ಸೋನ್ ನದಿ
ಗೋಚರ
| ಸೋನ್ ನದಿ (Saun) | |
| ಸಾವನ್ | |
| River | |
[[Image:| 256px|none||]] | |
| Kintra | ಭಾರತ |
|---|---|
| States | ಮಧ್ಯ ಪ್ರದೇಶ, ಉತ್ತರ ಪ್ರದೇಶ, ಜಾರ್ಖಂಡ್, ಬಿಹಾರ |
| Region | ಬಾಗೇಲ್‍ಖಂಡ್ |
| Tributaries | |
| - left | Ghaghar River, Johilla River |
| - right | Banas River, Gopad River, Rihand River, Kanhar River, North Koel River |
| Ceeties | ಸಿದ್ಧಿ, ದೇಹ್ರಿ, ಪಟ್ನಾ |
| Laundmerk | ಇಂದ್ರಪುರು ಬ್ಯಾರೇಜ್ |
| Soorce | ಅಮರಾಂತಕ |
| - elevation | ೬೦೦ m (೧,೯೬೯ ft) |
| Mooth | Ganges River |
| Lenth | ೭೮೪ km (೪೮೭ mi) |
ಮಧ್ಯ ಭಾರತದ ಸೋನ್ ನದಿಯು ಗಂಗಾ ನದಿಯ ದಕ್ಷಿಣದ ಉಪನದಿಗಳ ಪೈಕಿ ಅತ್ಯಂತ ದೊಡ್ಡದು. ಸೋನ್ ನದಿಯು ಮಧ್ಯ ಪ್ರದೇಶ ರಾಜ್ಯದಲ್ಲಿ ನರ್ಮದಾ ನದಿಯ ಉಗಮ ಸ್ಥಾನಕ್ಕಿಂತ ಸ್ವಲ್ಪ ಪೂರ್ವದಲ್ಲಿ ಉಗಮಿಸಿ ಮಧ್ಯ ಪ್ರದೇಶದಲ್ಲಿ ಉತ್ತರ-ವಾಯವ್ಯ ದಿಕ್ಕಿನಲ್ಲಿ ಹರಿದು ನೈಋತ್ಯ-ಈಶಾನ್ಯ ದಿಕ್ಕಿನಲ್ಲಿ ಸಾಗುವ ಕೆಯ್ಮೂರ್ ಶ್ರೇಣಿಯನ್ನು ಸಂಧಿಸಿದಾಗ ಪೂರ್ವಕ್ಕೆ ತೀಕ್ಷ್ಣವಾಗಿ ತಿರುಗಿ ಹರಿಯುತ್ತದೆ. ಸೋನ್ ನದಿಯು ಕೆಯ್ಮೂರ್ ಶ್ರೇಣಿಗೆ ಸಮಾಂತರವಾಗಿ ಉತ್ತರ ಪ್ರದೇಶ, ಜಾರ್ಖಂಡ್ ಮತ್ತು ಬಿಹಾರ ರಾಜ್ಯಗಳಲ್ಲಿ ಹರಿದು ಗಂಗಾ ನದಿಯನ್ನು ಪಟ್ನಾಕ್ಕೆ ಸ್ವಲ್ಪ ಮೇಲೆ ಸೇರುತ್ತದೆ.