ಲಲಿತಾ ಆರ್ ರೈ

ವಿಕಿಪೀಡಿಯ ಇಂದ
Jump to navigation Jump to search

ಲಲಿತಾ ಆರ್ ರೈರವರ ಜೀವನ[ಬದಲಾಯಿಸಿ]

ಇವರ ಜನನ ೨೨.೮.೧೯೨೮ರಂದು.ಪ್ರಾಥಮಿಕ ಹಾಗು ಹೈಸ್ಕೂಲ್ ಶಿಕ್ಷಣವನ್ನು ಬೆಸೆಂಟ್ ಶಾಲೆಯಲ್ಲಿ ಮುಗಿಸಿದರು. ಸೈಂಟ್ ಆಗ್ನೆಸ್ ಕಾಲೇಜು ಮತ್ತು ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಶಿಕ್ಷಣ ಪಡೆದರು. ಚಿಕ್ಕಂದಿನಿಂದಲೇ ಸಾಹಿತ್ಯದಲ್ಲಿ ಆಸಕ್ತಿ ಇದ್ದ ಇವರಿಗೆ ದಿ.ಪಿ.ಕೆ.ನಾರಾಯಣರು ಹಾಗು ಶಂಕರ ಭಟ್ಟರು ಪ್ರೊತ್ಸಾಹಿಸಿದರು.ಪುತ್ತೂರಿನ ಶ್ರೀಮಂತನಾದ ವಿದ್ಯಾವಂತ ತರುಣ ರಘುನಾಥ ರೈಯವರೊಂದಿಗೆ ಲಲಿತಾರವರವ ವಿವಾಹವಾಯಿತು.ಇವರಿಗೆ ಗಾಯತ್ರಿ, ಚಿತ್ತಾ, ಕೃಪಾ ಎಂಬ ಮೂವರು ಹೆಣ್ಣುಮಕ್ಕಳು ಮತ್ತು ಜಿತೇಂದ್ರ ಎಂಬ ಗಂಡು ಮಗು ಜನಿಸಿದರು.ಕೆನಾರ ಹೈಸ್ಕೂಲಿನಲ್ಲಿ ಶಿಕ್ಷಕಿಯಗಿ ಕಾರ್ಯನಿರ್ವಹಿಸಿದರು.

ಸಾದನೆಗಳು[ಬದಲಾಯಿಸಿ]

  • ದಿ.ಕಲ್ಯಾಣಿ ಡಿ.ಶೆಟ್ಟಿಯರ ಜೊತೆಗೂಡಿ ಭಗಿನೀ ಸಮಾಜದ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು.
  • ಮಹಿಳಾ ಸೊಸೈಟಿಗಳನ್ನು ಸ್ಥಾಪಿಸಿ ಮುನ್ನಡೆಸುವ ಮುಂದಾಳ್ತನ ವಹಿಸಿದರು.
  • ಎ.ಐ.ಡಬ್ಲ್ಯೂ.ಸಿ.ಯ ಆಶ್ರಯದಲ್ಲಿ ಅನಾತ ಮಕ್ಕಳ ವಿಳಾಸ ಹುಡುಕುತ್ತಾ ಕೊಲ್ಕತ್ತದ ಸೋನಾಗಾಚಿಯ ವೇಶ್ಯಾವಾಟಿಕೆಗಳನ್ನು ಸಂದರ್ಶಿಸಿದರು.
  • ಮುಂಬೈಯ ವೇಶ್ಯಾವಾಟಿಕೆಗಳನ್ನು ಸಂದರ್ಶಿಸಿ ಅಧ್ಯಯನ ಮಾಡಿದರು.
  • ೭೦ರ ದಶಕದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸಿನ ವತಿಯಿಂದ ಕುಟುಂಬ ಯೋಜನೆಯ ಕುರಿತು ತಿಳಿವಳಿಕೆನೀಡುವ ಕಾರ್ಯದಲ್ಲಿ ೪ವರ್ಷ ಕೆಲಸ ಮಾಡಿದರು.

ಪ್ರಕಟಿತ ಕೃತಿಗಳು[ಬದಲಾಯಿಸಿ]

ಚಿತ್ತಗಾಂಗಿನ ಕ್ರಾಂತಿವೀರರು ಎಂಬ ಕಲ್ಪನಾದತ್ತಾರಕೃತಿಯನ್ನು ಕನ್ನಡಕ್ಕೆ ಅನುವದಿಸಿ ಪ್ರಕಟಿಸಿದರು.[೧]

  1. ಮತ್ತೆ ಬೆಳಗಿತು ಸೊಡರು (ಕಥಾ ಸಂಕಲನ)
  2. ಇಂಟರ್ನೆಟ್ಟಿನ ಒಳಗೆ ಮತ್ತು ಇತರ ಕಥೆಗಳು (ಕಥಾ ಸಂಕಲನ)

ಲಲಿತಾ ರೈಯವರು ಮತೃ ಭಾಷೆ ತುಳುವಿನಲ್ಲೂ ಅನೇಕ ಕಥೆಗಳನ್ನು ಬರೆದಿದ್ದಾರೆ.

  1. ಕುಲೆಪತ್ತುನಾ (ಕಥಾ ಸಂಕಲನ)
  2. ಉಡಲುರ್ಕರುನಾ (ಕಥಾ ಸಂಕಲನ)

ಉಲ್ಲೇಖ[ಬದಲಾಯಿಸಿ]

  1. ಚಂದ್ರಗಿರಿ,ನಾಡೋಜ ಡಾ.ಸಾರಾ ಅಬೂಬಕ್ಕರ್ ಅಭಿನಂದನ ಗ್ರಂಥ,ಸಂಪದಕರು ಡಾ.ಸಬಿಹಾ,ಸಿರಿವರ ಪ್ರಕಾಶನ,ಬೆಂಗಳೂರು,ಮೊದಲ ಮುದ್ರಣ೨೦೦೯,೨೩೩