ರೊದ್ದಂ ನರಸಿಂಹ

ವಿಕಿಪೀಡಿಯ ಇಂದ
Jump to navigation Jump to search
ಪ್ರೊಫೆಸರ್ ರೊದ್ದಂ ನರಸಿಂಹ FRS

ಪ್ರೊಫೆಸರ್ ರೊದ್ದಂ ನರಸಿಂಹ FRS, ಭಾರತೀಯ ವೈಮಾನಿಕ ವಿಜ್ಞಾನಿ ಮತ್ತು ದ್ರವಚಲನ ಶಾಸ್ತ್ರಜ್ಞರು. ಅವರು ಹಿಂದೆ ಭಾರತೀಯ ವಿಜ್ಞಾನ ಸಂಸ್ಥೆ (IISc)ಯಲ್ಲಿ ಏರೋಸ್ಪೇಸ್ ಇಂಜಿನೀಯರಿಂಗ್ ನ ಪ್ರಾಧ್ಯಾಪಕರೂ ,ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರಿ (NAL) ನಿರ್ದೇಶಕರೂ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್(ನಿಯಾಸ್) ನ ನಿರ್ದೇಶಕರೂ ಮತ್ತು ಮುಂದುವರೆದ ವೈಜ್ಞಾನಿಕ ಸಂಶೋಧನೆಗಾಗಿ ಬೆಂಗಳೂರಿನಲ್ಲಿ ಇರುವ ಜವಾಹರಲಾಲ್ ನೆಹರು ಕೇಂದ್ರದ (JNCASR) ಇಂಜಿನಿಯರಿಂಗ್ ಮೆಕ್ಯಾನಿಕ್ಸ್ ಘಟಕದ ಅಧ್ಯಕ್ಷರೂ ಆಗಿದ್ದರು. ಅವರು ಈಗ (JNCASR) ನಲ್ಲಿ ಗೌರವ ಪ್ರಾಧ್ಯಾಪಕರೂ ಹಾಗೂ ಅದೇಕಾಲಕ್ಕೆ ಹೈದರಾಬಾದ್ ವಿಶ್ವವಿದ್ಯಾಲಯ ದ ವಿಜ್ಞಾನ ಮತ್ತು ಇಂಜಿನಿಯರಿಂಗ್ ಪ್ರಾಟ್ & ವಿಟ್ನೆ ಪೀಠಾಧ್ಯಕ್ಷರೂ ಆಗಿದ್ದಾರೆ.

ಜನನ[ಬದಲಾಯಿಸಿ]

೧೯೩೩ ರ ಜುಲೈ ೨೦ ರಂದು ಜನಿಸಿದರು.

ಪ್ರಶಸ್ತಿ, ಪುರಸ್ಕಾರಗಳು[ಬದಲಾಯಿಸಿ]

  • ಡಾ. ನರಸಿಂಹ ವೈಮಾನಿಕ ವಿಜ್ಞಾನಿಯವರಿಗೆ, ೨೦೧೩ ರಲ್ಲಿ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ವಿಭೂಷಣವನ್ನು ನೀಡಲಾಗಿದೆ...