತೇ ಹೋಯಿತು. ಇವೆಲ್ಲ ಬದಲಾವಣೆಗಳಿಗೂ ನಾರ್ಮನ್ನರ ಆಕ್ರಮಣ ಒಂದೇ ಕಾರಣವೆಂದಲ್ಲ. ಆದರೆ ಅವು ಅದರಿಂದ ತ್ವರಿತಗೊಂಡುದು ನಿಸ್ಸಂದೇಹ. ನಾರ್ಮನ್ ಆಡಳಿತದ ಸ್ಥಾಪನೆಯಿಂದ ಇಂಗ್ಲಿಷಿನಲ್ಲಿ ಆದ ಅತ್ಯಂತ ಪರಿಣಾಮಕಾರಕವಾದ ಮಾರ್ಪಾಡೆಂದರೆ ಆ ಭಾಷೆಯ ಪದಸಂಪತ್ತಿನ ವೃದ್ಧಿ. ಅದುವರೆಗೂ ಆ್ಯಂಗ್ಲೊ ಸ್ಯಾಕ್ಸನ್ ಭಾಷೆಯೊಂದನ್ನೇ ನಂಬಿಕೊಡಿದ್ದ ಇಂಗ್ಲಿಷ್ ಸಾವಿರಾರು ಫ್ರೆಂಚ್ ಪದಗಳನ್ನು ತೆಗೆದುಕೊಂಡಿತು. ಅದಕ್ಕಿಂತಲೂ ಹೆಚ್ಚಾಗಿ ಹೇಗೆ ಪರಭಾಷೆಗಳಿಂದ ಬರುವ ಶಬ್ದಸಂಪತ್ತಿಗೆ ಆಶ್ರಯವೀಯುವ ಅಭ್ಯಾಸ ಅದರಲ್ಲಿ ಬೆಳೆದು ಮುಂದೆಯೂ ಅದರ ಶ್ರೀಮಂತಿಕೆ ಹೆಚ್ಚಲು ಅವಕಾಶವಾಯಿತು. ಸೈನಿಕ ವಲಯ, ಲೌಕಿಕ ಆಡಳಿತ, ಧಾರ್ಮಿಕ ವ್ಯವಸ್ಥೆ, ನ್ಯಾಯ ವ್ಯವಹಾರ, ಸಾಮಾಜಿಕ ಜೀವನ, ಆಹಾರ ಪಾನೀಯಗಳು ಮೊದಲಾದ ನಾನಾ ಕ್ಷೇತ್ರಗಳಲ್ಲಿ ಫ್ರೆಂಚ್ ಪದಗಳು ಇಂಗ್ಲೆಂಡಿಗೆ ತಂಡತಂಡವಾಗಿ ಬಂದವು. ಅನೇಕ ತಲೆಮಾರುಗಳ ಕಾಲ (14ನೆಯ ಶತಮಾನದ ಮಧ್ಯಭಾಗದವರೆಗೆ) ಫ್ರೆಂಚ್ ಭಾಷೆ ತಾನೇ ತಾನಾಗಿ ಇಂಗ್ಲೆಂಡಿನ ಆಳರಸರ, ಆಡಳಿತಗಾರರ, ಶ್ರೀಮಂತವರ್ಗದವರ ಭಾಷೆಯಾಗಿತ್ತು. ಅವರೆಲ್ಲ ಇಂಗ್ಲೆಂಡಿನಲ್ಲೇ ನೆಲೆಸಿ ಇಂಗ್ಲಿಷರೇ ಆದುದರಿಂದ ಆ ಭಾಷೆಯ ಪದಗಳೂ ಇಂಗ್ಲಿಷಿನ ಶಬ್ದಭಂಡಾರವನ್ನು ಸೇರಿ ಅದನ್ನು ಬಹುಮುಖಿಯಾಗಿ ಮಾಡಿದವು. ಇಂದಿಗೂ ಇಂಗ್ಲಿಷ್ ಶಬ್ದಕೋಶದಲ್ಲಿ ದೊಡ್ಡ ಪಾಲು ಫ್ರೆಂಚ್ ಭಾಷೆಯಿಂದ ಬಂದ ಪದಗಳಾಗಿವೆ. ಈ ಪದಗಳೆಷ್ಟೋ ಮೂಲತಃ ಲ್ಯಾಟಿನ್ ಪದಗಳು: ಆ ಭಾಷೆಯಿಂದ ಫ್ರೆಂಚಿಗೆ ಬಂದಿದ್ದು ಫ್ರೆಂಚಿನಿಂದ ಇಂಗ್ಲಿಷಿನ ಮೂಲಕ ನಮ್ಮ ದೇಶದಲ್ಲಿ ಕೂಡ ಅವು ಬಳಕೆಗೆ ಬಂದಿವೆ. ಸ್ಯೂಟ್, ಪ್ಲೀಡ್, ಜಡ್ಜ್, ಜ್ಯೂರಿ,ಟಿನ್ಯೂರ್, ಮ್ಯಾರಿ, ಮ್ಯಾರಿಜ್, ಪ್ಯುನಿ, ಕ್ಲರ್ಜಿ, ಏಂಜಲ್, ಫ್ರಯರ್, ಸರ್ವಿಸ್, ಸೇಂಟ್, ರೆಲಿಕ್, ಫೀಸ್ಟ್, ಸ್ಯಾಕ್ರಿಫೈಸ್, ಪ್ರೇಯರ್, ಸೆರ್ಮನ್, ಪ್ರೀಚ್, ಪಾರ್ಲಿಮೆಂಟ್, ಸಾವರಿನ್, ಸ್ಟೇಟ್, ಗೌರ್ನಮೆಂಟ್, ಕೌನ್ಸಿಲ್, ಕೌನ್ಸೆಲ್, ಎಕ್ಸ್ಚೆಕರ್, ಛಾನ್ಸಲರ್, ಮಿನಿಸ್ಟರ್, ಆರ್ಮರ್, ಬ್ಯಾನರ್, ಸೊಲ್ಜರ್ ಆಫೀಸರ್, ಬ್ಯಾಟ್ಲ್, ವಾರ್, ಪೀಸ್, ಅಸಾಲ್ಟ್, ಸಾರ್ಜೆಂಟ್, ಲೆಫ್ಟಿನೆಂಟ್, ಎನಿಮಿ, ಎಸ್ಕೇಪ್, ನೇವಿ, ಮಾರ್ಚ್, ವೈಕೌಂಟ್, ಬ್ಯಾರನ್, ಡ್ಯೂಕ್, ಪ್ರಿನ್ಸ್, ಕರ್ಟಿಸಿ, ಸ್ಕೂಲ್-ಇವೆಲ್ಲ ಫ್ರೆಂಚ್ ಪದಗಳು. ಅನೇಕ ಹೊಸ ವೃತ್ತಗಳೂ ಅವುಗಳಿಗೆ ಸಂಬಂಧಪಟ್ಟ ಪದಗಳೂ ಫ್ರೆಂಚರಿಂದ ಇಂಗ್ಲೆಂಡಿಗೆ ಬಂದುವು - ಹೇಬರ್ ಡ್ಯಾಷರ್, ಡ್ರೇಪರ್ ಮೊದಲಾದವು. ಸುಖೋಪಕರಣಗಳಾದ ಗೌನ್, ವೇಲ್, ಕ್ಲೋಕ್, ಕರ್ಚಿಫ್, ಎಂಬ್ರಾಯ್ಡರಿ, ಜೂಯೆಲ್ ಮೊದಲಾದವೂ ಫ್ರೆಂಚ್ನಿಂದ ಬಂದುವೇ. ಫ್ರೆಂಚ್ ಯಜಮಾನರಿಗೆ ಆಹಾರ ಒದಗಿಸುತ್ತ್ತಿದ್ದವರು ಇಂಗ್ಲಿಷ್ ಆಳುಗಳು. ಯಜಮಾನರು ಬೀಫ್ (ಎತ್ತು). ವೀಲ್ (ಜಿಂಕೆ), ಮಟನ್ (ಕುರಿ), ಪೋರ್ಕ್ (ಹಂದಿ) ಇತ್ಯಾದಿಯಾಗಿ ಪ್ರಾಣಿಗಳ ಹೆಸರುಗಳನ್ನು ಸೂಚಿಸುವ ಪದಗಳನ್ನು; ಉಪಯೋಗಿಸುತ್ತಿದ್ದರು. ಅದೇ ಪ್ರಾಣಿಗಳಿಗೆ ಇಂಗ್ಲಿಷರು ಆಕ್ಸ್, ಡೀರ್, ಷೀಪ್, ಸ್ವೈನ್ ಎಂದು ಹೇಳುತ್ತಿದ್ದರು. ಕಾಲಕ್ರಮೇಣ ಎರಡೆರಡು ಪದಗಳೂ ಇಂಗ್ಲಿಷಿನಲ್ಲಿ ಉಳಿದುಕೊಂಡು ಫ್ರೆಂಚ್ ಪದಗಳು ಮಾಂಸಕ್ಕೂ ಇಂಗ್ಲಿಷ್ ಪದಗಳು ಪ್ರಾಣಿಗಳಿಗೂ ಮೀಸಲಾದವು. ಹೀಗೆ ಇಂಗ್ಲಿಷಿನ ಪದಗಳ ಅರ್ಥನಿಷ್ಕೃಷ್ಟತೆ ಹೆಚ್ಚಿತು. ಇಂಥ ಪದಗಳು ಇನ್ನೂ ಅನೇಕ ಬಂದವು. ಉದಾ. ಹಟ್-ಕಾಟೇಜ್, ಹೌಸ್-ಮನ್ಷನ್, ಫ್ರೆಂಡ್ಷಿಪ್-ಏಮಿಟಿ, ಹಾರ್ಟಿ-ಕಾರ್ಡಿಯಲ್, ಎಂಡ್-ಟರ್ಮಿನೇಟ್, ವಿಷ್-ಡಿಸೈರ್, ಹಿಂಡರ್-ಪ್ರ್ರಿವೆಂಟ್. ಇವುಗಳಲ್ಲಿ (ಮೊದಲನೆಯ) ಇಂಗ್ಲಿಷ್ ಪದಗಳೂ (ಎರಡನೆಯ) ಫ್ರೆಂಚ್ ಪದಗಳೂ ಮೊದಮೊದಲು ಒಂದೇ ಅರ್ಥವುಳ್ಳವಾಗಿದ್ದು ಬರುಬರುತ್ತ ಅರ್ಥವ್ಯತ್ಯಾಸವನ್ನು ತಳೆದವು. ಫ್ರೆಂಚ್ ಧಾತುಗಳಿಗೆ ಇಂಗ್ಲಿಷಿನ ಪ್ರತ್ಯಯಗಳನ್ನು ಸೇರಿಸಿ ಹೊಸ ಪದಗಳ ನಿರ್ಮಾಣ ಮಾಡುವುದು ನಡೆಯಿತು. ಉದಾ. ಕ್ಲೋಸ್-ನೆಸ್, ಡ್ಯೂಕ್-ಡಮ್, ಕಂಪ್ಯಾನಿಯನ್-ಷಿಪ್. ಈ ಪದಗಳನ್ನು ತೆಗೆದುಕೊಳ್ಳುವಾಗ ಫ್ರೆಂಚ್ ಭಾಷೆಯಲ್ಲಿ ಅವಕ್ಕಿದ್ದ ಉಚ್ಚಾರಣೆಯನ್ನು ಇಂಗ್ಲಿಷಿನ ಉಚ್ಚಾರಣಾ ರೀತಿಗೆ ಹೊಂದಿಸಿಕೊಳ್ಳಲಾಯಿತು. ಮಧ್ಯಯುಗದಲ್ಲಿ ಬಂದ ಫ್ರೆಂಚ್ ಪದಗಳಿಗೂ ಅನಂತರ ಬಂದ ಪದಗಳಿಗೂ ಇದೇ ವ್ಯತ್ಯಾಸ. ಉದಾಹರಣೆಗೆ, ಇತ್ತೀಚಿನ ಕಾಲದಲ್ಲಿ ಫ್ರೆಂಚ್ ಭಾಷೆಯಿಂದ ಇಂಗ್ಲಿಷಿಗೆ ಬಂದಿರುವ ಕಾನಿಸ್ಯೂರ್, ಅಮೆಟ್ಯೂರ್, ಷೆಫ್, ವ್ಯಾಲೆ, ಗ್ಯರಾಜ್ ಪದಗಳ ಉಚ್ಚಾರಣೆಗಳು ಮೂಲದಲ್ಲಿದ್ದಂತೆಯೇ ಇಂಗ್ಲಿಷಿನಲ್ಲೂ ಇವೆ. ಕೊನೆಯ ಪದ ಗ್ಯರಾಜ್ ಇಂಗ್ಲಿಷ್ ಮೋಟಾರು ಮಾಲೀಕರುಗಳಲ್ಲೂ ಚಾಲಕರಲ್ಲೂ ಹೆಚ್ಚು ಹೆಚ್ಚಾಗಿ ಬಳಕೆಗೆ ಬರುತ್ತಿರುವುದಕ್ಕೆ ಅದರ ಬದಲಾಗುತ್ತ್ತಿರುವ ಉಚ್ಚಾರಣೆ ಸಾಕ್ಷಿ. ಗ್ಯಾರೇಜ್ ಎಂದೂ ಅನೇಕರು ಅದನ್ನು ಈಗ ಉಚ್ಚರಿಸುತ್ತಾರೆ. ಎಂದರೆ ಒತ್ತಡ ಪದದ ಮೊದಲ ಭಾಗದ ಮೇಲೆ ಬೀಳುತ್ತದೆ. ಹೀಗಾಗುವುದು ಇಂಗ್ಲಿಷ್ ಪದಗಳ ಉಚ್ಚಾರಣೆಯ ವೈಶಿಷ್ಟ್ಯ. 16ನೆಯ ಶತಮಾನದಿಂದ ಈಚೆಗೆ ಬ್ರಿಗಂ ಟೀನ್, ರೆಂಡವೋ, ಕಾರ್ಸ್ಯೇರ್, ವಾಲಿ, ವಾಸ್, ಮುಸ್ಟಾಷ್, ಪ್ರಾಮೆನೇಡ್, ಪಿಕಂಟ್, ಟ್ಯಾಬ್ಲೊ, ಬ್ಯಾಲೆ, ಲಿಯೇಸಾನ್, ನಯೀವ್, ಪಾನ್ಷಾನ್, ಎಮಿಗ್ರೆ, ಕೊರ್, ಕೂಲ್ಡಸಾಕ್, ಸಾಲಾನ್, ರೆಸೂಮೆ, ಕ್ಲೀಷೆ, ಎಲೀಟ್, ಫಿಆನ್ಸೆ, ರೆಸಾನ್ಡೆಟರ್, ಕಾಮುಫ್ಲಾಜ್-ಮೊದಲಾದ ಅನೇಕ ಫ್ರೆಂಚ್ ಪದಗಳು ಇಂಗ್ಲಿಷಿಗೆ ಬಂದು ಅದರ ಸಂಪತ್ತನ್ನು ಹೆಚ್ಚಿಸಿವೆ. ಈ ಪದಗಳ ಉಚ್ಚಾರಣೆ ಮೂಲ ಫ್ರೆಂಚಿನ ಉಚ್ಚಾರಣೆಯೇ ಆಗಿರುವುದನ್ನು ಕಾಣಬಹುದು. ಜನಸಾಮಾನ್ಯರಲ್ಲದೆ ವಿದ್ಯಾವಂತರು ವಿಶಿಷ್ಟ ಉದ್ದೇಶಗಳಿಗಾಗಿ ಅವನ್ನು ತೆಗೆದುಕೊಂಡು ಬಳಸಿರುವುದೇ ಇದಕ್ಕೆ ಕಾರಣ.
15ನೆಯ ಶತಮಾನ ಇಂಗ್ಲಿಷ್ ಭಾಷೆಯ ಇತಿಹಾಸದಲ್ಲಿ ಪರ್ವಕಾಲ. ಆ ಅವಧಿಯಲ್ಲಿ ಇಂಗ್ಲಿಷ್ ಪದಗಳು ತಮ್ಮ ವಿಭಕ್ತಿ ಪ್ರತ್ಯಯಗಳನ್ನು ಕಳೆದುಕೊಂಡುವು. ಅಲ್ಲದೆ ಪದಗಳ ಉಚ್ಚಾರಣೆಯಲ್ಲೂ ವಿಫುಲವಾಗಿ ಬದಲಾವಣೆಯಾಯಿತು. ಉಚ್ಚಾರಣೆ ಮತ್ತು ಒತ್ತಡ ನಿಷ್ಕೃಷ್ಟವಾಗಿಲ್ಲದಿದ್ದಾಗ ಉತ್ತಮ ಕಾವ್ಯ ಬರುವುದು ಅಸಂಭವವಾಯಿತು. ತತ್ಕಾರಣ 15ನೆಯ ಶತಮಾನದ ಇಂಗ್ಲಿಷ್ ಸಾಹಿತ್ಯ ಕ್ಷೇತ್ರ ಬರಡಾಯಿತು. ಪರಿಸ್ಥಿತಿ ಉತ್ತಮಗೊಂಡು ಪದಗಳ ಉಚ್ಚಾರಣೆಯಲ್ಲಿ ಒಂದು ಸ್ತಿಮಿತತೆ ತಲೆದೋರಿದ ಮೇಲೆಯೇ ಮತ್ತೆ ಒಳ್ಳೆಯ ಸಾಹಿತ್ಯ-ಅದರಲ್ಲೂ ಕಾವ್ಯ-ಬರತೊಡಗಿದ್ದು. ಇದು ನಡೆದುದು 16ನೆಯ ಶತಮಾನದ ಎರಡನೆಯ ತಲೆಮಾರಿನ ಸುಮಾರಿಗೆ.
16ನೆಯ ಶತಮಾನದ ಇಂಗ್ಲಿಷ್ ಭಾಷೆ, ಸಾಹಿತ್ಯಗಳೆರಡೂ ಇನ್ನೊಂದು ಪ್ರಬಲವಾದ ಪ್ರಭಾವಕ್ಕೆ ಒಳಗಾದುವು. ಆಗ ನಡೆದ ಸಾಂಸ್ಕೃತಿಕ ನವೋದಯವೇ ಅದು. ಇಟಲಿ, ಪ್ರಾಚೀನ ರೋಮ್ ಮತ್ತು ಗ್ರೀಸ್ಗಳ ಸಾಹಿತ್ಯ, ಕಲೆ ಮೊದಲಾದವು ಪಶ್ಚಿಮ ಯುರೋಪಿನ ಜನರ ಮನೋಧರ್ಮದ ಮೇಲೆ ವಿಪುಲವಾದ ಪ್ರಭಾವ ಬೀರಿದ್ದಲ್ಲದೆ ಅವರ ಭಾಷೆಯೂ ಗ್ರೀಕ್ ಮತ್ತು; ಲ್ಯಾಟಿನ್ ಭಾಷೆಗಳಿಂದ ಪದಸಂಪತ್ತನ್ನು ಪಡೆದು ಸಮೃದ್ಧವಾಯಿತು. ಈ ಪದಗಳನ್ನು ತೆಗೆದುಕೊಂಡು ಇಂಗ್ಲಿಷಿನಲ್ಲಿ ಬಳಸಿದವರು ಪಂಡಿತರು-ಪಂಡಿತರಿಗಾಗಿ ಬರೆದ ಪುಸ್ತಕಗಳಲ್ಲಿ. ಆದ್ದರಿಂದ ಮೊದಮೊದಲು ವಿದ್ಯಾವಂತರ ವಲಯಗಳಿಗೆ ಸೀಮಿತವಾಗಿದ್ದ ಈ ಪದಗಳು ವಿದ್ಯೆ ಜನರಲ್ಲಿ ಹರಡಿದಂತೆಲ್ಲ ಸರ್ವಜನಪ್ರಿಯವಾದವು. ಲ್ಯಾಟಿನ್ ಮತ್ತು ಗ್ರೀಕ್ ಪದಗಳನ್ನು ತೆಗೆದುಕೊಳ್ಳುವ ಪ್ರವೃತ್ತಿ ಅಭ್ಯಾಸಗಳಂತೂ ಇಂಗ್ಲಿಷಿನಲ್ಲಿ ಇಂದಿಗೂ ನಿಂತಿಲ್ಲ. ಫ್ರೆಂಚ್ ಪದಗಳೂ ಲ್ಯಾಟಿನ್ ಪದಗಳೂ ಇಂಗ್ಲಿಷಿನ ಶಬ್ದಮಂದಿರದ ಆಧಾರಸ್ತಂಭಗಳಂತಿವೆ. ಎಷ್ಟು ಕ್ಷೇತ್ರಗಳಲ್ಲಿ ಎಷ್ಟು ಬಗೆಯ ಪದಗಳು ಬಂದುವೆಂಬುದು ಕೆಲವು ಉದಾಹರಣೆಗಳನ್ನು ಪರಿಶೀಲಿಸಿದರೆ ವಿದಿತವಾಗುತ್ತದೆ. ಲ್ಯಾಟಿನ್ನಿನ ಇಕ್ವಸ್ ಎಂಬ ಪದದಿಂದ ಇಂಗ್ಲಿಷಿನ ಈಕ್ವಲ್, ಈಕ್ವೇಟರ್, ಈಕ್ವಿವಲೆಂಟ್, ಅಡೆಕ್ವೆಟ್ ಪದಗಳೂ ಅನ್ನಸ್ (ವರ್ಷ) ಪದದಿಂದ ಇಂಗ್ಲಿಷಿನ ಆನ್ಯುಯಲ್, ಬೈಯನಿಯಲ್, ಪೆರಿನಿಯಲ್ ಪದಗಳೂ ಕಾರ್ಪಸ್ ಪದದಿಂದ ಕಾಪ್ರ್ಸ್, ಕೋರ್, ಕಾರ್ಪೊರೇಷನ್, ಕಾರ್ಪುಲೆಂಟ್ ಪದಗಳೂ ಕ್ರೆಡೊದಿಂದ ಕ್ರೀಡ್, ಕ್ರೆಡಿಬಲ್, ಇನ್ಕ್ರೆಡಿಬಲ್, ಕ್ರೆಡೆನ್್ಸಕ್ರೆಡೆನ್ಸ್, ಮಿಸ್ಕ್ರಿಯೆಂಟ್ ಪದಗಳೂ ಮ್ಯಾಗ್ನಸ್ ಪದದಿಂದ ಮೇಜರ್, ಮೇಯರ್, ಮ್ಯಾಗ್ನೇಟ್, ಮ್ಯಾಗ್ನಿಫೈ, ಮ್ಯಾಗ್ನಿಟ್ಯೂಡ್ ಪದಗಳೂ ವೈಭವದಿಂದ ವಿವಿಡ್, ವಿವೇಷಸ್, ರಿವೈವ್, ಸರ್ವೈವ್ ಪದಗಳೂ ಬಂದಿವೆ. ವಾಸ್ತವವಾಗಿ ಇಂಥ ಸಾವಿರಾರು ಉದಾಹರಣೆಗಳನ್ನು ಕೊಡಬಹುದು. ಒಂದು ಲ್ಯಾಟಿನ್ ಮೂಲಪದದಿಂದ ಅನೇಕ ಇಂಗ್ಲಿಷ್ ಪದಗಳು ಹೇಗೆ ಬರಬಹುದೆಂಬುದನ್ನು ಈ ಉದಾಹರಣೆಗಳು ತೋರಿಸುತ್ತವೆ. ಗ್ರೀಕ್ ಭಾಷೆಯಿಂದಲೂ ಇಂಗ್ಲಿಷಿಗೆ ಇದೇ ತೆರನಾದ ಸಹಾಯವಾಗಿದೆ. ವಿದ್ವತ್ಪ್ರಪಂಚಕ್ಕೆ ಸೇರಿದ ನೂರಾರು ಪದಗಳು ಆ ಭಾಷೆಯಿಂದ ಬಂದುವು. ಆಂತ್ರೊಪಾಲಜಿ, ಮಿಸಾಂಚಿತ್ರೋಪ್, ಫಿಲಾಂತ್ರೊಪಿಸ್ಟ್, ಆಟೋಕ್ರಾಟ್, ಆಟೋಗ್ರಾಫ್, ಅನಾಟಮಿ, ಆಟೋಬಯಾಗ್ರಫಿ, ಆಟೊಮೊಬೈಲ್, ಬೈಬಲ್, ಬಿಬ್ಲಿಯಾಗ್ರಫಿ. ಬಿಬ್ಲಿಯೋಮೇನಿಯಕ್, ಇಡಿಯಟ್, ಇಡಿಯಮ್, ಇಡಿಯೊಸಿನ್ಕ್ರಸಿ, ಪೇಥಾಸ್, ಆ್ಯಂಟಿಪತಿ, ಸಿಂಪತಿ, ಪೆಟ್ರಿಫೈ, ಪೆಟ್ರೋಲಿಯಮ್, ಪೆರೆಂತೆಸಿಸ್-ಇವೆಲ್ಲ ಅಂಥ ಪದಗಳೇ. ಗ್ರೀಕಿನಿಂದ ಬಂದಿರುವ ಪದಗಳಲ್ಲಿ ಇವು ಕೇವಲ ಕೆಲವು ಮಾತ್ರ. ಸಂಸ್ಕೃತದ ಮೂಲ ಧಾತುಗಳಿಂದ ನಾವು ಸಂದರ್ಭಾನುಸಾರ ಅನೇಕ ಪದಗಳನ್ನು ರೂಪಿಸಿಕೊಳ್ಳಬಹುದಾಗಿರುವಂತೆ ಗ್ರೀಕ್ ಮೂಲಗಳಿಂದಲೂ ಇಂಗ್ಲಿಷರು ಮಾಡಿದ್ದಾರೆ. ಉದಾ : ಜೆಟಿಯೊ (ನಾನು ಅನ್ವೇಷಿಸುತ್ತೇನೆ) ಎಂಬ ಮೂಲಪದದಿಂದ ಜೆಟೆಮಾ (ಅನ್ವೇಷಣ ವಿಷಯ), ಜೆಟೆಟಿಸ್ (ಅನ್ವೇಷಣ ವಿಧಾನ), ಜೆಟೆಟೀಸ್ (ಅನ್ವೇಷಕ), ಜಟೆಟಿಕೋಸ್ (ಅನ್ವೇಷಣ ಶಕ್ತ ಅಥವಾ ಅನ್ವೇಷಣಾಸಕ್ತ)-ಹೀಗೆ ಪದಗಳನ್ನು ಪಡಯಲಾಗಿದೆ. ಈ ಕೆಲಸ ಇಂದೂ ನಡೆಯುತ್ತಿದೆ. ವಿಜ್ಞಾನಿಗಳು ತಮ್ಮ ಅನ್ವೇಷಣೆಗಳಿಗೂ ತಯಾರಿಕೆಗಳಿಗೂ ಹೊಸ ಹೆಸರುಗಳು ಬೇಕಾದಾಗ ಗ್ರೀಕ್ ಮತ್ತು ಲ್ಯಾಟಿನ್ ಮೂಲಗಳಿಗೆ ಕೈಚಾಚಿ ಅರ್ಥಸೂಚಕವಾದ ಹೆಸರುಗಳನ್ನು ಸೃಷ್ಟಿಸಿದ್ದಾರೆ. ಇವಲ್ಲದೆ ಆಲ್ಪಬೆಟ್, ಡ್ರಾಮ, ಕ್ರೈಟೀರಿಯನ್, ಪಾಲೆಮಿಕ್, ಆರ್ಕೆಸ್ಟ್ರಾ, ಡಾಗ್ಮ, ಮ್ಯೂಸಿಯಂ, ಅಟ್ಲಾಸ್, ಮೊದಲಾದ ಪದಗಳೆಲ್ಲ ಗ್ರೀಕ್ ಭಾಷೆಯಿಂದ ಬಂದಿರುವುವೇ, ಇಂಗ್ಲಿಷಿನಲ್ಲಿ ವಿಜ್ಞಾನ, ಕಲೆ, ಸಾಹಿತ್ಯ ವಿಮರ್ಶೆ, ತತ್ತ್ವಶಾಸ್ತ್ರ ಮೊದಲಾದ ವಿಷಯಗಳನ್ನು ವ್ಯಾಸಂಗ ಮಾಡುವವರೆಲ್ಲರೂ ಗ್ರೀಕ್ ಭಾಷೆಗೆ ಋಣಿಗಳು. ಪೇಲಿಯಂಟಾಲಜಿ, ಹೈಡ್ರೊಸ್ಟ್ಯಾಟಿಕ್ಸ್, ಮೆಗಾಲೋ ಮೇನಿಯಾ ಇತ್ಯಾದಿಯಾಗಿ ಪಾರಿಭಾಷಿಕ ಪದಗಳ ದೊಡ್ಡ ಪಟ್ಟಿಯನ್ನೇ ಕೊಡಬಹುದು. ಈ ಲ್ಯಾಟಿನ್ ಮತ್ತು ಗ್ರೀಕ್ ಪದಗಳ ಬಳಕೆಯ ಪರಿಣಾಮವಾಗಿ ಇಂಗ್ಲಿಷಿನಲ್ಲಿ ಪಂಡಿತಮಾನ್ಯವಾದ ಕ್ಲಿಷ್ಟಶೈಲಿಯೊಂದು ಕಡೆ, ಸಾಧಾರಣರಿಗೆ ಅರ್ಥವಾಗಬಲ್ಲ ಸರಳಶೈಲಿಯೊಂದು ಕಡೆ ಬೆಳೆದುವು. ಕಾಲಕ್ರಮೇಣ ಇವೆರಡೂ ಮಿಳನವಾಗಿ ಸಂದರ್ಭೋಚಿತವಾಗಿ ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳಿಂದ ಬಂದ ಪದಗಳ-ಆದರೆ ಒಟ್ಟಿನ ಮೇಲೆ ಇಂಗ್ಲಿಷ್ ಪದಗಳ-ಬಳಕೆ ವಾಡಿಕೆಯಾಗಿ ಉತ್ತಮವೂ ಎಲ್ಲ ಭಾವಗಳನ್ನೂ ಅರ್ಥಗಳನ್ನೂ ಸೂಚಿಸಬಲ್ಲುದೂ ಆದ ಶೈಲಿ ಬರಹಗಾರರಿಗೂ ಜನರಿಗೂ ಪ್ರ್ರಿಯವಾಗಿವೆ.
ಪ್ರಾಚೀನ ಭಾಷೆಗಳಾದ ಲ್ಯಾಟಿನ್ ಮತ್ತು ಗ್ರೀಕುಗಳಿಗಲ್ಲದೆ ಆಧುನಿಕ ಐರೋಪ್ಯ ಭಾಷೆಗಳಿಗೂ ಇಂಗಿಷ್ ಋಣಿಯಾಗಿದೆ. ಫ್ರೆಂಚ್ ಭಾಷೆಯ ಪ್ರಭಾವವನ್ನು ಕುರಿತು ಆಗಲೇ ಹೇಳಲಾಗಿದೆ. ಇಟ್ಯಾಲಿಯನ್, ಸ್ಪ್ಯಾನಿಷ್, ಪೋರ್ಚುಗೀಸ್, ಜರ್ಮನ್, ಡಚ್, ರಷ್ಯನ್, ಟರ್ಕಿಷ್, ಮೊದಲಾದ ಭಾಷೆಗಳಿಂದಲೂ ಪದಗಳು ಬಂದಿವೆ. ಸಾಹಿತ್ಯ, ಕಲೆ ಮೊದಲಾದ ಕ್ಷೇತ್ರಗಳಿಗೆ ಸೇರಿದ ಪದಗಳು ಇಟ್ಯಾಲಿಯನ್ನಿನಿಂದ ಹೆಚ್ಚಾಗಿ ಬಂದಿರುವುದು ಇಟಲಿ ನವೋದಯದ ತವರುನಾಡಾದುದರಿಂದ. ಸ್ಟೂಡಿಯೊ, ಫ್ರೆಸ್ಕೊ, ಕ್ಯಾರಾಸ್ಕೂರೂ, ರೆಪ್ಸಿಕಾ, ಮಾಟೋ, ಸ್ಟ್ಯಾಂಜಾಕ್ಯುಪೋಲಾ, ಪಯಾಜಾ, ವಾಯ್ಲಿನ್-ಇವೆಲ್ಲ ಇಟ್ಯಾಲಿಯನ್ ಪದಗಳು. ಬೇರೆ ಪದಗಳೂ ಅದರಿಂದ ಬೇಕಾದಷ್ಟು ಬಂದಿವೆ. ಸ್ಫ್ಯಾನಿಷ್ ಭಾಷೆಯಿಂದ ಗ್ರಾಂಡಿ, ನೀಗ್ರೊ, ಪೊಟಾಟೊ, ಎಸ್ಪ್ಲನೇಡ್, ಕೈನ್ಯಾನ್, ರೆನೆಗ್ಯಾಡೊ, ಟೊಬ್ಯಾಕೊ ಮೊದಲಾದ ಪದಗಳೂ ಪೋರ್ಚುಗೀಸ್ ಭಾಷೆಯಿಂದ ಕ್ಯಾಸ್ಟ್, ಪಗೋಡ, ಆಮಾಕೋಕೊ, ವೆರಾಂಡಾ ಮೊದಲಾದ ಪದಗಳೂ ರಷ್ಯನ್ ಭಾಷೆಯಿಂದ ಸ್ಟೆಪ್ಪಿ, ಬಾಲ್ಷೆವಿಕ್ ಪದಗಳೂ ಟರ್ಕಿಷ್ ಭಾಷೆಯಿಂದ ಕಾಫಿ, ಆಗಾ, ಕಿಯಾಸ್ಕ್, ಪಾಷಾ ಮೊದಲಾದವೂ, ಜರ್ಮನ್ ಭಾಷೆಯಿಂದ ಜೀಟ್ಗೀಸ್ಟ್, ಜಿಂಕೆ, ಕಿಂಡರ್ಗಾರ್ಟನ್ ಪದಗಳೂ ಡಚ್ ಭಾಷೆಯಿಂದ ಸಮುದ್ರಯಾನಕ್ಕೆ ಸಂಬಂಧಪಟ್ಟ ಕಮೋಡರ್, ಯಾಟ್, ಹಾಪ್, ಡಾಕ್, ಡಿಕ್ಯ್ಗಳೂ ಚಿತ್ರಲೇಖನಕ್ಕೆ ಸಂಬಂಧಿಸಿದ ಲ್ಯಾಂಡ್ಸ್ಕೇಪ್, ಸ್ಕೆಚ್, ಈಸೆಲ್, ಮೊದಲಾದವೂ ಬಂದಿವೆ. ಆಯಾ ದೇಶದ ಪದಗಳು ಆ ದೇಶಗಳು ಯಾವ ಯಾವ ಕಲೆಗಳಿಗೆ, ಶಾಸ್ತ್ರಗಳಿಗೆ, ಕಾರ್ಯಗಳಿಗೆ ಪ್ರಸಿದ್ಧವಾಗಿವೆ ಎಂಬುದನ್ನು ಸೂಚಿಸುತ್ತವೆ.
ಯುರೋಪಿನ ಭಾಷೆಗಳಲ್ಲದೆ ಅಮೆರಿಕದ ಸಂಯಕ್ತ ಸಂಸ್ಥಾನಗಳಿಂದಲೂ ದಕ್ಷಿಣ ಅಮೆರಿಕದಿಂದಲೂ ಇಂಗ್ಲಿಷ್ ಅನೇಕ ಪದಗಳನ್ನು ತೆಗೆದುಕೊಂಡಿದೆ. ಹೊರನಾಡುಗಳೊಂದಿಗೆ ಇಂಗ್ಲೆಂಡಿನ ಸಂಪರ್ಕ ಹೆಚ್ಚಿದಂತೆಲ್ಲ ಈ ಪದಗಳ ಸಂಗ್ರಹಣ ಹೆಚ್ಚುತ್ತಲೇ ಬಂದಿದೆ. ಅಮೆರಿಕದ ಸಂಯುಕ್ತ ಸಂಸ್ಥಾನಗಳ ಭಾಷೆಯೂ ಇಂಗ್ಲಿಷೇ. ಆದರೆ ಆ ದೇಶಕ್ಕೆ ಯುರೋಪಿನ ನಾನಾ ಪ್ರದೇಶಗಳಿಂದ ವಲಸೆಬಂದ ಜನ ತಮ್ಮ ತಮ್ಮ ಭಾಷೆಗಳ ಪ್ರಭಾವನ್ನು ಅಲ್ಲಿನ ಇಂಗ್ಲಿಷಿನ ಮೇಲೆ ಬೀರಿದ್ದಾರೆ. ಮಾತೃದೇಶವನ್ನು ಬಿಟ್ಟು ಸಾವಿರಾರು ಮೈಲಿಗಳ ದೂರ ಹೋದ ಅಮೆರಿಕದ ಇಂಗ್ಲಿಷ್ ತನ್ನದೇ ಆದ ಕೆಲವು ವೈಶಿಷ್ಟ್ಯಗಳನ್ನು ಪಡೆಯಿತು. ಪದಗಳ ಉಚ್ಚಾರಣೆಯಲ್ಲೇ ಹಲಕೆಲವು ವ್ಯತ್ಯಾಸಗಳು ಕಂಡುಬರುತ್ತವೆ. ಇಂಗ್ಲಿಷಿನಲ್ಲಿ ಈಗ ಫಿಗರ್, ಗೆಟ್, ಕ್ಯಾಚ್ ಎಂದು ಉಚ್ಚಾರಣೆಯಿರುವ ಪದಗಳು ಅಮೆರಿಕದ ಕೆಲವಡೆಗಳಲ್ಲಿ ಫಿ಼ಗ್ಗರ್, ಗಿಟ್, ಕೆಚ್ ಎಂಬ ಉಚ್ಚಾರಣೆ ಪಡೆದಿವೆ. ಹಿಂದೆ ಈ ಪದಗಳು ಇಂಗ್ಲೆಂಡಿನಲ್ಲೂ ಇದೇ ರೀತಿಯ ಉಚ್ಚಾರಣೆಯನ್ನು ಹೊಂದಿದ್ದು ಅನಂತರ ಬದಲಾವಣೆ ಹೊಂದಿದವು. ಅಮೆರಿಕದ ಕೆಲವು ಭಾಗಗಳಲ್ಲಿ ಮಾತೃದೇಶದಲ್ಲೇ ಇಲ್ಲವಾಗಿರುವ ಅಂಥ ಉಚ್ಚಾರಣೆಗಳು ಇನ್ನೂ ಜೀವಂತವಾಗಿವೆ. ಪದಗಳಲ್ಲೂ ವ್ಯತ್ಯಾಸಗಳುಂಟು. ಇಂಗ್ಲಿಷರು ಇಲ್ ಎಂಬುದನ್ನು ಅಮೆರಿಕನ್ನರು ಸಿಕ್ ಎನ್ನುತ್ತಾರೆ. (ಇಂಗ್ಲೆಂಡಿನಲ್ಲಿ ಸಿಕ್ ಎಂದರೆ ವಾಂತಿ ಬರುವಂತಾಗುವುದು ಎಂದರ್ಥ). ಇಂಗ್ಲೆಂಡಿನ ಡ್ರೈವರ್ ಅಮೆರಿಕದ ಇಂಜಿನಿಯರ್, ಇಂಗ್ಲೆಂಡಿನ ಲಗೇಜ್ ಅಮೆರಿಕದ ಬ್ಯಾಗೇಜ್, ಇಂಗ್ಲೆಂಡಿನ ರೈಲ್ವೆ ಅಮೆರಿಕದ ರೈಲ್ರೋಡ್, ಇಂಗ್ಲೆಂಡಿನ ಗಾರ್ಡ್ ಅಮೆರಿಕದ ಕಂಡಕ್ಟರ್ ಆಗುತ್ತವೆ. ಆ ದೇಶದ ಮೂಲನಿವಾಸಿಗಳಾದ ರೆಡ್ ಇಂಡಿಯನ್ನರಿಂದ, ವಲಸೆ ಬಂದು ನೆಲೆಸಿದ ಸ್ಪ್ಯಾನಿಷ್, ಜರ್ಮನ್, ಐರಿಷ್, ಫ್ರಂಚ್, ಮೊದಲಾದವರಿಂದ ಅಲ್ಲಿನ ಇಂಗ್ಲಿಷಿಗೆ ಹಲವಾರು ಪದಗಳು ಬಂದು ಸೇರಿ ಇಂಗ್ಲಿಷ್ ಭಾಷೆಯ ಒಟ್ಟು ಶಬ್ದಸಮೂಹ ಹೆಚ್ಚಿದೆ. ದಕ್ಷಿಣ ಅಮೆರಿಕನ್ನರು ಇಂಗ್ಲಿಷ್ ಕಾಗುಣಿತವನ್ನು ಕೂಡ ಸರಳಗೊಳಿಸಲು ಪ್ರಯತ್ನಿಸಿದ್ದಾರೆ. ಉದಾ: ಅoಟoಡಿ, ಣಡಿಚಿveಟeಡಿ ಪದಗಳು ಇಂಗ್ಲಿಷಿನ ಛಿoಟouಡಿ, ಣಡಿಚಿveಟeಡಿ ಪದಗಳ ಅಮೆರಿಕನ್ ರೂಪಗಳು. ಉಚ್ಚರಿಸದೆ ಇರುವ ಅಕ್ಷರಗಳನ್ನು ಹೀಗೆ ಬಿಡಲಾಗಿದೆ.
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
ANNANTH MURTHY
 
==ಬಾಹ್ಯ ಸಂಪರ್ಕಗಳು==
* [http://www.soundcomparisons.com/ Accents of English from Around the World (University of Edinburgh)] - hear and compare how the same 110 words are pronounced in 50 English accents from around the world
೧೪

edits

"https://kn.wikipedia.org/wiki/ವಿಶೇಷ:MobileDiff/753412" ಇಂದ ಪಡೆಯಲ್ಪಟ್ಟಿದೆ