ವಿಷಯಕ್ಕೆ ಹೋಗು

ವಂಶೋದ್ಧಾರಕ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡ ಚಲನಚಿತ್ರ ವಂಶೋದ್ಧಾರಕ

ಚಿತ್ರ:ವಂಶೋದ್ಧಾರಕ ಭಾಷೆ:ಕನ್ನಡ

ನಿರ್ದೇಶನ:ಆದಿತ್ಯ ಚಿಕ್ಕಣ್ಣ

ನಿರ್ಮಾಣ:ಓಂ ಶ್ರೀ ಕಾಳಿಕಾಮಾತಾ ಪ್ರೊಡಕ್ಷನ್ಸ್

ಸಂಗೀತ:ವಿ ಮನೋಹರ್

ಛಾಯಾಗ್ರಹಣ:ಪಿ.ಕೆ.ಎಚ್ ದಾಸ್

ತಾರಾಗಣ:ವಿಜಯ ರಾಘವೇಂದ್ರ, ಮೇಘನಾ ರಾಜ್, ಲಕ್ಷ್ಮೀ, ಶ್ರೀನಿವಾಸ ಮೂರ್ತಿ, ನವೀನ್ ಕ್ರಷ್ಣ, ರಂಗಾಯಣ ರಘು, ಸಾಧುಕೋಕಿಲ, ಚಂದ್ರು,ವೀಣಾ ಸುಂದರ್.

ಬಿಡುಗಡೆ ದಿನಾಂಕ:೦೬-ನವೆಂಬರ್- ೨೦೧೫

ಸಂಕ್ಷಿಪ್ತ ವಿವರಣೆ: ರೈತ ಭೂಮಿಗೆ ಚೊಚ್ಚಲ ಮಗ, ನಾಗರೀಕತೆಯಲ್ಲಿ ನೇಗಿಲು ಮರೆತರೇ, ನಾಲ್ಕೇ ದಿನದಲ್ಲಿ ಇಡೀ ಲೋಕವೇ ಕತ್ತಲು ಎಂಬ ಸಂದೇಶವನ್ನು ನಿರ್ದೇಶಕರಾದ ಆದಿತ್ಯ ಚಿಕ್ಕಣ್ಣ ಅವರು ವಂಶೋದ್ಧಾರಕ ಚಿತ್ರದ ಮೂಲಕ ಪ್ರೇಕ್ಷಕರಿಗೆ ನೀಡಲು ಪ್ರಯತ್ನಿಸಿದ್ದಾರೆ. ಅಪ್ಪಟ ಹಳ್ಳಿ ಸೊಗಡಿನ ಚಿತ್ರವಾದ ವಂಶೋದ್ಧಾರಕದಲ್ಲಿ ಇಡೀ ಹಳ್ಳಿಯ ಚಿತ್ರಣ, ರೈತರ ಬದುಕು ಹಾಗೂ ಹಳ್ಳಿಯ ಜನರ ಮುಗ್ದತೆ ಮೂಂತಾದವುಗಳನ್ನು ಬಹಳ ಅಚ್ಚುಕಟ್ಟಾಗಿ ತೋರಿಸಿದ್ದಾರೆ.

ಈ ಚಿತ್ರದ ಛಾಯಾಗ್ರಹಣ ಅಕ್ಟೋಬರ್ ೨೦೧೪ರಂದು ಪ್ರಾರಂಭವಾಯಿತು.

ಸಂಗೀತ:

  • ಹಾಯಾಗಿ ಹರಡಿ - ಸೊನು ನಿಗಮ್ ಮತ್ತು ಅನುರಾಧ ಭಟ್
  • ಅಲೆಮನೆಯಂಗೆ - ಚಿಂತನ್ ವಿಕಾಸ್ ಮತ್ತು ಸುಪ್ರಿಯಾ ಲೊಹಿತ್
  • ನತ ನತ - ಚಿಂತನ್ ವಿಕಾಸ್
  • ವಂಶದ ಗೌರವ - ಭರಣಿಶ್ರಿ
  • ರೈತ ಭೂಮಿಯ - ಮುದು ಬಾಲಕ್ರಿಷ್ಣನ್