ವಿಕಿಪೀಡಿಯ:ಸಂಪಾದನೋತ್ಸವಗಳು/ಸಿದ್ದವೇಶ ಪಠ್ಯ ಪ್ರದರ್ಶನ, ಛಾಯಾಚಿತ್ರೀಕರಣ ಮತ್ತು ಸಂಪಾದನೋತ್ಸವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರಾವಳಿ ಕರ್ನಾಟಕದಲ್ಲಿ ಅಳಿಯುತ್ತಿರುವ ಜನಪದ ಕುಣಿತಗಳಲ್ಲಿ ಸಿದ್ದವೇಷವೂ ಒಂದಾಗಿದೆ. ಈ ಕುಣಿತವು ಕರ್ನಾಟಕದ ಸುಳ್ಯ ತಾಲೂಕಿನಲ್ಲಿ ಮಾತ್ರ ಕಂಡುಬರುತ್ತದೆ. ಇದು ಸುಗ್ಗಿ ತಿಂಗಳ ಕೃಷಿ ಚಟುವಟಿಕೆಗೆ ಸಂಬಂಧಿಸಿ ನಡೆಯುವ ಆಚರಣಾತ್ಮಕ ಮತ್ತು ಮನೋರಂಜನಾತ್ಮಕ ಕುಣಿತ. ಈ ಕುಣಿತವನ್ನು ಸುಗ್ಗಿ ಬೇಸಾಯ ನಂತರದ ಮೂರು, ನಾಲ್ಕು ಅಥವಾ ಐದು ದಿನಗಳ ಕಾಲ ರಾತ್ರಿ ಸಮಯದಲ್ಲಿ ಕುಣಿಯುವುದು ಇದರ ವಿಶೇಷತೆಯಾಗಿದೆ.

ಉದ್ದೇಶ[ಬದಲಾಯಿಸಿ]

ಇದೊಂದು ಜನರನ್ನು ತಲುಪುವ ಕಾರ್ಯಕ್ರಮ(Outreach program). ಇತ್ತೀಚೆಗಿನ ದಿನಗಳಲ್ಲಿ ವಿಕಿಪೀಡಿಯ ಚಟುವಟಿಕೆಗಳು ನಗರ ಕೇಂದ್ರಿತವಾಗಿದೆ. ಇದು ಸಾಮಾನ್ಯ ಜನತೆಗೂ ತಲುಪಬೇಕಾದರೆ ಹಳ್ಳಿ ಪ್ರದೇಶಗಳಲ್ಲೂ ಕಾರ್ಯಕ್ರಮವನ್ನು ನಡೆಸುವುದು ಸೂಕ್ತವೆಂದು ತೋರುತ್ತದೆ. ಆ ಪ್ರಯುಕ್ತ ನಡೆಯುವ ಈ ಕಾರ್ಯಕ್ರಮವನ್ನು ಕುಣಿತದ ಚಿತ್ರೀಕರಣ, ಫೋಟೋ, ಆಡಿಯೋ ಮತ್ತು ವಕ್ತೃ ಮಾಹಿತಿಗಳೊಂದಿಗೆ ಸಂಗ್ರಹಿಸಿ ಅವುಗಳನ್ನು ಲೇಖನ ರೂಪದಲ್ಲಿ ಪ್ರಕಟಿಸುವುದು ಪ್ರಧಾನ ಉದ್ದೇಶ. ಜೊತೆಗೆ ಕಾಮನ್ಸ್‌ಗೆ ಚಿತ್ರಗಳನ್ನು ಮತ್ತು ದೃಶ್ಯ ಚಿತ್ರಗಳನ್ನು ಸೇರಿಸುವ, ಸಂಪಾದಿಸುವ ಉದ್ದೇಶವಿದೆ.

ಪ್ರಯೋಜನ[ಬದಲಾಯಿಸಿ]

ಆಳಿಯುತ್ತಿರುವ ಭಾಷೆ ಮತ್ತು ಸಂಸ್ಕೃತಿಯನ್ನು ಇಂದು ಪುನರ್ ಕಟ್ಟುವ ಪ್ರಯತ್ನವನ್ನು ನಾವೆಲ್ಲರೂ ಸೇರಿ ಮಾಡಬೇಕಾಗಿದೆ. ಹೀಗೆ ಪುನರ್ ಕಟ್ಟಲು ಅದರ ಬಗ್ಗೆ ಗೊತ್ತಿರುವ ಹಿರಿಯರು, ವಿದ್ವಾಂಸರು ಮತ್ತು ವಿದ್ಯಾರ್ಥಿಗಳ ಸಹಾಯ ಬೇಕಿದೆ. ಅಂತಹ ಒಂದು ಪ್ರಯತ್ನವನ್ನು ಮುಂದೆ ನಡೆಯುವ ಈ ಯೋಜನೆಯಲ್ಲಿ ಕಾಣುತ್ತೇವೆ. ಈಗ ಆಸಕ್ತಿಯಿರುವ ಹಿರಿಯರು ವಿದ್ವಾಂಸರು ಇದರ ಹಿಂದೆ ಇದ್ದಾರೆ. ಹಲವಾರು ವಿದ್ಯಾರ್ಥಿಗಳು ಈ ಯೋಜನೆಯಲ್ಲಿ ಪಾಲ್ಗೊಳ್ಳುತ್ತಾರೆ.

ಫೋಟೋ ನಡಿಗೆ ಮತ್ತು ಸಂಪಾದನೋತ್ಸವ[ಬದಲಾಯಿಸಿ]

  • ದಿನಾಂಕ : ೨೧ ಮಾರ್ಚ್ ೨೦೧೯
  • ಸಮಯ : ಸಂಜೆ ೬:೩೦
  • ಸ್ಥಳ : ಉಜಿರೆ ಧರ್ಮಸ್ಧಳ

ಭಾಗವಹಿಸಲು ಇಚ್ಚಿಸುವವರು[ಬದಲಾಯಿಸಿ]

ಶುಭ ಹಾರೈಸುವವರು[ಬದಲಾಯಿಸಿ]

ಭಾಗವಹಿಸಿದವರು ಹಾಗೂ ಲೇಖನಗಳು[ಬದಲಾಯಿಸಿ]

ಛಾಯಾಚಿತ್ರಗಳು[ಬದಲಾಯಿಸಿ]


ಉಲ್ಲೇಖ[ಬದಲಾಯಿಸಿ]