ರೋಡ್ಸ್ ಹುಲ್ಲು
ಗೋಚರ
Chloris (plant) gayana | |
---|---|
Scientific classification | |
ಸಾಮ್ರಾಜ್ಯ: | Plantae |
ಏಕಮೂಲ ವರ್ಗ: | ಹೂಬಿಡುವ ಸಸ್ಯ |
ಏಕಮೂಲ ವರ್ಗ: | ಏಕದಳ ಸಸ್ಯ |
ಏಕಮೂಲ ವರ್ಗ: | ಕಾಮೆಲಿನಿಡ್ಸ್ |
ಗಣ: | ಪೋಯೇಲೀಸ್ |
ಕುಟುಂಬ: | ಪೋಯೇಸೀ |
ಕುಲ: | ಕ್ಲೋರಿಸ್ |
ಪ್ರಜಾತಿ: | C. gayana
|
Binomial name | |
Chloris gayana |
ರೋಡ್ಸ್ ಹುಲ್ಲು ಪೋಯೇಸೀ ಕುಟುಂಬಕ್ಕೆ ಸೇರಿದ ಉಪಯುಕ್ತ ಹುಲ್ಲು. ಕ್ಲೋರಿಸ್ ಗಯಾನ ಇದರ ವೈಜ್ಞಾನಿಕ ಹೆಸರು. ದಕ್ಷಿಣ ಆಫ್ರಿಕ ಇದರ ತವರು. ಭಾರತದಲ್ಲಿ ಇದನ್ನು ವ್ಯಾಪಕವಾಗಿ ಬೆಳೆಸಲಾಗುತ್ತಿದ್ದು ದನಗಳಿಗೆ ಒಳ್ಳೆಯ ಮೇವಾಗಿ ಪ್ರಸಿದ್ಧವಾಗಿದೆ.[೧]
ಸಸ್ಯವರ್ಣನೆ
[ಬದಲಾಯಿಸಿ]ಇದು 1-1.5 ಮೀ. ಎತ್ತರಕ್ಕೆ ಬೆಳೆಯುವ ಏಕವಾರ್ಷಿಕ ಇಲ್ಲವೆ ಬಹುವಾರ್ಷಿಕ ಸಸ್ಯ. ಉಷ್ಣತೆ ಮತ್ತು ಆರ್ದ್ರತೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಹುಲುಸಾಗಿ ಬೆಳೆಯುತ್ತದೆ.
ಕೃಷಿ
[ಬದಲಾಯಿಸಿ]ಇದನ್ನು ಬೇರು ತುಂಡುಗಳಿಂದ ವೃದ್ಧಿಸಲಾಗುತ್ತದೆ. ಇದನ್ನು ವರ್ಷದ ಯಾವ ಕಾಲದಲ್ಲಾದರೂ ಬೆಳೆಸಬಹುದಾದರೂ ಚಳಿಗಾಲ ಇದರ ಬೆಳೆವಣಿಗೆಗೆ ಹೆಚ್ಚು ಅನುಕೂಲ. ಮಳೆಗಾಲದಲ್ಲಿ ಸಮೃದ್ಧವಾಗಿ ಬೆಳೆಯುತ್ತದೆ. ವರ್ಷಕ್ಕೆ 7-8 ಬಾರಿ ಇದನ್ನು ಕಟಾಯಿಸಬಹುದು.
ಉಲ್ಲೇಖಗಳು
[ಬದಲಾಯಿಸಿ]- ↑ "Tropical Forages". Archived from the original on 2017-10-17. Retrieved 2009-03-11.
ಹೊರಗಿನ ಕೊಂಡಿಗಳು
[ಬದಲಾಯಿಸಿ]ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: