ವಿಮಲಾ ಮೆನನ್
ವಿಮಲಾ ಮೆನನ್ | |
---|---|
ಜನನ | ಇರಿಂಜಲುಕುಡ, ತ್ರಿಶೂಲ್, ಕೇರಳ, ಭಾರತ | ೭ ಜನವರಿ ೧೯೪೩
ರಾಷ್ಟ್ರೀಯತೆ | ಭಾರತೀಯರು |
ಶಿಕ್ಷಣ ಸಂಸ್ಥೆ | ಕೇರಳ ಕಲಾಮಂಡಲಂ, ಚಿರುತುರತಿ (ಡಿಪ್ಲೋಮಾ ಮೋಹಿನಿಯಾಟ್ಟಂ ಮತ್ತು ಭರತನಾಟ್ಯಂ) |
ವೃತ್ತಿ(ಗಳು) | ಕೇರಲ ನಾಟ್ಯ ಅಕಾಡೆಮಿಯ ನಿರ್ದೇಶಕರು ಮತ್ತು ಪ್ರಾಂಶುಪಾಲರು, ಶಾಸ್ತ್ರೀಯ ನೃತ್ಯ ಬೋಧಕರು ಮತ್ತು ಲೇಖಕರು |
ಸಕ್ರಿಯ ವರ್ಷಗಳು | ೧೯೬೪ ಪ್ರಸ್ತುತ |
ಪ್ರಶಸ್ತಿಗಳು | ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ (೨೦೦೬) ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (೨೦೦೬) ಕೇರಳ ಕಲಾ ಮಂಡಲಂ ಪ್ರಶಸ್ತಿ (೨೦೦೫) ಕೇರಳ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (೧೯೯೧) ವಿಶ್ವಭಾರತೀಯ ಪ್ರಶಸ್ತಿ (೧೯೮೦) ಅಖಿಲ ಕೇರಳ ಸಮಾಜ ಸೇವಾ ಪ್ರಶಸ್ತಿ (೧೯೬೪) |
ಜಾಲತಾಣ | kalamanadalamvimalamenon |
ಕಲಾಮಂಡಲಮ್ ವಿಮಲಾ ಮೆನನ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ವಿಮಲಾ ಮೆನನ್ ಒಬ್ಬ ಭಾರತೀಯ ನೃತ್ಯ ಶಿಕ್ಷಕಿ ಮತ್ತು ಕೇರಳದ ಮೋಹಿನಿಯಟ್ಟಂನಲ್ಲಿ ಪರಿಣತರು. ಅವರು ತಿರುವನಂತಪುರಂನಲ್ಲಿರುವ ಕೇರಳ ನಾಟ್ಯ ಅಕಾಡೆಮಿಯ ಸಂಸ್ಥಾಪಕರು ಮತ್ತು ನಿರ್ದೇಶಕರಾಗಿದ್ದಾರೆ.
ಆರಂಭಿಕ ಜೀವನ ಮತ್ತು ಶಿಕ್ಷಣ
[ಬದಲಾಯಿಸಿ]ವಿಮಲಾ ಮೆನನ್ ಅವರು ಕೇರಳದ ತ್ರಿಶೂರ ಜಿಲ್ಲೆಯ ಇರಿಂಜಲಕುಡದ ಹಳ್ಳಿಯ ಶ್ರೀಮಂತ ಕುಟುಂಬದಲ್ಲಿ ಜನಿಸಿದರು.
ಸಿವಿಲ್ ಇಂಜಿನಿಯರ ಆಗಿರುವ ಎಸ್.ಕೆ. ಕೃಷ್ಣನ ನಾಯರ್ ಮತ್ತು ವಿಶಾಲಾಕ್ಷಿ ಅಮ್ಮ ದಂಪತಿಗಳಿಗೆ ಜನಿಸಿದ ಏಳು ಮಕ್ಕಳಲ್ಲಿ ಅವರು ಎರಡನೆಯವರು.[೧] ವಿಮಲಾ ತನ್ನ ಆರಂಭಿಕ ನೃತ್ಯ ಪಾಠಗಳನ್ನು ತ್ರಿಪುಣಿತುರ ವಿಜಯ ಭಾನುವಿನ ಮಾರ್ಗದರ್ಶನದಲ್ಲಿ ಕಲಿತರು. ವಿಜಯಭಾನು ಅವರು ಕರ್ನಾಟಕ ಸಂಗೀತದಲ್ಲಿ ಹೆಸರು ಗಳಿಸಿದ ಎಂ. ಆರ್. ಮಧುಸೂದನ ಮೆನನ್ ಅವರಲ್ಲಿ ತರಬೇತಿ ಪಡೆದರು. ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಅವರು ೧೯೬೦ ರಲ್ಲಿ ನೃತ್ಯದಲ್ಲಿ ನಾಲ್ಕು ವರ್ಷಗಳ ಡಿಪ್ಲೊಮಾ ಕೋರ್ಸ್‌ಗಾಗಿ ಕೇರಳದ ಕಲಾಮಂಡಲಂಗೆ ಸೇರಿದರು .[೨]ಪಜಯನ್ನೂರು ಚಿನ್ನಮ್ಮ ಅವರ ಆಶ್ರಯದಲ್ಲಿ ಕಲಾಮಂಡಲಂನಲ್ಲಿ, ಸತ್ಯಭಾಮ ಅವರ ಬಳಿ ಮೋಹಿನಿಯಟ್ಟಂ ಕಲಿತುಕೊಂಡರು. ತಂಜಾವೂರು ಭಾಸ್ಕರ ರಾವ್ ನೇತೃತ್ವದಲ್ಲಿ ಭರತ ನಾಟ್ಯಂ ಕಲಿತರು.
೧೯೬೬ ರಲ್ಲಿ, ನೆಯ್ವೇಲಿ ಲಿಗ್ನೈಟ್ ಕಾರ್ಪೊರೇಶನ್‌ನ ಜವಾಹರ್ ಶಾಲೆಯಲ್ಲಿ ನೃತ್ಯ ಶಿಕ್ಷಕಿಯಾಗಿ ಕೆಲಸ ಮಾಡುವಾಗ, ಅವರು ವಿಶ್ವನಾಥ ಮೆನನ್ ಅವರನ್ನು ವಿವಾಹವಾದರು. ಪತಿ ಭೂತಾನ್‌ನ ಸರ್ಕಾರದ ಅಧಿಕಾರಿಯಾಗಿದ್ದರಿಂದ ಮದುವೆಯ ನಂತರ ಅವರು ತಮ್ಮ ಪತಿಯೊಂದಿಗೆ ಭೂತಾನ್‌ಗೆ ತೆರಳಿದರು. ಇವರ ಪುತ್ರ ವಿನೋದ್ ಮತ್ತು ಪುತ್ರಿ ವಿಂದುಜಾ ಮೆನನ್ ಅವರು ಪವಿತ್ರಂ ಮತ್ತು ಜನ್ ಗಂಧರ್ವನ್ ಸೇರಿದಂತೆ ಹಲವಾರು ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ. [೨]
ವಿಮಲಾ ಭೂತಾನ್ ಸರ್ಕಾರಿ ಶಾಲೆಯಲ್ಲಿ ನೃತ್ಯವನ್ನು ಕಲಿಸಿದರು ಮತ್ತು ಅನೇಕ ಸ್ಥಳಗಳಲ್ಲಿ ದಕ್ಷಿಣ ಭಾರತೀಯ ಶಾಸ್ತ್ರೀಯ ನೃತ್ಯವನ್ನು ಪ್ರದರ್ಶಿಸಿದರು.[೨]
ಪ್ರಶಸ್ತಿಗಳು ಮತ್ತು ಗೌರವಗಳು
[ಬದಲಾಯಿಸಿ]ತಮ್ಮ ಸುದೀರ್ಘ ವೃತ್ತಿಜೀವನದ ಅವಧಿಯಲ್ಲಿ, ವಿಮಲಾ ಮೆನನ್ ಅವರ ಕೆಲಸವನ್ನು ಮೆಚ್ಚಿ ಹಲವಾರು ಗೌರವಗಳು ಲಭಿಸಿವೆ. ೧೯೯೧ ರಲ್ಲಿ ಕೇರಳ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ. ೨೦೦೬ ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಮತ್ತು ಗೌರವಗಳನ್ನು ಪಡೆದುಕೊಂಡಿದ್ದಾರೆ. [೩] ಅಲ್ಲದೆ ೧೯೭೨ ರಲ್ಲಿ ಭರತ ನಾಟ್ಯಕ್ಕಾಗಿ ಅಖಿಲ ಕೇರಳ ಸಮಾಜ ಸೇವಾ ಸಂಘದ ಪ್ರಶಸ್ತಿಯನ್ನು ಪಡೆದಿದ್ದಾರೆ.[೨] ಭಾರತ ಸರ್ಕಾರದ ಸಾಂಸ್ಕೃತಿಕ ಇಲಾಖೆಯಿಂದ "ರಾಮಣಟ್ಟಂ ಇನ್ ಮೋಹಿನಿಯಟ್ಟಂ" ಎಂಬ ಅವರ ಸಂಶೋಧನಾ ಕಾರ್ಯಕ್ಕೆ ಹಿರಿಯ ಫೆಲೋಶಿಪ್ ಪ್ರಶಸ್ತಿಯನ್ನು ಗಳಿಸಿದ್ದಾರೆ. ವಿಮಲಾ ಅವರು ದಕ್ಷಿಣ ಭಾರತದ ಶಾಸ್ತ್ರೀಯ ನೃತ್ಯಗಳಿಗೆ ನೀಡಿದ ಕೊಡುಗೆಗಾಗಿ ಕೇರಳ ಕಲಾಮಂಡಲಂನಿಂದ ನೃತ್ಯಕ್ಕಾಗಿ ಕೇರಳ ಕಲಾಮಂಡಲಂ ಪ್ರಶಸ್ತಿಯನ್ನು ಪಡೆದರು.[೪] ೨೦೧೪ ರಲ್ಲಿ, ಅವರು ಕೇರಳ ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್ ಪಡೆದುಕೊಂಡಿದ್ದಾರೆ. [೫]
ಉಲ್ಲೇಖಗಳು
[ಬದಲಾಯಿಸಿ]- ↑ "'My students are my wealth'". The Hindu. 24 June 2011. Retrieved 11 February 2012.
- ↑ ೨.೦ ೨.೧ ೨.೨ ೨.೩ "Ammathanal". Mathrubhumi (in ಮಲಯಾಳಂ). 1 December 2011.
- ↑ "Sangeet Natak Akademi awards". The Hindu. 2 February 2007. Archived from the original on 3 February 2007. Retrieved 11 February 2012.
- ↑ "Kerala Kalamandalam awards announced". The Hindu. 20 October 2005. Archived from the original on 3 September 2006. Retrieved 12 February 2012.
- ↑ "Dance". Department of Cultural Affairs, Government of Kerala. Retrieved 25 February 2023.