ವಾಣಿಜ್ಯೋದ್ಯಮಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ವಾಣಿಜ್ಯೋದ್ಯಮಿಯು ಹಣಕಾಸಿನ ಅಪಾಯಗಳನ್ನು ತೆಗೆದುಕೊಂಡು ವ್ಯಾಪಾರ ಅಥವಾ ವ್ಯಾಪಾರಗಳನ್ನು ಸಂಘಟಿಸುವ ಮತ್ತು ನಿರ್ವಹಿಸುವ ಒಬ್ಬ ವ್ಯಕ್ತಿ. ವಾಣಿಜ್ಯೋದ್ಯಮಿಯನ್ನು ಸಾಮಾನ್ಯವಾಗಿ ಉದ್ಯಮನಾಯಕ ಮತ್ತು ಹೊಸ ವಿಚಾರಗಳು ಮತ್ತು ವ್ಯಾಪಾರ ಪ್ರಕ್ರಿಯೆಗಳ ನವನಿರ್ಮಿತಿಕಾರನಾಗಿ ನೋಡಲಾಗುತ್ತದೆ. ಸಫಲ ವಾಣಿಜ್ಯೋದ್ಯಮಿಗಳಿಗೆ ನಿರ್ವಹಣಾ ಕೌಶಲ್ಯ ಮತ್ತು ಪ್ರಬಲ ತಂಡ ರಚನಾ ಸಾಮರ್ಥ್ಯಗಳು ಹಲವುವೇಳೆ ಅಗತ್ಯವಾದ ನಾಯಕತ್ವ ಲಕ್ಷಣಗಳೆಂದು ಗ್ರಹಿಸಲಾಗುತ್ತದೆ.