ವಿಷಯಕ್ಕೆ ಹೋಗು

ರೆನೆಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚೆಡಾರ್ ಗಿಣ್ಣಿನ ತಯಾರಿಕೆಯಲ್ಲಿ ಬಳಸಲಾಗುವ ಪ್ರಾಣಿಯ ರೆನೆಟ್

ರೆನೆಟ್ ಹಾಲು ಕುಡಿಯುವ ನವಜಾತ ಸ್ತನಿಗಳ ಜಠರರಸಗಳಲ್ಲಿ ಇರುವ ಪದಾರ್ಥ. ಇದರಲ್ಲಿ ಹಾಲನ್ನು ಗರಣೆಗಟ್ಟಿಸುವ ಕಿಣ್ವ ರೆನಿನ್ ಇದೆ. ಹಾಲು ಜೀರ್ಣಿಸಲು, ಅರ್ಥಾತ್, ಹಾಲಿನಲ್ಲಿ ಇರುವ ಕೇಸೀನ್ ಎಂಬ ಪ್ರೋಟೀನನ್ನು ಪ್ರತ್ಯೇಕಿಸಲು ಇದು ಆವಶ್ಯಕ. ಅಂಟು, ವಸ್ತ್ರ, ಬಣ್ಣ ಮತ್ತು ಪ್ಲಾಸ್ಟಿಕ್ ತಯಾರಿಗೂ ಕೇಸೀನ್ ಬಳಕೆ ಉಂಟು. ಗಿಣ್ಣು ಮತ್ತು ಜಂಕೆಟ್ ಎಂಬ ಮೊಸರೊಡಕಿನ ಸಿಹಿ ಭಕ್ಷ್ಯಗಳ ವಾಣಿಜ್ಯೋತ್ಪಾದನೆಯಲ್ಲಿ ರೆನೆಟ್ ಆಹರಣಗಳ ಬಳಕೆ ಉಂಟು. ಕರುಗಳ ನಾಲ್ಕನೆಯ ಜಠರದ ಒಳಭಿತ್ತಿಯಿಂದ ರೆನೆಟ್ ಆಹರಣಗಳ ವಾಣಿಜ್ಯೋತ್ಪಾದನೆ.

ಗಿಣ್ಣಿನ ತಯಾರಿಕೆಗೆ ಕರುಗಳಿಂದ ಪಡೆದ ರೆನೆಟ್ ಕಡಿಮೆ ಸಾಮಾನ್ಯವಾಗಿದೆ, ಎಷ್ಟರ ಮಟ್ಟಿಗೆ ಎಂದರೆ ಇಂದು ಅಮೇರಿಕದಲ್ಲಿ 5% ಗಿಂತ ಕಡಿಮೆ ಗಿಣ್ಣನ್ನು ಪ್ರಾಣಿಯ ರೆನೆಟ್ ಬಳಸಿ ತಯಾರಿಸಲಾಗುತ್ತದೆ.[೧]

ಉಲ್ಲೇಖಗಳು[ಬದಲಾಯಿಸಿ]

  1. Yacoubou, Jeanne. "An Update on Rennet". The Vegetarian Resource Group. Retrieved 2021-12-24.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ರೆನೆಟ್&oldid=1190045" ಇಂದ ಪಡೆಯಲ್ಪಟ್ಟಿದೆ