ವಿಷಯಕ್ಕೆ ಹೋಗು

ವಡಾ ಪಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಡ ಪಾವ್ ಭಾರತದ ರಾಜ್ಯವಾದ ಮಹಾರಾಷ್ಟ್ರಕ್ಕೆ ಸ್ಥಳೀಯವಾದ ಒಂದು ಸಸ್ಯಹಾರಿ ತ್ವರಿತ ಆಹಾರ ಖಾದ್ಯ. ಅದು ಮುಂಬೈನಲ್ಲಿ ಅಗ್ಗವಾದ ಬೀದಿ ಆಹಾರವಾಗಿ ಹುಟ್ಟಿಕೊಂಡಿತು, ಆದರೆ ಈಗ ಭಾರತದಾದ್ಯಂತ ಮಳಿಗೆಗಳು ಮತ್ತು ರೆಸ್ಟೊರೆಂಟ್‍ಗಳಲ್ಲಿ ಮಾರಾಟಕ್ಕಿಡಲಾಗುತ್ತಿದೆ. ಬೇಯಿಸಿದ ಹಿಸುಕಿದ ಆಲೂಗಡ್ಡೆಗಳಿಗೆ ಮಸಾಲೆಗಳನ್ನು ಸೇರಿಸಲಾಗುತ್ತದೆ, ಸಾಮಾನ್ಯವಾಗಿ ಮೆಣಸಿನಕಾಯಿಗಳು, ಬೆಳ್ಳುಳ್ಳಿ, ಇಂಗು, ಅರಿಶಿನ, ಸಾಸಿವೆ, ಆದರೆ ಇವು ಬದಲಾಗಬಹುದು. ಈ ಮುದ್ದೆಯನ್ನು ನಂತರ ಕಲಸಿದ ಕಡಲೆ ಹಿಟ್ಟಿನಿಂದ ಲೇಪಿಸಿ ಎಣ್ಣೆಯಲ್ಲಿ ಕರಿಯಲಾಗುತ್ತದೆ. ಕರಿದ ಪಣಿಯಾರವನ್ನು ಬ್ರೆಡ್ ಬನ್‍ನಲ್ಲಿ ಒಂದು ಅಥವಾ ಹೆಚ್ಚು ಚಟ್ನಿಗಳೊಂದಿಗೆ ಬಡಿಸಲಾಗುತ್ತದೆ.

ವಡ ಎಂಬುವುದು ಮರಾಠಿ ಪದದ ಬಟಾಟ ವಡ ಎಂಬ ಪದದಿಂದ ಬಂದಿದೆ ಅಂದರೆ ಆಲೂಗಡ್ಡೆ ಪನಿಯಾಣ ಎಂದರ್ಥ.ಪಾವ್ ಎನ್ನುವುದು ಪೋರ್ಚುಗೀಸ್ ಪದದ ಪಾವೊ ಎಂಬ ಪದವಾಗಿದೆ,ಅಂದರೆ ಬ್ರೆಡ್ ಎಂದರ್ಥ.

"https://kn.wikipedia.org/w/index.php?title=ವಡಾ_ಪಾವ್&oldid=888763" ಇಂದ ಪಡೆಯಲ್ಪಟ್ಟಿದೆ