ವಿಷಯಕ್ಕೆ ಹೋಗು

ವಸಂತ ಶೆಟ್ಟಿ ಬೆಳ್ಳಾರೆ.

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಸಂತ ಶೆಟ್ಟಿ ಬೆಳ್ಳಾರೆ

ಕನ್ನಡ ಮತ್ತು ತುಳು ಭಾಷಾ ಸಂಘಟಕ, ಸಾಹಿತಿ ಹಾಗೂ ಪ್ರಕಾಶಕರು.

ಹುಟ್ಟು

[ಬದಲಾಯಿಸಿ]

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಶ್ರೀ ಡಿ. ಜತ್ತಪ್ಪ ಶೆಟ್ಟಿ ಅವರ ಪುತ್ರರಾದ ಶ್ರೀ ವಸಂತ ಶೆಟ್ಟಿ ಬೆಳ್ಳಾರೆ (ಜನನ ೧೯೬೨) ಅವರುಕಳಂಜದ ತಂಟೆಪ್ಪಾಡಿಯವರು. ೧೯೮೨ ರಿಂದ ದೆಹಲಿಯಲ್ಲಿ ನೆಲೆಸಿರುವ ಅವರು ಕನ್ನಡ ಮತ್ತು ತುಳು ಭಾಷಾ ಸಂಘಟಕ, ಸಾಹಿತಿ ಹಾಗೂ ಪ್ರಕಾಶಕರಾಗಿದ್ದಾರೆ. ಹೊರನಾಡಿನಲ್ಲಿ ಅದರಲ್ಲೂ ರಾಷ್ಟ್ರ ರಾಜಧಾನಿಯಾದ ದೆಹಲಿಯಲ್ಲಿ ನಿರಂತರ ಕನ್ನಡ ಚಟುವಟಿಕೆಗಳನ್ನು ನಡೆಸುತ್ತಾ, ಕನ್ನಡದ ಉಳಿವು ಮತ್ತು ಬೆಳವಣಿಗೆಗೆ ಅಪೂರ್ವವಾದ ಕೊಡುಗೆ ನೀಡಿದ್ದಾರೆ.

ಉದ್ಯೋಗ

[ಬದಲಾಯಿಸಿ]

ಸೆಂಚುರಿಕ್ರೇನ್‍ಇಂಜಿನಿಯರ್ಸ್ ಪ್ರೈವೇಟ್ ಲಿ.ಫರಿದಾಬಾದ್‍ಇದರಲ್ಲಿಅಸಿಸ್ಟೆಂಟ್ ವೈಸ್‍ಪ್ರೆಸಿಡೆಂಟ್ ಆಗಿ ೧೬ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶ್ರೀ ವಸಂತ ಶೆಟ್ಟಿ ಬೆಳ್ಳಾರೆ ಅವರು ಈ ಹಿಂದೆರೇವಾ ಇಂಡಸ್ಟ್ರೀಸ್ ಲಿ.ಫರಿದಾಬಾದ್‍ನಲ್ಲಿ ವಿವಿಧ ಹುದ್ದೆಗಳಲ್ಲಿ ೧೭ ವರ್ಷಗಳ ಅನುಭವ ಪಡೆದಿದ್ದಾರೆ.

ಕೃತಿಗಳು

[ಬದಲಾಯಿಸಿ]
  • ಅಂತರ್ಗತ-ಕಿರುಕಾದಂಬರಿ(೧೯೮೫)
  • ಅಕಾಲ-ಕಥಾ ಸಂಕಲನ (೨೦೦೭)
  • ಅಧ್ಯಾಯ-ಕವನ ಸಂಕಲನ (೨೦೦೮)
  • ಅನೇಕ (೨೦೦೮)
  • ಆಶಾಸೌಧ-ಕಥಾ ಸಂಕಲನ (೨೦೦೯)
  • ಅದಮ್ಯ ಕೃತಿ(೨೦೦೯)
  • ಯಕ್ಷಗಾನ ಕಲಾವಿದ ಅಳಿಕೆ ರಾಮಯ್ಯ ರೈ ಅವರ ಕುರಿತಾದ ಕೃತಿ 'ಅಳಿಕೆ' ಬಿಡುಗಡೆಯಾಗಿದೆ(೨೦೧೩)

ಪತ್ರಿಕೆಯಲ್ಲಿ ಕೆಲಸ

[ಬದಲಾಯಿಸಿ]
  • ಎಂಬತ್ತರ ದಶಕದಲ್ಲಿ ದೆಹಲಿಯಲ್ಲಿ ಎರಡು ವರ್ಷ ‘ಅಂತರ’ ಎಂಬ ಸಾಹಿತ್ಯಿಕ ಮಾಸಪತ್ರಿಕೆಯ ಪ್ರಕಟಣೆಯನ್ನೂ ಮಾಡಿದ್ದಾರೆ.

ಪತ್ರಿಕೆಯಲ್ಲಿ ಕೆಲಸ

[ಬದಲಾಯಿಸಿ]

ದೆಹಲಿ ಕರ್ನಾಟಕ ಸಂಘದ ‘ಅಭಿಮತ’ ಪತ್ರಿಕೆಯ ಪ್ರಧಾನ ಸಂಪಾದಕನಾಗಿ (೨೦೦೯-೧೦)

  • ದೆಹಲಿ ಮಿತ್ರ’ ದ ಸಂಚಾಲಕನಾಗಿ
  • ಜನವರಿ ೧೩, ೨೦೧೮ ರಂದು ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಸುಳ್ಯ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ[].
  • ಅಕ್ಟೋಬರ್ ೧೬, ೨೦೧೮ ರಂದು ನಡೆದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ಸುಳ್ಯ ತಾಲೂಕು ಮಟ್ಟದ ‘ತುಳು ಸಾಹಿತ್ಯ ಸಮ್ಮೇಳನ’ದ ಅಧ್ಯಕ್ಷತೆ[]

ಉಲ್ಲೇಖ

[ಬದಲಾಯಿಸಿ]
  1. http://kannada.megamedianews.com/?p=12271
  2. http://sullia.suddinews.com/archives/332482