ರೋಹ್ತಾಸ್ ಕೋಟೆ

ವಿಕಿಪೀಡಿಯ ಇಂದ
Jump to navigation Jump to search
ರೋಹ್ತಾಸ್ ಕೋಟೆಯ ಪ್ರವೇಶದ್ವಾರ

ರೋಹ್ತಾಸ್‍ಗಢ್ ಅಥವಾ ರೋಹ್ತಾಸ್ ಕೋಟೆಯು ಬಿಹಾರ ರಾಜ್ಯದ ಸಣ್ಣ ಪಟ್ಟಣವಾದ ರೋಹ್ತಾಸ್‍ನಲ್ಲಿ, ಸೋನ್ ನದಿ ಕಣಿವೆಯಲ್ಲಿ ಸ್ಥಿತವಾಗಿದೆ. ಇದು ಕುಶ್ವಾಹಾ/ಕುಶ್‍ವಂಶಿ ರಾಜವಂಶದ ಸಂಕೇತವಾಗಿದೆ.

ವಾಸ್ತುಕಲೆ[ಬದಲಾಯಿಸಿ]

ಇದು ವಿಶ್ವದ ಅತಿ ದೊಡ್ಡ ಕೋಟೆಗಳಲ್ಲಿ ಒಂದು. ಇದು 42 ಚದರ ಕಿ.ಮಿ. ವಿಸ್ತೀರ್ಣ ಹೊಂದಿದೆ.

ಹಾಥಿಯಾ ಪೋಲ್[ಬದಲಾಯಿಸಿ]

ಮುಖ್ಯ ಪ್ರವೇಶದ್ವಾರವನ್ನು ಹಾಥಿಯಾ ಪೋಲ್ ಎಂದು ಕರೆಯಲಾಗುತ್ತದೆ. ಇದಕ್ಕೆ ಇದನ್ನು ಅಲಂಕರಿಸುವ ಆನೆಗಳ ಪ್ರತಿಮೆಗಳ ಹೆಸರನ್ನು ಇಡಲಾಗಿದೆ.

ಆಯಿನಾ ಮೆಹೆಲ್[ಬದಲಾಯಿಸಿ]

ಆಯಿನಾ ಮೆಹೆಲ್ ಮಾನ್ ಸಿಂಗ್‍ನ ಮುಖ್ಯ ಹೆಂಡತಿಯ ಅರಮನೆಯಾಗಿತ್ತು. ಇದು ಅರಮನೆಯ ಮಧ್ಯದಲ್ಲಿದೆ.

ಜಾಮಾ ಮಸೀದಿ ಮತ್ತು ಹಬ್ಷ್ ಖಾನ್‍ನ ಭವ್ಯ ಸಮಾಧಿ[ಬದಲಾಯಿಸಿ]

ಅರಮನೆ ಮೈದಾನದ ಹೊರಗೆ ಜಾಮಾ ಮಸೀದಿ, ಹಬ್ಷ್ ಖಾನ್‍ನ ಭವ್ಯ ಸಮಾಧಿ ಮತ್ತು ಶೂಫ಼ಿ ಸುಲ್ತಾನ್‍ನ ಮಕ್ಬರಾ ಇದೆ. ಸುಂದರ ತಿಳಿಗಚ್ಚು ಶೈಲಿಯುಳ್ಳ, ಕಂಬಗಳ ಮೇಲೆ ನಿಂತಿರುವ ಗುಮ್ಮಟವಿರುವ ಕಟ್ಟಡವು ರಾಜ್‍ಪುತಾನಾ ಶೈಲಿಯ ನೆನಪನ್ನು ತರಿಸುತ್ತದೆ.

ಗಣೇಶ ದೇವಾಲಯ[ಬದಲಾಯಿಸಿ]

ಗಣೇಶ ದೇವಾಲಯವು ಮಾನ್ ಸಿಂಗ್‍ನ ಅರಮನೆಯ ಪಶ್ಚಿಮಕ್ಕೆ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿದೆ.

ಜೋತಾಡುವ ಮನೆ[ಬದಲಾಯಿಸಿ]

ಪಶ್ಚಿಮದ ಕಡೆಗೆ ಮುಂದಕ್ಕೆ, ಯಾವುದೋ ನಿರ್ಮಾಣ ನಡೆದಿರಬೇಕು. ಆದರೆ ಅದೇನೆಂದು ಯಾವುದೇ ಲಿಖಿತ ಸಾಕ್ಷ್ಯಾಧಾರವಿಲ್ಲ. ಸ್ಥಳೀಯರು ಇದಕ್ಕೆ ಜೋತಾಡುವ ಮನೆ ಎಂದು ಕರೆಯುತ್ತಾರೆ, ಏಕೆಂದರೆ ಇಲ್ಲಿಂದ ಪತನವು ನೇರ ೧೫೦೦ ಅಡಿ ಕೆಳಗೆ ಆಗುವುದು ಮತ್ತು ಮಾರ್ಗದಲ್ಲಿ ಯಾವುದೇ ಅಡೆತಡೆಗಳಿಲ್ಲ.

ರೋಹ್ತಾಸನ್ ದೇವಾಲಯ ಮತ್ತು ದೇವಿ ದೇವಾಲಯ[ಬದಲಾಯಿಸಿ]

ಅರಮನೆಯಿಂದ ಸುಮಾರು ಒಂದು ಮೈಲಿ ಈಶಾನ್ಯಕ್ಕೆ ಎರಡು ದೇವಾಲಯಗಳ ಅವಶೇಷಗಳಿವೆ. ಒಂದು ಶಿವನ ದೇವಾಲಯವಾದ ರೋಹ್ತಾಸನ್. ದೇವಿ ಮಂದಿರದ ಮೇಲೆ ಗುಮ್ಮಟಗಳಿವೆ. ಸ್ಥಳೀಯ ಭಾಷೆಯಲ್ಲಿ ಇದನ್ನು "ಚೌರಾಸನ್ ಸಿದ್ಧಿ" ಎಂದು ಕರೆಯಲಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

ಗ್ರಂಥಸೂಚಿ[ಬದಲಾಯಿಸಿ]

  • Roma Niyogi (1959). The History of the Gāhaḍavāla Dynasty. Oriental. OCLC 5386449.CS1 maint: ref=harv (link)