ವಿಷಯಕ್ಕೆ ಹೋಗು

ರುದ್ರಮ ದೇವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರುದ್ರಮ ದೇವಿ
ರುದ್ರಮ ದೇವಿ
ರುದ್ರಮ ದೇವಿಯ ಪ್ರತಿಮೆ
ಪೂರ್ವಾಧಿಕಾರಿ ಗಣಮತಿದೇವ
ಉತ್ತರಾಧಿಕಾರಿ ಪ್ರತಾಪರುದ್ರ
ಗಂಡ/ಹೆಂಡತಿ ವೀರಭದ್ರ
ತಂದೆ ಗಣಪತಿದೇವ
ಮರಣ ೧೨೮೯ ಅಥವಾ ೧೨೯೫
ಬಹುಶಃ ಚಂದುಪಟ್ಲ
(ಈಗಿನ ತೆಲಂಗಾಣ, ಭಾರತ)

ರಾಣಿ ರುದ್ರಮ ದೇವಿ (ನಿಧನ ೧೨೮೯ ಅಥವಾ ೧೨೯೫), ಅಥವಾ ರುದ್ರದೇವ ಮಹಾರಾಜ, ದಕ್ಷಿಣ ಭಾರತದ ಕಾಕತೀಯ ಸಾಮ್ರಾಜ್ಯವನ್ನು ೧೨೬೩ರಿಂದ ತನ್ನ ಮರಣದವರೆಗೂ ಆಳಿದ ಸಾಮ್ರಾಜ್ಞಿ. ಭಾರತದ ಇತಿಹಾಸದಲ್ಲಿ ಆಳ್ವಿಕೆ ನಡೆಸಿದ ಕೆಲವೇ ಮಹಿಳೆಯರ ಪಟ್ಟಿಗೆ ರುದ್ರಮ ದೇವಿ ಸೇರುತ್ತಾಳೆ. ಅದರಲ್ಲಿ ಯಶಸ್ವಿಯಾಗುವ ಸಲುವಾಗಿ ತನ್ನ ಪುರುಷ ಚಿತ್ರವನ್ನು ಬಳಸಿದಳು. ಆಕೆ ಕಾಕತೀಯರ ಅತ್ಯಂತ ಪ್ರಸಿದ್ದ ಅರಸ ಗಣಪತಿದೇವನ ಪ್ರೀತಿಯ ಪುತ್ರಿ ರುದ್ರಾಂಬಾ ಆಗಿ ಜನಿಸಿದಳು.ಆತನಿಗೆ ಪುತ್ರ ಸಂತಾನವಿರಲಿಲ್ಲ. ಹಾಗಾಗಿ ಆಕೆಗೆ ಪುತ್ರಿಕಾ ಸಮಾರಂಭದಲ್ಲಿ ಪುರುಷನ ಹೆಸರಿಟ್ಟು ಆಡಳಿತದ ಗದ್ದುಗೆಗೇರಿಸಲಾಯಿತು[೧][೨].

ಆಳ್ವಿಕೆ[ಬದಲಾಯಿಸಿ]

ರುದ್ರಮ ದೇವಿ ಬಹುಶಃ ತನ್ನ ತಂದೆ ಗಣಪತಿದೇವನೊಂದೆಗೆ ಸಹ ರಾಜಪ್ರತಿನಿಧಿಯಾಗಿ, ೧೨೬೧-೬೨ರಿಂದ ಜಂಟಿಯಾಗಿ ಕಾಕತೀಯ ರಾಜ್ಯವನ್ನು ಆಳ ತೊಡಗಿದಳು. ಈ ಅವಧಿಯಲ್ಲಿ ಸದಯವರ್ಮ ಸುಂದರ ಪಾಂಡ್ಯನ್‍ ಆಕ್ರಮಿಸಿ ಕಾಕತೀಯರ ಮತ್ತು ಅವರ ಮಿತ್ರಪಡೆಗಳನ್ನು ನೆಲ್ಲೂರು ಬಳಿ ಇರುವ ಮುಟ್ಟುಕೂರಿನ ಯುದ್ಧಭೂಮಿಯಲ್ಲಿ ಸೋಲಿಸಿದನು. ಇದರಿಂದಾಗಿ ರಾಜ್ಯವು ಗೊಂದಲ ಮತ್ತು ಅವ್ಯವಸ್ಥೆಗೆ ತುತ್ತಾಯಿತು. ಮುಂದೆ ಗಣಪತಿದೇವ ಆಕ್ರಮಣಕಾರರನ್ನು ತಡೆಯುವಲ್ಲಿ ಯಶಸ್ವಿಯಾದರು, ತನ್ನ ಘನತೆ ಮತ್ತು ರಾಜ್ಯದ ಕೆಲವು ಪ್ರದೇಶಗಳನ್ನು ಮತ್ತು ಕಳೆದುಕೊಂಡನು. ಇದರಿಂದಾಗಿ ತನ್ನ ಸಾಮಂತರ ಮೇಲಿನ ಹಿಡಿತವು ಸಡಿಲವಾಯಿತು. ಹೀಗಾಗಿ ಈ ಸಂದರ್ಭಗಳಲ್ಲಿ, ಅವನು ರಾಜಕಾರಣದಿಂದ ನಿವೃತ್ತಿ ಪಡೆದನು[೩].

೧೨೬೩ರಲ್ಲೇ ರುದ್ರಮ ದೇವಿಗೆ ರಾಜ್ಯದ ಸಂಪೂರ್ಣ ಅಧಿಪತ್ಯ ದೊರಕಿದರೂ, ೧೨೬೯ರಲ್ಲಿ ಗಣಪತಿದೇವನ ಮರಣದವರೆಗೂ ಅವಳ ಪಟ್ಟಾಭಿಷೇಕ ನಡೆಯಲಿಲ್ಲ[೩]. ಅವಳು ಸ್ತ್ರೀ ಎಂಬ ಕಾರಣಕ್ಕಾಗಿ ಅವಳನ್ನು ಗಣಪತಿದೇವನ ಉತ್ತರಾಧಿಕಾರಿಯಾಗಿ ನೇಮಿಸುವುದನು ವಿರೋಧಿಸಿದ್ದರು. ಹೀಗಿದ್ದರೂ ಆಕೆ ತಾನು ಮಹಿಳೆಯಾದರೂ ಹೊರಗಿನ ವೈರಿಗಳಿಗೆ ಮತ್ತು ಒಳಗಿನವರಿಗೆ ಸೂಕ್ತ ಉತ್ತರ ನೀಡಬಲ್ಲೆ ಎಂದು ಪರಾಕ್ರಮ ತೋರಿದಳು. ಸಮರ್ಥ ಯುದ್ದಗಾರ್ತಿ ಮತ್ತು ಆಡಳಿತಗಾರಳಾಗಿದ್ದ ರುದ್ರಮ ದೇವಿ ತನ್ನ ರಾಜ್ಯವನ್ನು ಚೋಳರು ಮತ್ತು ಯಾದವರಿಂದ ರಕ್ಷಿಸಿದಳಲ್ಲದೇ ಅವರಿಂದ ಗೌರವಕ್ಕೂ ಪಾತ್ರಳಾದಳು.

ರುದ್ರಮ ದೇವಿ ಹಲವು ಬಡ ಕುಟುಂಬದ ಮಹಿಳೆಯರನ್ನು ಯೋಧರನ್ನಾಗಿ ನೇಮಿಸಿ ಮತ್ತು ಅವರಿಗೆ ತಮ್ಮ ಬೆಂಬಲಕ್ಕಾಗಿ ಭೂ-ತೆರಿಗೆಯ ಆದಾಯದ ಮೇಲೆ ಹಕ್ಕನ್ನು ನೀಡಿ ಒಂದು ಗಮನಾರ್ಹ ಬದಲಾವಣೆ ತಂದಳು. ಈ ಸಂಪ್ರದಾಯವನ್ನು ಅವಳ ಉತ್ತರಾಧಿಕಾರಿಯಾದ ಪ್ರಾತಾಪರುದ್ರನು ಮತ್ತು ಮುಂದೆ ವಿಜಯನಗರದ ಅರಸರು ಪಾಲಿಸಿದರು[೨][೪].

ತನ್ನ ಆಡಳಿತದ ಆರಂಭದಲ್ಲೇ ಪೂರ್ವ ಗಂಗರ ಸಾಮ್ರಾಜ್ಯದಿಂದ ಹಾಗೂ ಯಾದವರಿಂದ ಸವಾಲುಗಳನ್ನು ಎದುರಿಸಬೇಕಾಯಿತು. ರುದ್ರಮ ದೇವಿ ೧೨೭೦ರಲ್ಲಿ ಗಂಗರನ್ನು ಗೋದಾವರಿ ನದಿಯ ಸೀಮೆಯಿಂದ ಹಿಮ್ಮೆಟ್ಟಿಸಿದಳು ಮತ್ತು ಯಾದವರನ್ನು ಮೇಲೆ ಸೋಲಿಸಿ ಪಶ್ಚಿಮ ಆಂಧ್ರದ ಪ್ರದೇಶಗಳನ್ನು ವಶಪಡಿಸಿಕೊಳ್ಳುವ ಯಶಸ್ವಿಯಾದಳು. ಆದರೆ ೧೨೭೩ರಲ್ಲಿ ಕಾಯಸ್ಥರ ಮುಖ್ಯಸ್ಥನಾಗಿ ನೇಮಕಗೊಂಡ ಅಂಬದೇವನ ಆಂತರಿಕ ಅಸಮ್ಮತಿ ವ್ಯವಹರಿಸುವಲ್ಲಿ ವಿಫಲಳಾದಳು. ಅಂಬದೇವನು ಕಾಕತೀಯರ ಅಧೀನನಾಗಿರಲು ವಿರೋಧಿಸಿ ನೈಋತ್ಯ ಆಂಧ್ರದ ಮತ್ತು ಈಗಿನ ಗುಂಟೂರು ಜಿಲ್ಲೆಯ ಪ್ರದೇಶಗಳ ನಿಯಂತ್ರಣ ಪಡೆದುಕೊಂಡನು[೫].

ಕೌಟುಂಬಿಕ ಜೀವನ ಮತ್ತು ಉತ್ತರಾಧಿಕಾರಿ[ಬದಲಾಯಿಸಿ]

ರುದ್ರಮ ದೇವಿ, ಬಹುಶಃ ೧೨೪೦, ಚಾಲುಕ್ಯರ ವಂಶಸ್ಥನಾದ ವೀರಭದ್ರನನ್ನು ವರಿಸಿದಳು. ಈ ಮದುವೆ ರಾಜಕೀಯವಾಗಿ ಪ್ರೇರಿತವಾಗಿರಬಹುದಾಗಿದೆ[೬]. ವೀರಭದ್ರನು ಆಡಳಿತದಲ್ಲಿ ಯಾವ ಪಾತ್ರವು ವಹಿಸಲ್ಲಿಲ್ಲ ಮತ್ತು ಅವನ ಕುರಿತು ಹೆಚ್ಚಾಗಿ ಏನೂ ತಿಳಿದಿಲ್ಲ. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಜನಿಸಿದರು[೨].

ರುದ್ರಮ ದೇವಿ ೧೨೮೯ರಲ್ಲಿ ಅಂಬದೇವನೊಂದಿಗೆ ಹೋರಾಡುವಾಗ ಮೃತಪಟ್ಟಂತಿದೆ. ಕೆಲವು ಮೂಲಗಳು ಅವಳು ೧೨೯೫ರಲ್ಲಿ ನಧನಳಾದಳು ಎಂದು ಹೇಳುತ್ತವೆ. ಅವಳ ಉತ್ತರಾಧಿಕಾರಿಯಾಗಿ ಅವಳ ಮೊಮ್ಮಗನಾದ ಪ್ರತಾಪರುದ್ರನು ಕಾಕತೀಯ ಸಾಮ್ರಜ್ಯವನ್ನು ಆಳಿದನು[೨].

ಚಲನಚಿತ್ರ[ಬದಲಾಯಿಸಿ]

೨೦೧೫ರಲ್ಲಿ ರುದ್ರಮ ದೇವಿಯ ಜೀವನಾಧಾರಿತ ರುದ್ರಮದೇವಿ ಎಂಬ ತೆಲುಗು ಭಾಷೆಯ ಚಲನಚಿತ್ರ ಮೂಡಿ ಬಂತು. ಈ ಚಿತ್ರವನ್ನು ಗುಣಶೇಖರ್‍ರವರು ನಿರ್ದೇಶಿಸಿದರು. ಅನುಷ್ಕಾ ಶೆಟ್ಟಿ, ಅಲ್ಲು ಅರ್ಜುನ್ ಮತ್ತು ರಾಣಾ ದಗ್ಗುಬ್ಬಾಟಿ ಇದರ ತಾರಾಗಣದಲ್ಲಿದ್ದಾರೆ[೭].

ಉಲ್ಲೇಖ[ಬದಲಾಯಿಸಿ]

  1. https://books.google.co.uk/books?id=CNi9Jc22OHsC&pg=PA37
  2. ೨.೦ ೨.೧ ೨.೨ ೨.೩ https://books.google.co.uk/books?id=EFI7tr9XK6EC&pg=RA1-PA612
  3. ೩.೦ ೩.೧ https://books.google.co.uk/books?id=HSfoCwAAQBAJ
  4. https://books.google.co.uk/books?id=HSfoCwAAQBAJ
  5. https://books.google.co.uk/books?id=HSfoCwAAQBAJ
  6. https://books.google.co.uk/books?id=HSfoCwAAQBAJ
  7. "ಆರ್ಕೈವ್ ನಕಲು". Archived from the original on 2013-07-09. Retrieved 2016-11-29.