ರೂಮಿ ದರ್ವಾಜ಼ಾ
ಗೋಚರ
ರೂಮಿ ದರ್ವಾಜ಼ಾ (ಹಿಂದಿ: रूमी दरवाज़ा ಕೆಲವೊಮ್ಮೆ ಟರ್ಕಿಷ್ ಗೇಟ್ ಎಂದು ಕರೆಯಲ್ಪಡುತ್ತದೆ) ಭಾರತದ ಉತ್ತರ ಪ್ರದೇಶ ರಾಜ್ಯದ ಲಕ್ನೋದಲ್ಲಿರುವ ಒಂದು ಭವ್ಯವಾದ ಹೆಬ್ಬಾಗಿಲು. ಇದನ್ನು ನವಾಬ್ ಅಸಫ಼್ - ಉದ್ - ದೌಲಾನ ಆಶ್ರಯದಲ್ಲಿ ೧೭೮೪ರಲ್ಲಿ ನಿರ್ಮಿಸಲಾಯಿತು.[೧] ಇದು ಅವಧಿ ವಾಸ್ತುಕಲೆಯ ಉದಾಹರಣೆಯಾಗಿದೆ. ಅರವತ್ತು ಅಡಿ ಎತ್ತರವಿರುವ ರೂಮಿ ದರ್ವಾಜ಼ಾವನ್ನು ಇಸ್ತಾಂಬುಲ್ನಲ್ಲಿರುವ ಬಾಬಿ ಹುಮಾಯ್ಞೂ ಕಟ್ಟಡವನ್ನು ಆಧರಿಸಿ ರಚಿಸಲಾಗಿದೆ.[೨]
ಇದು ಲಕ್ನೋದಲ್ಲಿನ ಅಸಫ಼ಿ ಇಮಾಮ್ಬಾಡಾದ ಪಕ್ಕದಲ್ಲಿದೆ ಮತ್ತು ಲಕ್ನೋ ನಗರದ ಲಾಂಛನವಾಗಿಬಿಟ್ಟಿದೆ. ಇದು ಹಳೆ ಲಕ್ನೋ ನಗರದ ಪ್ರವೇಶದ್ವಾರವನ್ನು ಗುರುತಿಸುತ್ತಿತ್ತು. ಆದರೆ ನವಾಬರ ನಗರಿಯು ಬೆಳೆದು ವಿಸ್ತರಿಸಿದಂತೆ, ಇದನ್ನು ನಂತರ ಒಂದು ಅರಮನೆಯ ಪ್ರವೇಶದ್ವಾರವಾಗಿ ಬಳಸಲಾಯಿತು. ಈ ಅರಮನೆಯನ್ನು ನಂತರ ಬ್ರಿಟಿಷ್ ದಂಗೆಕೋರರು ನಾಶಪಡಿಸಿದರು.
ಛಾಯಾಂಕಣ
[ಬದಲಾಯಿಸಿ]-
ಮಾನವ ಕಣ್ಣಿನಲ್ಲಿ ಲಕ್ನೋದ ರೂಮಿ ದರ್ವಾಜ಼ಾದ ಪ್ರತಿಬಿಂಬ.[೩]
-
ರೂಮಿ ದರ್ವಾಜ಼ಾ
-
ರೂಮಿ ದರ್ವಾಜ಼ಾ, ರಾತ್ರಿಯ ಹೊತ್ತು
-
ಬಡಾ ಇಮಾಮ್ಬಾಡಾದಿಂದ ರೂಮಿ ದರ್ವಾಜ಼ಾದ ನೋಟ
ಉಲ್ಲೇಖಗಳು
[ಬದಲಾಯಿಸಿ]ಹೊರಗಿನ ಕೊಂಡಿಗಳು
[ಬದಲಾಯಿಸಿ]- Official India Travel & Tours Information Website Archived 2014-02-02 ವೇಬ್ಯಾಕ್ ಮೆಷಿನ್ ನಲ್ಲಿ.