ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯ
ಕ್ರಿ.ಶ.೧೯೫೩ ರಲ್ಲಿ ಬೆಂಗಳೂರನ್ನು ಮಹಾಧರ್ಮಪ್ರಾಂತ್ಯವನ್ನಾಗಿ ಮಾಡಲಾಯಿತು. ಮಂಗಳೂರು,ಮೈಸೂರು,ಹಾಗೂ ಬಳ್ಳ್ಳಾರಿ ಇದರ ಅದೀನ ಪ್ರ್ಯಾಂತ್ಯಗಳಾದವು.ಈ ಬೆಂಗಳೂರು ಧರ್ಮಕ್ಷೇತ್ರದಲ್ಲಿ ಒಂದು ಕೇಂದ್ರವಾಗಿರುವ ಚಿಕ್ಕಕಮ್ಮನಹಳಿಯು ಬನ್ನೇರುಘಟ್ಟ ದಲ್ಲಿದೆ.ಈ ಧರ್ಮಕೇಂದ್ರದಲ್ಲಿರುವ ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯವನ್ನು ಕ್ರಿ.ಶ.೧೯೫೫ ರಲ್ಲಿ ಪಾ:ಕ್ರಿಶ್ಚಿಯನ್ ರೆನಾಡ್ ರವರು ಈ ದೇವಾಲಯವನ್ನು ಉದ್ಘಾಟಿಸಿದರು. ಈ ದೇವಾಲಯವು ಈ ಊರಿನ ಮಧ್ಯಭಾಗಲ್ಲಿದೆ. ಸುತ್ತಲೂ ಸುಂದರವಾದ ಪರಿಸರ ಹಾಗೂ ಮಧ್ಯಭಾಗದಲ್ಲಿ ದೇವಾಲಯ ಇರುವುದರಿಂದ ಇಲ್ಲಿಗೆ ಬರುವ ಜನರಿಗೆ ಒಂದು ರೀತಿಯ ಅನುಭವವನ್ನು ನೀಡುತ್ತದೆ.ಈ ದೇವಲಯವನ್ನು ಪ್ರಾರಂಭಿಸಿದಾಗ ಸುಮಾರು ೨೦೦ ರಷ್ಟು ಇದ್ದ ಜನ ಈಗ ಸುಮರು ೧೦೦೦ ದಷ್ಟು ಜನರಿದ್ದಾರೆ. ಚಿಕ್ಕಕಮ್ಮನಹಳ್ಳಿಯಲ್ಲಿ ಕ್ರೈಸ್ತರು ಆನೇಕಲ್ ತಾಲ್ಲೂಕಿಗೆ ಸೇರಿದ ಕಮ್ಮನಹಳ್ಳಿ ಗೆ ಕ್ರೈಸ್ತರು ಹೇಗೆ ಬಂದರು? ಎಲ್ಲಿಂದ ಬಂದರು?. ತಕ್ಷಣಕ್ಕೆ ಈ ಪ್ರಶ್ನೆಗಳಿಗೆ ನಿಖರವಾದ ಉತ್ತರ ಕೊಡುವುದು ಕಷ್ಟ. ನಾವು ಪರಿಶೀಲಿಸಿದ ಜೆಸುವಿಟ್ ಪತ್ರಗಳಲ್ಲಿ ಈ ಹೆಸರು ಕಾಣ ಸಿಗಲಿಲ್ಲ. ಹೇಗೂ ಈ ಹಳ್ಳೈಯ ಆದಿ ಕ್ರೈಸ್ತರು ಯೇಸು ಸಭೆಯ ಗುರುಗಳ ಕಾಲದಲ್ಲಿ ೧೬೪೯-೧೭೭೩ ಕ್ರೈಸ್ತ ಧರ್ಮವನ್ನು ಅವಲಂಭಿಸಿರಬೇಕು. ಪ್ಯಾರಿಸ್ ಮಿಶನಿನ ಸ್ವಾಮಿ ಲೂನೆ ಅವರು ತಮ್ಮ ಪುಸ್ತಕದಲ್ಲಿ ಈ ವಿವರವನ್ನು ಕೊಟ್ಟಿದ್ದಾರೆ. ಸುಮಾರು ೧೭೮೦ರಲ್ಲಿ ಮೂವರು ರೆಡ್ಡಿ ಸಹೋದರರು ತಮ್ಮ ಬಂದುಬಳಗದವರೊಂದಿಗೆ ನೆಮ್ಮದಿಯಿಂದ ಬಾಳಲಾಗದೆ ಮೈಸೂರಿನ ಉತ್ತರ ಗಡಿಭಾಗದಲ್ಲಿದ್ದ ತಮ್ಮ ಪುದತ್ತೂರನ್ನು ಬಿಟ್ಟು ಬೆಂಗಳೂರಿನ ಬಿಳೇಹಕ್ಕಿ ಹಳ್ಳೀಗೆ ಬಂದರು. ಅಲ್ಲಿ ಕೆಲವು ಕಾಲ ಇದ್ದು ಅನಂತರ ಚಿಕ್ಕಕಮ್ಮನಹಳ್ಳಿಗೆ ಬಂದು ನೆಲೆಸಿದರು. ಇವರ ಹೆಸರುಗಳು ಚಿನ್ನಪ್ಪ, ಅಂತಪ್ಪ, ಮತ್ತು ಪಾಪಣ್ಣ. ಕೆಲವು ವರ್ಷಗಳಾದ ಮೇಲೆ ಗೊಲ್ಲ ಜಾತಿಗೆ ಸೇರಿದ ಇನ್ನಿಬ್ಬರು ಸಹೋದರರು ಚಿಕ್ಕಬಳ್ಳಾಪುರ ಕಡೆಯಿಂದ ಇಲ್ಲಿಗೆ ಬಂದು ಸೇರಿಕೊಂಡರು. ಇವರ ಹೆಸರು ಚಿನ್ನಪ್ಪ ಮತ್ತು ಎರ್ರಪ್ಪ. ಇವರೆಲ್ಲರೂ ಸೇರಿ ಒಂದು ಚಿಕ್ಕ ದೇವಸ್ಥಾನವನ್ನು ಕಟ್ಟಿದರು. ಬಳಿಕ ಕೆಲವು ಮಂದಿ ತಿಗಳರು ಬಂದು ಬೆರೆತು ಕೊಂಡರು. ಪಾಂಡಿಚೇರಿಯ ಧರ್ಮಾದ್ಯಕ್ಷರಾಗಿದ್ದ ಬಿಶಪ್ ಬೊನಾಂಡ್ ಅವರು ಈ ಊರಿಗೆ ೧೮೩೩-೧೮೩೬ ರಲ್ಲಿ ಬೇಟಿ ಕೊಟ್ಟಿದ್ದರು.ಈ ಹಳ್ಳಿಗರಿಗೆ ಧರ್ಮೋಪದೇಶದಲ್ಲಿದ್ದ ಅರಿವು ಆಸಕ್ತಿಯನ್ನು ಹಾಗೂ ಗುರುಗಳಲ್ಲಿ ಅವರಿಗಿದ್ದ ಭಕ್ತಿ ವಿಶ್ವಾಸವನ್ನು ಮೆಚ್ಚಿ ಲಿಖಿತವಾಗಿ ವರದಿ ಮಾಡಿದ್ದಾರೆ. ಬೆಂಗಳೂರು ನಗರದಲ್ಲಿದ್ದ ಕ್ರೈಸ್ತರಿಗಿಂತ ಈ ಹಳ್ಳೈಯ ಕ್ರೈಸ್ತರು ಎಷ್ಟೋ ಉತ್ತಮ ಕ್ರೈಸ್ತರಾಗಿದ್ದಾರೆಂದು ಹೊಗಳಿದ್ದಾರೆ. ೧೮೫೦ ರಲ್ಲಿ ಈ ಕ್ರೈಸ್ತ ಕೇಂದ್ರವನ್ನು ಬೆಂಗಳೂರು ಕೇಂದ್ರದಿಂದ ಬೇರ್ಪಡಿಸಿ ಸ್ವತಂತ್ರವಾಗಿಸಲಾಯಿತು. ೧೮೫೯ರಲ್ಲಿ ಮೈಸೂರು ಮಿಷನಿನ ಎಂಟು ಕ್ರೈಸ್ತ ಜಿಲ್ಲೆಗಳಲ್ಲಿ ಚಿಕ್ಕಕಮ್ಮನಹಳ್ಳಿ ಒಂದು ಜಿಲ್ಲೆ ಎನಿಸಿಕೊಂಡಿತು. ಬೇಗೂರು, ಆನೇಕಲ್, ಆದುಗೊಂಡಹಳ್ಳಿ, ಸೋಮನಹಳ್ಳಿ, ಹಾರೋಬೆಲೆ, ರಾಮನಗರ, ಚೆನ್ನಪಟ್ಟಣ, ಜಾಲಮಂಗಲ, ಕೋಟಕಲ್ಲು, ತುಮಕೂರು ಹಾಗೂ ಶಿರಾ ಈ ಜಿಲ್ಲೆಗೆ ಒಳಪಟ್ಟಿದ್ದವು. ೧೮೬೬-೧೮೮೭ರಲ್ಲಿ ೭೬೪ ಮಂದಿ ಕಥೋಲಿಕ ಕ್ರೈಸ್ತರು ಇಲ್ಲಿದ್ದರು. ೧೯೫೫ ರಲ್ಲಿ ಚಿಕ್ಕಕಮ್ಮನಹಳ್ಳಿಯನ್ನು ಮಿಶನ್ ಕೇಂದ್ರವನ್ನಾಗಿ ಕಾಳೇನ ಅಗ್ರಹಾರವನ್ನು ಮತ್ತು ಆನೇಕಲ್ ಅನ್ನು ಈ ಕೇಂದ್ರಕ್ಕೆ ಸೇರಿಸಲಾತಯಿತು.ಈ ಮೊದಲು ಈ ಮೂರು ಹಳ್ಳಿಗಳು ದೊರೆಸಾನಿಪಾಳ್ಯ ಧರ್ಮಕೇಂದ್ರಕ್ಕೆ ಸೇರಿದ್ದವು. ಅಂದಿನಿಂದ ಇಂದಿನವರೆಗೂ ಈ ಧರ್ಮಕೇದ್ರದಲ್ಲಿ ಸೇವೆಸಲ್ಲಿಸಿದ ಗುರುಗಳ ವರದಿ ಹೀಗಿದೆ.
೧]ಫಾ..ಕ್ರಿಶ್ಚಿಯನ್ ರೆರ್ನಾಡ್ {೯-೧೨-೧೯೫೫/೧೩-೮-೧೯೫೭}
೨]ಫಾ. ಅಲೊಷಿಯಸ್ ಫ಼ರಿಯಾಸ್ {೧೪-೮-೧೯೫೭/೧೫-೫-೧೯೬೨}
೩]ಫಾ. ಡೆನಿಸ್ ಅಲ್ವಾರಿಸ್ {೧೬-೫-೬೨/೨೮-೪-೬೬}
೪]ಫಾ. ಜೊಸೇಫ್ ಕೋನ್ ರೆಡ್ಡಿ {೪-೧೦-೭೫/೧೭-೬-೭೬}
೫]ಫಾ. ಲೂಯಿಜಿ ಪೆರೆಗೊ {೨೯-೪-೬೬/೨೫-೧-೬೯}
೬]ಫಾ. ಜೇಸುರಾಜ್ ಅನ್ಬರಸನ್ {೪-೧೦-೭೫/೧೭-೬-೭೬}
೭]ಫ್ರಾ. ಪ್ರಭು {೧೮-೬-೭೬/೧೭-೭-೮೩}
೮]ಫಾ. ಆರೊಗ್ಯಸ್ವಾಮಿ{೧೫-೭-೮೩/೧೦-೧೨-೮೯}
೯]ಫ್ರಾ.ಕ್ರಿಶ್ಚಿಯನ್ ರೆರ್ನಾಡ್ {೩-೧೨-೮೯/೮-೫-೯೪}
೧೦]ಸ್ಟ್ಯಾನಿ ಬ್ಯಾಪ್ಟಿಸ್ಟ್ {೮-೫-೯೪/೪-೮-೨೦೦೨}
೧೧]ಫಾ.ಕ್ರಿಸ್ಟಿ ರಾಜ್]
೧೨]ಫಾ. ಆರೊಗ್ಯಸ್ವಾಮಿ
೧೩]ಫಾ. ಫಾಯಸ್ ಡಿ ಸಾ {೨೯-೬-೨೦೦೫/೫-೫-೨೦೧೨}
ಹಾಗೂ ಪ್ರಸ್ತುತ ಧರ್ಮಕೇಂದ್ರದ ಗುರುಗಳು ಫಾ. ಡಿ. ಆರೋಗ್ಯಸ್ವಾಮಿರವರು.
೧೯೫೩ ರಲ್ಲಿ ಬೆಂಗಳೂರನ್ನು ಮಹಾ ಧರ್ಮಪ್ತ್ಯವನ್ನಾಗಿ ಮಾಡಲಾಯಿತು.ಮಂಗಳೂರು ಮೈಸೂರು, ಹಾಗೂ ಬಳ್ಳಾರಿ ಇದರ ಧರ್ಮಕ್ಷೇತ್ರವನ್ನಾಗಿ ಮಾಡಲಯಿತು. ಈ ದೇವಾಲಯದ ಪಾಲಕ ಸಂತರಾದ ಸಂತ ಫ್ರಾನ್ಸಿಸ್ ಕ್ಷೇವಿಯರ್ ರವರು ಸ್ಪೇನ್ ದೇಶದಿಂದ ಭಾರತಕ್ಕೆ ಬಂದು ಭಾರತೀಯ ಸಂಸ್ಕ್ರುತಿ ಮತ್ತು ಭಾಷೆಯನ್ನು ಕಲಿತು ಇಲ್ಲಿನ ಜನರಿಗೆ ಕ್ರೈಸ್ತ ಧರ್ಮದ ಪ್ರಚಾರವನ್ನು ಮಾಡಿದರು. ಇದರ ಸ್ಮರಣಾರ್ಥವಾಗಿ ಇವರ ದೇವಾಲಯವನ್ನು ಕಟ್ಟಲಾಗಿದೆ.ಕೇವಲ ಭೋಧನೆಯಷ್ಟೆ ಲಕ್ಷಾಂತರ ಮಂದಿಯನ್ನು ಕ್ರೈಸ್ತ ಧರ್ಮಕ್ಕೆ ತಂದಿತು ಎಂದು ಹೇಳುವುದು ಅರ್ಧಸತ್ಯವಾಗುತ್ತದೆ.ಪಶ್ಚಿಮ ತೀರದಲ್ಲಿ ಬಂದಿಳಿದ ಇವರು ಭೋಧನೆಯಷ್ಟೆ ಮಾಡಲಿಲ್ಲ. ತಾವು ಭೇಟಿ ಮಾಡಿದ ಜನರೊಂದಿಗೆ ಗರಿಗಳ ಗುಡಿಸಳೊಳಗೆ ವಾಸಿಸಿದರು.ಬಡವರ ಊಟ ಸೇವಿಸಿದರು. ರೋಗಿಗಳನ್ನು ಆರೈಕೆ ಮಾಡಿದರು. ಅವರ ಜೊತೆ ಓಡಾಡಿದರು. ಸಾಂತ್ವನ ಹೇಳಿದರು. ಇವೆಲ್ಲಾ ಪ್ರಭುಕ್ರಿಸ್ತರು ಮಾಡಿದ್ದ ಕಾರ್ಯಗಳೆ. ಇಂಥ ಮಹಾನುಭಾವರ ಕಡೆಗೆ ಆಕರ್ಷಿತರಾಗಲು ಅವರ ಭೋದನೆಯಷ್ಟೇ ಅಲ್ಲ ಅವರ ಬದುಕು ಕಾರಣವಾಯಿತು.ಇವರು ಸತ್ತು ಸುಮಾರು ೫೦೦ ವರ್ಷ ಗಳಾದರು ಇವರ ದೇಹವು ಇನ್ನು ಕೊಳೆಯದೆ ಹಾಗೇಯೇ ಉಳಿದಿದೆ.ಇವರ ಸೇವೆ ,ತ್ಯಾಗ ,ಸಮರ್ಪಣೆಯನ್ನು ಎಂದಿಗೂ ಸ್ಮರಿಸುವಂತ್ತದ್ದು. ಈ ದೇವಾಲಯವನ್ನು ಪ್ರಾರಂಭಿಸಿ ೨೦೧೫ ಕ್ಕೆ ತನ್ನ ೬೦ ವರ್ಷದ ವಜ್ರ ಮಹೋತ್ಸವವನ್ನು ಆಚರಿಸಲಿದೆ.ಹೀಗೆ ಚಿಕ್ಕಕಮ್ಮನಹಳ್ಳಿ ಧರ್ಮಕೇಂದ್ರವು ಎಲ್ಲಾ ಧರ್ಮಕೇಂದ್ರಗಳಿಗೆ ಮಾದರಿಯಾಗುತ್ತ ಪ್ರಗತಿ ಪಥದತ್ತ ಸಾಗುತ್ತಿದೆ.