ವಾಲ್ಟ್ ಡಿಸ್ನಿ
ವಾಲ್ಟ್ ಈ. ಡಿಸ್ನಿ | |
---|---|
ಜನನ | ವಾಲ್ಟರ್ ಎಲಿಯಾಸ್ ಡಿಸ್ನಿ ೫ ಡಿಸೆಂಬರ್ ೧೯೦೧[೧] |
ಮರಣ | December 15, 1966 | (aged 65)
ವೃತ್ತಿ(ಗಳು) | ಚಲನಚಿತ್ರ ನಿರ್ಮಾಪಕ, Co-founder of The Walt Disney Company, formerly known as Walt Disney Productions |
ಸಕ್ರಿಯ ವರ್ಷಗಳು | 1920–1966 |
ಸಂಗಾತಿ | Lillian Bounds (1925-1966) |
Signature | |
ವಾಲ್ಟರ್ ಎಲಿಯಾಸ್ "ವಾಲ್ಟ್ " ಡಿಸ್ನಿ ; (೫ ಡಿಸೆಂಬರ್ ೧೯೦೧ – ೧೯ ಡಿಸೆಂಬರ್ ೧೯೬೬) ಇವರು ಅಮೆರಿಕಾದ ಚಲನಚಿತ್ರ ನಿರ್ಮಾಪಕ, ನಿರ್ದೇಶಕ, ಚಿತ್ರಕಥಾ ಲೇಖಕ, ಕಂಠದಾನ ನಟ-ಕಲಾವಿದ , ಆನಿಮೇಟರ್, ವಾಣಿಜ್ಯೋದ್ಯಮಿ, ಮನೋರಂಜನೆಗಾರ , ವಿದೂಷಕ, ಅಂತಾರಾಷ್ಟ್ರೀಯ ಖ್ಯಾತಿಯ ಗಣ್ಯವ್ಯಕ್ತಿ ಹಾಗೂ ಲೋಕೋಪಕಾರಿ ಯಾಗಿದ್ದರು. ಇಪ್ಪತ್ತನೆಯ ಶತಮಾನದಲ್ಲಿ ಮನೋರಂಜನಾ ಕ್ಷೇತ್ರದಲ್ಲಿ ಭಾರೀ ಹೆಸರು ಮಾಡಿ ವಾಲ್ಟ್ ಡಿಸ್ನಿ ಖ್ಯಾತರಾಗಿದ್ದಾರೆ. ತಮ್ಮ ಸಹೋದರರ ರಾಯ್ ಒ. ಡಿಸ್ನಿರೊಂದಿಗೆ ಸ್ಥಾಪಿಸಿದ ವಾಲ್ಟ್ ಡಿಸ್ನಿ ಪ್ರೊಡಕ್ಷನ್ಸ್ ಮೂಲಕ, ವಾಲ್ಟ್ ಡಿಸ್ನಿ ವಿಶ್ವದಲ್ಲಿಯೇ ಅತ್ಯುತ್ತಮ ಚಲನಚಿತ್ರ ನಿರ್ಮಾಪಕರಲ್ಲಿ ಒಬ್ಬರೆಂಬ ಖ್ಯಾತಿ ಗಳಿಸಿದರು. ಇವರು ಸಹಭಾಗಿತ್ವದಲ್ಲಿ-ಸಂಸ್ಥಾಪಿಸಿದ ನಿಗಮವು ಇಂದು ದಿ ವಾಲ್ಟ್ ಡಿಸ್ನಿ ಕಂಪನಿ ಎಂದು ಚಿರಪರಿಚಿತವಾಗಿದೆ. ಇದು ಈಗ ವಾರ್ಷಿಕ ಅಂದಾಜು $ ೩೫ ಬಿಲಿಯನ್ ಆದಾಯ ಗಳಿಸುತ್ತಿದೆ.
ವಾಲ್ಟ್ ಡಿಸ್ನಿ ವಿಶಿಷ್ಟ ಮತ್ತು ಹೆಸರಾಂತ ಚಲನಚಿತ್ರ ನಿರ್ಮಾಪಕ, ಜನಪ್ರಿಯ ಮನೋರಂಜನೆಗಾರ, ವಿದೂಷಕ, ಅನಿಮೇಷನ್ ಚಿತ್ರಗಳಲ್ಲಿ ಹೊಸತನ ತಂದುದಲ್ಲದೇ ಥೀಮ್ ಪಾರ್ಕ್ ವಿನ್ಯಾಸಕ್ಕಾಗಿ ಹೆಸರುವಾಸಿಯಾಗಿದ್ದರು. ಅವರು ಮತ್ತು ಅವರ ಸಿಬ್ಬಂದಿ, ಮಿಕ್ಕಿ ಮೌಸ್‌ನಂತಹ ವಿಶ್ವದಲ್ಲಿಯೇ ಹಲವು ಅತಿ ಜನಪ್ರಿಯ ಕಾಲ್ಪನಿಕ ಪಾತ್ರಗಳನ್ನು ಸೃಷ್ಟಿಸಿದರು. ಮಿಕ್ಕಿ ಮೌಸ್ ಪಾತ್ರಕ್ಕೆ ಮೂಲತಃ ವಾಲ್ಟ್ ಡಿಸ್ನಿಯವರೇ ಮೂಲಧ್ವನಿ ನೀಡಿ ಕಂಠದಾನ ಮಾಡಿದ್ದರು. ಅವರು ಐವತ್ತೊಂಬತ್ತು ಅಕ್ಯಾಡಮಿ ಅವಾರ್ಡ್ ನಾಮನಿರ್ದೇಶನ ಹಾಗೂ ಇಪ್ಪತ್ತಾರು ಆಸ್ಕರ್ ಪ್ರಶಸ್ತಿಗಳನ್ನು ಗಳಿಸಿಕೊಂಡರು. ಒಂದು ವರ್ಷದಲ್ಲೇ ನಾಲ್ಕು ಆಸ್ಕರ್ ಪ್ರಶಸ್ತಿ [೨] ಗಳಿಸಿದ್ದು ದಾಖಲೆಯಾಗಿದೆ. ಯಾವುದೇ ವ್ಯಕ್ತಿಗಾಗಿ ಅತಿಹೆಚ್ಚು ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳನ್ನು ಸಂಪಾದಿಸಿದ ಅಮೋಘ ಸಾಧನೆ ವಾಲ್ಟ್ ಡಿಸ್ನಿಯವರದು. ಅವರು ಏಳು ಎಮ್ಮಿ ಅವಾರ್ಡ್‌ಗಳನ್ನು ಸಹ ಗಳಿಸಿದರು. ಅಮೆರಿಕಾ ಸಂಯುಕ್ತ ಸಂಸ್ಥಾನ, ಜಪಾನ್, ಫ್ರಾನ್ಸ್ ಮತ್ತು ಚೀನಾ ದೇಶಗಳಲ್ಲಿರುವ ಡಿಸ್ನಿಲೆಂಡ್ ಮತ್ತು ವಾಲ್ಟ್ ಡಿಸ್ನಿ ವರ್ಲ್ಡ್ ರೆಸಾರ್ಟ್ ಥೀಮ್ ಪಾರ್ಕ್,ವಿಹಾರ ತಾಣಗಳಿಗೆ ವಾಲ್ಟ್ ಡಿಸ್ನಿ ಹೆಸರು ಸಮಾನಾರ್ಥಕವಾಗಿದೆ.
ಫ್ಲಾರಿಡಾದಲ್ಲಿ ವಾಲ್ಟ್ ಡಿಸ್ನಿ ವರ್ಲ್ಡ್ ರೆಸಾರ್ಟ್ ಆರಂಭವಾಗುವ ಕೆಲ ವರ್ಷಗಳ ಮುನ್ನ, ಶ್ವಾಸಕೋಶದ ಕ್ಯಾನ್ಸರ್ ನಿಂದ ವಾಲ್ಟ್ ಡಿಸ್ನಿ ೧೫ ಡಿಸೆಂಬರ್ ೧೯೬೬ರಂದು ವಿಧಿವಶರಾದರು.
1901–1937: ಆರಂಭಿಕ ಜೀವನ
[ಬದಲಾಯಿಸಿ]ಬಾಲ್ಯ
[ಬದಲಾಯಿಸಿ]ವಾಲ್ಟರ್ ಎಲಿಯಾಸ್ ಡಿಸ್ನಿ ೫ ಡಿಸೆಂಬರ್ ೧೯೦೧ರಂದು ಶಿಕಾಗೊ ನಗರದ ಹರ್ಮೊಸಾ ಸಮುದಾಯ ವಲಯದ ೨೧೫೬ ಎನ್ ಟ್ರಿಪ್ ಅವೆನ್ಯೂದಲ್ಲಿ ಜನಿಸಿದರು.[೩][೪] ಇವರ ತಂದೆ ಎಲಿಯಾಸ್ ಡಿಸ್ನಿ ಐರಿಷ್-ಕೆನಡಿಯನ್ ಸಂಜಾತರಾಗಿದ್ದರು, ಹಾಗೂ, ತಾಯಿ ಫ್ಲೊರಾ ಕ್ಯಾಲ್ ಡಿಸ್ನಿ ಜರ್ಮನ್-ಅಮೆರಿಕನ್ ಸಂಜಾತೆಯಾಗಿದ್ದರು. ಐರ್ಲೆಂಡ್‌ನ ಕೌಂಟಿ ಕಿಲ್ಕೆನಿಯಲ್ಲಿರುವ ಗೋರಾನ್‌ನಿಂದ ವಾಲ್ಟ್ ಡಿಸ್ನಿಯ ಪೂರ್ವಜರು ಅಮೆರಿಕಾಗೆ ವಲಸೆ ಹೋಗಿದ್ದರು. ವಾಲ್ಟ್ ಡಿಸ್ನಿಯವರ ಮುತ್ತಜ್ಜ ಅರಂಡೇಲ್ ಎಲಿಯಾಸ್ ಡಿಸ್ನಿ ೧೮೦೧ರಲ್ಲಿ ಐರ್ಲೆಂಡ್‌ನ ಕಿಲ್ಕೆನಿಯಲ್ಲಿ ಜನಿಸಿದ್ದರು. ಫ್ರಾನ್ಸ್ ಮೂಲದವರಾಗಿದ್ದ ಹ್ಯೂಸ್ ಮತ್ತು ಅವರ ಪುತ್ರ ರಾಬರ್ಟ್ ಡಿ'ಇಸಿಗ್ನಿಯ ವಂಶದವರಾಗಿದ್ದರು. ಇವರಿಬ್ಬರೂ 1066ರಲ್ಲಿ ವಿಲಿಯಮ್ ದಿ ಕಾಂಕ್ವರರ್ ಜೊತೆ ಇಂಗ್ಲೆಂಡ್‌ಗೆ ಪ್ರಯಾಣಿಸಿದ್ದರು.[೫] . ಡಿ-ಇಸಿಗ್ನಿ ಎಂಬ ಕೊನೆಯ ಹೆಸರು ಆಂಗ್ಲೀಕೃತವಾಗಿ ಡಿಸ್ನಿ ಎಂದಾಯಿತು. ಈ ಕುಟುಂಬವು ಲಿಂಕನ್‌ಷೈರ್ ಕೌಂಟಿಯಲ್ಲಿನ ಲಿಂಕನ್ ನಗರದ ದಕ್ಷಿಣದಲ್ಲಿರುವ ನಾರ್ಟನ್ ಡಿಸ್ನಿ ಗ್ರಾಮದಲ್ಲಿ ವಾಸ್ತವ್ಯ ಹೂಡಿತು.
ವಾಲ್ಟ್ ಡಿಸ್ನಿಯವರ ತಂದೆ ಎಲಿಯಾಸ್ ಡಿಸ್ನಿ ತಮ್ಮ ಔದ್ಯೋಗಿಕ ನೆಲೆ ಕಂಡುಕೊಳ್ಳಲು, ೧೮೭೮ರಲ್ಲಿ ಕೆನಡಾ ದೇಶದ ಓಂಟಾರಿಯೊದ ಹ್ಯೂರಾನ್ ಕೌಂಟಿಯಿಂದ ಅಮೆರಿಕಾ ಸಂಯುಕ್ತ ಸಂಸ್ಥಾನದ ಕ್ಯಾಲಿಫೊರ್ನಿಯಾಗೆ ವಲಸೆಹೋದರು. ಅಂತಿಮವಾಗಿ, ಅವರು ತಮ್ಮ ಹೆತ್ತವರೊಂದಿಗೆ ೧೮೮೪ರ ವರೆಗೆ ಕನ್ಸಸ್‌ನ ಎಲ್ಲಿಸ್ ಬಳಿ ಕೃಷಿ ಕೆಲಸ ಮಾಡಿಕೊಂಡಿದ್ದರು. ಯೂನಿಯನ್ ಪೆಸಿಫಿಕ್ ರೇಲ್ರೋಡ್ ಸಂಸ್ಥೆಯಲ್ಲಿ ಅವರು ಕೆಲಸ ಮಾಡಿದರು. ೧ ಜನವರಿ ೧೮೮೮ರಂದು ಫ್ಲಾರಿಡಾದ ಆಕ್ರಾನ್‌ನಲ್ಲಿ ಫ್ಲೋರಾ ಕ್ಯಾಲ್‌ರನ್ನು ವಿವಾಹವಾದರು. 1890ರಲ್ಲಿ ಕುಟುಂಬವು ಇಲಿನಾಯ್ಸಿನಲ್ಲಿರುವ ಶಿಕಾಗೊ ನಗರಕ್ಕೆ ಸ್ಥಳಾಂತರಗೊಂಡಿತು.[೬] ಇಲ್ಲಿ ಎಲಿಯಾಸ್‌ರ ಸಹೋದರ ರಾಬರ್ಟ್ ವಾಸಿಸುತ್ತಿದ್ದರು.[೬] ತಮ್ಮ ಆರಂಭಿಕ ಜೀವನದಲ್ಲಿ ರಾಬರ್ಟ್ ಅವರು ಎಲಿಯಾಸ್‌ರಿಗೆ ಆರ್ಥಿಕ ನೆರವು ನೀಡುತ್ತಿದ್ದರು.[೬] ೧೯೦೬ರಲ್ಲಿ ವಾಲ್ಟ್ ನಾಲ್ಕು ವರ್ಷದ ಹುಡುಗನಾಗಿದ್ದಾಗ, ಕುಟುಂಬವು ಮಿಸ್ಸೋರಿಯ ಮಾರ್ಸೆಲೀನ್‌ನಲ್ಲಿರುವ ಒಂದು ತೋಟದ ಮನೆಗೆ ಸ್ಥಳಾಂತರಗೊಂಡಿತು.[೭] ಅವರ ಸಹೋದರ ರಾಯ್ ಆಗ ತಾನೇ ಕೃಷಿ ಜಮೀನನ್ನು ಕೊಂಡುಕೊಂಡಿದ್ದರು.[೭] ಮಾರ್ಸೆಲೀನ್‌ನಲ್ಲಿರುವಾಗ ವಾಲ್ಟ್ ಡಿಸ್ನಿ ಚಿತ್ರಕಲೆಯತ್ತ ತಮ್ಮ ಒಲವು ಬೆಳೆಸಿಕೊಂಡರು.[೮] ಅವರ ನೆರೆಹೊರೆಯವರಾಗಿದ್ದ 'ಡಾಕ್' ಷೆರ್ವುಡ್ ಎಂಬ ನಿವೃತ್ತ ವೈದ್ಯರು, 'ರುಪರ್ಟ್' ಎಂಬ ತಮ್ಮ ಕುದುರೆಯ ಚಿತ್ರಗಳನ್ನು ರಚಿಸಲು ವಾಲ್ಟ್ ಡಿಸ್ನಿಯವರಿಗೆ ಹಣ ನೀಡುತ್ತಿದ್ದರು.[೮] (ಷೆರ್ವುಡ್ ಅಮೆರಿಕದ ಖ್ಯಾತ ನಾಟಕಕಾರ) ಮಾರ್ಸೆಲೀನ್ ಮೂಲಕ ಅಟ್ಚಿಸನ್, ಟೊಪೆಕಾ ಮತ್ತು ಸ್ಯಾಂಟಾ ಫೀ ರೇಲ್ವೆ ಹಾದುಹೋಗುವುದನ್ನು ಗಮನಿಸುತ್ತಿದ್ದ ವಾಲ್ಟ್ ಡಿಸ್ನಿಯವರು ರೈಲುಗಾಡಿಗಳತ್ತ ಸಹ ತಮ್ಮ ಒಲವು ಬೆಳೆಸಿಕೊಂಡರು. ಬರುವ ರೈಲನ್ನು ಪರೀಕ್ಷಿಸಲು ಅವರು ರೈಲು ಹಳಿಯ ಮೇಲೆ ತಮ್ಮ ಕಿವಿಯನ್ನಿಟ್ಟು ಸದ್ದನ್ನು ಆಲಿಸುತ್ತಿದ್ದರು.[೪] ನಂತರ ರೈಲು ಚಾಲಕ, ತಮ್ಮ 'ಚಿಕ್ಕಪ್ಪ' ಇಂಜಿನಿಯರ್ ಮೈಕಲ್ ಮಾರ್ಟಿನ್‌ರನ್ನು ಭೇಟಿಯಾಗುವ ಕಾತುರದಲ್ಲಿರುತ್ತಿದ್ದರು.
ಡಿಸ್ನಿ ಕುಟುಂಬವು ನಾಲ್ಕು ವರ್ಷಗಳ ಕಾಲ ಮಾರ್ಸೆಲೀನ್‌ನಲ್ಲಿಯೇ ಉಳಿದುಕೊಂಡ [೯] ನಂತರ ೧೯೧೧ರಲ್ಲಿ ಕನ್ಸಾಸ್ ಸಿಟಿಗೆ ಸ್ಥಳಾಂತರಗೊಂಡಿತು.[೧೦] ವಾಲ್ಟ್ ಮತ್ತು ತಮ್ಮ ಕಿರಿಯ ಸಹೋದರಿ ರೂತ್ ಅಲ್ಲಿ ಬೆಂಟನ್ ಗ್ರ್ಯಾಮರ್ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿದರು. ಅಲ್ಲಿ ವಾಲ್ಟ್ ; ವಾಲ್ಟರ್ ಫೀಫರ್ ಅವರನ್ನು ಭೇಟಿಯಾದರು. ಫೀಫರ್ ಕುಟುಂಬವು ರಂಗಮಂದಿರ ಚಟುವಟಿಕೆಗಳಲ್ಲಿ ಆಸಕ್ತವಾಗಿತ್ತು. ಈ ಕುಟುಂಬವು ಗೀತ-ನಾಟಕಗಳು ಮತ್ತು ಚಲನಚಿತ್ರಗಳ ಪ್ರಪಂಚಕ್ಕೆ ವಾಲ್ಟ್ ಡಿಸ್ನಿಯವರನ್ನು ಪರಿಚಯಿಸಿತು. ಅದಾದ ನಂತರ, ವಾಲ್ಟ್ ತಮ್ಮ ಹೆಚ್ಚು ಸಮಯವನ್ನು ಮನೆಯ ಬದಲಿಗೆ ಫೀಫರ್ ಕುಟುಂಬದೊಡನೆಯೇ ಕಳೆಯುತ್ತಿದ್ದರು.[೧೧] ಈ ಸಮಯ, ಬಾಲಕ ವಾಲ್ಟ್ ಡಿಸ್ನಿ ಕನ್ಸಸ್ ಸಿಟಿ ಆರ್ಟ್ ಇನ್‌ಸ್ಟಿಟ್ಯೂಟ್‌ನಲ್ಲಿ ಪ್ರತಿ ಶನಿವಾರದ ಕಲಾಭ್ಯಾಸದ ತರಗತಿಗಳಿಗೆ ಹಾಜರಾಗುತ್ತಿದ್ದನು.[೧೨]
ಹದಿಹರೆಯದ ವರ್ಷಗಳು
[ಬದಲಾಯಿಸಿ]left|thumb|ಮೊದಲನೆಯ ವಿಶ್ವಸಮರದ ಸಂದರ್ಭದಲ್ಲಿ ಆಂಬುಲೆನ್ಸ್ ಚಾಲಕರಾಗಿ ವಾಲ್ಟ್ ಡಿಸ್ನಿ. 1917ರಲ್ಲಿ, ಎಲಿಯಾಸ್ ಶಿಕಾಗೊದಲ್ಲಿರುವ ಒ-ಝೆಲ್ ಜೆಲ್ಲಿ ಕಾರ್ಖಾನೆಯ ಉದ್ಯಮ ಷೇರ್‌ಗಳನ್ನು ಪಡೆದುಕೊಂಡರು. ಇದರ ಫಲವಾಗಿ, ಡಿಸ್ನಿ ಕುಟುಂಬವು ಶಿಕಾಗೊಗೆ ಮರಳಿತು.[೧೩] ಅಂತಹ ಕುಸಿತದ ಕಾಲದಲ್ಲೂ, ವಾಲ್ಟ್ ಡಿಸ್ನಿ ತಮ್ಮ ಮೊದಲ ವರ್ಷದ ವ್ಯಾಸಂಗವನ್ನು ಮೆಕಿನ್ಲೇ ಪ್ರೌಢಶಾಲೆಯಲ್ಲಿ ಆರಂಭಿಸಿ, ಶಿಕಾಗೊ ಆರ್ಟ್ ಇನ್‌ಸ್ಟಿಟ್ಯೂಟ್‌ನ ರಾತ್ರಿಯ ವೇಳೆಯ ತರಗತಿಗಳಿಗೆ ಹಾಜರಾದರು.[೧೪] ವಾಲ್ಟ್ ಡಿಸ್ನಿ, ಶಾಲೆಯ ವಾರ್ತಾಪತ್ರಿಕೆಗೆ ವ್ಯಂಗ್ಯಚಿತ್ರಕಾರರಾದರು. ಅವರ ವ್ಯಂಗ್ಯಚಿತ್ರಗಳು ದೇಶಭಕ್ತಿ ಸ್ಪುರಿಸುವಲ್ಲಿ ಪ್ರಾಧಾನ್ಯತೆ ಪಡೆದು, ಮೊದಲನೆಯ ವಿಶ್ವಸಮರದ ಮೇಲೆ ಕೇಂದ್ರೀಕೃತವಾಗಿದ್ದವು. ತಮ್ಮ ಹದಿನಾರನೆಯ ವಯಸ್ಸಿನಲ್ಲಿ ವಾಲ್ಟ್ ಡಿಸ್ನಿ ಭೂಸೇನೆಗೆ ಸೇರಲು ಪ್ರೌಢಶಾಲಾ ವ್ಯಾಸಂಗ ಸ್ಥಗಿತಗೊಳಿಸಿದರು. ಆದರೆ ವಯೋಮಿತಿಗಿಂತಲೂ ಅವರದ್ದು ಕಡಿಮೆ ವಯಸ್ಸಿದ್ದ ಕಾರಣ, ಭೂಸೇನೆಯು ವಾಲ್ಟ್‌ರ ಅರ್ಜಿಯನ್ನು ತಿರಸ್ಕರಿಸಿತು.[೧೫]
ಭೂಸೇನೆಯಿಂದ ತಿರಸ್ಕೃತಗೊಂಡ ನಂತರ ವಾಲ್ಟ್ ಮತ್ತು ತಮ್ಮ ಮಿತ್ರರಲ್ಲೊಬ್ಬರೊಡಗೂಡಿ ರೆಡ್ ಕ್ರಾಸ್ ಸಂಸ್ಥೆಗೆ ಸೇರಲು ನಿರ್ಧರಿಸಿದರು.[೧೬] ಅವರು ರೆಡ್ ಕ್ರಾಸ್ ಸೇರಿದ ಕೂಡಲೇ, ಒಂದು ವರ್ಷದ ಕಾಲ ಅವರನ್ನು ಫ್ರಾನ್ಸ್‌ಗೆ ಕಳುಹಿಸಲಾಯಿತು. 11 ನವೆಂಬರ್ 1918ರಂದು ಕದನ ವಿರಾಮಕ್ಕೆ ಸಹಿ ಹಾಕಿದ ನಂತರ ವಾಲ್ಟ್ ಆಂಬುಲೆನ್ಸ್ ಚಾಲಕರಾಗಿ ಸೇವೆ ಸಲ್ಲಿಸಿದರು.[೧೭]
ಶಿಕಾಗೊ ಒ-ಝೆಲ್ ಉದ್ದಿಮೆಯ ಹೊರಗೆ ನೌಕರಿಯನ್ನು ಅರಸಿ ಹೊರಟ ವಾಲ್ಟ್,[೧೮] 1919ರಲ್ಲಿ ಮನೆ ಬಿಟ್ಟು ತಮ್ಮ ಕಲಾ ವೃತ್ತಿ ಆರಂಭಿಸಲು ಕನ್ಸಸ್ ಸಿಟಿಗೆ ಸ್ಥಳಾಂತರವಾದರು.[೧೯] ಮೊದಲಿಗೆ ಒಬ್ಬ ನಟ ಅಥವಾ ಪತ್ರಿಕಾ ಕಲಾವಿದನಾಗಬಯಸಿದ ವಾಲ್ಟ್, ಪತ್ರಿಕಾರಂಗದಲ್ಲಿ ರಾಜಕೀಯ ವಿಡಂಬನಾಚಿತ್ರಗಳು (ವ್ಯಂಗ್ಯಚಿತ್ರಗಳು) ಮತ್ತು ಸರಣಿ ವ್ಯಂಗ್ಯಚಿತ್ರಗಳನ್ನು ರಚಿಸಿ ತಮ್ಮ ನೆಲೆಯನ್ನು ಕಂಡುಕೊಳ್ಳಲು ನಿರ್ಧರಿಸಿದರು. ಆದರೆ, ಯಾರೂ ಸಹ ವಾಲ್ಟ್‌ರನ್ನು ಒಬ್ಬ ಕಲಾವಿದರಾಗಿ ಅಥವಾ ಆಂಬುಲೆನ್ಸ್ ಚಾಲಕರಾಗಿ ಕೆಲಸಕ್ಕೆ ನೇಮಿಸಿಕೊಳ್ಳಲು ನಿರಾಕರಿಸಿದಾಗ, ಅದೇ ಬಡಾವಣೆಯ ಬ್ಯಾಂಕ್ ನೌಕರನಾಗಿದ್ದ ಸಹೋದರ ರಾಯ್, ತಮ್ಮ ಸಹೋದ್ಯೋಗಿಯೊಬ್ಬರ ಮೂಲಕ ವಾಲ್ಟ್‌ರಿಗೆ ಪೆಸ್ಮೆನ್-ರೂಬಿನ್ ಆರ್ಟ್ ಸ್ಟೂಡಿಯೊದಲ್ಲಿ ತಾತ್ಕಾಲಿಕ ನೌಕರಿ ಕೊಡಿಸಿದರು.[೧೯] ಪೆಸ್ಮೆನ್-ರೂಬಿನ್‌ನಲ್ಲಿ ವಾಲ್ಟ್ ಡಿಸ್ನಿ ಪತ್ರಿಕೆಗಳು, ನಿಯತಕಾಲಿಕೆಗಳು ಮತ್ತು ಚಲನಚಿತ್ರಮಂದಿರಗಳಿಗಾಗಿ ಜಾಹೀರಾತುಗಳನ್ನು ಸೃಷ್ಟಿಸಿದರು.[೨೦] ಇಲ್ಲಿ ಅವರು ಯುಬಿ ಐವರ್ಕ್ಸ್ ಎಂಬೊಬ್ಬ ವ್ಯಂಗ್ಯಚಿತ್ರಕಾರರನ್ನು ಭೇಟಿಯಾದರು.[೨೧] ಪೆಸ್ಮೆನ್-ರುಬಿನ್ ಆರ್ಟ್ ಸ್ಟುಡಿಯೊದಲ್ಲಿ ತಮ್ಮ ಕಾಲಾವಧಿ ಮುಗಿಸಿ ಹೊರಬಂದಾಗ ಇಬ್ಬರಿಗೂ ನೌಕರಿಯಿರಲಿಲ್ಲ. ಇಬ್ಬರೂ ತಮ್ಮದೇ ವಾಣಿಜ್ಯ ಉದ್ದೇಶದ ಸಂಸ್ಥೆ ಆರಂಭಿಸಲು ನಿರ್ಧರಿಸಿದರು.[೨೨]
ಜನವರಿ 1920ರಲ್ಲಿ, ವಾಲ್ಟ್ ಡಿಸ್ನಿ ಮತ್ತು ಯುಬಿ ಐವರ್ಕ್ಸ್ ಸೇರಿ 'ಐವರ್ಕ್ಸ್-ಡಿಸ್ನಿ ಕಮರ್ಷಿಯಲ್ ಆರ್ಟಿಸ್ಟ್ಸ್' ಎಂಬ ಅಲ್ಪಾಯುಷ್ಯದ ಸಂಸ್ಥೆಯೊಂದನ್ನು ಸ್ಥಾಪಿಸಿದರು. ಆದರೂ, ಆರಂಭಿಕ ಕಷ್ಟಗಳನ್ನು ಎದುರಿಸಿದ ವಾಲ್ಟ್ ಡಿಸ್ನಿ ತಾತ್ಕಾಲಿಕವಾಗಿ ಕನ್ಸಸ್ ಸಿಟಿಗೆ ತೆರಳಿ, ಅಲ್ಲಿದ್ದ ಕನ್ಸಸ್ ಸಿಟಿ ಫಿಲ್ಮ್ ಆಡ್ ಕಂಪೆನಿಯಲ್ಲಿ ನೌಕರಿ ಮಾಡಿ ಹಣ ಸಂಪಾದಿಸತೊಡಗಿದರು. ಉದ್ದಿಮೆಯನ್ನು ಒಬ್ಬರೇ ಸಮರ್ಪಕವಾಗಿ ನಡೆಸಿಕೊಂಡು ಹೋಗಲು ಅಸಮರ್ಥರಾದ ಐವರ್ಕ್ಸ್ ಆ ಕೂಡಲೇ ವಾಲ್ಟ್ ಡಿಸ್ನಿಯ ಸಹೋದ್ಯೋಗಿಯಾದರು.[೨೩] ಕನ್ಸಸ್ ಸಿಟಿ ಫಿಲ್ಮ್ ಆಡ್ ಕಂಪನಿಯ ಉದ್ಯಮಿಯಾಗಿ ವಾಲ್ಟ್ ಕಟೌಟ್ ಆನಿಮೇಷನ್ ಗಳನ್ನು ವಾಣಿಜ್ಯ ಆಧಾರಿತ ಜಾಹೀರಾತುಗಳನ್ನು ನಿರ್ಮಿಸುತ್ತಿದ್ದರು. ಇದರ ಫಲವಾಗಿ, ಅನಿಮೇಷನ್ ಕ್ಷೇತ್ರದಲ್ಲಿ ವಾಲ್ಟ್ ಆಸಕ್ತಿ ವಹಿಸಿ, ತಾವೂ ಒಬ್ಬ ಆನಿಮೇಟರ್ ಆಗಲು ನಿರ್ಧರಿಸಿದರು.[೨೪] ವಾಲ್ಟ್ ಮನೆಯಲ್ಲಿ ಪ್ರಯೋಗಗಳನ್ನು ನಡೆಸಲು ಅನುಕೂಲವಾಗುವಂತೆ, ಜಾಹೀರಾತು ಸಂಸ್ಥೆಯ ಮಾಲೀಕ ಎ. ವಿ. ಕಾಗರ್, ತಮ್ಮ ಕ್ಯಾಮೆರಾವನ್ನು ವಾಲ್ಟ್ ಡಿಸ್ನಿಗೆ ಎರವಲು ನೀಡಿದರು. 'ಆನಿಮೇಟೆಡ್ ಕಾರ್ಟೂನ್ಸ್: ಹೌ ದೇ ಆರ್ ಮೇಡ್, ದೇರ್ ಆರಿಜಿನ್ ಅಂಡ್ ಡೆವೆಲಪ್ಮೆಂಟ್' ಎಂಬ ಎಡ್ವಿನ್ ಲುಟ್ಜ್‌ರ ಗ್ರಂಥವನ್ನು ಓದಿದ ವಾಲ್ಟ್ ಡಿಸ್ನಿಗೆ, ತಾವು ಕಾಗರ್‌ಗಾಗಿ ಮಾಡುತ್ತಿದ್ದ ಕಟೌಟ್ ಆನಿಮೇಷನ್‌ನ ಬದಲಿಗೆ ಸೆಲ್ ಆನಿಮೇಷನ್ ಬಹಳ ಭರವಸೆ ಮೂಡಿಸುವಂಥದ್ದು ಎಂಬುದು ಅರಿವಾಯಿತು. ತಮ್ಮದೇ ಆದ ಆನಿಮೇಷನ್ ಉದ್ದಿಮೆಯನ್ನು ಆರಂಭಿಸಲು ನಿರ್ಧರಿಸಿದ ವಾಲ್ಟ್,[೨೫] ಕನ್ಸಸ್ ಸಿಟಿ ಫಿಲ್ಮ್ ಆಡ್ ಕಂಪೆನಿಯ ಸಹೋದ್ಯೋಗಿ ಫ್ರೆಡ್ ಹಾರ್ಮನ್‌ರನ್ನು ತಮ್ಮ ಮೊದಲ ನೌಕರರನ್ನಾಗಿ ನೇಮಿಸಿಕೊಂಡರು.[೨೫] ಕನ್ಸಸ್ ಸಿಟಿ ವಲಯದಲ್ಲೇ ಅತಿ ಜನಪ್ರಿಯ 'ಷೋಮ್ಯಾನ್' ಆಗಿದ್ದ ಸ್ಥಳೀಯ ಚಿತ್ರಮಂದಿರದ ಮಾಲೀಕ ಫ್ರ್ಯಾಂಕ್ ನ್ಯೂಮನ್‌ರೊಂದಿಗೆ ವಾಲ್ಟ್ ಒಪ್ಪಂದ ಮಾಡಿಕೊಂಡರು.[೨೬] ಇದರಂತೆ, 'ಲಾಫ್-ಒ-ಗ್ರ್ಯಾಮ್ಸ್' ಎಂಬ ತಮ್ಮ ವ್ಯಂಗ್ಯಚಿತ್ರಗಳನ್ನು ಸ್ಥಳೀಯ ಚಿತ್ರಮಂದಿರದಲ್ಲಿ ಪ್ರದರ್ಶಿಸಲಾಯಿತು.[೨೬]
ಲಾಫ್-ಒ-ಗ್ರ್ಯಾಮ್ ಸ್ಟುಡಿಯೊ
[ಬದಲಾಯಿಸಿ]'ನ್ಯೂಮನ್ ಲಾಫ್-ಒ-ಗ್ರ್ಯಾಮ್ಸ್' ಎಂದು ಪ್ರಸ್ತುತಪಡಿಸಿದ [೨೬] ವಾಲ್ಟ್ ಡಿಸ್ನಿಯವರ ವ್ಯಂಗ್ಯಚಿತ್ರಗಳು ಕನ್ಸಸ್ ಸಿಟಿ ವಲಯದಲ್ಲಿ ವ್ಯಾಪಕ ಜನಪ್ರಿಯತೆ ಗಳಿಸಿದವು.[೨೭] ಈ ಯಶಸ್ಸಿನ ಮೂಲಕ, ವಾಲ್ಟ್ ಡಿಸ್ನಿ 'ಲಾಫ್-ಒ-ಗ್ರ್ಯಾಮ್' ಎಂಬ ಹೆಸರಿನ ತಮ್ಮದೇ ಸ್ಟುಡಿಯೊವನ್ನು ಸ್ವಾಧೀನಕ್ಕೆ ಪಡೆಯಲು ಸಮರ್ಥರಾದರು.[೨೮] ಫ್ರೆಡ್ ಹಾರ್ಮನ್‌ರ ಸಹೋದರ ಹಗ್ ಹಾರ್ಮನ್, ರುಡಾಲ್ಫ್ ಐಸಿಂಗ್ ಮತ್ತು ವಾಲ್ಟ್‌ರ ಆಪ್ತ ಸ್ನೇಹಿತ ಯುಬಿ ಐವರ್ಕ್ಸ್ ಸೇರಿದಂತೆ ಹೆಚ್ಚುವರಿ ಆನಿಮೇಟರ್‌ಗಳನ್ನು ನೇಮಿಸಿಕೊಂಡರು.[೨೯] ದುರಾದೃಷ್ಟವೆಂದರೆ, ತಮ್ಮ ಉದ್ಯೋಗಿಗಳಿಗೆ ಅತಿ ಹೆಚ್ಚು ಪ್ರಮಾಣದ ವೇತನಗಳನ್ನು ನೀಡುವುದರಿಂದಾಗಿ ಸ್ಟುಡಿಯೊದ ಲಾಭದ ಗಳಿಕೆಯಲ್ಲಿ ಹೆಚ್ಚಿಗೇನೂ ಉಳಿಯಲಿಲ್ಲ. ಹಣಕಾಸು ನಿರ್ವಹಣೆ ವಾಲ್ಟ್ ಡಿಸ್ನಿಯವರಿಗೆ ದುಸ್ತರದ ಕೆಲಸವಾಯಿತು.[೩೦] ಇದರ ಪರಿಣಾಮವಾಗಿ, ಸ್ಟುಡಿಯೊದ ಸಾಲದ ಹೊರೆ ಹೆಚ್ಚಾಗಿ ದಿವಾಳಿ ಸ್ಥಿತಿ ತಲುಪಿ, ಮುಚ್ಚಬೇಕಾಯಿತು.[೩೧] ನಂತರ, ವಾಲ್ಟ್ ಡಿಸ್ನಿ ಕ್ಯಾಲಿಫೊರ್ನಿಯಾದಲ್ಲಿರುವ, ಚಲನಚಿತ್ರದ ರಾಜಧಾನಿಯೆನ್ನಲಾದ ಹಾಲಿವುಡ್‌ನಲ್ಲಿ ಒಂದು ಸ್ಟುಡಿಯೊ ಸ್ಥಾಪಿಸುವ ಕನಸು ಕಂಡರು.[೩೨]
ಹಾಲಿವುಡ್
[ಬದಲಾಯಿಸಿ]ಹಾಲಿವುಡ್‌ನಲ್ಲಿ ವ್ಯಂಗ್ಯಚಿತ್ರದ ಸ್ಟುಡಿಯೊ ಸ್ಥಾಪಿಸಲು, ವಾಲ್ಟ್ ಡಿಸ್ನಿ ಮತ್ತು ಅವರ ಸಹೋದರರು ಹಣ ಕ್ರೋಢೀಕರಿಸಿದರು.[೩೩] ಕನ್ಸಸ್ ಸಿಟಿಯಲ್ಲಿರುವಾಗಲೇ ಆರಂಭಗೊಳಿಸಿದ ಅವರ ಹೊಸ ಚಲನಚಿತ್ರ ಆಲೀಸ್ ಕಾಮೆಡೀಸ್‌ಗಾಗಿ ಅವರಿಗೆ ವಿತರಕರ ಅಗತ್ಯವಿತ್ತು.[೩೧] ಆದರೆ ಅವರಿಗೆ ವಿತರಕರು ಲಭಿಸಲಿಲ್ಲ. ಅವರು ನ್ಯೂಯಾರ್ಕ ವಿತರಕಿ ಮಾರ್ಗರೆಟ್ ವಿಂಕ್ಲರ್‌ರಿಗೆ ಅಪೂರ್ಣ ಪ್ರತಿಯನ್ನು ಕಳುಹಿಸಿದರು. ಮಾರ್ಗರೆಟ್ ಕೂಡಲೇ ವಾಲ್ಟ್‌ಗೆ ಪ್ರತಿಕ್ರಿಯಿಸಿದರು. ಆಲೀಸ್ ವಂಡರ್ಲೆಂಡ್ ಆಧಾರಿತ ಸಾಹಸ-ಪ್ರಧಾನ/ಆನಿಮೇಟೆಡ್ ಕಿರುಚಿತ್ರಗಳ ವಿತರಣೆಗಾಗಿ ಒಂದು ಒಪ್ಪಂದ ಮಾಡೋಣವೆಂದು ಮಾರ್ಗರೆಟ್ ಪ್ರಸ್ತಾಪಿಸಿದರು.[೩೪]
ಆಲೀಸ್ ಕಾಮೆಡೀಸ್
[ಬದಲಾಯಿಸಿ]ವಾಲ್ಟ್ ಡಿಸ್ನಿ ಕೋರಿಕೆಯ ಮೇರೆಗೆ, ಆಲೀಸ್ ವಂಡರ್ಲೆಂಡ್ ನ 'ಲೈವ್ ಆಕ್ಷನ್ ಸ್ಟಾರ್' ವರ್ಜಿನಿಯಾ ಡೇವಿಸ್, ಐವರ್ಕ್ಸ್ ಹಾಗೂ ಅವರವರ ಕುಟುಂಬಗಳನ್ನು ಕನ್ಸಸ್ ಸಿಟಿಯಿಂದ ಹಾಲಿವುಡ್‌ಗೆ ಸ್ಥಳಾಂತರಿಸಲಾಯಿತು. ಇದು ಡಿಸ್ನಿ ಬ್ರದರ್ಸ್ ಸ್ಟುಡಿಯೊದ (ಕಲಾಭವನದ)ಆರಂಭದ ಹಂತವಾಗಿತ್ತು. ಇದು ಸಿಲ್ವರ್ ಲೇಕ್ ಜಿಲ್ಲೆಯ ಹೈಪರಿಯನ್ ಅವೆನ್ಯೂ ರಸ್ತೆಯಲ್ಲಿ ಸ್ಥಾಪಿಸಲಾಗಿದ್ದು, 1939 ತನಕ ಅಲ್ಲಿಯೇ ಇತ್ತು. (ರಜತ ಪರದೆ)ಸೆಲ್ಯುಲಾಯ್ಡ್ ಮೇಲೆ ಶಾಯಿ ಮತ್ತು ಬಣ್ಣದ ಕಾರ್ಯ ಮಾಡಲು ವಾಲ್ಟ್ ಡಿಸ್ನಿ ಲಿಲ್ಲಿಯನ್ ಬೌಂಡ್ಸ್ ಎಂಬ ಯುವತಿಯನ್ನು 1925ರಲ್ಲಿ ನೇಮಿಸಿಕೊಂಡರು. ಸ್ವಲ್ಪಕಾಲ ವಿಹರಿಸಿದ ನಂತರ, ಇವರಿಬ್ಬರೂ ಅದೇ ವರ್ಷ ವಿವಾಹವಾದರು.
ಆಲೀಸ್ ಕಾಮೆಡೀಸ್ ಹೊಸ ಸರಣಿಯು ಪರವಾಗಿಲ್ಲ ಎನ್ನುವಷ್ಟು ಯಶಸ್ವಿಯಾಯಿತು. ಇದರಲ್ಲಿ ಡಾನ್ ಒ'ಡೇ ಮತ್ತು ಮ್ಯಾರ್ಗೀ ಗೇ ಇಬ್ಬರೂ ಆಲೀಸ್ ಪಾತ್ರ ವಹಿಸಿದರು. ಲೊಯಿಸ್ ಹಾರ್ಡ್ವಿಕ್ ಸಹ ಕೆಲದಿನ ಆಲೀಸ್ ಪಾತ್ರ ವಹಿಸಿದರು. ಈ ಸರಣಿಯು 1927ರಲ್ಲಿ ಅಂತ್ಯಗೊಂಡಾಗ, ಆನಿಮೇಟ್ ಆಗಿದ್ದ ಪಾತ್ರಗಳ ಮೇಲೆ ದೃಷ್ಟಿ ಕೇಂದ್ರೀಕೃತವಾಗಿತ್ತು. ಅದರಲ್ಲೂ ವಿಶಿಷ್ಟವಾಗಿ, ಲೈವ್-ಆಕ್ಷನ್ ಆಲೀಸ್ ಬದಲಿಗೆ, ಜೂಲಿಯಸ್ ಎಂಬ ಒಂದು ಮಾರ್ಜಾಲದ ಮೇಲೆಕಣ್ಣು ಬಿದ್ದಿತ್ತು. ಇದು ಫೆಲಿಕ್ಸ್ ದಿ ಕ್ಯಾಟ್ ಪಾತ್ರವನ್ನು ಹೋಲುತ್ತಿತ್ತು.
ಆಸ್ವಾಲ್ಡ್ ದಿ ಲಕಿ ರ‌್ಯಾಬಿಟ್
[ಬದಲಾಯಿಸಿ]1927ರಲ್ಲಿ, ಚಾರ್ಲ್ಸ್ ಬಿ. ಮಿಂಟ್ಜ್ ಮಾರ್ಗರೆಟ್ ,ವಿಂಕ್ಲರ್‌ರನ್ನು ವಿವಾಹವಾಗಿ ಅವರ ಉದ್ದಿಮೆಯನ್ನು ತಮ್ಮ ಕೈಗೆತ್ತಿಕೊಂಡಿದ್ದರು. ಯುನಿವರ್ಸಲ್ ಪಿಕ್ಚರ್ಸ್ ಮೂಲಕ ವಿತರಿಸಲು ಒಂದು ಹೊಸ ಆನಿಮೇಟೆಡ್ ಸರಣಿಯ ನಿರ್ಮಾಣವಾಗಲೆಂದು ಆದೇಶಿಸಿದರು. ಆಸ್ವಾಲ್ಡ್ ದಿ ಲಕಿ ರ‌್ಯಾಬಿಟ್ ಎಂಬ ಈ ಹೊಸ ಸರಣಿಯು ಬಹಳ ಬೇಗ ಜನಪ್ರಿಯತೆ ಗಳಿಸಿತು. ಐವರ್ಕ್ಸ್ ಚಿತ್ರ ಬರೆದು ನಿರ್ಮಿಸಿದ ಆಸ್ವಾಲ್ಡ್ ಮೊಲದ ಪಾತ್ರವು ಅಪಾರ ಜನಪ್ರಿಯತೆ ಗಳಿಸಿತು. ಇದರೊಂದಿಗೆ ಡಿಸ್ನಿ ಸ್ಟುಡಿಯೊ ವಿಸ್ತರಿಸಿತು, ವಾಲ್ಟ್ ಡಿಸ್ನಿ ಹಾರ್ಮನ್, ರುಡಾಲ್ಫ್ ಐಸಿಂಗ್, ಕಾರ್ಮನ್ ಮ್ಯಾಕ್ಸ್‌ವೆಲ್ ಮತ್ತು ಫ್ರಿಜ್ ಫ್ರೆಲೆಂಗ್ ಇವರನ್ನು ಕನ್ಸಸ್ ಸಿಟಿಯಿಂದ ಪುನಃ ನೇಮಿಸಿಕೊಂಡರು.
ಫೆಬ್ರವರಿ 1928ರಲ್ಲಿ, ಪ್ರತಿ ಸರಣಿಗೂ ಹೆಚ್ಚಿನ ವೇತನಕ್ಕಾಗಿ ಮಿಂಟ್ಜ್‌ರೊಂದಿಗೆ ಮಾತುಕತೆ ನಡೆಸಲು ವಾಲ್ಟ್ ಡಿಸ್ನಿ ನ್ಯೂಯಾರ್ಕ್‌ಗೆ ಹೋದರು. ಆದರೆ ವಾಲ್ಟ್‌ಗೆ ದೊಡ್ಡ ಆಘಾತ ಕಾದಿತ್ತು. ಮಿಂಟ್ಜ್ ತಾವು ಪ್ರತಿ ಸರಣಿಗೂ ವಾಲ್ಟ್ ಡಿಸ್ನಿಗೆ ನೀಡಬೇಕಾದ ಶುಲ್ಕವನ್ನು ಕಡಿಮೆಗೊಳಿಸುವರೆಂದರು. ಇಷ್ಟೇ ಅಲ್ಲ, ಹಾರ್ಮನ್, ಐಸಿಂಗ್, ಮ್ಯಾಕ್ಸ್‌ವೆಲ್ ಮತ್ತು ಫ್ರೆಲೆಂಗ್ ಸೇರಿದಂತೆ ವಾಲ್ಟ್ ಡಿಸ್ನಿಯ ಪ್ರಮುಖ ಆನಿಮೇಟರ್‌ಗಳು ಕರಾರಿನಡಿಯಿದ್ದರೆಂದರು. (ಐವರ್ಕ್ಸ್ ಡಿಸ್ನಿ ಸಂಸ್ಥೆಯಿಂದ ಹೊರಬರಲು ನಿರಾಕರಿಸಿದರು). ಒಂದು ವೇಳೆ ವಾಲ್ಟ್ ಡಿಸ್ನಿ ನಿರ್ಮಾಣ ಅಗ್ಗದ ಬಜೆಟ್ ನಿರ್ಮಾಣಗಳನ್ನು ಒಪ್ಪದಿದ್ದಲ್ಲಿ ಮಿಂಟ್ಜ್ ತಮ್ಮ ಸ್ವಂತ ಸ್ಟುಡಿಯೊ ಆರಂಭಿಸುವುದಾಗಿ ಹೇಳಿದರು. ಆಸ್ವಾಲ್ಡ್ ಟ್ರೇಡ್‌ಮಾರ್ಕ್ ಡಿಸ್ನಿದಲ್ಲ, ಯುನಿವರ್ಸಲ್‌ದಾಗಿತ್ತಂತೆ. ಡಿಸ್ನಿ ಸಂಸ್ಥೆಯ ಅಗತ್ಯವಿಲ್ಲದೆಯೇ ಚಲನಚಿತ್ರಗಳನ್ನು ಮಾಡಬಹುದು ಎಂದು ಮಿಂಟ್ಜ್ ಹೇಳಿದರು. ವಾಲ್ಟ್ ಡಿಸ್ನಿ ಮಿಂಟ್ಜ್‌ರ ಪ್ರಸ್ತಾಪವನ್ನು ತಿರಸ್ಕರಿಸಿದರು; ತಮ್ಮ ಬಹುತೇಕ ಆನಿಮೇಷನ್ ಸಿಬ್ಬಂದಿಯನ್ನು ಕಳೆದುಕೊಂಡರು.
ತಮ್ಮ ಸಿಬ್ಬಂದಿ ವರ್ಗದಲ್ಲಿ ಬಹುಮಂದಿ ತಮ್ಮ ಸಂಸ್ಥೆಯನ್ನು ತೊರೆದಿದ್ದರಿಂದಾಗಿ, ವಾಲ್ಟ್ ಡಿಸ್ನಿ ಪುನಃ ಏಕಾಂಗಿಯಾದರು.[೩೫] ಆಸ್ವಾಲ್ಡ್ ಪಾತ್ರಕ್ಕೆ ಹಕ್ಕುಗಳನ್ನು ಪುನಃ ಪಡೆದುಕೊಳ್ಳಲು ಡಿಸ್ನಿ ಸಂಸ್ಥೆಗೆ 78 ವರ್ಷಗಳು ಬೇಕಾದವು. ದೀರ್ಘಕಾಲದಿಂದಲೂ ABC ಕ್ರೀಡಾ ವೀಕ್ಷಕವಿವರಣೆಗಾರ ಆಲ್ ಮೈಕಲ್ಸ್‌ರಿಗಾಗಿ ವಹಿವಾಟೊಂದರ ಮೂಲಕ, 2006ರಲ್ಲಿ ವಾಲ್ಟ್ ಡಿಸ್ನಿ ಸಂಸ್ಥೆಯು NBC ಯುನಿವರ್ಸಲ್‌ನಿಂದ ಆಸ್ವಾಲ್ಡ್ ದಿ ಲಕಿ ರ‌್ಯಾಬಿಟ್ ಹಕ್ಕುಗಳನ್ನು ಪುನಃ ಪಡೆಯಿತು.[೩೬]
ಮಿಕ್ಕಿ ಮೌಸ್
[ಬದಲಾಯಿಸಿ]ಆಸ್ವಾಲ್ಡ್ ಹಕ್ಕುಗಳನ್ನು ಕಳೆದುಕೊಂಡ ನಂತರ, ವಾಲ್ಟ್ ಡಿಸ್ನಿಯವರಿಗೆ ಅದರ ಸ್ಥಾನ ತುಂಬಲು ಒಂದು ಹೊಸ ಪಾತ್ರದ ಅಗತ್ಯವಾಯಿತು. ಕನ್ಸಸ್ ಸಿಟಿ ಸ್ಟುಡಿಯೊದಲ್ಲಿ ಕೆಲಸ ಮಾಡುತ್ತಿರುವಾಗ ಅವರು ದತ್ತು ಪಡೆದು ಸಾಕಿದ್ದ ಒಂದು ಮೂಷಕವನ್ನು ಆಧರಿಸಿ ಆ ಪಾತ್ರ ಸೃಷ್ಟಿಸಿದರು.[೩೭] ವಾಲ್ಟ್ ಡಿಸ್ನಿ ರಚಿಸಿದ ಕರಡು ಚಿತ್ರವು ಆನಿಮೇಟ್ ಮಾಡಲು ಸುಲಭವಾಗುವಂತೆ ಯುಬಿ ಐವರ್ಕ್ಸ್ ಪುನಃ ರಚಿಸಿದರು. ಆದರೆ, ಮಿಕ್ಕಿಗೆ ಕಂಠಧ್ವನಿ ಮತ್ತು ವ್ಯಕ್ತಿತ್ವ ನೀಡಿದವರು ವಾಲ್ಟ್ ಡಿಸ್ನಿ. ಡಿಸ್ನಿ ಸಂಸ್ಥೆಯ ಉದ್ಯೋಗಿಯೊಬ್ಬರ ಮಾತಿನಲ್ಲಿ, 'ಯುಬಿ ಮಿಕ್ಕಿಯ ರೂಪವನ್ನು ಸೃಷ್ಟಿಸಿದರೆ, ವಾಲ್ಟ್ , ಮಿಕ್ಕಿಗೆ ತಮ್ಮ ಅಂತರಾತ್ಮ ವನ್ನು ನೀಡಿದರು.' [೩೭] ಆಸ್ವಾಲ್ಡ್ ಮತ್ತು ಮಿಕ್ಕಿಯಲ್ಲದೆ, ತದ್ರೂಪಿ ಮೂಷಕ ಪಾತ್ರವೊಂದು ಆಲೀಸ್ ಕಾಮೆಡೀಸ್ ನಲ್ಲಿ ಕಾಣಸಿಗುತ್ತದೆ. ಇದು ಇಕಿ ದಿ ಮೌಸ್ ಎಂಬ ಪಾತ್ರ. ಫಿಡ್ಲ್‌ಸ್ಟಿಕ್ಸ್ ಎಂಬ ಮೊದಲ ಫ್ಲಿಪ್ ದಿ ಫ್ರಾಗ್ ವ್ಯಂಗ್ಯಚಿತ್ರದಲ್ಲಿ ಮಿಕ್ಕಿ ಮೌಸ್ ತದ್ರೂಪಿ ಪಾತ್ರವು ಪಿಟೀಲು ನುಡಿಸುತ್ತದೆ. ಆರಂಭಿಕ ಚಲನಚಿತ್ರಗಳನ್ನು ಐವರ್ಕ್ಸ್ ಆನಿಮೇಟ್ ಮಾಡುತ್ತಿದ್ದರು. ಚಲನಚಿತ್ರ ಶೀರ್ಷಿಕೆಯ ಪರಿಚಯ ಪಟ್ಟಿಯ ವಿವರಣೆಗಳಲ್ಲಿ ಇವರ ಹೆಸರನ್ನು ಗಮನಾರ್ಹ ರೀತಿಯಲ್ಲಿ ಉಲ್ಲೇಖಿಸಲಾಗುತ್ತಿತ್ತು. ಈ ಮೂಷಕ ಪಾತ್ರಕ್ಕೆ ಮೂಲತಃ 'ಮೊರ್ಟಿಮರ್' ಎಂದು ಹೆಸರಿಸಲಾಗಿತ್ತು, ಆದರೆ, ಮೊರ್ಟಿಮರ್ ಎಂಬ ಹೆಸರು ಸರಿಹೊಂದುವುದಿಲ್ಲ ಎಂದು ಲಿಲಿಯನ್ ಡಿಸ್ನಿ ಅಭಿಪ್ರಾಯಪಟ್ಟ ನಂತರ 'ಮಿಕ್ಕಿ ಮೌಸ್' ಎಂದು ಮರುನಾಮಕರಣ ಮಾಡಲಾಯಿತು. ಮೊರ್ಟಿಮರ್ ಪಾತ್ರವು ಆನಂತರ ಮಿನ್ನಿ ಮೌಸ್‌ಳ ಹೃದಯ ಗೆಲ್ಲುವ ಯತ್ನದಲ್ಲಿ ಮಿಕ್ಕಿಯ ಎದುರಾಳಿಯಾಯಿತು. ಮೊರ್ಟಿಮರ್ ತನ್ನ ಜನಪ್ರಿಯ ಎದುರಾಳಿಗಿಂತಲೂ ಎತ್ತರವಿದ್ದು, ಮಾತನಾಡುವಾಗ ಬ್ರೂಕ್ಲಿನ್ ಉಚ್ಚಾರಣಾ ಶೈಲಿ ಎದ್ದುಕಾಣುತ್ತಿತ್ತು.
ಮಿಕ್ಕಿ ಮೌಸ್ ಹೊಂದಿರುವ ಮೊದಲ ಆನಿಮೇಟೆಡ್ ಕಿರುಚಿತ್ರ ಪ್ಲೇನ್ ಕ್ರೇಜಿ . ಡಿಸ್ನಿ ಸಂಸ್ಥೆಯ ಮುಂಚಿನ ಚಿತ್ರಗಳಂತೆಯೇ ಇದೂ ಸಹ ಒಂದು ನಿಶ್ಯಬ್ದ,ಮೂಕಿ ಚಿತ್ರವಾಗಿತ್ತು. ಪ್ಲೇನ್ ಕ್ರೇಜಿ ಮತ್ತು ಆನಂತರ ನಿರ್ಮಿಸಿದ ದಿ ಗ್ಯಾಲಪಿನ್ ಗಾಚೊ ಆನಿಮೇಷನ್ ಚಿತ್ರಗಳಿಗೆ ವಿತರಕರನ್ನು ಕಂಡುಕೊಳ್ಳಲು ವಿಫಲವಾದ ಡಿಸ್ನಿ ಸಂಸ್ಥೆಯು ಸಂಭಾಷಣೆಸಹಿತ ಮಿಕ್ಕಿ ಚಲನಚಿತ್ರ 'ಸ್ಟೀಮ್‌ಬೋಟ್ ವಿಲ್ಲೀ 'ಯನ್ನು ಬಿಡುಗಡೆಗೊಳಿಸಿತು. ಪ್ಯಾಟ್ ಪಾವರ್ಸ್ ಎಂಬ ಉದ್ಯಮಿ ವಿತರಣಾ ಒಪ್ಪಂದವನ್ನು ಮಾಡಿಕೊಂಡಿದ್ದಲ್ಲದೆ, ಧ್ವನಿ ಏಕಕಾಲಿಕಗೊಳಿಸುವ ಸಿನೆಫೋನ್ ಪ್ರಕ್ರಿಯೆಯನ್ನೂ ಸಹ ಒದಗಿಸಿದರು. ಸ್ಟೀಮ್‌ಬೋಟ್ ವಿಲ್ಲೀ ದಿಢೀರ್ ಯಶಸ್ವಿಯಾಯಿತು. ಪ್ಲೇನ್ ಕ್ರೇಜಿ ಮತ್ತು ದಿ ಗ್ಯಾಲಪಿಂಗ್ ಗಾಚೊ ಧ್ವನಿ ಸಹಿತ ಪುನಃ ಬಿಡುಗಡೆಯಾದವು. ಮುಂದೆ ಬಿಡುಗಡೆಯಾದ ಎಲ್ಲಾ ಮಿಕ್ಕಿ ವ್ಯಂಗ್ಯಚಿತ್ರ ಸರಣಿಗಳೂ ಧ್ವನಿಪಥ ಅಥವಾ ಕಂಠಸಿರಿಯನ್ನು ಹೊಂದಿದ್ದವು. ಆರಂಭಿಕ ವ್ಯಂಗ್ಯ ಚಲನಚಿತ್ರಗಳಲ್ಲಿ ಸ್ವತಃ ವಾಲ್ಟ್ ಡಿಸ್ನಿ ಕಂಠಧ್ವನಿಯ ಪರಿಣಾಮಗಳನ್ನು ನೀಡಿ, 1946ರ ತನಕ ಮಿಕ್ಕಿ ಮೌಸ್‌ಗಾಗಿ ಕಂಠ ದಾನ ಮಾಡಿದರು. ಸ್ಟೀಮ್‌ಬೋಟ್ ವಿಲ್ಲೀ ಬಿಡುಗಡೆ ನಂತರ, ವಾಲ್ಟ್ ಡಿಸ್ನಿ ತಮ್ಮ ಮುಂಬರುವ ವ್ಯಂಗ್ಯಚಲನಚಿತ್ರಗಳಲ್ಲಿ ಧ್ವನಿಗ್ರಹಣವನ್ನು ಯಶಸ್ವಿಯಾಗಿ ಬಳಸಿದರು. ಆರಂಭದಲ್ಲಿ ಧ್ವನಿಯನ್ನೊಳಗೊಂಡ ಡಿಸ್ನಿ ವ್ಯಂಗ್ಯಚಲನಚಿತ್ರಗಳಿಗೆ ಸಿನೆಫೋನ್ ಹೊಸ ವಿತರಕರಾದರು.[೩೮] ಫೆಲಿಕ್ಸ್ ದಿ ಕ್ಯಾಟ್‌ನ್ನು ಹಿಂದಿಕ್ಕಿ, ಮಿಕ್ಕಿ ಮೌಸ್ ವಿಶ್ವದ ಅತಿ ಹೆಚ್ಚು ಜನಪ್ರಿಯ ವ್ಯಂಗ್ಯಚಿತ್ರದ ಪಾತ್ರವಾಗಿ ಮೆಚ್ಚುಗೆ ಗಳಿಸಿತು.[೩೭] 1930ರಲ್ಲಿ, ಧ್ವನಿ-ಸಹಿತಿ ವ್ಯಂಗ್ಯಚಲನಚಿತ್ರಗಳು ಗಮನ ಸೆಳೆಯಲು ವಿಫಲವಾದ ಕಾರಣ, ಈ ಮಾದರಿಯಲ್ಲಿ ಬಿಡುಗಡೆಯಾಗಿದ್ದ 'ಫೆಲಿಕ್ಸ್' ಪರದೆಯಿಂದ ಮಾಸಿಹೋಗಿತ್ತು.[೩೯] ದಶಕ 1930ರ ಆರಂಭದಲ್ಲಿ ಮಿಕ್ಕಿ ಮೌಸ್‌ನ ಜನಪ್ರಿಯತೆಯು ಗರಿಷ್ಠ ಮಟ್ಟದಲ್ಲಿ ಹೆಚ್ಚಾಗತೊಡಗಿತ್ತು.[೩೭]
ಸಿಲ್ಲಿ ಸಿಂಫನೀಸ್
[ಬದಲಾಯಿಸಿ]ಮಿಕ್ಕಿ ಮೌಸ್ ಸರಣಿ ಯ ನಂತರ, ಸಿಲ್ಲಿ ಸಿಂಫನೀಸ್ ಎಂಬ ಸಂಗೀತ ಪ್ರಧಾನ ಕಿರುಚಿತ್ರಗಳು 1929ರಲ್ಲಿ ಬಿಡುಗಡೆಯಾದವು. ಇವುಗಳಲ್ಲಿ ಮೊದಲನೆಯದಾದ ದಿ ಸ್ಕೆಲೆಟನ್ ಡ್ಯಾನ್ಸ್ - ಇಡೀ ಕಿರುಚಿತ್ರಕ್ಕೆ ಐವರ್ಕ್ಸ್ ಚಿತ್ರರಚನೆ ಮತ್ತು ಆನಿಮೇಷನ್ ಮಾಡಿದರು. ಇಷ್ಟೇ ಅಲ್ಲದೆ, 1928 ಮತ್ತು 1929ರಲ್ಲಿ ಬಿಡುಗಡೆಯಾದ ವ್ಯಂಗ್ಯಚಲನಚಿತ್ರಗಳಲ್ಲಿನ ಬಹುಪಾಲು ಚಿತ್ರಗಳಿಗೆ ಐವರ್ಕ್ಸ್ ಚಿತ್ರರಚಿಸಿದ್ದರು. ಎರಡೂ ಸರಣಿಗಳು ಯಶಸ್ವಿಯಾದರೂ, ಡಿಸ್ನಿ ಸ್ಟುಡಿಯೊಗೆ ತಾನು ಪ್ಯಾಟ್ ಪಾವರ್ಸ್‌ರಿಂದ ಅಪೇಕ್ಷಿಸಿದ್ದ ಲಾಭದ ನ್ಯಾಯಸಮ್ಮತ ಪಾಲು ದೊರೆಯಲಿಲ್ಲ.[೪೦] ಇದರ ಪರಿಣಾಮವಾಗಿ, 1930ರಲ್ಲಿ ಡಿಸ್ನಿ ಕೊಲಂಬಿಯಾ ಪಿಕ್ಚರ್ಸ್ ಸಂಸ್ಥೆಯೊಂದಿಗೆ ಹೊಸ ವಿತರಣಾ ಒಪ್ಪಂದ ಮಾಡಿಕೊಂಡಿತು. ಸಂಗೀತದಲ್ಲಿನ ನಾವೀನ್ಯತೆ ಈ ವ್ಯಂಗ್ಯಚಲನಚಿತ್ರದ ಮೂಲಾಧಾರವಾಗಿತ್ತು. ಕಾರ್ಲ್ ಸ್ಟಾಲಿಂಗ್ ಮೊದಲ ಸಿಲ್ಲಿ ಸಿಂಫನಿ ವ್ಯಂಗ್ಯಚಲನಚಿತ್ರಕ್ಕಾಗಿ ಸಂಗೀತ ಸಂಯೋಜನೆ ಮಾಡಿದ್ದರು.[೪೧]
ಶೀಘ್ರದಲ್ಲಿಯೇ, ಪ್ಯಾಟ್ ಪಾವರ್ಸ್ ಐವರ್ಕ್ಸ್‌ರಿಗೆ ತಮ್ಮದೇ ಆದ ಸ್ಟುಡಿಯೊ ಆರಂಭಿಸಿ, ವಿಶಿಷ್ಟ ಕರಾರನ್ನು ಒಪ್ಪಿಕೊಳ್ಳುವಂತೆ ಆಮಿಷವೊಡ್ಡಿದರು. ನಂತರ, ಕಾರ್ಲ್ ಸ್ಟಾಲಿಂಗ್ ಸಹ ಡಿಸ್ನಿ ಸಂಸ್ಥೆ ತೊರೆದು ಐವರ್ಕ್ಸ್‌ರ ಹೊಸ ಸ್ಟುಡಿಯೊಗೆ ಸೇರ್ಪಡೆಯಾದರು.[೪೨] ದ್ವಿಪಥೀಯ ಟೆಕ್ನಿಕಲರ್ ವಿಧಾನದಲ್ಲಿ ಚಿತ್ರೀಕರಿಸಿದ ಧ್ವನಿಸಹಿತ ಮೊದಲ(ಕಾರ್ಟೂನ್ ) ವ್ಯಂಗ್ಯಚಲನಚಿತ್ರ 'ಫಿಡ್ಲ್‌ಸ್ಟಿಕ್ಸ್' ಮೂಲಕ, ಐವರ್ಕ್ಸ್ ತಮ್ಮ ಫ್ಲಿಪ್ ದಿ ಫ್ರಾಗ್ ಸರಣಿ ಆರಂಭಿಸಿದರು. ಐವರ್ಕ್ಸ್ ವಿಲ್ಲೀ ವೊಪ್ಪರ್ ಮತ್ತು ಕೊಮಿಕಲರ್ ಎಂಬ ಇನ್ನೂ ಎರಡು ವ್ಯಂಗ್ಯಚಲನಚಿತ್ರ ಸರಣಿ ನಿರ್ಮಿಸಿದರು. ಆನಿಮೇಷನ್ ತಂತ್ರಜ್ಞಾನ ಒಳಗೊಂಡಂತೆ ವಿವಿಧ ಯೋಜನೆಗಳಲ್ಲಿ ಕಾರ್ಯ ನಿರ್ವಹಿಸಲು, ಐವರ್ಕ್ಸ್ ತಮ್ಮ ಸ್ಟುಡಿಯೊವನ್ನು 1936ರಲ್ಲಿ ಮುಚ್ಚಿದರು. 1940ರಲ್ಲಿ ಅವರು ಡಿಸ್ನಿ ಸ್ಟುಡಿಯೊಗೆ ಮರಳಿ, ಅದರ ಸಂಶೋಧನೆ ಮತ್ತು ಅಭಿವೃದ್ಧಿ (ರಿಸರ್ಚ್ ಅಂಡ್ ಡೆವೆಲಪ್ಮೆಂಟ್) ವಿಭಾಗದಲ್ಲಿ ಚಲನಚಿತ್ರದ ಹಲವಾರು ನವೀನ ಪ್ರಕ್ರಿಯೆಗಳು ಮತ್ತು ವಿಶಿಷ್ಟ ಆನಿಮೇಷನ್ ತಂತ್ರಜ್ಞಾನಗಳ ಹರಿಕಾರರಾದರು.
1932ರಲ್ಲಿ ಮಿಕ್ಕಿ ಮೌಸ್ ಅಪಾರ ಜನಪ್ರಿಯತೆ ಗಳಿಸಿದ ವ್ಯಂಗ್ಯಚಲನಚಿತ್ರದ ಪಾತ್ರವಾಗಿತ್ತು, ಆದರೆ, ಸಿಲ್ಲಿ ಸಿಂಫನೀಸ್ ಅಷ್ಟೇನೂ ಯಶಸ್ವಿಯಾಗಿರಲಿಲ್ಲ. ಇದೇ ವರ್ಷ ಡಿಸ್ನಿ ಸಂಸ್ಥೆಗೆ ತೀವ್ರ ಪೈಪೋಟಿಯಾಯಿತು. ಮ್ಯಾಕ್ಸ್ ಫ್ಲೇಷರ್‌ರ ಫ್ಲ್ಯಾಪರ್ ವ್ಯಂಗ್ಯಚಿತ್ರ ಪಾತ್ರವಾದ ಬೆಟ್ಟಿ ಬೂಪ್ ಚಿತ್ರ ವೀಕ್ಷಕರ ಮೆಚ್ಚುಗೆ ಗಳಿಸುವುದರಲ್ಲಿ ಯಶಸ್ವಿಯಾಯಿತು.[೪೩] ಕಳೆದ 1930ರ ದಶಕದಲ್ಲಿ ಮ್ಯಾಕ್ಸ್ ಫ್ಲೇಷರ್ ಅವರು ವಾಲ್ಟ್ ಡಿಸ್ನಿಯವರ ಪ್ರಮುಖ ಪ್ರತಿಸ್ಪರ್ಧಿಯಾಗಿದ್ದರು.[೪೪] ಅವರೇ ಮುಂದೆ ಡಿಸ್ನಿ ಸಂಸ್ಥೆಗೆ ಸಹಯೋಗ ನೀಡಿ, 1954ರಲ್ಲಿ ಬಿಡುಗಡೆಯಾದ 20,000 ಲೀಗ್ಸ್ ಅಂಡರ್ ದಿ ಸೀ ನಿರ್ದೇಶಿಸಿದ ರಿಚರ್ಡ್ ಫ್ಲೇಷರ್‌ರ ತಂದೆಯಾಗಿದ್ದರು. ಏತನ್ಮಧ್ಯೆ, ಡಿಸ್ನಿ ಸಂಸ್ಥೆಯ (ಕಾರ್ಟೂನ್ )ವ್ಯಂಗ್ಯಚಲನಚಿತ್ರಗಳ ವಿತರಣೆ ಮಾಡುತ್ತಿದ್ದ ಕೊಲಂಬಿಯಾ ಪಿಕ್ಚರ್ಸ್ ಹಿಂದೆ ಸರಿದು, ಅದರ ಸ್ಥಾನದಲ್ಲಿ ಯುನೈಟೆಡ್ ಆರ್ಟಿಸ್ಟ್ಸ್ ಸಂಸ್ಥೆಗೆ ಅವಕಾಶ ನೀಡಿತು.[೪೫] ಸುಮಾರು 1932ರ ಅಪರಾರ್ಧದಲ್ಲಿ, ಹರ್ಬರ್ಟ್ ಕಾಲ್ಮಸ್ ಎಂಬವರು ಮೊದಲ ತ್ರಿಪಥೀಯ ಟೆಕ್ನಿಕಲರ್ ಕ್ಯಾಮೆರಾ ಬಳಸಿ ಆಗಷ್ಟೇ ಕಾರ್ಯ ಪೂರ್ಣಗೊಳಿಸಿದ್ದರು.[೪೬] ಇವರು ವಾಲ್ಟ್ ಡಿಸ್ನಿಯವರನ್ನು ಭೇಟಿ ಮಾಡಿ, ಡಿಸ್ನಿ ಸಂಸ್ಥೆಯು ಮೂಲತಃ ಕಪ್ಪು-ಬಿಳುಪು ಆವೃತ್ತಿಯಲ್ಲಿ ನಿರ್ಮಿಸಿದ ಫ್ಲಾವರ್ಸ್ ಅಂಡ್ ಟ್ರೀಸ್ ಚಲನಚಿತ್ರವನ್ನು ತ್ರಿಪಥೀಯ ಟೆಕ್ನಿಕಲರ್‌ಗೆ ಮಾರ್ಪಡಿಸಿ ಪುನಃ ಬಿಡುಗಡೆಗೊಳಿಸುವಂತೆ ಒತ್ತಾಯಿಸಿದರು.[೪೭] ಫ್ಲಾವರ್ಸ್ ಅಂಡ್ ಟ್ರೀಸ್ ಮುಂದೆ ಅದ್ಭುತ ಯಶಸ್ಸು ಕಂಡು, 1932ನೆಯ ವರ್ಷದ ಅತ್ಯುತ್ತಮ ಕಿರುಚಿತ್ರ: ವ್ಯಂಗ್ಯಚಲನಚಿತ್ರ ವಿಭಾಗದಲ್ಲಿ ಮೊದಲ ಅಕ್ಯಾಡಮಿ ಅವಾರ್ಡ್ ಗಳಿಸಿತು.
ಫ್ಲಾವರ್ಸ್ ಅಂಡ್ ಟ್ರೀಸ್ ಬಿಡುಗಡೆಯಾದ ನಂತರ, ಮುಂದಿನ ಎಲ್ಲಾ ಸಿಲ್ಲಿ ಸಿಂಫ ನಿ (ಕಾರ್ಟೂನ್)ವ್ಯಂಗ್ಯಚಲನಚಿತ್ರಗಳನ್ನು ವರ್ಣಚಿತ್ರ ರೂಪದಲ್ಲಿಯೇ ರಚಿಸಲಾಯಿತು. ಟೆಕ್ನಿಕಲರ್‌ನೊಂದಿಗೆ ವಾಲ್ಟ್ ಡಿಸ್ನಿ ಎರಡು ವರ್ಷಗಳ ಒಪ್ಪಂದ ಮಾಡಿಕೊಳ್ಳಲು ಸಾಧ್ಯವಾಯಿತು. ತ್ರಿಪಥೀಯ ಟೆಕ್ನಿಕಲರ್ [೪೮][೪೯] ತಂತ್ರಜ್ಞಾನ ಬಳಸಲು ವಿಶೇಷ ಹಕ್ಕುಗಳನ್ನು ವಾಲ್ಟ್ ಡಿಸ್ನಿಯವರಿಗೆ ನೀಡಲಾಯಿತು. ಈ ಒಪ್ಪಂದವನ್ನು ಕ್ರಮೇಣ ಐದು ವರ್ಷಗಳ ತನಕ ವಿಸ್ತರಿಸಲಾಯಿತು.[೪೧] ಸಿಲ್ಲಿ ಸಿಂಫನೀಸ್ ಮೂಲಕ, ವಾಲ್ಟ್ ಡಿಸ್ನಿ 1933ರಲ್ಲಿ ತಮ್ಮ ಅತಿ ಯಶಸ್ವೀ ವ್ಯಂಗ್ಯಚಲನಚಿತ್ರ ದಿ ತ್ರೀ ಲಿಟ್ಲ್ ಪಿಗ್ಸ್ ನ್ನು ಸಿದ್ದಪಡಿಸಿ ಬಿಡುಗಡೆಗೊಳಿಸಿದರು.[೫೦] ಈ ವ್ಯಂಗ್ಯಚಲನಚಿತ್ರವು ಹಲವು ತಿಂಗಳುಗಳ ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶಿತವಾಯಿತು. ಗ್ರೇಟ್ ಡಿಪ್ರೆಷನ್‌ನ ಗೀತೆಯಾಗಿ ಜನಪ್ರಿಯತೆ ಗಳಿಸಿದ ಗೀತೆ 'ಹೂ ಇಸ್ ಅಫ್ರೇಯ್ಡ್ ಆಫ್ ದಿ ಬಿಗ್ ಬ್ಯಾಡ್ ವುಲ್ಫ್' ,ಇದರ ಪ್ರಧಾನ ಅಂಶವಾಗಿತ್ತು.[೫೧]
ಮೊದಲ ಅಕ್ಯಾಡಮಿ ಅವಾರ್ಡ್
[ಬದಲಾಯಿಸಿ]1932ರಲ್ಲಿ, ಅಪಾರ ಜನಪ್ರಿಯತೆ ಗಳಿಸಿದ 'ಮಿಕ್ಕಿ ಮೌಸ್' ಪಾತ್ರದ ಸೃಷ್ಟಿಗಾಗಿ ವಾಲ್ಟ್ ಡಿಸ್ನಿಗೆ ವಿಶೇಷ ಅಕ್ಯಾಡಮಿ ಅವಾರ್ಡ್ ಲಭಿಸಿತು. ಮಿಕ್ಕಿ ಮೌಸ್ ಸರಣಿಯನ್ನು 1935ರಲ್ಲಿ ವರ್ಣಚಿತ್ರ ರೂಪದಲ್ಲಿ ರಚಿಸಲಾಯಿತು. ಡಿಸ್ನಿ ಸಂಸ್ಥೆಯು ಶೀಘ್ರದಲ್ಲೇ ಡೊನಾಲ್ಡ್ ಡಕ್, ಗೂಫಿ ಮತ್ತು ಪ್ಲೂಟೊದಂತಹ ಸಹಪಾತ್ರಗಳಿಗಾಗಿ ಅದಕ್ಕೆ ಪೂರಕ ಸರಣಿಗಳನ್ನು ಆರಂಭಿಸಿತು. 1937ರಲ್ಲಿ ಪ್ಲುಟೊ ಮತ್ತು ಡೊನಾಲ್ಡ್ ತಮ್ಮದೇ ವೈಯಕ್ತಿಕ ವ್ಯಂಗ್ಯಚಲನಚಿತ್ರಗಳನ್ನು ಹೊಂದಿದವು.[೫೨] 1939ರಲ್ಲಿ ಗೂಫಿಗಾಗಿಯೂ ಸಹ ಸೊಲೊ ವ್ಯಂಗ್ಯಚಲನಚಿತ್ರಗಳನ್ನು ನಿರ್ಮಿಸಲಾಯಿತು.[೫೩] ಮಿಕ್ಕಿಯ ಪಾಲುದಾರರಲ್ಲಿ ಡೊನಾಲ್ಡ್ ಡಕ್ ,ಡಿಸ್ನಿಯ ಎರಡನೆಯ ಅತಿಹೆಚ್ಚು ಜನಪ್ರಿಯ(ಕಾರ್ಟೂನ್ ) ವ್ಯಂಗ್ಯಚಿತ್ರ ಪಾತ್ರವಾಗಿ ಹೊರಹೊಮ್ಮಿತು. 1934ರಲ್ಲಿ ತೆರೆಕಂಡ ಆರ್ಫನ್ಸ್ ಬೆನಿಫಿಟ್ ವ್ಯಂಗ್ಯ ಚಲನಚಿತ್ರದಲ್ಲಿ ಡೊನಾಲ್ಡ್ ಮಿಕ್ಕಿಯೊಂದಿಗೆ ಕಾಣಿಸಿಕೊಂಡಿತು.[೫೪]
ಮಕ್ಕಳು
[ಬದಲಾಯಿಸಿ]ಡಿಸ್ನಿ ದಂಪತಿ ಮಕ್ಕಳನ್ನು ಪಡೆಯುವ ಮೊದಲ ಯತ್ನದಲ್ಲಿ ಲಿಲಿಯನ್‌ರಿಗೆ ಗರ್ಭಪಾತ ದ ಆಘಾತ ಸಂಭವಿಸಿತು. ಲಿಲಿಯನ್ ಡಿಸ್ನಿ ಪುನಃ ಗರ್ಭಿಣಿಯಾದಾಗ, ಡಯನೆ ಮೇರೀ ಡಿಸ್ನಿ ಎಂಬ ಹೆಣ್ಣುಮಗುವಿಗೆ 18 ಡಿಸೆಂಬರ್ 1933ರಂದು ಜನ್ಮವಿತ್ತರು. ಡಿಸ್ನಿ ದಂಪತಿಗಳು ಷಾರೊನ್ ಮೇ ಡಿಸ್ನಿ 31 ಡಿಸೆಂಬರ್ 1936 - 16 ಫೆಬ್ರವರಿ 1993) ಎಂಬ ಹೆಸರಿನ ಹೆಣ್ಣುಮಗುವನ್ನು ದತ್ತು ತೆಗೆದುಕೊಂಡರು.[೫೫]
1937-1941: ಆನಿಮೇಷನ್‌ನ ಸ್ವರ್ಣಯುಗ
[ಬದಲಾಯಿಸಿ]"ಡಿಸ್ಸ್ನೀಸ್ ಫಾಲಿ": ಸ್ನೋ ವೈಟ್ ಅಂಡ್ ದಿ ಸೆವೆನ್ ಡ್ವಾರ್ಫ್ಸ್
[ಬದಲಾಯಿಸಿ]ಎರಡು ವ್ಯಂಗ್ಯಚಿತ್ರ (ಕಾರ್ಟೂನ್ )ಸರಣಿಗಳನ್ನು ರಚಿಸಿದ ನಂತರ, ಡಿಸ್ನಿ ಸಂಸ್ಥೆಯು ಪೂರ್ಣಾವಧಿಯ ಚಲನಚಿತ್ರಕ್ಕಾಗಿ ಯೋಜನೆಗಳನ್ನು 1934ರಲ್ಲಿ ರೂಪಿಸಲಾರಂಭಿಸಿತು. 1935ರಲ್ಲಿ, ಜನಾಭಿಪ್ರಾಯ ಸಂಗ್ರಹದ ಸಮೀಕ್ಷೆಗಳ ಪ್ರಕಾರ, ಮ್ಯಾಕ್ಸ್ ಫ್ಲೇಷರ್ ನಿರ್ಮಿಸಿದ ಪಾಪೈ ದಿ ಸೇಲರ್ ಇನ್ನೊಂದು ವ್ಯಂಗ್ಯಚಿತ್ರ ಸರಣಿಯು ಮಿಕ್ಕಿ ಮೌಸ್‌ಗಿಂತಲೂ ಹೆಚ್ಚು ಜನಪ್ರಿಯವಾಗಿತ್ತು.[೫೬] ಆದರೂ, ಡಿಸ್ನಿ ಸಂಸ್ಥೆಯು ಮಿಕ್ಕಿ ಮೌಸ್‌ನ್ನು ಅಗ್ರಸ್ಥಾನಕ್ಕೆ ಏರಿಸುವುದರಲ್ಲಿ ಯಶಸ್ವಿಯಾಯಿತು. ಜೊತೆಗೆ, ಮಿಕ್ಕಿಯ ಜನಪ್ರಿಯತೆ ಹೆಚ್ಚಿಸಲು ಆ ಪಾತ್ರಕ್ಕೆ ನವೀನ ಬಣ್ಣ,ಜೀವ ತುಂಬಿ, ಆ ಸಮಯದಲ್ಲೇ ಅತ್ಯಂತ ಆಕರ್ಷಣೀಯವಾಗಿಸಲು ಸ್ವಲ್ಪ ಮಟ್ಟಿಗೆ ಮರುವಿನ್ಯಾಸ ಮಾಡಲಾಯಿತು.[೩೭] ಪೂರ್ಣಾವಧಿಯ ಚಲನಚಿತ್ರ ಸ್ನೋ ವೈಟ್ ನ ಆನಿಮೇಟೆಡ್ ಆವೃತ್ತಿ ನಿರ್ಮಿಸುವ ಡಿಸ್ನಿ ಸಂಸ್ಥೆಯ ಬಗ್ಗೆ ಚಿತ್ರರಂಗಕ್ಕೆ ಗೊತ್ತಾದಾಗ, ಈ ಯತ್ನವನ್ನು 'ಡಿಸ್ನಿಸ್ ಫೊಲಿ ' (ಡಿಸ್ನಿಯ ಮೂರ್ಖತನ) ಎಂದು ಟೀಕಿಸಿತು. ಈ ಯತ್ನದಿಂದಾಗಿ ಡಿಸ್ನಿ ಸಂಸ್ಥೆ ದಿವಾಳಿಯಾಗುವುದು ನಿಶ್ಚಿತ ಎನ್ನತೊಡಗಿತು. ಪತ್ನಿ ಲಿಲಿಯನ್ ಮತ್ತು ಅಣ್ಣ ರಾಯ್ ಇಬ್ಬರೂ ಸಹ ಈ ಚಲನಚಿತ್ರ ಮಾಡುವುದು ಬೇಡ ಎಂದು ವಾಲ್ಟ್ ಡಿಸ್ನಿಯವರಿಗೆ ಸಮಜಾಯಿಷಿ ನೀಡಲು ಯತ್ನಿಸಿದರು. ಆದರೆ ವಾಲ್ಟ್ ಡಿಸ್ನಿ ತಮ್ಮ ರೂಪುರೇಖೆಗಳನ್ನು ಮುಂದುವರೆಸಿದರು. ತಮ್ಮ ಸ್ಟುಡಿಯೊ ಸಿಬ್ಬಂದಿ ವರ್ಗಕ್ಕೆ ತರಬೇತಿ ನೀಡಲೆಂದು ವಾಲ್ಟ್ ಡಿಸ್ನಿ ಚೂಯಿನಾರ್ಡ್ ಆರ್ಟ್ ಇನ್ಸ್‌ಟಿಟ್ಯೂಟ್ ಪ್ರಾಧ್ಯಾಪಕ ಡಾನ್ ಗ್ರಹಾಮ್‌ರನ್ನು ನೇಮಿಸಿಕೊಂಡರು. ಸಹಜವೆನಿಸುವ ಮಾನವ ಆನಿಮೇಷನ್, ವಿಶಿಷ್ಟ ಪಾತ್ರದ ಆನಿಮೇಷನ್, ವಿಶೇಷ ಪ್ರಭಾವಗಳು (ಸ್ಪೆಷಲ್ ಇಫೆಕ್ಟ್ಸ್) ಪ್ರಯೋಗಗಳಿಗಾಗಿ, ಹಾಗೂ, ಮಲ್ಟಿಪ್ಲೇನ್ ಕ್ಯಾಮೆರಾದಂತಹ ವಿಶೇಷ ಉಪಕರಣ ಮತ್ತು ಪ್ರಕ್ರಿಯೆಗಳ ಬಳಕೆಗಾಗಿ ಸಿಲ್ಲಿ ಸಿಂಫನೀಸ್ ನ್ನು ವೇದಿಕೆಯಾಗಿ ಬಳಸಿತು. ಡಿಸ್ನಿ ಸಂಸ್ಥೆಯು 1937ರಲ್ಲಿ ಬಿಡುಗಡೆಯಾದ ಸಿಲ್ಲಿ ಸಿಂಫನೀಸ್ ನ ಒಂದು ಕಿರು-ವ್ಯಂಗ್ಯಚಲನಚಿತ್ರ ದಿ ಓಲ್ಡ್ ಮಿಲ್ ತನ್ನ ಮೊದಲ ಬಾರಿಗೆ ಈ ತಂತ್ರ ಪ್ರಯೋಗಿಸಿತು.[೫೭]
ಡಿಸ್ನಿ ಸ್ಟುಡಿಯೊದ ಗುಣಮಟ್ಟ ಉತ್ತಮಗೊಳಿಸಲು ಈ ವಿನ್ಯಾಸ-ಅಭಿವೃದ್ಧಿ ಮತ್ತು ತರಬೇತಿಯೆಲ್ಲವನ್ನೂ ಬಳಸಲಾಯಿತು. ಇದರಿಂದಾಗಿ ವಾಲ್ಟ್ ಡಿಸ್ನಿ ನಿರೀಕ್ಷಿಸಿದ ಗುಣಮಟ್ಟವನ್ನು ಈ ಸ್ಟುಡಿಯೊ ಚಲನಚಿತ್ರಕ್ಕೆ ನೀಡಬಹುದೆಂಬ ಅಶಯವೂ ಇತ್ತು. 1934ರಿಂದ 1937ರ ಮಧ್ಯಭಾಗದಲ್ಲಿ ಸ್ಟುಡಿಯೊದಲ್ಲಿ ಹಣದ ಕೊರತೆಯುಂಟಾಗುವ ವರೆಗೂ, ಸ್ನೋ ವೈಟ್ ಅಂಡ್ ದಿ ಸೆವೆನ್ ಡ್ವಾರ್ಫ್ಸ್ ಎಂದು ಹೆಸರಿಸಲಾದ ಈ ಚಲನಚಿತ್ರವು ಪೂರ್ಣಪ್ರಮಾಣದ ನಿರ್ಮಾಣ ಹಂತದಲ್ಲಿತ್ತು. ಸ್ನೋ ವೈಟ್ ಚಲನಚಿತ್ರ ಪೂರ್ಣಗೊಳಿಸಲು ಬೇಕಾದ ಹಣ ಪಡೆಯಲು, ವಾಲ್ಟ್ ಡಿಸ್ನಿ ಈ ಚಲನಚಿತ್ರದ ಕರಡು ಭಾಗವನ್ನು ಬ್ಯಾಂಕ್ ಆಫ್ ಅಮೆರಿಕಾದ ಸಾಲದ ಅಧಿಕಾರಿಗಳಿಗೆ ತೋರಿಸಬೇಕಾಯಿತು. ಚಲನಚಿತ್ರ ಪೂರ್ಣಗೊಳಿಸಲು ಬ್ಯಾಂಕ್ ,ಡಿಸ್ನಿ ಸಂಸ್ಥೆಗೆ ಅಗತ್ಯ ಹಣದ ಸಾಲ ನೀಡಿತು. ಪೂರ್ಣಗೊಂಡ ಚಲನಚಿತ್ರದ ಪ್ರಥಮಪ್ರದರ್ಶನ 21 ಡಿಸೆಂಬರ್ 1937ರಂದು ಕಾರ್ಥೆ ಸರ್ಕಲ್ ಥಿಯೆಟರ್‌ನಲ್ಲಿ ನಡೆಯಿತು. ಚಲನಚಿತ್ರವು ಮುಗಿದ ಕೂಡಲೆ, ವೀಕ್ಷಕರೆಲ್ಲರೂ ಎದ್ದು ನಿಂತು ಸ್ನೋ ವೈಟ್ ಅಂಡ್ ದಿ ಸೆವೆನ್ ಡ್ವಾರ್ಫ್ಸ್ ಚಲನಚಿತ್ರವನ್ನು ಶ್ಲಾಘಿಸಿ ಕರತಾಡನ ಮಾಡಿದರು. ಅಮೆರಿಕಾದಲ್ಲಿಯೇ ಮೊಟ್ಟಮೊದಲ ಆನಿಮೇಟೆಡ್ ಹಾಗೂ ಟೆಕ್ನಿಕಲರ್ ಚಲನಚಿತ್ರ ಸ್ನೋ ವೈಟ್ ಫೆಬ್ರವರಿ 1938ರಲ್ಲಿ ಬಿಡುಗಡೆಯಾಯಿತು. ಹಿಂದೆ 1936ರಲ್ಲಿ ಡಿಸ್ನಿ ಸಂಸ್ಥೆಯ ವ್ಯಂಗ್ಯಚಲನಚಿತ್ರಗಳ ವಿತರಕರಾಗಿದ್ದ RKO ರೇಡಿಯೊ ಪಿಕ್ಚರ್ಸ್ ವಿತರಣಾ ಉದ್ಯಮದತ್ತ ಗಮನ ಕೇಂದ್ರೀಕರಿಸಲು ತನ್ನ ವ್ಯಾನ್ ಬ್ಯೂರನ್ ಸ್ಟುಡಿಯೊಸ್‌ನ್ನು ಮುಚ್ಚಿತು. RKO ರೇಡಿಯೊ ಪಿಕ್ಚರ್ಸ್ ಹೊಸ ಒಪ್ಪಂದದಂತೆ ಸ್ನೋ ವೈಟ್ ಚಲನಚಿತ್ರವನ್ನು ಬಿಡುಗಡೆಗೊಳಿಸಿತು.[೫೮] ಈ ಚಲನಚಿತ್ರವು 1938ರ ಅತಿ ಯಶಸ್ವಿ ಚಲನಚಿತ್ರವಾಯಿತು; ಚಿತ್ರಮಂದಿರಗಳಲ್ಲಿ ತೆರೆಕಂಡ ಇದು $8 ದಶಲಕ್ಷಕ್ಕಿಂತಲೂ ಹೆಚ್ಚು ಆದಾಯ ಗಳಿಸಿತು.
ಆನಿಮೇಷನ್‌ನ ಸ್ವರ್ಣಯುಗ
[ಬದಲಾಯಿಸಿ]ಸ್ನೋ ವೈಟ್ ನ ಯಶಸ್ಸು ವಾಲ್ಟ್ ಡಿಸ್ನಿಯವರಿಗೆ ಒಂದು ಪೂರ್ಣಪ್ರಮಾಣದ, ಏಳು ಸಣ್ಣ ಗಾತ್ರದ ಆಸ್ಕರ್ ಪ್ರಶಸ್ತಿ ಪ್ರತಿಮೆಗಳನ್ನು ಜಯಿಸಿಕೊಟ್ಟಿತು. ಇದರ ಫಲವಾಗಿ, ಬರ್ಬ್ಯಾಂಕ್‌ನಲ್ಲಿ ವಾಲ್ಟ್ ಡಿಸ್ನಿ ಸ್ಟುಡಿಯೊಸ್‌ಗಾಗಿ ಹೊಸ ಆವರಣ ನಿರ್ಮಿಸಲು ಸಾಧ್ಯವಾಯಿತು. ಇದು ವಾಣಿಜ್ಯ-ವ್ಯವಹಾರಕ್ಕಾಗಿ 24 ಡಿಸೆಂಬರ್ 1939ರಂದು ಆರಂಭವಾಯಿತು. ಸ್ನೋ ವೈಟ್ ಡಿಸ್ನಿ ಸಂಸ್ಥೆಯ ಯಶಸ್ಸಿನ ಶಿಖರ ಮಾತ್ರವಲ್ಲ, ಡಿಸ್ನಿ ಸಂಸ್ಥೆಯ ಆನಿಮೇಷನ್‌ನ ಸ್ವರ್ಣಯುಗಕ್ಕೆ ನಾಂದಿಯಾಯಿತು.[೫೯][೬೦] ಆಗತಾನೆ ಪಿನೊಚಿಯೊ ಪೂರ್ಣಗೊಳಿಸಿದ ಚಲನಚಿತ್ರ ಆನಿಮೇಷನ್ ಸಿಬ್ಬಂದಿ ಫ್ಯಾಂಟೆಸಿಯಾ ಮತ್ತು ಬಾಂಬಿ ನಿಮಿತ್ತ ತಮ್ಮ ಕಾರ್ಯ ಮುಂದುವರೆಸಿದರಲ್ಲದೆ, ಆಲೀಸ್ ಇನ್ ವಂಡರ್ಲೆಂಡ್ ಮತ್ತು ಪೀಟರ್ ಪ್ಯಾನ್ ಚಲನಚಿತ್ರಗಳ ನಿರ್ಮಾಣದ ಆರಂಭಿಕ ಹಂತಗಳಲ್ಲಿಯೂ ಸಕ್ರಿಯರಾದರು. ಕಿರು ವ್ಯಂಗ್ಯಚಲನಚಿತ್ರಗಳ ಸಿಬ್ಬಂದಿ ಈ ಸಮಯದಲ್ಲಿ ಸಿಲ್ಲಿ ಸಿಂಫನೀಸ್ ಸಂಬಂಧಿತ ಕಾರ್ಯಗಳನ್ನು ಪೂರ್ಣಗೊಳಿಸಿ, ಮಿಕ್ಕಿ ಮೌಸ್ , ಡೊನಾಲ್ಡ್ ಡಕ್ , ಗೂಫಿ ಮತ್ತು ಪ್ಲೂಟೊ ವ್ಯಂಗ್ಯಚಿತ್ರ ಸರಣಿಗಳೊಂದಿಗೆ ತಮ್ಮ ಕಾರ್ಯ ಮುಂದುವರೆಸಿದರು.
ಕಳೆದ 1930ರ ದಶಕದ ಅಪರಾರ್ಧಭಾಗದಲ್ಲಿ ಚಿತ್ರಮಂದಿರದ ಪ್ರೇಕ್ಷಕರಲ್ಲಿ ಡೊನಾಲ್ಡ್ ಡಕ್ ಮಿಕ್ಕಿ ಮೌಸ್‌ನ್ನು ಹಿಂದಿಕ್ಕಿ ಹೆಚ್ಚು ಜನಪ್ರಿಯತೆ ಗಳಿಸಲಾರಂಭಿಸಿದಾಗ, ಆನಿಮೇಟರ್ ಫ್ರೆಡ್ ಮೂರ್ ಮಿಕ್ಕಿ ಮೌಸ್‌ನ್ನು ಪುನರ್ವಿನ್ಯಾಸ ಮಾಡಿದರು.[೬೧]
1940ರಲ್ಲಿ ಸ್ನೋ ವೈಟ್ ಅಂಡ್ ದಿ ಸೆವೆನ್ ಡ್ವಾರ್ಫ್ಸ್ ನಂತರ ಪಿನೊಚಿಯೊ ಮತ್ತು ಫ್ಯಾಂಟಸಿಯಾ ಚಲನಚಿತ್ರಮಂದಿರಗಳ ಹಾದಿ ಹಿಡಿದವು. ಆದರೆ ಇವೆರಡೂ ವ್ಯವಹಾರಿಕವಾಗಿ ವಿಫಲವಾದವು. ಆದಾಯ ಹೆಚ್ಚಲೆಂದು, ಕಡಿಮೆ ವೆಚ್ಚದಲ್ಲಿ ನಿರ್ಮಿಸಲಾದ ಡಂಬೊ ಚಲನಚಿತ್ರವನ್ನು ಪ್ರಾಯೋಜಿಸಲಾಗಿತ್ತು. ಆದರೆ ಈ ಚಿತ್ರದ ನಿರ್ಮಾಣ ಹಂತದಲ್ಲಿ ಹಲವು ಆನಿಮೇಷನ್ ಸಿಬ್ಬಂದಿ ಮುಷ್ಕರ ಹೂಡಿದರು. ಇದರಿಂದಾಗಿ ವಾಲ್ಟ್ ಡಿಸ್ನಿ ಮತ್ತು ತಮ್ಮ ಕಲಾವಿದ ಸಿಬ್ಬಂದಿ ನಡುವೆ ಭಾರೀ ಮನಸ್ತಾಪಕ್ಕೆ ಕಾರಣವಾಯಿತು.
1941-1945: ಎರಡನೆಯ ವಿಶ್ವಸಮರದ ಸಮಯದಲ್ಲಿ
[ಬದಲಾಯಿಸಿ]U.S. ಸರ್ಕಾರವು ತನ್ನ 'ಗುಡ್ ನೇಬರ್ ಪಾಲಿಸಿಯಂತೆ, ವಾಲ್ಟ್ ಡಿಸ್ನಿ ಮತ್ತು ಆನಿಮೇಟರ್‌ಗಳ ತಂಡವನ್ನು ದಕ್ಷಿಣ ಅಮೆರಿಕಾಗೆ ಕಳುಹಿಸಿಕೊಟ್ಟಿತು. ಮುಂಬರುವ ಚಲನಚಿತ್ರ ಸ್ಯಾಲುಡೊಸ್ ಅಮಿಗೊಸ್ ಗಾಗಿ ಹಣಕಾಸಿನ ನೆರವಿನ ಆಶ್ವಾಸನೆ ನೀಡಿತು.[೬೨]
ಅಕ್ಟೋಬರ್ 1941ರಲ್ಲಿ ಡಂಬೊ ಚಲನಚಿತ್ರವು ಬಿಡುಗಡೆಯಾದ ನಂತರ, ಅಮೆರಿಕಾ ಸಂಯುಕ್ತ ಸಂಸ್ಥಾನ ಎರಡನೆಯ ವಿಶ್ವಸಮರ ಪ್ರವೇಶಿಸಿತು. U.S. ಭೂಸೇನೆಯು ಡಿಸ್ನಿ ಸ್ಟುಡಿಯೊ ಸೌಲಭ್ಯಗಳನ್ನು ಪಡೆದುಕೊಂಡು, ತರಬೇತಿ ನೀಡುವಂತಹ ಕಿರುಚಿತ್ರಗಳು ಮತ್ತು ಚಲನಚಿತ್ರಗಳನ್ನು ರಚಿಸಲು ಸೂಚಿಸಿತು. ಹುಮ್ಮಸ್ಸು ನೀಡುವಂತಹ ಕಿರುಚಿತ್ರಗಳಾದ ಡರ್ ಫುಹ್ರರ್'ಸ್ ಫೇಸ್ ಮತ್ತು ಚಲನಚಿತ್ರ ವಿಕ್ಟರಿ ಥ್ರೂ ಏಯರ್ ಪಾವರ್ ನ್ನು 1943ರಲ್ಲಿ ನಿರ್ಮಿಸಲಾಯಿತು. ಆದರೂ, ಸೇನಾ-ಪ್ರಧಾನ ಚಲನಚಿತ್ರವು ಆದಾಯ ಗಳಿಸಲಿಲ್ಲ. ಏಪ್ರಿಲ್ 1942ರಲ್ಲಿ ಬಿಡುಗಡೆಯಾದ ಬಾಂಬಿ ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಯಿತು. ಡಿಸ್ನಿ ಸಂಸ್ಥೆಯು ಸ್ನೋ-ವೈಟ್ ನ್ನು 1944ರಲ್ಲಿ ಪುನಃ ಬಿಡುಗಡೆಗೊಳಿಸಿತು. ಇದರಿಂದಾಗಿ ಡಿಸ್ನಿ ಸಂಸ್ಥೆಯ ಏಳು ವರ್ಷಗಳ ಪುನಃ ಬಿಡುಗಡೆಯ ಸಂಪ್ರಯದಾಯವನ್ನು ಅನುಷ್ಟಾನಕ್ಕೆ ತಂದಿತು. 1945ರಲ್ಲಿ ಬಿಡುಗಡೆಯಾದ ದಿ ತ್ರೀ ಕೆಬಲೆರೊಸ್ ಯುದ್ಧಕಾಲದ ಕೊನೆಯ ಆನಿಮೇಟೆಡ್ ಚಿತ್ರವಾಗಿತ್ತು.
1944ರಲ್ಲಿ, ಎನ್ಸೈಕ್ಲೊಪೀಡಿಯಾ ಬ್ರಿಟಾನಿಕಾ ದ ಪ್ರಕಾಶಕ ವಿಲಿಯಮ್ ಬೆಂಟನ್ ಪ್ರತಿವರ್ಷ ಆರರಿಂದ ಹನ್ನೆರಡು ಶೈಕ್ಷಣಿಕ ಚಿತ್ರಗಳನ್ನು ತಯಾರಿಸುವ ಕುರಿತು ಡಿಸ್ನಿ ಸಂಸ್ಥೆಯೊಂದಿಗೆ ವಿಫಲ ಮಾತುಕತೆ ನಡೆಸಿದ್ದರು. US ಕೊ-ಆರ್ಡಿನೇಟರ್ ಆಫ್ ಇಂಟರ್-ಅಮೆರಿಕನ್ ಅಫೇರ್ಸ್ ಆಫಿಸ್ ಆಫ್ ಇಂಟರ್-ಅಮೆರಿಕನ್ ಅಫೇರ್ಸ್ (OIAA) ಅಧಿಕಾರಿಗಳಿಂದ ವಾಲ್ಟ್ ಡಿಸ್ನಿಯವರಿಗೆ ಅಮೇಜಾನ್ ಜಲಾನಯನ ಪ್ರದೇಶದ ಕುರಿತು ಶೈಕ್ಷಣಿಕ ಚಲನಚಿತ್ರ ನಿರ್ಮಿಸುವಂತೆ ಕೋರಿಕೆ ಸಲ್ಲಿಸಲಾಯಿತು. ಇದರ ಫಲವಾಗಿ, 1944ರಲ್ಲಿ, 'ದಿ ಅಮೇಜಾನ್ ಅವೇಕೆನ್ಸ್ ' ಎಂಬ ಒಂದು ಆನಿಮೇಟೆಡ್ ಕಿರುಚಿತ್ರ ನಿರ್ಮಾಣವಾಯಿತು.[೬೩][೬೪][೬೫][೬೬][೬೭]
1945–1955: ಯುದ್ಧ ನಂತರದ ಕಾಲದಲ್ಲಿ ಡಿಸ್ನಿ
[ಬದಲಾಯಿಸಿ]ಡಿಸ್ನಿ ಸ್ಟುಡಿಯೊ ಅಗ್ಗಬೆಲೆಯ ಸೂತ್ರದ ಪ್ಯಾಕೇಜ್ ಆಧಾರದ ಚಿತ್ರಗಳನ್ನೂ ನಿರ್ಮಿಸಿತು. ಇದರಲ್ಲಿ ವ್ಯಂಗ್ಯ-ಕಿರುಚಲನಚಿತ್ರಗಳ ಸಂಕಲನಗಳಿದ್ದವು. ಇದೇ ಸಮಯದಲ್ಲಿ ಡಿಸ್ನಿ ಸಂಸ್ಥೆಯು ಚಲನಚಿತ್ರಮಂದಿರಗಳಿಗೆ ಪ್ರದರ್ಶನಕ್ಕಾಗಿ ನೀಡಿತು. ಇದರಲ್ಲಿ ಮೇಕ್ ಮೈನ್ ಮ್ಯೂಸಿಕ್ (1946), ಮೆಲೊಡಿ ಟೈಮ್ (1948), ಫನ್ ಅಂಡ್ ಫ್ಯಾನ್ಸಿ ಫ್ರೀ (1947) ಮತ್ತು ದಿ ಅಡ್ವೆಂಚರ್ಸ್ ಆಫ್ ಇಕಾಬಾಡ್ ಅಂಡ್ ಮಿಸ್ಟರ್ ಟೋಡ್ (1949) ಸೇರಿವೆ. ಕೇವಲ ಎರಡೇ ವಿಭಾಗಗಳಿದ್ದವು: ಮೊದಲನೆಯದು ಕೆನೆತ್ ಗ್ರಹಾಮೆ ರ ದಿ ವಿಂಡ್ ಇನ್ ದಿ ವಿಲ್ಲೊಸ್ , ಹಾಗೂ ಎರಡನೆಯದು ವಾಷಿಂಗ್ಟನ್ ಇರ್ವಿಂಗ್ರ ದಿ ಲೆಜೆಂಡ್ ಆಫ್ ದಿ ಸ್ಲೀಪಿ ಹೋಲೊ ಕೃತಿಗಳನ್ನು ಆಧರಿಸಿದ್ದವು. ಈ ಅವಧಿಯಲ್ಲಿ, ಡಿಸ್ನಿ ಸಂಸ್ಥೆಯು ಸಾಂಗ್ ಆಫ್ ದಿ ಸೌತ್ ಮತ್ತು ಸೊ ಡಿಯರ್ ಟು ಮೈ ಹಾರ್ಟ್ ಸೇರಿದಂತೆ, ಪೂರ್ಣಪ್ರಮಾಣದ ನಾಟಕ-ಪ್ರಧಾನ ಚಲನಚಿತ್ರ ನಿರ್ಮಾಣದಲ್ಲಿ ತೊಡಗಿತು. ಇದು ನೈಜ ಚಿತ್ರಣ ಮತ್ತು ಆನಿಮೇಟೆಡ್ ದೃಶ್ಯಗಳ ಮಿಶ್ರಣ ಹೊಂದಿತ್ತು. ಯುದ್ಧ ಅಂತ್ಯಗೊಂಡ ನಂತರ ಮಿಕ್ಕಿಯ ಜನಪ್ರಿಯತೆಯೂ ಸಹ ಮಾಸಿಹೋಗುವಂತಿತ್ತು.[೬೮]
ಇಸವಿ 1940ರ ಉತ್ತರಾರ್ಧದಲ್ಲಿ, ಸ್ಟುಡಿಯೊ ಗಮನಾರ್ಹವಾಗಿ ಚೇತರಿಸಿಕೊಂಡಿತ್ತು. ಆಲೀಸ್ ಇನ್ ವಂಡರ್ಲೆಂಡ್ ಮತ್ತು ಪೀಟರ್ ಪ್ಯಾನ್ ನಂತಹ ಪೂರ್ಣಪ್ರಮಾಣದ ಚಲನಚಿತ್ರಗಳ ನಿರ್ಮಾಣ ಮುಂದುವರೆಸಿತು. ಇವರೆಡನ್ನೂ ಯುದ್ಧ ಸಂದರ್ಭದಲ್ಲಿ ಸ್ಥಗಿತಗೊಳಿಸಲಾಗಿತ್ತು. ಜೊತೆಗೆ, ಸಿಂಡೆರೆಲಾ ಎಂಬ ಹೊಸ ಚಲನಚಿತ್ರದ ನಿರ್ಮಾಣವನ್ನು ಆರಂಭಿಸಿದರು. ಸ್ನೋ ವೈಟ್ ಅಂಡ್ ದಿ ಸೆವೆನ್ ಡ್ವೊಫ್ಸ್ ನಂತರ ಸಿಂಡೆರೆಲಾ ಅತಿ ಹೆಚ್ಚು ಯಶಸ್ಸು ಪಡೆದ ಚಲನಚಿತ್ರವಾಯಿತು. ಡಿಸ್ನಿ ಸ್ಟುಡಿಯೊ 1948ರಲ್ಲಿ ಟ್ರೂ-ಲೈಫ್ ಅಡ್ವೆಂಚರ್ಸ್ ಎಂಬ ಪ್ರಕೃತಿ-ಪ್ರಧಾನ ಚಲನಚಿತ್ರಗಳ ಸರಣಿಯನ್ನು ಆರಂಭಗೊಳಿಸಿತು. ಇದರಲ್ಲಿ ಮೊದಲನೆಯದು ಆನ್ ಸೀಲ್ ಐಲೆಂಡ್ . ಪೂರ್ಣಪ್ರಮಾಣದ ಚಲನಚಿತ್ರಗಳ ಮೂಲಕ ಡಿಸ್ನಿ ಸಂಸ್ಥೆಯು ಭಾರೀ ಯಶಸ್ಸು ಗಳಿಸಿದರೂ, ಅದರ ವ್ಯಂಗ್ಯ-ಕಿರುಚಲನಚಿತ್ರಗಳು ಹಿಂದಿನ ಜನಪ್ರಿಯತೆ ಉಳಿಸಿಕೊಳ್ಳಲಾಗಲಿಲ್ಲ. ಚಲನಚಿತ್ರ ವೀಕ್ಷಕರು ವಾರ್ನರ್ ಬ್ರದರ್ಸ್ ಸಂಸ್ಥೆ ಮತ್ತು ಅದರ ಪ್ರಮುಖ ಆಕರ್ಷಣೆಯಾದ ಆನಿಮೇಟೆಡ್ ತಾರೆ ಬಗ್ಸ್ ಬನ್ನಿಯತ್ತ ಮುಖ ಮಾಡಿದರು. 1942ರಲ್ಲಿ, ವಾರ್ನರ್ ಬ್ರದರ್ಸ್‌ಗಾಗಿ ವ್ಯಂಗ್ಯ ಚಲನಚಿತ್ರಗಳನ್ನು ನಿರ್ಮಿಸಿದ ಲಿಯೊನ್ ಷ್ಲೆಸಿಂಗರ್ ಪ್ರೊಡಕ್ಷನ್ಸ್ ದೇಶದ ಜನಪ್ರಿಯ ಆನಿಮೇಷನ್ ಸ್ಟುಡಿಯೊ ಆಗಿ ಹೊರಹೊಮ್ಮಿತು.[೬೯] ಆದರೂ, ಬಗ್ಸ್ ಬನ್ನಿ(ಮಹಿಳೆಯೊಬ್ಬಳು ಮೊಲದ ಕಿವಿ ಹಾಕಿಕೊಂಡ ಪಾತ್ರ)ಯ ಜನಪ್ರಿಯತೆ 1940ರ ದಶಕದಲ್ಲಿ ಹೆಚ್ಚಾಗುತ್ತಿದ್ದಂತೆಯೇ ಡಿಸ್ನಿ ಸಂಸ್ಥೆಯ ಡೊನಾಲ್ಡ್ ಡಕ್‌ನ ಜನಪ್ರಿಯತೆಯೂ ಹೆಚ್ಚಾಗತೊಡಗಿತು.[೭೦] 1949ರಷ್ಟರಲ್ಲಿ ಡೊನಾಲ್ಡ್ ಡಕ್ ಡಿಸ್ನಿ ಸಂಸ್ಥೆಯ ಪ್ರಮುಖ ಸ್ಥಾನದಿಂದ ಮಿಕ್ಕಿ ಮೌಸ್‌ನ್ನು ಕೆಳಗಿಳಿಸಿ ತಾನು ಹತ್ತಿ ಕುಳಿತಿದ್ದ.[೭೧]
1950ರ ದಶಕದ ಮಧ್ಯದಲ್ಲಿ, ಡಿಸ್ನಿ ಸಂಸ್ಥೆಯು ನಾಸಾ ರಾಕೆಟ್ ವಿನ್ಯಾಸಕಾರ ವರ್ನರ್ ವಾನ್ ಬ್ರಾನ್‌ರ ಸಹಯೋಗದೊಂದಿಗೆ ಹಲವು ಶೈಕ್ಷಣಿಕ ಚಲನಚಿತ್ರಗಳನ್ನು ನಿರ್ಮಿಸಿತು: 1955ರಲ್ಲಿ ಮ್ಯಾನ್ ಇನ್ ಸ್ಪೇಸ್ ಮತ್ತು ಮ್ಯಾನ್ ಅಂಡ್ ದಿ ಮೂನ್ in 1955, and 1957ರಲ್ಲಿ ಮಾರ್ಸ್ ಅಂಡ್ ಬೆಯಾಂಡ್ .
ಕಾಂಗ್ರೆಸ್ ಮುಂದೆ ಸಾಕ್ಷ್ಯ
[ಬದಲಾಯಿಸಿ]ಡಿಸ್ನಿ ವಾಮಪಂಥ ವಿರೋಧಿ ಮೋಷನ್ ಪಿಕ್ಚರ್ ಅಲಯೆನ್ಸ್ ಫಾರ್ ದಿ ಪ್ರಿಸರ್ವೇಷನ್ ಆಫ್ ಅಮೆರಿಕನ್ ಐಡಿಯಲ್ಸ್ ಸಂಘಟನೆಯ ಸ್ಥಾಪಕ-ಸದಸ್ಯರಾಗಿದ್ದರು. {{citation}}
: Empty citation (help) ಶೀತಲ ಸಮರದ ಆರಂಭಿಕ ವರ್ಷಗಳಲ್ಲಿ - ಅಂದರೆ 1947ರಲ್ಲಿ,[೭೨] ಹೌಸ್ ಅನ್-ಅಮೆರಿಕನ್ ಅಕ್ಟಿವಿಟಿಸ್ ಕಮಿಟಿ ಸಮ್ಮುಖದಲ್ಲಿ, ವಾಲ್ಟ್ ಡಿಸ್ನಿ ತಮ್ಮ ಹೇಳಿಕೆಯಲ್ಲಿ, ಮಾಜಿ ಆನಿಮೇಟರ್‌ಗಳು ಮತ್ತು ಕಾರ್ಮಿಕ ಒಕ್ಕೂಟದ ಸಂಘಟನಾಕಾರರಾದ ಹರ್ಬರ್ಟ್ ಸೊರೆಲ್, ಡೇವಿಡ್ ಹಿಲ್ಬರ್ಮನ್ ಮತ್ತು ವಿಲಿಯಮ್ ಪೊಮೆರಾನ್ಸ್‌ರನ್ನು ವಾಮಪಂಥೀಯ ಚಳವಳಿಗಾರರೆಂದು ಟೀಕಿಸಿದರು.
ಮೂವರೂ ಸಹ ವಾಲ್ಟ್ ಡಿಸ್ನಿಯವರ ಆರೋಪವನ್ನು ತಳ್ಳಿಹಾಕಿದರು. ರಷ್ಯಾ ಸರ್ಕಾರ ಬಿಡುಗಡೆಗೊಳಿಸಿದ ಆರ್ಕೈವ್ಸ್ ಆಫ್ ದಿ ಸೊವಿಯತ್ ಯೂನಿಯನ್ ಪತ್ರಿಕೆಯ ಆ ಸಮಯದ ಲೇಖಕ ಪೀಟರ್ ಷ್ವೇಜರ್ ಪ್ರಕಾರ, ಹರ್ಬರ್ಟ್ ಸೊರೆಲ್ ಒಬ್ಬ ವಾಮಪಂಥೀಯ ಗೂಢಚಾರ ಎಂದು ಆರೋಪಿಸಲಾಗಿದೆ.[೭೩] HUAC ಮುಂದೆ ಹರ್ಬರ್ಟ್ ಸೊರೆಲ್ 1946ರಲ್ಲಿ ತಮ್ಮ ಹೇಳಿಕೆ ನೀಡಿದರು. ಆದರೆ ವಾಮಪಕ್ಷದೊಂದಿಗೆ ಅವರ ಸಂಬಂಧ ಸಾಬೀತುಪಡಿಸಲು ಸಾಕಷ್ಟು ಸಾಕ್ಷ್ಯಗಳಿರಲಿಲ್ಲ.[೭೪][೭೫] ವಾಲ್ಟ್ ಡಿಸ್ನಿ ಸ್ಕ್ರೀನ್ ಆಕ್ಟರ್ಸ್ ಗಿಲ್ಡ್‌ನ್ನು ವಾಮಪಂಥೀಯ ಕಮ್ಯುನಿಷ್ಟರ ಗುಂಪು ಎಂದು ಆರೋಪಿಸಿದರು. 1941ರಲ್ಲಿ ನಡೆದ ಮುಷ್ಕರವು ಹಾಲಿವುಡ್‌ನಲ್ಲಿ ತಮ್ಮ ಪ್ರಭಾವ ಹೆಚ್ಚಿಸಲು ವಾಮಪಕ್ಷ ನಡೆಸಿದ ವ್ಯವಸ್ಥಿತ ಯತ್ನಗಳಲ್ಲೊಂದು.[೭೨]
1955-1966: ಥೀಮ್ ಪಾರ್ಕ್‌ಗಳು ಮತ್ತು ಅಲ್ಲಿಂದಾಚೆಗೆ
[ಬದಲಾಯಿಸಿ]ಡಿಸ್ನಿಲೆಂಡ್‌ನ ಯೋಜನೆ
[ಬದಲಾಯಿಸಿ]1940ರ ದಶಕದ ಅಪರಾರ್ಧದಲ್ಲಿ ಶಿಕಾಗೊ ಕಡೆಗೆ ಒಂದು ವ್ಯವಹಾರಿಕ ಪ್ರವಾಸ ಕೈಗೊಂಡ ವಾಲ್ಟ್ ಡಿಸ್ನಿ ಮನೋರಂಜನಾ ಉದ್ಯಾನವೊಂದಕ್ಕೆ ಅವರ ಕಲ್ಪನೆಗಳನ್ನು ಚಿತ್ರಗಳ ಮೂಲಕ ಬಿಡಿಸುತ್ತಿದ್ದರು. ಅದರಲ್ಲಿ ಅವರ ಉದ್ಯೋಗಿಗಳು ತಮ್ಮ ತಮ್ಮ ಮಕ್ಕಳೊಂದಿಗೆ ಸಮಯ ಕಳೆಯುವುದನ್ನು ಮನದಲ್ಲಿ ಅವರು ಚಿತ್ರಿಸಿಕೊಳ್ಳುತ್ತಿದ್ದರು. ಕ್ಯಾಲಿಫೊರ್ನಿಯಾದ ಓಕ್ಲೆಂಡ್‌ನಲ್ಲಿರುವ ಚಿಲ್ಡ್ರೆನ್ಸ್ ಫೇಯ್ರಿಲೆಂಡ್‌ಗೆ ಭೇಟಿ ನೀಡಿದಾಗ ವಾಲ್ಟ್ ಡಿಸ್ನಿಗೆ ಮಕ್ಕಳ ಥೀಮ್ ಪಾರ್ಕ್ ಬಗೆಗಿನ ಕಲ್ಪನೆ ಹೊಳೆದದ್ದು.
ಡಿಸ್ನಿ ಸ್ಟುಡಿಯೊ ಎದುರಿಗೆ, ರಸ್ತೆ ದಾಟಿ, ದಕ್ಷಿಣ ದಿಕ್ಕಿನಲ್ಲಿದ್ದ ಜಮೀನಿಗೆ ಈ ಯೋಜನೆಯನ್ನು ಸ್ಥಳಾಂತರಿಸಲಾಗಿತ್ತು. ಮೂಲತಃ ವಾಸ್ತವಿಕ ಆಲೋಚನಾ ಲಹರಿ, ಕಲ್ಪನೆಗಳನ್ನು ಪರಿಗಣಿಸಿದರೆ ಇನ್ನೂ ದೊಡ್ಡ ಪ್ರಮಾಣದ ಯೋಜನೆಯಾಗಿ ಡಿಸ್ನಿಲೆಂಡ್ ನ ನಿರ್ಮಾಣ ಆಗುವುದಿತ್ತು. ಡಿಸ್ನಿಲೆಂಡ್‌ನ ವಿನ್ಯಾಸ ಮತ್ತು ಅಭಿವೃದ್ಧಿಯಲ್ಲಿ ವಾಲ್ಟ್ ಡಿಸ್ನಿ ಐದು ವರ್ಷಗಳ ಕಾಲ ಮಗ್ನರಾಗಿದ್ದರು. ಉದ್ಯಾನದ ಯೋಜನೆ ಮತ್ತು ನಿರ್ಮಾಣ ಕೈಗೆತ್ತಿಕೊಳ್ಳಲು, ಅವರು ತಮ್ಮ ಉದ್ದಿಮೆಯ ಒಂದು ಆಧೀನ ಸಂಸ್ಥೆಯಾಗಿ WED ಎಂಟರ್ಪ್ರೈಸಸ್‌ನ್ನು ಸ್ಥಾಪಿಸಿದರು. ಡಿಸ್ನಿ ಸ್ಟುಡಿಯೊಸ್ ಉದ್ಯೋಗಿಗಳ ಸಣ್ಣ ಗುಂಪು ಡಿಸ್ನಿಲೆಂಡ್ ಅಭಿವೃದ್ಧಿ ಯೋಜನೆಗೆ ಅಭಿಯಂತರ ಮತ್ತು ಯೋಜನೆಗಾರರಾಗಿ ಸೇರ್ಪಡೆಯಾದರು. ಇವರನ್ನು ಇಮ್ಯಾಜಿನಿಯರ್‌ಗಳು ಎಂದುಕರೆಯಲಾಯಿತು.
ತಮ್ಮ ಆರಂಭಿಕ ಯೋಜನೆಗಳನ್ನು ಹರ್ಬ್ ರೈಮನ್‌ರಿಗೆ ವಿವರಿಸಿದರು. (ಹರ್ಬ್ ರೈಮನ್ ಡಿಸ್ನಿಲೆಂಡ್‌ನ ಮೊದಲ ಪಕ್ಷಿನೋಟದ ನೀಲಿನಕ್ಷೆ ಮತ್ತು ದೃಶ್ಯಾವಳಿ ರಚಿಸಿದರು. ಬ್ಯಾಂಕ್ ಆಫ್ ಅಮೆರಿಕಾದಲ್ಲಿ ಈ ಉದ್ಯಾನಕ್ಕಾಗಿ ಸಾಲ ಕೋರಲು ಅರ್ಜಿ ಸಲ್ಲಿಸಿದಾಗ, ಈ ವಿನ್ಯಾಸವನ್ನು ಬ್ಯಾಂಕ್‌ನ ಅಧಿಕಾರಿಗಳಿಗೆ ತೋರಿಸಲಾಯಿತು). 'ಹರ್ಬೀ, ಇದು ಇಡೀ ಪ್ರಪಂಚದಲ್ಲೇ ಎಲ್ಲೂ ಕಾಣದಂತಹ ವಿನ್ಯಾಸವನ್ನು ಇದು ಹೊಂದಿರಬೇಕು"ಎಂದು ಅವರು ಅಪೇಕ್ಷೆಪಟ್ಟರು. ಇದರ ಸುತ್ತಲೂ ರೈಲುಮಾರ್ಗವಿರಬೇಕು' ಎಂದು ವಾಲ್ಟ್ ಡಿಸ್ನಿ ಹೇಳಿದರು.[೭೬] ತಮ್ಮ ಇಬ್ಬರು ಪುತ್ರಿಯರು ಮತ್ತು ಅವರ ಮಿತ್ರವೃಂದದವರಿಗೆ ತಮ್ಮ ನಿವಾಸದ ಸ್ವಂತ ಜಾಗೆಯಲ್ಲಿಯೇ ಈ ಸೌಲಭ್ಯ ಒದಗಿಸಿ, ತಮ್ಮ ಕ್ಯಾರೊಲ್‌ವುಡ್ ಪೆಸಿಫಿಕ್ ರೈಲ್ರೋಡ್ ರೈಲಿನಲ್ಲಿ ಸವಾರಿ ಕರೆದುಕೊಂಡು ಹೋಗುತ್ತಿದ್ದದ್ದು ವಾಲ್ಟ್ ಡಿಸ್ನಿಯವರಿಗೆ ರೂಢಿಯಾಗಿತ್ತು. ಇದರಿಂದಾಗಿ ಡಿಸ್ನಿಲೆಂಡ್‌ನಲ್ಲಿ ಒಂದು ರೈಲುಮಾರ್ಗ ನಿರ್ಮಾಣಕ್ಕೆ ಅವರಿಗೆ ಸ್ಪೂರ್ತಿ ದೊರಕಿತು.
ಡಿಸ್ನಿಲೆಂಡ್‌ನ ಅದ್ದೂರಿ ಉದ್ಘಾಟನೆ
[ಬದಲಾಯಿಸಿ]ಡಿಸ್ನಿಲೆಂಡ್ 17 ಜುಲೈ 1955ರಂದು ಅಧಿಕೃತವಾಗಿ ಪ್ರವೇಶಕ್ಕೆ ಮುಕ್ತವಾಯಿತು. ಉದ್ಘಾಟನಾ ಸಮಾರಂಭದಲ್ಲಿ ಹಾಜರಿದ್ದ ಸಾವಿರಾರು ಜನರ ಪೈಕಿ ರೊನಾಲ್ಡ್ ರೀಗನ್, ಬಾಬ್ ಕಮ್ಮಿಂಗ್ಸ್ ಮತ್ತು ಆರ್ಟ್ ಲಿಂಕ್‌ಲೆಟರ್, ಇವರು ಸಮಾರಂಭದ ಸಹಆತಿಥ್ಯ ವಹಿಸಿಕಾರ್ಯನಿರ್ವಹಿಸಿದರು; ಜೊತೆಗೆ ಅನಾಹೇಮ್‌ನ ಮಹಾಪೌರರೂ ಸಹ ಉಪಸ್ಥಿತರಿದ್ದರು.
ವಾಲ್ಟ್ ಡಿಸ್ನಿಯವರ ಉದ್ಘಾಟನಾ ಭಾಷಣದ ಪಠ್ಯ ಕೆಳಕಂಡಂತಿದೆ:
“ | To all who come to this happy place; welcome. Disneyland is your land. Here age relives fond memories of the past ... and here youth may savor the challenge and promise of the future. Disneyland is dedicated to the ideals, the dreams and the hard facts that have created America ... with the hope that it will be a source of joy and inspiration to all the world. | ” |
ಕ್ಯಾರೊಲ್‌ವುಡ್ ಪೆಸಿಫಿಕ್ ರೇಲ್ರೋಡ್
[ಬದಲಾಯಿಸಿ]1949ರಲ್ಲಿ, ವಾಲ್ಟ್ ಡಿಸ್ನಿ ಮತ್ತು ಅವರ ಕುಟುಂಬ ಕ್ಯಾಲಿಫೊರ್ನಿಯಾದ ಲಾಸ್ ಏಂಜೆಲೆಸ್‌ನಲ್ಲಿರುವ ಹೋಮ್ಬಿ ಹಿಲ್ಸ್ ಜಿಲ್ಲೆಯಲ್ಲಿನ ವಿಶಾಲ ಪ್ರದೇಶದಲ್ಲಿನ ನವನಿರ್ಮಿತ ನಿವಾಸಕ್ಕೆ ಸ್ಥಳಾಂತರಗೊಂಡರು. ತಮ್ಮದೇ ಆದ ಸ್ವಂತ ರೈಲುಹಳಿ (ಬ್ಯಾಕ್ಯಾರ್ಡ್ ರೇಲ್ರೋಡ್) ಹೊಂದಿದ್ದ ಹಾಗೂ ವಾಲ್ಟ್ ಡಿಸ್ನಿಯವರ ಸ್ನೇಹಿತರಾದ ವಾರ್ಡ್ ಮತ್ತು ಬೆಟ್ಟಿ ಕಿಂಬಾಲ್ ಸಹಾಯ ಪಡೆದು, ವಾಲ್ಟ್ ಡಿಸ್ನಿ ನೀಲಿನಕ್ಷೆ ರಚಿಸಿ, ಕೂಡಲೇ ತಮ್ಮ ಮನೆ ಹತ್ತಿರದಲ್ಲೇ ಕಿರುಪ್ರಮಾಣದ ನೈಜ ಉಗಿಬಂಡಿ ರೇಲ್ರೋಡ್ ರಚಿಸುವ ಕಾರ್ಯದಲ್ಲಿ ಮಗ್ನರಾದರು. ಕ್ಯಾರೊಲ್‌ವುಡ್ ಡ್ರೈವ್‌ನಲ್ಲಿದ್ದ ತಮ್ಮ ಮನೆಯ ವಿಳಾಸವನ್ನು ಆಧರಿಸಿ, ಈ ರೇಲ್ರೊಡ್‌ಗೆ ಕ್ಯಾರೊಲ್‌ವುಡ್ ಪೆಸಿಫಿಕ್ ರೇಲ್ರೋಡ್ ಎನ್ನಲಾಯಿತು. ಅರ್ಧ-ಮೈಲು ಉದ್ದದ ವಿನ್ಯಾಸರಚನೆಯಲ್ಲಿ 46-foot (14 m)-ಉದ್ದದ ರೈಲುಹಳಿಗಳು, ವಕ್ರರೇಖೆ-ಆಕಾರದ ತಿರುವುಗಳು, ಮೇಲುಹಾದಿಗಳು, ಮಟ್ಟಸದ ಹಾದಿಗಳು, ಎತ್ತರ ಮಟ್ಟದಲ್ಲಿರುವ ಕಿರು ಹುಲ್ಲು ಹಾಸಿನ ದಾರಿ ಮತ್ತು 90-foot (27 m) ಶ್ರೀಮತಿ ಡಿಸ್ನಿಯವರ ಹೂಪಾತಿಯ ಕೆಳಗೆ ಹಾದುಹೋಗುವ ಒಂದು ಸುರಂಗ ಮಾರ್ಗ ಸೇರಿದ್ದವು. ಡಿಸ್ನಿ ಸ್ಟುಡಿಯೊದ ರೊಜರ್ ಇ. ಬ್ರೊಗೀ ನಿರ್ಮಿಸಿದ ಕಿರುಗಾತ್ರದ ರೈಲು ಇಂಜಿನ್‌ಗೆ ತಮ್ಮ ಪತ್ನಿಯ ಹೆಸರಲ್ಲಿ ಲಿಲ್ಲಿ ಬೆಲ್ ಎಂದು ನಾಮಕರಣ ಮಾಡಿದರು. ಉದ್ಯಾನ ಕ್ಷೇತ್ರಗಳ ಮೂಲಕ ಹಾದುಹೋಗುವ ಈ ರೇಲ್ರೋಡ್‌ಗೆ ಖಾಯಂ, ಕಾನೂನಬದ್ಧ ಸಮ್ಮತಿ ಪಡೆಯಲು ವಾಲ್ಟ್ ಡಿಸ್ನಿ ತಮ್ಮ ವಕೀಲರ ಮೂಲಕ ಪತ್ರಗಳನ್ನು ಸಿದ್ಧಪಡಿಸಿ, ಅವರ ಪತ್ನಿ ಅವುಗಳಿಗೆ ಸಹಿ ಮಾಡಿದ್ದೂ ಆಯಿತು. ಆದರೆ, ಈ ದಾಖಲೆಗಳು ಸ್ವತ್ತಿನ ಮೇಲೆ ನಿರ್ಬಂಧದ ರೂಪದಲ್ಲಿ ಈ ದಾಖಲೆಗಳನ್ನು ಪರಿಗಣಿಸಿದ ಯಾವುದೇ ಸಾಕ್ಷ್ಯಾಧಾರಗಳಿಲ್ಲ.
ಹೊಸ ಕ್ಷೇತ್ರಗಳತ್ತ ವಿಸ್ತರಣೆ
[ಬದಲಾಯಿಸಿ]ವಾಲ್ಟ್ ಡಿಸ್ನಿ ಪ್ರೊಡಕ್ಷನ್ಸ್ ಡಿಸ್ನಿಲೆಂಡ್ ಕೆಲಸ ಆರಂಭಿಸಿದಾಗ, ಅದು ತನ್ನ ಇತರೆ ಮನರಂಜನಾ ಕಾರ್ಯಕ್ರಮಗಳನ್ನು ವಿಸ್ತರಿಸಲಾರಂಭಿಸಿತು. 1950ರಲ್ಲಿ, ಟ್ರೆಷರ್ ಐಲೆಂಡ್ ಡಿಸ್ನಿ ಸ್ಟುಡಿಯೊ ನಿರ್ಮಿಸಿದ ಮೊದಲ ಪೂರ್ಣಪ್ರಮಾಣದ ಚಲನಚಿತ್ರವಾಗಿತ್ತು. ಇದಾದ ನಂತರ 20,000 ಲೀಗ್ಸ್ ಅಂಡರ್ ದಿ ಸೀ (ಸಿನೆಮಾಸ್ಕೋಪ್‌ನಲ್ಲಿ, 1954), ಓಲ್ಡ್ ಯೆಲ್ಲರ್ (1957), ದಿ ಷ್ಯಾಗಿ ಡಾಗ್ (1959), ಪಾಲಿಯಾನಾ (1960), ಸ್ವಿಸ್ ಫ್ಯಾಮಿಲಿ ರಾಬಿನ್ಸನ್ (1960), ದಿ ಆಬ್ಸೆಂಡ್-ಮೈಂಡೆಡ್ ಪ್ರೊಫೆಸರ್ (1961) ಮತ್ತು ದಿ ಪೆರೆಂಟ್ ಟ್ರ್ಯಾಫ್ (1961) ತೆರೆಕಂಡವು.
ವಾಲ್ಟ್ ಡಿಸ್ನಿ ಸ್ಟುಡಿಯೊ 1950ರಲ್ಲಿ ದೂರದರ್ಶನಕ್ಕಾಗಿ ಒನ್ ಹಾರ್ ಇನ್ ವಂಡರ್ಲೆಂಡ್ ಎಂಬ ವಿಶೇಷ ಕಾರ್ಯಕ್ರಮ ನಿರ್ಮಿಸಿತು. ABC ದೂರದರ್ಶನ ವಾಹಿನಿಯಲ್ಲಿ ವಾಲ್ಟ್ ಡಿಸ್ನಿ ಉದ್ಯಾನದ ಹೆಸರಿನಲ್ಲಿ ಡಿಸ್ನಿಲೆಂಡ್ ಎಂಬ ಸಾಪ್ತಾಹಿಕ ಧಾರಾವಾಹಿಯ ಸರಣಿಯ ನಿರೂಪಣೆ ಮಾಡಿದರು. ಇದರಲ್ಲಿ ಅವರು ಹಿಂದಿನ ಡಿಸ್ನಿ ನಿರ್ಮಿತ ವ್ಯಂಗ್ಯ ಚಲನಚಿತ್ರಗಳು, ಪೂರ್ಣಪ್ರಮಾಣದ ಚಲನಚಿತ್ರಗಳ ತುಣುಕುಗಳು, ತಮ್ಮ ಸ್ಟುಡಿಯೊದ ಇಣುಕುನೋಟ ಹಾಗೂ ಕ್ಯಾಲಿಫೊರ್ನಿಯಾದ ಆನಾಹೇಂನಲ್ಲಿ ನಿರ್ಮಾಣವಾಗುತ್ತಿರುವ ಡಿಸ್ನಿಲೆಂಡ್ ಉದ್ಯಾನವನ್ನು ವೀಕ್ಷಕರಿಗೆ ಪರಿಚಯಿಸಿಕೊಟ್ಟರು.
ಈ ಕಾರ್ಯಕ್ರಮ ಡೇವಿ ಕ್ರೊಕೆಟ್ ಕಿರುಸರಣಿಯನ್ನೂ ಒಳಗೊಂಡಿತ್ತು. ಇದು ಅಮೆರಿಕನ್ ಯುವಕರಲ್ಲಿ 'ಡೇವಿ ಕ್ರೊಕೆಟ್ ಕ್ರೇಜ್' ಎಂದೇ ಭಾರಿ ಸಂಚಲನ ಮೂಡಿಸಿತು. ದೇಶಾದ್ಯಂತ ದಶಲಕ್ಷಗಟ್ಟಲೆ ಕೂನ್‌ಸ್ಕಿನ್ ಟೋಪಿಗಳು ಮತ್ತು ಇತರೆ ಕ್ರೊಕೆಟ್ ನೆನಪಿನ ಗುರುತುಗಳು ಲಾಂಛನಗಳು ಮಾರಾಟವಾದವು.[೭೭] 1955ರಲ್ಲಿ, ಸ್ಟುಡಿಯೊದ ಮೊದಲ ದೈನಿಕ ದೂರದರ್ಶನ ಕಾರ್ಯಕ್ರಮ ಮಿಕ್ಕಿ ಮೌಸ್ ಕ್ಲಬ್ ಆರಂಭವಾಯಿತು. ಇದು ವಿವಿಧ ಅವತಾರ-ಅವತರಣಿಕೆಗಳಲ್ಲಿ 1990ರ ದಶಕದಲ್ಲಿಯೂ ಸಹ ಮುಂದುವರೆಯುತ್ತಾ ಬಂದಿತ್ತು.
ಸ್ಟುಡಿಯೊ ವಿಸ್ತರಿಸಿ ಇತರೆ ಮಾಧ್ಯಮಗಳತ್ತ ಗಮನಹರಿಸಿದಾಗ, ವಾಲ್ಟ್ ಡಿಸ್ನಿ ಆನಿಮೇಷನ್ ವಿಭಾಗದತ್ತ ಗಮನ ಕಡಿಮೆಗೊಳಿಸಲಾರಂಭಿಸಿದರು. ಆನಿಮೇಷನ್ ಚಟುವಟಿಕೆಗಳನ್ನು 'ನೈನ್ ಓಲ್ಡ್ ಮೆನ್' ಎಂದು ತಾವು ಹೆಸರಿಸಿದ್ದ ತಮ್ಮ ಪ್ರಮುಖ ಆನಿಮೇಟರ್‌ಗಳಿಗೆ ವಹಿಸಿಕೊಟ್ಟರು. ವಾಲ್ಟ್ ಡಿಸ್ನಿಯವರ ಜೀವಮಾನದಲ್ಲಿ, ಆನಿಮೇಷನ್ ವಿಭಾಗವು, ಯಶಸ್ವಿಯಾದ ಲೇಡಿ ಅಂಡ್ ದಿ ಟ್ರ್ಯಾಂಪ್ (1955, ಸಿನೆಮಾಸ್ಕೋಪ್), ಸ್ಲೀಪಿಂಗ್ ಬ್ಯೂಟಿ (ಸೂಪರ್ ಟೆಕ್ನಿರಾಮಾ 70ಮಿಮೀ, 1959), ಒನ್ ಹಂಡ್ರೆಡ್ ಅಂಡ್ ಒನ್ ಡಾಲ್ಮೇಟಿಯನ್ಸ್ (1961) ಮತ್ತು ದಿ ಸ್ವೋರ್ಡ್ ಇನ್ ದಿ ಸ್ಟೋನ್ (1963) ವ್ಯಂಗ್ಯಚಲನಚಿತ್ರಗಳನ್ನು ನಿರ್ಮಿಸಿತು.
ವಾಲ್ಟ್ ಡಿಸ್ನಿ ವ್ಯಂಗ್ಯ ಕಿರುಚಲನಚಿತ್ರಗಳ ವಿಭಾಗವನ್ನು 1956ರಲ್ಲಿ ಮುಚ್ಚುವ ತನಕ, ವ್ಯಂಗ್ಯ ಕಿರುಚಲನಚಿತ್ರಗಳ ನಿರ್ಮಾಣಕಾರ್ಯ ನಡೆಯಿತು. ಮುಂದೆ, ಅನಿಯಮಿತವಾಗಿ ಅಂದರೂ ಆಗಾಗ ವಿಶೇಷ ವ್ಯಂಗ್ಯ ಕಿರುಚಿತ್ರಗಳ ನಿರ್ಮಾಣವೂ ಮುಂದುವರೆಯಿತು. ಈ ನಿರ್ಮಾಣಗಳೆಲ್ಲವನ್ನೂ ಡಿಸ್ನಿಯ ಹೊಸ ಅಂಗಸಂಸ್ಥೆ ಬ್ಯೂನಾ ವಿಸ್ಟಾ ಡಿಸ್ಟ್ರಿಬ್ಯುಷನ್ ಮೂಲಕ ವಿತರಣೆಮಾಡಲಾಯಿತು. ಇದು 1955ರಲ್ಲಿ RKOದಿಂದ ಡಿಸ್ನಿ ಚಲನಚಿತ್ರಗಳ ವಿತರಣೆಯ ಜವಾಬ್ದಾರಿ ವಹಿಸಿಕೊಂಡಿತ್ತು. ವಿಶ್ವದ ಪ್ರಪ್ರಥಮ ಥೀಮ್ ಪಾರ್ಕ್‌ಗಳಲ್ಲಿ ಒಂದಾದ ಡಿಸ್ನಿಲೆಂಡ್ ಅಂತಿಮವಾಗಿ 14 ಜುಲೈ 1955ರಂದು ತೆರೆದುಕೊಂಡಿತು. ಇದು ಕೂಡಲೆ ಯಶಸ್ಸು ಕಂಡಿತು. ವಿಶ್ವದ ಹಲವೆಡೆಯಿಂದ ಪ್ರವಾಸಿಗರು ಡಿಸ್ನಿಲೆಂಡ್‌ಗೆ ಭೇಟಿ ನೀಡಿದರು. ಡಿಸ್ನಿಯ ಯಶಸ್ವೀ ಸಂಪತ್ತು ಮತ್ತು ಚಲನಚಿತ್ರಗಳ ಆಧರಿಸಿದ ಹಲವು ಪ್ರಮುಖ ಆಕರ್ಷಣೆಗಳು ಡಿಸ್ನಿಲೆಂಡ್‌ನಲ್ಲಿತ್ತು.
1955ರ ನಂತರ, ಡಿಸ್ನಿಲೆಂಡ್ ಎಂಬ ಕಾರ್ಯಕ್ರಮವು ವಾಲ್ಟ್ ಡಿಸ್ನಿ ಪ್ರೆಸೆಂಟ್ಸ್ ಎಂದು ಮರುನಾಮಕರಣವಾಯಿತು. 1961ರಲ್ಲಿ ಈ ಕಾರ್ಯಕ್ರಮ ಕಪ್ಪು-ಬಿಳುಪಿನಿಂದ ವರ್ಣಚಿತ್ರಕ್ಕೆ ಪರಿವರ್ತಿತವಾಗಿ, 'ವಾಲ್ಟ್ ಡಿಸ್ನಿಸ್ ವಂಡರ್ಫುಲ್ ವರ್ಲ್ಡ್ ಆಫ್ ಕಲರ್ ' ಎಂದು ಮರುನಾಮಕರಣವಾಯಿತು; ಜೊತೆಗೆ, ABCಯಿಂದ NBC [೭೮] ವಾಹಿನಿಗೆ ಬದಲಾಯಿಸಿಕೊಂಡಿತು. ಅಂತಿಮವಾಗಿ ದಿ ವಂಡರ್ಫುಲ್ ವರ್ಲ್ಡ್ ಆಫ್ ಡಿಸ್ನಿ ಎಂಬ ಪ್ರಸಕ್ತ ರೂಪಕ್ಕೆ ಬದಲಾಯಿತು. 1981ರಲ್ಲಿ CBS ಈ ಕಾರ್ಯಕ್ರಮದ ಪ್ರಸಾರ ಹಕ್ಕುಗಳನ್ನು ತಮ್ಮದಾಗಿಸಿಕೊಳ್ಳುವ ತನಕ NBCಯಲ್ಲಿ ಪ್ರಸಾರಗೊಳ್ಳುತ್ತಿತ್ತು.[೭೯] ಅಂದಿನಿಂದಲೂ, ಪ್ರತ್ಯೇಕ ಪ್ರಸಾರ ಹಕ್ಕುಗಳ ಒಪ್ಪಂದಗಳಡಿ ABC, NBC, ಹಾಲ್ಮಾರ್ಕ್ ಚಾನೆಲ್ ಮತ್ತು ಕಾರ್ಟೂನ್ ನೆಟ್ವರ್ಕ್ ವಾಹಿನಿಗಳಲ್ಲಿ ಈ ಕಾರ್ಯಕ್ರಮ ಪ್ರಸಾರಗೊಂಡಿದೆ. ಈ ಕಾರ್ಯಕ್ರಮ ಪ್ರಸಾರಗೊಳ್ಳುತ್ತಿರುವಾಗ, ಡಿಸ್ನಿ ಸರಣಿಯು ಕೆಲವು ಪುನರಾವರ್ತಿತ ಪಾತ್ರಗಳನ್ನು ಪ್ರಸ್ತುತಪಡಿಸಿತು. ಇವುಗಳಲ್ಲಿ, ರೊಜರ್ ಮಾಬ್ಲೆ ಒಬ್ಬ ಪತ್ರಿಕಾ ವರದಿಗಾರ ಹಾಗೂ ರಿಚರ್ಡ್ ಹಾರ್ಡಿಂಗ್ ಡೇವಿಸ್ ಲೇಖನವನ್ನಾಧರಿಸಿದ ಪತ್ತೇದಾರ 'ಗ್ಯಾಲೆಘರ್' ಪಾತ್ರಗಳ ವಹಿಸಿದ.
ವಾಲ್ಟ್ ಡಿಸ್ನಿ ಆಗಲೇ ತಮ್ಮದೇ ಆದ ಸಂಗೀತ ಪ್ರಕಾಶನ ವಿಭಾಗವನ್ನು 1949ರಷ್ಟು ಹಿಂದೆಯೇ ಸ್ಥಾಪಿಸಿದ್ದರು. 1956ರಲ್ಲಿ, ದಿ ಬ್ಯಾಲಡ್ ಆಫ್ ಡೇವಿ ಕ್ರೊಕೆಟ್ ದೂರದರ್ಶನದ ಶೀರ್ಷಿಕೆ ಗೀತೆಯ ಭಾರೀ ಯಶಸ್ಸಿನಿಂದ ಭಾಗಶಃ ಪ್ರೇರೇಪಿತ ವಾಲ್ಟ್ ಡಿಸ್ನಿ ಸಂಸ್ಥೆಯ ಸ್ವಾಮ್ಯದ ಧ್ವನಿಮುದ್ರಣಾ ನಿರ್ಮಾಣ ಮತ್ತು ವಿತರಣಾ ಸಂಸ್ಥೆ ಡಿಸ್ನಿಲೆಂಡ್ ರೆಕಾರ್ಡ್ಸ್ ಎಂಬ ಘಟಕ ಸ್ಥಾಪಿಸಿದರು.
1960ರ ದಶಕದ ಆರಂಭದಲ್ಲಿನ ಯಶಸ್ಸುಗಳು
[ಬದಲಾಯಿಸಿ]1960ರ ದಶಕದ ಆರಂಭದಲ್ಲಿ, ಡಿಸ್ನಿ ಸಂಸ್ಥೆಗಳ ಸಮೂಹ ಭಾರೀ ಯಶಸ್ಸು ಗಳಿಸಿತ್ತು. ಕೌಟುಂಬಿಕ ಮನರಂಜನಾ ಕಾರ್ಯಕ್ರಮಗಳ ನಿರ್ಮಾಣ ಸಂಸ್ಥೆಯಾಗಿ ವಾಲ್ಟ್ ಡಿಸ್ನಿ ಪ್ರೊಡಕ್ಷನ್ಸ್ ವಿಶ್ವದಲ್ಲೇ ಅಗ್ರಸ್ಥಾನದಲ್ಲಿತ್ತು. 1960 ಶೀತಕಾಲೀನ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ವಾಲ್ಟ್ ಡಿಸ್ನಿ ವೈಭವದ ಮೆರವಣಿಗೆಯ ಮುಖ್ಯಸ್ಥರಾಗಿದ್ದರು.
ದಶಕಗಳ ಕಾಲ ಪ್ರಯತ್ನಿಸಿ, ಅಂತಿಮವಾಗಿ, ಮಾಟಗಾತಿ ಎಂದು ಹೆಸರಾದ ಹೆಣ್ಣು ಮಗುವಿನ ದಾದಿಯೊಬ್ಬಳ ಬಗ್ಗೆ ಪಿ. ಎಲ್. ಟ್ರ್ಯಾವರ್ಸ್ ಬರೆದ ಪುಸ್ತಕಗಳ ಹಕ್ಕುಗಳನ್ನು ಡಿಸ್ನಿ ಸಂಸ್ಥೆ ಪಡೆದುಕೊಂಡಿತು. 1964ರಲ್ಲಿ ಬಿಡುಗಡೆಯಾದ ಮೇರಿ ಪಾಪಿನ್ಸ್ , 1960ರ ದಶಕದಲ್ಲಿಯೇ ಅತಿ ಹೆಚ್ಚು ಯಶಸ್ಸು ಪಡೆದ ಡಿಸ್ನಿ ಚಲನಚಿತ್ರವಾಯಿತು. ಡಿಸ್ನಿ ಸಂಸ್ಥೆಯ ನೆಚ್ಚಿನ ಗೀತರಚನೆಕಾರ ಷೆರ್ಮನ್ ಬ್ರದರ್ಸ್ ರಚಿಸಿದ, ಬಹುಕಾಲ ಜನಪ್ರಿಯವಾಗುಳಿದಿರುವ ಹಾಡು ಈ ಚಲನಚಿತ್ರದ ಭಾಗವಾಗಿತ್ತು.
ಅದೇ ವರ್ಷ, 1964 ನ್ಯೂ ಯಾರ್ಕ್ ವರ್ಲ್ಡ್ಸ್ ಫೇರ್‌ನಲ್ಲಿ ಹಲವು ಪ್ರದರ್ಶನ ವಸ್ತುಗಳನ್ನು ಡಿಸ್ನಿ ಸಂಸ್ಥೆಯು ಪರಿಚಯಿಸಿತು. ಇವುಗಳಲ್ಲಿ ಆಡಿಯೊ-ಅನಿಮಾಟ್ರೊನಿಕ್ ರೂಪಗಳಿದ್ದವು. ನಂತರ ಇವೆಲ್ಲವನ್ನೂ ಡಿಸ್ನಿಲೆಂಡ್‌ನ ಪ್ರಮುಖ ಆಕರ್ಷಣೆಗಳನ್ನಾಗಿ ಸೇರಿಸಿಕೊಳ್ಳಲಾಯಿತು. ಇದಲ್ಲದೆ, ಅಮೆರಿಕಾದ ಪೂರ್ವ ತೀರದಲ್ಲಿ ಸ್ಥಾಪಿಸಲಿದ್ದ ಹೊಸ ಥೀಮ್ ಪಾರ್ಕ್ ಯೋಜನೆಯ ಆಕರ್ಷಣೆಯಾಗಿಯೂ ಇದನ್ನು ಸೇರಿಸಿಕೊಳ್ಳಲಾಯಿತು.
ಆ ಸಮಯದಲ್ಲಿ ಡಿಸ್ನಿ ಸ್ಟುಡಿಯೊ ಹ್ಯಾನಾ-ಬಾರ್ಬರಾದೊಂದಿಗೆ ಮಹಾ ಸ್ಪರ್ಧೆಗೆ ಇಳಿಯಬಹುದಾಗಿತ್ತು. ಆದರೂ, ಶನಿವಾರ ಬೆಳಗ್ಗೆ ಪ್ರಸಾರವಾದ, ಹ್ಯಾನಾ-ಬಾರ್ಬರಾ ನಿರ್ಮಾಣದ ವ್ಯಂಗ್ಯಚಿತ್ರ ಸರಣಿಯಂತೆ ಡಿಸ್ನಿ ಸಂಸ್ಥೆಯು ಸ್ಪರ್ಧೆಗಿಳಿಯುವುದು ಸೂಕ್ತವಲ್ಲ ಎಂದು ಡಿಸ್ನಿ ಸಂಸ್ಥೆ ತೀರ್ಮಾನಿಸಿತು. ಡಿಸ್ನಿ ಸಂಸ್ಥೆಯ ವಿಸ್ತರಣೆ ಹಾಗೂ ಸತತ ಚಲನಚಿತ್ರದ ನಿರ್ಮಾಣದಿಂದಾಗಿ, ಬಜೆಟ್ ನಿರ್ವಹಣೆ ಕಷ್ಟವಾಗಬಹುದೆಂದು ಡಿಸ್ನಿ ವ್ಯವಸ್ಥಾಪಕ ಸಮಿತಿ ನಿರ್ಣಯಿಸಿತು.
ಇದರಿಂದಾಗಿ, ಮೈಕಲ್ ಏಸ್ನರ್ ನಿಗಮದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ, ಸ್ಟುಡಿಯೊ 1985ರ ತನಕ ಯಾವುದೇ ಶನಿವಾರ-ಬೆಳಗ್ಗೆಗೆ ಮೀಸಲಾದ ವ್ಯಂಗ್ಯಚಲನಚಿತ್ರಗಳನ್ನು ನಿರ್ಮಿಸಿರಲಿಲ್ಲ. [ಸೂಕ್ತ ಉಲ್ಲೇಖನ ಬೇಕು]
ಡಿಸ್ನಿವರ್ಲ್ಡ್ ಮತ್ತು EPCOTಗಾಗಿ ಯೋಜನೆಗಳು
[ಬದಲಾಯಿಸಿ]ಡಿಸ್ನಿ ವರ್ಲ್ಡ್ ಎಂಬುದು ಡಿಸ್ನಿಲೆಂಡ್‌ನ ಇನ್ನೂ ದೊಡ್ಡದಾದ, ಇನ್ನಷ್ಟು ವಿಸ್ತಾರವಾದ ಆವೃತ್ತಿ 'ಮ್ಯಾಜಿಕ್ ಕಿಂಗ್ಡಮ್'ನ್ನು ಒಳಗೊಳ್ಳುವುದಿತ್ತು. ಇದರಲ್ಲಿ ಹಲವು ಗಾಲ್ಫ್ ಮೈದಾನಗಳು ಮತ್ತು ರೆಸಾರ್ಟ್ ಹೊಟೆಲ್‌ಗಳುಂಟು. ಎಕ್ಸ್‌ಪೆರಿಮೆಂಟಲ್ ಪ್ರೊಟೊಟೈಪ್ ಸಿಟಿ (ಕಮ್ಯೂನಿಟಿ) ಆಫ್ ಟುಮೊರೊ, ಅಥವಾ ಸಮೂದಾಯದ ಮನೆ EPCOT ಎಂಬುದು ಡಿಸ್ನಿ ವರ್ಲ್ಡ್‌ನ ಕೇಂದ್ರಬಿಂದುವಾಗುವುದಿತ್ತು.
ಮಿನೆರಲ್ ಕಿಂಗ್ ಸ್ಕೀ ರೆಸಾರ್ಟ್
[ಬದಲಾಯಿಸಿ]ವಾಲ್ಟ್ ಡಿಸ್ನಿ ಮಿನೆರಲ್ ಕಿಂಗ್‌ನಲ್ಲಿ 'ವಾಲ್ಟ್ ಡಿಸ್ನಿ ಸ್ಕೀ ರೆಸಾರ್ಟ್' ಎಂಬ ಒಂದು ಸ್ಕೀ ರೆಸಾರ್ಟ್ ನಿರ್ಮಿಸುವ ಯೋಜನೆ ಹಾಕಿದ್ದರು. ಇದರ ನಿಮಿತ್ತ, 1960ರ ದಶಕದ ಆರಂಭ ಮತ್ತು ಮಧ್ಯದಲ್ಲಿ, ವಾಲ್ಟ್ ಡಿಸ್ನಿ ಖ್ಯಾತ ಒಲಿಂಪಿಕ್ ಸ್ಕೀ ತರಬೇತುದಾರ ಮತ್ತು ಸ್ಕೀ-ಕ್ಷೇತ್ರದ ವಿನ್ಯಾಸಕ ವಿಲಿ ಷೇಫ್ಲರ್ ಸೇರಿದಂತೆ ತಜ್ಞರನ್ನು ಕರೆಸಿದರು. ಕಣಿವೆಯ ಸುತ್ತಲೂ ಇರುವ ಅಂಡಾಕಾರದ ಭೂಪ್ರದೇಶದಲ್ಲಿ, ಸಂದರ್ಶಕರ ತಂಗುದಾಣ (ವಿಸಿಟರ್ಸ್ ವಿಲೇಜ್), ಸ್ಕೀ ರನ್‌ಗಳು ಮತ್ತು ಸ್ಕೀ ಲಿಫ್ಟ್‌ಗಳ ನಿರ್ಮಾಣದ ವಿನ್ಯಾಸದಲ್ಲಿ ಈ ತಜ್ಞರು ನೆರವಾದರು. 1960ರ ಮಧ್ಯದಲ್ಲಿ ಯೋಜನೆಗಳು ಕಾರ್ಯಗತವಾದವು, ಆದರೆ ವಾಸ್ತವಿಕವಾಗಿ ಕೆಲಸ ಆರಂಭಗೊಳ್ಳುವ ಮುಂಚೆಯೇ ವಾಲ್ಟ್ ಡಿಸ್ನಿ ವಿಧಿವಶರಾದರು. ವಾಲ್ಟ್ ಡಿಸ್ನಿಯವರ ನಿಧನ ಹಾಗೂ ಸಂರಕ್ಷಣಾವಾದಿಗಳಿಂದ ಈ ಯೋಜನೆಗೆ ವಿರೋಧ ವ್ಯಕ್ತವಾದ್ದರಿಂದ ಈ ರೆಸಾರ್ಟ್ ನಿರ್ಮಾಣವಾಗಲೇ ಇಲ್ಲ.
ಮರಣ
[ಬದಲಾಯಿಸಿ]ಹಲವು ವರ್ಷಗಳ ಕಾಲ ಅವರು ಆಗಾಗ್ಗೆ ಹಾಲಿವುಡ್‌ನ ರಿವೆರಿಯಾ ಕ್ಲಬ್‌ನಲ್ಲಿ ಪೊಲೊ ಆಡುತ್ತಿದ್ದರು.[೮೦] ಪೊಲೊ ಆಟದಲ್ಲಿ ಉಂಟಾದ ಒಂದು ಹಳೆಯ ಗಾಯಕ್ಕೆ 1966ರ ಅಪರಾರ್ಧದಲ್ಲಿ ಅವರ ಕುತ್ತಿಗೆ ಭಾಗಕ್ಕೆ ಶಸ್ತ್ರಚಿಕಿತ್ಸೆ ಮಾಡಬೇಕಾಯಿತು.[೮೧] 2 ನವೆಂಬರ್ 1966ರಂದು, ಡಿಸ್ನಿ ಸ್ಟುಡಿಯೊ ಎದುರಿಗಿರುವ ಪ್ರೊವಿಡೆನ್ಸ್ ಸೇಂಟ್ ಜೋಸೆಫ್ ಮೆಡಿಕಲ್ ಸೆಂಟರ್ ಆಸ್ಪತ್ರೆಯಲ್ಲಿ ವಾಲ್ಟ್ ಡಿಸ್ನಿಯವರ ಮೇಲೆ ಶಸ್ತ್ರಚಿಕಿತ್ಸೆಯ ಮುಂಚಿನ ಕ್ಷ-ಕಿರಣ ಪರೀಕ್ಷೆಗಳನ್ನು ನಡೆಸಲಾಯಿತು. ಆಗ ವಾಲ್ಟ್ ಡಿಸ್ನಿಯವರ ಎಡ ಶ್ವಾಸಕೋಶದಲ್ಲಿ ದೊಡ್ಡ ಗಾತ್ರದ ಗೆಡ್ಡೆಯಾದದ್ದು ಕಂಡುಬಂತು.[೮೨] ಐದು ದಿನಗಳ ನಂತರ, ವಾಲ್ಟ್ ಡಿಸ್ನಿ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದರು. ಆದರೆ, ಗೆಡ್ಡೆಯು ಬಹಳ ವ್ಯಾಪಕವಾಗಿ ಹರಡಿದ್ದ ಕಾರಣ, ವೈದ್ಯರು ವಾಲ್ಟ್ ಡಿಸ್ನಿಯವರ ಎಡ ಶ್ವಾಸ ಕೋಶವನ್ನೇ ತೆಗೆದು ಹಾಕಬೇಕಾಯಿತು.[೮೨] 'ನೀವು ಕೇವಲ ಆರು ತಿಂಗಳುಗಳಿಂದ ಒಂದು ವರ್ಷಗಳ ಕಾಲ ಮಾತ್ರ ಬದುಕಬಹುದು' ಎಂದು ಅಲ್ಲಿನ ವೈದ್ಯರು ವಾಲ್ಟ್ ಡಿಸ್ನಿಯವರಿಗೆ ತಿಳಿಸಿದರು.[೮೨] ಹಲವು ರಾಸಾಯನಿಕ ಚಿಕಿತ್ಸೆಯ ರೋಗನಿದಾನ ಪರೀಕ್ಷೆಗಳ ನಂತರ, ವಾಲ್ಟ್ ಡಿಸ್ನಿ ಮತ್ತು ಅವರ ಪತ್ನಿ ಸ್ವಗೃಹಕ್ಕೆ ಹಿಂದಿರುಗುವ ಮುನ್ನ, ಕ್ಯಾಲಿಫೊರ್ನಿಯಾದ ಪಾಮ್ ಸ್ಪ್ರಿಂಗ್ಸ್‌ನಲ್ಲಿ ಸ್ವಲ್ಪ ಕಾಲ ಉಳಿದುಕೊಂಡರು.[೮೧] 30 ನವೆಂಬರ್ 1966ರಲ್ಲಿ ವಾಲ್ಟ್ ಡಿಸ್ನಿ ತಮ್ಮ ಮನೆಯಲ್ಲಿ ಕುಸಿದುಬಿದ್ದರು. ಕೂಡಲೇ ಸಹಾಯಕ ವೈದ್ಯರು ಇವರಿಗೆ ತತ್ ಕ್ಷಣದ ಆರೈಕೆ ನೀಡಿ, ಆಸ್ಪತ್ರೆಗೆ ಕರೆದೊಯ್ದರು. ಅವರ 65ನೆಯ ಹುಟ್ಟುಹಬ್ಬದ ಹತ್ತು ದಿನಗಳ ನಂತರ, ಅಂದರೆ 15 ಡಿಸೆಂಬರ್ 1966ರಂದು ಬೆಳಿಗ್ಗೆ 9.30 ಗಂಟೆಗೆ ವಾಲ್ಟ್ ಡಿಸ್ನಿಯವರ ಸಾವು [೮೧] ಸಂಭವಿಸಿತು. 17 ಡಿಸೆಂಬರ್ 1966ರಂದು ಅವರ ಅಂತಿಮ ಸಂಸ್ಕಾರ ನಡೆಯಿತು. ಅವರ ಚಿತಾಭಸ್ಮವನ್ನು ಕ್ಯಾಲಿಫೊರ್ನಿಯಾದ ಗ್ಲೆಂಡೇಲ್ನಲ್ಲಿರುವ ಫಾರೆಸ್ಟ್ ಲಾನ್ ಮೆಮೊರಿಯಲ್ ಪಾರ್ಕ್‌ನಲ್ಲಿಡಲಾಗಿದೆ. ವಾಲ್ಟ್‌ರ ಅಣ್ಣ ರಾಯ್ ಒ. ಡಿಸ್ನಿ ಫ್ಲಾರಿಡಾದ ಯೋಜನೆಯನ್ನು ಮುಂದುವರೆಸಿಕೊಂಡು ಹೋದರು. ಅವರು ಅದರ ಹೆಸರನ್ನು ತಮ್ಮನ ನೆನಪಿನಲ್ಲಿ ವಾಲ್ಟ್ ಡಿಸ್ನಿ ವರ್ಲ್ಡ್ ಎಂದು ನಾಮಕರಣಕ್ಕೆ ಒತ್ತಾಯಿಸಿದರು.
ವಾಲ್ಟ್ ಡಿಸ್ನಿ ಸಕ್ರಿಯವಾಗಿ ಭಾಗವಹಿಸಿದ್ದ ಅಂತಿಮ ನಿರ್ಮಾಣಗಳೆಂದರೆ ದಿ ಜಂಗಲ್ ಬುಕ್ ಎಂಬ ಆನಿಮೇಟೆಡ್ ಚಲನಚಿತ್ರ ಮತ್ತು ಸಂಗೀತ-ಹಾಗು-ಹಾಸ್ಯ-ಪ್ರಧಾನ ಚಲನಚಿತ್ರ ದಿ ಹ್ಯಾಪಿಯೆಸ್ಟ್ ಮಿಲಿಯನೆಯರ್ . ಇವೆರಡೂ ಸಹ 1967ರಲ್ಲಿ ಬಿಡುಗಡೆಯಾದವು. ಗೀತರಚನೆಕಾರ ರಾಬರ್ಟ್ ಬಿ. ಷೆರ್ಮನ್ ತಾವು ವಾಲ್ಟ್ ಡಿಸ್ನಿಯವರನ್ನು ಕೊನೆಯ ಬಾರಿಗೆ ನೋಡಿದುದರ ಬಗ್ಗೆ ಹೀಗೆ ಹೇಳಿದರು:
“ | He was up in the third floor of the animation building after a run-through of The Happiest Millionaire. He usually held court in the hallway afterward for the people involved with the picture. And he started talking to them, telling them what he liked and what they should change, and then, when they were through, he turned to us and with a big smile, he said, 'Keep up the good work, boys.' And he walked to his office. It was the last we ever saw of him.[೮೩] | ” |
ಬಹಳ ಕಾಲ ಉಳಿದುಕೊಂಡ ಆದರೆ ಮಿಥ್ಯವೆನ್ನಲಾದ ಅರ್ಬನ್ ಲೆಜೆಂಡ್ ಪ್ರಕಾರ, ವಾಲ್ಟ್ ಡಿಸ್ನಿಯ ಪಾರ್ಥಿವ ಶರೀರವನ್ನು ಅತಿಶೈತ್ಯಶಾಸ್ತ್ರೀಯವಾಗಿ ಸೆಡೆಸಿ, ಅವರ ಪಾರ್ಥಿವ ಶರೀರವನ್ನು ಡಿಸ್ನಿಲೆಂಡ್‌ನಲ್ಲಿ ಪೈರೇಟ್ಸ್ ಆಫ್ ದಿ ಕೆರಿಬಿಯನ್ ಅಡಿಯಲ್ಲಿ ಶೇಖರಿಸಿಡಲಾಗಿದೆ.[೮೪] [[ಸರ್ವರಿಗೂ ತಿಳಿದಿರುವಂತೆ ಮೊದಲ ಬಾರಿಗೆ ಮನುಷ್ಯನ ಪಾರ್ಥಿವ ಶರೀರದ ಅತಿಶೈತ್ಯಶಾಸ್ತ್ರೀಯವಾಗಿಸುವಿಕೆಯು ಅಥವಾ ಅತ್ಯಂತ ಕಡಿಮೆ ಉಷ್ಣತೆಯಲ್ಲಿ]] ಕಾಯ್ದಿಡುವುದು.ಒಂದು ತಿಂಗಳ ನಂತರ, ಅಂದರೆ, ಜನವರಿ 1967ರಲ್ಲಿ ನಡೆಸಲಾಯಿತು.[೮೪]
1967ರಿಂದ ಇಂದಿನವರೆಗೆ: ಪರಂಪರೆ
[ಬದಲಾಯಿಸಿ]ಕನಸು ಸಾಕಾರದ ಮುಂದುವರಿಕೆ
[ಬದಲಾಯಿಸಿ]ವಾಲ್ಟ್ ಡಿಸ್ನಿ ನಿಧನದ ನಂತರ ರಾಯ್ ಡಿಸ್ನಿ ವಾಲ್ಟ್ ,ಡಿಸ್ನಿ ಪ್ರೊಡಕ್ಷನ್ಸ್ ಮತ್ತು ಡಬ್ಲ್ಯೂಇಡಿ ಎಂಟರ್ಪ್ರೈಸೆಸ್ ಉದ್ದಿಮೆಗಳ ಉಸ್ತುವಾರಿ ವಹಿಸಿಕೊಳ್ಳಲು ತಮ್ಮ ನಿವೃತ್ತಿ ಜೀವನದಿಂದ ಹೊರಬಂದರು. ಅದೇ ವರ್ಷ ಅಕ್ಟೋಬರ್ ತಿಂಗಳಲ್ಲಿ, ವಾಲ್ಟ್ ಡಿಸ್ನಿ ವರ್ಲ್ಡ್ ರೆಸಾರ್ಟ್‌ನ್ನು ಅಧಿಕೃತವಾಗಿ ಉದ್ಘಾಟಿಸಲು ವಾಲ್ಟ್ ಮತ್ತು ರಾಯ್ ಡಿಸ್ನಿ ಕುಟುಂಬಗಳು ಮ್ಯಾಜಿಕ್ ಕಿಂಗ್ಡಮ್‌ನಲ್ಲಿರುವ ಸಿಂಡೆರೆಲಾ ಕ್ಯಾಸ್ಲ್ ಮುಂದೆ ಪರಸ್ಪರ ಭೇಟಿಯಾದವು.
ತಮ್ಮ ಜೀವನವನ್ನು ವಾಲ್ಟ್ ಡಿಸ್ನಿ ವರ್ಲ್ಡ್‌ಗಾಗಿ ಮುಡಿಪಾಗಿಟ್ಟ ರಾಯ್, ತಮ್ಮ ಸಹಯೋಗಿಯಾಗುವಂತೆ ಲಿಲ್ಲಿಯನ್‌ರನ್ನು ಕೋರಿದರು. ವಾದ್ಯಗೋಷ್ಠಿಯು 'ವೆನ್ ಯು ವಿಷ್ ಅಪಾನ್ ಅ ಸ್ಟಾರ್' ಹಾಡು ನುಡಿಸಿದಾಗ, ಲಿಲ್ಲಿಯನ್ ಮಿಕ್ಕಿ ಮೌಸ್‌ನ್ನು ಜೊತೆಯಲ್ಲಿ ಕರೆದುಕೊಂಡು ವೇದಿಕೆಗೆ ಹತ್ತಿದರು. ರಾಯ್ ಹೇಳಿದ್ದು, 'ಲಿಲ್ಲಿ, ವಾಲ್ಟ್‌ರ ಕಲ್ಪನೆಗಳು ಮತ್ತು ಆಕಾಂಕ್ಷೆಗಳೆಲ್ಲದರ ಬಗ್ಗೆ ನಿಮಗೆ ತಿಳಿದಿದೆಯಲ್ಲ, ಇದರ (ವಾಲ್ಟ್ ಡಿಸ್ನಿ ವರ್ಲ್ಡ್) ಬಗ್ಗೆ ಆತ ಏನೆಂದುಕೊಳ್ಳುತ್ತಿದ್ದ?' "ವಾಲ್ಟ್ ಇದನ್ನು ಸಮ್ಮತಿಸುತ್ತಿದ್ದರೆಂದು ನಾನು ಹೇಳುವೆ," ಎಂದು ಲಿಲ್ಲಿಯನ್ ಉತ್ತರಿಸಿದರು.[೮೫] ಡಿಸೆಂಬರ್ 20ರ 1971ರಂದು ರಾಯ್ ಡಿಸ್ನಿ ಮೆದುಳಿನ ರಕ್ತಸ್ರಾವದಿಂದ ನಿಧನ ಹೊಂದಿದರು. ಅದೇ ದಿನ ಅವರು ಡಿಸ್ನಿಲೆಂಡ್ ಕ್ರಿಸ್ಮಸ್ ಪೆರೇಡ್‌ನ್ನು ಉದ್ಘಾಟಿಸುವರಿದ್ದರು.
'ವಾಲ್ಟ್ ಡಿಸ್ನಿ ವರ್ಲ್ಡ್' ಥೀಮ್ ಪಾರ್ಕ್‌ನ ಎರಡನೆಯ ಹಂತದಲ್ಲಿ, ಡಿಸ್ನಿಯ ಉತ್ತರಾಧಿಕಾರಿಗಳು EPCOTನ್ನು EPCOT ಸೆಂಟರ್ ಆಗಿ ಮಾರ್ಪಾಡು ಮಾಡಿದರು. ಇದು 1982ರಲ್ಲಿ ಆರಂಭವಾಯಿತು.
ಸದ್ಯ ಅಸ್ತಿತ್ವದಲ್ಲಿರುವ, EPCOT ಒಂದು ಜೀವಂತ ವರ್ಲ್ಡ್ಸ್ ಫೇರ್ ಆಗಿದೆ. ವಾಲ್ಟ್ ಡಿಸ್ನಿಯವರು ಕಲ್ಪಿಸಿದ ನಗರಿಗಿಂತಲೂ ಭಿನ್ನವಾಗಿದೆ. 1992ರಲ್ಲಿ ವಾಲ್ಟ್ ಡಿಸ್ನಿ ಇಮ್ಯಾಜಿನಿಯರಿಂಗ್ ಸಂಸ್ಥೆಯು ವಾಲ್ಟ್‌ರ ಕಲ್ಪನೆಗೆ ಹತ್ತಿರವಾಗುವ ಕ್ರಮ ಕೈಗೊಂಡಿತು. ಫ್ಲಾರಿಡಾದಲ್ಲಿ ವಾಲ್ಟ್ ಡಿಸ್ನಿ ಸಂಸ್ಥೆಯು ವಾಲ್ಟ್ ಡಿಸ್ನಿ ವರ್ಲ್ಡ್ ಪಕ್ಕದಲ್ಲಿ ನಿರ್ಮಿಸಿದ್ದ ಸೆಲೆಬ್ರೇಷನ್ ಎಂಬ ಪಟ್ಟಣವನ್ನು EPCOTನ ಧ್ಯೇಯಕ್ಕಾಗಿ ಮುಡಿಪಾಗಿಡಲಾಯಿತು. EPCOT ಮೂಲತಃ ಯಾವುದೇ ಡಿಸ್ನಿ ಪಾತ್ರಗಳನ್ನು ಒಳಗೊಳ್ಳದಿರಲು ನಿರ್ಣಯಿಸಲಾಯಿತು. ಹಾಗಾಗಿ ಕೇವಲ ಕಿರಿಯ ಮಕ್ಕಳನ್ನು ಮಾತ್ರ ಆಕರ್ಷಿಸುತ್ತಿತ್ತು. ಆದರೆ ಸಂಸ್ಥೆಯು ಈ ನೀತಿಯನ್ನು ಬದಲಾಯಿಸಿತು.
ಡಿಸ್ನಿ ಮನರಂಜನಾ ಸಾಮ್ರಾಜ್ಯ
[ಬದಲಾಯಿಸಿ]ಇಂದು, ವಾಲ್ಟ್ ಡಿಸ್ನಿಯವರ ಆನಿಮೇಷನ್/ಚಲನಚಿತ್ರ ಸ್ಟುಡಿಯೊಗಳು ಮತ್ತು ಥೀಮ್ ಪಾರ್ಕ್‌ಗಳು ಅವರ ಹೆಸರಿನಲ್ಲಿ ಬಹು-ಶತಕೋಟಿ ಡಾಲರ್ ಮೌಲ್ಯದ ದೂರದರ್ಶನ, ಚಲನಚಿತ್ರ, ರಜಾದಿನದ ಸಂದರ್ಶನಾಸ್ಥಳ ಮತ್ತು ಮಾಧ್ಯಮಗಳ ನಿಗಮಗಳಾಗಿವೆ. ಇಂದು ವಾಲ್ಟ್ ಡಿಸ್ನಿ ಕಂಪೆನಿ ಇತರೆ ಆಸ್ತಿ-ಪಾಸ್ತಿಗಳ ಪೈಕಿ ಐದು ರಜಾಕಾಲದ ರೆಸಾರ್ಟ್, ಹನ್ನೊಂದು ಥೀಮ್ ಪಾರ್ಕ್, ಎರಡು ನೀರಿನ ಉದ್ಯಾನ, ಮುವ್ವತ್ತೊಂಬತ್ತು ಹೊಟೆಲ್, ಎಂಟು ಚಲನಚಿತ್ರ ಸ್ಟುಡಿಯೊ, ಆರು ರೆಕಾರ್ಡ್ ಲೇಬೆಲ್, ಹನ್ನೊಂದು ಕೇಬಲ್ ದೂರದರ್ಶನ ವಾಹಿನಿಗಳು ಮತ್ತು ಒಂದು ಪ್ರಾದೇಶಿಕ ಟೆಲೆವಿಸನ್ ಜಾಲದ(ಟೆರೆಸ್ಟ್ರಿಯಲ್) ವಾಹಿನಿಯೂ ಸೇರಿವೆ. 2007ರಲ್ಲಿ ಸಂಸ್ಥೆಯು ವಾರ್ಷಿಕ U.S. $35 ಶತಕೋಟಿ ಆದಾಯ ಗಳಿಸಿತು.[೮೬]
ಇಂದಿನ ಡಿಸ್ನಿ ಆನಿಮೇಷನ್
[ಬದಲಾಯಿಸಿ]ವಾಲ್ಟ್ ಡಿಸ್ನಿ ತಮ್ಮ ಸಂಸ್ಥೆ ಆರಂಭಿಸಿದಾಗ ಬಳಸಿದ ಸಾಂಪ್ರದಾಯಿಕ ಕೈಯಿಂದ-ಬಿಡಿಸಿದ ಅನಿಮೇಷನ್‌ನ್ನು ಕೆಲಕಾಲ ವಾಲ್ಟ್ ಡಿಸ್ನಿ ಆನಿಮೇಷನ್ ಸ್ಟುಡಿಯೊದಲ್ಲಿ ಪುನರ್ರಚಿಸಲಾಗಿರಲಿಲ್ಲ. ಕಳೆದ 2000ದ ದಶಕದ ಆರಂಭದಲ್ಲಿ, ಸಾಂಪ್ರದಾಯಿಕವಾಗಿ ಆನಿಮೇಟ್ ಆದ ವ್ಯಂಗ್ಯಚಲನಚಿತ್ರಗಳು ವಿಫಲವಾದ ಕಾರಣ ಪ್ಯಾರಿಸ್ ಮತ್ತು ಆರ್ಲೆಂಡೊದಲ್ಲಿರುವ ಎರಡು ಉಪ-ಸ್ಟುಡಿಯೊಗಳನ್ನು ಮುಚ್ಚಲಾಯಿತು. ಬರ್ಬ್ಯಾಂಕ್‌ನಲ್ಲಿರುವ ಪ್ರಮುಖ ಸ್ಟುಡಿಯೊವನ್ನು ಕಂಪ್ಯೂಟರ್ ಆನಿಮೇಷನ್ ನಿರ್ಮಾಣ ಘಟಕವಾಗಿ ಪರಿವರ್ತಿಸಲಾಯಿತು. ಕಳೆದ 2004ರಲ್ಲಿ, ಡಿಸ್ನಿ ಸಂಸ್ಥೆ ತಮ್ಮ ಅಂತಿಮ 'ಸಾಂಪ್ರದಾಯಿಕವಾಗಿ ಆನಿಮೇಟೆಡ್' ಎನ್ನಲಾದ ಚಲನಚಿತ್ರ ಹೋಮ್ ಆನ್ ದಿ ರೇಂಜ್ ಬಿಡುಗಡೆಗೊಳಿಸಿತು. ಆದರೆ, 2006ರಲ್ಲಿ ಡಿಸ್ನಿ ಸಂಸ್ಥೆಯು ಪಿಕ್ಸಾರ್ ಸಂಸ್ಥೆಯನ್ನು ತಮ್ಮದಾಗಿಸಿಕೊಂಡು, ಜಾನ್ ಲ್ಯಾಸೆಟರ್ ಚೀಫ್ ಕ್ರಿಯೇಟಿವ್ ಆಫಿಸರ್ ಆಗಿ ಬಡ್ತಿ ಪಡೆದ ಫಲವಾಗಿ, ಈ ನಿರ್ಧಾರ ಬದಲಿಸಿದೆ. 2009ರಲ್ಲಿ ಬಿಡುಗಡೆಯಾದ ದಿ ಪ್ರಿನ್ಸೆಸ್ ಅಂಡ್ ದಿ ಫ್ರಾಗ್ ಚಲನಚಿತ್ರದೊಂದಿಗೆ ಡಿಸ್ನಿ ಸಂಸ್ಥೆಯು ಸಾಂಪ್ರದಾಯಿಕ ಹಸ್ತ-ರಚನೆಯ ಆನಿಮೇಷನ್‌ನತ್ತ ಮರಳಿತು.
ಕ್ಯಾಲ್‌ಆರ್ಟ್ಸ್
[ಬದಲಾಯಿಸಿ]ತಮ್ಮ ಜೀವನದ ಉತಾರಾರ್ಧದಲ್ಲಿ ವಾಲ್ಟ್ ಡಿಸ್ನಿ ಕ್ಯಾಲಿಫೊರ್ನಿಯಾ ಇಂಸ್ಟಿಟ್ಯೂಟ್ ಆಫ್ ದಿ ಆರ್ಟ್ಸ್‌ಗೆ (ಕ್ಯಾಲ್‌ಆರ್ಟ್ಸ್) ಧನಸಹಾಯ ಮಾಡುವುದರಲ್ಲಿ ಗಮನಾರ್ಹ ಸಮಯ ಮೀಸಲಿಟ್ಟರು. 1961ರಲ್ಲಿ ಲಾಸ್ ಏಂಜೆಲೀಸ್ ಕನ್ಸರ್ವೇಟರಿ ಆಫ್ ಮ್ಯೂಸಿಕ್ ಮತ್ತು ಚೂಯಿನಾರ್ಡ್ ಆರ್ಟ್ ಇಂಸ್ಟಿಟ್ಯೂಟ್ ವಿಲೀನವಾಗಿ ಕ್ಯಾಲ್‌ಆರ್ಟ್ ಆಸ್ತಿತ್ವಕ್ಕೆ ಬಂದಿತು. (1930ರ ದಶಕದಲ್ಲಿ ಚೂಯಿನಾರ್ಡ್ ಆನಿಮೇಷನ್ ಸಿಬ್ಬಂದಿಯವರಿಗೆ ತರಬೇತಿ ನೀಡುವುದರಲ್ಲಿ ನೆರವಾಗಿತ್ತು). ವಾಲ್ಟ್ ಡಿಸ್ನಿ ನಿಧನರಾದಾಗ ಅವರ ಎಸ್ಟೇಟ್ ನ ನಾಲ್ಕನೆಯ ಒಂದು ಭಾಗವು ಕ್ಯಾಲ್‌ಆರ್ಟ್ಸ್‌ಗೆ ಹೋಯಿತು. ಅದಕ್ಕೆ ತನ್ನದೇ ಕ್ಯಾಂಪಸ್ ನಿರ್ಮಿಸಲು ನೆರವಾಯಿತು. ಅವರ ಉಯಿಲಿನಲ್ಲಿ ವಾಲ್ಟ್ ಡಿಸ್ನಿ ಹಲವಾರು ದಾನಶೀಲ ದತ್ತಿಗಳ ಸ್ಥಾಪನೆಗೆ ನಾಂದಿಯಾದರು. ಕ್ಯಾಲಿಫೊರ್ನಿಯಾ ಇಂಸ್ಟಿಟ್ಯೂಟ್ ಆಫ್ ದಿ ಆರ್ಟ್ಸ್ ಮತ್ತು ಇನ್ನೊಂದು ಡಿಸ್ನಿ ಫೌಂಡೇಷನ್‌ಗಾಗಿ ದತ್ತಿಗಳು ಸ್ಥಾಪಿತವಾದವು.[೮೭] ವ್ಯಾಲೆಂಷಿಯಾದಲ್ಲಿರುವ ಗೋಲ್ಡೆನ್ ಓಕ್ಸ್ ಎಂಬ ಹುಲ್ಲುಗಾವಲಿನಲ್ಲಿನ ಜಮೀನನ್ನು 38 acres (0.154 km2) ಶಾಲೆಗಾಗಿ ದಾನ ಮಾಡಿದರು. 1972ರಲ್ಲಿ ಕ್ಯಾಲ್‌ಆರ್ಟ್ಸ್ ವ್ಯಾಲೆಂಷಿಯಾ ಕ್ಯಾಂಪಸ್‌ಗೆ ಸ್ಥಳಾಂತರಗೊಂಡಿತು.
ಆರಂಭಿಕ ಹೇಳಿಕೆಯೊಂದರಲ್ಲಿ ವಾಲ್ಟ್ ಡಿಸ್ನಿ ವಿವರಿಸಿದ್ದು ಹೀಗೆ:
“ | A hundred years ago, Wagner conceived of a perfect and all-embracing art, combining music, drama, painting, and the dance, but in his wildest imagination he had no hint what infinite possibilities were to become commonplace through the invention of recording, radio, cinema and television. There already have been geniuses combining the arts in the mass-communications media, and they have already given us powerful new art forms. The future holds bright promise for those who imaginations are trained to play on the vast orchestra of the art-in-combination. Such supermen will appear most certainly in those environments which provide contact with all the arts, but even those who devote themselves to a single phase of art will benefit from broadened horizons.[೮೮] | ” |
ಅಕ್ಯಾಡಮಿ ಪ್ರಶಸ್ತಿಗಳು
[ಬದಲಾಯಿಸಿ]ಅತಿ ಹೆಚ್ಚು ಅಕಾಡಮಿ ಅವಾರ್ಡ್ ನಾಮನಿರ್ದೇಶನಗಳು (ಐವತ್ತೊಂಬತ್ತು) ಮತ್ತು ಆಸ್ಕರ್ ಪ್ರಶಸ್ತಿಗಳ (ಇಪ್ಪತ್ತಾರು) ದಾಖಲೆಗಳು ವಾಲ್ಟ್ ಡಿಸ್ನಿಯವರಿಗೆ ಸಲ್ಲುತ್ತದೆ. ಇದರಲ್ಲಿ ನಾಲ್ಕು ಆಸ್ಕರ್‌ಗಳು ವಿಶೇಷ ಪ್ರಶಸ್ತಿಗಳಾಗಿವೆ. ಅವರ ಕೊನೆಯ ಪ್ರಶಸ್ತಿಯು ಮರಣಾನಂತರ ಲಭಿಸಿತು.
- 1932 : ಆತ್ಯುತ್ತಮ ಕಿರುಚಿತ್ರ ಕಥೆ, ವ್ಯಂಗ್ಯಚಿತ್ರಗಳು: ಫ್ಲಾವರ್ಸ್ ಅಂಡ್ ಟ್ರೀಸ್ (1932)
- 1932 : ಗೌರವಾರ್ಥ ಪ್ರಶಸ್ತಿ: ಮಿಕ್ಕಿ ಮೌಸ್ ಪಾತ್ರದ ರಚನೆ.
- 1934 : ಆತ್ಯುತ್ತಮ ಕಿರುಚಿತ್ರ ಕಥೆ, ವ್ಯಂಗ್ಯಚಿತ್ರಗಳು: ತೀ ಲಿಟ್ಲ್ ಪಿಗ್ಸ್ (1933)
- 1935 : ಆತ್ಯುತ್ತಮ ಕಿರುಚಿತ್ರ ಕಥೆ, ವ್ಯಂಗ್ಯಚಿತ್ರಗಳು: ದಿ ಟಾರ್ಟಾಯ್ಸ್ ಅಂಡ್ ದಿ ಹೇರ್ (1934)
- 1936 : ಆತ್ಯುತ್ತಮ ಕಿರುಚಿತ್ರ ಕಥೆ, ವ್ಯಂಗ್ಯಚಿತ್ರಗಳು: ತ್ರೀ ಆರ್ಫನ್ ಕಿಟೆನ್ಸ್ (1935)
- 1937 : ಆತ್ಯುತ್ತಮ ಕಿರುಚಿತ್ರ ಕಥೆ, ವ್ಯಂಗ್ಯಚಿತ್ರಗಳು: ದಿ ಕಂಟ್ರಿ ಕಸಿನ್ (1936)
- 1938 : ಆತ್ಯುತ್ತಮ ಕಿರುಚಿತ್ರ ಕಥೆ, ವ್ಯಂಗ್ಯಚಿತ್ರಗಳು: ದಿ ಓಲ್ಡ್ ಮಿಲ್ (1937)
- 1939 : ಆತ್ಯುತ್ತಮ ಕಿರುಚಿತ್ರ ಕಥೆ, ವ್ಯಂಗ್ಯಚಿತ್ರಗಳು: ಫರ್ಡಿನಂಡ್ ದಿ ಬುಲ್ (1938)
- ಇಸವಿ 1939 : ಗೌರವ ಪ್ರಶಸ್ತಿ ಸ್ನೋವೈಟ್ ಅಂಡ್ ದಿ ಸೆವೆನ್ ಡ್ವೊಫ್ಸ್ (1937) ನಲ್ಲಿನ ಉಲ್ಲೇಖ ಹೀಗಿತ್ತು: "ಇದು ದಶಲಕ್ಷಗಟ್ಟಲೆ ಪ್ರೇಕ್ಷಕರ ಮನಮುಟ್ಟಿ ಹೊಸರೀತಿಯ ಮನರಂಜನೆಯ ಹರಿಕಾರರ ಗಮನಾರ್ಹ ಚಿತ್ರಕಥಾ ನವೀನತೆ ಹೊಂದಿದ ಸ್ನೋ ವೈಟ್ ಅಂಡ್ ದಿ ಸೆವೆನ ಡ್ವೊಫ್ಸ್‌ಗಾಗಿ (ಒಂದು ಕಿರುವಿಗ್ರಹ ಮತ್ತು ಏಳು ಸಣ್ಣ ಪ್ರಮಾಣದ ಸಣ್ಣವಿಗ್ರಹಗಳನ್ನು ಪ್ರಶಸ್ತಿಯಾಗಿ ನೀಡಲಾಯಿತು)[೨]
- 1940 : ಆತ್ಯುತ್ತಮ ಕಿರುಚಿತ್ರ ಕಥೆ, ವ್ಯಂಗ್ಯಚಿತ್ರಗಳು: ಅಗ್ಲಿ ಡಕ್ಲಿಂಗ್ (1939)
- 1941 : ಗೌರವ ಪ್ರಶಸ್ತಿ: ಫ್ಯಾಂಟಸಿಯಾ (1940); ವಿಲಿಯಮ್ ಇ. ಗ್ಯಾರಿಟಿ ಮತ್ತು ಜೆ.ಎನ್.ಎ. ಹಾಕಿನ್ಸ್‌ರೊಂದಿಗೆ ಹಂಚಿಕೊಂಡದ್ದು. 'ಸರ್ಟಿಫಿಕೇಟ್ ಆಫ್ ಮೆರಿಟ್'ನ ಉಲ್ಲೇಖ ಹೀಗಿತ್ತು: " ಫ್ಯಾಂಟಸಿಯಾ ಮೂಲಕ ಚಲನಚಿತ್ರಗಳಲ್ಲಿ ಧ್ವನಿಯ ಬಳಕೆಯಲ್ಲಿನ ಆಧುನೀಕರಣದ ಅಪಾರ ಕೊಡುಗೆಗಾಗಿ" [೨]
- 1942 : ಆತ್ಯುತ್ತಮ ಕಿರುಚಿತ್ರ ಕಥೆ, ವ್ಯಂಗ್ಯಚಿತ್ರಗಳು: ಲೆಂಡ್ ಎ ಪಾವ್ (1941)
- 1943 : ಆತ್ಯುತ್ತಮ ಕಿರುಚಿತ್ರ ಕಥೆ, ವ್ಯಂಗ್ಯಚಿತ್ರಗಳು: ಡರ್ ಫುಹ್ರರ್'ಸ್ ಫೇಸ್ (1942)
- 1949 : ಆತ್ಯುತ್ತಮ ಕಿರುಚಿತ್ರ ಕಥೆ, (ಎರಡು-ರೀಲ್‌ಗಳ ಅವಧಿ): ಸೀಲ್ ಐಲೆಂಡ್ (1948)
- 1949 : ಇರ್ವಿಂಗ್ ಜಿ. ಥಾಲ್ಬರ್ಗ್ ಮೆಮೊರಿಯಲ್ ಅವಾರ್ಡ್
- 1951 : ಆತ್ಯುತ್ತಮ ಕಿರುಚಿತ್ರ ಕಥೆ, (ಎರಡು ರೀಲ್ ಅವಧಿಯ): ಬೀವರ್ ವ್ಯಾಲಿ (1950)
- 1952 : ಆತ್ಯುತ್ತಮ ಕಿರುಚಿತ್ರ ಕಥೆ, (ಎರಡು ರೀಲ್ ಅವಧಿಯ): ನೇಚರ್'ಸ್ ಹಾಫ್ ಎಕರೆ (1951)
- 1953 : ಆತ್ಯುತ್ತಮ ಕಿರುಚಿತ್ರ ಕಥೆ, (ಎರಡು ರೀಲ್ ಅವಧಿಯ): ವಾಟರ್ ಬರ್ಡ್ಸ್ (1952)
- 1954 : ಅತ್ಯುತ್ತಮ ಸಾಕ್ಷ್ಯಚಿತ್ರ, (ಚಲನಚಿತ್ರ ರೀತಿಯ): ದಿ ಲಿವಿಂಗ್ ಡೆಸರ್ಟ್ (1953)
- 1954 : ಅತ್ಯುತ್ತಮ ಸಾಕ್ಷ್ಯಚಿತ್ರ, (ಕಿರುಚಿತ್ರ): ದಿ ಅಲಾಸ್ಕನ್ ಎಸ್ಕಿಮೊ (1953)
- 1954 : ಆತ್ಯುತ್ತಮ ಕಿರುಚಿತ್ರ ಕಥೆ, ವ್ಯಂಗ್ಯಚಿತ್ರಗಳು: ಟೂಟ್ ವಿಷ್ಲ್ ಪ್ಲಂಕ್ ಅಂಡ್ ಬೂಮ್ (1953)
- 1954 : ಆತ್ಯುತ್ತಮ ಕಿರುಚಿತ್ರ ಕಥೆ, (ಎರಡು ರೀಲ್ ಅವಧಿಯ): ಬೆಯರ್ ಕಂಟ್ರಿ (1953)
- 1955 : ಅತ್ಯುತ್ತಮ ಸಾಕ್ಷ್ಯಚಿತ್ರ, (ಚಲನಚಿತ್ರ): ದಿ ವ್ಯಾನಿಷಿಂಗ್ ಪ್ರೈರೀ (1954)
- 1956 : ಅತ್ಯುತ್ತಮ ಸಾಕ್ಷ್ಯಚಿತ್ರ, (ಕಿರುಚಿತ್ರ): ಮೆನ್ ಎಗೇನ್ಸ್ಟ್ ದಿ ಆರ್ಕ್‌ಟಿಕ್
- 1959 : ಆತ್ಯುತ್ತಮ ಕಿರುಚಿತ್ರ ಕಥೆ, (ಲೈವ್ ಆಕ್ಷನ್ ವಿಷಯಗಳು): ಗ್ರ್ಯಾಂಡ್ ಕೆನ್ಯಾನ್
- 1969 : ಆತ್ಯುತ್ತಮ ಕಿರುವಿಷಯದ ಚಿತ್ರ ಕಥೆ, ವ್ಯಂಗ್ಯಚಿತ್ರಗಳು: ವಿನ್ನೀ ದಿ ಪೂಹ್ ಅಂಡ್ ದಿ ಬ್ಲಸ್ಟರಿ ಡೇ
ಇತರೆ ಗೌರವಗಳು
[ಬದಲಾಯಿಸಿ]ಅನಾಹೇಂ ವಾಕ್ ಆಫ್ ಸ್ಟಾರ್ಸ್‌ನ ಮೊದಲ 'ಸ್ಟಾರ್'ನ್ನು ವಾಲ್ಟ್ ಡಿಸ್ನಿಯವರಿಗೆ ನೀಡಲಾಯಿತು. ಕ್ಯಾಲಿಫೊರ್ನಿಯಾದ ಅನಾಹೇಂ ನಗರಕ್ಕಾಗಿ ತಮ್ಮ ಅದ್ಭುತ ಕೊಡುಗೆ ನೀಡಿದ್ದಕ್ಕಾಗಿ ಈ 'ಸ್ಟಾರ್'ನ್ನು ವಾಲ್ಟ್ ಡಿಸ್ನಿಯವರಿಗೆ ನೀಡಲಾಯಿತು. ಅವರು ಅನಾಹೇಂನಲ್ಲಿ ಡಿಸ್ನಿಲೆಂಡ್‌ನ್ನು ಸ್ಥಾಪಿಸಿದ್ದು, ಅದೀಗ ಡಿಸ್ನಿಲೆಂಡ್ ರೆಸಾರ್ಟ್ ಆಗಿದೆ. ಹಾರ್ಬರ್ ಬೂಲ್ವಾರ್ಡ್‌ನಲ್ಲಿರುವ ಡಿಸ್ನಿಲೆಂಡ್ ರೆಸಾರ್ಟ್‌ನ ಪಾದಚಾರಿ ಪ್ರವೇಶದ್ವಾರದಲ್ಲಿ ಈ 'ಸ್ಟಾರ್' ಸ್ಥಿತವಾಗಿದೆ. ಹಾಲಿವುಡ್ ವಾಕ್ ಆಫ್ ಫೇಮ್‌ನಲ್ಲಿ ವಾಲ್ಟ್ ಡಿಸ್ನಿ ಎರಡು 'ಸ್ಟಾರ್' ಪುರಸ್ಕೃತರಾಗಿದ್ದಾರೆ - ಒಂದು ಚಲನಚಿತ್ರಗಳಿಗಾಗಿ, ಇನ್ನೊಂದು ಕಿರುತೆರೆಗಾಗಿ (ದೂರದರ್ಶನ).
24 ಮೇ 1968ರಂದು ವಾಲ್ಟ್ ಡಿಸ್ನಿಯವರಿಗೆ ಕಾಂಗ್ರೆಸನಲ್ ಗೋಲ್ಡ್ ಮೆಡಲ್ ಮರಣಾನಂತರ ಗೌರವ ನೀಡಲಾಯಿತು. (P.L. 90-316, 82 Stat. 130-131). 1935ರಲ್ಲಿ ಫ್ರಾನ್ಸ್‌ನಲ್ಲಿ ಲೆಜ್ಯಾನ್ ಡಿ'ಆನರ್ ಪ್ರಶಸ್ತಿ ಪುರಸ್ಕೃತರಾದರು.[೮೯] ಮಿಕ್ಕಿ ಮೌಸ್ ಪಾತ್ರದ ಸೃಷ್ಟಿಗಾಗಿ 1935ರಲ್ಲಿ ವಾಲ್ಟ್ ಡಿಸ್ನಿಯವರಿಗೆ ಲೀಗ್ ಆಫ್ ನೇಷನ್ಸ್‌ನಿಂದ ವಿಶೇಷ ಪದಕ ಲಭಿಸಿತು. ಇದನ್ನು ಮಿಕ್ಕಿ ಮೌಸ್ ಪ್ರಶಸ್ತಿಯೆಂದೇ ಉಲ್ಲೇಖಿಸಲಾಗಿದೆ.[೯೦] 15 ಸೆಪ್ಟೆಂಬರ್ 1964ರಂದು ಅವರು ಪ್ರೆಸಿಡೆಂಷಿಯಲ್ ಮೆಡಲ್ ಆಫ್ ಫ್ರೀಡಮ್ ಪದಕ ಪುರಸ್ಕೃತರಾದರು.[೯೧] ಇತ್ತೀಚೆಗೆ ಡಿಸೆಂಬರ್ 6 2006ರಂದು ಕ್ಯಾಲಿಫೊರ್ನಿಯಾದ ರಾಜ್ಯಪಾಲ ಅರ್ನೊಲ್ಡ್ ಷ್ವಾರ್ಜ್‌ನೆಗರ್ ಮತ್ತು ಪ್ರಥಮ ಮಹಿಳೆ ಮಾರಿಯಾ ಷ್ರೈವರ್, ದಿ ಕ್ಯಾಲಿಫೊರ್ನಿಯಾ ಮ್ಯುಸಿಯಮ್ ಫಾರ್ ಹಿಸ್ಟರಿ, ವಿಮೆನ್ ಅಂಡ್ ದಿ ಆರ್ಟ್ಸ್‌ನಲ್ಲಿರುವ ಕ್ಯಾಲಿಫೊರ್ನಿಯಾ ಹಾಲ್ ಆಫ್ ಫೇಮ್‌ನಲ್ಲಿ ವಾಲ್ಟ್ ಡಿಸ್ನಿಯ ಪ್ರತಿಮೆಯನ್ನು ಸೇರ್ಪಡಿಸಿ ಮರಣಾನಂತರದ ಗೌರವ ನೀಡಿದರು.
ಸೋವಿಯತ್ ಖಗೋಳತಜ್ಞೆ ಲ್ಯುಡ್ಮಿಲಾ ಜ್ಯಾರ್ಜಿಯೆವ್ನಾ ಕರಾಚ್ಕಿನಾ ಒಂದು ಕಿರುಗ್ರಹವನ್ನು 1980ರಲ್ಲಿ ಪತ್ತೆ ಹಚ್ಚಿದರು. ಈ ಕಿರುಗ್ರಹಕ್ಕೆ ವಾಲ್ಟ್ ಡಿಸ್ನಿಯವರ ಗೌರವಾರ್ಥವಾಗಿ 4017 ಡಿಸ್ನಿಯಾ ಎನ್ನಲಾಗುತ್ತಿದೆ.[೯೨]
ಕಳೆದ 2003ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ಆರಂಭಿಸಿದ ಒಂದು ಸಂಗೀತಕಛೇರಿ ಭವನವನ್ನು ವಾಲ್ಟ್ ಡಿಸ್ನಿ ಕಾನ್ಸರ್ಟ್ ಹಾಲ್ ಎಂದು ಹೆಸರಿಸಲಾಗಿದೆ. 1993ರಿಂದ ಆರಂಭಿಸಿ, HBO ದೂರದರ್ಶನ ವಾಹಿನಿಯು ವಾಲ್ಟ್ ಡಿಸ್ನಿಯವರ ಬಯೊಪಿಕ್ ನಿರ್ಮಾಣ ಕೈಗೊಂಡಿತು. ಲಾರೆನ್ಸ್ ಟರ್ಮನ್ ಇದರ ನಿರ್ಮಾಪಕರು ಮತ್ತು ಫ್ರ್ಯಾಂಕ್ ಪಿಯರ್ಸನ್ ಇದರ ನಿರ್ದೇಶಕರು.
ಈ ಯೋಜನೆಯು ಸಾಕಾರವಾಗದೆ ಕೈಬಿಡಲಾಯಿತು.[೯೩]
ಎಲ್. ನೀಲ್ ಸ್ಮಿತ್ ರಚಿಸಿರುವ ರಿಪಬ್ಲಿಕ್ ಆಫ್ ಟೆಕ್ಸಾಸ್ ಮೇಲೆ ಕೇಂದ್ರೀಕೃತ ಪರ್ಯಾಯ ಇತಿಹಾಸ ಕಾದಂಬರಿಗಳಲ್ಲಿ, ವಾಲ್ಟ್ ಡಿಸ್ನಿ ಕ್ಯಾಲಿಫೊರ್ನಿಯಾ ಮೈತ್ರಿಯ ಅಧ್ಯಕ್ಷರಾಗಿದ್ದಾರೆ. ಟೆಕ್ಸಾಸ್ ಮತ್ತು ಕಾನ್ಫೆಡೆರೆಸಿ (ಸಂಘ) ತರಹ ಇದೂ ಸಹ ಒಂದು ಸರ್ವತಂತ್ರ ರಾಷ್ಟ್ರವಾಗಿದೆ.
ಪೂರ್ವಾಧಿಕಾರಿ None |
Voice of Mickey Mouse 1928-1947 |
ಉತ್ತರಾಧಿಕಾರಿ Jimmy MacDonald |
ಇವನ್ನೂ ನೋಡಿ
[ಬದಲಾಯಿಸಿ]ಟಿಪ್ಪಣಿಗಳು
[ಬದಲಾಯಿಸಿ]- ↑ "Walt Disney". IMDB. Retrieved 2008-05-21.
- ↑ ೨.೦ ೨.೧ ೨.೨ "Walt Disney Academy awards". Academy of Motion Picture Arts and Sciences. Retrieved 2008-05-21.
- ↑ "ಆರ್ಕೈವ್ ನಕಲು". Archived from the original on 2009-12-08. Retrieved 2010-03-09.
- ↑ ೪.೦ ೪.೧ "Walt Disney biography". Just Disney. Archived from the original on 2008-06-05. Retrieved 2008-05-21.
- ↑ Disneyland Paris. Michelin. 2002-08-07. p. 38. ISBN 2060480027.
- ↑ ೬.೦ ೬.೧ ೬.೨ ನೀಲ್ ಗೇಬ್ಲರ್, "ವಾಲ್ಟ್ ಡಿಸ್ನಿ:ದಿ ಟ್ರಯಂಫ್ ಆಫ್ ದಿ ಅಮೆರಿಕನ್ ಇಮ್ಯಾಜಿನೇಷನ್" (2006), ಪು. 7.
- ↑ ೭.೦ ೭.೧ ನೀಲ್ ಗೇಬ್ಲರ್, "ವಾಲ್ಟ್ ಡಿಸ್ನಿ:ದಿ ಟ್ರಯಂಫ್ ಆಫ್ ದಿ ಅಮೆರಿಕನ್ ಇಮ್ಯಾಜಿನೇಷನ್" (2006), ಪು. 9-10.
- ↑ ೮.೦ ೮.೧ ನೀಲ್ ಗೇಬ್ಲರ್, "ವಾಲ್ಟ್ ಡಿಸ್ನಿ:ದಿ ಟ್ರಯಂಫ್ ಆಫ್ ದಿ ಅಮೆರಿಕನ್ ಇಮ್ಯಾಜಿನೇಷನ್" (2006), ಪು. 15.
- ↑ "Walt Disney Hometown Museum". Walt Disney Museum. Retrieved 2008-05-21.
- ↑ ನೀಲ್ ಗೇಬ್ಲರ್, "ವಾಲ್ಟ್ ಡಿಸ್ನಿ:ದಿ ಟ್ರಯಂಫ್ ಆಫ್ ದಿ ಅಮೆರಿಕನ್ ಇಮ್ಯಾಜಿನೇಷನ್" (2006), ಪು. 18.
- ↑ Thomas 1994, pp. 33–41
- ↑ "ಚಲನಚಿತ್ರ ನಿರ್ಮಾಪಕ ವಾಲ್ಟ್ ಡಿಸ್ನಿಯವರ ಜೀವನಚರಿತ್ರೆ - kchistory.org - 14 ಸೆಪ್ಟೆಂಬರ್ 2009ರಂದು ಪುನರ್ಪಡೆದದ್ದು". Archived from the original on 2016-10-26. Retrieved 2024-05-07.
- ↑ ನೀಲ್ ಗೇಬ್ಲರ್, "ವಾಲ್ಟ್ ಡಿಸ್ನಿ:ದಿ ಟ್ರಯಂಫ್ ಆಫ್ ದಿ ಅಮೆರಿಕನ್ ಇಮ್ಯಾಜಿನೇಷನ್" (2006), ಪು. 30.
- ↑ Thomas 1994, pp. 42–43
- ↑ ನೀಲ್ ಗೇಬ್ಲರ್, "ವಾಲ್ಟ್ ಡಿಸ್ನಿ:ದಿ ಟ್ರಯಂಫ್ ಆಫ್ ದಿ ಅಮೆರಿಕನ್ ಇಮ್ಯಾಜಿನೇಷನ್" (2006), ಪು. 36.
- ↑ ನೀಲ್ ಗೇಬ್ಲರ್, "ವಾಲ್ಟ್ ಡಿಸ್ನಿ:ದಿ ಟ್ರಯಂಫ್ ಆಫ್ ದಿ ಅಮೆರಿಕನ್ ಇಮ್ಯಾಜಿನೇಷನ್" (2006), ಪು. 37.
- ↑ ನೀಲ್ ಗೇಬ್ಲರ್, "ವಾಲ್ಟ್ ಡಿಸ್ನಿ:ದಿ ಟ್ರಯಂಫ್ ಆಫ್ ದಿ ಅಮೆರಿಕನ್ ಇಮ್ಯಾಜಿನೇಷನ್" (2006), ಪು. 38.
- ↑ ನೀಲ್ ಗೇಬ್ಲರ್, "ವಾಲ್ಟ್ ಡಿಸ್ನಿ:ದಿ ಟ್ರಯಂಫ್ ಆಫ್ ದಿ ಅಮೆರಿಕನ್ ಇಮ್ಯಾಜಿನೇಷನ್" (2006), ಪು. 42.
- ↑ ೧೯.೦ ೧೯.೧ ನೀಲ್ ಗೇಬ್ಲರ್, "ವಾಲ್ಟ್ ಡಿಸ್ನಿ:ದಿ ಟ್ರಯಂಫ್ ಆಫ್ ದಿ ಅಮೆರಿಕನ್ ಇಮ್ಯಾಜಿನೇಷನ್" (2006), ಪು. 44.
- ↑ ನೀಲ್ ಗೇಬ್ಲರ್, "ವಾಲ್ಟ್ ಡಿಸ್ನಿ:ದಿ ಟ್ರಯಂಫ್ ಆಫ್ ದಿ ಅಮೆರಿಕನ್ ಇಮ್ಯಾಜಿನೇಷನ್" (2006), ಪು. 45.
- ↑ ನೀಲ್ ಗೇಬ್ಲರ್, "ವಾಲ್ಟ್ ಡಿಸ್ನಿ:ದಿ ಟ್ರಯಂಫ್ ಆಫ್ ದಿ ಅಮೆರಿಕನ್ ಇಮ್ಯಾಜಿನೇಷನ್" (2006), ಪು. 46.
- ↑ ನೀಲ್ ಗೇಬ್ಲರ್, "ವಾಲ್ಟ್ ಡಿಸ್ನಿ:ದಿ ಟ್ರಯಂಫ್ ಆಫ್ ದಿ ಅಮೆರಿಕನ್ ಇಮ್ಯಾಜಿನೇಷನ್" (2006), ಪು. 48.
- ↑ ನೀಲ್ ಗೇಬ್ಲರ್, "ವಾಲ್ಟ್ ಡಿಸ್ನಿ:ದಿ ಟ್ರಯಂಫ್ ಆಫ್ ದಿ ಅಮೆರಿಕನ್ ಇಮ್ಯಾಜಿನೇಷನ್" (2006), ಪು. 51.
- ↑ ನೀಲ್ ಗೇಬ್ಲರ್, "ವಾಲ್ಟ್ ಡಿಸ್ನಿ:ದಿ ಟ್ರಯಂಫ್ ಆಫ್ ದಿ ಅಮೆರಿಕನ್ ಇಮ್ಯಾಜಿನೇಷನ್" (2006), ಪು. 52.
- ↑ ೨೫.೦ ೨೫.೧ ನೀಲ್ ಗೇಬ್ಲರ್, "ವಾಲ್ಟ್ ಡಿಸ್ನಿ:ದಿ ಟ್ರಯಂಫ್ ಆಫ್ ದಿ ಅಮೆರಿಕನ್ ಇಮ್ಯಾಜಿನೇಷನ್" (2006), ಪು. 56.
- ↑ ೨೬.೦ ೨೬.೧ ೨೬.೨ ನೀಲ್ ಗೇಬ್ಲರ್, "ವಾಲ್ಟ್ ಡಿಸ್ನಿ:ದಿ ಟ್ರಯಂಫ್ ಆಫ್ ದಿ ಅಮೆರಿಕನ್ ಇಮ್ಯಾಜಿನೇಷನ್" (2006), ಪು. 57.
- ↑ ನೀಲ್ ಗೇಬ್ಲರ್, "ವಾಲ್ಟ್ ಡಿಸ್ನಿ:ದಿ ಟ್ರಯಂಫ್ ಆಫ್ ದಿ ಅಮೆರಿಕನ್ ಇಮ್ಯಾಜಿನೇಷನ್" (2006), ಪು. 58.
- ↑ ನೀಲ್ ಗೇಬ್ಲರ್, "ವಾಲ್ಟ್ ಡಿಸ್ನಿ:ದಿ ಟ್ರಯಂಫ್ ಆಫ್ ದಿ ಅಮೆರಿಕನ್ ಇಮ್ಯಾಜಿನೇಷನ್" (2006), ಪು. 64.
- ↑ ನೀಲ್ ಗೇಬ್ಲರ್, "ವಾಲ್ಟ್ ಡಿಸ್ನಿ:ದಿ ಟ್ರಯಂಫ್ ಆಫ್ ದಿ ಅಮೆರಿಕನ್ ಇಮ್ಯಾಜಿನೇಷನ್" (2006), ಪು. 64-71.
- ↑ ನೀಲ್ ಗೇಬ್ಲರ್, "ವಾಲ್ಟ್ ಡಿಸ್ನಿ:ದಿ ಟ್ರಯಂಫ್ ಆಫ್ ದಿ ಅಮೆರಿಕನ್ ಇಮ್ಯಾಜಿನೇಷನ್" (2006), ಪು. 68.
- ↑ ೩೧.೦ ೩೧.೧ ನೀಲ್ ಗೇಬ್ಲರ್, "ವಾಲ್ಟ್ ಡಿಸ್ನಿ:ದಿ ಟ್ರಯಂಫ್ ಆಫ್ ದಿ ಅಮೆರಿಕನ್ ಇಮ್ಯಾಜಿನೇಷನ್" (2006), ಪು. 72.
- ↑ ನೀಲ್ ಗೇಬ್ಲರ್, "ವಾಲ್ಟ್ ಡಿಸ್ನಿ:ದಿ ಟ್ರಯಂಫ್ ಆಫ್ ದಿ ಅಮೆರಿಕನ್ ಇಮ್ಯಾಜಿನೇಷನ್" (2006), ಪು. 75.
- ↑ ನೀಲ್ ಗೇಬ್ಲರ್, "ವಾಲ್ಟ್ ಡಿಸ್ನಿ:ದಿ ಟ್ರಯಂಫ್ ಆಫ್ ದಿ ಅಮೆರಿಕನ್ ಇಮ್ಯಾಜಿನೇಷನ್" (2006), ಪು. 78.
- ↑ ನೀಲ್ ಗೇಬ್ಲರ್, "ವಾಲ್ಟ್ ಡಿಸ್ನಿ:ದಿ ಟ್ರಯಂಫ್ ಆಫ್ ದಿ ಅಮೆರಿಕನ್ ಇಮ್ಯಾಜಿನೇಷನ್" (2006), ಪು. 80.
- ↑ ನೀಲ್ ಗೇಬ್ಲರ್, "ವಾಲ್ಟ್ ಡಿಸ್ನಿ:ದಿ ಟ್ರಯಂಫ್ ಆಫ್ ದಿ ಅಮೆರಿಕನ್ ಇಮ್ಯಾಜಿನೇಷನ್" (2006), ಪು. 109.
- ↑ ಸ್ಟೇ 'ಟೂನ್ಡ್: ಆಲ್ ಮೈಕಲ್ಸ್‌ಗಾಗಿ ಡಿಸ್ನಿ ಸಂಸ್ಥೆಗೆ 'ಆಸ್ವಾಲ್ಡ್' ಪ್ರಾಪ್ತಿ, ESPN ಜಾಲತಾಣದಲ್ಲಿ, 4 ಜನವರಿ 2010ರಂದು ಪುನರ್ಪಡೆದದ್ದು.
- ↑ ೩೭.೦ ೩೭.೧ ೩೭.೨ ೩೭.೩ ೩೭.೪ Solomon, Charles. "The Golden Age of Mickey Mouse". Disney. Retrieved 2008-05-21.
- ↑ ನೀಲ್ ಗೇಬ್ಲರ್, "ವಾಲ್ಟ್ ಡಿಸ್ನಿ:ದಿ ಟ್ರಯಂಫ್ ಆಫ್ ದಿ ಅಮೆರಿಕನ್ ಇಮ್ಯಾಜಿನೇಷನ್" (2006), ಪು. 129.
- ↑ Gordon, Ian. "Felix the Cat". St. James Encyclopedia of Pop Culture. Archived from the original on 2012-07-14. Retrieved 2008-05-21.
- ↑ ನೀಲ್ ಗೇಬ್ಲರ್, "ವಾಲ್ಟ್ ಡಿಸ್ನಿ:ದಿ ಟ್ರಯಂಫ್ ಆಫ್ ದಿ ಅಮೆರಿಕನ್ ಇಮ್ಯಾಜಿನೇಷನ್" (2006), ಪು. 142.
- ↑ ೪೧.೦ ೪೧.೧ Merritt, Russell. "THE BIRTH OF THE SILLY SYMPHONIES". Disney. Retrieved 2008-05-21.
- ↑ "Chronology of the Walt Disney Company". Island Net. Retrieved 2008-05-21.
- ↑ Langer, Mark (July 1997). "Popeye From Strip To Screen" (PDF). 2 (4). Animation Magazine: 17–19. Retrieved 2008-05-21.
{{cite journal}}
: Cite journal requires|journal=
(help) - ↑ "Fleischer brothers". Encyclopædia Britannica. Retrieved 2008-05-21.
- ↑ "Chronology of the Walt Disney Company". Island Net. Retrieved 2008-05-21.
- ↑ "System 4". Widescreen Museum. Retrieved 2008-05-21.
- ↑ "System 4". Widescreen Museum. Retrieved 2008-05-21.
- ↑ "Walt Disney at the Museum?". Montreal Museum of Fine Arts. Archived from the original on 2008-02-18. Retrieved 2008-05-21.
- ↑ "Once Upon a Time: Walt Disney: The Sources of Inspiration for the Disney Studios". fps magazine. Archived from the original on 2017-07-14. Retrieved 2008-05-21.
- ↑ Danks, Adrian. "Huffing and Puffing about Three Little Pigs". Senses of Cinema. Retrieved 2008-05-21.
{{cite web}}
: line feed character in|title=
at position 20 (help) - ↑ "Three Little Pigs". Disney. Retrieved 2008-05-21.
- ↑ "Chronology of the Walt Disney Company". Island Net. Retrieved 2008-05-21.
- ↑ "GOOFY BIOGRAPHY". Tripod.com. Retrieved 2008-05-21.
- ↑ "Donald Duck". Encyclopædia Britannica. Retrieved 2008-05-21.
- ↑ ಸೋಷಿಯಲ್ ಸೆಕ್ಯುರಿಟಿ ಡೆತ್ ಇಂಡೆಕ್ಸ್
- ↑ "Popeye's Popularity - Article from 1935". Golden Age Cartoons. Archived from the original on 2011-07-11. Retrieved 2008-05-21.
- ↑ "Walt Disney, Biography". Just Disney. Archived from the original on 2007-07-10. Retrieved 2008-05-21.
{{cite web}}
: CS1 maint: bot: original URL status unknown (link) - ↑ "Cartoons that Time Forgot". Images Journal. Retrieved 2008-05-21.
- ↑ "Walt Disney Studio Biography". Animation USA. Retrieved 2008-05-21.
- ↑ "The Golden Age of Animation". Disney. Retrieved 2008-05-21.
- ↑ "Fantasia Review". The Big Cartoon Database. Retrieved 2008-05-21.
- ↑ ವಾಲ್ಟ್ ಅಂಡ್ ಎಲ್ ಗ್ರೂಪೊ (ಸಾಕ್ಷ್ಯಚಿತ್ರ, 2008).
- ↑ ಗೇಬ್ಲರ್, 2006, ಪು.444
- ↑ ಕ್ರ್ಯಾಮರ್, ಗಿಸೆಲಾ; ಪ್ರಷ್, ಉರ್ಸುಲಾ, "ನೆಲ್ಸನ್ ಎ. ರಾಕ್ಫೆಲರ್'ಸ್ ಆಫೀಸ್ ಆಫ್ ಇಂಟರ್-ಅಮೆರಿಕನ್ ಅಫೇರ್ಸ್ (1940-1946) ಅಂಡ್ ರೆಕಾರ್ಡ್ ಗ್ರೂಪ್ 229", ಹಿಸ್ಪಾನಿಕ್ ಅಮೆರಿಕನ್ ಹಿಸ್ಟಾರಿಕಲ್ ರೆವ್ಯೂ 2006 86(4):785-806; DOI:10.1215/00182168-2006-050. Cf. ಪು.795 ಮತ್ತು ಟಿಪ್ಪಣಿ 28.
- ↑ ಬೆಂಡರ್, ಪೆನ್ನೀ. "ಹಾಲಿವುಡ್ ಮೀಟ್ಸ್ ಸೌತ್ ಅಮೆರಿಕನ್ ಅಂಡ್ ಸ್ಟೇಜೆಸ್ ಎ ಷೋ" ಅಮೆರಿಕನ್ ಸ್ಟಡೀಸ್ ಅಸೊಷಿಯೇಷನ್‌ನ ವಾರ್ಷಿಕ ಸಭೆಯಲ್ಲಿ ಪ್ರಸ್ತುತಪಡಿಸಲಾದ ಪತ್ರಿಕೆ. 2009-05-24 <http://www.allacademic.com/meta/p114070_index.html>
- ↑ ನಿಬ್ಲೊ, ಸ್ಟೀಫೆನ್ ಆರ್., "ಮೆಕ್ಸಿಕೊ ಇನ್ ದಿ 1940ಸ್: ಮಾಡರ್ನಿಟಿ, ಪಾಲಿಟಿಕ್ಸ್ ಅಂಡ್ ಕರಪ್ಷನ್", ವಿಲಿಮಿಂಗ್ಟನ್, ಡೆಲ್. : ಸ್ಕಾಲರ್ಲಿ ರೆಸೊರ್ಸೆಸ್, 1999. ISBN 0-7910-6772-6 ಸಿಎಫ್. "ನೆಲ್ಸನ್ ರಾಕ್‌ಫೆಲರ್ ಅಂಡ್ ದಿ ಆಫೀಸ್ ಆಫ್ ಇಂಟರ್-ಅಮೆರಿಕನ್ ಅಫೇರ್ಸ್", ಪು.333
- ↑ ಲಯೊನಾರ್ಡ್, ಥಾಮಸ್ ಎಂ.; ಬ್ರಾಟ್ಜೆಲ್, ಜಾನ್ ಎಫ್., ಲ್ಯಾಟಿನ್ ಅಮೆರಿಕಾ ಡ್ಯೂರಿಂಗ್ ವರ್ಲ್ಡ್ ವಾರ್ II , ರೋಮನ್ ಅಂಡ್ ಲಿಟ್ಲ್‌ಫೀಲ್ಡ್ ಪಬ್ಲಿಷರ್ಸ್, ಇಂಕ್., 2007. ISBN 978-0-7513-2886-8 ಸಿಎಫ್. ಪು.47.
- ↑ Solomon, Charles. "Mickey in the Post-War Era". Disney. Retrieved 2008-05-21.
- ↑ "Warner Bros. Studio Biography". Animation USA. Retrieved 2008-05-21.
- ↑ "Disney's Animated Classics". Sandcastle VI. Retrieved 2008-05-21.
- ↑ "Donald Duck". Pet Care Tips. Retrieved 2008-05-21.
- ↑ ೭೨.೦ ೭೨.೧ "Testimony of Walter E. Disney before HUAC". CNN. 1947-10-24. Retrieved 2008-05-21.
- ↑ ಷ್ವೇಜರ್, ಪೀಟರ್ (2002) ರೀಗನ್'ಸ್ ವಾರ್: ದಿ ಎಪಿಕ್ ಸ್ಟೋರಿ ಆಫ್ ಹಿಸ್ ಫಾರ್ಟಿ-ಇಯರ್ ಸ್ಟ್ರಗಲ್ ಅಂಡ್ ಫೈನಲ್ ಟ್ರಯಂಫ್ ಒವರ್ ಕಮ್ಯೂನಿಸಮ್ ಡಬಲ್‌ಡೇ, ನ್ಯೂಯಾರ್ಕ್, ISBN 0-385-50471-3
- ↑ ಕೊಗ್ಲೇ, ಜಾನ್ (1956) ರಿಪೊರ್ಟ್ ಆನ್ ಬ್ಲ್ಯಾಕ್ಲಿಸ್ಟಿಂಗ್, ವಾಲ್ಯೂಮ್ I, ಮೂವೀಸ್ ಫಂಡ್ ಫಾರ್ ದಿ ರಿಪಬ್ಲಿಕ್, ನ್ಯೂಯಾರ್ಕ್, ಪಿ. 34 OCLC 3794664; reprinted in ನ್ಯೂಯಾರ್ಕ್‌ನ ಅರ್ನೊ ಪ್ರೆಸ್‌ನಿಂದ 1972ರಲ್ಲಿ ಪುನರ್ಮುದ್ರಿತವಾದದ್ದು ISBN 0-405-03915-8
- ↑ "ಕಮ್ಯೂನಿಸ್ಟ್ ಬ್ರೊಷರ್" ಸ್ಕ್ರೀನ್ ಆಕ್ಟರ್ಸ್ ಗಿಲ್ಡ್; 20 ಅಕ್ಟೋಬರ್ 2008ರಂದು ಪ್ರವೇಶಿಸಿದ್ದು.
- ↑ "Walt Disney Quotes". Tripod.com. Retrieved 2008-05-21.
- ↑ Cotter, Bill. "The Television Worlds of Disney - PART II". Disney. Retrieved 2008-05-21.
- ↑ "Chronology of the Walt Disney Company". Island Net. Retrieved 2008-05-21.
- ↑ "Chronology of the Walt Disney Company". Island Net. Retrieved 2008-05-21.
- ↑ "Horsing Around With Walt and Polo". Mouse Planet. Archived from the original on 2020-04-01. Retrieved 2008-05-21.
- ↑ ೮೧.೦ ೮೧.೧ ೮೧.೨ "The Day Walt Died". Disney. Retrieved 2008-05-21.
- ↑ ೮೨.೦ ೮೨.೧ ೮೨.೨ "Chronology of the Walt Disney Company". Island Net. Retrieved 2008-05-21.
- ↑ Greene, K&R (2001). Inside The Dream: The Personal Story Of Walt Disney. Disney Editions. p. 180. ISBN 0786853506.
- ↑ ೮೪.೦ ೮೪.೧ Mikkelson, B & DP (2007-08-24). "Suspended Animation". Snopes.com. Retrieved 2008-05-21.
- ↑ Griffiths, Bill. "Grand opening of Walt Disney world". Archived from the original on 2013-07-23. Retrieved 2008-05-21.
- ↑ "Walt Disney corporate website". Disney. Retrieved 2008-05-21.
- ↑ "Walt Disney's will". Do Your Own Will. Retrieved 2008-01-03.
- ↑ Plagens, Peter (2000). Sunshine Muse: Art on the West Coast, 1945-1970. University of California Press. p. 159. ISBN 0520223926.
- ↑ "Disney, Walt" (in French). Bedetheque. Retrieved 2008-05-21.
{{cite web}}
: CS1 maint: unrecognized language (link) - ↑ "Minnie's Cheat Sheet to my Website". AOL. Archived from the original on 2003-12-06. Retrieved 2008-05-21.
- ↑ "Medal of Freedom". Presidential Medal of Freedom. Retrieved 2008-05-21.
- ↑ Schmadel, Lutz D. (2003). Dictionary of Minor Planet Names. New York: Springer Science+Business Media. p. 342. ISBN 3540002383.
- ↑ David Rooney (1994-03-03). "Disney wins Houston and Washington teaming ..." Variety. Retrieved 2009-03-31.
ಆಕರಗಳು
[ಬದಲಾಯಿಸಿ]- Thomas, Bob (1994). Walt Disney: An American Original. New York: Hyperion. ISBN 0-7868-6027-8.
ಹೆಚ್ಚಿನ ಓದಿಗೆ
[ಬದಲಾಯಿಸಿ]- ಬ್ಯಾರಿಯರ್, ಮೈಕೇಲ್ (1999). ಹಾಲಿವುಡ್ ಕಾರ್ಟೂನ್ಸ್: ಅಮೆರಿಕನ್ ಅನಿಮೇಷನ್ ಇನ್ ಇಟ್ಸ್ ಗೋಲ್ಡನ್ ಏಜ್. ಆಕ್ಸ್ಫರ್ಡ್: ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್. ISBN 0-19-516729-5.
- ಬ್ರೊಗ್ಗೀ, ಮೈಕಲ್ (1997, 1998, 2005). ವಾಲ್ಟ್ ಡಿಸ್ನಿ'ಸ್ ರೇಲ್ರೋಡ್ ಸ್ಟೊರಿ . ವರ್ಜಿನಿಯಾ ಬೀಚ್, ವರ್ಜಿನಿಯಾ. ಡಾನ್ನಿಂಗ್ ಪಬ್ಲಿಷರ್ಸ್. ISBN 1-56342-009-0
- ಎಲಿಯಾಟ್, ಮಾರ್ಕ್ (1993). Walt Disney: Hollywood's Dark Prince . ಕ್ಯಾರೊಲ್. ISBN 1-55972-174-X
- ಮೊಸ್ಲೇ, ಲಿಯೊನಾರ್ಡ್. ಡಿಸ್ನಿ'ಸ್ ವರ್ಲ್ಡ್:ಎ ಬಯಾಗ್ರಫಿ (1985, 2002). ಚೆಲ್ಸೀ, MI: ಸ್ಕಾರ್ಬ್ರೊ ಹೌಸ್. ISBN 0-8128-8514-7.
- ಗೇಬ್ಲರ್, ನೀಲ್. ವಾಲ್ಟ್ ಡಿಸ್ನಿ: ದಿ ಟ್ರಯಂಫ್ ಆಫ್ ಅಮೆರಿಕನ್ ಇಮ್ಯಾಜಿನೇಷನ್ (2006). ನ್ಯೂಯಾರ್ಕ್, NY. ರ್ಯಾಂಡಮ್ ಹೌಸ್. ISBN 0-679-43822-X
- ಷಿಕೆಲ್, ರಿಚರ್ಡ್, ಮತ್ತು ಡೀ, ಐವಾನ್ ಆರ್. (1967, 1985, 1997). ದಿ ಡಿಸ್ನಿ ವರ್ಷನ್: ದಿ ಲೈಫ್, ಟೈಮ್ಸ್, ಆರ್ಟ್ ಅಂಡ್ ಕಾಮರ್ಸ್ ಆಫ್ ವಾಲ್ಟ್ ಡಿಸ್ನಿ . ಶಿಕಾಗೊ: ಐವಾನ್ ಆರ್. ಡೀ, ಪ್ರಕಾಶಕ. ISBN 1-56663-158-0.
- ಷರ್ಮನ್, ರಾಬರ್ಟ್ ಬಿ. ಮತ್ತು ಷರ್ಮನ್, ರಿಚರ್ಡ್ ಎಮ್. (1998) "ವಾಲ್ಟ್'ಸ್ ಟೈಮ್: ಫ್ರಮ್ ಬಿಫೋರ್ ಟು ಬೆಯಾಂಡ್" ISBN 0-9646059-3-7.
- ಥಾಮಸ್, ಬಾಬ್ (1991). ಡಿಸ್ನಿ'ಸ್ ಆರ್ಟ್ ಆಫ್ ಆನಿಮೇಷನ್: ಫ್ರಂ ಮಿಕ್ಕಿ ಮೌಸ್ ಟು ಬ್ಯೂಟಿ ಅಂಡ್ ದಿ ಬೀಸ್ಟ್ . ನ್ಯೂಯಾರ್ಕ್: ಹೈಪೀರಿಯನ್. ISBN 1-56282-899-1
- ವ್ಯಾಟ್ಸ್, ಸ್ಟೀವೆನ್, The Magic Kingdom: Walt Disney and the American Way of Life , ಯುನಿವರ್ಸಿಟಿ ಆಫ್ ಮಿಸ್ಸೂರಿ ಪ್ರೆಸ್, 2001, ISBN 0-8262-1379-0
ಹೊರಗಿನ ಕೊಂಡಿಗಳು
[ಬದಲಾಯಿಸಿ]- ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ Disney
- "The Hollywood Blacklist". Talk of the Nation. 1997.
{{cite journal}}
: Cite has empty unknown parameter:|coauthors=
(help); Unknown parameter|month=
ignored (help) ಟ್ರೇಡ್ ಯೂನಿಯನ್ಗಳು ಮತ್ತು ವಾಮಪಂಥದ ಬಗ್ಗೆ ವಾಲ್ಟ್ ಡಿಸ್ನಿಯವರ ಧೋರಣೆಯನ್ನು ಚರ್ಚಿಸುತ್ತದೆ. - ವಾಲ್ಟ್ ಡಿಸ್ನಿ ಕುಟುಂಬ ಸಂಗ್ರಹಾಲಯ
- ನೀಲ್ ಗೇಬ್ಲರ್, ವಾಲ್ಟ್ ಡಿಸ್ನಿ ಅಂತರಂಗ
- "Anaheim Walk of Stars". Archived from the original on 2007-04-02.
- ಪೊಲೊ ಕ್ರೀಡೆಯಲ್ಲಿ ವಾಲ್ಟ್ ಡಿಸ್ನಿಯವರ ಆಸಕ್ತಿಯ ಕುರಿತು ರಾಬರ್ಟ್ ಸ್ಟ್ಯಾಕ್ರೊಂದಿಗೆ ಸಂದರ್ಶನ
- ವಾಲ್ಟ್ ಡಿಸ್ನಿ ಸ್ಮಾರಕ ಸ್ಥಳ
- ಡಿಸ್ನಿಯವರ ಅಧ್ಭುತ ಪಯಣ Archived 2011-09-17 ವೇಬ್ಯಾಕ್ ಮೆಷಿನ್ ನಲ್ಲಿ.
- Pages using duplicate arguments in template calls
- CS1 errors: missing periodical
- CS1 errors: invisible characters
- CS1 maint: bot: original URL status unknown
- CS1 maint: unrecognized language
- Pages using ISBN magic links
- Biography with signature
- Articles with hCards
- Articles with hatnote templates targeting a nonexistent page
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- CS1 errors: empty citation
- Articles with unsourced statements from November 2009
- Articles with invalid date parameter in template
- CS1 errors: unsupported parameter
- CS1 errors: empty unknown parameters
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ೧೯೦೧ ಜನನ
- ೧೯೬೬ ನಿಧನ
- ಆಮೆರಿಕನ್ ವಾಮಪಂಥ-ವಿರೋಧಿಗಳು
- ಅಮೆರಿಕನ್ ಉದ್ಯಮಿಗಳು
- ಅಮೆರಿಕನ್ ವ್ಯಂಗ್ಯಚಿತ್ರಕಾರರು
- ಅಮೇರಿಕನ್ ಚಲನಚಿತ್ರ ನಿರ್ದೇಶಕರು
- ಅಮೆರಿಕನ್ ಚಲನಚಿತ್ರ ನಿರ್ಮಾಪಕರು
- ಅಮೆರಿಕನ್ ಚಿತ್ರಕಥಾ ಲೇಖಕರು
- ಇಂಗ್ಲಿಷ್-ಭಾಷಾ ಚಲನಚಿತ್ರ ನಿರ್ದೇಶಕರು
- ವಾಲ್ಟ್ ಡಿಸ್ನಿ