ರುದ್ರಪ್ಪ ಲಮಾಣಿ
ರುದ್ರಪ್ಪ ಲಮಾಣಿ | |
---|---|
ಅಧಿಕೃತ ಭಾವಚಿತ್ರ | |
೨೫ನೇಯ ಕರ್ನಾಟಕ ವಿಧಾನಸಭೆಯ ಉಪ ಸಭಾಪತಿ
| |
ಹಾಲಿ | |
ಅಧಿಕಾರ ಸ್ವೀಕಾರ ೬ ಜುಲೈ ೨೦೨೩ | |
ಮುಖ್ಯ ಮಂತ್ರಿ | ಸಿದ್ದರಾಮಯ್ಯ |
ಸಭಾಪತಿ | ಯು.ಟಿ.ಖಾದರ್ |
ಪೂರ್ವಾಧಿಕಾರಿ | ಆನಂದ್ ಮಮನಿ |
ಹಾಲಿ | |
ಅಧಿಕಾರ ಸ್ವೀಕಾರ ೨೦೨೩ | |
ಪೂರ್ವಾಧಿಕಾರಿ | ನೆಹರು ಓಲೇಕಾರ್ |
ಮತಕ್ಷೇತ್ರ | ಹಾವೇರಿ |
ಅಧಿಕಾರ ಅವಧಿ ೨೦೧೩ – ೨೦೧೮ | |
ಪೂರ್ವಾಧಿಕಾರಿ | ನೆಹರು ಓಲೇಕಾರ್ |
ಉತ್ತರಾಧಿಕಾರಿ | ನೆಹರು ಓಲೇಕಾರ್ |
ಮತಕ್ಷೇತ್ರ | ಹಾವೇರಿ |
ಅಧಿಕಾರ ಅವಧಿ ೧೯೯೯ – ೨೦೦೪ | |
ಪೂರ್ವಾಧಿಕಾರಿ | ಬೀಳಗಿ ಸಾಬಣ್ಣ |
ಉತ್ತರಾಧಿಕಾರಿ | ನೆಹರು ಓಲೇಕಾರ್ |
ಮತಕ್ಷೇತ್ರ | ಬ್ಯಾಡಗಿ |
ವೈಯಕ್ತಿಕ ಮಾಹಿತಿ | |
ಜನನ | ರುದ್ರಪ್ಪ ಮಾನಪ್ಪ ಲಮಾಣಿ ೧ ಜೂನ್ ೧೯೫೯ ಖಂಡೇರಾಯನಹಳ್ಳಿ, ರಾಣೆಬೆನ್ನೂರು ತಾಲ್ಲೂಕು, ಹಾವೇರಿ ಜಿಲ್ಲೆ, ಕರ್ನಾಟಕ, ಭಾರತ |
ರಾಜಕೀಯ ಪಕ್ಷ | ಕಾಂಗ್ರೆಸ್ |
ಉದ್ಯೋಗ | ರೈತ |
ಸಹಿ |
ರುದ್ರಪ್ಪ ಮಾನಪ್ಪ ಲಮಾಣಿ (ಜನನ ೧ ಜೂನ್ ೧೯೫೯) ಒಬ್ಬ ಭಾರತೀಯ ರಾಜಕಾರಣಿಯಾಗಿದ್ದು, ಇವರು ಪ್ರಸ್ತುತ ಜುಲೈ ೨೦೨೩ ರಿಂದ ಕರ್ನಾಟಕ ವಿಧಾನಸಭೆಯ ೨೫ನೇ ಉಪ ಸಭಾಪತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಹಾವೇರಿ ಜಿಲ್ಲೆ ಪರಿಶಿಷ್ಟ ಜಾತಿ ಸಮುದಾಯಕ್ಕೆ ಮೀಸಲಾಗಿರುವ ಹಾವೇರಿ ವಿಧಾನಸಭಾ ಕ್ಷೇತ್ರ ಶಾಸಕರಾಗಿದ್ದಾರೆ. ಇವರು ೨೦೨೩ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಪ್ರತಿನಿಧಿಸಿ ಗೆದ್ದರು.[೧]
ಆರಂಭಿಕ ಜೀವನ ಮತ್ತು ಶಿಕ್ಷಣ
[ಬದಲಾಯಿಸಿ]ಲಮಾಣಿಯವರು ಹಾವೇರಿ ಜಿಲ್ಲೆಯ ಖಂಡೇರಾಯನಹಳ್ಳಿಯವರು. ಇವರ ತಂದೆ ಮಾನಪ್ಪ ಕೃಷಿಕರು. ಇವರು ೧೯೮೨ ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದೊಂದಿಗೆ ಸಂಯೋಜಿತವಾದ ಕಾಲೇಜಿನಿಂದ ಪದವಿಯನ್ನು ಪೂರ್ಣಗೊಳಿಸಿದರು.[೨] ಮತ್ತು ಇವರು ಬಂಜಾರ ಸಮುದಾಯಕ್ಕೆ ಸೇರಿದವರು.
ರಾಜಕೀಯ ವೃತ್ತಿಜೀವನ
[ಬದಲಾಯಿಸಿ]೨೦೨೪ ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಪ್ರತಿನಿಧಿಸುವ ಹಾವೇರಿ ವಿಧಾನಸಭಾ ಕ್ಷೇತ್ರದಿಂದ ಲಮಾಣಿ ಗೆದ್ದಿದ್ದಾರೆ. ಅವರು ೯೩,೮೨೭ ಮತಗಳನ್ನು ಪಡೆದರು ಮತ್ತು ತಮ್ಮ ಸಮೀಪದ ಪ್ರತಿಸ್ಪರ್ಧಿ ಭಾರತೀಯ ಜನತಾ ಪಕ್ಷದ ಗವಿಸಿದ್ದಪ್ಪ ದ್ಯಾಮಣ್ಣನವರ್ ಅವರನ್ನು ೧೧,೯೧೫ ಮತಗಳ ಅಂತರದಿಂದ ಸೋಲಿಸಿದರು. ಇದಕ್ಕೂ ಮುನ್ನ ಅವರು ೨೦೧೩ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಇದೇ ಸ್ಥಾನದಿಂದ ಗೆದ್ದಿದ್ದರು. ಕಾಂಗ್ರೆಸ್ ಅನ್ನು ಪ್ರತಿನಿಧಿಸುವ ಅವರು ೨೦೧೮ ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ನೆಹರು ಓಲೇಕಾರ್ ವಿರುದ್ಧ ೧೧,೩೦೪ ಮತಗಳ ಅಂತರದಿಂದ ಸೋತರು.
ಅವರು ಜುಲೈ ೨೦೨೩ ರಲ್ಲಿ ಕರ್ನಾಟಕ ವಿಧಾನಸಭೆಯ ಉಪಸಭಾಪತಿಯಾಗಿ ಅವಿರೋಧವಾಗಿ ಆಯ್ಕೆಯಾದರು. ಅವರು ಸದನದ ೨೫ನೇ ಉಪ ಸ್ಪೀಕರ್ ಆದರು. ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಅಧಿಕಾರ ವಹಿಸಿಕೊಳ್ಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ಅವರಿಗೆ ಈ ಹುದ್ದೆ ನೀಡಲಾಗಿತ್ತು. ಈ ಹಿಂದೆ ಅವರು ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರು, ಸ್ಪೀಕರ್ ಯು.ಟಿ. ಖಾದರ್ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲಮಾಣಿ ಅಭಿನಂದನೆ ಸಲ್ಲಿಸಿದರು.
ಉಲ್ಲೇಖಗಳು
[ಬದಲಾಯಿಸಿ]- ↑ "Rudrappa Manappa Lamani in Karnataka Assembly Elections 2023". News18 (in ಇಂಗ್ಲಿಷ್). Retrieved 2024-08-20.
- ↑ "Rudrappa Manappa Lamani(Indian National Congress(INC)):Constituency- HAVERI (SC)(HAVERI) - Affidavit Information of Candidate:". www.myneta.info. Retrieved 2024-08-20.