ವರ್ಗ:ಕ್ರೈಸ್ತ ದೇವಾಲಯಗಳು

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

'ಕ್ರೈಸ್ತರ ಚರ್ಚ್' ಗಳನ್ನು ಅಚ್ಚ ಕನ್ನಡದಲ್ಲಿ 'ಕ್ರೈಸ್ತರ ದೇವಾಲಯಗಳು' ಎಂಬುದಾಗಿ ಕರೆಯುವ ರೂಢಿಯನ್ನು ಬಳಕೆಗೆ ತರಲಾಗಿದೆ. ಕರ್ನಾಟಕದಲ್ಲಿರುವ ಕ್ರೈಸ್ತರ ದೇವಾಲಯಗಳನ್ನು ಕಥೋಲಿಕರ ದೇವಾಲಯ, ಪ್ರೊಟೆಸ್ಟಂಟರ ದೇವಾಲಯ ಎಂಬುದಾಗಿ ಕರೆಯುತ್ತಾರೆ. ಪೆಂಟಕೋಸ್ಟ್, ಅರ್ಥೊಡಾಕ್ಸ್ ಇತ್ಯಾದಿ ಕ್ರೈಸ್ತರು ತಮ್ಮ ದೇವಾಲಯಗಳನ್ನು ಚರ್ಚ್ ಎಂದೇ ಕರೆಯುತ್ತಾರೆ. ಪ್ರತಿಯೊಂದು ದೇವಾಲಯಕ್ಕೂ ಅದರದೇ ಆದ ಪಾಲಕ ಸಂತರಿದ್ದಾರೆ. ಆ ಸಂತರ ಹೆಸರಿನಿ೦ದಲೇ ಆ ದೇವಾಲಯವನ್ನು ಕರೆಯುವುದು ವಾಡಿಕೆ. ಉದಾ: 'ಸಂತ ಫಿಲೋಮಿನಮ್ಮನವರ ದೇವಾಲಯ'

ಸಂತ ಮರಿಯಮ್ಮ (St.Mary)ನವರ ದೇವಾಲಯಗಳು ಅನೇಕ ಹೆಸರುಗಳಿಂದ ಪ್ರಖ್ಯಾತವಾಗಿದೆ. ಅವುಗಳಲ್ಲಿ ನಿತ್ಯಾಧಾರ ಮಾತೆ(Perpetual Succor), ಪವಿತ್ರ ಮಾತೆ(Lady of holy), ದೀನರ ಮಾತೆ(Virgin of the poor), ಲೂರ್ದು ಮಾತೆ(Lady of Lourdes), ಆರೋಗ್ಯ ಮಾತೆ(Lady of our health), ಜಪಮಾಲೆ ಮಾತೆ(Lady of Holy Rosary), ಕಾರ್ಮೆಲ್ ಮಾತೆ(Lady of Carmel), ಅಮಲೋದ್ಭವ ಮಾತೆ(Immaculate Conception), ಫಾತಿಮ ಮಾತೆ(Lady of Fatima), ಕೆಲವು ಉದಾಹರಣೆಗಳು.