ಲಿಯೋನಿಡ್ ಅಂಡ್ರೆಯೇವ್
ಲಿಯೋನಿಡ್ ಅಂಡ್ರೆಯೇವ್ | |
---|---|
ಜನನ | Leonid Nikolaievich Andreyev ೨೧ ಆಗಸ್ಟ್ ೧೮೭೧ Oryol, Oryol Governorate, Russian Empire |
ಮರಣ | September 12, 1919 Mustamäki, Finland | (aged 48)
ರಾಷ್ಟ್ರೀಯತೆ | Russian |
ಕಾಲ | 1890s–1910s |
ಪ್ರಕಾರ/ಶೈಲಿ | ಕಥೆ, ನಾಟಕ |
ಸಾಹಿತ್ಯ ಚಳುವಳಿ | Realism • Naturalism • Symbolism • Expressionism |
ಮಕ್ಕಳು | Daniil Andreyev, Vadim Andreyev |
ಸಹಿ |
ಲಿಯೋನಿಡ್ ನಿಕೊಲೇವಿಚ್ ಅಂಡ್ರೆಯೇವ್ (೨೧ ಆಗಸ್ಟ್ ೧೮೭೧-ಸೆಪ್ಟೆಂಬರ್ ೧೨,೧೯೧೯) ರಷ್ಯನ್ ನಾಟಕಕಾರ,ಕಾದಂಬರಿಕಾರ ಮತ್ತು ಸಣ್ಣಕಥೆಗಾರ. ಇವನನ್ನು ರಷ್ಯನ್ ಸಾಹಿತ್ಯದ ಅಭಿವ್ಯಕ್ತಿವಾದದ ಪಿತಾಮಹ ಎಂದು ಪರಿಗಣಿಸಲಾಗಿದೆ.
ಕ್ರಾಂತಿಯ ಪ್ರಭಾವ
[ಬದಲಾಯಿಸಿ]ಬೋಲ್ಷೆವಿಸಮನ್ನು 1917ರಲ್ಲಿ ವಿರೋಧಿಸಿದ ಕ್ರಾಂತಿಕಾರಿ. ಯೌವನದಲ್ಲಿ ಭಯಂಕರ ಪ್ರಸಂಗಗಳನ್ನು ಅರಸುತ್ತಿದ್ದ ಇವನು ಇ.ಎ.ಫೋನ ಪ್ರಭಾವಕ್ಕೆ ಒಳಗಾದ. ಅತೃಪ್ತಿ ಜೀವಮಾನವೆಲ್ಲ ಇವನನ್ನು ಕಾಡಿತು. ಇವನ ಬರಹಗಳಲ್ಲಿ ಫೋ,ಗಾರ್ಕಿ ಮತ್ತು ಟಾಲ್ಸ್‍ಟಾಯ್ ಇವರ ಪ್ರಭಾವ ಕಂಡುಬರುತ್ತದೆ.
ಶೈಲಿ
[ಬದಲಾಯಿಸಿ]ಇವನ ಕೃತಿಗಳಲ್ಲಿ ಎರಡು ಬಗೆಯ ಶೈಲಿಗಳನ್ನು ಕಾಣಬಹುದು. ಎಲ್ಲ ಕೃತಿಗಳಲ್ಲಿಯೂ ಸರ್ವಶೂನ್ಯವಾದ ನಿರೂಪಿತವಾಗಿದೆ. ಮಾನವನ ಬಾಳು, ಸಮಾಜ, ನೀತಿ ಎಲ್ಲ ಮಿಥ್ಯ, ಸಾವು ಒಂದೇ ಸತ್ಯ ಎನ್ನುವ ದೃಷ್ಟಿ ಇವನ ಸಾಹಿತ್ಯಕ್ಕೆ ಆಧಾರ. 1906ರ ಕ್ರಾಂತಿ ವಿಫಲಗೊಂಡ ಮೇಲೆ ಬುದ್ಧಿಜೀವಿಗಳು ಅನುಭವಿಸಿದ ಶೂನ್ಯಭಾವನೆ ಇವನ ಕೃತಿಗಳಲ್ಲಿ ಪ್ರತಿಬಿಂಬಿತವಾಗಿದೆ. ಇವನ ಎರಡು ಶೈಲಿಗಳಲ್ಲಿ ಒಂದು ಸಂಯಮ, ವಿವೇಚನೆಗಳಿಂದ ಕೂಡಿದ್ದು, ಇದರಲ್ಲಿ ರಚಿತವಾದ 'ಒಂದಾನೊಂದು ಕಾಲದಲ್ಲಿ, 'ಮಂಜಿನಲ್ಲಿ ಮತ್ತು 'ಗವರ್ನಕ್ ಎಂಬ ಕಥೆಗಳೇ ಇವನಿಗೆ ಸಾಹಿತ್ಯ ಪ್ರಪಂಚದಲ್ಲಿ ಸ್ಥಾನವನ್ನು ಗಳಿಸಿಕೊಟ್ಟುವು. ಮೂರರಲ್ಲಿಯೂ ಸಾವೇ ಮುಖ್ಯವಸ್ತು. ಆಧುನಿಕತೆಯ ಪ್ರಭಾವಕ್ಕೊಳಗಾಗಿ ಎರಡನೆಯ ಶೈಲಿಯಲ್ಲಿ ಬರೆದ ಕೃತಿಗಳಲ್ಲಿ 'ಕತ್ತಲೆ ಮತ್ತು 'ಗಲ್ಲಿಗೇರಿದ ಏಳು ಮಂದಿ ಎಂಬವು ಗಣನೀಯವಾದುವು. ಕೊನೆಯದರಲ್ಲಿ ಸಾವು ತೋರಬಹುದಾದ ಹಿರಿಮೆಯನ್ನು ಗುರುತಿಸಿರುವುದರಿಂದ ಇವನ ಕೃತಿಗಳಲ್ಲಿ ಇದಕ್ಕೊಂದು ವಿಶಿಷ್ಟಸ್ಥಾನವುಂಟು.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Works by Leonid Andreyev at Project Gutenberg
- Leonid Andreyev ಐ ಎಮ್ ಡಿ ಬಿನಲ್ಲಿ
- Page at The Internet Broadway Database
- Leonid Andreyev's tombstone