ರೇಣುಕಾ ಸಿಂಗ್ ಠಾಕೂರ್
ರೇಣುಕಾ ಸಿಂಗ್ ಠಾಕೂರ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ್ತಿ. ಇವರು ಬಲಗೈ ಬ್ಯಾಟ್ಸ್‍ಉಮನ ಹಾಗೂ ಬಲಗೈ ಮಧ್ಯಮ ವೇಗದ ಬೌಲರ್. ದೇಶಿ ಕ್ರಿಕೆಟ್‍ನಲ್ಲಿ ಹಿಮಾಚಲ ಕ್ರಿಕೆಟ್ ತಂಡಕ್ಕೆ ಆಡುತ್ತಿದ್ದರು, ಪ್ರಸ್ತುತ ರೇಲ್ವೆಸ್ ಕ್ರಿಕೆಟ್ ತಂಡದ ಪರ ಆಡುತ್ತಾರೆ. ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಇವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಾರೆ.[೧][೨][೩]
ಆರಂಭಿಕ ಜೀವನ
[ಬದಲಾಯಿಸಿ]ರೇಣುಕಾ ಸಿಂಗ್ ರವರು ಜನವರಿ ೦೨, ೧೯೯೬ ರಂದು ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಜನಿಸಿದರು.[೪]
ವೃತ್ತಿ ಜೀವನ
[ಬದಲಾಯಿಸಿ]ಪ್ರಥಮ ದರ್ಜೆ ಕ್ರಿಕೆಟ್
[ಬದಲಾಯಿಸಿ]ದೇಶಿ ಕ್ರಿಕೆಟ್‍ನಲ್ಲಿ ಹಿಮಾಚಲ ಪ್ರದೇಶದ ೧೬ರ ವಯೋಮಿತಿ ಹಾಗೂ ೧೯ರ ವಯೋಮಿತಿ ಕ್ರಿಕೆಟ್ ತಂಡಕ್ಕೆ ಅಡಿದ್ದಾರೆ. ಪ್ರಸ್ತುತ ರೇಲ್ವೆಸ್ ಕ್ರಿಕೆಟ್ ತಂಡಕ್ಕೆ ಆಡುತ್ತಾರೆ.[೫]
ಅಂತರರಾಷ್ಟ್ರೀಯ ಕ್ರಿಕೆಟ್
[ಬದಲಾಯಿಸಿ]ಆಕ್ಟೊಬರ್ ೦೭, ೨೦೨೧ರಲ್ಲಿ ಆಸ್ಟ್ರೇಲಿಯಾದ ಕರಾರದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವಿರುದ್ದ ನಡೆದ ಮೊದಲ ಟಿ-೨೦ ಪಂದ್ಯದ ಮೂಲಕ ರೇಣುಕಾ ಸಿಂಗ್ ರವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[೬] ಫೆಬ್ರವರಿ ೧೮, ೨೦೨೨ರಲ್ಲಿ ನ್ಯೂ ಜೀಲ್ಯಾಂಡ್ ನ ಕ್ವೀನ್ಸ್ ಟೌನ್ ನಲ್ಲಿ ನ್ಯೂ ಜೀಲ್ಯಾಂಡ್ ಕ್ರಿಕೆಟ್ ತಂಡದ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದ ಮೂಲಕ ರೇಣುಕಾ ರವರು ಅಂತರ ರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದರು.[೭] ರೇಣುಕಾ ಸಿಂಗ್ ರವರು ೨೦೨೨ರ ಐಸಿಸಿ ಉದ್ಯೋನ್ಮುಖ ಕ್ರಿಕೆಟ್ ಆಟಗಾರ್ತಿ ಪ್ರಶಸ್ತಿ ಪಡೆದಿದ್ದಾರೆ.[೮][೯][೧೦]
ಪಂದ್ಯಗಳು
[ಬದಲಾಯಿಸಿ]- ಟಿ-೨೦ ಕ್ರಿಕೆಟ್ : ೩೨' ಪಂದ್ಯಗಳು
- ಏಕದಿನ ಕ್ರಿಕೆಟ್ : ೦೭' ಪಂದ್ಯಗಳು
ವಿಕೇಟ್‍ಗಳು
[ಬದಲಾಯಿಸಿ]- ಟಿ-೨೦ ಕ್ರಿಕೆಟ್ ಪಂದ್ಯಗಳಲ್ಲಿ: ೩೧
- ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ: ೧೮[೧೧]
ಉಲ್ಲೇಖಗಳು
[ಬದಲಾಯಿಸಿ]- ↑ https://www.wplt20.com/players/renuka-singh-wpl-profile-70714
- ↑ https://studybymind.com/renuka-singh-thakur-biography-in-english/
- ↑ https://www.royalchallengers.com/rcb-squad/renuka-singh
- ↑ https://www.cricket.com.au/players/renuka-singh/ttqJnStWWEmRW9k39aPemA
- ↑ https://www.firstpost.com/firstcricket/sports-news/womens-world-cup-2022-renuka-singh-the-promising-railways-pacer-who-has-big-shoes-to-fill-10412611.html
- ↑ https://www.espncricinfo.com/series/india-women-in-australia-2021-22-1263613/australia-women-vs-india-women-1st-t20i-1263621/full-scorecard
- ↑ https://www.espncricinfo.com/series/india-women-in-new-zealand-2021-22-1289028/new-zealand-women-vs-india-women-3rd-odi-1289034/full-scorecard
- ↑ https://www.editorji.com/amp/sports-news/cricket/renuka-singh-thakur-wins-icc-emerging-women-s-cricketer-of-the-year-1674658990124
- ↑ https://indianexpress.com/article/sports/cricket/renuka-singh-named-icc-emerging-womens-cricketer-of-the-year-2022-8404497/lite/
- ↑ https://amp.scroll.in/field/1042589/india-pacer-renuka-singh-thakur-wins-icc-emerging-womens-cricketer-of-the-year-award-for-2022
- ↑ https://www.espncricinfo.com/cricketers/renuka-singh-960853