ವಿಷಯಕ್ಕೆ ಹೋಗು

ವಿಕಿಪೀಡಿಯ ಚರ್ಚೆಪುಟ:ಸದ್ಬಳಕೆ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡ ವಿಕಿಪೀಡಿಯದಲ್ಲಿ ಸದ್ಯಕ್ಕೆ ಸ್ಥಳೀಯ ಅಪ್ಲೋಡ್ ಕಾರ್ಯನೀತಿಯ ಕೊರತೆಯಿರುವುದರಿಂದ ಸ್ಥಳೀಯವಾಗಿ ಫೈಲುಗಳನ್ನು ಅಪ್ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ. ಆ ಕಾರ್ಯನೀತಿಗೆ ಅಗತ್ಯವಾದ ಸದ್ಭಳಕೆಯ ನಿಯಮಗಳನ್ನು ರೂಪಿಸುವುದು ಈ ಕಾರ್ಯನೀತಿಯ ಉದ್ದೇಶ

ಚರ್ಚೆ[ಬದಲಾಯಿಸಿ]

ಈ ಕೆಳಗಿನವು ನನ್ನ ಸಂದೇಹಗಳು.. ದಯವಿಟ್ಟು ಚರ್ಚಿಸಿ..

 • ಸದ್ಬಳಕೆ ಕಾರ್ಯನೀತಿ ಪ್ಯಾರಾದಲ್ಲಿ ಉಚಿತವಲ್ಲದ ಮಾಹಿತಿಯನ್ನೂ , ಉಚಿತವಲ್ಲದ ದತ್ತಾಂಶಗಳನ್ನು/ಚಿತ್ರಗಳನ್ನು ಎಂದು ಬಳಸಲಾಗಿದೆ. ಉಚಿತಕ್ಕಿಂತ 'ಮುಕ್ತ' ಪದ ಬಳಕೆ ಒಳ್ಳೆಯದು ಅನ್ನಿಸುತ್ತದೆ.
ನಾವು ಕನ್ನಡದಲ್ಲಿ ಉಚಿತ ಪದವನ್ನು ಬಳಸುವ ಬದಲು ಸ್ವತಂತ್ರ ಪದವನ್ನು ಬಳಸುವುದು ಸೂಕ್ತವೆನಿಸುತ್ತದೆ. ಉಲ್ಲೇಖಿಸಲಾಗಿರುವ ಕೊಂಡಿಯಲ್ಲಿರುವ ಅರ್ಥವಿವರಣೆಯನ್ನು ಕನ್ನಡದಲ್ಲಿ ನೀಡುವುದಾದರೆ ಉಚಿತ ಪದವನ್ನು ಬಳಸಲಾಗುವುದಿಲ್ಲ. ಆದ್ದರಿಂದ ಕೆಲ ಬದಲಾವಣೆಗಳನ್ನು ಮಾಡಿದ್ದೇನೆ. -- Csyogi (ಚರ್ಚೆ) ೧೫:೦೬, ೧೦ ಮಾರ್ಚ್ ೨೦೧೭ (UTC)
ಆಗಬಹುದು --ಪವನಜ (ಚರ್ಚೆ) ೧೭:೩೨, ೩ ಮಾರ್ಚ್ ೨೦೧೭ (UTC)
 • ನಿಯಮಗಳು ವಿಭಾಗದಲ್ಲಿ ಮುದ್ರಣವಾಗಿರುವ ಮಾಹಿತಿ ಬದಲು ಪ್ರಕಟವಾಗಿರುವ ಮಾಹಿತಿ ಅನ್ನಬಹುದಲ್ವಾ?
ಆಗಬಹುದು. ಡಿಜಿಟಲ್ ಪ್ರಕಟಣೆ ಮತ್ತು ಅಂತರಜಾಲವೂ ಪ್ರಕಟಣೆಯೇ ಅಗಿರುವ ಕಾರಣ ಇದು ಒಪ್ಪತಕ್ಕದ್ದೇ --ಪವನಜ (ಚರ್ಚೆ) ೧೭:೩೨, ೩ ಮಾರ್ಚ್ ೨೦೧೭ (UTC)
 • "ಕಾಪಿರೈಟ್ ಟ್ಯಾಗಿನ ಮೂಲಕ ವಿಕಿಪೀಡಿಯದ ಸದ್ಬಳಕೆ ನೀತಿ ಈ ಚಿತ್ರದ ಉದ್ದಾತ್ತ ಉದ್ದೇಶಗಳನ್ನು ಅನುಮತಿಸುತ್ತದೆ ಎಂದು ತಿಳಿಸಬೇಕು" ಎಂಬ ವಾಕ್ಯವಿದೆ. ಆದರೆ ಕಾಪಿರೈಟ್ ಟ್ಯಾಗ್ ಅಂದರೆ ಏನು? ಎಲ್ಲಿದೆ?
 • ಖ್ಯಾತ ಪೈಂಟಿಗ್ ಮತ್ತು ಇತರೆ ನಮೂನೆಯ ಕಲಾಚಿತ್ರಗಳನ್ನು ಬಳಸಬಹುದು ಎಂದು ಹೇಳಲಾಗಿದೆ. ಖ್ಯಾತ ಪುರಾತನ ಪೈಟಿಂಗ್ ಮಾತ್ರವೋ ಅಥವಾ ಆಧುನಿಕ ಚಿತ್ರಕಲೆಯೂ ಆಗುತ್ತದಾ? ಉದಾ ಚಿತ್ರಸಂತೆಯಲ್ಲಿ ತೆಗೆದ ಈಗಿನ ಕಲಾವಿದರ ಪೈಟಿಂಗ್ ಗಳು.
ಎರಡೂ ಆಗಬಹುದೇನೋ? ಹೇಗಿದ್ದರೂ ಪಿಕ್ಸೆಲ್ ಮಿತಿ ಇದೆಯಲ್ಲ?--ಪವನಜ (ಚರ್ಚೆ) ೧೭:೩೨, ೩ ಮಾರ್ಚ್ ೨೦೧೭ (UTC)
 • ಕಲಾಪ್ರಕಾರಗಳ ನಟನೆಯ ಭಾವಚಿತ್ರಗಳು .. ಇದರ ಔಚಿತ್ಯತೆ ಹೇಗೆ?. ಉದಾಹರಣೆ ಪ್ಲೀಸ್..
ಉದಾಹರಣೆಗೆ ಚಿಟ್ಟಾಣಿಯವರ ಯಕ್ಷಗಾನದ ಭಂಗಿಗಳ ಫೋಟೋ, ಕಂಸಾಳೆಯ ಫೋಟೋ, ಆಟಿಕಳೆಂಜ ಕುಣತದ ಫೋಟೋ, ಇತ್ಯಾದಿ--ಪವನಜ (ಚರ್ಚೆ) ೧೭:೩೨, ೩ ಮಾರ್ಚ್ ೨೦೧೭ (UTC)
 • ಪುಸ್ತಕದ ಮುಖಪುಟ ಹಾಕಬಹುದು ಎನ್ನಲಾಗಿದೆ. ಜೊತೆಗೆ ಸಾಂದರ್ಭಿಕವಾಗಿ ಲೇಖನಕ್ಕೆ ಪೂರಕವಾಗಿ ಬೇಕಾದಂತಹ ಪತ್ರಿಕೆ/ಪುಸ್ತಕದ ಕ್ಲಿಪ್ಪಿಂಗ್ಸ್ ಹಾಕಲು ಅನುಮತಿ ಇರುತ್ತದಾ? ಉದಾ: ಲೋಕಮಾನ್ಯ ತಿಲಕರ ಕೇಸರಿ ಪತ್ರಿಕೆ, ಕರ್ನಾಟಕ ಏಕೀಕರಣ ಸಮಯದ ಅನಕೃ ಲೇಖನ ತುಣುಕು, ವಿವಾದಕ್ಕೆ ಒಳಗಾದ ಪುಸ್ತಕದ ಬಗ್ಗೆ ಬರೆಯುವಾಗ ವಿವಾದಕ್ಕೆ ಕಾರಣವಾದ ಪ್ಯಾರಾಗಳ ಪುಟದ ತುಣುಕುಗಳು (ದುಂಢಿ, ವಾಲ್ಮೀಕಿಯಾರು ತರಹದ ಪುಸ್ತಕಗಳು) ಇತ್ಯಾದಿ.
ಹೌದು. ಇವನ್ನೂ ಸೇರಿಸಬಹುದು. ಮತ್ತೊಮ್ಮೆ ಜ್ಞಾಪಿಸುವುದೇನೆಂದರೆ ಪಿಕ್ಸೆಲ್ ಮಿತಿ--ಪವನಜ (ಚರ್ಚೆ) ೧೭:೩೨, ೩ ಮಾರ್ಚ್ ೨೦೧೭ (UTC)
 • ಇಮೇಜ್ ಕೆಟಗರಿಯಲ್ಲಿ ಕೈಬರಹದ ಮಾದರಿಗಳು, ಫಾಂಟುಗಳ ಚಿತ್ರಗಳು, ಧಾರ್ಮಿಕ/ಪಂಥದ ಸಂಕೇತಗಳು, ಚಿಹ್ನೆಗಳನ್ನೂ ಸೇರಿಸಬೇಕಲ್ವಾ? ಉದಾ: ಬ್ರಹ್ಮಕುಮಾರಿ ಸಂಸ್ಥೆಯ ಸಿಂಬಲ್ಲನ್ನು ಅವರ ಫಲಕದಿಂದ ಫೋಟೋ ತೆಗೆದು ಹಾಕುವುದು, ಖ್ಯಾತ ಸಾಹಿತಿಗಳ/ವ್ಯಕ್ತಿಗಳ ಕೈಬರಹದ ಮಾದರಿ ಹಾಕುವುದು ಇತ್ಯಾದಿ
ಆಗಬಹದು--ಪವನಜ (ಚರ್ಚೆ) ೧೭:೩೨, ೩ ಮಾರ್ಚ್ ೨೦೧೭ (UTC)
 • ಚಿತ್ರ ಗಾತ್ರದ ಮಿತಿ ೧ ಎಂಬಿ ಸಾಕಾ? ೨ ಎಂಬಿ ಇಟ್ಟರೆ ಒಳ್ಳೆಯದಲ್ವಾ?
೧೦೦೦ x ೧೦೦೦ ಪಿಕ್ಸೆಲ್, ೨೪ ಬಿಟ್ ಕಲರ್, ಚಿತ್ರ ಸುಮಾರು ೮೦೦ ಕಿಲೊಬೈಟ್ ಆಗುತ್ತದೆ. ಅಂತೆಯೇ ೧ ಎಂ.ಬಿ. ಮಿತಿ ಎಂದು ಬರೆದದ್ದು. ೨ ಎಂ.ಬಿ. ಅಡ್ಡಿಯಿಲ್ಲ--ಪವನಜ (ಚರ್ಚೆ) ೧೭:೩೨, ೩ ಮಾರ್ಚ್ ೨೦೧೭ (UTC)
 • ದ್ವನಿ/ಬಹುಮಾಧ್ಯಮ ಫೈಲಿನ ಸೈಜ್ ಮಿತಿ ನಿಗದಿಪಡಿಸಲಾಗಿಲ್ಲ.
ಇದು ಸ್ವಲ್ಪ ಕಷ್ಟ. ಯಾವ ತಂತ್ರಾಂಶದ ಫೈಲ್ ಎಂಬುದನ್ನು ಹೊಂದಿಕೊಂಡು ಅವುಗಳ ಗಾತ್ರ ಬದಲಾಗುತ್ತದೆ. ಅದಕ್ಕೆ ಸಮಯದ ಮಿತಿ ನಿಗದಿಪಡಿಸಿದ್ದು.--ಪವನಜ (ಚರ್ಚೆ) ೧೭:೩೨, ೩ ಮಾರ್ಚ್ ೨೦೧೭ (UTC)
 • ನಿಯಮಗಳನ್ನು ಪಾಲಿಸದೇ ಮಾಡುವ ಲೋಕಲ್ ಅಪ್ಲೋಡ್ ಫೈಲ್ ಗಳನ್ನು ಅಳಿಸುವಿಕೆ ಮಾರ್ಕಿಂಗ್ ಮಾಡಲು ಒಂದು ವರ್ಗ ಮಾಡಬೇಕು.
ಆಗಬಹುದು.--ಪವನಜ (ಚರ್ಚೆ) ೧೭:೩೨, ೩ ಮಾರ್ಚ್ ೨೦೧೭ (UTC)
 • ಫೈಲನ್ನು ಅಪ್ಲೋಡ್ ಮಾಡುವಾಗ ಅದನ್ನು ಎಲ್ಲಿಂದ ತೆಗೆದುಕೊಂಡದ್ದು ಎಂಬ 'ಕ್ರೆಡಿಟ್ಸ್' ಕೊಟ್ಟು ಅದು ಕಾಣಿಸುವ ಪುಟದಲ್ಲಿಯೂ ಪ್ರದರ್ಶನ ಮಾಡಬೇಕಾಗುತ್ತದಾ?

--Vikas Hegde (ಚರ್ಚೆ) ೧೩:೫೬, ೨ ಮಾರ್ಚ್ ೨೦೧೭ (UTC)

ಇಲ್ಲೊಂದು ಉದಾಹರಣೆ ಇದೆ.--ಪವನಜ (ಚರ್ಚೆ) ೧೨:೪೬, ೬ ಮಾರ್ಚ್ ೨೦೧೭ (UTC)
 • ಸದ್ಬಳಕೆಯ ಪುಟದಿಂದ ಕೊಟ್ಟಿರುವ ಇಂಗ್ಲಿಷ್ ಲೇಖನದ ಕೊಂಡಿಯು ಉಚಿತವಲ್ಲದ ಮಾಹಿತಿಗೆ (non-free content) ಸಂಬಂಧಿಸಿದೆ. ಸದ್ಬಳಕೆಗೆ ಇದರ ಕನ್ನಡ ಆವೃತ್ತಿಯೆ? ಹಾಗಿದ್ದರೆ ಪುಟದ ಹೆಸರು ಹಾಗೂ ಇದರ ಮಾಹಿತಿ ಬದಲಾಗಬೇಕಲ್ಲವೆ?
 • ಸ್ಥಳೀಯ ಅಪ್ಲೋಡ್ ಎಂದರೇನು ನಿಖರವಾಗಿ ವಿವರಿಸಿಲ್ಲ. ಇದು ಎಲ್ಲರಿಗೂ ನೇರವಾಗಿ ಅರ್ಥವಾಗುವುದಿಲ್ಲ. ಹೆಚ್ಚು ವಿವರನೆ ಅವಶ್ಯಕ
 • ಪರವಾನಗಿ ನಿಯಮದ ಕೊಂಡಿಯು "http://freedomdefined.org/Definition" ಇಲ್ಲಿಗೆ ಕೊಡಲಾಗಿದೆ. ಕಾರಣ?
 • "ಉಚಿತ ಪರ್ಯಾಯ ಕಡತದ ಅಲಭ್ಯತೆ - ಹಕ್ಕುಸ್ವಾಮ್ಯ (ಕಾಪಿರೈಟ್) ಹೊಂದಿರುವ ಕಡತ ತಿಳಿಸುವ ಅಂಶಗಳನ್ನೇ ತಿಳಿಸುವ ಉಚಿತ ಕಡತ ಇಲ್ಲದಿದ್ದ ಸಂದರ್ಭದಲ್ಲಿ" ==> ಈ ವಾಕ್ಯ ಅಪೂರ್ಣವಿದ್ದಂತಿದೆ. ಏನು ಮಾಡಬೇಕು ಎಂಬುದು ನಿರ್ದಿಷ್ಟವಾಗಿ ತಿಳಿಸಿಲ್ಲ.
 • "ವಿಶ್ವಕೋಶರೂಪದ ಮಾಹಿತಿ" ==> ಈ ನಿಯಮಕ್ಕೆ "ಸಾಮಾನ್ಯ ಅರ್ಹತೆಗಳ" ಕೊಂಡಿ ಕೊಟ್ಟರೆ ಅನುಕೂಲ.
 • "ಅನಿವಾರ್ಯತೆ - ಲೇಖನದಲ್ಲಿ ಇರುವ ವಿಷಯಕ್ಕೆ ಪೂರಕವಾಗಿ ಕಡತವಿದ್ದರೆ ಓದುಗನಿಗೆ ವಿಷಯದ ಗ್ರಹಿಕೆ ಸುಲಭವಾಗಿ, ಕಡತವಿಲ್ಲದಿರುವಿಕೆ ವಿಷಯದ ಗ್ರಹಿಕೆಗೆ ತೊಂದರೆಯುಂಟುಮಾಡುವಂತಿದ್ದರೆ ಅಂತಹ ಕಡತಗಳನ್ನು ಆಯಾ ಸಂದರ್ಭಕ್ಕೆ ತಕ್ಕಂತೆ ಬಳಸಬಹುದು" ==> ಇದನ್ನು ಹೀಗೆ ಬರೆದರೆ ಸುಲಭವಲ್ಲವೆ? "ಉಚಿತವಲ್ಲದ ಕಡತದಿಂದ ಲೇಖನದ ವಿಷಯಗ್ರಹಿಕೆಗೆ ಪೂರಕವಾಗುವಂತಿದ್ದು ಮತ್ತು ಕಡತವಿಲ್ಲದೆ ವಿಷಯಗ್ರಹಿಕೆ ಕಷ್ಟಸಾಧ್ಯವಾಗುವಂತಿದ್ದರೆ ಮಾತ್ರ ಬಳಸಬಹುದು"
 • "ಅಂಚೆ ಸ್ಟ್ಯಾಂಪ್‍ನ ಚಿತ್ರ" ==> "ಅಂಚೆಚೀಟಿಯ ಚಿತ್ರ"
 • "ಹಣದ (ಕರೆನ್ಸಿ) ಚಿತ್ರ"==> ಕರೆನ್ಸಿ != ಹಣ; ಬರಹ ನಿಘಂಟಿನಲ್ಲಿ ನಾಣ್ಯ ಎಂದಿದೆ

--ವಿಶ್ವನಾಥ/Vishwanatha (ಚರ್ಚೆ) ೧೩:೧೬, ೬ ಮಾರ್ಚ್ ೨೦೧೭ (UTC)

 • ರಸ್ತೆಯಲ್ಲಿ ಫೋಟೋ ಹಿಡಿದು, ಅದರಲ್ಲಿ ಹಕ್ಕುಸ್ವಾಮ್ಯದ ವಿಷಯಗಳು ಇದ್ದರೆ, ಅವನ್ನು ಕ್ರಿಯೇಟೀವ್ ಕಾಮನ್ಸ್ ಎಂದು ನಂಬಬಹುದೇ? Mallikarjunasj (ಚರ್ಚೆ) ೦೬:೨೬, ೧೩ ಮಾರ್ಚ್ ೨೦೧೭ (UTC)
ಉದಾಹರಣೆ ನೀಡಬಹುದೇ?--ಪವನಜ (ಚರ್ಚೆ) ೦೮:೩೯, ೧೩ ಮಾರ್ಚ್ ೨೦೧೭ (UTC)
 • ಬಹುಮಾಧ್ಯಮ ತುಣುಕುಗಳ ರೆಸೊಲ್ಯೂಷನ್ ಎಷ್ಟಿರಬೇಕು ಎಂದು ಎಲ್ಲೂ ಸರಿಯಾಗಿ ವಿವರಿಸಿಲ್ಲ.
ವಿಡಿಯೋ ತುಣುಕುಗಳು ೬೪೦ x ೪೮೦ ಪಿಕ್ಸೆಲ್‍ಗೆ ಕಡಿಮೆಯಾಗದಂತೆ ಮತ್ತು ೧೨೮೦ x ೭೮೦ ಪಿಕ್ಸೆಲ್‍ಗಳನ್ನು ಮೀರದಂತೆ ಇರಲಿ. ಆಕಾರದ ಅನುಪಾತ (Aspect ratio) ೪:೩ (4:3) ಅಥವಾ ೧೬:೯ (16:9) ಇರಲಿ. ಗೋಪಾಲಕೃಷ್ಣ ಎ (ಚರ್ಚೆ) ೧೮:೫೮, ೨೨ ಮಾರ್ಚ್ ೨೦೧೭ (UTC)

ಚಿತ್ರಗಳ ಅಳಿಸುವಿಕೆಗಾಗಿ ವರ್ಗ, Template[ಬದಲಾಯಿಸಿ]

ಸದ್ಬಳಕೆ ನಿಯಮಗಳನ್ನು ಪಾಲಿಸದ ಕಡತಗಳನ್ನು ಅಪ್ಲೋಡ್ ಮಾಡಿದಾಗ ಅದನ್ನು ಅಳಿಸುವಿಕೆಗೆ ಹಾಕಿದರೆ ಅವು 'ಅಳಿಸುವಿಕೆಗಾಗಿ ಹಾಕಿದ ಕಡತಗಳು' ಎಂಬ ವರ್ಗದ ಕೆಳಗೆ ಹೋಗಿ ಕೂರುವಂತೆ ಮಾಡಿದರೆ ಅನುಕೂಲವಾಗುತ್ತದೆ. ಈಗಿರುವ {{ಅಳಿಸುವಿಕೆ}} ಟೆಂಪ್ಲೇಟ್ ಸಾಕಾ ಅಥವಾ {{ಕಡತ ಅಳಿಸುವಿಕೆ}} ಅಂತ ಬೇರೊಂದು ಟೆಂಪ್ಲೇಟ್ ಮಾಡಿದರೆ ಒಳ್ಳೆಯದಾ? --Vikas Hegde (ಚರ್ಚೆ) ೧೦:೫೧, ೨೩ ಮಾರ್ಚ್ ೨೦೧೭ (UTC)

ಬೇರೊಂದು ಟೆಂಪ್ಲೇಟು ಇದ್ದರೆ ಉತ್ತಮ ಎಂಬುದು ನನ್ನ ಅನಿಸಿಕೆ. ನಿರ್ವಾಹಕರಿಗೆ ಸುಲಭ ಆಗಬಹುದು. --GopalaKrishnaA ೧೨:೫೧, ೨೩ ಮಾರ್ಚ್ ೨೦೧೭ (UTC)