ವಿಷಯಕ್ಕೆ ಹೋಗು

ರೂಮಿ ದರ್ವಾಜ಼ಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರೂಮಿ ದರ್ವಾಜ಼ಾ (ಹಿಂದಿ: रूमी दरवाज़ा ಕೆಲವೊಮ್ಮೆ ಟರ್ಕಿಷ್ ಗೇಟ್ ಎಂದು ಕರೆಯಲ್ಪಡುತ್ತದೆ) ಭಾರತದ ಉತ್ತರ ಪ್ರದೇಶ ರಾಜ್ಯದ ಲಕ್ನೋದಲ್ಲಿರುವ ಒಂದು ಭವ್ಯವಾದ ಹೆಬ್ಬಾಗಿಲು. ಇದನ್ನು ನವಾಬ್ ಅಸಫ಼್ - ಉದ್ - ದೌಲಾನ ಆಶ್ರಯದಲ್ಲಿ ೧೭೮೪ರಲ್ಲಿ ನಿರ್ಮಿಸಲಾಯಿತು.[೧] ಇದು ಅವಧಿ ವಾಸ್ತುಕಲೆಯ ಉದಾಹರಣೆಯಾಗಿದೆ. ಅರವತ್ತು ಅಡಿ ಎತ್ತರವಿರುವ ರೂಮಿ ದರ್ವಾಜ಼ಾವನ್ನು ಇಸ್ತಾಂಬುಲ್‍ನಲ್ಲಿರುವ ಬಾಬಿ ಹುಮಾಯ್ಞೂ ಕಟ್ಟಡವನ್ನು ಆಧರಿಸಿ ರಚಿಸಲಾಗಿದೆ.[೨]

ಇದು ಲಕ್ನೋದಲ್ಲಿನ ಅಸಫ಼ಿ ಇಮಾಮ್‍ಬಾಡಾದ ಪಕ್ಕದಲ್ಲಿದೆ ಮತ್ತು ಲಕ್ನೋ ನಗರದ ಲಾಂಛನವಾಗಿಬಿಟ್ಟಿದೆ. ಇದು ಹಳೆ ಲಕ್ನೋ ನಗರದ ಪ್ರವೇಶದ್ವಾರವನ್ನು ಗುರುತಿಸುತ್ತಿತ್ತು. ಆದರೆ ನವಾಬರ ನಗರಿಯು ಬೆಳೆದು ವಿಸ್ತರಿಸಿದಂತೆ, ಇದನ್ನು ನಂತರ ಒಂದು ಅರಮನೆಯ ಪ್ರವೇಶದ್ವಾರವಾಗಿ ಬಳಸಲಾಯಿತು. ಈ ಅರಮನೆಯನ್ನು ನಂತರ ಬ್ರಿಟಿಷ್ ದಂಗೆಕೋರರು ನಾಶಪಡಿಸಿದರು.

ಛಾಯಾಂಕಣ[ಬದಲಾಯಿಸಿ]

ರಾತ್ರಿಯ ಹೊತ್ತಿನಲ್ಲಿ ರೂಮಿ ದರ್ವಾಜ಼ಾ, ಭಾರಿ ಸಂಚಾರದೊಂದಿಗೆ
ರೂಮಿ ದರ್ವಾಜ಼ಾ

ಉಲ್ಲೇಖಗಳು[ಬದಲಾಯಿಸಿ]

  1. "Rumi Darwaza - Lucknow". All India Tour Travel. Retrieved 2007-05-21.
  2. "Lucknow". Encyclopædia Britannica. Retrieved 2008-05-20.
  3. Cock, J.K. de (1910), [Rumi Darwaza, Lucknow, Uttar Pradesh, India], OCLC 884960330

ಹೊರಗಿನ ಕೊಂಡಿಗಳು[ಬದಲಾಯಿಸಿ]