ಗಂಗೊಂಡನಹಳ್ಳಿ ಸಂತ ಅಂತೋಣಿ ಚರ್ಚ್

ವಿಕಿಪೀಡಿಯ ಇಂದ
Jump to navigation Jump to search


1959309 764637153581723 1751377790077744975 n.jpg

ಗಂಗೊಂಡನಹಳ್ಳಿಗೆ ಸಮೀಪದ ಅರಣ್ಯಭೂಮಿಯಲ್ಲಿ ದೀನ ಸೇವಾ ಆಶ್ರಮ ಎಂಬ ಹೆಸರಿನಲ್ಲಿ ನೆಲೆ ಕಟ್ಟಿಕೊಂಡ ಕಪುಚಿನ್ ಗುರುಗಳು ೧೯೭೫ರಿಂದಲೂ ಗಂಗೊಂಡನಹಳ್ಳಿ ಮತ್ತು ಸುತ್ತಮುತ್ತಲಿನ ಕ್ರೈಸ್ತ ಕಥೋಲಿಕ ಸಮುದಾಯಕ್ಕೆ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸುತ್ತಿದ್ದರು. ೧೯೮೩ರ ನವೆಂಬರ್ ಮೂರರಂದು ಬೆಂಗಳೂರು ಮಹಾಧರ್ಮಪ್ರಾಂತ್ಯಮಹಾಬಿಷಪರಾಗಿದ್ದ ವಂದನೀಯ ಆರೋಕ್ಯಸಾಮಿಗಳು ಈ ಗಂಗೊಂಡನಹಳ್ಳಿ ಪ್ರದೇಶವನ್ನು ಅಧಿಕೃತ ಪತ್ರದ ಮೂಲಕ ಕಪುಚಿನ್ ಧರ್ಮಗುರುಗಳ ಸುಪರ್ದಿಗೆ ವಹಿಸಿದರು. ಸ್ಥಳೀಯ ಭಕ್ತರಾದ ಮಾನ್ಯ ಎಂ ಜೋಸೆಫ್ ಅವರು ಕಥೋಲಿಕ ಕ್ರೈಸ್ತ ದೇವಾಲಯಕ್ಕಾಗಿ ದಾನ ನೀಡಿದ ವಿಶಾಲ ಕೃಷಿಭೂಮಿಯಲ್ಲಿ ಸಂತ ಅಂತೋಣಿಯವರ ದೇವಾಲಯ ತಲೆಯೆತ್ತಿ ೧೯೯೩ರಲ್ಲಿ ಸ್ವತಂತ್ರ ಧರ್ಮಕೇಂದ್ರವಾಯಿತು. ಅಂದಿನ ಮಹಾಬಿಷಪರಾಗಿದ್ದ ವಂದನೀಯ ಅಲ್ಫೋನ್ಸಸ್ ಮಥಾಯಸ್ ರವರು ೧೯೯೩ ಆಗಸ್ಟ್ ೨೫ರ ಒಪ್ಪಂದದಂತೆ ಈ ಧರ್ಮಕೇಂದ್ರವನ್ನು ಕಪುಚಿನ್ ಮಠದವರ ಖಾಯಂ ಪರಿಪಾಲನೆಗೆ ಒಪ್ಪಿಸಿದರು. ಇಂದು ಇದೇ ದೇವಾಲಯದ ಆವರಣದಲ್ಲಿ ಗುರುಗಳ ವಸತಿ, ಕನ್ನಡ ಮತ್ತು ಇಂಗ್ಲಿಷ್ ಶಾಲೆಗಳೂ ಅಸ್ತಿತ್ವ ಕಂಡಿವೆ.

ಪೂಜಾಸಮಯ[ಬದಲಾಯಿಸಿ]

ವಾರದ ದಿನಗಳು ಭಾನುವಾರ

ಪ್ರತಿದಿನ ಬೆಳಗ್ಗೆ ೦೬:೪೫ - ಕನ್ನಡದಲ್ಲಿ
ಮಂಗಳವಾರ ಸಂಜೆ ೬:೩೦ - ಕನ್ನಡದಲ್ಲಿ
ಗುರುವಾರ ಸಂಜೆ ೬:೩೦ - ಕನ್ನಡದಲ್ಲಿ
ಶನಿವಾರ ಸಂಜೆ ೫:೩೦ - ಕನ್ನಡದಲ್ಲಿ (ಮಕ್ಕಳಿಗಾಗಿ)

ಬೆಳಗ್ಗೆ ೮:೦೦ ಕನ್ನಡದಲ್ಲಿ
ಸಂಜೆ ೬:೩೦ ಕನ್ನಡದಲ್ಲಿ