ವಿಜಯಾ ಮೆಹ್ತಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಚಿತ್ರ:VijayaMehta.jpg
'ವಿಜಯಾ ಮೆಹ್ತಾ'

'ಬರೋಡ'ದ ವಿಜಯಾ ಮೆಹ್ತಾ,ಮುಂಬಯಿನಲ್ಲಿ[ಬದಲಾಯಿಸಿ]

ಬರೋಡ, ವಿಜಯಾಮೆಹ್ತಾರವರ ಹುಟ್ಟೂರು ; ಮುಂಬಯಿ ನ ರಂಗಭೂಮಿ, ಅವರ ಕರ್ಮಭೂಮಿ, ಯಾಗಿತ್ತು ತಂದೆತಾಯಿಗಳು ನಾಮಕರಣಮಾಡಿದ ಹೆಸರು, ವಿಜಯಾಖೋಟೆ. ಕಾಲಕ್ರಮದಲ್ಲಿ ಆಕೆ, ವಿಜಯಾ ಮೆಹ್ತಾ ರಾದರು. ಭಾರತೀಯ ರಂಗಭೂಮಿಗೆ ಅಪೂರ್ವ ಗರಿಮೆಯನ್ನು ತಂದುಕೊಟ್ಟ ವಿಜಯ ಮೆಹ್ತಾರವರು ೧೯೩೪ ರಲ್ಲಿ ಗುಜರಾತ್ ರಾಜ್ಯದ ಬರೋಡನಗರದಲ್ಲಿ ಜನಿಸಿದರು. ವಿಜಯಾಮೆಹ್ತಾ, ರಂಗಭೂಮಿಯಲ್ಲಿ ಅತ್ಯಂತ ಸಕ್ರಿಯರಾಗಿ ದುಡಿದಿದ್ದಾರೆ. ನಟಿಯಾಗಿ, ನಿರ್ದೇಶಕಿಯಾಗಿ, ಮತ್ತು ಕಥಾಸಂಭಾಷಣೆಯನ್ನು ಬರೆಯುವುದರಲ್ಲಿ ಎತ್ತಿದ ಕೈ. ಅವರು ಚಲನಚಿತ್ರರಂಗದಲ್ಲೂ ಯಶಸ್ವಿಯಾಗಿ ತಮ್ಮ ನಾಟಕಗಳನ್ನು ಅಳವಡಿಸಿಕೊಂಡಿದ್ದಾರೆ. ಅವರು ತಮ್ಮ ಪದವಿಯನ್ನು ಬಾಂಬೆ ವಿಶ್ವವಿದ್ಯಾಲಯದಲ್ಲಿ ಪಡೆದರು. ಥಿಯೇಟರ್ ಆರ್ಟ್ಸ್ ಬಗ್ಗೆ ವಿಶೇಷ ಅಧ್ಯಯನವನ್ನು ಇಬ್ರಾಹಿಮ್ ಅಲ್ ಖಾಜಿ ಯವರ ಬಳಿ ಮಾಡಿದರು. ನವದೆಹಲಿಯಲ್ಲಿ ಅವರ ಅಭ್ಯಾಸವನ್ನು ಮುಂದುವರೆಸಲು ಹೋದಾಗ, ಅವರು ಕಂಡಿದ್ದು, ಮುಂಬಯಿನ ಸುಪ್ರಸಿದ್ಧ ರಂಗಕಲಾಸಕ್ತ, ರಂಗಕಲಾನಿಪುಣ, ಶ್ರೀ.ಆರ್.ಡಿ ಮರ್ಝ್ ಬಾನ್, ರವರನ್ನು. ವಿಜಯಾಮೆಹ್ತಾರವರಿಗೆ 'ಆಡಿ ಮರ್ಝ್ ಬಾನ್' ರವರ ಅಪಾರ ಸಹಕಾರ, ಹಾಗೂ ಮಾರ್ಗದರ್ಶನ ಸಿಕ್ಕಿತು. ಇವರ ನಿರ್ದೇಶನದ,ಮರಾಠಿ ಲೇಖಕ, ಜಯವಂತ ದಳವಿ ಯವರ ನಾಟಕವನ್ನು ಆಧರಿಸಿದ, ರಾವ್ ಸಾಹೇಬ್ ಹಿಂದಿ ಚಿತ್ರ , ಅಂತಾರಾಷ್ಟ್ರೀಯ ಮನ್ನಣೆ ಪಡೆದಿದೆ.ಅನುಪಮ್ ಖೇರ್, ಈ ಚಿತ್ರದಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ.

ರಂಗಾಯಣದ ಸ್ಥಾಪನೆ[ಬದಲಾಯಿಸಿ]

" ರಂಗಾಯಣ ", ಮರಾಠಿರಂಗಭೂಮಿಗೆ ದೊರೆತ ಒಂದು, ಯಶಸ್ವೀಕಲಾಮಾಧ್ಯಮ. ೧೯೬೦ ರಲ್ಲಿ ಖ್ಯಾತ ವಿಜಯ್ ತೆಂಡೂಲ್ಕರ್, ಅರವಿಂದ್ ದೇಶಪಾಂಡೆ, ಶ್ರೀರಾಮ್ ಲಾಗೂ, ಜೊತೆಗೂಡಿ ರಂಗಾಯಣ, ವೆಂಬ ಮರಾಠಿ ಪ್ರಾಯೋಗಿಕ ಥಿಯೇಟರ್ ಗ್ರೂಪನ್ನು ಹುಟ್ಟುಹಾಕಿದರು. ಸಿ. ಟಿ ಖಾನೊಲ್ ಕರ್ ಜೊತೆ,'ಏಕ್ ಶೂನ್ಯ ಬಾಜೀರಾವ್ 'ಎಂಬ ನಾಟಕವನ್ನು ಪ್ರದರ್ಶಿಸಿ ದಾಖಲೆಮಾಡಿದರು. Bartold Brecht, ಭರ್ತೊಲ್ದ್ ಭ್ರೆಕ್ಟ್ ರನ್ನು ಮರಾಠಿ ರಂಗಭೂಮಿಗೆ ಪರಿಚಯಿಸಿದರು. Caucasian Chalk circle ನಿಂದ 'ಅಜಬ್ ನ್ಯಾಯ್ ವರ್ತುಲಾಚೆ, ನಾಟಕವನ್ನು ರಚಿಸಿದರು, ಮತ್ತು Lonesco with Chairsಎಂಬ ನಾಟಕವನ್ನು ಸಹಿತ. ಇಂಡೊ ಜರ್ಮನ್ ಥಿಯೇಟರ್ ಗ್ರೂಪ್ ನ ನಿರ್ದೇಶಕ, Fritz Bennewitz ರವರ ನಾಟಕಗಳಲ್ಲು ಅವರು ಪಾಲ್ಗೊಂಡರು. ಸಾಂಪ್ರದಾಯಿಕ ಭಾಸಕವಿಯ "ಮುದ್ರಾರಾಕ್ಷಸ",ನಾಟಕದಲ್ಲಿ ಜರ್ಮನ್ ನಟರು ಅಭಿನಯಿಸಿ ಪ್ರದರ್ಶಿಸಿದರು. ಇದರಲ್ಲಿ ವಿಜಯಾ ಮೆಹ್ತಾ ತಮ್ಮ ಯೋಗದಾನವನ್ನು ನೀಡಿದ್ದರು. ವಿಜಯಾಮೆಹ್ತಾರವರ ಪೆಸ್ತೋಂಜಿ ಬಿಟ್ಟು, ಬೇರೆ ಅವರ ಕಾರ್ಯಗಳು ಫಿಲ್ಮ್ ಮತ್ತು ಟೆಲಿವಿಜನ್ ಗೋಸ್ಕರವಾಗಿಯೇ ಸಿದ್ಧಪಡಿಸಿದವು. ಅವರು ಅಭಿನಯಿಸಿ, ನಿರ್ದೇಶಿಸಿದ ರಂಗಭೂಮಿಯ ಆವೃತ್ತಿಗಳನ್ನೇ ಫಿಲ್ಮ್ ಮಾಧ್ಯಮದಲ್ಲೂ ತರುವ ಪ್ರಯತ್ನ, ಸಫಲವಾಯಿತು.

'ವಿಜಯಾ ಮೆಹ್ತಾ'ರಿಗೆ ಹೆಸರುಗಳಿಸಿಕೊಟ್ಟ ರಂಗಪ್ರದರ್ಶನಗಳು[ಬದಲಾಯಿಸಿ]

  • ೧೯೮೪- "ಪಾರ್ಟಿ", ನಟನೆ.
  • ೧೯೮೬-"ರಾವ್ ಸಾಹೆಬ್", ನಿರ್ದೇಶನ, ನಟನೆ, ಮತ್ತು ಚಿತ್ರಪಟಲೇಖನಕ್ಕೆ ಹೆಸರುವಾಸಿಯಾಗಿದೆ.
  • ೧೯೮೮-"ಪೆಸ್ತೊಂಜಿ", ನಿರ್ದೇಶನ ಮತ್ತು ಚಿತ್ರಪಟಲೇಖನಕ್ಕೆ ಹೆಸರುವಾಸಿಯಾಗಿದೆ.

ಪ್ರಶಸ್ತಿಗಳು[ಬದಲಾಯಿಸಿ]